ಅಂಗಾಂಶ ಇಂಜಿನಿಯರಿಂಗ್
ಅಂಗಾಂಶ ಇಂಜಿನಿಯರಿಂಗ್ ಅನ್ನು ಜೈವಿಕ ಮೂಲವಸ್ತುವಿನ ಉಪಕ್ಷೇತ್ರ ಎಂದು ವಿಂಗಡಿಸಲಾಗಿತ್ತು, ಆದರೆ ವ್ಯಾಪ್ತಿ ಮತ್ತು ಪ್ರಾಮುಖ್ಯಗಳು ಬೆಳೆದಿರುವುದರಿಂದ ಅದನ್ನು ತನ್ನದೇ ಆದ ಕ್ಷೇತ್ರ ಎಂದು ಪರಿಗಣಿಸಬಹುದು. ಇದು ಜೈವಿಕ ಕಾರ್ಯಗಳನ್ನು ಸುಧಾರಿಸಲು ಅಥವಾ ಬದಲಾಯಿಸಲು ಉಪಯೋಗಿಸುವ, ಕೋಶಗಳು, ಇಂಜಿನಿಯರಿಂಗ್ ಮತ್ತು ವಸ್ತುಗಳ ವಿಧಾನಗಳು, ಮತ್ತು ಸೂಕ್ತ ಜೈವಿಕರಾಸಾಯನಿಕ ಮತ್ತು ಭೌತ-ರಾಸಾಯನಿಕ ಅಂಶಗಳ ಸಂಯೋಗವನ್ನು ಒಳಗೊಂಡಿದೆ. ಬಹುತೇಕ ವ್ಯಾಖ್ಯಾನಗಳು ಅಂಗಾಂಶ ಇಂಜಿನಿಯರಿಂಗ್‌ನ ವ್ಯಾಪಕ ಉಪಯೋಗಗಳನ್ನು ಪಟ್ಟಿ ಮಾಡುತ್ತದಾದರೂ, ಪ್ರಾಯೋಗಿಕವಾಗಿ, ಪೂರ್ಣ ಅಂಗಾಂಶವನ್ನು ಅಥವಾ ಅಂಗಾಂಶಗಳ ಭಾಗವನ್ನು ರಿಪೇರಿ ಮಾಡವುದಕ್ಕೆ ಅಥವಾ ಬದಲಾಯಿಸುವುದಕ್ಕೆ ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ (ಅಂದರೆ, ಮೂಳೆ, ಮೃದು ಎಲುಬು, ರಕ್ತನಾಳಗಳು, ಮೂತ್ರಕೋಶ, ಚರ್ಮ ಮುಂತಾದವು). ಅನೇಕ ವೇಳೆ, ಬಳಸುವ ಅಂಗಾಂಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಕೆಲವು ಯಾಂತ್ರಿಕ ಮತ್ತು ರಚನಾತ್ಮಕ ಗುಣಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಕೃತಕವಾಗಿ ಸೃಷ್ಟಿಸಿದ ಬೆಂಬಲಿತ ವ್ಯವಸ್ಥೆಯಲ್ಲಿರುವ ಅಣುಗಳನ್ನು ಬಳಸಿಕೊಂಡು ಕೆಲವು ಜೈವಿಕರಾಸಾಯನಿಕ ಕಾರ್ಯಗಳನ್ನು ನಿರ್ವಹಿಸಲು ನಡೆಸುವ ಪ್ರಯತ್ನಗಳಿಗೂ ಈ ಪದವನ್ನು ಬಳಸಲಾಗುತ್ತದೆ (ಉದಾ. ಕೃತಕ ಮೇದೋಜ್ಜೀರಕಗ್ರಂಥಿ, ಅಥವಾ ಜೈವಿಕ-ಕೃತಕ ಪಿತ್ತಜನಕಾಂಗ). ಪುನರುಜ್ಜೀವನ ವೈದ್ಯದಲ್ಲಿ ತೊಡಗಿಕೊಂಡಿರುವವರು ಮೂಲ ಕೋಶಗಳನ್ನು ಬಳಸಿ ಅಂಗಾಂಶಗಳನ್ನು ನಿರ್ಮಿಸುವುದರ ಮೇಲೆ ಹೆಚ್ಚು ಒತ್ತನ್ನುಕೊಡುತ್ತಾರಾದರೂ ಪುನರುಜ್ಜೀವನ ವೈದ್ಯ ಎಂಬ ಪದವನ್ನು ಅಂಗಾಂಶ ಇಂಜಿನಿಯರಿಂಗ್ ಎಂಬ ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತಿದೆ.
ಸ್ಥೂಲ ಸಮೀಕ್ಷೆ
[ಬದಲಾಯಿಸಿ]ಸಾಮಾನ್ಯವಾಗಿ ಉಪಯೋಗಿಸುವ ಅಂಗಾಂಶ ಇಂಜಿನಿಯರಿಂಗ್‌ನ ವ್ಯಾಖ್ಯಾನವೆಂದರೆ ಲ್ಯಾಂಗರ್[೧] ಮತ್ತು ವೇಕೆಂಟಿ[೨] ಹೇಳುವ ಹಾಗೆ "ಅಂಗಾಂಶಕಾರ್ಯವನ್ನು ಅಥವಾ ಒಂದು ಪೂರ್ಣ ಅಂಗವನ್ನು ಗುಣಪಡಿಸುವ, ಅಥವಾ ಸುಧಾರಿಸುವ ತಂತ್ರಜ್ಞಾನ ಮತ್ತು ಜೀವನ ವಿಜ್ಞಾನಗಳ ತತ್ತ್ವಗಳನ್ನು ಒಳಗೊಂಡಿರುವುದಾಗಿದೆ.[೩] ಅಂಗಾಂಶ ಇಂಜಿನಿಯರಿಂಗ್‌ಅನ್ನು "ಅಂಗಾಂಶ ಬೆಳವಣಿಗೆಯ ತತ್ವವನ್ನು ಅರ್ಥೈಸಿಕೊಳ್ಳುವ ಮತ್ತು ಅದನ್ನು ವೈದ್ಯಕೀಯ ಕಾರ್ಯನಿರ್ವಾಹಕ ಬದಲಾವಣೆ ಅಂಗಾಂಶಗಳನ್ನು ನಿರ್ಮಿಸುವುದಕ್ಕಾಗಿ ಬಳಸುವ ವಿಜ್ಞಾನ" ಎಂದು ಕೂಡಾ ವ್ಯಾಖ್ಯಾನಿಸಲಾಗಿದೆ.[೪] ಮುಂದಿನ ವಿವರಣೆಯು ಅಂಗಾಂಶ ಇಂಜಿನಿಯಂರಿಂಗ್ ಬಗ್ಗೆ ಹೀಗೆ ಹೇಳುತ್ತದೆ "ವ್ಯವಸ್ಥೆಯ ಪ್ರಾಕೃತಿಕ ಜೀವಶಾಸ್ತ್ರವನ್ನು ಬಳಸಿಕೊಂಡಾಗ ಅಂಗಾಂಶ ಕಾರ್ಯಗಳ ಬದಲಾವಣೆ, ರಿಪೇರಿ, ನಿರ್ವಹಣೆ ಅಥವಾ ವಿಸ್ತರಣೆಗಳನ್ನು ಮಾಡುವುದಕ್ಕಾಗಿ ವೈದ್ಯಶಾಸ್ತ್ರೀಯ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಯಶಸ್ಸು ಕಾಣುವುದು ಸಾಧ್ಯವಾಗುತ್ತದೆ ಎಂಬುದೇ ಅಂಗಾಂಶ ಇಂಜಿನಿಯರಿಂಗ್‌ನ ಮೂಲ ಗ್ರಹಿಕೆ."[೪] ಅಂಗಾಂಶ ಇಂಜಿನಿಯರಿಂಗ್ ಎಂಬ ಬಹುಶಿಸ್ತಿನ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಯಾಗಿದ್ದು, ಅನೇಕ ಅಂಗಾಂಶ ಬದಲೀ ಭಾಗಗಳು ಮತ್ತು ನಿರ್ವಹಣಾ ತಂತ್ರಗಳನ್ನು ಸೃಷ್ಟಿಸಿವೆ. ಜೈವಿಕವಸ್ತುಗಳು, ಮೂಲ ಕೋಶಗಳು, ಬೆಳವಣಿಗೆ ಮತ್ತು ವ್ಯತ್ಯಯಾತ್ಮಕಾಂಶಗಳು, ಮತ್ತು ಜೈವಿಕಾನುಕರಣಶೀಲ ಪರಿಸರಗಳಲ್ಲಿ ಆಗಿರುವ ವೈಜ್ಞಾನಿಕ ಅಭಿವೃದ್ಧಿಗಳು ಅಂಗಾಂಶಗಳನ್ನು ರಚಿಸುವಲ್ಲಿ ವಿಶಿಷ್ಟ ಅವಕಾಶಗಳನ್ನು ಹಾಗೂ ಅಂಗಾಂಶಗಳನ್ನು ಬೆಳೆಸಬಲ್ಲ ಅವಕಾಶಗಳನ್ನು ವಿವಿಧ ಕೋಶೀಯ ಲೆಕ್ಕಾಚಾರದ ಮೇಲೆ, ಕೋಶಗಳು ಮತ್ತು ಜೈವಿಕವಾಗಿ ಚಟುವಟಿಕೆಯಲ್ಲಿರುವ ಕಣಗಳಿಂದ ರಚಿಸಬಹುದಾಗಿದೆ. ಅಂಗಾಂಶ ಇಂಜಿನಿಯರಿಂಗ್ ಈಗ ಎದುರಿಸುತ್ತಿರುವ ಮುಖ್ಯ ಸವಾಲು ಏನೆಂದರೆ ಇದು ಇನ್ನೂ ಹೆಚ್ಚಿನ ಕಾರ್ಯನಿರ್ವಹಣೆಯನ್ನು ಹೊಂದುವಂತಹುದ್ದಾಗಬೇಕಾಗಿದೆ. ಅಲ್ಲದೆ ಕಾರ್ಯವಿಧಾನದಲ್ಲೂ ಮತ್ತು ಜೈವಿಕ ಕ್ರಿಯಾವಿಧಾನದಲ್ಲೂ ಸ್ಥಿರತೆಯನ್ನು ಹೊಂದುವ ಮೂಲಕ ಪ್ರಯೋಗಾಲಯದಲ್ಲಿ ಬೆಳೆಸಲಾದ ಅಂಗಾಂಶಗಳನ್ನು ಬದಲಿ ಜೋಡಣೆಗೆ ಪಕ್ಕಾಗುವಂತೆ ಮಾಡಬೇಕಾಗುತ್ತದೆ. ಅಂಗಾಂಶ ಇಂಜಿನಿಯರಿಂಗ್‌ನ ಸಕ್ರೀಯ ಯಶಸ್ಸಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಬೇಕಾದರೆ ನೈಜವಾದ ಮಾನವ ಅಂಗಾಶಗಳನ್ನು ಬದಲಿಜೋಡಣೆಗಾಗಿ ಬೆಳೆಸುವಲ್ಲಿ ಯಶಸ್ವಿಯಾಗಬೇಕಾಗಿದೆ. ಅಲ್ಲದೆ ಮೂಲ ಇಂಜಿನಿಯರಿಂಗ್ ಅನ್ನು ಅಂಗಾಂಶ ರಚನೆ, ಬೆಳವಣಿಯ ಅಂಶಗಳು, ಮೂಲ ಕೋಶ ಮತ್ತು ಜೀವವಿಜ್ಞಾನದ ಬೆಳವಣಿಗೆ ಅಲ್ಲದೆ ಮೂಲವಸ್ತು ವಿಜ್ಞಾನ ಮತ್ತು ಜೈವಿಕ ಮಾಹಿತಿವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಬೇಕಾಗಿದೆ. 2003ರಲ್ಲಿ, "ದ ಎಮರ್‌ಜೆನ್ಸ್ ಆಫ್ ಟಿಶ್ಯೂ ಇಂಜಿನಿಯರಿಂಗ್ ಆಸ್ ಎ ರೀಸರ್ಚ್ ಫೀಲ್ಡ್" (ಸಂಶೋಧನಾ ಕ್ಷೇತ್ರವಾಗಿ ಅಂಗಾಂಶ ಇಂಜಿನಿಯರಿಂಗ್‌ನ ಬೆಳವಣಿಗೆ) ಎಂಬ ವರದಿಯೊಂದನ್ನು ಎನ್‌ಎಸ್‌ಎಫ್ ಪ್ರಕಟಿಸಿತು[೧]. ಈ ವರದಿಯು ಅಂಗಾಂಶ ಇಂಜಿನಿಯರಿಂಗ್ ಕ್ಷೇತ್ರದ ಇತಿಹಾಸದ ಸಂಪೂರ್ಣ ವಿವರಣೆಯನ್ನು ನೀಡುತ್ತದೆ.
ಉದಾಹರಣೆಗಳು
[ಬದಲಾಯಿಸಿ]- ಟಿಶ್ಯೂ ಇಂಜಿನಿಯರ್ಡ್ ಆಟೋಲೋಗಸ್ ಹಾರ್ಟ್ವಾಲ್ವ್ಸ್ ಅಂಡ್ ವೆಸೆಲ್ಸ್ - Applied ಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಡಾ.ಎಂಎಡ್.ಎಸ್.ಜೊಕೆನ್ಹೊವೆಲ್ ಕಾರ್ಯತಂಡ (ಆರ್ಡಬ್ಲ್ಯೂಟಿಎಚ್-ಆಕೆನ್ ವಿಶ್ವವಿದ್ಯಾಲಯ, ಜರ್ಮನಿ)
- ಗರ್ಭ ಮಾಂಸ — ಮೃದುವಾದ ಪ್ರಾಣಿಗಳ ಮಾಂಸಖಂಡಗಳನ್ನು ಕೃತಕವಾಗಿ ಗರ್ಭ ದಲ್ಲಿ ಬೆಳೆಸುವುದು.
- ಜೈವಿಕಕೃತಕ ಪಿತ್ತಜನಕಾಂಗ ಸಾಧನ — ಹಲವು ಸಂಶೋಧನಾ ಪ್ರಯತ್ನಗಳು ಜೀವಂತ ಪಿತ್ತಜನಕಾಂಗ ಅಣುಗಳನ್ನು ಬಳಸಿಕೊಂಡು ಪಿತ್ತಜನಕಾಂಗ ಸಹಾಯಕ ಸಾಧನಗಳನ್ನು ನಿರ್ಮಿಸಿವೆ. *ಕೃತಕ ಮೇದೋಜ್ಜೀರಕ ಗ್ರಂಥಿ — ವಿಶೇಷವಾಗಿ ಸಕ್ಕರೆ ಖಾಯಿಲೆಯ ಸಂದರ್ಭದಲ್ಲಿ, ಈ ಸಂಶೋಧನೆಯು ಇನ್ಸುಲಿನ್ಅನ್ನು ನಿರ್ಮಿಸಲು ಮತ್ತು ನಿಯಂತ್ರಿಸಲು ಐಲೆಟ್ ಕೋಶಗಳನ್ನು ಬಳಸಿಕೊಳ್ಳುತ್ತದೆ.
- ಕೃತಕ ಮೂತ್ರಕೋಶಗಳು — ಆಂಥೋನಿ ಅತಾಳ[೫] (ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯ), ಇವರು ತಮ್ಮ ದೀರ್ಘಕಾಲದ ಪ್ರಯೋಗದಲ್ಲಿ 20ರಲ್ಲಿ 7 ಜನಕ್ಕೆ ಕೃತಕವಾಗಿ ಬೆಳೆಸಿದ ಮೂತ್ರಕೋಶಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.[೬]
- ಮೃದು ಎಲುಬು — ಪ್ರಯೋಗಾಲಯದಲ್ಲಿ ಬೆಳೆಸಿದ ಅಂಗಾಂಶವನ್ನು ಮಂಡಿಯ ಮೃದು ಎಲುಬನ್ನು ರಿಪೇರಿ ಮಾಡಲು ಯಶಸ್ವಿಯಾಗಿ ಬಳಸಬಹುದು.[೭]
- ಡೋರಿಸ್ ಟೇಲರ್ನ ’ಹಾರ್ಟ್ ಇನ್ ಎ ಜಾರ್’
- ಟಿಶ್ಯೂ-ಇಂಜಿನಿಯರಿಂಗ್ ಮಾಡಿದ ಏರ್ವೇ [೮]
- ಕೊಲ್ಯಾಜೆನ್ನಲ್ಲಿ embed ಮಾಡಲಾದ, ಮಾನವ ಚರ್ಮ ಕೋಶಗಳಿಂದ ನಿರ್ಮಿಸಲಾದ ಕೃತಕ ಚರ್ಮ.
- ಕೃತಕ ಮೂಳೆ ನೆಣ[೯]
- ಕೃತಕ ಮೂಳೆ
- ಕೃತಕ ಶಿಶ್ನ[೧೦]
ನಿರ್ಮಾಣ ಬ್ಲಾಕ್ಸ್ ಆಗಿ ಕೋಶಗಳು
[ಬದಲಾಯಿಸಿ]ಅಂಗಾಂಶ ಇಂಜಿನಿಯರಿಂಗ್ ಮಾಡಲು ಜೀವಂತ ಕೋಶಗಳನ್ನು ಇಂಜಿನಿಯರಿಂಗ್ ವಸ್ತುಗಳನ್ನಾಗಿ ಬಳಸಲಾಗುತ್ತದೆ. ಉದಾಹರಣೆಗೆ ಚರ್ಮವನ್ನು ಬದಲಾಯಿಸಲು ಅಥವಾ ರಿಪೇರಿ ಮಾಡಲು ಜೀವಂತ ನಾರು ಅಂಶ ಕೋಶಗಳನ್ನು ಬಳಸುವುದು, ಮೃದುಎಲುಬುಗಳನ್ನು ರಿಪೇರಿ ಮಾಡಲು ಜೀವಂತ ಕಾಂಡ್ರೋಸೈಟ್‌ಗಳು, ಅಥವಾ ಇನ್ನೂ ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುವ ವಿವಿಧ ಕೋಶಗಳು. 1998ರಲ್ಲಿ ಗೆರಾನ್ ಕಾರ್ಪೋರೇಷನ್‌ನ ವಿಜ್ಞಾನಿಗಳು ನಿತ್ಯಕೋಶಗಳ ರೇಖೆಗಳನ್ನು ನಿರ್ಮಿಸುವುದಕ್ಕಾಗಿ ಟೆಲೋಮಿಯರ್‌ಗಳ ವಿಸ್ತರಣೆ ಮಾಡುವುದನ್ನು ಕಂಡುಹಿಡಿದ ನಂತರ ಕೋಶಗಳು ಇಂಜಿನಿಯರಿಂಗ್ ವಸ್ತುಗಳಾಗಿ ದೊರಕಲು ಪ್ರಾರಂಭವಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ] ಇದಕ್ಕೆ ಮುಂಚೆ, ಆರೋಗ್ಯಯುತ ಕ್ಯಾನ್ಸರ್‌ನಿಷೇಧಕ ಸಸ್ತನಿ ಕೋಶಗಳ ಪ್ರಯೋಗಾಲಯ ಕಲ್ಚರ್‌ಗಳು ನಿರ್ದಿಷ್ಟ ಬಾರಿ ಮಾತ್ರ ಹೇಫ್ಲಿಕ್ ಮಿತಿಯವರೆಗೆ ವಿಭಜಿಸುತ್ತದೆ.
ಬೇರ್ಪಡಿಸುವಿಕೆ
[ಬದಲಾಯಿಸಿ]ರಕ್ತ ಮುಂತಾದ ದ್ರವ ಅಂಗಾಂಶಗಳಿಂದ ಕೋಶಗಳನ್ನು ಗುಂಪು ವಿಧಾನಗಳನ್ನು ಬಳಸಿ ತೆಗೆಯಲಾಗುತ್ತದೆ, ಸಾಮಾನ್ಯವಾಗಿ ಅಪಕೇಂದ್ರೀಯತೆ ಅಥವಾ ಒಳತೂರಿಸುವಿಕೆ ಕ್ರಿಯೆಯ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಘನ ಅಂಗಾಂಶಗಳಿಂದ ಕೋಶಗಳನ್ನು ತೆಗೆಯುವುದು ಇನ್ನೂ ಕಷ್ಟ. ಸಾಮಾನ್ಯವಾಗಿ ಅಂಗಾಂಶವನ್ನು ಮೃದುಮಾಡಲಾಗುತ್ತದೆ, ಅನಂತರ ಕೋಶಗಳನ್ನು ಹಿಡಿದಿಡುವ ಅತಿಅಣುಕೋಶ ಮಾತೃಕೆಗಳನ್ನು ತೆಗೆಯಲು ಕಿಣ್ವಗಳು ಟ್ರಿಪ್ಸನ್ ಅಥವಾ ಕೊಲ್ಯಾಗ್‌ನೇಸ್‌ಗಳೊಂದಿಗೆ ಜೀರ್ಣ ಮಾಡಲಾಗುತ್ತದೆ. ಅದಾದ ಮೇಲೆ, ಕೋಶಗಳು ತೇಲುತ್ತವೆ ಮತ್ತು ಅಪಕೇದ್ರೀಯತೆ ಅಥವಾ ಒಳತೂರಿಸಬಹುದಾದ ಸಾಧನಗಳನ್ನು ಬಳಸಿ ತೆಗೆಯಲಾಗುತ್ತದೆ.
ಟ್ರಿಪ್ಸನ್‌ನೊಂದಿಗೆ ಜೀರ್ಣ ಮಾಡುವುದು ಉಷ್ಣಾಂಶದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಉಷ್ಣಾಂಶ ಹೆಚ್ಚಾದಾಗ ಮಾತೃಕೆಗಳು ಬೇಗನೇ ಜೀರ್ಣವಾಗುತ್ತದೆ, ಆದರೆ ಹೆಚ್ಚು ಮುಕ್ಕಾಗುತ್ತದೆ. ಕೊಲ್ಯಾಗ್‌ನೇಸ್ ಉಷ್ಣಾಂಶದ ಮೇಲೆ ಹೆಚ್ಚು ಅವಲಂಬಿತವಾಗಿರುವುದಿಲ್ಲ. ಕಡಿಮೆ ಕೋಶಗಳನ್ನು ಮುಕ್ಕು ಮಾಡುತ್ತವೆ, ಆದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ದುಬಾರಿ ಕೂಡ.
ಕೋಶಗಳ ವಿಧಗಳು
[ಬದಲಾಯಿಸಿ]ಕೋಶಗಳನ್ನು ಸಾಮಾನ್ಯವಾಗಿ ಅದರ ಮೂಲದ ಆಧಾರದ ಮೇಲೆ ವಿಭಾಗಿಸಲಾಗುತ್ತದೆ:
- ಆಟೋಲೋಗಸ್ ಕೋಶಗಳನ್ನು ಯಾವ ವ್ಯಕ್ತಿಗೆ ಅವುಗಳನ್ನು ಕಸಿ ಮಾಡಲಾಗುತ್ತದೆಯೋ ಆ ವ್ಯಕ್ತಿಯ ದೇಹದಿಂದಲೇ ಪಡೆದುಕೊಳ್ಳಲಾಗುತ್ತದೆ. ಇದರಲ್ಲಿ ನಿರಾಕರಣೆ ಮತ್ತು ಪಾತೊಜೆನ್ ಸ್ಥಳಾಂತರಗಳ ಕುರಿತಾದ ತೊಂದರೆಗಳು ಅತಿ ಕಡಿಮೆ, ಆದರೆ ಕೆಲವು ಸಂದರ್ಭಗಳಲ್ಲಿ ಲಭ್ಯವಾಗದೆ ಹೋಗಬಹುದು. ಉದಾಹರಣೆಗೆ, ಅನುವಂಶೀಯ ರೋಗಗಳಿಗೆ ಸೂಕ್ತ ಆಟೋಲೋಗಸ್ ಕೋಶಗಳು ಲಭ್ಯವಿಲ್ಲ. ಹಾಗೆಯೇ ಬಹಳ ಅನಾರೋಗ್ಯದಿಂದಿರುವವರು ಅಥವಾ ವಯಸ್ಸಾದವರು, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳು ಉಪಯುಕ್ತ ಕೋಶಸಾಲುಗಳನ್ನು ಸ್ಥಾಪಿಸಲು ಸಾಕಷ್ಟು ಪರಿಮಾಣದ ಆಟೋಲೋಗಸ್ ಕೋಶಗಳನ್ನು ಹೊಂದಿರದೇ ಇರಬಹುದು. ಅದಕ್ಕೂ ಹೆಚ್ಚಾಗಿ, ಈ ವಿಭಾಗದ ಕೋಶಗಳನ್ನು ರೋಗಿಯಿಂದಲೇ ಬೆಳೆಸಬೇಕಾಗುತ್ತದೆ, ಕೋಶ ತೆಗೆದುಕೊಳ್ಳಲಾದ ಜಾಗದಲ್ಲಿ ಸೋಂಕು ಅಥವಾ ತೀವ್ರ ನೋವಿಗೆ ಕಾರಣವಾಗಬಹುದಾದ ಇಂತಹ ಶಸ್ತ್ರಕ್ರಿಯೆಗಳು ಅಗತ್ಯವೇ ಎಂಬ ಜಿಜ್ಞಾಸೆಯೂ ಇದೆ. ಆಟೊಲೋಗಸ್ ಕೋಶಗಳನ್ನು ಬಳಸುವ ಮೊದಲು ಸ್ಯಾಂಪಲ್‌ಗಳಿಂದ ಸಂಸ್ಕರಿಸಬೇಕು: ಇದು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಆಟೋಲೋಗಸ್ ಪರಿಹಾರಗಳು ಕ್ಷಿಪ್ರವಾಗಿರುವುದಿಲ್ಲ. ಇತ್ತೀಚೆಗೆ ಮೂಳೆನೆಣ ಮತ್ತು ಕೊಬ್ಬಿನಿಂದ ಮೆಸೆನ್‌ಕಿಮಲ್ ಮೂಲ ಕೋಶಗಳನ್ನು ಬಳಸುವುದು ಹೆಚ್ಚಾಗಿದೆ. ಈ ಕೋಶಗಳು ಮೂಳೆ, ಮೃದು ಎಲುಬು, ಕೊಬ್ಬು, ಮತ್ತು ಸ್ನಾಯು ಸೇರಿದಂತೆ ಹಲವು ಅಂಗಾಂಶ ವಿಧಗಳಾಗಿ ಬೇರ್ಪಡುತ್ತವೆ. ದೊಡ್ಡ ಮೊತ್ತದ ಕೋಶಗಳನ್ನು ಕೊಬ್ಬಿನಿಂದ ಸುಲಭವಾಗಿ ಮತ್ತು ಕ್ಷಿಪ್ರವಾಗಿ ಬೇರ್ಪಡಿಸಬಹುದು, ಇದರಿಂದ ದೊಡ್ಡ ಮೊತ್ತದ ಕೋಶಗಳನ್ನು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.
- ಆಲೋಜೆನಿಕ್ ಕೋಶಗಳನ್ನು ಅದೇ ತಳಿಯ ದಾನಿಯ ದೇಹದಿಂದ ತೆಗೆದುಕೊಳ್ಳಲಾಗುತ್ತದೆ. ಇನ್ ವಿಟ್ರೋ ಅಧ್ಯಯನಕ್ಕೆ ಮಾನವ ಜೀವಕೋಶಗಳನ್ನು ಬಳಸಿಕೊಳ್ಳಲು ಕೆಲವು ನೈತಿಕ ತೊಂದರೆಗಳು ಇವೆ, ಆದಾಗ್ಯೂ ಮಾನವ ದೇಹದ ಮುಂದೊಗಲಿನಿಂದ ತೆಗೆದ ಅಂಗಾಶದ ನಾರು ಅಂಶಗಳು ನಿರೋಧಕತೆಯ ದೃಷ್ಟಿಯಿಂದ ಸುರಕ್ಷಿತ ಮತ್ತು ಚರ್ಮದ ಅಂಗಾಂಶ ಇಂಜಿನಿಯರಿಂಗ್ ಮಾಡಲು ಒಂದು ಸಮರ್ಥ ಆಯ್ಕೆ.
- ಕ್ಸೆನೋಜೆನಿಕ್ ಕೋಶಗಳೆಂದರೆ ಬೇರೆ ವರ್ಗದ ವ್ಯಕ್ತಿಗಳಿಂದ ಬೇರ್ಪಡಿಸಿದ ಕೋಶಗಳು. ವಿಶೇಷವಾಗಿ, ಹೃದಯ-ರಕ್ತನಾಳಗಳ ಕಸಿಗಳ ರಚನೆಗಾಗಿ ಮಾಡಿದ ಪ್ರಯೋಗಗಳಲ್ಲಿ ಪ್ರಾಣಿಗಳ ಕೋಶಗಳನ್ನು ವ್ಯಾಪಕವಾಗಿ ಬಳಸಲಾಗಿದೆ.
- ಸೈನ್‌ಜೆನಿಕ್ ಅಥವಾ ಐಸೋಜೆನಿಕ್ ಕೋಶಗಳನ್ನು ಅನುವಂಶಿಕವಾಗಿ ಒಂದೇರೀತಿ ಇರುವ ಶರೀರಗಳಿಂದ ತೆಗೆದುಕೊಳ್ಳಲಾಗುತ್ತದೆ, ಉದಾಹರಣೆಗೆ ಅವಳಿ-ಜವಳಿಗಳು, ತದ್ರೂಪುಗಳು, ಅಥವಾ ಅತಿ-ಸ್ವಾಭಾವಿಕ ಅಧ್ಯಯನ ಪ್ರಾಣಿ ಮಾದರಿಗಳು.
- ಪ್ರಾಥಮಿಕ ಕೋಶಗಳು ಒಂದು ಜೀವಿಯಿಂದ ಬಂದಿರುತ್ತವೆ.
- ಮಾಧ್ಯಮಿಕ ಕೋಶಗಳನ್ನು ಸೆಲ್ ಬ್ಯಾಂಕ್‌ನಿಂದ ಪಡೆದುಕೊಳ್ಳಲಾಗುತ್ತದೆ.
- ಮೂಲ ಕೋಶಗಳು (ಮುಖ್ಯ ಲೇಖನ ಮೂಲ ಕೋಶ ವನ್ನು ನೋಡಿ) ಎಂದರೆ ಬೇರ್ಪಡಿಸದ, ಕಲ್ಚರ್‌ನಲ್ಲಿ ವಿಭಜನೆಯಾಗುವ ಸಾಮರ್ಥ್ಯವಿರುವ ಮತ್ತು ವಿವಿಧ ರೀತಿಯ ವಿಶೇಷ ಕೋಶಗಳನ್ನು ನಿರ್ಮಿಸುವ ಕೋಶಗಳು. ಅವುಗಳ ಮೂಲದ ಪ್ರಕಾರ ಮೂಲ ಕೋಶಗಳನ್ನು "ವಯಸ್ಕ" ಮತ್ತು "ಆರಂಭಿಕ" ಮೂಲ ಕೋಶಗಳು ಎಂದು ವಿಂಗಡಿಸಲಾಗುತ್ತದೆ, ಮೊದಲ ಗುಂಪು ಬಹುಸಾಮರ್ಥ್ಯವುಳ್ಳದ್ದಾಗಿದ್ದರೆ ಎರಡನೇ ಗುಂಪು ಬಹುತೇಕ ಬಹುಸಾಮರ್ಥ್ಯದವುಗಳು ಆಗಿರುತ್ತದೆ; ಆರಂಭಿಕ ಘಟ್ಟದ ಮೊದಮೊದಲ ಹಂತದಲ್ಲಿರುವ ಕೆಲವು ಕೋಶಗಳು ಬಹುಬೆಳವಣಿಗೆ ಸಾಮರ್ಥ್ಯ ಹೊಂದಿರುತ್ತವೆ. ಆರಂಭಿಕ ಮೂಲ ಕೋಶಗಳನ್ನು ಬಳಸುವ ಬಗೆಗೆ ದೊಡ್ಡ ನೈತಿಕ ಚರ್ಚೆ ನಡೆಯುತ್ತಿದೆಯಾದರೂ, ರೋಗ ಹಿಡಿದ ಅಥವಾ ಮುಕ್ಕಾದ ಅಂಗಾಂಶಗಳನ್ನು ರಿಪೇರಿ ಮಾಡಲು ಮೂಲ ಕೋಶಗಳು ಉಪಯೋಗಕ್ಕೆ ಬರುತ್ತವೆ ಎಂದು ಭಾವಿಸಲಾಗಿದೆ; ಅಥವಾ ಹೊಸ ಅಂಗಗಳನ್ನು ಬೆಳೆಸಲು ಅವನ್ನು ಬಳಸಬಹುದು.
ಪ್ರಾರಂಭದ ಹಂತದಲ್ಲಿಯ ರಚನೆಗಳು
[ಬದಲಾಯಿಸಿ]ಜೀವಕೋಶಗಳನ್ನು ಕೆಲವೊಮ್ಮೆ ಮೂರು-ಆಯಾಮಗಳ ಅಂಗಾಂಶ ರಚನೆಯನ್ನು ಅನುಮೋದಿಸಲು ಸಾಧ್ಯವಿರುವ ಕೃತಕ ರಚನೆಯಲ್ಲಿ ಬೆಳೆಸಲಾಗುತ್ತದೆ. ವಿಶಿಷ್ಟವಾಗಿ ಪ್ರಾರಂಭದ ಹಂತದಲ್ಲಿಯ ರಚನೆಗಳು ಎಂದು ಕರೆಯಲ್ಪಡುವ ಈ ರಚನೆಗಳು ಕೆಲವೊಮ್ಮೆ ಸೂಕ್ಷ್ಮವಾಗಿರುತ್ತವೆ, ಎಕ್ಸ್ ವಿವೊ , ಮತ್ತು ಇನ್ ವಿವೊ ಎರಡೂ ಸಹ ಇನ್ ವಿವೊ ಪರಿಸರವನ್ನು ಮರು ಸಮೀಕ್ಷೆ ಮಾಡುತ್ತವೆ ಮತ್ತು ತಮ್ಮ ಸ್ವಂತ ಸೂಕ್ಷ್ಮ ಆವರಣಗಳ ಮೇಲೆ ಪ್ರಭಾವ ಬೀರಲು ಜೀವಕೋಶಗಳಿಗೆ ಅವಕಾಶ ಕೊಡುತ್ತವೆ. ಪ್ರಾರಂಭದ ಹಂತದಲ್ಲಿಯ ರಚನೆಗಳು ಸಾಮಾನ್ಯವಾಗಿ ಕೆಳಗಿನ ಉದ್ದೇಶಗಳಲ್ಲಿ ಒಂದನ್ನಾದರೂ ಪೂರೈಸುತ್ತದೆ:
- ಜೀವಕೋಶದ ಜೋಡಣೆ ಮತ್ತು ಸ್ಥಳಾಂತರ
- ಜೀವಕೋಶಗಳು ಮತ್ತು ಜೀವರಾಸಾಯನಿಕ ಅಂಶಗಳ ಸಾಗಣೆ ಮತ್ತು ತಡೆಹಿಡಿಯುವುದು
- ಜೈವಿಕ ಪೌಷ್ಟಿಕಾಂಶಗಳು ಮತ್ತು ಸೂಚಿಸಿದ ಉತ್ಪನ್ನಗಳ ವಿಸರಣವನ್ನು ಸಾಧ್ಯಗೊಳಿಸುವುದು
- ಜೀವಕೋಶದ ಹಂತದ ಸ್ವಭಾವವನ್ನು ಬದಲಾಯಿಸಲು ಕೆಲವು ಯಾಂತ್ರಿಕ ಮತ್ತು ಜೈವಿಕ ಪ್ರಭಾವಗಳನ್ನು ಉಪಯೋಗಿಸುವುದು.
ಅಂಗಾಂಶ ಪುನರ‍್ರಚನೆಯ ಗುರಿಯನ್ನು ಸಾಧಿಸಲು ಪ್ರಾರಂಭದ ಹಂತದಲ್ಲಿಯ ರಚನೆಗಳು ಕೆಲವು ನಿಶ್ಚಿತ ಅವಶ್ಯಕತೆಗಳನ್ನು ಹೊಂದಿರಲೇಬೇಕು. ಜೀವಕೋಶಗಳು ಮತ್ತು ಪೌಷ್ಟಿಕಾಂಶಗಳು ಎರಡರ ಪೂರ್ತಿ ರಚನೆಯ ಪರ್ಯಂತ ವಿಸರಣ ಮತ್ತು ಜೀವಕೋಶದ ಮೊಳಕೆಗಳನ್ನು ಸುಲಭ ಮಾಡಲು ಅಧಿಕ ರಂಧ್ರಗಳು ಮತ್ತು ಸರಿಯಾದ ರಂಧ್ರದ ಅಳತೆಗಳು ಅವಶ್ಯವಾಗಿವೆ. ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯಿಲ್ಲದೆ ತೆಗೆಯುವ ಸುತ್ತಲಿರುವ ಅಂಗಾಂಶಗಳ ಮೂಲಕ ಹೀರಿಕೊಳ್ಳುವ ರಂದ್ರಯುಕ್ತಿಗಳ ನಂತರ ಜೈವಿಕ ಅವನತಿ ಕೆಲವೊಮ್ಮೆ ಒಂದು ಅವಶ್ಯಕ ಅಂಶವಾಗಿದೆ. ಅಂಗಾಂಶ ಕಟ್ಟುವ ಕ್ರಿಯೆಯ ಅನುಪಾತಕ್ಕೆ ಸಮನಾಗಿ ವಿಘಟನಾ ಕ್ರಿಯೆಯು ನಡೆಯುತ್ತದೆ. ಅಂದರೆ ಕೋಶಗಳು ತಮ್ಮ ಸುತ್ತ ನೈಸರ್ಗಿಕ ನಾರು ಅಂಶವನ್ನು ಕಟ್ಟಿಕೊಳ್ಳುತ್ತ ಅವುಗಳು ಒಂದೇ ರೀತಿಯ ಆಕಾರವನ್ನು ಹೊಂದಿರುವಂತವುಗಳಾಗುತ್ತವೆ. ಅಲ್ಲದೆ ಹೊಸ ಅಂಗಾಂಶವು ಕಾರ್ಯಾತ್ಮಕ ಒತ್ತಡವನ್ನು ತಡೆದುಕೊಳ್ಳುವಂತೆ ಮಾಡುತ್ತದೆ. ಚಿಕಿತ್ಸೆಯ ಬಳಕೆಗೆ ಒಳಸೇರಿಸುವುದು(ಚುಚ್ಚುಮದ್ದು ನೀಡುವುದು) ಸಹ ಮುಖ್ಯವಾಗಿದೆ. ಪ್ರಯೋಗಗಳ ಪುನರುತ್ಪಾದ್ಯತೆಯನ್ನು ಸುರಕ್ಷಿತವಾಗಿಸುವುದು ಮತ್ತು ಒಳ್ಳೆಯ ಫಲಿತಾಂಶಗಳನ್ನು ಕೊಡಲು 3ಡಿಯ ಹೊರವಲಯದ ಒಳ್ಳೆಯ ಹಿಡಿತ ಎಷ್ಟು ನಿರ್ಣಾಯಕವಾಗಿದೆ ಎಂದು ಇತ್ತೀಚಿನ ಅಂಗ ಮುದ್ರಣದ ಮೇಲಿನ ಸಂಶೋಧನೆಗಳು ತೋರಿಸುತ್ತಿವೆ.[೧೧]
ಮೂಲ ವಸ್ತುಗಳು
[ಬದಲಾಯಿಸಿ]ಬಹಳ ವಿವಿಧ ಮೂಲವಸ್ತುಗಳನ್ನು (ನೈಸರ್ಗಿಕ ಮತ್ತು ಕೃತಕ, ಜೈವಿಕ ಅವನತಿಯಾಗುವ ಮತ್ತು ಶಾಶ್ವತ) ಕಂಡುಹಿಡಿಯಲಾಗಿದೆ. ಅಂಗಾಂಶ ಇಂಜನಿಯರಿಂಗ್‍ನ ಸಂಗತಿ ಸಂಶೋಧನಾ ವಿಷಯವಾಗುವ ಮೊದಲು ಇದರ ಬಹಳ ಮೂಲವಸ್ತುಗಳು ವೈದ್ಯಕೀಯ ಕ್ಷೇತ್ರದಲ್ಲಿ ಮೊದಲೇ ಜೈವಿಕಿ ವಿಘಟನೆಗೊಳಪಡುಬಹುದಾದಂತಹ ಹೊಲಿಗೆ ಹಾಕಲು ಬಳಸುವ ವಸ್ತುಗಳಂತೆ ಬಳಕೆಯಲ್ಲಿತ್ತು. ಈ ವಸ್ತುಗಳಿಗೆ ಉದಾಹರಣೆಗಳೆಂದರೆ ಕೊಲಜೆನ್ ಮತ್ತು ಕೆಲವು ಪಾಲಿಸ್ಟರ್. ಹೊಸ ಜೈವಿಕ ವಸ್ತುಗಳು ಮಾದರಿ ಗುಣಲಕ್ಷಣಗಳು ಮತ್ತು ಕಾರ್ಯಾತ್ಮಕ ಅನುಕೂಲತೆಗಳನ್ನು ರೂಪಿಸಿವೆ: ಒಳಸೆರಿಸುವುದು, ಕೃತಕ ವಸ್ತುಗಳ ತಯಾರಿಕೆ, ಜೈವಿಕ ಹೊಂದಾಣಿಕೆ,..., ಪಾರದರ್ಶಕತೆ, ನ್ಯಾನೊ-ಅಳತೆಯ ಫೈಬರ‍್ಗಳು, ಕಡಿಮೆ ಏಕಾಗ್ರತೆ, ಮರುಹೀರಿಕೆಯ ಪ್ರಮಾಣಗಳು, ಮುಂತಾದವುಗಳು. ಪ್ಯೂರಾಮ್ಯಾಟ್ರಿಕ್ಸ್, ಝಾಂಗ್ ಎಮ್‍ಆಯ್‍ಟಿ ಲ್ಯಾಬ್‍ಗಳಿಂದ ಪಡೆದ, ರಿಚ್, ಗ್ರೊಡ್‍ಝಿನಿಸ್ಕಿ ಮತ್ತು ಲಂಗರ್ ಇದರಲ್ಲಿ ಒಂದು ಹೊಸ ಜೈವಿಕಾನುಕರಣಶೀಲ ರಂದ್ರಯುಕ್ತಿಯ ಕುಟುಂಬಗಳಿಗೆ ಸೇರಿದೆ, ಇದು ಈಗ ವಾಣಿಜ್ಯ ಮಹತ್ವ ಪಡೆದಿದೆ ಮತ್ತು ಚಿಕಿತ್ಸಕ ಅಂಗಾಂಶ ಇಂಜನಿಯರಿಂಗ್‍ನಲ್ಲಿ ಮಹತ್ತರ ಪ್ರಭಾವ ಬೀರುತ್ತಿದೆ. ಪಿಎಲ್‍ಎ - ಪಾಲಿಲೆಕ್ಟಿಕ್ ಎಸಿಡ್ ಇದು ಸಾಮಾನ್ಯವಾಗಿ ಉಪಯೋಗಿಸಿದ ಕೃತಕ ಮೂಲವಸ್ತುವಾಗಿದೆ. ಈ ಪಾಲಿಸ್ಟರ್ ಮನುಷ್ಯ ದೇಹದೊಳಗೆ ಕರಗಿ ಲ್ಯಾಕ್ಟಿಕ್ ಎಸಿಡ್‍ನ್ನು ಉತ್ಪತ್ತಿ ಮಾಡುತ್ತದೆ, ನೈಸರ್ಗಿಕವಾಗಿ ಸಂಭವಿಸಿದ ಈ ರಾಸಾಯನಿಕವನ್ನು ದೇಹದಿಂದ ಸುಲಭವಾಗಿ ಹೊರತೆಗೆಯಬಹುದು. ಇದಕ್ಕೆ ಸಮಾನ ಮೂಲವಸ್ತುಗಳೆಂದರೆ, ಪಾಲಿಗ್ಲಿಕೊಲಿಕ್ ಎಸಿಡ್ (ಪಿಜಿಎ) ಮತ್ತು ಪಾಲಿಕೆಪ್ರೊಲೆಕ್ಟೊನ್ (ಪಿಸಿಎಲ್): ಇವುಗಳ ಅವನತಿಹೊಂದುವ (ಕರಗುವ) ವ್ಯವಸ್ಥೆ ಪಿಎಲ್‍ಎಗೆ ಸಮನಾಗಿದೆ, ಆದರೆ ಪಿಎಲ್‍ಎಗೆ ಹೋಲಿಸಿದರೆ ಇವು ಅನುಕ್ರಮವಾಗಿ ತ್ವರಿತವಾಗಿ ಮತ್ತು ನಿಧಾನವಾಗಿ ಕರಗುವ ಪ್ರಮಾಣವನ್ನು ತೋರಿಸುತ್ತವೆ. ನೈಸರ್ಗಿಕ ಮೂಲ ವಸ್ತುಗಳಿಂದಲೂ ಸಹ ರಂದ್ರ ಯುಕ್ತಿಗಳನ್ನು ನಿರ್ಮಿಸಬಹುದು: ವಿಶೇಷವಾಗಿಹೆಚ್ಚಿನ ಕೋಶ ರಚನೆಯ ವಿವಿಧ ವ್ಯುತ್ಪನ್ನಗಳು ಕೋಶಗಳ ಬೆಳವಣಿಗೆಯನ್ನು ಅನುಮೋದಿಸಲು ಅದರ ಸಾಮರ್ಥ್ಯವನ್ನು ಪರೀಕ್ಷಿಸಲು ಅಧ್ಯಯನ ನಡೆಸಿದೆ. ಕೊಲಜಿನ್ ಅಥವಾ ಫಿಬ್ರಿನ್ ನಂತಹ ಪ್ರಿಟಾಯಿಕ್ ಮೂಲ ವಸ್ತುಗಳು ಮತ್ತು ಪಾಲಿಸಾಚರಿಡಿಕ್ ವಸ್ತುಗಳು, ಚಿತೊಸನ್ ನಂತಹ ಅಥವಾ ಗ್ಲೈಕೊಸೆಮಿನೊಗ್ಲಿಕನ್ ಗಳು (ಜಿಎಜಿಗಳು), ಇವೆಲ್ಲವೂ ಜೀವಕೋಶ ಹೊಂದಾಣಿಕೆಗೆ ಸರಿಹೊಂದುತ್ತವೆ ಎಂದು ತೋರಿಸಿಕೊಟ್ಟಿವೆ, ಆದರೆ ಶಕ್ತಿಯುತ ರೋಗನಿರೋಧಕತೆಯ ಬಗೆಗಿನ ಕೆಲವು ವಿಷಯಗಳು ಇನ್ನೂ ಉಳಿದುಕೊಂಡಿವೆ. ಜಿಎಜಿಗಳು ಹ್ಯಾಲುರೋನಿಕ್ ಎಸಿಡ್ ಗಳಲ್ಲಿ, ಸಾಧ್ಯವಿರುವ ವಿರುದ್ಧ ಸಂಪರ್ಕವಿರುವ ವಸ್ತುಗಳನ್ನು ಸಂಯೋಜಿಸುವುದು (ಉದಾಹರಣೆಗೆ ಗ್ಲುಟರಲ್ಡಿಹೈಡ್, ನೀರಿನಲ್ಲಿ ಕರಗುವ ಕಾರ್ಬೊಡಿಮೈಡ್), ರಂದ್ರಯುಕ್ತಿಗಳ ವಸ್ತುವಿನಂತೆ ಇದು ಸಾಧ್ಯವಿರುವ ಆಯ್ಕೆಗಳಲ್ಲಿ ಒಂದು. ರಂದ್ರಯುಕ್ತಿಗಳ ಕ್ರಿಯಾತ್ಮಕ ಗುಂಪು ನಿರ್ದಿಷ್ಟ ಅಂಗಾಂಶಗಳಿಗೆ ಚಿಕ್ಕ ಅಣುಗಳ (ಔಷಧಗಳು) ಸಾಗಾಣಿಕೆಯಲ್ಲಿ ಉಪಯೋಗವಾಗಬಹುದು. ವಿಂಗಡಿತವಾದ ಅಂಗಾಂಶ ಅಂಶಗಳನ್ನು ತೆಗೆದುಕೊಂಡಾಗ ಉಳಿವ ಕೋಶಾಂಶಗಳನ್ನು ಹೆಚ್ಚಿನ ಕೋಶಾಂಶಗಳ ರಚನೆಯನ್ನು ಇನ್ನೊಂದು ರೀತಿಯ ಪ್ರಾರಂಭದ ಹಂತದಲ್ಲಿಯ ರಚನೆಗಳು ಎಂದು ಹೇಳಬಹುದಾಗಿದೆ.
ಸಂಯೋಜನೆ
[ಬದಲಾಯಿಸಿ]ಅಂಗಾಂಶಗಳ ರಚನೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುವ ರಂಧ್ರಯುಕ್ತವಾದ ಆಕೃತಿಗಳನ್ನು ತಯಾರಿಸುವ ಹಲವು ವಿವಿಧ ವಿಧಾನಗಳನ್ನು ಸಾಹಿತ್ಯದಲ್ಲಿ ವರ್ಣಿಸಲಾಗಿದೆ. ಇಲ್ಲಿರುವ ಪ್ರತಿಯೊಂದು ತಂತ್ರಗಳಿಗೆ ಅದರದೆ ಆದ ಅನುಕೂಲಗಳಿವೆ, ಆದರೆ ಯಾವುದೂ ಕೂಡ ನ್ಯೂನತೆಗಳನ್ನು ಹೊರತ್ತಿಲ್ಲ.
- ನ್ಯಾನೊಫೈಬರ್ ಸ್ವ-ಕೂಟ : ಅಣುವಿನ ಸ್ವ-ಕೂಟ ಬೈಯೊ ವಸ್ತುಗಳನ್ನು ಸೃಷ್ಟಿಸುವ ಹಲವು ವಿಧಗಳಲ್ಲಿ ಒಂದು, ಈ ಬೈಯೊ ವಸ್ತುಗಳು, ಪ್ರಮಾಣ ಹಾಗೂ ವೈವೊ ಎಕ್ಸಟ್ರಾಸೆಲ್ಯುಲರ್ ಮ್ಯಾಟ್ರಿಕ್ಸ್ (ECM)ಗಳ ನೈಜ್ಯ ರಾಸಯನಶಾಸ್ತ್ರದ ತುಲನೆಯಲ್ಲಿ ಹೊಲಿಸುವ ಗುಣಲಕ್ಷಣಗಳನ್ನು ಹೊಂದಿವೆ. ಹೆಚ್ಚಾಗಿ, ಸಾಂಪ್ರದಾಯಿಕ ದೊಡ್ಡಪ್ರಾರಂಭದ ಹಂತದಲ್ಲಿಯ ರಚನೆಗಳು ಹಾಗೂ ಪ್ರಾಣಿ-ಉತ್ಪತ್ತಿಯ ವಸ್ತುಗಳಿಗಿಂತ ಈ ಜಲಸಂಯೋಜಿತ ಪ್ರಾರಂಭದ ಹಂತದಲ್ಲಿಯ ರಚನೆಗಳು ವೈವೊ ವಿಷವಿಜ್ಞಾನ ಹಾಗೂ ಬೈಯೊ ಹೋಲಿಕೆಯಲ್ಲಿ ಉತ್ತಮವಾಗಿ ತೋರುತ್ತವೆ.
- ನೆಯ್ಗೆಯ ತಂತ್ರಜ್ಞಗಳು : ಹಲವು ಪಾಲಿಮರ್‌ಗಳ ನೇಯ್ಗೆಯಿಲ್ಲದ ಜಾಲರಿಗಳ ತಯಾರಿಕೆಯಲ್ಲಿ ಸಫಲವಾಗಿ ನಿಯೋಜಿಸುವ ಎಲ್ಲ ಪ್ರಸ್ತಾವನೆಗಳು ಈ ತಂತ್ರಜ್ಞಗಳು ಒಳಗೊಂಡಿವೆ. ಪ್ರಮುಖವಾಗಿ ನೇಯ್ಗೆಯಿಲ್ಲದ ಪೊಲಿಗ್ಲೈಕೊಲೈಡ್ ರಚನೆಗಳು ಅಂಗಾಂಶ ರಚನೆಯ ಅನ್ವಯಿಕಗಳಲ್ಲಿ ಪರೀಕ್ಷಿಸಲ್ಪಟ್ಟಿವೆ: ಈ ತರಹದ ನಾರುಯುಕ್ತ ರಚನೆಗಳು ಹಲವು ಬಗೆಯ ಜೀವಕೋಶಗಳನ್ನು ಬೆಳೆಯಲು ಉಪಯುಕ್ತವಾಗಿ ಕಂಡು ಬರುತ್ತದೆ. ಹೆಚ್ಚು ರಂಧ್ರಯುಕ್ತಗುಣಗಳನ್ನು ಹಾಗೂ ನಿಯತ ರಂಧ್ರ ಗಾತ್ರವನ್ನು ಪಡೆಯಲು ಸಂಬಂಧಿತ ಕಠಿಣತೆಗಳು ಇದರ ಪ್ರಮುಖ ನ್ಯೂನತೆಗಳು.
- ಸೊಲ್ವೆಂಟ್ ಕಾಸ್ಟಿಂಗ್ ಹಾಗೂ ಪರ್ಟಿಕ್ಯುಲೆಟ್ ಲೀಚಿಂಗ್ (SCPL) : ಈ ಪ್ರಸ್ತಾವನೆಯ ಪದ್ಧತಿ ರಂಧ್ರಯುಕ್ತಿಗಳ ರಚನೆಯನ್ನು ನಿಯತ ರಂಧ್ರಯುಕ್ತಗುಣಗಳಿಂದ ತಯಾರಿಸಲು ಅನುಮತಿಸುತ್ತದೆ, ಆದರೆ ಒಂದು ನಿರ್ಧಿಷ್ಟವಾದ ದಟ್ಟತೆಯೊಂದಿಗೆ. ಮೊದಲಿಗೆ ಈ ಪಾಲಿಮರ್ ಅನ್ನು ಸೂಕ್ತವಾದ ಜೈವಿಕ ದ್ರಾವಕದಲ್ಲಿ ಕರಗಿಸಲಾಗುತ್ತದೆ (ಉದಾ: ಪಾಲಿಆಸಿಟಿಕ್ ಆಸಿಡ್ ಅನ್ನು ಡೈಕ್ಲೋರೊಮಿಥೈನ್‌ರಲ್ಲಿ ಕರಗಿಸಬಹುದು, ಆನಂತರ ಈ ದ್ರಾವಣವನ್ನು ಪೊರೊಜನ್ ಕಣಗಳು ತುಂಬಿರುವ ಅಚ್ಚಿನಲ್ಲಿ ಹೊರಳಿಸಲಾಗುತ್ತದೆ. ಇಂತಹ ಪೊರೊಜನ್, ಸೊಡಿಯಂ ಕ್ಲೊರೈಡ್, ಸ್ಯಾಖರೊಸ್ ಹರಳುಗಳು, ಜಿಲ್ಯಾಟಿನ್ ಗೋಲಗಳು ಅಥವಾ ಪ್ಯಾರಫಿನ್ ಗೋಲಗಳಂತಹ ಅಜೈವಿಕ ಉಪ್ಪಾಗಿರಬಹುದು. ಪೊರೊಜೆನ್‌ನ ಅಂಶಗಳ ಗಾತ್ರವು ಪ್ರಾರಂಭದ ಹಂತದಲ್ಲಿರುವ ರಚನೆಗಳ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಪಾಲಿಮರ್‌ನಿಂದ ಪೊರೊಜೆನ್‌ವರೆಗಿನ ಅನುಪಾತವು ಅಂತಿಮ ರಚನೆಯ ಮೇಲೆ ಪ್ರಭಾವ ಬೀರುತ್ತದೆ. ಪಾಲಿಮರ್ ದ್ರಾವಣವನ್ನು ಹಾಕಿದ ನಂತರದಲ್ಲಿ ಎಲ್ಲವೂ ಆವಿಯಾಗುವಂತೆ ಮಾಡಲಾಗುತ್ತದೆ. ಮಾದರಿ ರಚನಾ ಸಾಧನವನ್ನು ಪೊರೊಜೆನ್ ಕರಗಲು ಸಹಾಯಕವಾಗುವಂತಹ ದ್ರಾವಣದಲ್ಲಿ ಮುಳುಗಿಸಲಾಗುತ್ತದೆ. ಸೋಡಿಯಮ್ ಕ್ಲೋರೈಡ್ ಇದ್ದಾಗ ನೀರು, ಪ್ಯಾರಾಫಿನ್‌ಗೆ ಸ್ಯಾಕ್‌ರೋಸ್ ಮತ್ತು ಜಿಲೆಟಿನ್ ಅಥವಾ ಮುಕ್ತವಾದ ವಿಲೀನಕಾರಕ ಹೆಕ್ಸಾನ್ ಅನ್ನು ಬಳಸಲಾಗುತ್ತದೆ. ಪೊರೊಜೆನ್ ವಿಲಿನವಾದ ನಂತರದಲ್ಲಿ ಅಗತ್ಯವಾದ ಆಕಾರವು ದೊರೆಯುತ್ತದೆ. ಸ್ವಲ್ಪ ದಟ್ಟತನದ ವ್ಯತ್ಯಾಸ ಪಡೆಯಬಹುದು ಎಂಬುದು ಬಿಟ್ಟರೆ, SCPLನ ಇನ್ನೊಂದು ನ್ಯೂನತೆ ಅದರ ಜೈವಿಕ ದ್ರಾವಣಗಳ ಬಳಕೆಯಲ್ಲಿದೆ, ರಂಧ್ರಗಳ ಮೇಲೆ ಆರಂಭಗೊಂಡ ಜೀವಕೋಶಗಳಿಗೆ ಯಾವುದೇ ಸಾಧ್ಯವಾದ ಹಾನಿಯನ್ನು ತಡೆಯಲು ಜೈವಿಕ ದ್ರಾವಣಗಳನ್ನು ಪೂರ್ತಿಯಾಗಿ ತೆಗೆಯಬೇಕು.
- ಅನಿಲದ ಬುರುಗಾಗುವಿಕೆ : ಜೈವಿಕ ದ್ರಾವಣಗಳ ಹಾಗೂ ಘನ ಪೊರೊಜನ್‌ಗಳ ಬಳಕೆಯ ಅಗತ್ಯವನ್ನು ನೀಗಿಸಲು ಅನಿಲವನ್ನು ಪೊರೊಜನ್ ಆಗಿ ಬಳಸುವ ಒಂದು ತಂತ್ರಜ್ಞವನ್ನು ವೃದ್ಧಿಸಲಾಯಿತು. ಮೊದಲಿಗೆ ಬಿಸಿಯಾದ ಅಚ್ಚನ್ನು ಬಳಸಿ ಸಂಕುಚಿತ ಅಚ್ಚಿನ ಮೂಲಕ ಇಚ್ಛಿತ ಪಾಲಿಮರ್‌ಗಳನ್ನು ಬಳಸಿ ಡಿಸ್ಕ್ ಆಕಾರದ ರಚನೆಗಳನ್ನು ತಯಾರಿಸಲಾಗುತ್ತದೆ. ಈ ಡಿಸ್ಕ್‌ಗಳನ್ನು ನಂತರ CO2ಯಿನ ಹೆಚ್ಚು ಒತ್ತಡಕ್ಕೆ ಹೊರಪಡಿಸಿದ ಕೊಣೆಯಲ್ಲಿ ಹಲವು ದಿನಗಳವರೆಗೆ ಇಡುತ್ತಾರೆ. ಕೊಣೆಯಲ್ಲಿನ ಒತ್ತಡ ಸಹಜವಾಗಿ ವಾತಾವರಣದ ಮಟ್ಟಕ್ಕ ಹಿಂದಿರುಗುತ್ತದೆ. ಈ ಪ್ರಕ್ರೀಯೆಯ ಸಮಯದಲ್ಲಿ ಕಾರ್ಬನ್ ಡೈಯಾಕ್ಸೈಡ್ ಅಣುಗಳಿಂದ ರಚಿತ ರಂಧ್ರಗಳು ಪಾಲಿಮರ್ ಅನ್ನು ತ್ಯಜಿಸುತ್ತವೆ, ಪರಿಣಾಮ ಸ್ಪಂಜು ತರಹದ ಒಂದು ರಚನೆ ಆಗುತ್ತದೆ. ಸಂಕ್ಷೇಪಣೆ ಅಚ್ಚುಗೊಳಿಸುವಿಕೆಯ ಸಮಯದಲ್ಲಿ ಪರಿಣಮಿಸಿದ ವಿಪರೀತ ತಾಪದಿಂದ ಇಂತಹ ಒಂದು ತಂತ್ರಜ್ಞದ ಜೊತೆಗೂಡಿದ ಪ್ರಮುಖ ತೊಡಕುಗಳು ಉಂಟಾಗುತ್ತದೆ (ಇದು ಪಾಲಿಮರ್ ವ್ಯೂಹದಲ್ಲಿ ಯಾವುದೇ ತಾಪದ ಅಸ್ಥಿರ ವಸ್ತುಗಳ ಏಕೀಕರಣವನ್ನು ನಿಷೇಧಿಸುತ್ತದೆ) ಹಾಗೂ ರಂಧ್ರಗಳು ಪರಸ್ಪರ ಸಂಪರ್ಕದ ರಚನೆಯನ್ನು ಸೃಷ್ಟಿಸುವುದಿಲ್ಲ ಎಂಬ ವಾಸ್ತವತೆ ಕೂಡ ಒಂದು ತೊಡಕು.
- ಜಿಡ್ಡಿನ ಪದಾರ್ಥಗಳ ಸೂಕ್ಷ್ಮಕಣಗಳನ್ನು (ಎಮಲ್‍ಷನ್) ಸೃಷ್ಟಿಸುವ ಪದ್ಧತಿ/ಘನೀಭವಿಸುವ-ಶುಷ್ಕತೆ : ಈ ತಂತ್ರಜ್ಞಕ್ಕೆ SCPL ಅಂತಹ ಘನ ಪೊರೊಜನ್‌ನ ಬಳಕೆಯ ಅಗೆತ್ಯವಿಲ್ಲ. ಮೊದಲು ಒಂದು ಸಂಯೋಜಿತ ಪೊಲಿಮರ್ ಅನ್ನು ಸೂಕ್ತವಾದ ದ್ರಾವಕದಲ್ಲಿ ಕರಗಿಸಲಾಗುವುದು (ಉದಾ: ಪೊಲಿಆಸಿಟಿಕ್ ಆಸಿಡ್ ಅನ್ನು ಡೈಕ್ಲೊರೋಮಿಥೈನ್‌ನಲ್ಲಿ) ನಂತರ ಪೊಲಿಮರಿಕ್ ದ್ರಾವಣಕ್ಕೆ ನೀರನ್ನು ಕೂಡಿಸಲಾಗುವುದು ಹಾಗೂ ಈ ಎರಡು ದ್ರವಗಳನ್ನು ಎಮಲ್‍ಷನ್ ಪಡೆಯಲು ಬೆರೆಸಲಾಗುವುದು. ಎರಡು ಹಂತಗಳು ಬೇರೆಯಾಗುವ ಮೊದಲು, ಎಮಲ್‌ಷನ್ ಅನ್ನು ಅಚ್ಚಿನಲ್ಲಿ ಹಾಕಿ ದ್ರವ ನೈಟ್ರೊಜನ್‌ನಲ್ಲಿ ಮುಳುಗಿಸುವ ಮೂಲಕ ಕ್ಷಿಪ್ರವಾಗಿ ಘನವಾಗಿಸಲಾಗುವುದು. ಚದರಿದ ನೀರು ಹಾಗೂ ದ್ರಾವಕವನ್ನು ತೆಗೆಯಲು ಘನೀಯಾದ ಎಮಲ್‌ಷನ್ ಅನ್ನು ಮುಂದಿನ ಹಂತಗಳಲ್ಲಿ ಘನೀಭವಿಸುವ-ಶುಷ್ಕತೆ ಪಡಿಸಲಾಗುವುದು, ಹೀಗೆ ಒಂದು ಘನವಾದ ರಂಧ್ರಯುಕ್ತ ಪಾಲಿಮರಿಕ್ ರಚನೆ ಉಳಿಯುತ್ತದೆ. SCPLಗೆ ಹೊಲಿಸಿದರೆ ಜಿಡ್ಡಿನ ಪದಾರ್ಥಗಳ ಸೂಕ್ಷ್ಮಕಣಗಳನ್ನು (ಎಮಲ್‍ಷನ್) ಸೃಷ್ಟಿಸುವ ಪದ್ಧತಿ ಹಾಗೂ ಘನೀಭವಿಸುವ-ಶುಷ್ಕತೆಯ ಪದ್ಧತಿಗಳು ಹೆಚ್ಚು ವೇಗದ ಸಿದ್ಧತೆಯನ್ನು ಅನುಮತಿಸುತ್ತದೆ, ಕಾರಣ ಇವುಗಳಲ್ಲಿ ಸಮಯ ಕಳೆಯುವ ಒಸರಿಸುವ ಹಂತವಿಲ್ಲ, ಇಲ್ಲಿ ದ್ರಾವಕಗಳ ಬಳಕೆಯ ಅಗತ್ಯ ಇನ್ನು ಇದೆ, ಹೆಚ್ಚಾಗಿ ರಂಧ್ರಗಳ ಗಾತ್ರ ತುಲನಾತ್ಮಕವಾಗಿ ಚಿಕ್ಕದಾಗಿದ್ದು ರಂಧ್ರಯುಕ್ತ ಗುಣ ಹೆಚ್ಚು ಅನಿಯತವಾಗಿದೆ. ಘನೀಭವಿಸುವ-ಶುಷ್ಕತೆಯನ್ನು ಅದಾಗಿಯೆ ಸಾಮಾನ್ಯವಾಗಿ ರಂಧ್ರಯುಕ್ತಿಗಳ ತಯಾರಿಸುವಿಕೆಯ ತಂತ್ರಜ್ಞಗಳಲ್ಲಿ ಕೂಡ ನಿಯೋಜಿಸಲಾಗುತ್ತದೆ. ಪ್ರಮುಖವಾಗಿ ಕೊಲಾಜನ್ ಸ್ಪಂಜುಗಳ ತಯಾರಿಕೆಗಳಲ್ಲಿ ಇದನ್ನು ಬಳಸಲಾಗುತ್ತದೆ: ಕೊಲಾಜನ್ ಅನ್ನು ಅಸಿಟಿಕ್ ಆಸಿಡ್ ಅಥವಾ ಹೈಡ್ರೊಕ್ಲೊರಿಕ್ ಆಸಿಡ್‌ನ ಆಸಿಡಿಕ್ ದ್ರಾವಕಗಳಲ್ಲಿ ಕರಗಿಸಲಾಗುತ್ತದೆ, ಈ ದ್ರಾವಕಗಳನ್ನು ದ್ರವ ನೈಟ್ರೊಜನ್‌ನಲ್ಲಿ ಘನೀಭವಿಸಿ ಅಚ್ಚಿನಲ್ಲಿ ಹಾಕಿರಲಾಗುತ್ತದೆ ಹಾಗೂ ನಂತರ ಲೈಯೊಫಿಲೈಸ್ (ಘನೀಭವಿಸುವ-ಶುಷ್ಕತೆ) ಮಾಡಲಾಗುತ್ತದೆ.
- ಥರ್ಮಲಿ ಇಂಡಿಯ್ಯುಸಡ್ ಫೆಸ್ ಸೆಪರೆಷನ್ (TIPS) : ಹಿಂದಿನ ತಂತ್ರಜ್ಞಕೆ ಸಮನಾಗಿದ್ದು, ಈ ಫೆಸ್ ಸೆಪರೆಷನ್ ಪದ್ಧತಿಯಲ್ಲಿ ಕಡಿಮೆ ಕರಗುವ ಘಟ್ಟವನ್ನು ಹೊಂದಿರುವ ಹಾಗೂ ಸುಲಭವಾಗಿ ಭವ್ಯವಾಗುವ ದ್ರಾವಕದ ಅಗತ್ಯವಿದೆ. ಉದಾಹರಣೆಗೆ ಡೈಯೊಕ್ಸಿನ್ ಬಳಸಿ ಪಾಲಿಲ್ಯಾಕ್ಟಿಕ್ ಆಸಿಡ್ ಅನ್ನು ಕರಗಿಸಬಹುದು, ಆನಂತರ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಕೂಡಿಸುವ ಮೂಲಕ ಫೆಸ್ ಸೆಪರೆಷನ್ ಅನ್ನು ಆಗಿಸಬಹುದು: ಒಂದು ಪಾಲಿಮರ್-ಸಮೃದ್ಧ ಹಾಗೂ ಒಂದು ಪಾಲಿಮರ್-ರಿಕ್ತ ಹಂತಗಳು ಸೃಷ್ಟಿಯಾಗುತ್ತವೆ. ಇದನ್ನು ಅನುಸರಿಸಿ ದ್ರಾವಕದ ಕರಗುವ ಘಟ್ಟದಗಿಂತ ಹೆಚ್ಚು ತಂಪಾಗಿಸುವುದು ಹಾಗೂ ಕೆಲವು ದಿನಗಳವರಿಗೆ ಅದನ್ನು ವಾಯು ಶೂನ್ಯತೆ-ಶುಷ್ಕತೆಗೆ ಒಳಗಾಗಿಸಲಾಗುವುದು, ಹೀಗೆ ಮಾಡುವುದರಿಂದ ದ್ರಾವಕ ಉತ್ಕೃಷ್ಟ ಮಟ್ಟದ ರಂಧ್ರಯುಕ್ತಿಯನ್ನು ಪಡೆಯುತ್ತದೆ. ದ್ರವ-ದ್ರವ ಫೆಸ್ ಸೆಪರೆಷನ್, ಎಮಲ್‌ಸಿಫಿಕೆಷನ್/ಘನೀಭವಿಸುವ-ಶುಷ್ಕತೆಯಲ್ಲಿ ಪ್ರಕಟವಾಗುವ ನ್ಯೂನತೆಗಳಿಗೆ ಸಮನಾಗಿದೆ.
- ಎಲೆಕ್ಟ್ರೊಸ್ಪಿನ್ನಿಂಗ್ : ಉಪಮೈಕ್ರೊನ್‍ಯಿಂದ ನ್ಯಾನೊಮಿಟರ್ ಅಡ್ಡಳತೆಯವರೆಗಿನ ನಿರಂತರ ನಾರುಗಳನ್ನು ಉತ್ಪತ್ತಿಸಲು ಬಳಸಬಹುದಾದ ಒಂದು ಸರ್ವಸಮರ್ಥ ತಂತ್ರಜ್ಞ. ಒಂದು ವಿಶಿಷ್ಟವಾದ ಎಲೆಕ್ಟ್ರೊಸ್ಪಿನ್ನಿಂಗ್ ರಚನೆಯಲ್ಲಿ, ಒಂದು ಸ್ಪಿನ್ನರೆಟ್ ಮೂಲಕ ದ್ರಾವಕ ಒಂದನ್ನು ತುಂಬಲಾಗುತ್ತದೆ ಹಾಗೂ ಅದರ ತುದಿಗೆ ಒಂದು ಹೆಚ್ಚು ವೋಲ್ಟೇಜನ್ನು ಅನ್ವಯಿಸಲಾಗುತ್ತದೆ. ವಿದ್ಯುತ್ ಸಂಗ್ರಹಣೆಯ ದ್ರಾವಕದಲ್ಲಿ ಸ್ಥಾಯೀ ವಿದ್ಯುತ್ತಿನ ವಿಕರ್ಷಣೆಯು ನಿರ್ಮಾಣವಾದಾಗ ಅದು ತೆಳುವಾದ ನಾರುಯುಕ್ತ ಪ್ರವಾಹದ ಉಚ್ಚಾಟನೆಯನ್ನು ಉಂಟು ಮಾಡುತ್ತದೆ. ಒಂದು ಚೌಕಟ್ಟಿನ ಸಂಗ್ರಹಕ ತಟ್ಟೆ ಅಥವಾ ವಿರುದ್ಧ ಅಥವಾ ಸ್ಥಾಪಿತ ವಿದ್ಯುತ್ ಸಂಗ್ರಹಣೆಯ ಕೋಲು ನಿರಂತರ ನಾರುಗಳನ್ನು ಎಳೆಯುತ್ತದೆ, ಇದು ಪ್ರವೇಶಿಸಿ ಅತಿ ಹೆಚ್ಚು ರಂಧ್ರಯುಕ್ತ ಜಾಲವನ್ನು ನಿರ್ಮಿಸುತ್ತದೆ. ಈ ತಂತ್ರಜ್ಞದ ಪ್ರಾಥಮಿಕ ಲಾಭಗಳಲ್ಲಿ ಅದರ ಸರಳತೆ ಹಾಗೂ ಪರಿವರ್ತನೆಯ ಸರಾಗತೆ ಒಳಗೊಂಡಿವೆ. ಪ್ರಯೋಗಶಾಲೆಯ ಮಟ್ಟದಲ್ಲಿ, ಒಂದು ವಿಶಿಷ್ಟ ಎಲೆಕ್ಟ್ರೊಸ್ಪಿನ್ನಿಂಗ್ ಸಿದ್ಧತೆಗೆ ಬರಿ ಒಂದು ಹೆಚ್ಚು ವಿದ್ಯುತ್ ಸಂಗ್ರಹಣ ಪೂರೈಕೆ (ಸುಮಾರು 30 kV ರಷ್ಟು), ಒಂದು ಪಿಚಕಾರಿ, ಒಂದು ಚಪ್ಪಟೆ ತುದಿಯ ಸೂಜಿ ಹಾಗೂ ಒಂದು ವಾಹಕವಾಗುವ ಸಂಗ್ರಹಕದ ಅಗತ್ಯವಿದೆ. ಸಂಗ್ರಹಕಕ್ಕೆ ಅಂತರ, ಅನ್ವಯಿಕ ವಿದ್ಯುತ್ ಸಂಗ್ರಹಣೆಯ ಪ್ರಮಾಣ, ಅಥವಾ ದ್ರಾವಕದ ಹರಿವಿನ ಗತಿ ಅಂತಹ ಮಾರ್ಪಡಿಸಬಹುದಾದ ಅವ್ಯಯಗಳನ್ನು ಬದಲಾಯಿಸುವುದರಿಂದ -- ಸಂಶೋಧಕರು ಅನಿರೀಕ್ಷಿತವಾಗಿ ರಂಧ್ರಯುಕ್ತಿಯ ಪೂರ್ತಿ ರಚನೆಯನ್ನು ಬದಲಿಸಬಹುದು.
- CAD/CAM ತಂತ್ರಜ್ಞಗಳು : ರಂಧ್ರಯುಕ್ತಿಯ ಗುಣ ಹಾಗೂ ರಂಧ್ರದ ಗಾತ್ರದ ನಿಯಂತ್ರಣದ ವಿಷಯದಲ್ಲಿ ಮೇಲೆ ವಿವರಿಸಿದ ಹಲವು ಪ್ರಸ್ತಾವನೆಗಳು ಪರಿಮಿತಿಗಳನ್ನು ಹೊಂದಿವೆ, ಕಂಪ್ಯೂಟರ್ ಅಸಿಸ್ಟಡ್ ಡಿಸೈನ್ ಹಾಗೂ ಮ್ಯಾನ್ಯುಫ್ಯಾಕ್ಚರಿಂಗ್ ತಂತ್ರಜ್ಞಗಳನ್ನು ಅಂಗಾಂಶ ಇಂಜಿನಿಯರಿಂಗ್‌ನಲ್ಲಿ ಪರಿಚಯಿಸಲಾಗಿದೆ. ಮೊದಲು ಮೂರು-ಆಯಾಮಗಳ ರಚನೆಯನ್ನು CAD ಸಾಫ್ಟ್‌ವೇರ್ ಬಳಸಿ ವಿನ್ಯಾಸಗೊಳಿಸಲಾಗುವುದು, ನಂತರ ರಂಧ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ ಪಾಲಿಮರ್ ಪೌಡರಗಳ ಇಂಕ್-ಜೆಟ್ ಮುದ್ರಣವನ್ನು ಬಳಸಿ ಅಥವಾ ಒಂದು ಪಾಲಿಮರ್ ಮೆಲ್ಟ್‌ನ ಮಿಶ್ರ ಹೇಳಿಕೆ ನೀಡುವ ಮಾದರಿಯ ಮೂಲಕ.[೧೨]
ಸಂಘಟನೆಯ ಪದ್ಧತಿ
[ಬದಲಾಯಿಸಿ]ಅಂಗಾಂಶದ ಇಂಜಿನಿಯರಿಂಗ್ ಜೊತೆ ನಿರಂತರವಾಗಿ ಮತ್ತೆ ಮತ್ತೆ ಮರಳುವ ತೊಂದರೆ ಎಂದರೆ ಸಾಗಣಿಕೆಯ ಪರಿಮಿತಿಗಳು. ರೂಪಗೊಂಡ ಅಂಗಾಂಶಗಳು ಸಾಮಾನ್ಯವಾಗಿ ಆರಂಭದ ರಕ್ತದ ಪೂರೈಕೆಯ ಅಭಾವವನ್ನು ಎದುರಿಸುತ್ತಾರೆ, ಹೀಗೆ ಯಾವುದೇ ಒಳಸೇರಿಸಿದ ಜೀವಕೋಶಗಳಿಗೆ ಅಸ್ತಿತ್ವದಲ್ಲಿರಲು, ಹಾಗೂ/ಅಥವಾ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ಆಮ್ಲಜನಕ ಹಾಗೂ ಪೋಶಕಾಂಶಗಳನ್ನು ಪಡೆಯಲು ಕಠಿಣವಾಗಿಸುತ್ತದೆ. ಸ್ವ-ಸಂಘಟನೆಯು ಇಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಬಹುದು, ಜೀವಕೋಶಗಳ ಹಾಗೂ ಪ್ರೋಟಿನ್‌ಗಳ ಕೋಶೀಕರಿಸುವಿಕೆಯ ದೃಷ್ಟಿಯಿಂದ ಮತ್ತು ರೂಪಗೊಂಡ ಅಂಗಾಂಶದ ರಚನೆಗೆ ಹಾಗೂ ಜೀವಕೋಶಗಳ ಒಳಬೆಳೆವಣಿಗೆಗೆ ಸರಿಯಾದ ವಾಸ್ತವಿಕ ಮಾಪಕದ ಮೇಲೆ ರಂಧ್ರಗಳನ್ನು ಸೃಷ್ಟಿಸುವುದರ ಮೂಲಕ. ಅಂಗಗಳನ್ನು ಅಥವಾ ಇಡಿ ಜೀವಾಣುವನ್ನು ಮುದ್ರಿಸಲು ಸಾಧ್ಯವಾಗಬಹುದು. ಒಂದು ಇತ್ತೀಚಿನ ಸಂಶೋಧನಾ ಪದ್ಧತಿ ಥರ್ಮೋರಿವರ್ಸಿಬಲ್ ಜೆಲ್‌ನ ವ್ಯೂಹದಲ್ಲಿನ ಜೀವಕೋಶಗಳ ನಿಖರವಾದ ಪದರಗಳನ್ನು ಮುದ್ರಿಸಲು ಒಂದು ಇಂಕ್-ಜೆಟ್ ಯಂತ್ರ ವಿನ್ಯಾಸವನ್ನು ಬಳಸುತ್ತದೆ. ರಕ್ತ ನಾಳಗಳನ್ನು ಅಂಟಿಕೊಂಡಿರುವ ಎಂಡೊಥೆಲಿಯಲ್ ಜೀವಕೋಶಗಳನ್ನು ಅಸಂಖ್ಯಾತ ವಲಯಗಳ ಗುಂಪಿನಲ್ಲಿ ಮುದ್ರಿಸಲಾಗಿದೆ. ಇವುಗಳಿಗೆ ಕಾವು ನೀಡಿದಾಗ, ಇವು ಒಂದು ಕೊಳವೆಯಲ್ಲಿ ಸಂಯೋಜಿತಗೊಳ್ಳುತ್ತದೆ.[೧೨] [೧೩]
ಅಂಗಾಂಶ ಕೃಷಿ
[ಬದಲಾಯಿಸಿ]ಹಲವಾರು ಸಂದರ್ಭಗಳಲ್ಲಿ, ಕ್ರಿಯಾತ್ಮಕ ಅಂಗಾಂಶಗಳ ರಚನೆಯು ಮತ್ತು ಪ್ರನಾಳದಲ್ಲಿನ ಜೈವಿಕ ಆಕೃತಿಯು ಅದರ ಅಸ್ತಿತ್ವದ ಉತ್ತೇಜನಕ್ಕಾಗಿ, ಬೆಳವಣಿಗೆ ಮತ್ತು ಕೃತಕವಾದ ಕಾರ್ಯನಿರ್ವಹಣೆಗಾಗಿ ವ್ಯಾಪಕವಾದ ಕೃಷಿಯನ್ನು ಬಯಸುತ್ತದೆ. ಸಾಮಾನ್ಯವಾಗಿ ಕೋಶಗಳ ಮೂಲ ಅವಶ್ಯಕತೆಗಳನ್ನು ಕೃಷಿಯಲ್ಲಿ ಕಾಪಾಡಿಕೊಂಡು ಬರಬೇಕು. ಅವೆಂದರೆ ಆಮ್ಲಜನಕ,ಪಿಹೆಚ್,ತೇವಾಂಶ,ಉಷ್ಣತೆ, ಪೋಷಕಾಂಶಗಳು ಮತ್ತು ಪರಾಸರಣ ಒತ್ತಡದ ನಿರ್ವಹಣೆ. ಅಂಗಾಶ ಮರುರೂಪಿಸುವಿಕೆಯ ಕೃಷಿಯು ಅದಕ್ಕೆಪೂರಕವಾದ ವಾತಾವರಣವನ್ನು ನಿರ್ವಹಿಸುವಲ್ಲಿಯೂ ಹೆಚ್ಚಿನ ತೊಂದರೆಗಳನ್ನು ಹೊಂದಿದೆ. ಗುಣಮಟ್ಟದ ಕೋಶಕೃಷಿಯಲ್ಲಿ ವಿಸರಣವು ಪೋಷಕಾಂಶಗಳ ಮತ್ತು ಚಯಾಪಚಯ ಕ್ರಿಯೆಯ ಉತ್ಪನ್ನದ ಸಾಗಾಣಿಕೆಗೆ ಏಕಮಾತ್ರ ವಿಧಾನವಾಗಿದೆ.
ಹಾಗಿದ್ದಾಗ್ಯೂ ಕೃಷಿಯ ಪ್ರಮಾಣವು ದೊಡ್ಡದಾದಾಗ ಮತ್ತು ಹೆಚ್ಚು ಸಂಕೀರ್ಣವಾದಾಗ, ಉದಾ:ಮರುರೂಪಿಸಿದ ಅಂಗಾಂಶಗಳು ಮತ್ತು ಪೂರ್ಣ ಅಂಗಾಂಶಗಳ ಸಂದರ್ಭದಲ್ಲಿ ಕೃಷಿಯನ್ನು ನಿರ್ವಹಿಸಲು ಬೇರೆ ಯಾಂತ್ರಿಕ ವ್ಯವಸ್ಥೆಯನ್ನು ಬಳಸಬೇಕಾಗುತ್ತದೆ.
ಅಂಗಾಂಶ ಕೃಷಿಯ ಇನ್ನೊಂದು ಅಂಶವೆಂದರೆ ಅದರ ಸರಿಯಾದ ಕಾರ್ಯ ನಿರ್ವಹಣೆಗಾಗಿ ಪ್ರಚೋದಕ ಅಥವಾ ಸಮಂಜಸವಾದ ಅಂಶಗಳನ್ನು ಕೃತಕವಾಗಿ ಸೇರಿಸಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಕೃಷಿಯ ಸಾಧಾರಣವಾದ ನಿರ್ವಹಣೆಯು ಸಾಕಾಗುವುದಿಲ್ಲ. ಬೆಳವಣಿಗೆಗೆ ಬೇಕಾದ ಅಂಶಗಳು,ಹಾರ್ಮೋನುಗಳು, ನಿರ್ಧಿಷ್ಟವಾದ ಚಯಾಪಚಯ ಕ್ರಿಯೆಯ ಉತ್ಪನ್ನಗಳು ಅಥವಾ ಪೋಷಕಾಂಶಗಳು, ರಾಸಾಯನಿಕ ಮತ್ತು ಭೌತಿಕ ಪ್ರಚೋದಕಗಳು ಕೆಲವೊಮ್ಮೆ ಅಗತ್ಯವಾಗುತ್ತದೆ. ಉದಾ: ಕೆಲವು ನಿರ್ಧಿಷ್ಟ ಕೋಶಗಳು ಆಮ್ಲಜನಕದ ಒತ್ತಡದ ಬದಲಾವಣೆಗೆ ಪ್ರತಿಕ್ರಿಯಿಸುತ್ತವೆ. ಇದು ಸಹಜ ಬೆಳವಣಿಗೆಯ ಭಾಗವಾಗಿರುತ್ತದೆ. ಅದೆಂದರೆ ಅಸ್ಥಿಮಜ್ಜೆ (ಕೋಂಡ್ರೋಸೈಟ್, ಅತ್ಯಂತ ಕಡಿಮೆ ಪ್ರಮಾಣದ ಆಮ್ಲಜನಕದ ಸ್ಥಿತಿಯಲ್ಲಿ ಹೊಂದಿಕೊಳ್ಳಬೇಕಾಗುತ್ತದೆ ಅಥವಾ ಅಸ್ಥಿಪಂಜರದ ಬೆಳವಣಿಗೆಯಲ್ಲಿನ ಹೈಪೊಕ್ಸಿಯಾವನ್ನು ಇದಕ್ಕೆ ಉದಾಹರಿಸಬಹುದಾಗಿದೆ. ಉಳಿದವುಗಳೆಂದರೆ ರಕ್ತ ನಾಳಗಳಲ್ಲಿ ಸಂಧಿಸುವ ಎಂಡೊಥೆಲಿಯಲ್ ಕೋಶಗಳು ಪ್ರವಹಿಸುವ ದ್ರವದಿಂದ ನೇರ ಒತ್ತಡಕ್ಕೆ ಪ್ರತಿಕ್ರಿಯಿಸುತ್ತವೆ.
ಜೈವಿಕ ಕ್ರಿಯಾಕಾರಿಗಳು
[ಬದಲಾಯಿಸಿ]ಹಲವು ಸಂದರ್ಭಗಳಲ್ಲಿ ಜೈವಿಕ ಕ್ರಿಯಾಕಾರಿಗಳು ನಿರ್ಧಿಷ್ಟ ಕೃಷಿ ವಾತಾವರಣವನ್ನು ಕಾಪಾಡಲು ಬಳಸುತ್ತಾರೆ. ಭಿನ್ನವಾದ ಉಪಕರಣಗಳಿವೆ. ನಿರ್ಧಿಷ್ಟ ಅನ್ವಯಿಸುವಿಕೆಗಳಿಗಾಗಿ ತಯಾರಿಸಿದ ಇವುಗಳನ್ನು ಹಲವು ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಇವನ್ನೂ ನೋಡಿ
[ಬದಲಾಯಿಸಿ]- ಜೈವಿಕ ಕೃತಕ ಅಂಗ
- ಜೀವ ವೈದ್ಯಕೀಯ ಇಂಜನಿಯರಿಂಗ್ ಬಹಳ ಹತ್ತಿರದ ಕ್ಷೇತ್ರವಾಗಿದೆ. (ಮತ್ತು ಹಲವುವೇಳೆ ಇದು ಪೇರೆಂಟಲ್ ಎಂದು ಭಾವಿಸಬಹುದಾಗಿದೆ)
- ಜೈವಿಕ ಇಂಜಿನಿಯರಿಂಗ್ ಒಂದು ವಿಶಾಲವಾದ ಕ್ಷೇತ್ರವಾಗಿದೆ. ಸಾಮಾನ್ಯವಾಗಿ ಇದು ಅಂಗಾಂಶ ಇಂಜಿನಿಯರಿಂಗ್ ಮತ್ತು ಅದರ ಸಂಬಂಧಿತ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ. (ಉದಾ: ಜೈವಿಕ ಮೂಲವಸ್ತುಗಳು).
- ಅಣುಗಳ ಸ್ವಯಂ-ರಚನೆ
- ಕಸಿ ಮಾಡುವುದು
ಅಂಗಾಂಶ ಇಂಜಿನಿಯರಿಂಗ್ ಸಂಶೋಧನೆಯನ್ನು ಬೆಂಬಲಿಸುವ ಸಂಸ್ಥೆಗಳು.
[ಬದಲಾಯಿಸಿ]- ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್
- ನ್ಯಾಶನಲ್ ಸೈನ್ಸ್ ಫೌಂಡೇಶನ್
- ನ್ಯಾಶನಲ್ ರಿಸರ್ಚ್ ಕೌನ್ಸಿಲ್ ಆಫ್ ಕೆನಡ
ಪರಾಮರ್ಶನಗಳು
[ಬದಲಾಯಿಸಿ]- ↑ ಪ್ರೊ. ರಾಬರ್ಟ್ ಲಾಂಗರ್
- ↑ ""ಜೋಸೆಫ್ ಪಿ.ವೇಕೆಂಟಿ, ಎಂ.ಡಿ"". Archived from the original on 2016-12-01. Retrieved 2010-07-13.
- ↑ Langer R, Vacanti JP (1993). "Tissue engineering". Science. 260 (5110): 920–6. PMID 8493529.
{{cite journal}}
: Unknown parameter|month=
ignored (help) - ↑ ೪.೦ ೪.೧ MacArthur BD, Oreffo RO (2005). "Bridging the gap". Nature. 433 (7021): 19. doi:10.1038/433019a10.1038/433019a. PMID 15635390.
{{cite journal}}
: Unknown parameter|month=
ignored (help) - ↑ "ಆಯ್‌೦ಥೊನಿ ಅಟಲ"
- ↑ ಡಾಕ್ಟರ್ಸ್ ಗ್ರೊ ಆರ್ಗಾನ್ಸ್ ಫ್ರಮ್‌ಪೇಶಂಟ್ಸ್ ಓನ್ ಸೆಲ್ಸ್ , ಸಿಎನ್‌ಎನ್ ,ಎಪ್ರಿಲ್ 3, 2006
- ↑ ಲ್ಯಾಬ್-ಗ್ರೊನ್ ಕಾರ್ಟಿಲೇಜ್ ಫಿಕ್ಸಸ್ ಡ್ಯಾಮೇಜಡ್ ನೀಸ್ - ಹೆಲ್ತ್ 05 ಜುಲೈ 2006 - ನ್ಯೂ ಸೈಂಟಿಸ್ಟ್ ಸ್ಪೇಸ್
- ↑ Macchiarini P, Jungebluth P, Go T; et al. (2008). "Clinical transplantation of a tissue-engineered airway". Lancet. 372 (9655): 2023–30. doi:10.1016/S0140-6736(08)61598-6. PMID 19022496.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ "Creating artificial bone marrow".
- ↑ "Artificial Penis Tissue Proves Promising in Lab Tests".
- ↑ "ಆರ್ಗಾನ್ ಪ್ರಿಂಟಿಂಗ್/ಇಂಪ್ಲಾಂಟ್ ಪ್ರೊಸೀಜರ್". Archived from the original on 2010-10-29. Retrieved 2010-07-13.
- ↑ ೧೨.೦ ೧೨.೧ Jennifer Elisseeff; Peter X. Ma (2005). Scaffolding In Tissue Engineering. Boca Raton: CRC. ISBN 1-57444-521-9.
{{cite book}}
: CS1 maint: multiple names: authors list (link) - ↑ Mironov V, Boland T, Trusk T, Forgacs G, Markwald RR (2003). "Organ printing: computer-aided jet-based 3D tissue engineering". Trends Biotechnol. 21 (4): 157–61. PMID 12679063.
{{cite journal}}
: Unknown parameter|month=
ignored (help)CS1 maint: multiple names: authors list (link)
-
- Davis ME, Motion JP, Narmoneva DA; et al. (2005). "Injectable self-assembling peptide nanofibers create intramyocardial microenvironments for endothelial cells". Circulation. 111 (4): 442–50. doi:10.1161/01.CIR.0000153847.47301.80. PMC 2754569. PMID 15687132.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - Ma, Peter X. (2004). "Scaffolds for tissue fabrication". Materials Today: 30–40.
{{cite journal}}
: Unknown parameter|month=
ignored (help) - Holmes TC, de Lacalle S, Su X, Liu G, Rich A, Zhang S (2000). "Extensive neurite outgrowth and active synapse formation on self-assembling peptide scaffolds". Proc. Natl. Acad. Sci. U.S.A. 97 (12): 6728–33. PMC 18719. PMID 10841570.
{{cite journal}}
: Unknown parameter|month=
ignored (help)CS1 maint: multiple names: authors list (link) - Semino CE, Kasahara J, Hayashi Y, Zhang S (2004). "Entrapment of migrating hippocampal neural cells in three-dimensional peptide nanofiber scaffold". Tissue Eng. 10 (3–4): 643–55. doi:10.1089/10763270432306199710.1089/107632704323061997. PMID 15165480.
{{cite journal}}
: CS1 maint: multiple names: authors list (link) - Mikos AG, Temenoff JS (2000). "Formation of highly porous biodegradable scaffolds for tissue engineering" (PDF). Electronic Journal of Biotechnology. 3: 114–9.
- Davis ME, Motion JP, Narmoneva DA; et al. (2005). "Injectable self-assembling peptide nanofibers create intramyocardial microenvironments for endothelial cells". Circulation. 111 (4): 442–50. doi:10.1161/01.CIR.0000153847.47301.80. PMC 2754569. PMID 15687132.
-
- National Science Foundation (U.S.A.) (2004). "The Emergence of Tissue Engineering as a Research Field".
{{cite journal}}
: Cite journal requires|journal=
(help) ಯುಆರ್ಎಲ್ನ್ನು ಎಪ್ರಿಲ್l 28, 2006 ರಂದು ನೋಡಲಾಗಿದೆ. - Nerem, R.M. (2000). Vacanti, Joseph; Lanza, R. P.; Langer, Robert S. (ed.). Principles of tissue engineering (2nd ed.). Boston: Academic Press. ISBN 0-12-436630-9.
{{cite book}}
: CS1 maint: multiple names: editors list (link)
- National Science Foundation (U.S.A.) (2004). "The Emergence of Tissue Engineering as a Research Field".
- ಡೆಡಿಕೇಟೆಡ್ ಇಶ್ಯೂ ಆಫ್ ಫಿಲಾಸಾಫಿಕಲ್ ಟ್ರಾನ್ಸಾಕ್ಷನ್ಸ್ ಬಿ ಆನ್ ಟಿಶ್ಯೂ ಇಂಜಿನಿಯರಿಂಗ್ ದ ಹಾರ್ಟ್. ಸಮ್ ಆರ್ಟಿಕಲ್ಸ್ ಆರ್ ಫ್ರೀಲೀ ಅವೈಲೆಬಲ್.
- ಜರ್ನಲ್ ಆಫ್ ಟಿಶ್ಯೂ ಇಂಜಿನಿಯರಿಂಗ್. ಆಯ್ನ್ ಒಪನ್ ಆಯ್ಕ್ಸೆಸ್ ಜರ್ನಲ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಸಂಸ್ಥೆಗಳು
- ಕ್ಲಿನಿಕಲ್ ಟಿಶ್ಯೂ ಇಂಜಿನಿಯರಿಂಗ್ ಸೆಂಟರ್ Archived 2006-10-02 ವೇಬ್ಯಾಕ್ ಮೆಷಿನ್ ನಲ್ಲಿ. ಸ್ಟೇಟ್ ಆಫ್ ಒಹಿಯೊ ಇನಿಶಿಯೇಟಿವ್ ಫಾರ್ ಟಿಶ್ಯೂ ಇಂಜಿನಿಯರಿಂಗ್( ನ್ಯಾಶನಲ್ ಸೆಂಟರ್ ಫಾರ್ರಿಜನರೇಟಿವ್ ಮೆಡಿಸಿನ್)
- ಪಿಟ್ಸ್ಬರ್ಗ್ ಟಿಶ್ಯೂ ಇಂಜಿನಿಯರಿಂಗ್ ಇನಿಶಿಯೇಟಿವ್ Archived 2014-12-18 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಶ್ಯೂ ಇಂಜಿನಿಯರಿಂಗ್ ಸೊಸೈಟಿ ಆಫ್ ಮಲೇಷಿಯಾ ಪೇಜಸ್ Archived 2006-08-23 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಶ್ಯೂ ಇಂಜಿನಿಯರಿಂಗ್ ಆಯ್‌೦ಡ್ ರಿಜನರೇಟಿವ್ ಮೆಡಿಸಿನ್ ಇಂಟರ್ನ್ಯಾಶನಲ್ ಸೊಸೈಟಿ Archived 2021-08-18 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಶ್ಯೂ ಆಯ್‌೦ಡ್ ಸೆಲ್ ಇಂಜಿನಿಯರಿಂಗ್ ಸೊಸೈಟಿ
ಡೈರೆಕ್ಟರಿಸ್ ಆಯ್‌೦ಡ್ ರೆಪೊಸಿಟರಿಸ್
- ಮಲೇಷಿಯಾ ಟಿಶ್ಯೂ ಇಂಜಿನಿಯರಿಂಗ್ ಲ್ಯಾಬೊರೇಟರಿ ಪೇಜಸ್ Archived 2007-02-11 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಶ್ಯೂ ಇಂಜಿನಿಯರಿಂಗ್ ಆರ್ಟಿಕಲ್ಸ್ ಆಯ್‌೦ಡ್ ಇನ್ಫಾರ್ಮೇಶನ್
- ಟಿಶ್ಯೂ ಇಂಜಿನಿಯರಿಂಗ್ ಪೆಜಸ್ Archived 2011-01-07 ವೇಬ್ಯಾಕ್ ಮೆಷಿನ್ ನಲ್ಲಿ.
ರಿಸರ್ಚ್ ಇನಿಶಿಯೇಟಿವ್‌ಸ್
- ಇನ್ಸ್ಟಿಟ್ಯೂಟ್ ಫಾರ್ ಕೆಮಿಕಲ್ ಪ್ರೊಸೆಸ್ ಆಯ್‌೦ಡ್ ಎನ್ವಿರಾನ್ಮೆಂಟಲ್ ಟೆಕ್ನಾಲಜಿ Archived 2006-10-10 ವೇಬ್ಯಾಕ್ ಮೆಷಿನ್ ನಲ್ಲಿ. ಟಿಶ್ಯೂ ಇಂಜನಿಯರ್ಡ್ (ಟಿಇ) ಕೊರ್ನಿಯಸ್
- ಆರ್ಗಾನ್ ಪ್ರಿಂಟಿಂಗ್ Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ. ಮಲ್ಟಿ-ಸೈಟ್ ಎನ್‌ಎಸ್‌ಎಫ್-ಫಂಡೆಡ್ ಇನ್ಶಿಯೇಟಿವ್
- ಟೀಮ್ ರಿಸರ್ಚ್ Archived 2008-11-21 ವೇಬ್ಯಾಕ್ ಮೆಷಿನ್ ನಲ್ಲಿ. ಟಿಶ್ಯೂ ಇಂಜಿನಿಯರಿಂಗ್ ಆಯ್‌೦ಡ್ ಮೆಡಿಕಲ್ ರಿಸರ್ಚ್ ಪ್ರೊಗ್ರಾಮ್ಸ್
- Pages using the JsonConfig extension
- CS1 errors: unsupported parameter
- CS1 errors: explicit use of et al.
- CS1 maint: multiple names: authors list
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- CS1 errors: missing periodical
- CS1 maint: multiple names: editors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ರಾಸಾಯನಿಕ ಇಂಜಿನಿಯರಿಂಗ್
- ಕೋಶ ಜೀವಶಾಸ್ತ್ರ
- ತದ್ರೂಪು
- ಜೈವಿಕ ಇಂಜಿನಿಯರಿಂಗ್
- ಅಂಗಾಂಶ ಇಂಜಿನಿಯರಿಂಗ್
- ವೈದ್ಯಕೀಯ ಸಂಶೋಧನೆ