ಸದಸ್ಯ:Omshivaprakash
ನನ್ನ ಬಗ್ಗೆಹೆಮ್ಮೆಯ ಕನ್ನಡಿಗ, ಬೆಂಗಳೂರಿನವ, ವಿಕಿಪೀಡಿಯನ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆದಾರ, ಬೆಂಬಲಿಗ ಮತ್ತು ಪ್ರಚಾರಕ. ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಸೇರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ಸಧ್ಯದ ಗುರಿ. ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, ಕನ್ನಡ ವಿಶೇಷ ಆಸಕ್ತಿ ಬಳಗವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಟದೊಡನೆ ಈಗಾಗಲೇ ೧೦ಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದಿರುವ ನನಗೆ ಗ್ನು/ಲಿನಕ್ಸ್ ಬಗ್ಗೆ ಕನ್ನಡದಲ್ಲಿ ತಿಳಿಸುವುದೆಂದರೆ ಬಹಳ ಇಷ್ಟ. ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ ಲಿನಕ್ಸಾಯಣಕ್ಕೆ ಒಮ್ಮೆ ಭೇಟಿಕೊಡಿ. ಆಗಾಗ ಕನ್ನಡದಲ್ಲಿ ನಾನು ಬರೆಯುವ ವಿಜ್ಞಾನ, ತಂತ್ರಜ್ಞಾನ, ಕವನ ಇತ್ಯಾದಿಗಳನ್ನು ನನ್ಮನನಲ್ಲಿ ನೋಡಬಹುದು. ಫೋಟೋಗ್ರಫಿ, ಸೈಕ್ಲಿಂಗ್ ಮತ್ತು ಚಾರಣ ನನ್ನ ಇನ್ನಿತರ ಆಸಕ್ತಿಗಳು. ಸಹ-ಸಂಸ್ಥಾಪಕ ಸಂಚಯ ಸಂಚಿ ಫೌಂಡೇಷನ್.
|
ನನ್ನ ಕೆಲಸ
ನಾನು ೨೦೦೭ ರಿಂದ ವಿಕಿಪೀಡಿಯದಲ್ಲಿದ್ದೇನೆ. ಅದಕ್ಕಿಂತ ಮುಂಚೆ ಕೇವಲ ವಿಕಿಪೀಡಿಯವನ್ನು ಮಾಹಿತಿಗಾಗಿ ಬಳಸುತ್ತಿದ್ದರೂ, ೨೦೦೭ರ ನಂತರವೇ ಕನ್ನಡ ವಿಕಿಪೀಡಿಯ ಯೋಜನೆಗಳ ಸುತ್ತ ನನ್ನ ಕೈಲಾದ ಕಾಣಿಕೆಗಳನ್ನು ನೀಡುತ್ತಾ ಬಂದಿದ್ದೇನೆ. ಈಗ ಸಕ್ರಿಯ ಸ್ವಯಂಸೇವಕನಾಗಿ, ಸಂಪಾದಕನಾಗಿ, ಮೇಲ್ವಿಚಾರಕನಾಗಿಯೂ ಕನ್ನಡ ವಿಕಿಯ ಸುತ್ತ ಕೆಲಸ ನಿರ್ವಹಿಸುತ್ತೇನೆ. ಟೆಂಪ್ಲೇಟುಗಳು, ಮಾಹಿತಿ ಮತ್ತು ಯೋಜನೆಗಳ ನಿರ್ವಹಣೆ ವಿಕಿಯ ಸುತ್ತಲಿನ ನನ್ನ ಮುಖ್ಯ ಆಸಕ್ತಿಗಳು. ವಿಕಿಪೀಡಿಯ ಕಾರ್ಯಾಗಾರಗಳು, ಸಮ್ಮಿಲನಗಳು, ವಿಕಿ ಸಂಪಾದನೋತ್ಸವಗಳನ್ನು ಆಯೋಜಿಸಿ, ನಿರ್ವಹಿಸುತ್ತಾ ಬಂದಿದ್ದೇನೆ. ನನ್ನ ವಿಕಿಪೀಡಿಯ ಸಂಬಂಧಿತ ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ತರಗತಿಗಳ ಪಠ್ಯದಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಪ್ರಕಟಿಸಿದ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕದಲ್ಲಿಯೂ ವಿಕಿ ಇತಿಹಾಸ, ಕನ್ನಡ ವಿಕಿಯ ಸ್ಥಿತಿಗತಿ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಕುರಿತು ನಾನು ಬರೆದ ಲೇಖನಗಳನ್ನು ಪ್ರಕಟಿಸಲಾಗಿದೆ. ಉದ್ಯೋಗದಲ್ಲಿ ಬೆಂಗಳೂರಿನ ಸಣ್ಣದೊಂದು ಸಾಫ್ಟ್ವೇರ್ ಕಂಪೆನಿಯ ತಂತ್ರಜ್ಞಾನ ಮತ್ತು ಬಿಸಿನೆಸ್ ಡೆವೆಲಪ್ಮೆಂಟ್ ಮುಖ್ಯಸ್ಥನಾಗಿದ್ದೇನೆ.
|
ಸಂಪರ್ಕಿಸಿ
|
ಬಾಬೆಲ್ | ||||||||||||||
---|---|---|---|---|---|---|---|---|---|---|---|---|---|---|
| ||||||||||||||
ಬಳಕೆದಾರರ ಭಾಷೆಗಳನ್ನು ಹುಡುಕು |
ಕನ್ನಡ ವಿಕಿಪೀಡಿಯದ ಸುತ್ತ
[ಬದಲಾಯಿಸಿ]೨೦೧೫
[ಬದಲಾಯಿಸಿ]ವೈಯುಕ್ತಿಕ ಅನುದಾನ ಯೋಜನೆಗಳು
[ಬದಲಾಯಿಸಿ]ಕರ್ನಾಟಕದ ಮೊದಲ QRpedia ಯೋಜನೆಯ ಸಂಘಟನೆ ಬೀದರ್ನಲ್ಲಿ
[ಬದಲಾಯಿಸಿ]ಬೀದರ್ ಜಿಲ್ಲೆ ಮತ್ತು ಬೀದರ್ ಕೋಟೆಯ ಇತಿಹಾಸವನ್ನು ವಿಕಿಪೀಡಿಯ ಮೂಲಕ ಹಲವಾರು ಭಾಷೆಗಳಲ್ಲಿ ಓದಿ ತಿಳಿಯುವಂತೆ ಮಾಡುವ QRpedia ಯೋಜನೆಯನ್ನು ಸಂಘಟಿಸುತ್ತಿದ್ದೇನೆ. ಇದಕ್ಕೆ ಬೀದರ್ನ ಜನರೇ ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗುವಂತೆ ಮಾಡುವುದು, ಬೀದರ್ ಸರ್ಕಾರೀ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯಾಗಬಲ್ಲ ಈ ಯೋಜನೆಯನ್ನು ಅರಿತ ಪ್ರವಾಸೋದ್ಯಮ ಇಲಾಖೆ ಕೂಡ ಬೀದರ್ನಲ್ಲಿ ಬೆಂಬಲಿಸುತ್ತಿದೆ. ಬೀದರ್ ಜಿಲ್ಲಾ ಆಡಳಿತ, ರೋಟರಿ ಕ್ಲಬ್ ಬೀದರ್ ಈ ಯೋಜನೆಯ ಹಿಂದಿರುವ ಮುಖ್ಯ ಸಂಸ್ಥೆಗಳು. [೧][೨]
ವಿಕಿ ಕಾರ್ಯಾಗಾರಗಳಲ್ಲಿ ನಾನು
[ಬದಲಾಯಿಸಿ]-
ಸೆಂಟ್ರಲ್ ಲೈಬ್ರರಿ, ಬೆಂಗಳೂರು
-
ಉದಯಭಾನು ಕಲಾಸಂಘ, ಬೆಂಗಳೂರು , ಸೆಪ್ಟೆಂಬರ್ ೧೪, ೨೦೧೩
-
Wikipedians discussing with members of Bidar photography society
ವಿಕಿ ಸಂಪಾದನೆಗೆ ಸಹಾಯ
[ಬದಲಾಯಿಸಿ]- ನರಯಮ್ ಎಕ್ಸ್ಟೆನ್ಷನ್ ಕೊಂಡಿ
- ಕನ್ನಡ ಟ್ರಾನ್ಸ್ಲಿಟರೇಷನ್
- ಕನ್ನಡ ಇನ್ಸ್ಸ್ಕ್ರಿಪ್ಟ್
- Copy & Paste Excel-to-Wiki Converter
ನೆಚ್ಚಿನ ಲೇಖಕರು
[ಬದಲಾಯಿಸಿ]- ಕುವೆಂಪು
- ಪೂರ್ಣಚಂದ್ರ ತೇಜಸ್ವಿ
- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
- ಶಿವರಾಮ ಕಾರಂತ
- ವಸುಧೇಂದ್ರ
- ನಾಗೇಶ ಹೆಗಡೆ
- ವೈದೇಹಿ
- <ಇನ್ನೂ ಇದಕ್ಕೆ ಸೇರಿಸುವುದಿದೆ>
ಮತ್ತಷ್ಟು ಮುಂದೊಮ್ಮೆ. Testing PyWikipediaBot
ಉಲ್ಲೇಖಗಳು
[ಬದಲಾಯಿಸಿ]- ↑ [www.thehindu.com/news/national/karnataka/now-learn-about-bidar-in-french-arabic-and-sanskrit/article7077312.ece "Bidar QRpedia project - pre launch update"]. The Hindu. Retrieved 10 April 2015.
{{cite web}}
: Check|url=
value (help) - ↑ "ಇನ್ನು ಅಂಗೈಯಲ್ಲಿ ಬೀದರ್ ಇತಿಹಾಸ". Prajavani. Retrieved 10 April 2015.
- Pages with ignored display titles
- Pages using the JsonConfig extension
- User kn-N
- ಸದಸ್ಯರು en
- ಸದಸ್ಯರು en-3
- ಸದಸ್ಯರು hi
- ಸದಸ್ಯರು hi-2
- WikiProject Karnataka members
- MediaWiki translators
- ಒಪನ್ ಸ್ಟ್ರೀಟ್ ಮ್ಯಾಪ್ ಯೋಜನೆಯಲ್ಲಿ ತೊಡಗಿರುವ ಕನ್ನಡ ವಿಕಿಪೀಡಿಯನ್ನರು
- Toolserver translators
- ಬೆಂಗಳೂರಿನ ವಿಕಿಪೀಡಿಯಗರು
- ಸದಸ್ಯರು
- User hi
- User hi-2