ವಿಷಯಕ್ಕೆ ಹೋಗು

ವಿಜಯಲಕ್ಷ್ಮಿ ಮನಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಲಕ್ಷ್ಮಿ ಮನಾಪುರ
ಜನನ೧ ಜೂನ್, ೧೯೭೨
ಮಲ್ಲಿನಾಥಪುರ, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ, ಕರ್ನಾಟಕ
ವೃತ್ತಿ
 • ಲೇಖಕಿ
 • ಸಂಶೋಧಕಿ
 • ಗಾಯಕಿ
 • ಜಾನಪದ ತಜ್ಞೆ
ಭಾಷೆಕನ್ನಡ
ಪ್ರಕಾರ/ಶೈಲಿ
 • ಸಂಶೋಧನೆ
 • ಕವಿತೆ

ವಿಜಯಲಕ್ಷ್ಮಿ ಮನಾಪುರ (ಆಂಗ್ಲ:Vijayalakshmi Manapura) (ಹುಟ್ಟು: ೧೯೭೨), ಕನ್ನಡದ ಲೇಖಕಿ, ಜಾನಪದ ತಜ್ಞೆ, ಸಂಶೋಧಕಿ ಮತ್ತು ಕಲಾವಿದೆ. ಜಾನಪದ ಕುರಿತ ಸೈದ್ಧಾಂತಿಕ ವಿಶ್ಲೇಷಣೆ ಮತ್ತು ಪ್ರಾಯೋಗಿಕ ಸಂಶೋಧನೆಯಲ್ಲಿ ಪರಿಣತರಾದ ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕೊರೋನಾವೈರಸ್ ಹಾವಳಿಯ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿಯವರು ಬರೆದು, ಸಂಯೋಜಿಸಿ, ಹಾಡಿದ ’ಕೊರೊನ ಬಂದೈತೆ ಜೋಪಾನ’ ಎಂಬ ಜನಪದ ಶೈಲಿಯ ಜಾಗೃತಿಗೀತೆಯು ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿತ್ತು. [೧][೨][೩]

ಜೀವನ - ಶಿಕ್ಷಣ[ಬದಲಾಯಿಸಿ]

ಪಿರಿಯಾಪಟ್ಟಣದ ಮಲ್ಲಿನಾಥಪುರದಲ್ಲಿ ೧೯೭೨ರಲ್ಲಿ ಜನಿಸಿದ ವಿಜಯಲಕ್ಷ್ಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕಾಶವಾಣಿ ಉದ್ಯೋಗಿ ಪ್ರೇಮನಾಥ್ ವೆಲ್ಲಿಂಗ್ಟನ್ ಅವರ ಪತಿ. [೪]

ಕೃತಿಗಳು/ಲೇಖನಗಳು[ಬದಲಾಯಿಸಿ]

ಜಾನಪದ ಬೋಧನೆಯನ್ನೇ ವೃತ್ತಿಯಾಗಿಸಿಕೊಂಡಿರುವ ಡಾ. ವಿಜಯಲಕ್ಷ್ಮಿ ಅವರು ಹಲವಾರು ಕೃತಿಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. [೫][೬][೭][೮]

 • ಜಾನಪದ ಜೀರುಂಡೆ
 • ಭಾವ ಬಿಂದಿಗೆ (ಕವನಸಂಕಲನ)
 • ಕನ್ನಡ ಜನಪದ ಸಾಹಿತ್ಯ: ಬಂಧ - ಸಂಬಂಧ [೯][೧೦]
 • ಚೆಂಗಾಳ್ವ ಸಿರಿ
 • ಗೊಂಡರ ರಾಮಾಯಣ: ಪ್ರತಿಸಂಸ್ಕೃತಿಯ ನಿರ್ಮಾಣ [೧೧]
 • ಕನ್ನಡ ಜನಪದ ಸಾಹಿತ್ಯದಲ್ಲಿ ಸ್ತ್ರೀಸಂವೇದನೆ [೧೨]
 • ಮೈಸೂರು ಜಾನಪದ ದಸರ - ೨೦೧೭ [೧೩]

ಉಲ್ಲೇಖಗಳು[ಬದಲಾಯಿಸಿ]

 1. "Kannada folksong raises Covid-19 awareness". Times of India. 2 June 2020. Retrieved 18 April 2021.
 2. "Corona Bandaite Jopaana: Folk song on Coronavirus goes viral". Star of Mysore. 24 May 2020. Retrieved 18 April 2021.
 3. "Corona Bandaite Jopaana: Folk Song On Coronavirus Goes Viral". Bangalore First. 26 March 2020. Retrieved 18 April 2021.
 4. Ranjith KV (29 June 2020). "Family composes folk song to combat coronavirus". Deccan Herald. Retrieved 18 April 2021.
 5. ""ವಾಸ್ತವ ಸತ್ಯಗಳನ್ನು ನಂಬುವಂತ್ತಾದಾಗ ಮಾತ್ರ ಈ ನೆಲದ ಇತಿಹಾಸ ಬಯಲಾಗುತ್ತದೆ" : ಸಹ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಮನಾಪುರ". Just Kannada. 25 February 2021. Retrieved 18 April 2021.
 6. "ಜಾನಪದದಲ್ಲಿ ಸಾಂಕ್ರಾಮಿಕ ರೋಗಗಳು". Samajamukhi. 29 July 2020. Archived from the original on 18 ಏಪ್ರಿಲ್ 2021. Retrieved 18 April 2021.
 7. "ಗ್ರಾಮೀಣ ಸಂಸ್ಕೃತಿಯಿಂದ ಜಾನಪದ ಜೀವಂತ". Kannada Prabha. 8 July 2013. Retrieved 18 April 2021.
 8. "ಮೂಲ ಜನಪದ ಕಲಾವಿದರ ಸಮೀಕ್ಷೆಗೆ ಚಾಲನೆ: ವೆಬ್ಸೈಟ್, ಕೈಪಿಡಿಯಲ್ಲಿ ಕಲಾವಿದರ ಮಾಹಿತಿ". City Today. 22 December 2016. Archived from the original on 18 ಏಪ್ರಿಲ್ 2021. Retrieved 18 April 2021.
 9. 'ಕನ್ನಡ ಜನಪದ ಸಾಹಿತ್ಯ: ಬಂಧ - ಸಂಬಂಧ', ಉನ್ನತಿ ಪ್ರಕಾಶನ, ISBN:978-8192424156
 10. "ವಿದ್ವಾಂಸರು ಗೌಣ; ಸೊರಗಿದ ಜಾನಪದ". Prajavani. 28 April 2015. Retrieved 24 April 2021.
 11. 'ಅರುಹು-ಕುರುಹು', ಸೆಪ್ಟೆಂಬರ್ 2017, ISSN: 23475048
 12. ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆ, 2017, ISBN:978-9383411334
 13. 'ಮೈಸೂರು ಐಸಿರಿ':83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ