ಪಿರಿಯಾಪಟ್ಟಣ
ಪಿರಿಯಾಪಟ್ಟಣ | |
---|---|
ಪಟ್ಟಣ | |
Coordinates: 12°20′11″N 76°04′45″E / 12.33649°N 76.07918°E | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಮೈಸೂರು ಜಿಲ್ಲೆ |
Government | |
• Type | ಪಟ್ಟಣ ಪಂಚಾಯಿತಿ |
• Body | ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿ |
Elevation | ೮೪೯ m (೨,೭೮೫ ft) |
Population (೨೦೧೧) | |
• Total | ೧೬ ೬೮೫ |
ಭಾಷೆ | |
• Official | ಕನ್ನಡ |
Time zone | UTC+5:30 (IST) |
PIN | 571107 |
Telephone code | 08223 |
Vehicle registration | KA-45 |
ಹತ್ತಿರದ ನಗರಗಳು | ಕುಶಾಲ ನಗರ, ಮೈಸೂರು |
ಪಿರಿಯಾಪಟ್ಟಣ ಇದು ಮೈಸೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಮೈಸೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ೨೭೬೯ ಅಡಿ ಎತ್ತರದಲ್ಲಿರುವ ಒಂದು ಪಟ್ಟಣ ಪಂಚಾಯತಿ ಆಗಿದೆ.
ಇಲ್ಲಿ ಪ್ರಸಿದ್ಡ ಮಸಣಿಕಮ್ಮ ದೇವಾಲಯವಿದೆ. ಪಿರಿಯಾಪಟ್ಟಣದ ಕಣಗಾಲು ಗ್ರಾಮದಲ್ಲಿ, ಕನ್ನಡದ ಸುಪ್ರಸಿದ್ಧ ನಿರ್ದೇಶಕರಾದ ಪುಟ್ಟಣ್ಣಕಣಗಾಲ ಜನಿಸಿದ್ದು. ಜನಪದ ಲಾವಣಿಗಲ್ಲಿ ಬರುವ ಪಿರಿಪಟ್ಟಣದ ಕಾಳಗ ಸುಪ್ರಸಿದ್ದವಾಗಿದ್ದು, ಕಂಸಾಳೆಯವರ ಪದಗಳಲ್ಲಿ ಹಾಡಲಾಗುತ್ತದೆ. ಚೆಂಗಾಳ್ವರ ದೊರೆ ವೀರರಾಜನಿಗೂ, ಮೈಸೂರಿನ ದಳವಾಯಿಗೂ ನಡೆದ ಯುದ್ಧ ಇದು. ಐತಿಹಾಸಿಕ ದಾಖಲೆಗಳ ಪ್ರಕಾರ, ಮೈಸೂರ ಒಡೆಯರ್ ರಣಧೀರ ಕಂಠೀರವ ರವರ ಕಾಲದಲ್ಲಿ, ಸ್ವಾಂತಂತ್ರ್ಯವಾಗಿದ್ದ ಪಿರಿಯಾಪಟ್ಟಣದ ಚೆಂಗಾಳ್ವರು, ಯುದ್ಧದಲ್ಲಿ ಸೋತು, ಮೈಸೂರಿನ ಸಾಮಂತರಾಗುತ್ತಾರೆ.
ಬೆಟ್ಟದ ಪುರ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಇದು ಪಕ್ಕದ ಕೊಡಗು ಜಿಲ್ಲೆಗೆ ತೀರ ಹತ್ತಿರ. ಈ ಊರಿನ ವಿಶೇಷತೆಯೆಂದರೆ, ’ಸಂಕೇತಿ ಬ್ರಾಹ್ಮಣರು,’ ಸುಮಾರು ೬೦೦ ವರ್ಷಗಳ ಹಿಂದೆ, ತಮಿಳುನಾಡಿನಿಂದ ಬಂದವರು ಮೊಟ್ಟಮೊದಲನೆಯದಾಗಿ ಇಲ್ಲಿಯೇ ನೆಲೆಸಿದರು. ಕನ್ನಡ ಭಾಷೆಯಲ್ಲಿ ಬೆಟ್ಟದ ಹತ್ತಿರವಿರುವ ನಗರವೆಂದರ್ಥ. ಊರಿನ ಪಕ್ಕದಲ್ಲಿರುವ ಬೆಟ್ಟದ ಮೇಲೆ, ಪುರಾತನ ’ಶ್ರೀ. ಸಿಡ್ಲು ಮಲ್ಲಿಕಾರ್ಜುನಸ್ವಾಮಿ,’ ದೇವಸ್ಥಾನವಿದೆ.
ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ]- ಪುಟ್ಟಣ್ಣ ಕಣಗಾಲ್ - ಚಿತ್ರ ನಿರ್ದೇಶಕ
- ಪಿ. ಕೆ. ರಾಜಶೇಖರ - ಜಾನಪದ ವಿದ್ವಾಂಸ
- ವಿಜಯಲಕ್ಷ್ಮಿ ಮನಾಪುರ - ಲೇಖಕಿ, ಜಾನಪದ ಸಂಶೋಧಕಿ
- ಕಾರ್ತಿಕ್ ಆವರ್ತಿ- ಯುವ ಚಿಂತಕರು, ವಿಡಂಬನೆಕಾರರು
ಉಲ್ಲೇಖಗಳು
[ಬದಲಾಯಿಸಿ]