ವಿಷಯಕ್ಕೆ ಹೋಗು

ಬಾಕ್ಸಿಂಗ್ ಡೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Boxing Day
ಆಚರಿಸಲಾಗುತ್ತದೆsome members and former members of the Commonwealth of Nations
ರೀತಿBank holiday / Public holiday
ದಿನಾಂಕ26 December - Bank or public holiday
(or 28 December - public holiday only)
Related toSt. Stephen's Day

ಬಾಕ್ಸಿಂಗ್ ಡೇ ಎನ್ನುವುದು ಒಂದು ಬ್ಯಾಂಕ್ ಅಥವಾ ಸಾರ್ವಜನಿಕ ರಜಾದಿನವಾಗಿದೆ.ಇದನ್ನು ಪ್ರತಿ ಡಿಸೆಂಬರ್ ೨೬ ರಂದು ಘೋಷಿಸಲಾಗುತ್ತದೆ.ಅಥವಾ ಕ್ರಿಸ್ಮಸ್ ಡೇ ಆಚರಣೆಯ ಮೊದಲ ಅಥವಾ ಎರಡನೆಯ ವಾರದ ದಿನವಾಗಿರುತ್ತದೆ.ಇದನ್ನು ಕೂಡಾ ಆಯಾ ರಾಷ್ಟ್ರೀಯ ಅಥವಾ ಪ್ರಾದೇಶಿಕ ಕಾನೂನುಗಳನ್ನು ಅವಲಂಬಿಸಿ ಘೋಷಿಸಲಾಗುತ್ತದೆ. ಇದನ್ನು ಆಸ್ಟ್ರೇಲಿಯಾ, ಕೆನಡಾ, ನ್ಯುಜಿಲೆಂಡ್, ದಿ ಯುನೈಟೆಡ್ ಕಿಂಗ್ಡಮ್ ಮತ್ತು ಇನ್ನುಳಿದ ಕೆಲವು ಕಾಮನ್ ವೆಲ್ತ್ ದೇಶಗಳು ಜಾರಿಗೊಳಿಸಿ ಆಚರಿಸುತ್ತವೆ. ಐರ್ಲೆಂಡ್ ನಲ್ಲಿ ಇದನ್ನು ಸೇಂಟ್ ಸ್ಟಿಫನ್ಸ ಡೇ ಎಂದು ಗುರ್ತಿಸಲಾಗುತ್ತದೆ.ಅಥವಾ ಡೇ ಆಫ್ ದಿ ರೆನ್ ಎಂದೂ ಕರೆಯಲಾಗುತ್ತದೆ.(ಐರಿಷ್:Lá an Dreoilín) ದಕ್ಷಿಣ ಆಫ್ರಿಕಾದಲ್ಲಿ ಬಾಕ್ಸಿಂಗ್ ಡೇಯನ್ನು, ಡೇ ಆಫ್ ಗುಡ್ ಉಯಿಲ್ ಎಂದು ೧೯೯೪ರಲ್ಲಿ ಮರುನಾಮಕರಣ ಮಾಡಲಾಗಿದೆ. ಐತಿಹಾಸಿಕವಾಗಿ ಇದನ್ನು ದಿ ಸೆಕೆಂಡ್ ಡೇ ಆಫ್ ಕ್ರಿಸ್ಮಸ್ ಎಂದು ಆಚರಿಸಲಾಗುತ್ತದೆ.(೨. Weihnachtsfeiertag ) ಆಚರಣೆಯನ್ನು ಹಳೆಯ ಪೂರ್ವ ಜರ್ಮನಿಯಲ್ಲಿ ಆಚರಿಸಲಾಗುತ್ತದೆ.

ಇಲ್ಲಿ ಅದೇ ತೆರನಾದ ಶಾಸನ-ದಿ ಬ್ಯಾಂಕ್ ಹಾಲಿಡೇಸ್ ಆಕ್ಟ್ ೧೮೭೧ -ಇದನ್ನು ಮೂಲದಲ್ಲಿ ಇಡೀ UKದಾದ್ಯಂತ ರಜಾದಿನ ಎಂದು ಪರಿಗಣನೆ ಮಾಡಲಾಗುತ್ತದೆ.ಹೀಗೆ ಕ್ರಿಸ್ಮಸ್ ದಿನದ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಇಂಗ್ಲೆಂಡ್, ಸ್ಕಾಟ್ ಲೆಂಡ್ ಮತ್ತು ವೇಲ್ಸ್, ಅದಲ್ಲದೇ ಅದನ್ನು ಐರ್ಲೆಂಡ್ ನಲ್ಲಿ ದಿ ಸೇಂಟ್ ಸ್ಟಿಫನ್ಸ್ ನ ಹಬ್ಬದ ದಿನ ಎಂದು ಆಚರಿಸಲಾಗುತ್ತದೆ.[] ಈ 'ರಜಾದಿನ ಡಿಸೆಂಬರ್ ೨೬ ರ ಪರ್ಯಾಯ ರಜಾ ದಿನ'ವನ್ನು ಉತ್ತರ ಐರ್ಲೆಂಡ್ ನಲ್ಲಿ ಮಾತ್ರ ಕೊಡಲು ಸಾಧ್ಯವಿದೆ.ಅಂದರೆ ಸೇಂಟ್.ಸ್ಟಿಫನ್ಸ್ ಡೇ ಗೆ ನೀಡುವ ರಜೆ ಇಲ್ಲಿ ಆಚರಣೆಯ ದಿನದ ಮುಂದಿನ ಸೋಮವಾರ ಅಂದರೆ ಬಾಕ್ಸಿಂಗ್ ಡೇ ಗೆ ಸಮನಾಗಿರುತ್ತದೆ.

ಆದರೆ ಕೆನಡಾದಲ್ಲಿ, ಬಾಕ್ಸಿಂಗ್ ಡೇಯನ್ನು ಕೆನಡಾ ಲೇಬರ್ ಕೋಡ್ ನ ಪಟ್ಟಿಯಲ್ಲಿ ಒಂದು ಐಚ್ಛಿಕ ರಜಾದಿನವನ್ನಾಗಿ ಮಾಡಲಾಗಿದೆ. ಕೇವಲ ಒಂಟಾರಿಯೊ ಪ್ರಾಂತದಲ್ಲಿ ಮಾತ್ರ ಇದನ್ನು ಶಾಸನವಿಹಿತ ರಜಾದಿನವನ್ನಾಗಿ ಘೋಷಿಸಲಾಗಿದೆ.ಎಲ್ಲಾ ಕೆಲಸಗಾರರಿಗೆ ಆ ದಿನ ರಜೆಯೊಂದಿಗೆ ಸಂಬಳವನ್ನೂ ನೀಡಲಾಗುತ್ತದೆ.[]

ವ್ಯುತ್ಪತ್ತಿ

[ಬದಲಾಯಿಸಿ]

ಈ ಪದ "ಬಾಕ್ಸಿಂಗ್ "ಎನ್ನುವುದಕ್ಕೆ ಸರಿಯಾದ ವ್ಯುತ್ಪತ್ತಿ ದೊರಕಿಲ್ಲ;ಹಾಗಾಗಿ ಅದು ಅಸ್ಪಷ್ಟವಾಗಿದೆಯಲ್ಲದೇ ಸ್ಪರ್ಧಾತ್ಮಕವಾಗಿ ಹಲವು ಸಿದ್ಧಾಂತಗಳಿವೆ,ಆದರೆ ಅದಾವದರಲ್ಲಿಯೂ ಯಾವುದೇ ನಿರ್ಣಾಯಕ ಆಧಾರಗಳಿಲ್ಲ.[] ಇಂತಹ ಒಂದು ಸಂಪ್ರದಾಯವು ಬಹುಕಾಲದಿಂದಲೂ ನಡೆದು ಬಂದಿದ್ದು, ಅಗತ್ಯವಿದ್ದವರಿಗೆ ಮತ್ತು ಸೇವೆಗಳಲ್ಲಿರುವವರಿಗೆ ಹಣ ಹಾಗು ಕೆಲವು ಇನ್ನಿತರ ಕಾಣಿಕೆಗಳನ್ನು ನೀಡಲಾಗುತ್ತದೆ. ಈ ಯುರೊಪಿಯನ್ ಸಂಪ್ರದಾಯವು ಮಧ್ಯಯುಗದಿಂದಲೂ ಆಚರಣೆಯಲ್ಲಿದೆ.ನಿಖರವಾದ ಕಾಲದ ಆಧಾರ ತಿಳಿದಿಲ್ಲವಾದರೂ ಕೆಲವರ ಪ್ರಕಾರ ಈ ರೂಢಿಯು ರೋಮನ್/ಆರಂಭಿಕ ಕ್ರಿಶ್ಚಿಯನ್ ಕಾಲದಲ್ಲಿಯೂ ಇತ್ತೆನ್ನಲಾಗುತ್ತದೆ;ಆಗ ಚರ್ಚ್ ಗಳ ಹೊರಭಾಗದಲ್ಲಿ ಲೋಹದ ಪೆಟ್ಟಿಗೆಗಳನ್ನು ಇಟ್ಟು ಫೀಸ್ಟ್ ಆಫ್ ಸೇಂಟ್ ಸ್ಟಿಫನ್ ಹೆಸರು ಲಗತ್ತಿಸಿದ ವಿಶೇಷ ಕಾಣಿಕೆಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತಿತ್ತು.[]

ವರ್ಷದುದ್ದಕ್ಕೂ ಉತ್ತಮ ಸೇವೆಗೈದ ಕುಶಲಕರ್ಮಿಗಳಿಗೆ UK ದಲ್ಲಿ ಕ್ರಿಸ್ಮಸ್ ನ ಮೊದಲ ವಾರದ ದಿನದಂದು ದೇವರಿಗೆ ಕೃತಜ್ಞತೆ ಸಲ್ಲಿಸಲು "ಕ್ರಿಸ್ಮಸ್ ಬಾಕ್ಸಸ್ "ಗಳಲ್ಲಿ ಹಣ ಮತ್ತು ಕಾಣಿಕೆಗಳನ್ನು ನೀಡಲಾಗುತ್ತದೆ.[] ಇದನ್ನು ಸ್ಯಾಮ್ಯುವಲ್ ಪೆಪೀಸ್ ದಿನಚರಿಯ ೧೯ ಡಿಸೆಂಬರ್ ೧೬೬೩ರಲ್ಲಿನ ದಾಖಲೆಯಲ್ಲಿ ನಮೂದಿಸಲಾಗಿದೆ.[] ಈ ರೂಢಿಯು ಹಳೆಯ ಇಂಗ್ಲೀಷ್ ಸಂಪ್ರದಾಯಕ್ಕೆ ಸೇರಿದ ಕೊಂಡಿಯಾಗಿದೆ:ಆಗಿನ ಸಿರಿವಂತ ಭೂಮಾಲಿಕರು ಕ್ರಿಸ್ಮಸ್ ಉತ್ತಮವಾಗಿ ಆಚರಿಸಲು ಈ ಕಾಣಿಕೆಗಳನ್ನು ರೂಢಿಗೆ ತಂದರು.ಅವರ ಸೇವಕರು ೨೬ನೆಯ ದಿನಾಂಕದಂದು ತಮ್ಮ ಕುಟುಂಬದವರನ್ನು ಭೇಟಿ ಮಾಡಲು ತಮ್ಮ ಊರುಗಳಿಗೆ ಹೋಗುವ ಅವಕಾಶವಿತ್ತು. ಉದ್ಯೋಗದಾತರು ಪ್ರತಿಯೊಬ್ಬ ಸೇವಕನಿಗೆ ಕಾಣಿಕೆಗಳು ಮತ್ತು ಹೆಚ್ಚುವರಿ ಹಣಯುಳ್ಳ ಪೆಟ್ಟಿಗೆಯೊಂದನ್ನು ನೀಡುತ್ತಿದ್ದರು.(ಕೆಲವು ವೇಳೆ ಉಳಿದ ಆಹಾರವನ್ನೂ ನೀಡುತ್ತಿದ್ದರು).

ಕಾರ್ಯಾವಧಿ

[ಬದಲಾಯಿಸಿ]

ಈ ಬಾಕ್ಸಿಂಗ್ ಡೇ ಎನ್ನುವ ರಜಾದಿನವು ಸಾಂಪ್ರದಾಯಿಕವಾಗಿ ಡಿಸೆಂಬರ್ ೨೬ ರಂದು ಕ್ರಿಸ್ಮಸ್ ದಿನದ ನಂತರದ ದಿನದಂದು ಬರುವುದಲ್ಲದೇ, ಅದನ್ನು ಮತಧರ್ಮಾತೀತವಾಗಿ ನೀಡಲಾಗುತ್ತದೆ.ಅಷ್ಟೇ ಅಲ್ಲದೇ ಸೇಂಟ್.ಸ್ಟಿಫನ್ಸ್ ಡೇ ಎಂಬ ಧಾರ್ಮಿಕ ರಜಾದಿನವೂ ಅಂದೇ ಬರುತ್ತದೆ.[][][] ಆದರೆ ಡಿಸೆಂಬರ್ ೨೬ ಭಾನುವಾರ ಬಂದರೆ,ಹಲವು ಪ್ರದೇಶಗಳಲ್ಲಿ ಬಾಕ್ಸಿಂಗ್ ಡೇಯನ್ನು ಡಿಸೆಂಬರ್ ೨೭ ರಂದು ನಿಗದಿಪಡಿಸುತ್ತಾರೆ. ಆದರೆ UKದಲ್ಲಿ ಬಾಕ್ಸಿಂಗ್ ಡೇ ದಿನವನ್ನು ಬ್ಯಾಂಕ್ ರಜಾದಿನವನ್ನಾಗಿ ನೀಡಲಾಗುತ್ತದೆ.ಈ ದಿನ ಶನಿವಾರ ಬಂದರೆ ಶಾಸನಬದ್ಧ ರಜಾದಿನಕ್ಕೆ ಪರ್ಯಾಯವಾಗಿ ಅದನ್ನು ಸೋಮವಾರದಂದು ನೀಡುತ್ತಾರೆ.ಒಂದು ವೇಳೆ ಬಾಕ್ಸಿಂಗ್ ಡೇ ಭಾನುವಾರ ಬಂದರೆ ಅಂದರೆ ಕ್ರಿಸ್ಮಸ್ ದಿನ ಅಂದು ಇನ್ನೊಂದು ಬ್ಯಾಂಕ್ ರಜಾದಿನವಿರುತ್ತದೆ;ಒಂದು ವೇಳೆ ಶನಿವಾರ ಬಂದರೆ-ಆಗ ಶಾಸನವಿಹಿತ ಬಾಕ್ಸಿಂಗ್ ಡೇ ರಜಾದಿನವನ್ನು ಮಂಗಳವಾರ ೨೮ ಡಿಸೆಂಬರ್ ರಂದು ನೀಡಲಾಗುತ್ತದೆ.[]

ಸ್ಕಾಟ್ ಲ್ಯಾಂಡ್ ನಲ್ಲಿ ಬಾಕ್ಸಿಂಗ್ ಡೇಯನ್ನು ಹೆಚ್ಚುವರಿ ಬ್ಯಾಂಕ್ ರಜಾದಿನವೆಂದು ೧೯೭೪ರಿಂದ [೧೦] ನೀಡಲಾಗುತ್ತಿದೆ.ಇದನ್ನು ರಾಯಲ್ ಪ್ರೊಕ್ಲೇಮೇಶನ್ ತನ್ನ ಬ್ಯಾಂಕಿಂಗ್ ಅಂಡ್ ಫೈನಾನ್ಸಿಯಲ್ ಡೀಲಿಂಗ್ಸ್ ಆಕ್ಟ್ ೧೯೭೧ರ ಅಡಿಯಲ್ಲಿ ನೀಡುತ್ತದೆ.[೧೧]

ಐರ್ಲೆಂಡ್‌ನಲ್ಲಿ-ಅದು ಯಾವಾಗ ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟೇನ್ ಅಂಡ್ ಐರ್ಲೆಂಡ್ ಅಡಿ ಇತ್ತೋ ಆಗಿನಿಂದ ಬ್ಯಾಂಕ್ ಹಾಲಿಡೇಸ್ ಆಕ್ಟ್ ೧೮೭೧ ರಲ್ಲಿ ಸೇಂಟ್.ಸ್ಟಿಫನ್ ಫೀಸ್ಟ್ ಡೇ ಎಂದು ಡಿಸೆಂಬರ್ ೨೬ ರಂದು ಸಾರ್ವಜನಿಕ ರಜಾದಿನವೆಂದು ಖಾಯಂ ನಿಯಮದಡಿ ನೀಡಲಾಗುತ್ತದೆ. ಆವಾಗಿನಿಂದ ಐರಿಶ್ ವಾರ್ ಆಫ್ ಇಂಡೆಪೆಂಡೆನ್ಸ್ ಹೆಸರಲ್ಲಿ ಈ "ಬಾಕ್ಸಿಂಗ್ ಡೇ"ರಜಾದಿನವನ್ನು ನಾರ್ದರ್ನ್ ಐರ್ಲೆಂಡ್ ನಲ್ಲಿ ಅಲ್ಲಿನ ಅಧಿಕಾರಿಗಳು ರಜಾದಿನವೆಂದು ಘೋಷಿಸಿದ್ದಾರೆ.ಇದು ಈಗಲೂ UK ದ ಒಂದು ಭಾಗವಾಗಿಯೇ ಉಳಿದುಕೊಂಡಿದೆ.ಇನ್ನುಳಿದ UK ಭಾಗದಲ್ಲಿ ಬದಲಾವಣೆಗೊಳಪಟ್ಟ ರಜಾದಿನವಾಗಿ ಉಳಿದುಕೊಂಡಿದೆ.

ಆಸ್ಟ್ರೇಲಿಯಾದ ಸೌತ್ ಆಸ್ಟ್ರೇಲಿಯಾ ರಾಜ್ಯದಲ್ಲಿ ಡಿಸೆಂಬರ್ ೨೬ ರನ್ನು ಸಾರ್ವಜನಿಕ ರಜಾದಿನವಾಗಿ ಇದನ್ನು ಪ್ರೊಕ್ಲೇಮೇಶನ್ ಡೇ ಎನ್ನಲಾಗುತ್ತದೆ.ಆದರೆ ಬಾಕ್ಸಿಂಗ್ ಡೇ ಸಾಮಾನ್ಯವಾಗಿ ಸಾರ್ವಜನಿಕ ರಜಾದಿನವಲ್ಲ.[೧೨]

ಕೆನಡಾದ ಪ್ರಾಂತಗಳಲ್ಲಿ ಬಾಕ್ಸಿಂಗ್ ಡೇಯನ್ನು ಶಾಸನವಿಹಿತ ರಜಾದಿನವೆಂದು ಘೋಷಿಸಲಾಗಿದೆ,ಇದನ್ನು ಯಾವಾಗಲೂ ಡಿಸೆಂಬರ್ ೨೬ ರಂದು ನೀಡಲಾಗುತ್ತದೆ.[೧೩] ಕೆನಡಾದ ಪ್ರಾಂತಗಳಲ್ಲಿ ಬಾಕ್ಸಿಂಗ್ ಡೇ ಶಾಸನಬದ್ಧ ರಜಾ ದಿನವಾಗಿದೆ.ಅದು ಒಂದು ವೇಳೆ ಶನಿವಾರ ಅಥವಾ ಭಾನುವಾರ ಬಂದರೆ ಅದಕ್ಕೆ ಪರ್ಯಾಯವಾಗಿ ಮುಂದೆ ಬರುವ ವಾರದ ದಿನದಲ್ಲಿ ನೀಡಲಾಗುತ್ತದೆ.[೧೩]

ಶಾಪಿಂಗ್

[ಬದಲಾಯಿಸಿ]
ಬಾಕ್ಸಿಂಗ್ ಡೇ ಕ್ರೌಡ್ಸ್ ಶಾಪಿಂಗ್ ಎಟ್ ದಿ ಟೊರಂಟೊ ಐಟಾನ್ ಸೆಂಟರ್ ಇನ್ ಕೆನಡಾ

ಬ್ರಿಟೇನ್,[೧೪] ಕೆನಡಾ,[೧೫] ನ್ಯುಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಕೆಲವು ರಾಜ್ಯಗಳಲ್ಲಿ [೧೬] ಬಾಕ್ಸಿಂಗ್ ಡೇ ದಿನವನ್ನು ಪ್ರಧಾನವಾಗಿ ಶಾಪಿಂಗ್ ಹಾಲಿಡೇ ಅಥವಾ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವ ದಿನವೆಂದು ಪರಿಗಣಿಸಲಾಗುತ್ತದೆ.ಹೆಚ್ಚಾಗಿ ಇದನ್ನು ದಿ ಡೇ ಆಫ್ಟರ್ ಥ್ಯಾಂಕ್ಸ್ ಗಿವಿಂಗ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ಎಂದು ಪರಿಗಣಿಸಲಾಗುತ್ತದೆ.ಯುನೈಟೆಡ್ ಸ್ಟೇಟ್ಸ್ ನ ಕೃತಜ್ಞತಾ ದಿನದ ನಂತರದ ದಿನವೆಂದು ಬಹುತೇಕರು ಪರಿಗಣಿಸುತ್ತಾರೆ. ಈ ಸಂದರ್ಭದಲ್ಲಿ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಕಾಣುತ್ತದೆ.ಅದಲ್ಲದೇ ಬೆಲೆಗಳಲ್ಲಿ ಇಳಿಮುಖ ಅಥವಾ ರಿಯಾಯ್ತಿ ಮಾರಾಟ ಸಾಮಾನ್ಯವಾಗಿರುತ್ತದೆ. ಬಹಳಷ್ಟು ವರ್ತಕರಿಗೆ,ಈ ಬಾಕ್ಸಿಂಗ್ ಡೇ ಆ ವರ್ಷದ ಅತ್ಯಧಿಕ ಆದಾಯ ತರುವ ದಿನವಾಗಿದೆ. ಒಂದು ಅಂದಾಜಿನಂತೆ UK ನಲ್ಲಿ ೨೦೦೯ ರ ಸುಮಾರಿಗೆ ಸುಮಾರು೧೨ ದಶಲಕ್ಷ ಗ್ರಾಹಕರು ಮಾರಾಟ ಮಳಿಗೆಗೆಳಿಗೆ ಭೇಟಿ ನೀಡಿದ್ದಾರೆ.(ಇದನ್ನು ೨೦೦೮ರ ಮಾರಾಟಕ್ಕೆ ಹೋಲಿಸಿದರೆ ಸುಮಾರು ೨೦%ರಷ್ಟು ಹೆಚ್ಚಳ ಕಂಡಿದೆ.ಅದಲ್ಲದೇ VAT ನ್ನು ೧ನೆಯ ಜನವರಿಯಿಂದ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಕೂಡ ಈ ಹೆಚ್ಚಳಕ್ಕೆ ಕಾರಣವಾಯಿತು.[೧೭]

ಹಲವಾರು ಸಣ್ಣ ವ್ಯಾಪಾರಿಗಳು ಅತ್ಯಂತ ಬೇಗ ತಮ್ಮ ಅಂಗಡಿಗಳನ್ನು ತೆಗೆಯುತ್ತಿದ್ದರು.(ಸಾಮಾನ್ಯವಾಗಿ ಬೆಳಗ್ಗೆ ೫ಕ್ಕೆ ಅಥವಾ ಅದಕ್ಕೂ ಮೊದಲು)ಅದಲ್ಲದೇ ಮನೆಬಾಗಿಲಿಗೆ ವಸ್ತುಗಳ ಪೂರೈಕೆ ಅವರ ಮತ್ತೊಂದು ಸೌಲಭ್ಯವಾಗಿತ್ತು.ಅದಲ್ಲದೇ ನಷ್ಟದ ವಹಿವಾಟುದಾರರು ಬಗೆಬಗೆಯ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ತಮ್ಮ ಅಂಗಡಿಗಳೆಡೆಗೆ ಸೆಳೆಯುತ್ತಿದ್ದರು. ಡಿಸೆಂಬರ್ ೨೬ ರಂದು ಬೆಳಗಿನ ಜಾವ ಅಂಗಡಿಗಳ ಮುಂದೆ ಉದ್ದದ ಗ್ರಾಹಕರ ಸಾಲು ಅತ್ಯಂತ ಸಾಮಾನ್ಯ ದೃಶ್ಯವಾಗಿರುತ್ತದೆ.ಅಂಗಡಿಗಳು ಪ್ರಾರಂಭವಾಗುವ ಮುಂಚೆಯೇ ಜನರು ಸಾಲುಗಟ್ಟಿ ನಿಲ್ಲುವುದು ಅಂದಿನ ವಿಶೇಷವಾಗಿದೆ.ವಿಶೇಷವಾಗಿ ಬಹುದೊಡ್ಡ-ಪೆಟ್ಟಿಗೆ ಮಳಿಗೆಗಳು ಗ್ರಾಹಕರ ಎಲೆಕ್ಟ್ರಾನಿಕ್ಸ್ ಸಣ್ಣ ವ್ಯಾಪಾರಿಗಳಿಗೆ ಇದು ಭರಾಟೆಯ ದಿನವಾಗಿರುತ್ತದೆ.[೧೫] ಹಲವು ಮಳಿಗೆಗಳು ಸೀಮಿತ ಪ್ರಮಾಣದ ಸಾಮಗ್ರಿಗಳನ್ನು ಒಳಗೊಂಡಿರುತ್ತವೆ,ಅಥವಾ ಅತ್ಯಧಿಕ ರಿಯಾಯ್ತಿ ಸಾಮಾನುಗಳ ಮಾರಾಟ ಹೊಂದಿರುವುದು ಸಾಮಾನ್ಯವಾಗಿದೆ.[೧೮] ಅತ್ಯಂತ ಜನ-ನಿಬಿಡ-ತಾಣಗಳಲ್ಲಿ ವ್ಯಾಪಾರದ ಅನುಭವ ಪಡೆಯಲು ಹಿಂದೇಟು ಹಾಕುವವರು ಮನೆಯಲ್ಲೇ ಉಳಿದು ಈ ದಟ್ಟಣೆಯಿಂದ ಪಾರಾಗುವವರೂ ಇರುತ್ತಾರೆ. ಅಲ್ಲಿನ ಸ್ಥಳೀಯ ಮಾಧ್ಯಮಗಳು ಹೇಗೆ ಅಲ್ಲಿನ ಅಂಗಡಿಗಳ ಮುಂದೆ ಸಾಲುಗಟ್ಟಿ ಜನರಿರುತ್ತಾರೆ,ವ್ಯಾಪಾರಿಗಳ ವಹಿವಾಟಿನ ಬಗ್ಗೆ ಬರೆಯುತ್ತವೆ,ಗ್ರಾಹಕರ ಸಾಲುಗಳು,ಅವರು ಕೊಂಡುಕೊಳ್ಳುವ ಸಾಮಾನುಗಳ ಬಗ್ಗೆ ಅವರು ಚಿತ್ರೀಕರಿಸಿದ ವಿಡಿಯೊವನ್ನೂ ಅವರು ಬಿತ್ತರಿಸುತ್ತಾರೆ.[೧೯] ಈ ಬಾಕ್ಸಿಂಗ್ ಡೇದಲ್ಲಿನ ಮಾರಾಟದ ಸಂದರ್ಭದಲ್ಲಿ ಗ್ರಾಹಕರ ಕಾಲ್ತುಳಿತಗಳು,ಗಾಯಗೊಳ್ಳುವಿಕೆಗಳು ಮತ್ತು ಒಮ್ಮೊಮ್ಮೆ ಸಾವು-ನೋವುಗಳೂ ಸಂಭವಿಸುವ ಸಾಧ್ಯತೆ ಇದೆ.[೨೦] ಇದರಿಂದಾಗಿ ಹಲವಾರು ಸಣ್ಣ ವ್ಯಾಪಾರಿಗಳು ಇಂತಹ ದೊಡ್ಡ ಗುಂಪುಗಳನ್ನು ನಿಯಂತ್ರಿಸಲು ಕೆಲವು ಪ್ರಾಯೋಗಿಕ ಕ್ರಮಗಳಿಗೆ ಮುಂದಾಗುತ್ತವೆ.ತೀಕ್ಷ್ಣ ಚಳಿಗಾಲದಲ್ಲಿ ಇವು ಹೆಚ್ಚು ಸಂಭವಿಸುತ್ತವೆ.(ಅಥವಾ ಆಸ್ಟ್ರೇಲಿಯಾ ಮತ್ತು ನ್ಯುಜಿಲೆಂಡ್ ಗಳಲ್ಲಿನ ಬಿರುಬೇಸಿಗೆ) ವಾತಾವರಣ ಗ್ರಾಹಕರಲ್ಲಿ ವ್ಯಾಪಾರದ ಬೇಡಿಕೆಗಳಿಗೆ ಪಕ್ವವಾಗಿರುತ್ತವೆ. ಅವರು ಪ್ರವೇಶಗಳನ್ನು ನಿರ್ಬಂಧಿಸಬಹುದು,ಒಂದೇ ವೇಳೆಗೆ ದೊಡ್ಡ ಸಂಖ್ಯೆಯ ಗಿರಾಕಿಗಳಿಗೂ ಕಡಿವಾಣ ಹಾಕಬಹುದು,ಅಥವಾ ಹೆಚ್ಚು ಮಾರಾಟದ ವಸ್ತುಗಳ ಮಾರಾಟದ ಖಾತ್ರಿಗಾಗಿ ಕೂಪನ್ ಗಳನ್ನು ನೀಡಬಹುದು.ಅಲ್ಲದೇ ಸರದಿಯಲ್ಲಿರುವವರಿಗೆ ತಮ್ಮಲ್ಲಿರುವ ದಾಸ್ತಾನುಗಳ ಬಗೆಗೆ ಜಾಹಿರು ಮಾಡುವ ಮೂಲಕ ನಿಯಂತ್ರಿಸಲಾಗುತ್ತದೆ.[೧೮]

ಇತ್ತೀಚಿನ ವರ್ಷಗಳಲ್ಲಿ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು "ಬಾಕ್ಸಿಂಗ್ ವಾರ"ದ ವರೆಗೂ ವಿಸ್ತರಿಸುತ್ತಿವೆ. ಈ ಬಾಕ್ಸಿಂಗ್ ಡೇ ಡಿಸೆಂಬರ್ ೨೬ ಇದ್ದರೂ ಹಲವು ವ್ಯಾಪಾರಿಗಳು ಬಾಕ್ಸಿಂಗ್ ಡೇ ಸೇಲ್ಸ್ ನ್ನು ಈ ದಿನಾಂಕಕ್ಕಿಂತ ಕೆಲದಿನ ಮೊದಲು ನಂತರ ಕೆಲದಿನಗಳ ವರೆಗೆ ತಮ್ಮ ವಹಿವಾಟನ್ನು ವಿಸ್ತರಿಸುತ್ತಾರೆ.ಇದು ಹೊಸ ವರ್ಷದ ನಿವ್ ಇಯರ್ ಈವ್ ವರೆಗೂ ಮುಂದುವರೆಯುತ್ತದೆ.ಬಹುಮುಖ್ಯವಾಗಿ ೨೦೦೮ ರ ಕೊನೆಯ ಆರ್ಥಿಕ ಕುಸಿತದ ಸಂದರ್ಭದಲ್ಲಿ ಇದು ನಡೆದಿತ್ತು.ಆಗ ಕೆಲವು ವ್ಯಾಪಾರಿಗಳು ಉತ್ತಮ ವ್ಯಾಪಾರವನ್ನು ಪಡೆದು ತಮ್ಮನ್ನು ಹೆಚ್ಚು ವಹಿವಾಟುಗಳಲ್ಲಿ ತೊಡಗಿಸಿಕೊಂಡದ್ದೂ ಇದೆ.[೨೧] ಕೆನಡಾದ ಬಾಕ್ಸಿಂಗ್ ಡೇ ಸಂದರ್ಭವನ್ನು ಅಮೆರಿಕನ್ ಸೂಪರ್ ಸ್ಯಾಟರ್ಡೇ ವ್ಯಾಪಾರಕ್ಕೆ ಹೋಲಿಕೆ ಮಾಡಲಾಗುತ್ತದೆ.ಇದು ಕ್ರಿಸ್ಮಸ್ ಗಿಂತ ಮೊದಲು ಬರುವ ಶನಿವಾರವಾಗಿರುತ್ತದೆ. ಆಗ ೨೦೦೯ರಲ್ಲಿ ಪ್ರಮುಖ ಕೆನಡಾದ ಸಣ್ಣ ವ್ಯಾಪಾರಿಗಳು ತಮ್ಮ ಬ್ಲ್ಯಾಕ್ ಫ್ರೈಯ್ಡೇ ವಹಿವಾಟುಗಳನ್ನು ನಡೆಸಿ ವ್ಯಾಪಾರಿಗಳು ಗ್ರಾಹಕರ ದಟ್ಟಣೆ ಮಿತಿ ಮೀರದಂತೆ ಮಾಡುವ ಸಂದರ್ಭಗಳೂ ಇವೆ.[೨೨]

ಕೆನಡಾ ಕೆಲವು ಆಯ್ದ ಭಾಗಗಳಲ್ಲಿ ವಿಶೇಷವಾಗಿ ಅಟ್ಲಾಂಟಿಕ್ ಕೆನಡಾ ಮತ್ತು ನಾರ್ದರ್ನ್ ಒಂಟಾರಿಯೊ (ಇದರಲ್ಲಿ ಸಾಲ್ಟ್ ಸ್ಟೆ.ಮೇರಿ)[೨೩] ಮುಂತಾದೆಡೆ ಸಣ್ಣ ವ್ಯಾಪಾರಿಗಳನ್ನು ಬಾಕ್ಸಿಂಗ್ ಡೇ ದಿನ ಅಂಗಡಿ ತೆಗೆಯುವಲ್ಲಿ ನಿರ್ಬಂಧ ವಿಧಿಸಲಾಗುತ್ತದೆ.ಇದಕ್ಕಾಗಿ ಅಲ್ಲಿನ ಪ್ರಾಂತೀಯ ಕಾನೂನು ಅಥವಾ ಉಪಕಾನೂನುಗಳ ಮೂಲಕ ಇದನ್ನು ಜಾರಿ ಮಾಡಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ವ್ಯಾಪಾರವನ್ನು ೨೬ ಡಿಸೆಂಬರ್ ಗೆ ಅಥವಾ ೨೭ಕ್ಕೆ ಮುಂದೂಡಲಾಗುತ್ತದೆ.[೨೪][೨೫]

ಐರ್ಲೆಂಡ್ ನಲ್ಲಿ ೧೯೦೨ರಿಂದಲೂ ಬಹಳಷ್ಟು ಮಳಿಗೆಗಳು ಸ್ಟೇಂಟ್.ಸ್ಟಿಫನ್ಸ್ ಡೇ ದಿನ ಮುಚ್ಚಲ್ಪಡುತ್ತವೆ,ಕ್ರಿಸ್ಮಸ್ ಡೇ ಮಾದರಿಯಲ್ಲಿಯೇ ಇದನ್ನು ಅನುಸರಿಸಲಾಗುತ್ತದೆ. ಆದರೆ ೨೦೦೯ ರಲ್ಲಿ ಕೆಲವು ವ್ಯಾಪಾರಿ ಮಳಿಗೆಗಳು ಇದೇ ದಿನ ಅಂಗಡಿಗಳನ್ನು ತೆರೆದು ೧೦೭-ವರ್ಷದ ಸಂಪ್ರದಾಯವನ್ನು ಮುರಿದು ಹಾಕಿವೆ. ಕೆಲವು ಅಂಗಡಿಗಳವರು ತಮ್ಮ ಜನವರಿ ಸೇಲ್ಸ್ ವಹಿವಾಟನ್ನು ಅಂದೇ ಆರಂಭಿದ್ದಾರೆ.

ಸೈಬರ್ ಬಾಕ್ಸಿಂಗ್ ಡೇ

[ಬದಲಾಯಿಸಿ]

ಈ ಆನ್ ಲೈನ್ ಬಾಕ್ಸಿಂಗ್ ಡೇ ಅನ್ನು "ಸೈಬರ್ ಬಾಕ್ಸಿಂಗ್ ಡೇ"ಎಂದು ಉಲ್ಲೇಖಿಸಲಾಗುತ್ತದೆ. ಆಗ UK ನಲ್ಲಿ ೨೦೦೮ ರ ವರ್ಷದಲ್ಲಿ ಬಾಕ್ಸಿಂಗ್ ಡೇ ಅತ್ಯಧಿಕ ಆನ್ ಲೈನ್ ಶಾಪಿಂಗ್ ದಿನವಾಗಿತ್ತು.[೨೬] ನಂತರ ೨೦೦೯ ರಲ್ಲಿ ಹಲವು ಸಣ್ಣ ವ್ಯಾಪಾರಿಗಳು ಆನ್ ಲೈನ್ ಮತ್ತು ಹೈಸ್ಟ್ರೀಟ್ ಮಳಿಗೆಗಳು ಕ್ರಿಸ್ಮಸ್ ಈವ್ ವ್ಯಾಪಾರವನ್ನು ಒಟ್ಟಿಗೆ ಆರಂಭಿಸಿದರು.ಅದಲ್ಲದೇ ತಮ್ಮ ಹೈ ಸ್ಟ್ರೀಟ್ ಸೇಲ್ಸ್ ಆನ್ ಬಾಕ್ಸಿಂಗ್ ಡೇ ವಹಿವಾಟನ್ನೂ ನಡೆಸಿದರು.[೨೭]

ಕ್ರೀಡೆ

[ಬದಲಾಯಿಸಿ]
ಟ್ರೆಡಿಶನಲ್ ಬಾಕ್ಸಿಂಗ್ ಡೇ ಹಂಟ್ ಮೀಟ್ ಇನ್ ಕೆಸ್ವಿಕ್ (ಇಂಗ್ಲೆಂಡ್) 1962

ಈ ಬಾಕ್ಸಿಂಗ್ ಡೇ ಕೂಡ ಆರಂಭದಲ್ಲಿ ಕ್ರೀಡಾ ಚಟುವಟಿಕೆಯೊಂದಿಗೆ ತನ್ನ ಸಂಬಂಧ ಹೊಂದಿತ್ತು,ಗ್ರಾಮೀಣ ಭಾಗದಲ್ಲಿ ಈ ಜಾನಪದ ವ್ಯುತ್ಪತ್ತಿ ಸಂಪ್ರದಾಯದ ಬಗ್ಗೆ ನೋಡಿದಾಗ ಈ ಬಾಕ್ಸಿಂಗ್ ಎಂಬ ಕ್ರೀಡೆ ಕೂಡ ಜನಪ್ರಿಯವಾಗಿದೆ.ಆದರೆ ಈ ಬಾಕ್ಸ್ ಎಂದರೆ ಕ್ರಿಸ್ಮಸ್ ನಲ್ಲಿ ಪೆಟ್ಟಿಗೆ ಗಳಲ್ಲಿ ಅದರಲ್ಲೂ ಬ್ರಿಟೇನ್ ನಲ್ಲಿ ನೀಡುವ ಕಾಣಿಕೆ ಎಂದು ಜನಜನಿತವಾಗಿದೆ. ಆಫ್ರಿಕಾದ ಕಾಮನ್ ವೆಲ್ತ್ ದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಘಾನಾ,ಉಗಾಂಡಾ,ಮಲವಿ,ಝಾಂಬಿಯಾ ಮತ್ತು ತಾಂಜೇನಿಯಾಗಳಲ್ಲಿ ಬಾಕ್ಸಿಂಗ್ ಡೇದಂದು ಬಹುಮಾನ ನೀಡುವ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.[೨೮] ಇದೇ ಆಚರಣೆಯು ದಶಕಗಳಿಂದ ಗಯಾನಾ ಮತ್ತು ಇಟಲಿಯಲ್ಲಿ ನಡೆಯುತ್ತಿದೆ.[೨೮]

ಇಂಗ್ಲೆಂಡ್,ಸ್ಕಾಟ್ ಲೆಂಡ್ ಮತ್ತು ನಾರ್ದರ್ನ್ ಐರ್ಲೆಂಡ್ ಗಳಲ್ಲಿ ಸಾಂಪ್ರದಾಯಿಕವಾಗಿ ಪ್ರಿಮಿಯರ್ ಲೀಗ್,ಸ್ಕಾಟಿಶ್ ಪ್ರಿಮಿಯರ್ ಲೀಗ್ ಮತ್ತು ಐರಿಶ್ ಪ್ರಿಮಿಯರ್ ಲೀಗ್ ಅನುಕ್ರಮವಾಗಿ ನಡೆಯುತ್ತವೆ.ಇನ್ನು ಕೆಳಮಟ್ಟದ ವಿಭಾಗಗಳಲ್ಲಿ ರಗ್ ಬೈ ಫೂಟ್ಬಾಲ್ ಲೀಗ್ಸ್ ಗಳು ಪೂರ್ಣಾವಧಿಯ ಫೂಟ್ಬಾಲ್ ಪಂದ್ಯಗಳನ್ನು ಏರ್ಪಡಿಸುತ್ತವೆ.ಬಾಕ್ಸಿಂಗ್ ಡೇ ದಿನ ರಗ್ ಬೈ ಕ್ರೀಡೆಗಳನ್ನು ಆಯೋಜಿಸುತ್ತವೆ. ಸಾಂಪ್ರದಾಯಿಕವಾಗಿ ಬಾಕ್ಸಿಂಗ್ ಡೇ ದಿನದಂದು ಸ್ಥಳೀಯ ಗುಂಪುಗಳೊಂದಿಗೆ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಇದನ್ನು ಮೂಲದಲ್ಲಿ ಆಟದ ತಂಡಗಳು ಬೇರೆಡೆಗೆ ದೂರದ ಪ್ರದೇಶಗಳಿಗೆ ಕ್ರಿಸ್ಮಸ್ ದಿನದ ನಂತರ ಹೋಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಇರುತ್ತದೆ. ಅಷ್ಟೇ ಅಲ್ಲದೇ ಇದು ಆ ದಿನವನ್ನು ಮಹತ್ವದ ದಿನವನ್ನಾಗಿ ಮಾಡುತ್ತದೆ.

ಕುದರೆ ಓಟದ ಸ್ಪರ್ಧೆಗಳಲ್ಲಿ ಕಿಂಗ್ ಜಾರ್ಜ್ VI ಚೇಜ್ ನ್ನು ಸುರ್ರೆಯ ಕೆಂಪ್ಟನ್ ಪಾರ್ಕ್ ರೇಸ್ ಕೋರ್ಸ್ ನಲ್ಲಿ ಆಯೋಜಿಸಲಾಗುತ್ತದೆ. ಚೆಲ್ತೆನ್ ಹ್ಯಾಮ್ ಗೊಲ್ಡ್ ಕಪ್ ನಂತರ ಇದು ಅತ್ಯಂತ ಪ್ರತಿಷ್ಟೆಯ ಎರಡನೆಯ ಚೇಸ್ ಕ್ರೀಡೆಯಾಗಿದೆ.

UK ಮತ್ತು US ಗಳಲ್ಲಿ ಬಾಕ್ಸಿಂಗ್ ಡೇ ನರಿ ಬೇಟೆಗಾರರಿಗೆ ಅತ್ಯಂತ ಪ್ರಶಸ್ತ ದಿನವಾಗಿದೆ. ಈ ನರಿಗಳ ಬೇಟೆಯನ್ನು ಹಂಟಿಂಗ್ ಆಕ್ಟ್ ೨೦೦೪ ರ ಮೂಲಕ ನಿಷೇಧಿಸಲಾಗಿದ್ದರೂ ಬಾಕ್ಸಿಂಗ್ ಡೇ ಮಾತ್ರ ಅತಿ ದೊಡ್ಡ ಬೇಟೆಯ ದಿನವಾಗಿ UK ನಲ್ಲಿ ಪರಿಗಣಿತವಾಗುತ್ತದೆ.ಕೆಲವು ವಾಸನೆ ಪೂಸಿತ ನಾಯಿಗಳ ಮೂಲಕ ಇದನ್ನು ಆಚರಿಸಿ ಸಜೀವ ಪ್ರಾಣಿಗಳ ಕೊಲ್ಲುವ ಈ ಆಟವನ್ನು ಮರೆಮಾಚಲಾಗುತ್ತದೆ.

ಆಸ್ಟ್ರೇಲಿಯಾವು ಬಾಕ್ಸಿಂಗ್ ಡೇಟೆಸ್ಟ್ ನ್ನು ಮೊದಲ ದಿನದಂದು ಮೆಲ್ಬೊರ್ನ್ ನಲ್ಲಿನ ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಕೈಗೊಂಡು ಸಿಡ್ನಿ ಉ ಹೊಬಾರ್ಟ್ ಯಾಕ್ಟ್ ರೇಸ್ ನಡೆಸುತ್ತದೆ.

ಈ IIHF ವರ್ಲ್ಡ್ U೨೦ ಚ್ಯಾಂಪಿಯನ್ ಶಿಪ್ (ಐಸ್ ಹಾಕಿ) ಸಾಮಾನ್ಯವಾಗಿ ಡಿಸೆಂಬರ್ ೨೬ ರಂದು ನೆರವೇರುತ್ತದೆ. ಕೆನಡಾದಲ್ಲಿ ಈ ಪಂದ್ಯಾವಳಿಯು ಆ ವರ್ಷದ ಅತ್ಯಂತ ದೊಡ್ಡ ಕ್ರೀಡಾ ಆಯೋಜನಗಳಲ್ಲಿ ಒಂದಾಗಿದೆ,ಇದನ್ನು ಸಾಮಾನ್ಯವಾಗಿ USನಲ್ಲಿ ನಡೆವ ಸೂಪರ್ ಬೌಲ್ ಜೊತೆಗೆ ಹೋಲಿಸಲಾಗುತ್ತದೆ.

ಈ NHL ಕೂಡಾ ಕ್ರೀಡೆಗಳಲ್ಲಿ ತನ್ನ ಪರಿಪೂರ್ಣತೆ ಸಾಧಿಸುವತ್ತ ನಡೆದಿರುವುದು ಕಾಣುತ್ತದೆ.(೧೧ ಕ್ರೀಡೆಗಳನ್ನು ೨೦೧೦ ನಲ್ಲಿ ಆಡಲಾಗಿದೆ.ಯಾಕೆಂದರೆ ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ಡೇ ರಜಾದಿನಗಳು ಹೆಚ್ಚು ಕ್ರೀಡೆಗಳನ್ನು ಆಯೋಜಿಸಲು ಅನುವು ಮಾಡಿವೆ.

ಈ ಸ್ಪೆಂಗ್ಲರ್ ಕಪ್ (ಐಸ್ ಹಾಕಿ) ಕೂಡ ಡಿಸೆಂಬರ್ ೨೬ ರಂದೇ ಸ್ವಿಜರ್ ಲೆಂಡ್ ನ ದಾವೊಸ್ ನಲ್ಲಿ ಆರಂಭಗೊಳ್ಳುತ್ತದೆ.ಇದರಲ್ಲಿ HC ದಾವೊಸ್,ಟೀಮ್ ಕೆನಡಾ ಮತ್ತು ಇನ್ನುಳಿದ ಉನ್ನತ ಶ್ರೇಣಿಯ ಯುರೊಪಿಯನ್ ಹಾಕಿ ಟೀಮ್ ಗಳು ಇರುತ್ತವೆ.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಸೇಂಟ್ ಸ್ಟಿಫನ್ಸ್ ಡೇ
  • ಬಾಕ್ಸಿಂಗ್ ಡೇ ಸುನಾಮಿ

ಉಲ್ಲೇಖಗಳು‌‌

[ಬದಲಾಯಿಸಿ]
  1. ೧.೦ ೧.೧ Directgov. "Bank Holidays and British Summertime". Retrieved 17 December 2009.
  2. "Statutory holidays in Canada both national and provincial". Statutoryholidays.com. Retrieved 2010-12-26.
  3. ಬಾಕ್ಸಿಂಗ್ ಡೇ. Snopes.com.
  4. [17] ^ ಕಾಲಿನ್ಸ್‌ (೨೦೦೧) ಪುಟ.೨೩೪.
  5. ಎನ್ ಸೈಕ್ಲೊಪಿಡಿಯಾ ಬ್ರಿಟಾನ್ನಿಕಾ, ೧೯೫೩ "ಬಾಕ್ಸಿಂಗ್ ಡೇ"
  6. "Saturday 19 December 1663 (Pepys' Diary)". Pepysdiary.com. Retrieved 2010-12-26.
  7. ಅಮೆರಿಕನ್ ಹೆರಿಟೇಜ್ ಡಿಕ್ಷನರಿ , ಫೊರ್ತ್ ಎಡಿಶನ್- 'ಬಾಕ್ಸಿಂಗ್ ಡೇ'
  8. ಆಕ್ಸ್ ಫರ್ಡ್ ಇಂಗ್ಲೀಷ್
  9. "BBC Radio 4 schedule, 03 December 2004". 17 November 2004. Retrieved 17 December 2009.
  10. "London Gazette, 18 October 1974". London-gazette.co.uk. 1974-10-18. Archived from the original on 2011-06-09. Retrieved 2010-12-26.
  11. ಸ್ಕಾಟಿಶ್ ಗವರ್ನ್ ಮೆಂಟ್ ವೆಬ್ ಸೈಟ್ -ಬ್ಯಾಂಕ್ ಹಾಲಿಡೇಸ್
  12. "ಆರ್ಕೈವ್ ನಕಲು". Archived from the original on 2015-12-19. Retrieved 2011-05-27.
  13. ೧೩.೦ ೧೩.೧ Manitoba Employment Standards Branch (27 November 2009). "Fact Sheet". Retrieved 17 December 2009.
  14. Terry Kirby (27 December 2006). "Boxing Day sales soar as shoppers flock to malls". The Independent. London. Retrieved 17 December 2009.
  15. ೧೫.೦ ೧೫.೧ CTV.ca News Staff (26 December 2005). "Boxing Day expected to rake in $1.8 billion". Retrieved 17 December 2009.[ಶಾಶ್ವತವಾಗಿ ಮಡಿದ ಕೊಂಡಿ]
  16. "Stocktake Trading Hours" (PDF). Myer. 2010. Archived from the original (PDF) on 2011-06-15. Retrieved 2011-01-07.
  17. "Boxing Day sales attract 'record' number of shoppers". BBC News. 2009-12-28. Retrieved 2010-12-26.
  18. ೧೮.೦ ೧೮.೧ Ashleigh Patterson (25 December 2007). "How to become a Boxing Day shopping pro". Archived from the original on 27 ಆಗಸ್ಟ್ 2009. Retrieved 17 December 2009.
  19. toronto.ctv.ca (26 December 2007). "Boxing Day begins with early rush of bargain hunters". Archived from the original on 27 ಮೇ 2012. Retrieved 17 December 2009.
  20. "Worker dies at Long Island Wal-Mart after being trampled in Black Friday stampede". Daily News. New York. 28 November 2008. Archived from the original on 28 ನವೆಂಬರ್ 2008. Retrieved 17 December 2009. {{cite news}}: Cite uses deprecated parameter |authors= (help)
  21. CTV.ca News Staff (21 December 2008). "Boxing Day comes early as shoppers search for deals". Archived from the original on 22 ಡಿಸೆಂಬರ್ 2008. Retrieved 17 December 2009.
  22. CBC News (27 November 2009). "Canadian retailers try their own Black Friday". Archived from the original on 30 November 2009. Retrieved 17 December 2009.
  23. www.city.sault-ste-marie.on.ca (2010). "Advisory - Boxing Day". Retrieved 2010-12-25.
  24. soonews.ca (2007-12-22). "Boxing Day, The Debate Continues". Retrieved 2009-12-26.[ಶಾಶ್ವತವಾಗಿ ಮಡಿದ ಕೊಂಡಿ]
  25. The Canadian Press (2009-12-26). "Boxing Day madness: shoppers descend on stores looking for deals". Retrieved 2009-12-26.[ಶಾಶ್ವತವಾಗಿ ಮಡಿದ ಕೊಂಡಿ]
  26. IMRG (22 December 2009). "Many retailers' sales to start on Christmas Eve". Archived from the original on 26 ಡಿಸೆಂಬರ್ 2009. Retrieved 22 December 2009.
  27. Telegraph (22 December 2009). "Boxing Day sales start on Christmas Eve". The Daily Telegraph. London. Retrieved 22 December 2009.
  28. ೨೮.೦ ೨೮.೧ Millman, Joel (December 26, 2009). "Season's Beatings: 'Boxing Day' Takes a Pugilistic Turn". Wall Street Journal. p. 1.

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]