ಬಸನಗೌಡ ಆರ್. ಪಾಟೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಸನಗೌಡ ಪಾಟೀಲ ಯತ್ನಾಳ
ವೈಯಕ್ತಿಕ ಮಾಹಿತಿ
ಜನನ (1963-12-13) ೧೩ ಡಿಸೆಂಬರ್ ೧೯೬೩ (ವಯಸ್ಸು ೬೦)
ವಿಜಯಪುರ, ಕರ್ನಾಟಕ
ಸಂಗಾತಿ(ಗಳು) ಶೈಲಜಾ
ಮಕ್ಕಳು 2

ಬಸನಗೌಡ ಪಾಟೀಲ(ಯತ್ನಾಳ)ರು ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಮತ್ತು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರು.

ಜನನ[ಬದಲಾಯಿಸಿ]

ಬಸನಗೌಡ ಪಾಟೀಲ(ಯತ್ನಾಳ)ರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಶ್ರೀಯುತರು ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ. ಪದವಿ ಹೊಂದಿದ್ದಾರೆ.

ರಾಜಕೀಯ[ಬದಲಾಯಿಸಿ]

13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ನಿರ್ವಹಿಸಿದ ಖಾತೆಗಳು[ಬದಲಾಯಿಸಿ]

  • 1994 ಮತ್ತು 2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • 1999 ಮತ್ತು 2004ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ.
  • ಸಂಸತ್ತಿನ ಕೈಗಾರಿಕಾ ಸಮಿತಿಯ ಸದಸ್ಯರು.
  • ಖಾಸಗಿ ಸದಸ್ಯರ ಬಿಲ್ಲುಗಳು ಮತ್ತು ನಿರ್ಣಯಗಳ ಮೇಲೆ ಸಂಸತ್ತಿನ ಸಮಿತಿ ಸದಸ್ಯರು.
  • ಸಂಸತ್ತಿನ ಸಲಹಾ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರು.
  • 2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.
  • 2003-2004 - ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವರು.
  • ಕಾರ್ಮಿಕರ ಸಂಸತ್ತು ಸಮಿತಿಯ ಸದಸ್ಯರು.
  • ಪಾರ್ಲಿಮೆಂಟ್ ಹೌಸ್ ಸಮಿತಿಯ ಸದಸ್ಯರು.
  • ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಸದಸ್ಯರ ಸಂಸತ್ತು ಸಮಿತಿಯ ಸದಸ್ಯರು.
  • 2015–2018 - ಕರ್ನಾಟಕ ವಿಧಾನ ಪರಿಷತ್ ಸದಸ್ಯರು.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]