ವಿಷಯಕ್ಕೆ ಹೋಗು

ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಸ್ವಾತಂತ್ರ್ಯ ಪಡೆದಾಗ ಸುಮರು ೫೫೨ದೇಶೀಯ ಸಂಸ್ಥಾನಗಳಿದ್ದವು.ಅವೆಲ್ಲವನ್ನು ರಾಜರು ಆಳುತ್ತಿದ್ದರು.೧೯೪೭ರ ಸ್ವಾತಂತ್ರ್ಯ ಕಾಯಿದೆಯಂತೆ ಅವು ಭಾರತ ಅಥವ ಪಾಕಿಸ್ತಾನಕ್ಕೆ ಯಾವುದಾದರು ಒಂದಕ್ಕೆ ಸೇರಿಕೊಳ್ಳುವ ಇಲ್ಲವೆ ಸ್ವತಂತ್ರ್ಯವಾಗಿ ಉಳಿಯುವ ಸ್ವಾತಂತ್ರ್ಯ ಹೊಂದಿದ್ದವು.ಹೀಗಾಗಿ ಅವು ಪ್ರತ್ಯೇಕತೆ ಪ್ರವೃತ್ತಿ ಬೆಳೆಸಿಕೊಂಡವು ಮತ್ತು ಅವು ಬದಲಾದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಸಾರಿಕೊಂಡವು.ಮುಸ್ಲಿಂ ಲೀಗ್ ನವರು ಈ ರೀತಿಯ ಬೆಳವಣಿಗೆಗೆ ಪ್ರಚೋದನೆ ಇಟ್ಟಿದ್ದರು.ದೇಶೀಯ ರಾಜ್ಯಗಳು ಪ್ರತ್ಯೇಕವಾಗಿ ಉಳಿದರಿಂದ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಒದಗುತ್ತಿತ್ತು.ಆದರೆ ರಾಷ್ಟ್ರ ನಾಯಕರು ಅದಕ್ಕೆ ಅವಕಾಶವನ್ನು ಕೊಡಲಿಲ್ಲ.ದೇಶೀಯ ರಾಜ್ಯಗಳು ಸ್ವತಂತ್ರವಾಗಿ ಉಳಿಯುವುದು ಲಕ್ಷಾಂತರ ಭಾರತೀಯರ ಮೇಲೆ ಯುದ್ಧ ಸಾರಿದಂತೆ ಎಂದು ಗಾಂಧೀಜಿ ಯವರು ಹೇಳಿದ್ದರು.ಅಂತಹ ರಾಜ್ಯಗಳಿಗೆ ಬೆಂಬಲಕೊಡುವ ಯಾವುದೇ ರಾಷ್ಟ್ರವನ್ನು ನಾವು ಮಿತ್ರದ್ರೋಹಿ ಎಂದು ಪರಿಗಣಿಸುವುದಾಗಿ ನೆಹರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಭಾರತದಲ್ಲಿ ಯಾವುದೇ ರಾಜ್ಯ ಸ್ವಾತಂತ್ರ್ಯ ಘೋಷಿಸಿಕೊಂಡು ಭಾರತದ ಚೌಕಟ್ಟಿನೊಳೊಗೆ ಹಾಗೂ ಹೊರಗೆ ಉಳಿಯಲು ಬಿಡುವುದಿಲ್ಲ ಎಂದು ಜೂನ್ ೧೫, ೧೯೪೭ ರಂದು ಸಬೆ ಸೇರಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಂದು ತೀರ್ಮಾನ ತೆಗೆದುಕೊಂಡಿತು.ದೇಶೀಯ ಸಂಸ್ಥಾನಗಳ ವಿಲೀನ ವಲ್ಲಭಭಾಯಿ ಪಟೇಲರು ೧೯೪೭ರ ಸೆಪ್ಟೆಂಬರ್ ೧೩ರಂದು ಎಲ್ಲಾ ದೇಶೀಯ ಸಂಸ್ಥಾನಗಳಿಗೆ ಸುತ್ತೋಲೆ ಕಳುಹಿಸಿ ಅವು ಭಾರತದ ಒಕ್ಕೂಟಕ್ಕೆ (Instrument of accession)ಕ್ಕೆ ಸಹಿ ಹಾಕಿ ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ವಿಷಯಗಳಲ್ಲಿ ಭಾರತ ಒಕ್ಕೊಟಕ್ಕೆ (Indian union) ಅಧೀನವಾಗುವಂತೆ ಒಪ್ಪಿದ್ದರು.ಜೊತೆಗೆ ಒಕ್ಕೂಟದಿಂದ ಹೊರಗುಳಿಯುವ ರಾಜ್ಯಗಳಿಗೆ ಅಪಾಯವನ್ನು ಎಚ್ಚರಿಸಿದರು.ಭಾರತದ ಒಕ್ಕೂಟಕ್ಕೆ ಸೇರುವ ರಾಜರಿಗೆ ರಾಜಧನ ಕೊಡಲಾಗುವುದೆಂದು ಘೊಷಣೆಮಾಡಿದ್ದರು.ಪಟೇಲರು ಕರೆದಂತೆ ಎಲ್ಲಾ ದೇಶೀಯ ಸಂಸ್ಥಾನಗಳು ಭಾರತದ ಒಕ್ಕೂಟ ವಿಲೀನ ಪತ್ರಕ್ಕೆ ಸಹಿ ಹಾಕಿ ಭಾರತ ಒಕ್ಕೂಟವನ್ನು ಸೇರಿಕೊಂಡವು.ಆದರೆ ಜುನಾಗಡ್, ಹೈದರಾಬಾದ್, ಕಾಶೀರ್ ಮತ್ತು ಬೇರೆ ಬೇರೆ ರಾಜ್ಯಗಳು ಭಾರತದ ಒಕ್ಕೊಟದಿಂದ ಹೊರಗುಳಿಯಲು ಬಯಸಿದವು.ಪಟೇಲರು ಅವನ್ನು ಒಕ್ಕೊಟಕ್ಕೆ ವಿಲೀನಗೊಳಿಸಲು ರಕ್ತ ಮತ್ತು ಉಕ್ಕು ನೀತಿಯನ್ನು ಅನುಸರಿಸಬೇಕಾಯಿತು.ಅವನ್ನು ವಿಲೀನಗೊಳಿಸಲು ಪಟೇಲರು ಮಾಡಿದ ಕಾರ್ಯವೈಖರಿ ಇಲ್ಲಿವೆ...

ಜುನಾಗಢ ಸೇರ್ಪಡೆ

[ಬದಲಾಯಿಸಿ]

ಗುಜರಾತ್ ನ ಪಶ್ಚಿಮಕ್ಕೆ ಬರುವ ಜುನಾಗಢವು ಸೌರಾಷ್ಟ್ರದ ಒಂದು ಪುಟ್ಟ ಸಂಸ್ಥಾನವಾಗಿತ್ತು.ಅಲ್ಲಿ ಶೇ.೮೦% ಜನರು ಹಿಂದೂಗಳಿದ್ದರು.ಆದರೆ ಅಲ್ಲಿನ ನವಾಬನಾದಂತಹ ಮಹಬತ್ ಖಾನ್ ಮುಸ್ಲಿಂನಾಗಿದ್ದನು.ಜುನಾಗಢವು ದಕ್ಷಿಣಕ್ಕೆ ಅರಬ್ಬಿ ಸಮುದ್ರ, ಮತ್ತು ಉಳಿದೆರಡೂ ಕಡೆಗಳಿಂದ ಭಾರತದ ಒಕ್ಕೂಟವನ್ನು ರಾಜ್ಯಗಳಿಂದ ಸುತ್ತುವರಿದಿದೆ.ಭೌಗೋಳಿಕವಾಗಿ ಅದು ಪಾಕಿಸ್ಥಾನಕ್ಕೆ ಯಾವ ಕಾರಣದಿಂದಲು ಸಾಮೀಪ್ಯ ಹೊಂದಿರಲಿಲ್ಲ.ಅಲ್ಲಿನ ಜನ ಭಾರತ ಒಕ್ಕೂಟಕ್ಕೆ ಸೇರಲು ಬಯಸಿದರು. ನವಾಬನು ಮಾತ್ರ ಪಾಕಿಸ್ತಾನಕ್ಕೆ ಸೇರಲು ಬಯಸಿದನು. ಮುಸ್ಲಿಂ ಲೀಗ್ ಮತ್ತು ಮಹಮದಾಲಿ ಜಿನ್ನಾರ ಕೈಗೊಂಬೆಯಾಗಿದ್ದನು ನವಾಬನು.ಪಾಕ್ ಪ್ರಧಾನಿಯ ಪ್ರಚೋದನೆಯಿಂದ ನವಾಬ ಹಿಂದೂಗಳನ್ನು ಹಿಂಸಿಸುತ್ತಾ ಅವರಿಗೆ ಅನೇಕ ರೀತಿಯ ಹಿಂಸೆಗಳನ್ನು ಮಾಡುವುದೆ ಅಲ್ಲದೆ ಅವರನ್ನು ರಾಜ್ಯ ಬಿಟ್ಟು ಹೋಗುವಂತೆ ಬಲಾತ್ಕರಿಸುತ್ತಿದ್ದನು.ಹೀಗಾಗಿ ಜನರು ಜುನಾಗಢ ದಿಂದ ೧ ಲಕ್ಷ ಮಂದಿ ಹೊರಹೋದರು.ಪಟೇಲರು ಸೈನ್ಯ ಪ್ರಯೋಗಿಸಲು ಸಿದ್ದರಾದರು.ಅದು ಪಾಕ್ ನೊಂದಿಗೆ ಯುದ್ಧಕ್ಕೆ ಕಾರಣವಾಗುವುದೆಂದು ಹೇಳಿದ ಬ್ಯಾಟನ್ ರು ಅದನ್ನು ವಿಶ್ವಸಂಸ್ಥೆ ಮುಂದಿಡಲು ಅನೇಕ ರೀತಿಯಲ್ಲಿ ಸಲಹೆಯನ್ನು ಸೂಚಿಸಿದರು.ಹಾಗಾಗಿದ್ದಲ್ಲಿ ಅದು ಕಾಶ್ಮಿರ್ ನಂತೆ ಬಗೆಹರಿಯದ ಸಮಸ್ಯೆಯಾಗುತ್ತಿತ್ತು.ಅದೇ ಕಾಲಕ್ಕೆ ನವಾಬನ ದುರಾಡಳಿತ ವಿರೋಧಿಸಿ ಹಿಂದೂಗಳು ದಂಗೆ ಎದ್ದರು.ನವಾಬ ತನ್ನ ಪುಟ್ಟ ಮಗ ಹಾಗೂ ಬೇಗಂಳನ್ನು ಬಿಟ್ಟು ಖಜಾನೆಯೊಂದಿಗೆ ಪಾಕಿಸ್ತಾನಕ್ಕೆ ಓಡಿಹೋದನು.ಜುನಾಗಢದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಲ್ಲಿನ ಮುಸ್ಲಿಂ ದಿವಾನ ಹಾಗೂ ಹಿಂದೂಗಳ ಕೋರಿಕೆಯಂತೆ ಅದನ್ನು ಪಟೇಲರು ೧೯೪೭ರ ಸೆಪ್ಟೆಂಬರ್ ನಲ್ಲಿ ಜುನಾಗಢಕ್ಕೆ ಕೇಂದ್ರ ಸೈನ್ಯ ನುಗ್ಗಿಸಿ ಅಲ್ಲಿನ ಆಡಳಿತವನ್ನು ಸಹ ಅವರೆ ವಹಿಸಿಕೊಂಡರು.ಸಮಲ್ ಗಾಂಧಿಯವರ ರಅಧ್ಯಕ್ಷತೆಯಲ್ಲಿ ಅಲ್ಲಿ ತಾತ್ಕಾಲಿಕ ಸರ್ಕಾರವು ಸಹ ಏರ್ಪಟ್ಟಿತು.೧೯೪೮ರ ಫೆಬ್ರವರಿ ೨೮ ರಂದು ಜನಮತಗಣನೆ ನಡೆಯಿತು. ಜುನಾಗಢದಲ್ಲಿ ಶೇಕಡಾ ೯೦ ರಷ್ಟು ಮಂದಿ ಜನ ಭಾರತದ ಒಕ್ಕೂಟಕ್ಕೆ ವಿಲೀನದ ಪರ ಮತಹಾಕಿದರು.ಜುನಾಗಢ ಜೂನ್೨೫, ೧೯೪೯ ರಂದು ಭಾರತ ಒಕ್ಕೂಟವನ್ನು ಸೇರಿಕೊಂಡಿತು.

ಕಾಶ್ಮೀರ್ ಸೇರ್ಪಡೆ

[ಬದಲಾಯಿಸಿ]

ಕಾಶ್ಮೀರ್ ಭಾರತದ ತುಟ್ಟ ತುದಿಯಲ್ಲಿರುವ ಅತ್ಯಂತ ಸುಂದರ ರಾಜ್ಯವಾಗಿದೆ.ನೆಹರು ತನ್ನ ಅತ್ಯಂತ ಪ್ರಸಿದ್ದ ಕೃತಿಯಾದ "ಭಾರತ ದರ್ಶನ" ಎಂಬ ಕೃತಿಯಲ್ಲಿ ಕಾಶ್ಮೀರವನ್ನು "ಭಾರತದ ಸುಂದರ ನವಿಲು" ಎಂದು ಕೂಡ ವಣಿ೯ಸಿದ್ದಾರೆ. ೮೪,೪೭೧ ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಕಾಶ್ಮೀರವು ಎರಡೂ ಕಡೆಗಳಿಂದ ಅಂದರೆ ಇಂಡೋ ಮತ್ತು ಪಾಕ್ ಗಡಿಗಳಿಂದ ಸುತ್ತುವರಿದಿದೆ. ಕಾಶ್ಮೀರದಲ್ಲಿ ೧೯೪೧ ರಲ್ಲಿ ಒಟ್ಟು ೪೦,೨೧,೬೧೫ ಜನಸಂಖ್ಯೆ ಇತ್ತು. ಅದರಲ್ಲಿ ೭೭.೧% ರಷ್ಟು ಮುಸ್ಲಿಂರು ಇದ್ದರು. ಮತ್ತು ೨೦.೧೨ % ರಷ್ಟು ಹಿಂದೂಗಳು ಸಹ ಇದ್ದರು. , ೨.೨೭ % ಸಿಖ್ ರು ಸಹ ಇದ್ದರು. ಅಲ್ಲಿ ಮುಸ್ಲಿಂರು ಬಹುಸಂಖ್ಯಾತರಾಗಿದ್ದರು. ಮತ್ತು ಅದೇ ಅಲ್ಲದೆ ಎಲ್ಲಾ ಚಟುವಟಿಕೆಗಳಲ್ಲಿ ಮುಂದೆ ಇದ್ದರು. ಅಲ್ಲಿ ರಾಜ ಹರಿಸಿಂಗ್ ನು ಹಿಂದೂವಾಗಿದ್ದನು. ಕಾಶ್ಮೀರವನ್ನು ಹರಿಸಿಂಗ್ ನು ಇಂಡಿಯಾ ಅಥವಾ ಪಾಕಿಸ್ತಾನ ಇವೆರಡರಲ್ಲಿ ಯಾವುದಕ್ಕೂ ಸೇರಿಸಲು ಕೂಡ ಇಚ್ಚಿಸಲಿಲಲ್ಲ.ಭಾರತ ವಿಭಜನೆಯಾದ ನಂತರ ಪಾಕಿಸ್ತಾನವು ಕಾಶ್ಮೀರವನ್ನು ತುಂಬ ಇಷ್ಟಪಟ್ಟಿತು. ಎಕೆಂದರೆ ಕಾಶ್ಮೀರವು ಅತ್ಯಂತ ಅಂದರೆ ನೋಡಲು ಸೌಂದಯ೯ಯುತವಾಗಿದೆ, ಮತ್ತು ಭೌಗೋಳಿಕ ಸಾಮಿಪ್ಯತೆಯನ್ನು ಹೊಂದಿದೆ. ಮತ್ತು ಬಹುಸಂಖ್ಯಾತ ಮುಸ್ಲಿಂರನ್ನು ಕೂಡ ಕಾಶ್ಮೀರವು ಹೊಂದಿದೆ. ಇವೆಲ್ಲವು ಸಹ ಪಾಕಿಸ್ತಾನ ಕಾಶ್ಮೀರವನ್ನು ಇಷ್ಟಪಡಲು ಕಾರಣಗಳಾಗಿದ್ದವು.ಕಾಶ್ಮೀರ್ ಎಲ್ಲಿ ಭಾರತವನ್ನು ಸೇರುತ್ತದೋ ಎಂದು ಭೀತಿಗೊಂಡ ಪಾಕಿಸ್ತಾನ ತನ್ನಲ್ಲಿ ಸೇರುವಂತೆ ಅಂದರೆ ಒಕ್ಕೂಟಕ್ಕೆ ಸೇರಲು ಕಾಶ್ಮೀರವನ್ನು ಒತ್ತಾಯಿಸಿತು. ೧೯೪೭ ರ ಅಕ್ಟೋಬರ್ ೨೩ ರಂದು ಪಾಕ್ ಸೇನಾನಿಯಾದ ಅಕ್ಬರ್ ಖಾನ್ ನಿಂದ ಪ್ರಚೋದಿತ ಸಾವಿರಾರು ಮುಸ್ಲಿಂ ಜನರು ಮತ್ತು ಗುಡ್ಡಗಾಡು ಪಠಾಣರು ಶ್ರೀನಗರಕ್ಕೆ ನುಗ್ಗಿ ಅಲ್ಲಿ ಅನೇಕ ರೀತಿಯ ಕೃತ್ಯಗಳನ್ನು ಮಾಡುವುದೆ ಅಲ್ಲದೆ ಅದರಲ್ಲಿ ತೊಡಗಿದರು. ಪಾಕಿಸ್ತಾನ ಅವರಿಗೆ ಅನೇಕ ರೀತಿಯ ಶಸ್ತ್ರಾಸ್ತ್ರಗಳನ್ನು ಸಹ ನೀಡಿತು. ಅಲ್ಲದೆ ಅವರಿಗೆ ಅಗತ್ಯವಾಗಿ ಬೇಕಾಗಿರುವ ವಸ್ತ್ತುಗಳನ್ನು ನಿಲ್ಲಿಸಿತು. ಆ ಸಮಯದಲ್ಲಿ ಪಾಕ್ ಧಾಳಿಕೋರರು ಶ್ರೀನಗರಕ್ಕೆ ಬೆಂಕಿ ಇಡುವ ಪ್ರಯತ್ನ ಮಾಡುವುದೇ ಅಲ್ಲದೇ ಅನೇಕ ರೀತಿಯ ಹಿಂಸೆಗಳನ್ನು ಮಾಡಿದರು. ಅಲ್ಲಿನ ಮುಸ್ಲಿಂರು ದಂಗೆಕೋರರನ್ನು ಸೇರಿಕೊಂಡರು. ಇದರಿಂದ ಭೀತಿಗೊಂಡಂತಹ ಮಹಾರಾಜರಾದ ಹರಿಸಿಂಗ್ ಭಾರತದ ನೆರವು ಕೋರಿದರು. ಹಾಗೂ ಅದೇ ಅಲ್ಲದೇ ಸೇಪ೯ಡೆ ಒಪ್ಪಂದಕ್ಕೆ ಸಹಿಯು ಸಹ ಹಾಕಿದರು. ಭಾರತ ಸಂಘವನ್ನು ಸೇರಿಕೊಂಡರು (೨೬-೧೦-೧೯೪೭). ಆಗಿನ ಷೇಕ್ ಮಹಮದ್ ಅಬ್ದುಲ್ಲಾ ರವರು ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಸಭೆಯ ನಾಯಕರಾಗಿದ್ದರು.ಷೇಕ್ ಮಹಮದ್ ಅದ್ಬುಲ್ಲಾ ರವರು ಮಹಾರಾಜರ ಕ್ರಮವನ್ನು ಅಂಗೀಕರಿಸಿದರು.(χಉಲ್ಲಂಗಿಸಿದರುχ).ಇದಕ್ಕೆ ಕಾರಣ ಎನೆಂದರೆ ಪಾಕ್ ಆಕ್ರಮಣದಿಂದ ಕಾಶ್ಮೀರದಲ್ಲಿದ್ದ ಹಿಂದೂ ಕಲೆ ಮತ್ತು ಸಂಸ್ಕೃತಿಗೂ ಮತ್ತು ಷಿಯಾ ಮುಸ್ಲಿಂರಿಗೂ ಮತ್ತು ಉದು೯ ಭಾಷೆಗೂ ಅದೇ ಅಲ್ಲದೆ ಅನೇಕ ರೀತಿಯ ಭಾಷೆಗೂ ಧಕ್ಕೆ ಒದಗಿ ಬಂದಿತು. ಆಗ ಪಟೇಲರು ತಕ್ಷಣವೇ ಭಾರತದ ಸೇನೆಯನ್ನು ೧೦೦ ವಿಮಾನಗಳಲ್ಲಿ ಕಾಶ್ಮೀರಕ್ಕೆ ನುಗ್ಗಿಸಿ (೨೭-೧೦-೧೯೪೭)ಅಲ್ಲಿದ್ದ ಎಲ್ಲಾ ಪಾಕಿಸ್ತಾನದ ಆಕ್ರಮಣಕಾರರನ್ನು ಕಾಶ್ಮೀರದಿಂದ ಹೊರಹಾಕಿದರು ಮತ್ತು ಅದೇ ಅಲ್ಲದೇ ಭಾರತದಿಂದ ಹೊರಹಾಕಿದರು. ನಂತರ ಅವರು ಕಾಶ್ಮೀರದ ತೆರವು ಕಾಯ೯ದಲ್ಲಿ ನಿರತರಾದರು. ಅದರಲ್ಲಿ ೯೦,೦೦೦ ಜನ ಅದರಲ್ಲಿ ಪಾಲ್ಗೊಂಡಿದ್ದರು.ಇದರ ನಾಯಕತ್ವವನ್ನು ಭಾರತ ಸೈನ್ಯದ ಜನರಲ್ ಕೆ.ಎಸ್. ತಿಮ್ಮಯ್ಯ ನವರು ಅದರ ಸಂಪೂಣ೯ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದರು. ಪಾಕಿಸ್ತಾನ ಸಹಾನುಭೂತಿ ಇದ್ದ ಅಜಾದ್ ಕಾಶ್ಮೀರ್ ಸಕಾ೯ರವು ಹೊಸದಾಗಿ ರಚಿತವಾದ ಕಾಶ್ಮೀರ್ ಸಕಾ೯ರವನ್ನು ಸಹ ವಿರೋದಿಸಿದರು. ಅದೇ ಅಲ್ಲದೆ ಜನಮತಗಣನೆಗೆ ಇದು ಒತ್ತಾಯಿಸಿತು. ಪಾಕ್ ಸೈನಿಕರು ಕಾಶ್ಮೀರದಲ್ಲಿ ಉಳಿದಿದ್ದರಿಂದ ಜನಮತ ಗಣನೆ ಮಾಡಲು ತೊಂದರೆಯಾಯಿತು. ಮುಸ್ಲಿಮರು ಶೇ.೧೦೦ರಷ್ಟಿರವ, ಗುಡ್ಡಗಾಡು ಪ್ರದೇಶವಾದಸರಿಯಾದ ರಸ್ತೆಗಳಿಲ್ಲದ ಅತಿ ಛಳಿ ಪ್ರದೇಶವಾದ,ಕಾಶ್ಮೀರದ ಉತ್ತರಭಾಗ, ಈಗ ಆಜಾದ್ ಕಾಶ್ಮೀರ್ ವೆಂದು ಕರೆಯಲ್ಡುವ ೧/೩ ಭಾಗವು ಪಾಕಿಸ್ತಾನದ ಕೈಯಲ್ಲೇ ಉಳಿದುಕೊಂಡಿತು ಡಿಸೆಂಬರ್ ೩೧, ೧೯೪೭ ರಂದು ಪ್ರಧಾನಿ ನೆಹರುರವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮುಂದಿಟ್ಟರು.೧೯೪೯ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನೇಮಿಸಿದ ಸರ್.ಓವನ್ ಡಿಕ್ಸನ್ ಮತ್ತು ಡಾ. ಫ್ರಾಂಕ್ ಡಿ. ಗ್ರಹಾಂ ನೇತೃತ್ವದ ಆಯೋಗವು ಕಾಶ್ಮೀರದಲ್ಲಿ ಕದನ ವಿರಾಮವನ್ನು ಘೋಷಿಸಿತು. ಫೆಬ್ರವರಿ ಯಲ್ಲಿ ಕಾಶ್ಮೀರವು ಭಾರತಕ್ಕೆ ಸೇಪ೯ಡೆಯಾಯಿತು.ಇದನ್ನು ವಿಧಾನಸಭೆಯು ಸ್ಥಿರೀಕರಿಸಿತು.೧೯೫೬ ರಲ್ಲಿ ಕಾಶ್ಮೀರವು ಸಹ ಭಾರತದ ಒಂದು ಅವಿಭಾಜ್ಯ ಭಾಗವೆಂದು ಸಾರಲಾಯಿತು.

ಹೈದರಾಬಾದ್ ಸೇರ್ಪಡೆ

[ಬದಲಾಯಿಸಿ]

ಭಾರತ ಸಂಸ್ಥಾನಗಳಲ್ಲೇ ಅತ್ಯಂತ ದೊಡ್ಡ ಸಂಸ್ಥಾನ ಹೈದರಾಬಾದ್.ಅದು ೧೭ ಮಿಲಿಯನ್ ಜನ ಸಂಖ್ಯೆ ಹಾಗೂ ೮೦೦೦೦ಚದರ ಮೈಲಿ ವಿಸ್ತೀರ್ಣ ವಾಗಿದೆ .೮೫% ಅಲ್ಲಿ ಹಿಂದೂಗಳಾಗಿದ್ದರು.ನಿಜಾಮನಾದ ಮೀರ್ ಓಸ್ಮಾನ್ ಆಲಿಖಾನ್ ಅವನು ಮುಸ್ಲಿಂ ನವಾಬನಾಗಿದ್ದನು.ಹೈದರಾಬದ್ ಭೌಗೋಳಿಕವಾಗಿ ಯಾವ ಕಾರಣಕ್ಕೂ ಪ್ರತ್ಯೇಕ ರಾಜ್ಯವಾಗಿ ಉಳಿಯುವಂತಿರಲಿಲ್ಲ. ಅದರ ಸುತ್ತಲೂ ಭಾರತ ಒಕ್ಕೂಟ ರಾಜ್ಯಗಳು ಸುತ್ತುವರಿದಿರುವ ಕಾರಣದಿಂದ. ಅದಕೆ ಒಕ್ಕೂಟಕ್ಕೆ ಸೇರಬೇಕೆಂಬುದು ಅಲ್ಲಿರುವ ಹಿಂದೂಗಳ ಅಪೇಕ್ಷೆಯಾಗಿತ್ತು. ಆ ಪಾಕಿಸ್ತಾನದ ನಿಜಾಮನು ಪ್ರಚೋದನೆಯಿಂದ ಒಕ್ಕೂಟಕ್ಕೆ ಸೇರದೆ ಸ್ವತಂತ್ರವಾಗಿ ಉಳಿಯಲು ಬಯಸಿದನು.ಆದರೆ ಆಡಳಿತ ಹುದ್ದೆಗಳಲ್ಲಿ ಮುಸ್ಲಿಂ ಜನರೇ ಮೇಲುಗೈ ಸಾಧಿಸಿದ್ದರು. ನಿಜಾಮ 'ತಟಸ್ಥ ನಿಲುಗಡೆ ಒಪ್ಪಂದ ಕ್ಕೆ ಸಹಿ ಹಾಕಿದ್ದು೧೯೪೭ರ ನವೆಂಬರ್ ೨೯ರಂದು, ನಂತರ ವಿಲೀನಕ್ಕೆ ಹಿಂದೇಟು ಹಾಕಿದನು. ಇದೇ ಕಾಲಕ್ಕೆ ಮತಾಂಧನ ಇಸ್ಲಾಂ ಸಂಘಟನೆ ಪ್ರಭಾವಕ್ಕೆ ಒಳಗಾಗಿ ಬಂಡಾಯವೆದ್ದ ಜನರನ್ನು ಅಡಗಿಸುತ್ತಿದ್ದವನು ನಿಜಾಮ ಮಜ್ಲಿಸ್ ಇತ್ತೆಹಾದ್-ಉಲ್- ಮೂಸ್ಲಿಮನ್.ನಿಜಾಮನು ಕಟ್ಟಾ ಮುಸ್ಲಿಂ ಮತಾಂಧ ಉಗ್ರಗಾಮಿಗಳ ಬೆಂಬಲದಿಂದ ಹಿಂದೂಗಳ ಮೇಲೆ ಕೊಲೆ,ದೌರ್ಜನ್ಯ ಎಲ್ಲಾತರದ ಹಿಂಸೆ ಕೊಡುತ್ತಿದನು ಮತ್ತು ೨೦,೦೦೦ ಸತ್ಯಾಗ್ರಹಿಗಳನ್ನು ಜೈಲಿಗೆ ಹಾಕಿದನು. ಅಲ್ಲಿಯ ರಜಾಕಾರರ ಮುಖಂಡನಾಗಿ ಖಾಸಿಂ ರಜ್ವಿಯನು ನೀರ್ನಯ ಮಾಡಿದರು, ಮತ್ತು ಅವನಿಗೆ ಮುಸ್ಲಿಂ ಲೀಗ್ ಮತ್ತು ನಿಜಾಮನ ಪ್ರಚೋದನೆ ಇತ್ತು.ಮತ್ತೆ ಖಾಸಿಂ ರಜ್ವಿ ಹಿಂದಾಗಳ ಮೇಲೆ ಧರ್ಮಯುದ್ದ ಸಾರಿದನು. ನಿಜಾಮನು ಹಿಂದೂಗಳ ಮೇಲೆ ಎಸಗಿದ ಕೊಲೆ, ಮಾನಭಂಗ, ಲೂಟಿ,ಹಿಂಸಾಚಾರಗಳೂ ಮುಗಿಲು ಮುಟ್ಟಿದವು. ರಜ್ವಿ ನಾಯಕತ್ವದಲ್ಲಿ ಅರೆ ಮಿಲಿತರಿ ಪಡೆ ಕಟ್ಟಿದನು.ನಿಜಾಮನು ರಜ್ವಿಯ ಪ್ರಭಾವದಲ್ಲಿದ್ದನು. ಹೈದರಾಬಾದ್ ಮತ್ತು ಭಾರತ ಸರ್ಕಾರದ ನಡುವೆ ಆದ ಮಾತುಕತೆಗಳು ವಿಫಲವಾದವು ಅದು ೧೯೪೮ರ ಜನವರಿಯಲ್ಲಿ ನಡೆಯಿತ್ತು .ಕೊನೆಗೆ ಗೌರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ನಿಜಾಮನು ಡ್ರಾಫ್ಟ್ ಅಗ್ರಿಮೆಂಟನ್ನು ಒಪ್ಪಿ ವಿಲೀನಕ್ಕೆ ಒಪ್ಪುವಂತೆ ಕೇಳಿ ವಿಫಲನಾದದು ಜೂನ್ ೧೮ ರಂದು.ಹೋರ ದೇಶದಿಂದ ನಿಜಾಮನು ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ಯುದ್ಧ ಸಿದ್ಧತೆ ನಡೆಸಿದ.ಅದಿಲ್ಲದೆ ಭಾರತದ ಒತ್ತಾಯದ ವಿರುದ್ಧದಿಂದ ವಿಶ್ವಸಂಸ್ಥೆಗೆ ದೂರು ನೀಡಿದನು.ಅಲ್ಲಿಯ ಹೈದರಾಬಾದ್ ರಜಾಕಾರರ ಹಿಂಸೆಯಿಂದ ಶಾಂತಿ ಮತ್ತು ಭದ್ರತೆಯನ್ನು ಹಾಳು ಮಾಡಿದವು.ಅದನು ಸಹಿಸಲಾರದೆ ಸಾವಿರಾರು ಜನ ಅಲ್ಲಿಂದ ನೆರೆಯ ಪ್ರಂತ್ಯಗಳಿಗೆ ವಲಸೆ ಹೊರಟರು.ಗಡಿಯಲ್ಲಿ ತಿವ್ರಕಶ್ಟದ ಪರಿಸ್ಥಿತಿ ಏರ್ಪಟ್ಟಿದ್ದು ಅದು ನೆರೆಹೊರೆಯ ರಾಜ್ಯಗಳಿಗೂ ಹಬ್ಬುವ ಭೀತಿ ಒದಗಿತು.ಸೆಪ್ಟೆಂಬರ್ ೧೩,೧೯೪೮ರಂದು ಸರ್ದಾರ್ ವಲ್ಲಭಬಾಯಿ ಪಟೇಲರು ತಡಮಾಡದೆ ಮೇಜರ್ ಜನರಲ್ ಚೌಧರಿ ನೇತೃತ್ವದಲ್ಲಿ ಭಾರತದ ಸೈನ್ಯವನ್ನು ಹೈದರಾಬಾದಿಗೆ ನುಗ್ಗಿಸಿದರು.ಮತ್ತು 'ಆಪರೇಷನ್ ಪೋಲೊ' ಎಂದು ಹೇಸರಿಟರು.ಅದು ೧೦೮ ಗಂಟೆಗಳ ಕಾಲದ ಪೊಲೀಸ್ ಕ್ರಮ ಕೈಗೊಂಡು ಹೈದರಾಬಾದನ್ನು ತನ್ನ ವಶಪಡಿಸಿಕೊಂಡಿತು.ಎಕಕೂಟ ಸೇನೆ ಖಾಸಿಂ ರಜ್ಜಿಯನ್ನು ಬಂಧಿಸಿತು.ನಿಜಾಮ ರಜಾಕಾರರ ಸಂಘಟನೆಯನ್ನು ಮುರಿಯಿತು.ಸೆಪ್ಟೆಂಬರ್ ೧೮ರಂದು ನಿಜಾಮನು ಶರಣಾದನು.ಅಲ್ಲಿಯ ಸೇನಾನಿ ಎಲ್.ಎ.ಡ್ರೋಸ್ ನು ನಿಜಾಮನ ಪರವಾಗಿ ಭಾರತದ ಸೈನ್ಯಕ್ಕೆ ಸೆರಿಕೋಂಡನು.ಮುಂದೆ ಹೈದರಾಬಾದಿನಲ್ಲಿ ಶಾಂತಿಪಾಲನೆ ಮಾಡಿದ ಜೆ.ಎನ್.ಚೌಧರಿ ಜವಾಬ್ದಾರಿಯನು ವಹಿಸಿಕೊಂಡನು.ಆ ಪೊಲೀಸ್ ಕಾರ್ಯಾಚರಣೆಯನ್ನು ಗಡಿ ರಾಜ್ಯಗಳಲ್ಲಿ ವಾಸಿಸುತ್ತಿದ್ದ ಜನತೆಗೆ ಭದ್ರತೆ ನೀಡಲು ಕೈಗೊಂಡ ಪೊಲೀಸ್ ಕ್ರಮವೇ ಹೊರತು ಯೂದ್ಧ ಕ್ರಮವಲ್ಲ ಎಂದು ಪಟೇಲರು ಸಮರ್ಥಿಸಿಕೊಂಡರು.ಹೈದರಾಬಾದ್ ಭಾರತದ ಒಕ್ಕೂಟಕ್ಕೆ ಸೇರಿದು ಜನವರಿ ೨೬, ೧೯೫೦ ರಂದು. ನಿಜಾಮನಿಗೆ ಅವನು ಮಾಡಿದತಪ್ಪಿಗೆ ೫೦ ಲಕ್ಷ ರೂ.ಮೂಂದೇ ವಿಶ್ರಾಂತಿ ವೇತನ ನೀಡಲಾಯಿತು.

ಭೂಪಾಲ್ ಯೋಜನೆ

[ಬದಲಾಯಿಸಿ]

ಭಾರತದ ಕೇಂದ್ರ ಭಾಗದಲ್ಲಿರುವ ಭೂಪಾಲ್ ಭಾರತದ ಸ್ವತಂತ್ರ್ಯವಾದ ನಂತರ ಪ್ರತ್ಯೇಕವಾಗಿ ಉಳಿಯಲು ಬಯಸಿತು.ಅಲ್ಲಿ ಅಧಿಕ ವಾದ ಸಂಖ್ಯೆಯಲ್ಲಿ ಹಿಂದೂಗಳಿದ್ದರು.ಚೇಂಬರ್ಸ ಆಫ್ ಪ್ರಿನ್ಸೆಸ್ ಕಮಿಟಿಯ ಮುಖ್ಯಸ್ಥನಾದ ಭೂಪಾಲ್ ನವಾಬನು ಸ್ವತಂತ್ರ ಸಂಸ್ಥಾನಗಳ ಒಕ್ಕೂಟವನ್ನು ಸ್ಥಾಪಿಸಲು 'ಭೂಪಾಲ್ ಯೋಜನೆ' ಯನ್ನು ರಚಿಸಿ ಸ್ವತಂತ್ರನಾಗಿ ಉಳಿಯಲು ಆ ನವಾಬನು ಬಯಸಿದನು.೩ನೇ ಬಣ ಹುಟ್ಟಿಹಾಕಲು ಇವರೊಡನೆ ಕೆಲವು ಮುಸ್ಲಿಂ ರಾಜರುಗಳಿದ್ದ ಸಂಸ್ಥಾನಗಳ ನವಾಬರು ಸೇರಿಕೊಂಡರು.ಆದರೆ ಉದಯಪುರದ ಮಹಾರಾಜ ಭೂಪಾಲ್ ಸಿಂಗ್ ನ ನವಾಬನ ಯೋಜನೆಯನ್ನು ವಿಫಲಗೊಳಿಸಿದನು.ನಂತರ ಭೂಪಾಲನ್ನು ಭಾರತ ಒಕ್ಕೂಟಕ್ಕೆ ಸೇರಲು ಸಹ ಕಾರಣನಾದನು.ಜೋದ್ಪುರದ ಮಹಾರಾಜ ಪಾಕಿಸ್ತಾನಕ್ಕೆ ಸೇರುವ ಆಸೆ ಹೊಂದಿದ್ದಾಗ ಅದನ್ನು ವಿ.ಪಿ.ಮೆನಾನ್ ಅವರ ಮನವೊಲಿಸಿ ಭಾರತ ಒಕ್ಕೂಟಕ್ಕೆ ಸೇರಿಸಿದರು.

ತಿರುವಾಂಕೂರು

[ಬದಲಾಯಿಸಿ]

ಸಿ.ಪಿ.ರಾಮಸ್ವಾಮಿ ಆಯ್ಯರ್ ಕೇರಳದ ತಿರುವಾಂಕೂರಿನ ದಿವಾನರಗಿದ್ದರು. ಅಲ್ಲಿನ ರಾಜನಿಗೆ ತಿರುವಾಂಕೂರನ್ನು ಸ್ವತಂತ್ರವಾಗಿ ಉಳಿಸಿಕೊಳ್ಳುವಂತೆ ಸಲಹೆ ನೀಡಿದನು ಮತ್ತು ಅದೇ ಅಲ್ಲದೆ ಅದನ್ನು ಜವಾಬ್ದ್ದಾರಿಯುತವಾಗಿ ನಡೆಸಲು ಸಹ ಸಲಹೆ ನೀಡಿದನು.ಆದರೆ ಈ ಕ್ರಮವನ್ನು ವಿರೋಧಿಸಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸ್ಸಿನ ಹೋರಟಗಾರರು ಚಳುವಳಿಯನ್ನು ಆರಂಭಿಸಿದರು.ಇದನ್ನು 'ಪುನ್ನಪ್ರವಯಲಾರ್ ಹೋರಾಟ' ಎಂದು ಸಹ ಕರೆಯಲಾಗಿದೆ. ಪ್ರತಿಭಟನಾಕಾರರು ರಾಮಸ್ವಾಮಿ ಅಯ್ಯರನ್ನು ಚೂರಿಯಿಂದ ಇರಿದು ಗಾಯಗೊಳಿಸಿದರು.ಅಯ್ಯ್ ರ್ ಮೂಗನ್ನು ಕಳೆದುಕೊಂಡರು.ಐಯ್ಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಲ್ಲಿನ ಮಹಾರಾಜರು ದಿವಾನರ ಅನುಪ ಸ್ಥಿತಿಯಲ್ಲಿ ತಿರುವಾಂಕೂರನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಒಪ್ಪಿಕೊಂಡರು.

ಫ್ರೆಂಚ್ ವಸಾಹತುಗಳ ವಿಮೋಚನೆ

[ಬದಲಾಯಿಸಿ]

ಭಾರತ ಸ್ವಾತಂತ್ರ್ಯ ಪಡೆದ ಮೇಲೂ ಸಹ ಪಾಂಡಿಚೇರಿ, ಚಂದ್ರನಾಗೂರು, ಮಾಹೆ, ಕಾರೈಕಲ್ ಮತ್ತು ಯಾನಂಗಳು ೧೯೫೪ ರವರೆಗೂ ಫ್ರೆಂಚರ ಹಿಡಿತದಲ್ಲೇ ಇವು ಸಹ ಇದ್ದವು.ನಂತರ ಫ್ರೆಂಚ್ ಸರ್ಕಾರದೊಡನೆ ಸಂಧಾನ ಮಾಡಲಾಯಿತು.ಹೀಗಾಗಿ ೧೯೫೪ರಲ್ಲಿ ಫ್ರೆಂಚರು ಅಲ್ಲಿನ ಜನರ ಅಪೇಕ್ಷೆಯಂತೆ ತಾವಾಗಿಯೇ ಅದನ್ನು ಭಾರತಕ್ಕೆ ಒಪ್ಪಿಸಿದರು.ಪಾಂಡಿಚೇರಿ ೧೯೬೨ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು.

ಗೋವಾ ವಿಮೋಚನೆ

[ಬದಲಾಯಿಸಿ]

ಗೋವಾ , ಡಿಯು ಮತ್ತು ಡಮನ್ ಇವೆಲ್ಲವು ಪೋಚು೯ಗೀಸ್ ರ ನೆಲೆಗಳಾಗಿದ್ದವು. ಸ್ವಾತಂತ್ಯ್ರಾ ನಂತರವೂ ಸಹ ಅವು ಪೋಚು೯ಗೀಸರ ವಶದಲ್ಲೇ ಮುಂದುವರಿದಿದ್ದವು. ಭಾರತದ ಐಕ್ಯತೆ ದೃಷ್ಟಿ ಯಿಂದ ಅವುಗಳು ವಿಮೋಚನೆ ಅಗತ್ಯವಾಗಿದ್ದವು. ಆಗಸ್ಟ್ ೧೫, ೧೯೫೫ ರಂದು ಗೋವಾದಲ್ಲಿ ಪರಕೀಯರ ಆಳ್ವಿಕೆಯನ್ನು ಕಿತ್ತೊಗೆಯಲು ಗೋವಾ ವಿಮೋಚನಾ ಹೋರಾಟವನ್ನು ಆರಂಭಿಸಿದ್ದೇ ಅಲ್ಲದೆ ಜನರು ಕ್ರಾಂತಿಗಿಳಿದರು. ಕಾಂಗ್ರೆಸ್ ನಾಯಕರಾದ ಕುನ್ಹ , ಕಾಕೋಡ್ಕರ್ ,ಸಮಾಜವಾದಿ ಡಾ. ರಾಮಮೋಹನ ಲೋಹಿಯಾರು ಮತ್ತು ಇವೆಲ್ಲರು ಕೂಡ ಗೋವಾ ವಿಮೋಚನೆ ಚಳುವಳಿಯ ನಾಯಕರಾಗಿದ್ದರು. ಆದರೆ ಈ ಚಳುವಳಿಯನ್ನು ಪೊಚು೯ಗೀಸ್ ಅಧಿಕಾರಿಗಳು ಕ್ರೂರವಾಗಿ ಹತ್ತಿಕ್ಕಿದರು.ಹಲವರನ್ನು ಕೊಲೆ ಮಾಡುವುದೆ ಅಲ್ಲದೆ ಅನೇಕ ರೀತಿಯ ದೌಜ೯ನ್ಯವನ್ನು ಸಹ ಅವರ ಮೇಲೆ ಮಾಡಲಾಯಿತು. ಗೋವಾ ಎನ್ ಎ ಟಿ ಒ ಸದಸ್ಯ ರಾಜ್ಯ ಎಂದು ಕೂಡ ಸಾರಿದರು ಮತ್ತು ಅದೆ ಅಲ್ಲದೆ ಚಳುವಳಿಗಾರರನ್ನು ಸಹ ಪೋಚು೯ಗೀಸ್ ಸಕಾ೯ರವು ಬಂಧಿಸಿತು. ಕೇಂದ್ರ ಸಕಾ೯ರ ಡಿಸೆಂಬರ್ ೨೦ ,೧೯೬೧ ರಂದು ಗೋವಾದಲ್ಲಿ ಪೊಲೀಸ್ ಕಾಯಾ೯ಚರಣೆ ನಡೆಸಿ ಪೋಚು೯ಗೀಸರ ಅಧಿಕಾರವನ್ನು ಅದು ಕೊನೆಗಾಣಿಸಿತು. ಭಾರತದ ಒಕ್ಕೂಟಕ್ಕೆ ಗೋವಾ , ಡಿಯು, ಡಮನ್ ಗಳು ಸಹ ಸೇಪ೯ಡೆಗೊಂಡವು. ಭಾರತದಲ್ಲಿ ಕಟ್ಟ ಕಡೆಯ ವಿದೇಶಿ ವಸಾಹತುಗಳು ಸಹ ಗೋವಾ ವಿಮೋಚನೆಯಿಂದ ಕಣ್ಮರೆಗೊಂಡಂತಾಯಿತು. ಮೊದಲು ಗೋವಾ ಕೇಂದ್ರಾಡಳಿತ ಪ್ರದೇಶವಾಗಿದ್ದು ಅನಂತರ ೧೯೮೭ ರಲ್ಲಿ ರಾಜ್ಯ ಸ್ಥಾನಮಾನ ಪಡೆಯಿತು.ಇತರೆ ಕೆಲವು ದೇಶೀಯ ಕೆಲವು ಸಂಸ್ಥಾನಗಳು ನೆರೆಹೊರೆಯ ರಾಜ್ಯಗಳಲ್ಲಿ ವಿಲೀನವಾದವು. ಎಲ್ಲ ದೇಶಗಳು ೧೯೪೮ ರಲ್ಲಿ ೩೦ಕ್ಕೂ ಅಧಿಕ ಸಂಸ್ಥಾನಗಳು ವಿಲೀನಗೊಂಡು ಸೌರಾಷ್ಟ್ರ ರಚಿಸಿದವು. ಪೂವ೯ ಪಂಜಾಬ್ ವಿಲೀನಗೊಂಡು ಪೆಪ್ಸ್ಸು ರಚಿಸಿದವು. ಸಿಮ್ಲಾ ಸಂಸ್ಥಾನಗಳು ಸಹ ಹಿಮಾಚಲ ಪ್ರದೇಶದಲ್ಲಿ ವಿಲೀನಗೊಂಡವು. ೨೨ ದೇಶೀಯ ಸಂಸ್ಥಾನಗಳು ೧೯೪೮-೫೦ ರಲ್ಲಿ ರಾಜಾಸ್ತಾನದಲ್ಲೂ ಹಾಗೂ ೧೯೫೬ ರಲ್ಲಿ ಅಜ್ಮೀರ್, ಅಬು ಪ್ರದೇಶಗಳು ರಾಜಸ್ತಾನಕ್ಕೆ ಸೇರಿಕೊಂಡವು. ಸುಮಾರು ೭೬ ದೇಶೀಯ ಸಂಸ್ಥಾನಗಳು ಮಧ್ಯಪ್ರದೇಶಕ್ಕೆ ಸೇರಿದವು.ದೇಶೀಯ ಸಂಸ್ಥಾನಗಳ ವಿಲೀನದಿಂದ ಭಾರತಕ್ಕೆ ೫ ಲಕ್ಷ ಚದರ ಮೈಲಿ ಪ್ರದೇಶ ಹಾಗೂ ೮೧.೫ ಮಿಲಿಯನ್ ಜನಸಂಖ್ಯೆಯ ಲಾಭವಾಯಿತು ಮತ್ತು ಅದೇ ಅಲ್ಲದೆ ಅನೇಕ ರೀತಿಯಲ್ಲಿ ಲಾಭಗೊಂಡಿತು. ಎ ವಗ೯ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲರೆಂದು , ಬಿ ವಗ೯ದ ರಾಜ್ಯಗಳ ಮುಖ್ಯಸ್ಥರನ್ನು ರಾಜಪ್ರಮುಖರೆಂದು ಕರೆಯಲಾಯಿತು. ಸಿ ರಾಜ್ಯಗಳನ್ನು ಚೀಫ್ ಕಮೀಷನರ್ ಆಡಳಿತ ನಡೆಸುತ್ತಿದ್ದರು. ಡಿ ವಗ೯ದ ರಾಜ್ಯಗಳನ್ನು ಚೀಫ್ ಕಮೀಷನರ್ ಮೂಲಕ ರಾಷ್ಟ್ರ ಪತಿ ಆಡಳಿತ ನಡೆಸುತ್ತಿದ್ದರು. ಈ ರಾಜ್ಯಗಳಲ್ಲಿ ಮಂತ್ರಿ ಮಂಡಲ ಸ್ಥಾಪಿಸಲು ಅವಕಾಶ ಇರಲಿಲ್ಲ.

ರಾಜ್ಯಗಳ ವಿಲೀನದಲ್ಲಿ ಸದಾರ್ ವಲ್ಲಭಭಾಯಿ ಪಟೇಲರ ಪಾತ್ರ

[ಬದಲಾಯಿಸಿ]

ಆರಂಭ ಜೀವನ: ಸರ್ದಾರ್ ವಲ್ಲಭಭಾಯಿ ಪಟೇಲರನ್ನು 'ಭಾರತದ ಏಕೀಕರಣದ ಶಿಲ್ಪಿ' ಎಂದು ಕರೆದರೆ ಅದು ತಪ್ಪಾಗಲಾರದು.ಅವರು ನವಭಾರತದ ನಿರ್ಮಾಪಕರಲ್ಲಿ ಒಬ್ಬರು.ಪಟೇಲರು ೧೮೭೫, ಅಕ್ಟೋಬರ್ ೧೩ ರಂದು ಗುಜರಾತಿನ ನಾಡಿಯಾಡ್ ಎಂಬ ರೈತ ಕುಟುಂಬದಲ್ಲಿ ಜನಿಸಿದರು.ಇವರ ತಂದೆ ಜವೇರಬಾಯಿ ಯವರು ೧೮೫೭ರ ಸಿಪಾಯಿದಂಗೆಯಲ್ಲಿ ಝಾನ್ಸಿರಾಣಿ ಲಕ್ಷ್ಮಿಬಾಯಿಯೊಂದಿಗೆ ಹೋರಾಡಿದರು.ಪಟೇಲರು ತಮ್ಮ ಮೆಟ್ರಿಕ್ಯುಲೇಶನ್ ಮುಗಿಸಿ ಆನಂತರ ಕಾನೂನು ಅಧ್ಯಯನಕ್ಕಾಗಿ ಲಂಡನ್ ಗೆ ತೆರಳಿದರು.ಕಾನೂನು ಪದವಿ ಪಡೆದ ಇವರು ನಂತರ ಬ್ಯಾರಿಸ್ಟರ್ ಆಗಿ ೧೯೧೩ ರಲ್ಲಿ ವಕೀಲನಾಗಿ ವೃತ್ತಿಯನ್ನು ಅಹಮದಾಬಾದಿನಲ್ಲಿ ಕೈಗೊಂಡರು.ಇವರು ತಿಲಕರ ಪ್ರಭಾವದಿಂದ ಸ್ವಾತಂತ್ರ್ಯ ಚಳುವಳಿಗೆ ದುಮುಕಿದರು.ಗಾಂಧೀಜಿಯವರು ಸರ್ದಾರರನ್ನು ಮೊದಲ ಬಾರಿ ಭೇಟಿಯಾಗಿದು ೧೯೬೧ರಲ್ಲಿ. ಸದಾರ್ ವಲ್ಲಭಭಾಯಿ ಪಟೇಲ ರವರು ಗಾಂಧಿಯ ಅಹಿಂಸಾ ತತ್ವವನ್ನು ಮೆಚ್ಚಿಕೊಂಡು ಅವರ ಹಿಂಬಾಲಿಸುತ್ತಿದರು.ಮತ್ತು ಗಾಂಧೀಜಿಯವರು ಆರಂಭಿಸಿದ ಎಲ್ಲಾ ಸತ್ಯಾಗ್ರಹಗಳಲ್ಲಿಯು ಸಹಾ ಪಾಲ್ಗೊಂಡರು. ಅಸಹಕಾರ, ಕಾನೂನುಭಂಗ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಭಾಗವಹಿಸಿದರು.ಉತ್ತರ ಪ್ರದೇಶದಲ್ಲಿ ಖೈರ ಜಿಲ್ಲೆ ಯಲ್ಲಿ ೧೯೧೭ ರಲ್ಲಿ ಪ್ರವಾಹ ಪೀಡಿತ ೪೨೫ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಕೈಗೊಂಡು ರೈತರ ಕಂದಾಯ ಮಾಫಿ ಮಾಡಿಸಿದರು.ಗಂಧೀಜಿಯೊಡನೆ ಸ್ವತಂತ್ರ ಹೊರಾಟದಲ್ಲಿ ಅಹಮದಾಬಾದ್ ಕಾರ್ಮಿಕರ ಮುಷ್ಕರದಲ್ಲಿ ಸಹಾ ಪಾಲ್ಗೊಂಡರು. ಮತ್ತೆ ಅವರು ೧೯೨೩ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿ ಸದಸ್ಯರಾದರು. ಅದಲ್ಲದೆ ೧೯೨೭ರಲ್ಲಿ ಗುಜರಾತಿನಲ್ಲಿ ಪ್ಲೇಗ್ ಮತ್ತು ಕ್ಷಮ ಬ್ಂದಾಗ ಪರಿಹಾರ ಕಾರ್ಯ ಕೈಗೊಂದರು. ಇದರಿಂದ ಎಲ್ಲರ ಹೃದಯ ಕರಗಿಸಿತು.ಅವರು ಹೀಗೆ ಲಾಭದಾಯಕ ವಕೀಲ ವೃತ್ತಿ ಬಿಟ್ಟು ತನ್ನನ್ನು ಜನಸೇವೆಯಲ್ಲಿ ತೊಡಗಿಸಿಕೊಂಡರು.ಆಡಳಿತ ಪುನರ್ ಸಂಘಟನೆಯಲ್ಲಿ ನೆಹರು ರವರಿಗೆ ನಿರಾಶ್ರಿತರ ಸಮಸ್ಯೆ ನಿವಾರಣೆ ಇದು ಸಹಕರಿಸಿತು. ಬಾರ್ದೋಲಿ ರೈತ ಸತ್ಯಾಗ್ರಹ: ೧೯೨೮ರಲ್ಲಿ ಬ್ರಿಟಿಷ್ ಸರ್ಕಾರ ಗುಜರಾತಿನ ಸೂರತ್ ಜಿಲ್ಲೆಯ ಬಾರ್ದೋಲಿಯ ರೈತರ ಮೇಲೆ ನ್ಯಾಯ ಬಾಹಿರವಾಗಿ ಕಂದಾಯ ೨೨% ರಷ್ಟ್ಟು ಹೆಚ್ಚಿಸಿತು. ಪಟೇಲರು ೮೦೦೦೦ ರೈತರನ್ನು ಸಂಘಟಿಸಿ ಬಾರ್ದೋಲಿ ಇದ್ದನ್ನು ವಿರೋದಿಸಿ ರೈತ ಸತ್ಯಾಗ್ರಹವನ್ನು ಆರಂಭಿಸಿದರು. ಇದನ್ನು ಕರ ನಿರಾಕರಣ ಚಳುವಳಿ ಎಂದೂ ಕರೆಯುವರು. ನಂತರ ಸರ್ಕಾರ ಮಣಿದು ೭% ಕ್ಕೆ ಕಂದಾಯವನ್ನು ಇಳಿಸಿತು. ಇದು ಪಟೇಲರಿಗೆ ರಾಷ್ಟ್ರನಾಯಕನ ಕೀರ್ತಿ ತಂದು ಕೊಟ್ಟಿತು. ನಂತರ ಸರ್ದಾರ್ ಎಂಬ ಬಿರುದನ್ನು ಸಹ ಗಾಂಧೀಜಿ ಯವರು ಪಟೇಲರಿಗೆ ನೀಡಿದರು. ೧೯೩೫ ರಲ್ಲಿ ಬಿಹಾರಿನಲ್ಲಿ ಭೂಕಂಪವಾದಾಗ ಮತ್ತು ೧೯೩೬ ರಲ್ಲಿ ಗುಜರಾತಿನಲ್ಲಿ ಪ್ರವಾಹ ಹಾವಳಿ ಆದಾಗ ಪರಿಹಾರ ಕಾರ್ಯದಲ್ಲಿ ಅವರನ್ನು ತೊಡಗಿಸಿದರು. ಕರಾಚಿಯಲ್ಲಿ ೧೯೩೧ ರಲ್ಲಿ ಕಾಂಗ್ರೇಸ್ ನ ಅಧ್ಯಕ್ಷರಾದರು.ಹೈದರಾಬಾದ್ ಕಾಶ್ಮೀರ , ಜುನಾಗಢಗಳಲ್ಲಿ ಪೊಲೀಸ್ ಕ್ರಮ ಕೈಗೊಡರು. ಅದನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಪಟೇಲರ ಗಣ್ಯ ಸಾಧನೆ , ೫೬೨ ದೇಶೀಯ ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತದ ಏಕೀಕರಣವನ್ನು ಸಾಧಿಸಿದರು.