ವಿಷಯಕ್ಕೆ ಹೋಗು

ಅಕ್ಕಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಕಾದೇವಿ
ಚಾಲುಕ್ಯ
ಜನನ ೧೦೧೦
ಮರಣ ೧೦೬೪

ಅಕ್ಕಾದೇವಿ ( ಕನ್ನಡದಲ್ಲಿ ಅಕ್ಕದೇವಿ, ಅಕ್ಕದೀವಿ, ಅಕ್ಕಾದೀವಿ), ೧೦೧೦-೧೦೬೪ CE [೧] ಕರ್ನಾಟಕದ ಚಾಲುಕ್ಯ ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ ಬೀದರ್, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ.

ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. [೨] ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. [೩]

ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ ಡೆಕ್ಕನ್ ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದವರಾಗಿದ್ದರು. ಅವರು ಚೋಳರೊಂದಿಗೆ ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು.

ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು ಜೈನ ಮತ್ತು ಹಿಂದೂ ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. [೪]

ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. [೫] ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ ಭೈರವಿಯಂತೆ ಧೈರ್ಯಶಾಲಿ ಎಂದು ಕರೆಯುತ್ತದೆ. [೬] ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. [೫] ಮತ್ತು ಬ್ರಾಹ್ಮಣರಿಗೆ ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Woman, Her History and Her Struggle for Emancipation, By B. S. Chandrababu, L. Thilagavathi. p.158
  2. Saletore, Rajaram Narayan (1983). Encyclopaedia of Indian culture, Volume 3. University of Michigan. ISBN 978-0-391-02332-1.
  3. Jain Journal, Volume 37. Jain Bhawan. 2002. p. 8.
  4. Kamat, Jyotsna (1980). Social Life in Medieval Karnataka. Abhinav Publications. p. 107. ISBN 978-0-8364-0554-5.
  5. ೫.೦ ೫.೧ Mishra, Phanikanta (1979). The Kadambas. Mithila Prakasana. pp. 53, 71.
  6. Murari, Krishna (1977). The Cāḷukyas of Kalyāṇi, from circa 973 A.D. to 1200 A.D.: based mainly on epigraphical sources. Concept Pub. Co. pp. 52, 61–62.