ಬಸನಗೌಡ ಆರ್. ಪಾಟೀಲ್
ಗೋಚರ
ಬಸನಗೌಡ ಪಾಟೀಲ ಯತ್ನಾಳ | |
---|---|
ವೈಯಕ್ತಿಕ ಮಾಹಿತಿ | |
ಜನನ | ವಿಜಯಪುರ, ಕರ್ನಾಟಕ | ೧೩ ಡಿಸೆಂಬರ್ ೧೯೬೩
ಸಂಗಾತಿ(ಗಳು) | ಶೈಲಜಾ |
ಮಕ್ಕಳು | 2 |
ಬಸನಗೌಡ ಪಾಟೀಲ(ಯತ್ನಾಳ)ರು ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಮತ್ತು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರು.
ಜನನ
[ಬದಲಾಯಿಸಿ]ಬಸನಗೌಡ ಪಾಟೀಲ(ಯತ್ನಾಳ)ರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಶಿಕ್ಷಣ
[ಬದಲಾಯಿಸಿ]ಶ್ರೀಯುತರು ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ. ಪದವಿ ಹೊಂದಿದ್ದಾರೆ.
ರಾಜಕೀಯ
[ಬದಲಾಯಿಸಿ]13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ನಿರ್ವಹಿಸಿದ ಖಾತೆಗಳು
[ಬದಲಾಯಿಸಿ]- 1994 ಮತ್ತು 2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
- 1999 ಮತ್ತು 2004ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ.
- ಸಂಸತ್ತಿನ ಕೈಗಾರಿಕಾ ಸಮಿತಿಯ ಸದಸ್ಯರು.
- ಖಾಸಗಿ ಸದಸ್ಯರ ಬಿಲ್ಲುಗಳು ಮತ್ತು ನಿರ್ಣಯಗಳ ಮೇಲೆ ಸಂಸತ್ತಿನ ಸಮಿತಿ ಸದಸ್ಯರು.
- ಸಂಸತ್ತಿನ ಸಲಹಾ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರು.
- 2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.
- 2003-2004 - ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವರು.
- ಕಾರ್ಮಿಕರ ಸಂಸತ್ತು ಸಮಿತಿಯ ಸದಸ್ಯರು.
- ಪಾರ್ಲಿಮೆಂಟ್ ಹೌಸ್ ಸಮಿತಿಯ ಸದಸ್ಯರು.
- ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಸದಸ್ಯರ ಸಂಸತ್ತು ಸಮಿತಿಯ ಸದಸ್ಯರು.
- 2015–2018 - ಕರ್ನಾಟಕ ವಿಧಾನ ಪರಿಷತ್ ಸದಸ್ಯರು.
ಉಲ್ಲೇಖಗಳು
[ಬದಲಾಯಿಸಿ]
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ವರ್ಗಗಳು:
- Pages using duplicate arguments in template calls
- 1963 births
- Living people
- 13th Lok Sabha members
- 14th Lok Sabha members
- Politicians from Bangalore
- Lok Sabha members from Karnataka
- Bharatiya Janata Party politicians from Karnataka
- Janata Dal (Secular) politicians
- Karnataka MLAs 2018–
- ರಾಜಕಾರಣಿಗಳು
- ಕರ್ನಾಟಕ ರಾಜಕಾರಣಿಗಳು