ಅಗ್ಗಿ ವೀರುಡು (ಚಲನಚಿತ್ರ)
ಅಗ್ಗಿ ವೀರುಡು | |
---|---|
Directed by | ಬಿ.ವಿ ಶ್ರೀನಿವಾಸ್ |
Written by | ಜಿ.ಕೆ.ಮೂರ್ತಿ (dialogues) |
Screenplay by | ಬಿ.ವಿ ಶ್ರೀನಿವಾಸ್ |
Story by | ಬಿ.ವಿ ಶ್ರೀನಿವಾಸ್ |
Produced by | ಬಿ.ವಿಟ್ಟಲಾಚಾರ್ಯ |
Starring | ಎನ್.ಟಿ.ರಾವ್ ರಾಜಶ್ರೀ |
Cinematography | ಹೆಚ್.ಎಸ್.ವೇಣು |
Edited by | ಕೆ.ಗೋವಿಂದ ಸ್ವಾಮಿ |
Music by | ವಿಜಯ ಕೃಷ್ಣಮೂರ್ತಿ |
Production company | Sri Vittal Combines[೧] |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | 124 mins |
Country | India |
Language | Telugu |
ಅಗ್ನಿ ವೀರುಡು 1969ರ ತೆಲುಗು ಭಾಷೆಯ ಸ್ವಾಶ್ಬಕ್ಲರ್ ಚಲನಚಿತ್ರ. ಸ್ವಾಶ್ಬಕ್ಲರ್ ಚಿತ್ರ ಎಂದರೆ ಕತ್ತಿವರಸೆ ಮುಂತಾದ ಸನ್ನಿವೇಶಗಳಿರುವ ಅಥವಾ ಅತಿಮಾನುಷ ಶಕ್ತಿಗಳಿರುವ ಹೀರೋ/ಹೀರೋಯಿನ್ ಇರುವ ಚಿತ್ರ. ಈ ಚಿತ್ರದಲ್ಲಿರುವ ಅತಿಮಾನುಷ ಶಕ್ತಿಯ ವೀರನನ್ನು ಸ್ವಾಶ್ಬಕ್ಲರ್ ಎನ್ನುತ್ತಾರೆ. ಶ್ರೀ ವೈಟಲ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಬಿ. ವಿಟ್ಟಾಚಾರ್ಯರು ಇದನ್ನು ನಿರ್ಮಿಸಿದ್ದಾರೆ ಮತ್ತು ಬಿ. ವಿ. ಶ್ರೀನಿವಾಸ್ ನಿರ್ದೇಶಿಸಿದ್ದಾರೆ.[೨][೩] ಇದರಲ್ಲಿ ಎನ್. ಟಿ. ರಾಮರಾವ್, ರಾಜಶ್ರೀ ನಟಿಸಿದ್ದಾರೆ ಮತ್ತು ವಿಜಯ ಕೃಷ್ಣ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ.[೪][೫][೬]
ಕಥಾವಸ್ತು
[ಬದಲಾಯಿಸಿ]ರಾಜಕುಮಾರ ಯಶೋವರ್ಧನರೊಂದಿಗೆ ರಾಜಕುಮಾರಿ ಪದ್ಮಾವತಿಯ ಮೈತ್ರಿಯೊಂದಿಗೆ ಚಿತ್ರವು ಪ್ರಾರಂಭವಾಗುತ್ತದೆ. ಆದರೆ ಮಾಂತ್ರಿಕನಾದ ರುಧಿರಕ್ಷುಡು ಪದ್ಮಾವತಿಯನ್ನು ಮದುವೆಯಾಗಲು ಬಯಸುತ್ತಾನೆ. ಆದ್ದರಿಂದ ಅವನು ಅವಳನ್ನು ಅಪಹರಿಸಿ ಅವಳ ಹೆತ್ತವರನ್ನು ಮೀನುಗಳಾಗಿ ಪರಿವರ್ತಿಸುತ್ತಾನೆ ಮತ್ತು ವರನ ಮನೆಯಲ್ಲಿ ಅಶಾಂತಿ ಸೃಷ್ಟಿಸಲು ಒಂದು ರಾಕ್ಷಸನಿಗೆ ಆದೇಶಿಸುತ್ತಾನೆ. ಆ ರಾಕ್ಷಸನ ಕಾರಣದಿಂದ ಯಶೋವರ್ಧನನ ತಂದೆಯು ತನ್ನ ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ. ಈಗ, ಯಶೋವರ್ಥನನು ತನ್ನ ತಂದೆಯ ದೃಷ್ಟಿಯನ್ನು ಮರಳಿ ಪಡೆಯಲು ಮತ್ತು ಪದ್ಮಾವತಿಯನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾನೆ. ಆದ್ದರಿಂದ ಅವನು ಸಾಹಸಮಯ ಪ್ರವಾಸವನ್ನು ಪ್ರಾರಂಭಿಸುತ್ತಾನೆ.
ದಾರಿಯಲ್ಲಿ ಅವನು ಹಲವು ವಿಶೇಷ ಮತ್ತು ವಿಚಿತ್ರ ಘಟನೆಗಳನ್ನು ನೋಡುತ್ತಾನೆ. ಯಶೋವರ್ಧನನು ಅನೇಕ ಜನರನ್ನು ಅವರ ಶಾಪಗಳಿಂದ ಬಿಡುಗಡೆ ಮಾಡುತ್ತಾನೆ ಮತ್ತು ಅವನಿಗೆ ಅಗ್ಗಿ ವೀರುಡು ಎಂಬ ಶಕ್ತಿಯನ್ನು ನೀಡಲಾಗುತ್ತದೆ. ಇವೆಲ್ಲದರ ನಡುವೆ ಪದ್ಮಾವತಿ ಮಾಂತ್ರಿಕನಿಂದ ತಪ್ಪಿಸಿಕೊಳ್ಳುತ್ತಾಳೆ. ಆದರೆ ಈ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆಕೆ ಸಾಧುವೊಬ್ಬಳ ಕೋಪಕ್ಕೆ ತುತ್ತಾಗುತ್ತಾಳೆ. ಆ ಸಾಧುವಿನ ಶಾಪದಿಂದಾಗಿ ಅವಳು ಇಲಿಯಾಗಿ ರೂಪಾಂತರಗೊಳ್ಳುತ್ತಾಳೆ.
ಚಿತ್ರದ ಮುಂದಿನ ಕಥೆಯಲ್ಲಿ ಯಶೋವರ್ಧನನು ಪದ್ಮಾವತಿಯನ್ನು ಹೇಗೆ ರಕ್ಷಿಸುತ್ತಾನೆ ? ಅವನು ಹೇಗೆ ತನ್ನ ತಂದೆಯ ದೃಷ್ಟಿಯನ್ನು ಮರಳಿ ಪಡೆಯುತ್ತಾನೆ ? ಹೇಗೆ ತನ್ನ ಅತ್ತೆ-ಮಾವಂದಿರನ್ನು ಅವರ ಮೂಲ ರೂಪಕ್ಕೆ ಮರಳಿ ತರುತ್ತಾನೆ ಮತ್ತು ರುಧಿರಕ್ಷುಡುವಿನ ವಿರುದ್ಧ ಹೇಗೆ ಹೋರಾಡಿ ಅವನನ್ನು ಸೋಲಿಸುತ್ತಾನೆ ಎಂಬುದರ ಕುರಿತಾಗಿದೆ. ಅಂತಿಮವಾಗಿ, ಚಿತ್ರವು ಯಶೋಧನೆ ಮತ್ತು ಪದ್ಮಾವತಿಯ ಮದುವೆಯೊಂದಿಗೆ ಕೊನೆಗೊಳ್ಳುತ್ತದೆ.
ಪಾತ್ರವರ್ಗ
[ಬದಲಾಯಿಸಿ]ಯಶೋವರ್ಧನನ ಪಾತ್ರದಲ್ಲಿ ಎನ್. ಟಿ. ರಾಮರಾವ್
ಪದ್ಮಾವತಿ ಪಾತ್ರದಲ್ಲಿ ರಾಜಶ್ರೀ
ಸತ್ಯನಾರಾಯಣ್
ಸೇಸಂಕ ವರ್ಮನಾಗಿ ರಾಮಕೃಷ್ಣ
ಮಿಕ್ಕಿಲಿನಿ
ಧರ್ಮ ತೇಜ ಪಾತ್ರದಲ್ಲಿ ಮುಕ್ಕಮಲ
ರುಧಿರಕ್ಷುಡು ಪಾತ್ರದಲ್ಲಿ ತ್ಯಾಗರಾಜು
ಮಧುಕುರಿ ಸತ್ಯಂ
ರವಿ ಕೊಂಡಲಾ ರಾವ್
ಕಮಂಧಕಿಯಾಗಿ ವಿಜಯಲಳಿತಾ
ಹಂಸ ಪಾತ್ರದಲ್ಲಿ ಮೀನಾ ಕುಮಾರಿ
ಮೀನುಗಾರನ ಪಾತ್ರದಲ್ಲಿ ಸಾರಥಿ
ಸೌಂಡ್ಟ್ರ್ಯಾಕ್
[ಬದಲಾಯಿಸಿ]ಸಂಗೀತವನ್ನು ವಿಜಯ ಕೃಷ್ಣ ಮೂರ್ತಿ ಸಂಯೋಜಿಸಿದ್ದಾರೆ.
ಎಸ್. ನಂ. | ಹಾಡಿನ ಶೀರ್ಷಿಕೆ | ಸಾಹಿತ್ಯ. | ಗಾಯಕರು | ಉದ್ದ |
---|---|---|---|---|
1 | "ಲೇಡಿ ಕನ್ನುಲು" | ಸಿ. ನಾರಾಯಣ ರೆಡ್ಡಿ | ಘಂಟಸಾಲ, ಪಿ. ಸುಶೀಲಾ | 3:37 |
2 | "ಸಾರಿ ಸಾರಿ ಮಗಸಿರಿ" | ಕೊಸರಾಜು | ಕೋರಸ್ | 3:31 |
3 | "ಆಲಾಂಟಿಡಾನಿ" | ಕೊಸರಾಜು | ಪಿ. ಸುಶೀಲಾ | 3:13 |
4 | "ಪಿಲಿಚಿಂದಿ ಅಂಡಾಲಾ" | ಸಿ. ನಾರಾಯಣ ರೆಡ್ಡಿ | ಪಿ. ಸುಶೀಲಾ | 4:50 |
5 | "ಯೆವಾರೋ ನೀವೆವಾರೋ" | ಸಿ. ನಾರಾಯಣ ರೆಡ್ಡಿ | ಪಿ. ಸುಶೀಲ, ಘಂಟಸಾಲ | 4:07 |
6 | "ರಾವಲಾ ನವ್ವುಲಾ" | ಸಿ. ನಾರಾಯಣ ರೆಡ್ಡಿ | ಘಂಟಸಾಲ, ಪಿ. ಸುಶೀಲಾ | 4:30 |
7 | "ಕಾಕಿಮುಕ್ಕುಕಿ ಡೋಂಡಾ ಪಾಂಡು" | ಸಿ. ನಾರಾಯಣ ರೆಡ್ಡಿ | ಪಿ. ಸುಶೀಲಾ | 5:14 |
ಅಗ್ಗಿ ವೀರುಡು ಎಂಬ ಹೆಸರು
[ಬದಲಾಯಿಸಿ]ಇಲ್ಲಿ ನಾಯಕನಿಗೆ ಅಗ್ನಿಯ ಶಕ್ತಿ ದೊರಕುವುದರಿಂದ ಆತನಿಗೆ ಅಗ್ಗಿ ವೀರುಡು ಎಂಬ ಹೆಸರು ದೊರೆಯುತ್ತದೆ. ತನ್ನ ತಂದೆಯ ದೃಷ್ಠಿ ಮರಳಿ ಪಡೆಯಲು ಮತ್ತು ಸಂಕಟದಲ್ಲಿರುವ ತನ್ನ ಪ್ರೇಯಸಿ ಪದ್ಮಾವತಿಯನ್ನು ಬಿಡಿಸಲು ಪ್ರವಾಸದಲ್ಲಿರುವ ನಾಯಕ ಆ ಹಾದಿಯಲ್ಲಿ ಹಲವರನ್ನು ಅವರ ಶಾಪದಿಂದ ವಿಮೋಚನೆ ಮಾಡಿರುತ್ತಾನೆ. ಈ ಒಳ್ಳೆಯ ಪ್ರಯತ್ನಗಳಿಂದ ಅವನಿಗೆ ಆ ಶಕ್ತಿ ದೊರಕುತ್ತದೆ. ಆ ಶಕ್ತಿ ಚಿತ್ರದ ಕ್ಲೈಮಾಕ್ಸಿನಲ್ಲಿ ಬರುವ ಮಾಂತ್ರಿಕನೊಂದಿಗಿನ ಹೋರಾಟದಲ್ಲಿ ಅವನಿಗೆ ಅನುಕೂಲವಾಗುತ್ತದೆ.
ಸ್ವಾಶ್ಬಕ್ಲರ್ ಚಲನಚಿತ್ರಗಳು
[ಬದಲಾಯಿಸಿ]ಸ್ವಾಶ್ಬಕ್ಲರ್ ಚಲನಚಿತ್ರಗಳು ಆಕ್ಷನ್ ಚಲನಚಿತ್ರ ಪ್ರಕಾರದ ಒಂದು ಉಪಪ್ರಕಾರವಾಗಿದ್ದು, ಅವು ಖಡ್ಗದಾಳಿ ಮತ್ತು ಸ್ವಾಶ್ಬಕ್ಲರ್ಸ್ ಎಂದು ಕರೆಯಲ್ಪಡುವ ಸಾಹಸಮಯ ವೀರೋಚಿತ ಪಾತ್ರಗಳಿಂದ ಕೂಡಿರುತ್ತವೆ . ನೈತಿಕತೆಯನ್ನು ಇಲ್ಲಿನ ಪಾತ್ತಗಳು ಸಾಮಾನ್ಯವಾಗಿ ಮೀರುವುದಿಲ್ಲ. ನಾಯಕರು ಮತ್ತು ಖಳನಾಯಕರು ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಗೌರವದ ನಿಯಮಗಳನ್ನು ಪಾಲಿಸುತ್ತಾರೆ . ಕೆಲವು ಸ್ವಾಶ್ಬಕ್ಲರ್ ಚಲನಚಿತ್ರಗಳು ಪ್ರಣಯ ಅಂಶಗಳನ್ನು ಹೊಂದಿವೆ. ಹೆಚ್ಚಾಗಿ ಸಂಕಟದಲ್ಲಿರುವ ಹುಡುಗಿ/ರಾಜಕುಮಾರಿ ಈ ಚಿತ್ರಗಳಲ್ಲಿ ಕಾಣಬರುತ್ತಾಳೆ . ನೈಜ ಮತ್ತು ಕಾಲ್ಪನಿಕ ಐತಿಹಾಸಿಕ ಘಟನೆಗಳೆರಡೂ ಈ ಚಿತ್ರಗಳ ಕಥಾವಸ್ತುವಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Aggi Veerudu (Overview)". IMDb.
- ↑ "Aggi Veerudu (Banner)". Chitr.com.[permanent dead link]
- ↑ "Aggi Veerudu (Direction)". Filmiclub.
- ↑ "Aggi Veerudu (Cast & Crew)". gomolo.com. Archived from the original on 2018-01-22. Retrieved 2024-03-30.
- ↑ "Aggi Veerudu (Preview)". Know Your Films.
- ↑ "Aggi Veerudu (Review)". The Cine Bay. Archived from the original on 2024-03-30. Retrieved 2024-03-30.
- Pages using the JsonConfig extension
- All articles with dead external links
- Articles with dead external links from ಏಪ್ರಿಲ್ 2024
- Articles with invalid date parameter in template
- Articles with permanently dead external links
- Short description is different from Wikidata
- Template film date with 1 release date
- ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ
- ಸ್ತ್ರೀವಾದ ಮತ್ತು ಜಾನಪದ ೨೦೨೪