ಅಘಲಯ

ವಿಕಿಪೀಡಿಯ ಇಂದ
Jump to navigation Jump to search
ಅಘಲಯ
ಹಳ್ಳಿ
ಅಘಲಯ ಕೆರೆ
ಅಘಲಯ ಕೆರೆ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಮಂಡ್ಯ
Talukasಕೃಷ್ಣರಾಜ ಪೇಟೆ
Government
 • Bodyಗ್ರಾಮ ಪಂಚಾಯಿತಿ
Languages
 • Officialಕನ್ನಡ
ಸಮಯ ವಲಯUTC+5:30 (IST)
Nearest cityಶ್ರವಣಬೆಳಗೊಳ
Civic agencyಗ್ರಾಮ ಪಂಚಾಯಿತಿ

ಅಘಲಯ ಮಂಡ್ಯ ಜಿಲ್ಲೆಕೃಷ್ಣರಾಜ ಪೇಟೆ ತಾಲ್ಲೂಕಿನ ಗ್ರಾಮ. ಜಿಲ್ಲಾಕೇಂದ್ರ ಮಂಡ್ಯದಿಂದ ೬೦ ಕಿ. ಮೀ. ಮತ್ತು ತಾಲ್ಲೂಕು ಕೇಂದ್ರ ಕೆ. ಆರ್. ಪೇಟೆಯಿಂದ ೨೦ ಕಿ. ಮೀ. ದೂರದಲ್ಲಿದೆ. ಶ್ರವಣಬೆಳಗೊಳ ಹತ್ತಿರದಲ್ಲಿರುವ ನಗರವಾಗಿದ್ದು ೧೦ ಕಿ. ಮೀ. ಅಂತರದಲ್ಲಿದೆ.

ಈ ಗ್ರಾಮದಲ್ಲಿರುವ ಮಲ್ಲೇಶ್ವರನಾಥ ದೇವಾಲಯವು ಹೊಯ್ಸಳರ ಶೈಲಿಯ ತ್ರಿಕೂಟಾಚಲ ದೇವಾಲಯವಾಗಿದೆ. ಮೂರನೇ ನರಸಿಂಹನ ಕಾಲದಲ್ಲಿ ನಿರ್ಮಿಸಿದ್ದು ಎನ್ನಲಾಗಿದ್ದು ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದೆ. ಈ ಸ್ಥಳಕ್ಕೆ ಪಾಪವನ್ನು ನಾಶಮಾಡುವ ಶಕ್ತಿಯಿದೆ ಎಂಬ ಹಿನ್ನೆಲೆಯಲ್ಲಿ ‘ಅಘಲಯ’ (ಅಘ-ಪಾಪ, ಲಯ-ನಾಶ) ಸ್ಥಳಗಥೆಯೊಂದು ಕೇಳಿಬರುತ್ತದೆ. ಗ್ರಾಮದ ಎ.ಶೇಷಯ್ಯಂಗಾರ್ ಶಿಕ್ಷಣ ತಜ್ಞರಾಗಿದ್ದು, ರಾಜ್ಯ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿದ್ದರು. ‘ವಿದ್ಯಾದಾಯಿನಿ’ ಎಂಬ ಮಾಸ ಪತ್ರಿಕೆಯ ಸಂಪಾದಕರೂ ಆಗಿದ್ದರು.

ಭೈರವೇಶ್ವರ ದೇವಸ್ಥಾನ, ಅಘಲಯ
"https://kn.wikipedia.org/w/index.php?title=ಅಘಲಯ&oldid=1019121" ಇಂದ ಪಡೆಯಲ್ಪಟ್ಟಿದೆ