ವಿಷಯಕ್ಕೆ ಹೋಗು

ಬಾಲ್ಯದ ಸ್ಥೂಲಕಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Childhood obesity
Classification and external resources
Children with varying degrees of body fat.
ICD-10E66
ICD-9278
DiseasesDB೯೦೯೯
MedlinePlus೦೦೩೧೦೧
eMedicinemed/೧೬೫೩
MeSHC೨೩.೮೮೮.೧೪೪.೬೯೯.೫೦೦

ದೇಹದ ಕೊಬ್ಬಿನಂಶವನ್ನು ನಿರ್ಧರಿಸುವ ವಿಧಾನವನ್ನ ನಿಖರವಾಗಿ ತಿಳಿಯುವುದು ಕಷ್ಟಸಾಧ್ಯ. ಕೆಲವೊಮ್ಮೆ ಸ್ಥೂಲಕಾಯ ಬಿಎಂಐ ಮೇಲೆ ಆಧಾರಿತವಾಗಿರುತ್ತದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ಮತ್ತು ಅದು ಆರೋಗ್ಯದ ಮೇಲೆ ಬೀರುತ್ತಿರುವ ಹಲವಾರು ಪರಿಣಾಮಗಳು ಗಂಭೀರವಾದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗುತ್ತಿದೆ.[]

ಬಾಲ್ಯದ ಸ್ಥೂಲಕಾಯ

[ಬದಲಾಯಿಸಿ]

ವಿಪರೀತವಾಗಿ ಹೆಚ್ಚಾದ ದೇಹದ ಕೊಬ್ಬಿನಂಶವು ಮಕ್ಕಳ ಆರೋಗ್ಯ ಅಥವಾ ಆರೋಗ್ಯಕರ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸ್ಥಿತಿಯನ್ನು ಬಾಲ್ಯದ ಸ್ಥೂಲಕಾಯ ತೆ ಎಂದು ಕರೆಯುತ್ತಾರೆ. ಮಕ್ಕಳಲ್ಲಿರುವ ಈ ಸಮಸ್ಯೆಗೆ ಸ್ಥೂಲ ಕಾಯತೆ ಅನ್ನುವುದಕ್ಕಿಂತ ಹೆಚ್ಚಾಗಿ ’ಹೆಚ್ಚಿನ ತೂಕ’ ಎನ್ನುವುದನ್ನು ಬಳಸುತ್ತಿದ್ದಾರೆ. ಮಕ್ಕಳ ವ್ಯಕ್ತಿತ್ವದ ಮೇಲೆ ಸ್ಥೂಲ ಕಾಯತೆ ಅನ್ನುವ ಶಬ್ಧ ಪ್ರಭಾವ ಬೀರುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ.[]

ವರ್ಗೀಕರಣ

[ಬದಲಾಯಿಸಿ]
2ರಿಂದ 20 ವರ್ಷದ ಗಂಡುಮಕ್ಕಳ ವಯಸ್ಸಿನ ಶೇಕಡಕಗಳ ಬಿಎಂಐ.
2ರಿಂದ 20 ವರ್ಷದ ಹೆಣ್ಣುಮಕ್ಕಳ ವಯಸ್ಸಿನ ಶೇಕಡಕಗಳ ಬಿಎಂಐ
  • ಎರಡು ವರ್ಷ ಮತ್ತು ಅದಕ್ಕಿಂತ ದೊಡ್ಡವರಲ್ಲಿ ಸ್ಥೂಲಕಾಯ ಅಳೆಯಲುಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಅನ್ನು ಅಂಗೀಕರೀಸ ಲಾಗಿದೆ.[]
  • ಮಕ್ಕಳಲ್ಲಿ ಸಾಮಾನ್ಯವಾಗಿ ವಯಸ್ಸು ಮತ್ತು ಲಿಂಗಕ್ಕನುಗುಣವಾಗಿ ಬಿಎಂಐ ಬದಲಾಗುತ್ತಿರುತ್ತದೆ. ಸ್ಥೂಲಕಾಯದಲ್ಲಿ ೯೫ನೇ ಪರ್ಸೆಂಟೈಲ್‌ಗಿಂತ ಬಿಎಂಐ ಹೆಚ್ಚಾಗಿರುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ವ್ಯಾಖ್ಯಾನಿಸುತ್ತದೆ. ಇದನ್ನು ಸ್ಥೂಲಕಾಯದ ಮಕ್ಕಳನ್ನು ನಿರ್ಧರಿಸಲು ಪ್ರಕಟಿಸಿರುವ ಕೋಷ್ಠಕವಾಗಿದೆ.[]

ಆರೋಗ್ಯದ ಮೇಲುಂಟಾಗುವ ಪರಿಣಾಮಗಳು

[ಬದಲಾಯಿಸಿ]
  • ಸ್ಥೂಲಕಾಯ ಹೊಂದಿರುವ ಮಕ್ಕಳಲ್ಲಿ ಮೊದಲಿಗೆ ಭಾವನಾತ್ಮಕ ಅಥವಾ ಮಾನಸಿಕ ಸಮಸ್ಯೆ ಕಂಡುಬರುತ್ತದೆ.[]
  • ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ಸ್ಥೂಲಕಾಯವು ಜೀವಕ್ಕೆ ಅಪಾಯ ತರುವ ಸ್ಥಿತಿಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ನಿದ್ರೆಗೆ ಸಂಬಂಧ ಪಟ್ಟ ಸಮಸ್ಯೆಗಳು, ಅರ್ಬುದ ಮತ್ತು ಇತರೆ ಹಲವಾರು ಖಾಯಿಲೆಗಳಿಗೆ ಕಾರಣವಾಗಬಹುದು.[][] ಇನ್ನೂ ಇತರೆ ಖಾಯಿಲೆಗಳಾದ ಯಕೃತ್ತಿನ ಖಾಯಿಲೆ, ತುಂಬಾ ಚಿಕ್ಕ ವಯಸ್ಸಿಗೆ ಫ್ರೌಢಾವಸ್ಥೆಗೆ ತಲುಪುವುದು ಅಥವಾ ರಜಸ್ವಲೆಯಾಗುವುದು, ತಿನ್ನುವುದಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಅಗ್ನಿಮಾಂದ್ಯ (ಹಸಿವಿಲ್ಲದಿರುವಿಕೆ) ಮತ್ತು ಹಸಿವು ಹೆಚ್ಚಿರುವುದು, ಚರ್ಮದ ಸೋಂಕು, ಮತ್ತು ಉಬ್ಬಸ ಮತ್ತು ಇತರೆ ಉಸಿರಾಟದ ತೊಂದರೆಗಳು ಕಂಡು ಬರುತ್ತದೆ.[]
  • ಸ್ಥೂಲದೇಹಿ ಮಕ್ಕಳು ಮುಂದೆಯು ಸ್ಥೂಲ ದೇಹಿಗಳಾಗಿಯೇ ಬೆಳೆಯುತ್ತಾರೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ.[] ಬಾಲ್ಯಾವಸ್ಥೆಯಲ್ಲಿಯೇ ಸ್ಥೂಲಕಾಯ ಕಂಡು ಬಂದರೆ ಅಂತವರು ವಯಸ್ಕರಾದಾಗ ಅವರಲ್ಲಿ ಸಾವಿನ ಪ್ರಮಾಣ ಹೆಚ್ಚು.[]
  • ಸ್ಥೂಲದೇಹಿ ಮಕ್ಕಳು ತಮ್ಮ ಸಹವರ್ತಿಗಳಿಂದ ಟೀಕೆಗೆ ಗುರಿಯಾಗುತ್ತಾರೆ[೧೦][೧೧] ಕೆಲವರು ತಮ್ಮ ಕುಟುಂಬದಿಂದಲೇ ಕಿರುಕುಳಕ್ಕೆ ಅಥವಾ ತಾರತಮ್ಯಕ್ಕೊಳಗಾಗುತ್ತಾರೆ.[೧೧] ಸ್ಟೆರಿಯೋಟೈಪ್ಸ್ ಹೆಚ್ಚಾಗಿರುತ್ತದೆ ಮತ್ತು ಆತ್ಮವಿಶ್ವಾಸದ ಕೊರತೆ ಮತ್ತು ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.[೧೨]
  • ಶೀರ್ಷ ಅಪಧಮನಿ (carotid ಅರ್ತೆರಿಎಸ್) ಸ್ಥೂಲತೆ ಉಂಟಾದ ಮಕ್ಕಳಲ್ಲಿ ಮೂವತ್ತು ವರ್ಷಕ್ಕಿಂತ ಮೊದಲಿಗೆ ಕೊಲೆಸ್ಟ್ರಾಲ್ ಮಟ್ಟವು ವಿಪರೀತ ವಾಗಿರುವುದು ಎಂದು 2008 ರಲ್ಲಿ ನಡೆದ ಅಧ್ಯಯನವು ತೋರಿಸುತ್ತದೆ.[೧೩]
ವ್ಯವಸ್ಥೆ ಪರಿಸ್ಥಿತಿ ವ್ಯವಸ್ಥೆ ಪರಿಸ್ಥಿತಿ
ಎಂಡೊಕ್ರೈನ್
  • ಹಾನಿಗೊಳಗಾದ ಗ್ಲುಕೋಸ್ ಟಾಲರೆನ್ಸ್
  • ಮಧುಮೇಹ ಮೆಲ್ಲಿಟಸ್
  • ಚಯಾಪಚಯಿಕ ರೋಗ ಲಕ್ಷಣಗಳು
  • ಹೈಪರ್‌ ಆ‍ಯ್‌೦ಡ್ರೊಜೆನಿಸಂ
  • ಬೆಳವಣಿಗೆ ಮತ್ತು ಪ್ರೌಢಾವಸ್ಥೆಯ ಮೇಲೆ ಪರಿಣಾಮಗಳು
  • ನಲ್ಲಿಪರಿಟಿ ಮತ್ತು ನಲ್ಲಿಗ್ರೆವಿಡಿಟಿ[೧೪]
ಕಾರ್ಡಿಯೋವೆಸ್ಕ್ಯೂಲರ್‌
  • ಅಧಿಕ ರಕ್ತದೊತ್ತಡ
  • ಅಧಿಕ ಕೊಬ್ಬಿನಂಶ
  • ವಯಸ್ಕರಲ್ಲಿ ಹೆಚ್ಚಿದ ಪರಿಧಮನಿ ಹೃದಯ ಸಂಬಂಧಿ ಕಾಯಿಲೆಯ ಅಪಾಯ
ಗ್ಯಾಸ್ಟ್ರೋಇಂಟೆಸ್ಟಿನಲ್
  • ಆಲ್ಕಹಾಲ್ ಇಲ್ಲದ ಕೊಬ್ಬಿನ ಪಿತ್ತ ಜನಕಾಂಗದ ಖಾಯಿಲೆ
  • ಕೊಲೆಲಿಥೈಸಿಸ್
ಉಸಿರಾಟ
  • ನಿದ್ರಾ ಆಪ್ನಿಯಾ ಪ್ರತಿರೋಧಕ
  • ಸ್ಥೂಲಕಾಯ ಹೈಪೊವೆಂಟಿಲೇಶನ್ ರೋಗಲಕ್ಷಣ
ಮಸ್ಕ್ಯೂಲೋಸ್ಕೆಲೆಟಲ್
  • ಮುಖ್ಯ ತೊಡೆಯೆಲುಬಿನ ಮೂಳೆ ತುದಿಯ ಜಾರುವಿಕೆ (ಎಸ್‌ಸಿಎಫ್‌ಸಿ)
  • ಟಿಬಿಯಾ ವಾರಾ (ಬ್ಲೌಂಟ್ ಕಾಯಿಲೆ)
ನರಶಾಸ್ತ್ರೀಯ
  • ತಲೆ ಬುರುಡೆಯೊಳಗಿನ ಸ್ವಯಂಜನ್ಯ ರೋಗದ ಅಧಿಕ ರಕ್ತದೊತ್ತಡ
ಮಾನಸಿಕ ಚರ್ಮ
  • ಫ್ಯೂರನ್‌ ಕ್ಯೂಲೋಸಿಸ್
  • ಇಂಟರ್‌ಟ್ರಿಗೊ

[೧೬]

ಕಾರಣಗಳು

[ಬದಲಾಯಿಸಿ]
  • ಹಲವು ಸ್ಥಿತಿಗಳಲ್ಲಿ ಬಾಲ್ಯದ ಸ್ಥೂಲಕಾಯವು ಹಲವಾರು ಸಂಯುಕ್ತ ಅಂಶಗಳ ಮೂಲಕ ಬರುತ್ತದೆ.[೧೭][೧೮][೧೯][೨೦][೨೧]
  • ತಿನ್ನುವ ಅಭ್ಯಾಸವು ಬಾಲ್ಯದ ಸ್ಥೂಲಕಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುವುದು ಕಷ್ಟ. ಮೂರನೇಯ ದರ್ಜೆಯ ಸುಮಾರು ೧,೭೦೪ ಮಕ್ಕಳನ್ನು ಮೂರು ವರ್ಷಗಳ ಕಾಲ ಅಧ್ಯಯನಕ್ಕೊಳಪಡಿಸಲಾಗಿತ್ತು. ಅವರಿಗೆ ಒಂದು ದಿನಕ್ಕೆ ಎರಡು ವಿಧವಾದ ಆರೋಗ್ಯಕರ ವಾದ ಆಹಾರವನ್ನು ವ್ಯಾಯಾಮದ ಕಾರ್ಯಕ್ರಮದ ಮೂಲಕ ನೀಡಲಾಗಿತ್ತು ಮತ್ತು ನಿಯಂತ್ರಿತ ಆಹಾರ ಪಡೆಯುವ ಗುಂಪಿಗೆ ಹೋಲಿಸಿದಾಗ ಪಥ್ಯದ ಮೂಲಕ ನೀಡಲಾದ ಆಹಾರವು ದೇಹದ ಕೊಬ್ಬಿನಂಶವನ್ನು ಗಣನೀಯವಾಗಿ ಕಡಿಮೆ ಮಾಡಿರುವುದನ್ನು ತೋರಿಸುವಲ್ಲಿ ವಿಫಲವಾಯಿತು.
  • ಮಕ್ಕಳು ತಾವು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತಿದ್ದೇವೆ ಎಂದು ಕೊಂಡರೂ ಕೂಡ ಅವರು ತೆಗೆದುಕೊಳ್ಳುವ ಕ್ಯಾಲೊರಿಯ ಪ್ರಮಾಣವು ಮಧ್ಯಂತರದ ಸಮಯದಲ್ಲಿ ಕಡಿಮೆಯಾಗು ವುದಿಲ್ಲ. ಇದೇ ಸಮಯದಲ್ಲಿ ಈ ಗುಂಪುಗಳ ನಡುವೆ ಒಂದೇ ಪ್ರಮಾಣದಲ್ಲಿ ಶಕ್ತಿಯು ವ್ಯಯವಾಗುವುದನ್ನು ಗಮನಿಸಲಾಯಿತು. ಪಥ್ಯದಲ್ಲಿ ಕೊಬ್ಬನ್ನು ತೆಗೆದುಕೊಳ್ಳುವುದು ೩೪% ರಿಂದ ೨೭%ನಷ್ಟು ಕಡಿಮೆಯಾಗಿರುವುದನ್ನು ಗಮನಿಸಲಾಯಿತು.[೨೨]
  • ೫,೧೦೬ ಮಕ್ಕಳ ಮೇಲೆ ನಡೆದಂತ ಎರಡನೇಯ ಅಧ್ಯಯನವು ಇದೇ ರೀತಿಯಾದ ಫಲಿಲಾಂಶವನ್ನು ನೀಡಿತು. ಮಕ್ಕಳು ಸುಧಾರಿತವಾದ ಪಧ್ಯವನ್ನು ಸೇವಿಸಿದಾಗಲು ಅವರ ಬಿಎಂಐ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.[೨೩]
  • ಈ ಎಲ್ಲ ಅಧ್ಯಯನಗಳು ಬಾಲ್ಯದ ಸ್ಥೂಲಕಾಯತೆಯನ್ನು ಕಡಿಮೆಗೊಳಿಸಲು ಸಾಕಷ್ಟು ಸಹಾಯ ಮಾಡುವಲ್ಲಿ ವಿಫಲವಾಗಿವೆ. ಏಕಕಾಲದಲ್ಲಿಯೇ ಪ್ರಮುಖವಾದ ಪರಿಣಾಮವನ್ನು ಪಡೆಯಲು ಮೊದಲಿಗೆ ಶಾಲೆಯ ವಾತವರಣದ ಜೊತೆಗೆ ಮನೆ ಹಾಗೂ ಸಮುದಾಯದಲ್ಲಿ ಬದಲಾವಣೆಯನ್ನು ತರಬೇಕು.[೨೪]
  • ಮಕ್ಕಳಿಗೆ ಸಮೃದ್ಧವಾಗಿ ಕ್ಯಾಲೋರಿ ಹೊಂದಿರುವ ಪಾನೀಯಗಳು ಮತ್ತು ಆಹಾರಗಳು ಸಿದ್ಧವಾಗಿಯೇ ದೊರೆಯುತ್ತವೆ. ಸಕ್ಕರೆಯಂಶ ಹೊಂದಿರುವ ಲಘು ಪಾನೀಯಗಳ ಬಳಕೆಯು ಬಾಲ್ಯದ ಸ್ಥೂಲಕಾಯಕ್ಕೆ ಅವಕಾಶ ನೀಡಬಹುದು. ಲಘು ಪಾನೀಯಗಳನ್ನು ಹೆಚ್ಚುವರಿಯಾಗಿ ದಿನ ನಿತ್ಯವು ಬಳಸುತ್ತಿರುವ ೫೪೮ ಮಕ್ಕಳಲ್ಲಿ ೧.೬ ಪಟ್ಟು ಸ್ಥೂಲಕಾಯ ಹೆಚ್ಚಾಗುವ ಸಂಭವವಿದೆ. ಇದಕ್ಕಾಗಿ ೧೯ ತಿಂಗಳಿಗಿಂತ ಹೆಚ್ಚು ಕಾಲ ಮಕ್ಕಳನ್ನು ಅಧ್ಯಯನ ಮಾಡಲಾಗಿದೆ.[೨೫]
  • ಮಕ್ಕಳಿಗೆ ಕ್ಯಾಲೋರಿ ಹೆಚ್ಚಾಗಿರುವ ಸಿದ್ಧ ಸ್ನ್ಯಾಕ್ಸ್‌ಗಳು ಸುಲಭವಾಗಿ ದೊರೆಯುತ್ತವೆ. ಬಾಲ್ಯಾವಸ್ಥೆಯ ಸ್ಥೂಲಕಾಯವು ವ್ಯಾಪಕವಾಗಿ ಹರಡುತ್ತಿದ್ದು, ಶಾಲೆಗಳು ಇರುವಂತಹ ಸ್ಥಳಗಳಲ್ಲಿ ಸ್ನ್ಯಾಕ್ಸ್ ಮಾರುವಂತಹ ಮಷಿನುಗಳನ್ನು ಇಡುವುದನ್ನು ಕಾನೂನಿನ ಮೂಲಕ ಕಡಿಮೆ ಮಾಡಬೇಕು. ಫಾಸ್ಟ್ ಫುಡ್ ದರ್ಶಿನಿಗಳಲ್ಲಿ ೭ ರಿಂದ ೧೨ನೆಯ ದರ್ಜೆಯ ೭೫% ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ತಿನ್ನುವುದು ಸಾಮಾನ್ಯ.[೨೬]
  • ಬಾಲ್ಯದ ಸ್ಥೂಲಕಾಯ ಹೆಚ್ಚಿಸುವಲ್ಲಿ ಫಾಸ್ಟ್ ಫುಡ್ ಉದ್ಯಮಗಳು ಜವಾಬ್ದಾರರಾಗಿವೆ. ಈ ಉದ್ಯಮಗಳು ಹದಿಹರೆಯವರನ್ನು ಗಮನದಲ್ಲಿರಿಸಿಕೊಂಡು $೪೨ ಬಿಲಿಯನ್ ಹಣವನ್ನು ಜಾಹೀರಾತಿನ ಮೇಲೆ ಖರ್ಚು ಮಾಡುತ್ತಾರೆ. ಮ್ಯಾಕ್‌ಡೊನಾಲ್ಡ್ ಒಂದೇ ಹದಿಮೂರು ಜಾಲತಾಣಗಳನ್ನು ಹೊಂದಿದ್ದು ಪ್ರತಿ ತಿಂಗಳು ೩೬೫,೦೦೦ ಮಕ್ಕಳು ಮತ್ತು ೨೯೪,೦೦೦ ಹದಿಹರೆಯದವರು ವೀಕ್ಷಿಸುತ್ತಿದ್ದಾರೆ.
  • ಇದಲ್ಲದೇ, ಫಾಸ್ಟ್ ಫುಡ್ ದರ್ಶಿನಿಗಳು ಮಕ್ಕಳ ಆಹಾರದಲ್ಲಿ ಗೊಂಬೆಗಳನ್ನು ಮಾಡುತ್ತಿದ್ದು ಇದು ಮಕ್ಕಳನ್ನು ಮರಳು ಮಾಡುತ್ತದೆ. ಶೇಕಡ ನಲವತ್ತರಷ್ಟು ಮಕ್ಕಳು ದಿನದ ಆಧಾರ ದ ಮೇಲೆ ತಮ್ಮ ಪೋಷಕರನ್ನು ಫಾಸ್ಟ್ ಫುಡ್ ದರ್ಶಿನಿಗೆ ಕರೆದುಕೊಂಡು ಹೋಗುವಂತೆ ಕೇಳುತ್ತಾರೆ. ಫಾಸ್ಟ್ ಫುಡ್ ಕೇಂದ್ರಗಳಲ್ಲಿ ೩೦೦೦ ಸಂಯುಕ್ತಗಳನ್ನೊಳಗೊಂಡ ಪ್ರಸಿದ್ಧ ಆಹಾರಗಳನ್ನು ಮಕ್ಕಳ ಮೆನುವಿನನಲ್ಲಿ ಅಳವಡಿಸಲಾಗಿರುವುದು ಪರಿಸ್ಥಿತಿಯನ್ನು ಇನ್ನೂ ಕೆಟ್ಟದಾಗಿಸಿದೆ.
  • ಹದಿಹರೆಯದ ಮಕ್ಕಳಿಗಾಗಿ ನೀಡಲು ತಿಳಿಸಿರುವ ಪೋಷಕಾಂಶಗಳಲ್ಲಿ ಕೇವಲ ಹದಿಮೂರು ಮಾತ್ರ ಇದರಲ್ಲಿವೆ.[೨೭]
  • ಕೆಲವೊಂದು ಸಾಹಿತ್ಯಗಳು ಕೂಡ ಫಾಸ್ಟ್ ಫುಡ್ ಸೇವಿಸುವಿಕೆ ಮತ್ತು ಸ್ಥೂಲಕಾಯದ ನಡುವೆ ಸಂಬಂಧವನ್ನು ಸ್ಥಾಪಿಸಿವೆ.[೨೮] ಒಂದು ಅಧ್ಯಯನದ ಪ್ರಕಾರ ಶಾಲೆಗೆ ಸಮೀಪವಿರುವ ಫಾಸ್ಟ್ ಫುಡ್ ಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಸ್ಥೂಲಕಾಯದ ಸಾಧ್ಯತೆಯನ್ನು ಹೆಚ್ಚಿಸಿವೆ.[೨೯]
  • ಒಂದರಿಂದ ಎರಡು ವರ್ಷ ವಯಸ್ಸಿನ ಮಕ್ಕಳು ಸಂಪೂರ್ಣವಾಗಿ ಹಾಲನ್ನು ಸೇವಿಸುವುದು ಮತ್ತು ೨% ಹಾಲು ಸೇವನೆ ಮಾಡುವುದು ಅವರ ತೂಕ, ಎತ್ತರ, ಅಥವಾ ದೇಹದ ಕೊಬ್ಬಿನಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ವಯಸ್ಸಿನ ಮಕ್ಕಳಿಗೆ ಸಂಪೂರ್ಣ ಹಾಲು ಸೇವನೆ ಮಾಡುವಂತೆ ಶಿಫಾರಸ್ಸು ಮಾಡ ಲಾಗಿದೆ. ಹೀಗಿದ್ದರೂ ಹಾಲನ್ನು ಸಿಹಿ ಉಂಟು ಮಾಡಲು ಬೆರೆಸುವ ಸಿಹಿ ಪಾನೀಯವು ಹೆಚ್ಚುವರಿ ತೂಕ ಉಂಟು ಮಾಡುತ್ತದೆ.[೩೦]

ಕುಳಿತೆ ಇರುವ ಜೀವನಶೈಲಿ

[ಬದಲಾಯಿಸಿ]
  • ಮಕ್ಕಳು ದೈಹಿಕ ಚಟುವಟಿಕೆಗಳನ್ನು ನಡೆಸದೆ ಇರುವುದು ಒಂದು ಗಂಭೀರವಾದ ಕಾರಣವಾಗಿದೆ ಮತ್ತು ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು ಸ್ಥೂಲ ಕಾಯ ಬರುವ ಒಂದು ದೊಡ್ಡ ಅಪಾಯಕಾರಿ ಅಂಶವಾಗಿದೆ. ಸಂಶೋಧಕರು ೧೩೩ ಮಕ್ಕಳ ದೈಹಿಕ ಚಟುವಟಿಕೆಗಳನ್ನು ಮೂರು ವಾರಗಳಿಗಿಂತಲು ಹೆಚ್ಚಿನ ಕಾಲ ಅಧ್ಯಯನ ನಡೆಸಿ ಪ್ರತಿಯೊಂದು ಮಗುವಿನ ದೈಹಿಕ ಚಟುವಟಿಕೆಯ ಮಟ್ಟವನ್ನು ವೇಗೋತ್ಕರ್ಷಕ ಮಾಪಕದ ಮೂಲಕ ಅಳತೆ ಮಾಡಿದ್ದಾರೆ.
  • ಇದರಲ್ಲಿ ಕಂಡುಬಂದ ಅಂಶವೆಂದರೆ ಸ್ಥೂಲಕಾಯ ಹೊಂದಿರದ ಮಕ್ಕಳಿಗೆ ಹೋಲಿಸಿದಾಗ ಸ್ಥೂಲಕಾಯದ ಮಕ್ಕಳು ಶಾಲಾ ದಿನಗಳಲ್ಲಿ ೩೫%ಗಿಂತ ಕಡಿಮೆ ಮತ್ತು ವಾರಾಂತ್ಯದಲ್ಲಿ ೬೫%ಕ್ಕಿಂತ ಕಡಿಮೆ ಚಟುವಟಿಕೆ ನಡೆಸುತ್ತಾರೆ. ಮಕ್ಕಳಾಗಿರುವಾಗ ಸೋಮಾರಿಯಾದ ಮಕ್ಕಳು ವಯಸ್ಕರಾದ ನಂತರವು ದೈಹಿಕವಾಗಿ ಚಟುವಟಿಕೆಯನ್ನು ತೋರುವುದಿಲ್ಲ. *೬,೦೦೦ ಜನ ವಯಸ್ಕರ ಮೇಲೆ ನಡೆದಂತಹ ಫಿಟ್‌ನೆಸ್ ಸಮೀಕ್ಷೆಯ ಪ್ರಕಾರ ೧೪ ರಿಂದ ೧೯ ವರ್ಷ ವಯಸ್ಸಿನಲ್ಲಿ ಚಟುವಟಿಕೆ ಹೊಂದಿರದ ೨% ಮಕ್ಕಳಿಗೆ ಹೋಲಿಸಿದಾಗ ಈ ವಯಸ್ಸಿನಲ್ಲಿ ಚಟುವಟಿಕೆಯಿಂದ ಕೂಡಿದ್ದರೆ ವಯಸ್ಕರಾದಾಗಲೂ ಚಟುವಟಿಕೆಯಿಂದ ಕೂಡಿರುತ್ತಾರೆ. ಇವರನ್ನೆ ಈಗಿನ ಕ್ರಿಯಾಶೀಲ ಯುವಜನಾಂಗ ಎಂಬುದನ್ನು ಅಧ್ಯಯನಕಾರರು ಕಂಡು ಕೊಂಡಿದ್ದಾರೆ.[೩೧]
  • ದೈಹಿಕ ಚಟುವಟಿಕೆ ನಡೆಸದೇ ದೇಹದಲ್ಲಿ ಉಳಿದ ಶಕ್ತಿಯು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ. ಸಂಶೋಧಕರು ೧೬ ಜನ ಗಂಡಸರಿಗೆ ೧೪ಕ್ಕಿಂತ ಹೆಚ್ಚು ದಿನಗಳು ಅವರಿಗೆ ದಿನನಿತ್ಯ ಅಗತ್ಯವಿರುವ ಶಕ್ತಿಗಿಂತ ೫೦% ಹೆಚ್ಚಿಗೆ ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ಸ್ ನೀಡಿ ಅಧ್ಯಯನ ನಡೆಸಿದ್ದಾರೆ. ಕಾರ್ಬೋಹೈಡ್ರೆಟ್‌ನ ಹೆಚ್ಚುವರಿ ನೀಡಿಕೆಯು ಶಕ್ತಿಯ ೭೫–೮೫% ಅಧಿಕ ದೇಹದ ಕೊಬ್ಬಿನಂಶವಾಗಿ ಶೇಖರವಾಗುತ್ತದೆ ಮತ್ತು ಕೊಬ್ಬನ್ನು ಹೆಚ್ಚಿಗೆ ನೀಡಿದಾಗ ೯೦–೯೫% ಅಧಿಕ ದೇಹದ ಕೊಬ್ಬಿನಂಶವಾಗಿ ಶೇಖರವಾಗುತ್ತದೆ.[೩೨]
  • ಹಲವಾರು ಮಕ್ಕಳು ಗಣಕಯಂತ್ರದ ಬಳಕೆ, ವಿಡಿಯೋ ಗೇಮ್‌ಗಳು ಅಥವಾ ಟಿವಿ ನೋಡುವುದರಲ್ಲಿ ಸಮಯ ಕಳೆಯುವುದರಿಂದ ವ್ಯಾಯಮ ಮಾಡಲು ವಿಫಲರಾಗುತ್ತಾರೆ. ಟಿವಿ ಅಥವಾ ತಂತ್ರಜ್ಞಾನವು ಮಕ್ಕಳು ದೈಹಿಕ ಚಟುವಟಿಕೆ ನಡೆಸದಂತಿರಲು ಪ್ರಮುಖ ಕಾರಣವಾಗಿದೆ. ಸಂಶೋಧಕರು ೧೪, ೧೬,ಮತ್ತು ೧೮ ವರ್ಷ ವಯಸ್ಸಿನ ೪,೫೬೧ ಮಕ್ಕಳಿಗಾಗಿ ತಂತ್ರಜ್ಞಾನ ಪ್ರಶ್ನಾವಳಿಗಳನ್ನು ಒದಗಿಸಿದ್ದಾರೆ.
  • ಒಂದು ದಿನಕ್ಕೆ ೪ ತಾಸಿಗಿಂತ ಹೆಚ್ಚು ಟಿವಿ ನೋಡಿದಾಗ ೨೧.೫% , ಒಂದು ಅಥವಾ ಹೆಚ್ಚು ತಾಸು ಗಣಕಯಂತ್ರ ಬಳಸಿದಾಗ ೪.೫% ತೂಕ ಅಧಿಕವಾಗಬಹುದು ಮತ್ತು ವಿಡಿಯೋ ಗೇಮ್‌ಗಳ ಆಟವು ತೂಕ ಹೆಚ್ಚಾಗುವ ಸಂಭವನೀಯತೆ ಮೇಲೆ ಯಾವುದೆ ಪರಿಣಾಮ ಬೀರಿಲ್ಲ.[೩೨] ಟಿವಿ ನೋಡುವುದು ಮತ್ತು ಗಣಕಯಂತ್ರ ಬಳಕೆ ಕಡಿಮೆ ಮಾಡುವುದು ವಯಸ್ಸಿಗನುಗುಣವಾಗಿ ಬಿಎಂಐ ಕಡಿಮೆ ಮಾಡಿಕೊಳ್ಳಬಹುದು;
  • ಕಡಿಮೆ ಕ್ಯಾಲೋರಿ ತೆಗೆದುಕೊಳ್ಳುವುದು ಕೂಡ ಬಿಎಂಐ ಕಡಿಮೆಯಾಗಲು ಗಣನೀಯವಾದ ಕೊಡುಗೆ ನೀಡುತ್ತದೆ ಎಂಬುದನ್ನು ಯಾದೃಚ್ಛೀಕರಿದ ಪರೀಕ್ಷೆಯು ತೋರಿಸಿ ಕೊಟ್ಟಿದೆ.[೩೩]
  • ಮನೆಯಲ್ಲಿಯೆ ತಂತ್ರಜ್ಞಾನ ಆಧಾರಿತ ಚಟುವಟಿಕೆಗಳು ಮಾತ್ರ ಬಾಲ್ಯದ ಸ್ಥೂಲಕಾಯಕ್ಕೆ ಪರಿಣಾಮ ಬೀರುವುದಿಲ್ಲ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಕೂಡ ಮಕ್ಕಳ ತೂಕ ಹೆಚ್ಚಳದಲ್ಲಿ ಕಾರಣವಾಗುತ್ತವೆ. ೧೧–೧೨ ವಯಸ್ಸಿನ ೧೯೪ ಮಕ್ಕಳನ್ನು ಮೂರುವಾರಕ್ಕಿಂತ ಹೆಚ್ಚಿಗೆ ಅಧ್ಯಯನ ನಡೆಸಿ ಸಾಮಾಜಿಕ ಆರ್ಥಿಕ ಸ್ಥಾನಮಾನ(ಎಸ್‌ಇಎಸ್) ಮತ್ತು ದೇಹದ ರಚನೆಯ ನಡುವೆ ಸಂಬಂಧವಿದೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.
  • ತೂಕ, ಸೊಂಟದ ಸುತ್ತಳತೆ, ಎತ್ತರವಾಗುವ ಸಾಮರ್ಥ್ಯ,, ಚರ್ಮದ ಮಡಿಕೆ, ದೈಹಿಕ ಚಟುವಟಿಕೆ, ಟಿವಿ ವೀಕ್ಷಣೆ, ಮತ್ತು ಎಸ್‌ಇಎಸ್‌ಗಳನ್ನು ಅಳತೆ ಮಾಡಿದ್ದಾರೆ; ಮೇಲ್ದರ್ಜೆಯ ಮಕ್ಕಳಿಗೆ ಹೋಲಿಸಿದಾಗ ಕೆಳವರ್ಗದ ಮಕ್ಕಳಲ್ಲಿ ಎಸ್‌ಇಎಸ್‌ ಸ್ಪಷ್ಟವಾಗಿ ಇಳಿಮುಖವಾಗಿರುವುದನ್ನು ಸಂಶೋಧಕರು ಕಂಡು ಕೊಂಡಿದ್ದಾರೆ.[೩೪]
  • ಅಮೆರಿಕಾ ಸಂಯುಕ್ತ ಸಂಸ್ಥಾನದ ಮಕ್ಕಳು ಬಾಲ್ಯದಲ್ಲಿ ಕ್ರಿಯಾಶೀಲರಾಗಿಲ್ಲದೆ ಸ್ಥೂಲಕಾಯ ಹೊಂದುವುದಕ್ಕೂ ಅವರು ದೊಡ್ಡವರಾದ ನಂತರ ಅಧಿಕ ತೂಕದಿಂದ ಬಳಲುವುದಕ್ಕೂ ಸಂಬಂಧವಿದೆ. ಶಾಲೆಗೆ ಹೋಗುವ ಮುನ್ನದ ೮೯% ಮಕ್ಕಳ ಶಾಲೆಯ ದಿನ ಪ್ರಾರಂಭ ಕೂಡ ಕುಳಿತುಕೊಳ್ಳುವುದರ ಮೂಲಕ ಮತ್ತು ಹೊರಗಡೆ ಕೂಡ ೫೬ % ಚಟುವಟಿಕೆಗಳು ಕೂಡ ಕುಳಿತುಕೊಳ್ಳುವುದೆ ಆಗಿದೆ ಎಂಬುದನ್ನು ೨೦೦೯ ರ ಪ್ರೀಸ್ಕೂಲ್ ಸಮೀಕ್ಷೆ ಕಂಡು ಹಿಡಿದಿದೆ.
  • ಗೊಂಬೆಗಳು, ಚೆಂಡುಗಳು ದೊರೆಯುವುದರಿಂದ ಮಕ್ಕಳು ಇದರ ಜೊತೆಗೆ ಆಡಲು ಬಯಸುತ್ತಾರೆ ಆದರೆ ಚಟುವಟಿಕೆಯ ಕೊರತೆಗೆ ಮುಖ್ಯವಾದ ಇನ್ನೊಂದು ಕಾರಣವೆಂದರೆ ಶಿಕ್ಷಕರ ಹುರಿದುಂಬಿಸುವಿಕೆ ಇಲ್ಲದಿರುವುದು.[೩೫][೩೫]

ತಳಿ ವಿಜ್ಞಾನ

[ಬದಲಾಯಿಸಿ]
  • ಕೆಲವೊಮ್ಮೆ ಬಾಲ್ಯದ ಸ್ಥೂಲಕಾಯಕ್ಕೆ ಹಲವಾರು ತಳಿವಿಜ್ಞಾನ ಮತ್ತು ವಾತಾವರಣದ ಕೆಲವು ಅಂಶಗಳ ನಡುವಿನ ಪರಸ್ಪರ ಅಂತರ್‌ಕ್ರಿಯೆಯ ಪರಿಣಾಮವು ಆಗಿದೆ. ಹಲವಾರು ವಿಧವಾದ ವಂಶವಾಹಿನಿಗಳಲ್ಲಿನ ಪಾಲಿಮಾರ್ಫಿಸಂಗಳು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲೋರಿಗಳು ಲಭ್ಯವಿದ್ದಾಗ ವ್ಯಕ್ತಿಗಳಲ್ಲಿನ ಹಸಿವು ಮತ್ತು ಚಯಾಪಚಯಕ್ಕೆ ಒಳಪಡದಂತೆ ನಿಯಂತ್ರಿಸಿ ಸ್ಥೂಲಕಾಯಕ್ಕೆ ಕಾರಣವಾಗುತ್ತವೆ.
  • ಕೆಲವೊಂದು ಅಪರೂಪದ ವಂಶವಾಹಿನಿ ಪರಿಸ್ಥಿಗಳಲ್ಲಿ ಸ್ಥೂಲಕಾಯವು ಪ್ರಮುಖವಾದ ಲಕ್ಷಣವಾಗಿದ್ದು ಬಾಲ್ಯದಲ್ಲಿಯೇ ಕಂಡು ಬರುತ್ತವೆ. ಪ್ರೇಡರ್-ವಿಲ್ಲಿ ಸಿಂಡ್ರೋಮ್- ಬದುಕಿರುವ ೧೨,೦೦೦ದಲ್ಲಿ ಒಬ್ಬರಿಗೆ ಮತ್ತು ೧೫,೦೦೦ದಲ್ಲಿ ಒಬ್ಬರಿಗೆ ಬರಬಹುದಾಗಿದೆ. ಇದರ ಲಕ್ಷಣಗಳು ಅಧಿಕ ಹಸಿವು ಮತ್ತು ಆಹಾರದಲ್ಲಿ ತನ್ಮಯತೆಯು ಅಧಿಕವಾದ ತೂಕಕ್ಕೆ ಕಾರಣ ವಾಗುತ್ತದೆ.
  • ಬಾರ್ಡೆಟ್-ಬಿಯೆಲ್-ಸಿಂಡ್ರೋಮ್
  • ಮೊಮೊ ಸಿಂಡ್ರೋಮ್
  • ಲೆಪ್ಟಿನ್ ಗ್ರಾಹಿಗಳ ರೂಪಾಂತರ
  • ಜನ್ಮಜಾತ ಲೆಪ್ಟಿನ್ ಕೊರತೆ
  • ಮೆಲನಾಕೊರ್ಟಿನ್ ಗ್ರಾಹಿ ರೂಪಾಂತರಗಳು
  • ಪ್ರಾರಂಭಿಕ ಹೆಚ್ಚಿನ ಸ್ಥೂಲಕಾಯತೆ ಇರುವ ( ಹತ್ತು ವರ್ಷಕ್ಕಿಂತ ಮೊದಲು ಸ್ಥೂಲ ಕಾಯತೆ ಇರುವುದನ್ನು ಗಮನಿಸಿ ಇದನ್ನು ನಿರ್ಧರಿಸಲಾಗುತ್ತದೆ. ಮೂರು ಗುಣ ಮಟ್ಟದಲ್ಲಿ ದೇಹದ ಒಟ್ಟೂ ತೂಕವನ್ನು ಗಮನಿಸಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಬದಲಾವಣೆಯನ್ನು ಗುರುತಿಸಲಾಗುತ್ತದೆ.) ೭%ನಷ್ಟು ಒಂದು ಹ್ಜಂತದ ಅಧಿಕೃತ ರೂಪಾಂತರವನ್ನು ಗಮನಿಸಬಹುದಾಗಿದೆ.[೩೬]
  • ಸ್ಥೂಲಕಾಯ ಹೊಂದಿರುವ ಪೀಳಿಗೆಯ ಎರಡು ತಂದೆತಾಯಿಯರು ೮೦% ಸ್ಥೂಲಕಾಯ ಹೊಂದಿದ್ದು ಇದಕ್ಕೆ ಭಿನ್ನವಾಗಿ ಸಾಮಾನ್ಯವಾದ ತೂಕವನ್ನು ಹೊಂದಿರುವ ಎರಡು ಪೀಳಿಗೆ ಯ ಪೋಷಕರು ೧೦% ಕ್ಕಿಂತ ಕಡಿಮೆ ಸ್ಥೂಲಕಾಯ ಹೊಂದಿರುತ್ತಾರೆ ಎಂದು ಅಧ್ಯಯನ ಕಂಡು ಹಿಡಿದಿದೆ.[][೨೪] ಪರೀಕ್ಷೆಗೊಳಪಡಿಸಿದ ಜನಸಂಖ್ಯೆಗೆ ಅನುಗುಣವಾಗಿ ೬% ರಿಂದ ೮೫% ಸ್ಥೂಲಕಾಯವು ಅನುವಂಶೀಯತೆಯ ಲಕ್ಷಣವಾಗಿದೆ.[೩೭] ಹೋಲಿಕೆ: ಸೆಕೆಂಡ್‌ ಹ್ಯಾಂಡ್‌ ಸ್ಥೂಲಕಾಯ.

ಮನೆಯ ವಾತಾವರಣ

[ಬದಲಾಯಿಸಿ]
  • ಕುಟುಂಬದ ಊಟ ಕೂಡ ಮಕ್ಕಳ ಆಹಾರದ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧಕರು ೧೧–೨೧ ವರ್ಷ ವಯೋಮಾನದ ೧೮,೧೭೭ ಮಕ್ಕಳಿಗೆ ಮನೆಯಲ್ಲಿ ತಿನ್ನುವ ಆಹಾರದ ಪ್ರಶ್ನಾವಳಿಗಳನ್ನು ನೀಡಿದ್ದರು. ಇದರಲ್ಲಿ ಐವರ ನಾಲ್ಕು ತಂದೆ ತಾಯಿಯರು ಮಕ್ಕಳು ತಮ್ಮ ಆಹಾರವನ್ನು ತಾವೆ ಆರಿಸಿಕೊಳ್ಳಲು ಬಿಟ್ಟಿದ್ದನ್ನು ಕಂಡು ಕೊಂಡರು. ಹದಿವಯಸ್ಕ ಮಕ್ಕಳು ಮನೆಯಲ್ಲಿ ವಾರಕ್ಕೆ ಮೂರು ಅಥವಾ ಅದಕ್ಕಿಂತ ಕಡಿಮೆ ದಿನ ಊಟ ಮಾಡುವ ಮಕ್ಕಳಿಗೆ ಹೋಲಿಸಿದಾಗ ವಾರಕ್ಕೆ ನಾಲ್ಕರಿಂದ ಐದು ಸಲ ಮನೆಯಲ್ಲಿ ಊಟ ಮಾಡುವ ಮಕ್ಕಳು ೧೯%ಕ್ಕಿಂತ ಕಡಿಮೆ ತರಕಾರಿ ಸೇವನೆ, ೨೨% ಕ್ಕಿಂತ ಕಡಿಮೆ ಹಣ್ಣುಗಳ ಸೇವನೆ, ಮತ್ತು ೧೯% ಕ್ಕಿಂತ ಕಡಿಮೆ ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡುವುದು ಕಂಡು ಬಂದಿದೆ.
  • ವಾರಕ್ಕೆ ಆರರಿಂದ ಏಳು ದಿನ ಮನೆಯಲ್ಲಿಯೇ ಊಟ ಮಾಡುವ ಹದಿವಯಸ್ಕರಿಗೆ ಹೋಲಿಸಿದಾಗ ಮೂರು ಅಥವಾ ಅದಕ್ಕಿಂತ ಕಡಿಮೆ ಊಟ ಮಾಡುವ ಮಕ್ಕಳು ೩೮% ಕ್ಕಿಂತ ಕಡಿಮೆ ತರಕಾರಿ ಸೇವನೆ, ೩೧% ಕ್ಕಿಂತ ಕಡಿಮೆ ಹಣ್ಣುಗಳ ಸೇವನೆ, ಮತ್ತು ೨೭% ಕ್ಕಿಂತ ಕಡಿಮೆ ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡುವುದು ಕಂಡು ಬಂದಿದೆ.[೩೮]
  • ೨೦೧೦ ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ ಸಮೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು ಮಕ್ಕಳು ತಮ್ಮ ತಂದೆ ತಾಯಿಯರಿಗಿಂತ ವಯಸ್ಕರಾದಾಗ ತಮ್ಮ ಅಜ್ಜ‌ ಅಜ್ಜಿಯ ರಿಂದ ಸ್ಥೂಲಕಾಯವನ್ನು ಹೆಚ್ಚಿಸಿಕೊಳ್ಳುತ್ತವೆ ಎಂಬುದು ಬಹಿರಂಗವಾಗಿದೆ.[೩೯]
  • ೨೦೧೧ ರಲ್ಲಿ ಅಮೆರಿಕಾದ ಒಂದು ಅಧ್ಯಯನವು ಬಿಡುಗಡೆಯಾಗಿದ್ದು ಹೆಚ್ಚಿಗೆ ಕೆಲಸ ಮಾಡುವ ತಾಯಿಯರ ಮಕ್ಕಳು ಹೆಚ್ಚು ತೂಕವನ್ನು ಅಥವಾ ಸ್ಥೂಲಕಾಯ ಹೊಂದುತ್ತಾರೆ.[೪೦]

ಅಭಿವೃದ್ಧಿಯ ವಿಷಯಗಳು

[ಬದಲಾಯಿಸಿ]
  • ಹಲವಾರು ಅಭಿವೃದ್ಧಿಯ ವಿಷಯಗಳು ಸ್ಥೂಲಕಾಯ ಹೆಚ್ಚಾಗಲು ಕಾರಣವಾಗಿವೆ. ಉದಾಹರಣೆಗೆ ಎದೆ-ಹಾಲುಣಿಸುವುದು ಸ್ಥೂಲಕಾಯದ ವಿರುದ್ಧ ರಕ್ಷಣೆಯನ್ನು ನೀಡಬಹುದು. ಜೊತೆಗೆ ಭವಿಷ್ಯದ ದಿನಗಳಲ್ಲಿ ಅತಿಯಾದ ತೂಕ ಉಂಟಾಗುವಿಕೆಗೆ ತಡೆಯೊಡ್ಡುತ್ತದೆ.[೪೧]
  • ಮಗುವಿನ ದೈಹಿಕ ಬೆಳವಣಿಗೆಯ ರೀತಿಯು ತೂಕವನ್ನು ಹೆಚ್ಚಿಸಲು ಪ್ರಚೋದನೆ ನೀಡಬಹುದು. ಸಂಶೋಧಕರ ತಂಡವು ೮೪೮ ಮಕ್ಕಳ ಸಾಂಘಿಕ ಅಧ್ಯಯನ ನಡೆಸಿ ವರ್ಗೀಕೃತ ವಿಭಾಗದ (ಎಸ್‌ಡಿ[ತೂಕ ಮತ್ತು ಉದ್ದ]) ಅಂಕಿಅಂಶವುಳ್ಳ ಮಾನದಂಡವೊಂದನ್ನು ಸೂಚಿಸಿದ್ದಾರೆ. ಅವರ ಪ್ರಕಾರ, ೦.೬೭ಕ್ಕಿಂತ ಕಡಿಮೆ ಎಸ್‌ಡಿ ಪ್ರಮಾಣವುಳ್ಳ ಶಿಶುಗಳಿಗೆ(ಹೆಚ್ಚಿನ ತೂಕವನ್ನು ಹೊಂದಬಹುದಾದವರು) ಹೋಲಿಸಿದರೆ, ೦.೬೭ಕ್ಕಿಂತ ಹೆಚ್ಚಿನ ಎಸ್‌ಡಿ ಪ್ರಮಾಣವುಳ್ಳ ಮಕ್ಕಳು(ಅತಿ ಹೆಚ್ಚಿನ ತೂಕವನ್ನು ಹೊಂದಲಾರದವರು) ಹೆಚ್ಚಿನ ಬೆಳವಣಿಗೆಯನ್ನು ಹೊಂದಿದ್ದಾರೆ.[೪೨]
  • ಒಂದು ವೇಳೆ ಶಿಶುವಾಗಿದ್ದರೆ ಅದರ ತೂಕವೂ ಕೂಡಾ ಪ್ರಭಾವವನ್ನು ಬೀರುತ್ತದೆ. ಸಂಶೋಧಕರ ತಂಡವು ಏಳು ವರ್ಷದೊಳಗಿನ ೧೯,೩೯೭ ಮಕ್ಕಳ ಅಧ್ಯಯನ ನಡೆಸಿ, ನಾಲ್ಕು ತಿಂಗಳ ದಪ್ಪವಾದ ಮಕ್ಕಳು ಸಹಜ ತೂಕದ ಮಕ್ಕಳಿಗೆ ಹೋಲಿಸಿದರೆ, ಅವರಿಗೆ ಏಳು ವರ್ಷ ತುಂಬುವುದರೊಳಗೆ ೧.೩೮ ಪಟ್ಟು ಹೆಚ್ಚು ತೂಕವನ್ನು ಪಡೆಯುವುದನ್ನು ಕಂಡು ಹಿಡಿದಿದ್ದಾರೆ.
  • ದಪ್ಪವಾಗಿರುವ ಒಂದು ವರ್ಷದ ಮಕ್ಕಳು ಸಾಮಾನ್ಯ ತೂಕದ ಮಕ್ಕಳಿಗೆ ಹೋಲಿಸಿದರೆ ೭ ವರ್ಷದೊಳಗೆ ೧.೧೭ ಪಟ್ಟು ಹೆಚ್ಚು ತೂಕವನ್ನು ಹೊಂದುತ್ತಾರೆ.[೪೩]

ವೈದ್ಯಕೀಯ ಅಸ್ವಸ್ಥತೆ

[ಬದಲಾಯಿಸಿ]
  • ಕುಶಿಂಗ್ಸ್ ಸಿಂಡ್ರೋಮ್(ಅತಿ ಹೆಚ್ಚಿನ ಕಾರ್ಟಿಸೋಲ್ ಪ್ರಮಾಣದ ಸ್ಥಿತಿಯನ್ನು ಹೊಂದಿರುವ ಶರೀರ) ಸಹ ಬಾಲ್ಯಾವಸ್ಥೆಯ ಸ್ಥೂಲಕಾಯಕ್ಕೆ ಕಾರಣವಾಗಬಹುದು. ಸಂಶೋಧಕರು ಅಸಹಜ ಶಸ್ತ್ರ ಚಿಕಿತ್ಸೆಗೆ ಒಳಪಡುತ್ತಿರುವ ೧೬ ವಯಸ್ಕರ ಜೀವಕೋಶಗಳಲ್ಲಿ ಎರಡು ಬಗೆಯ ಐಸೋಫಾರ್ಮ್ಸ್ (ಇತರ ಪ್ರೋಟೀನ್‌ಗಳಂತೆ ಅದೇ ಉದ್ದೇಶವನ್ನು ಹೊಂದಿದ್ದು, ಆದರೆ ವಿಭಿನ್ನವಾದ ಅನುವಂಶೀಯತೆಯ ಪರಿವಿಡಿಗೊಳಪಟ್ಟಿರುವ) ಅನ್ನು ವಿಶ್ಲೇಷಿಸಿದ್ದಾರೆ.
  • ಅವರು ಕಂಡು ಹಿಡಿದ ಪ್ರಕಾರ, ಒಂದು ಜಾತಿಯ ಐಸೋಫಾರ್ಮ್ಸ್, ಒಎಕ್ಸ್‌ಒ- ರಿಡಕ್ಟಸ್‌ನ ನಿರ್ಮಾಣ ಮಾಡುತ್ತದೆ (ಕಾರ್ಟಿಸೋನ್‌ನಿಂದ ಕಾರ್ಟಿಸೋಲ್‌ಗೆ ರೂಪಾಂತರ) ಮತ್ತು ಈ ಗತಿವಿಧಿಯು ೧೨೭.೫ ಪಿಎಮ್‌ಓಎಲ್‌ನ್ನು ಹೆಚ್ಚಿಸುತ್ತದೆ. ಯಾವಾಗ ಒಂದು ಬೇರೆ ಜಾತಿಯ ಐಸೋಫಾರ್ಮ್ಸ್, ಕಾರ್ಟಿಸೋಲ್ ಮತ್ತು ಇನ್ಸುಲಿನ್ ಜೊತೆಗೆ ಕ್ರಿಯೆಯೆನ್ನು ನಡೆಸುತ್ತದೆಯೋ, ಆಗ ಕಾರ್ಟಿಸೋಲ್ ಮತ್ತು ಇನ್ಸುಲಿನ್‌ನ ಗತಿವಿಧಿಯ ಸಂಭವನೀಯತೆಯು ಕುಶಿಂಗ್ ಸಿಂಡ್ರೋಮ್‌ ಅನ್ನು ಸಕ್ರೀಯಗೊಳಿಸುತ್ತದೆ.[೪೪]
  • ಹೈಪೋ ಥೈರಾಯ್ಡಿಸಮ್ ಎಂಬ ಹಾರ್ಮೋನ್ ಸ್ಥೂಲಕಾಯತೆಗೆ ಒಂದು ಕಾರಣವಾಗಿದೆ. ಆದರೆ ಯಾವ ದಪ್ಪವಾದ ವ್ಯಕ್ತಿಗಳಲ್ಲಿ ಇದು ಇರುತ್ತದೆಯೋ ಅಂತಹ ವ್ಯಕ್ತಿಗಳ ಮೇಲೆ ಇದು ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ. ಆದರೆ ಯಾವ ವ್ಯಕ್ತಿಗಳಲ್ಲಿ ಇದು ಇರುವುದಿಲ್ಲವೋ ಅಂತಹ ವ್ಯಕ್ತಿಗಳ ಮೇಲೆ ಇದು ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಹೈಪೋ ಥೈರೈಡಿಸಮ್ ಹೊಂದಿರುವ ೧೦೮ ಸ್ಥೂಲಕಾಯದ ರೋಗಿಗಳನ್ನು ಈ ಸಮಸ್ಯೆಯನ್ನು ಹೊಂದಿರದ ೧೩೧ ಸ್ಥೂಲಕಾಯದವರೊಡನೆ ತುಲನೆ ಮಾಡಲಾಯಿತು.
  • ಇದರಿಂದ ಸಂಶೋಧಕರಿಗೆ ಕಂಡು ಬಂದಿದ್ದೇನೆಂದರೆ ಹೈಪೋಥೈರೈಡಿಸಮ್ ರಹಿತ ರೋಗಿಗಳ ತುಲನೆಯಲ್ಲಿ ಹೈಪೋಥೈರೈಡ್‌ಯುಕ್ತ ರೋಗಿಗಳ ಕ್ಯಾಲೋರಿಯ ಅಂತರ್ಗೃಹಣ ಪ್ರಮಾಣವನ್ನು ಮಾಡಿದ ನಂತರ ಕೇವಲ ೦.೦೭೭ ಪಾಯಿಂಟ್‌ಗಳು ಅಧಿಕವಾಗಿದ್ದವು.[೪೫]

ಮಾನಸಿಕ ಕಾರಣಗಳು

[ಬದಲಾಯಿಸಿ]
  • ಸಂಶೋಧಕರು ೯ರಿಂದ ೧೦ ವರ್ಷ ವಯಸ್ಸಿನ ೧,೫೨೦ ಮಕ್ಕಳನ್ನು ನಾಲ್ಕು ವರ್ಷಗಳ ನಿರಂತರ ಅಧ್ಯಯನ ನಡೆಸಿದ್ದಾರೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅವರಿಗೆ ಕಂಡು ಬಂದಿದ್ದೇನೆಂದರೆ, ಸ್ಥೂಲಕಾಯತೆ ಮತ್ತು ಆತ್ಮಗೌರವದ ಕೊರತೆಯ ನಡುವೆ ಒಂದು ಸಕಾರಾತ್ಮಕ ಸಂಬಂಧವಿದೆ. ಅವರು ಕಂಡುಹಿಡಿದ ಇನ್ನೂ ಒಂದು ವಿಷಯವೇನೆಂದರೆ, ಆತ್ಮವಿಶ್ವಾಸದ ಅಥವಾ ಆತ್ಮ ಗೌರವದ ಕೊರತೆಯಿದಾಗಿ ಆ ಸ್ಥೂಲಕಾಯದ ಮಕ್ಕಳಲ್ಲಿ ೧೯% ಮಕ್ಕಳು ದುಃಖಿತರಾಗಿದ್ದಾರೆ.
  • ಅವರಲ್ಲಿ ೪೮% ಮಕ್ಕಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಮತ್ತು ೨೧% ಮಕ್ಕಳು ಸಂಕೋಚ ಭಾವವನ್ನು ಹೊಂದಿದ್ದಾರೆ. ತುಲನೆಯಲ್ಲಿ, ಸಹಜ ತೂಕದ ಮಕ್ಕಳಲ್ಲಿ ೮% ಮಕ್ಕಳು ದುಃಖಿತರಾಗಿದ್ದಾರೆ. ಅವರಲ್ಲಿ ೪೨% ಮಕ್ಕಳು ಬೇಸರಗೊಂಡಿದ್ದಾರೆ ಮತ್ತು ೧೨% ಮಕ್ಕಳು ಸಂಕೋಚ ಸ್ವಭಾವವನ್ನು ಹೊಂದಿದ್ದಾರೆ.[೪೬]
  • ಒತ್ತಡವೂ ಸಹ ಮಗುವಿನ ತಿನ್ನುವ ಅಭ್ಯಾಸವನ್ನು ಪ್ರಚೋದಿಸುತ್ತದೆ. ಸಂಶೋಧಕರು ೨೮ ಕಾಲೇಜ್ ಹೆಣ್ಣು ಮಕ್ಕಳ ಪರೀಕ್ಷೆ ನಡೆಸಿ ಕಂಡು ಹಿಡಿದ ಪ್ರಕಾರ, ತಿನ್ನುವಿಕೆಯಲ್ಲಿ ಹಿಡಿತ ವನ್ನು ಹೊಂದಿರುವ ಗುಂಪು ಪಡೆದ ೧೫.೧೯ ಅಂಕಗಳಿಗೆ ಹೋಲಿಸಿದರೆ, ಯಾರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೋ ಅವರು ಒತ್ತಡ ಪ್ರಮಾಣದ ಪ್ರಕಾರ ೧೫.೧೯ ಅಂಕಗಳನ್ನು ಪಡೆದರು.[೪೭] ಈ ಆಧಾರವೂ ಕೂಡಾ ತಿನ್ನುವಿಕೆ ಮತ್ತು ಒತ್ತಡದ ನಡುವಿನ ಸಂಬಂಧವನ್ನು ಪುಷ್ಟೀಕರಿಸುತ್ತದೆ.
  • ಖಿನ್ನತೆಯ ಭಾವನೆಗಳೂ ಸಹ ಮಗುವಿನ ಅತಿಯಾದ ತೂಕಕ್ಕೆ ಕಾರಣವಾಗುತ್ತವೆ. ಸಂಶೋಧಕರು ೭ರಿಂದ ೧೨ನೆ ತರಗತಿಯ ೯,೩೭೪ ಕಿಶೋರರ ಮನೆಗಳಿಗೆ ಹೋಗಿ ಸಂದರ್ಶನ ನಡೆಸಿ,ಮಕ್ಕಳ ತಿನ್ನುವಿಕೆ ಮತ್ತು ಒತ್ತಡದ ನಡುವೆ ನೇರವಾದ ಸಂಬಂಧ ಇಲ್ಲವೆಂಬುದನ್ನು ಕಂಡು ಹಿಡಿದಿದ್ದಾರೆ. ತಮ್ಮ ಖಿನ್ನತೆಯನ್ನು ವ್ಯಕ್ತಪಡಿಸಿದ, ಸ್ಥೂಲಕಾಯ ರಹಿತ ೮.೯% ಮಕ್ಕಳಿಗೆ ಹೋಲಿಸಿದರೆ ಎಲ್ಲಾ ಸ್ಥೂಲಕಾಯದ ಕಿಶೋರರಲ್ಲಿ, ೮.೨% ಮಕ್ಕಳು ಖಿನ್ನತೆಯನ್ನು ವ್ಯಕ್ತಪಡಿಸಿದ್ದಾರೆ.[೪೮]
  • ಹೀಗಿದ್ದರೂ, ಆ‍ಯ್‌೦ಟಿಡಿಪ್ರೆಸೆಂಟ್‌ಗಳು ಮಕ್ಕಳ ಸ್ಥೂಲಕಾಯದ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಪ್ರಭಾವ ಬೀರುವಂತೆ ಕಂಡು ಬರುತ್ತದೆ. ಸಂಶೋಧಕರು ೪೮೭ ಅತಿ ತೂಕ/ ಸ್ಥೂಲತೆಯಿಂದ ಪೀಡಿತರಾದ ಜನರಿಗೆ ಖಿನ್ನತೆಗೆ ಸಂಬಂಧಿಸಿದ ಒಂದು ಪ್ರಶ್ನಾವಳಿಯನ್ನು ಮಾಡಿ ಕಂಡು ಕೊಂಡಿದ್ದೇನೆಂದರೆ, ಖಿನ್ನತಾ ರೋಧಿ ಔಷಧಿಗಳನ್ನು ಉಪಯೋಗಿಸುವ, ಖಿನ್ನತೆಯ ಕಡಿಮೆ ಲಕ್ಷಣಗಳುಳ್ಳ ೭% ಜನರ ಬಿಎಮ್‌ಐ ಸ್ಕೋರ್ ೪೪.೩ ಇತ್ತು. ಖಿನ್ನತಾ ರೋಧಿ ಔಷಧಿಗಳ ಉಪಯೋಗ ಮಾಡುವ ಖಿನ್ನತೆಯ ಮಧ್ಯಮ ಲಕ್ಷಣಗಳುಳ್ಳ ೨೭% ಜನರಲ್ಲಿ ಬಿಎಮ್‌ಐ ಸ್ಕೋರ್ ೪೪.೭ ಇತ್ತು ಮತ್ತು ಖಿನ್ನತಾ ರೋಧಿ ಔಷಧಗಳ ಉಪಯೋಗ ಮಾಡುವ ಅಧಿಕ ಖಿನ್ನತೆಯ ಲಕ್ಷಣವುಳ್ಳ ೩೧% ಜನರಲ್ಲಿ ಸರಾಸರಿ ಬಿಎಮ್‌ಐ ಸ್ಕೋರ್ ೪೪.೨ ಇತ್ತು.[೪೯]

ನಿರ್ವಹಣೆ

[ಬದಲಾಯಿಸಿ]

ಜೀವನಶೈಲಿ

[ಬದಲಾಯಿಸಿ]

ಎಲ್ಲಾ ನವಜಾತ ಶಿಶುಗಳಿಗೆ ಅವರ ಪೋಷಣೆ ಮತ್ತು ಇತರ ಲಾಭಕಾರಿ ಪರಿಣಾಮಗಳಿಗಾಗಿ ಸ್ತನ್ಯ ಪಾನದ ಸಲಹೆಯನ್ನು ನೀಡಲಾಗುತ್ತದೆ. ಇದು ನಂತರದ ದಿನಗಳಲ್ಲಿ ಸ್ಥೂಲಕಾಯ ತೆಯ ವಿರುದ್ಧ ರಕ್ಷಣೆಯನ್ನೂ ನೀಡುತ್ತದೆ.[೪೧]

ಔಷಧಗಳು

[ಬದಲಾಯಿಸಿ]
  • ಮಕ್ಕಳಲ್ಲಿನ ಸ್ಥೂಲಕಾಯತೆಗೆ ಯಾವುದೇ ಬಗೆಯ ಚಿಕಿತ್ಸೆಗೆ ಸದ್ಯದಲ್ಲಿ ಅನುಮೋದನೆ ನೀಡಲಾಗಿಲ್ಲ.[೪೧] ಕಿಶೋರರಲ್ಲಿನ ಸ್ಥೂಲ ಕಾಯಕ್ಕೆ ಆರ್ಲಿಸ್ಟಂಟ್ ಮತ್ತು ಸಿಬುಟ್ರಮೈನ್ ಸಿಬುಟ್ರಮೈನ್ ಅನ್ನು೧೬ ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಅನುಮೋದಿಸಲಾಗಿದೆ. ಇದು ತಲೆಯ ರಸಾಯನ ಶಾಸ್ತ್ರದಲ್ಲಿ ಪುನರ್ವ್ಯವಸ್ಥೆ ಮಾಡುವ ಮೂಲಕ ಹಾಗೂ ಹಸಿವನ್ನು ಕಡಿಮೆ ಮಾಡುವ ಮೂಲಕ ಕಾರ್ಯ ನಿರ್ವಹಿಸುತ್ತದೆ.
  • ಓರ್ಲಿಸ್ಟಾಟ್ ಅನ್ನು ೧೨ ವರ್ಷಕ್ಕೂ ಮೇಲ್ಪಟ್ಟ ಕಿಶೋರರಿಗಾಗಿ ಅನುಮೋದಿಸಲಾಗಿದೆ. ಇದು ಕರುಳುಗಳಲ್ಲಿ ಕೊಬ್ಬಿನ ಸಂಗ್ರಹವಾಗುವುದನ್ನು ತಪ್ಪಿಸುತ್ತದೆ.[೫೦]

ಸೋಂಕು ಶಾಸ್ತ್ರ

[ಬದಲಾಯಿಸಿ]
ಅಮೆರಿಕಾ ಸಂಯುಕ್ತ ಸಂಸ್ಥಾನದ 2 ರಿಂದ 19 ವರ್ಷ ವಯಸ್ಸಿನ ಮಕ್ಕಳಲ್ಲಿ ಸ್ಥೂಲಕಾಯ ಹೆಚ್ಚು

೧೯೮೦ ರಿಂದ ೨೦೧೦ ರ ನಡುವೆ ಬಾಲ್ಯಾವಸ್ಥೆಯ ಸ್ಥೂಲಕಾಯದ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ.[೫೧] ಸಧ್ಯದ ಸಂದರ್ಭದಲ್ಲಿ ಜಗತ್ತಿನಾದ್ಯಂತ ಸುಮಾರು ೧೦% ಮಕ್ಕಳು ಅತಿಯಾದ ತೂಕವನ್ನು ಹೊಂದಿದ್ದಾರೆ ಅಥವಾ ಸ್ಥೂಲಕಾಯವನ್ನು ಹೊಂದಿದ್ದಾರೆ.[]

ಕೆನಡಾ

[ಬದಲಾಯಿಸಿ]

ಕೆಲವು ವರ್ಷಗಳಿಂದ ಈಚೆಗೆ ಕೆನಡಾದ ಮಕ್ಕಳಲ್ಲಿ ಅತಿಯಾದ ತೂಕ ಮತ್ತು ಸ್ಥೂಲಕಾಯದ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಗಂಡು ಮಕ್ಕಳಲ್ಲಿ ೧೯೮೦ರಲ್ಲಿ ಇದ್ದ ೧೧%ರ ಪ್ರಮಾಣವು, ೧೯೯೦ರಲ್ಲಿ ೩೦%ಕ್ಕೆ ಹೆಚ್ಚಳವಾಗಿದೆ.[೫೨]

ಬ್ರೆಜಿಲ್‌

[ಬದಲಾಯಿಸಿ]

೧೯೮೦ ರಲ್ಲಿ ಬ್ರೆಝಿಲ್ ಮಕ್ಕಳಲ್ಲಿ ೪% ಪ್ರಮಾಣದಲ್ಲಿ ಕಂಡುಬಂದ ಅತಿಯಾದ ತೂಕ ಮತ್ತು ಸ್ಥೂಲಕಾಯತೆಯ ಪ್ರಮಾಣವು,೧೯೯೦ ರಲ್ಲಿ ೧೪ %ಕ್ಕೆ ಹೆಚ್ಚಳವಾಯಿತು.[೫೨]

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]
  • ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮಕ್ಕಳ ಮತ್ತು ವಯಸ್ಕರ ಸ್ಥೂಲಕಾಯತೆಯ ಪ್ರಮಾಣವು ೧೯೮೦ರ ಆರಂಭದಿಂದ ೨೦೦೦ದ ಅವಧಿಯಲ್ಲಿ ಸರಿಸುಮಾರು ಮೂರು ಪಟ್ಟು ಹೆಚ್ಚಾಗಿತ್ತು. ಆದರೆ ೨೦೦೦ ಮತ್ತು ೨೦೦೬ರ ನಡುವೆ ಈ ಪ್ರಮಾಣವು ಶೇಕಡಾ ೧೭ರಷ್ಟು ಹೆಚ್ಚಾಗಿದ್ದು ಕಂಡು ಬಂದಿದೆ.[೫೩]
  • ೨೦೦೮ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಮಕ್ಕಳ ಅತಿಯಾದ ತೂಕ ಮತ್ತು ಸ್ಥೂಲಕಾಯತೆಯ ಪ್ರಮಾಣವು೩೨%ಗಳಷ್ಟು ಇತ್ತು ಮತ್ತು ಇದು ಇದು ತನ್ನ ಏರುಗತಿಯಲ್ಲಿ ನಿಯಂತ್ರಣವನ್ನು ಕಂಡಿತು.[೫೪]

ಆಸ್ಟ್ರೇಲಿಯಾ

[ಬದಲಾಯಿಸಿ]

೨೧ನೇ ಶತಮಾನದ ಆರಂಭದ ನಂತರದಲ್ಲಿ ಆಸ್ಟ್ರೇಲಿಯಾವು ಕಂಡುಕೊಂಡ ಪ್ರಕಾರ, ಇಲ್ಲಿಯ ಮಕ್ಕಳ ಬಾಲ್ಯಾವಸ್ಥೆಯ ಸ್ಥೂಲಕಾಯವು ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಅನು ಸರಿಸುತ್ತದೆ. ವಿಷಯ ಸಂಗ್ರಹದ ಮುಕ್ತಾಯದ ಪ್ರಕಾರ ಹೆಚ್ಚಳವು, ಪೋಷಕಾಂಷಗಳ ಬಗೆಗಿನ ಶಿಕ್ಷಣದ ಕೊರತೆಯಿಂದ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕೆಳ ಮಟ್ಟದಲ್ಲಿರುವ ಪ್ರದೇಶಗಳಲ್ಲಿ ಇರುವುದನ್ನು ದೋಷವೆಂದು ಪರಿಗಣಿಸಲಾಯಿತು.

ಭಾರತದ ಸಮಾಜದಲ್ಲಿ ಆರ್ಥಿಕವಾಗಿ ಮೇಲ್ದರ್ಜೆಯ ಸ್ತರಗಳಲ್ಲಿ ವಿಲಕ್ಷಣವಾಗಿ ಕಂಡು ಬರುವ ಬಾಲ್ಯಾವಸ್ಥೆಯ ಸ್ಥೂಲಕಾಯವು ಒಂದು ನಿಶ್ಯಬ್ಧ ಸಾಂಕ್ರಾಮಿಕ ರೋಗದಂತಿದೆ.

ಸಂಶೋಧನೆ

[ಬದಲಾಯಿಸಿ]
  • ಆಸ್ಟ್ರೇಲಿಯಾವು ಕೊಲಾಕ್‌ನಲ್ಲಿ, ೨ರಿಂದ ೧೨ವರ್ಷದೊಳಗಿನ ೧೮೦೦ ಮಕ್ಕಳ ಅಧ್ಯಯನ ನಡೆಸಿ, ಅವರಿಗೆ ಮಿತಗೊಳಿಸಿದ ಆಹಾರ ಪದ್ಧತಿಯನ್ನು (ಇದರಲ್ಲಿ ಕಾರ್ಬನೇಟ್‌ಯುಕ್ತ ಪಾನೀಯವಾಗಲೀ ಅಥವಾ ಸಿಹಿತಿಂಡಿಗಳಾಗಲೀ ಇರಲಿಲ್ಲ) ಮತ್ತು ವ್ಯಾಯಮವನ್ನು ಹೆಚ್ಚಿಸಿ ಪರೀಕ್ಷೆ ನಡೆಸಿತು. ಈ ನಡುವೆ ಪರಿಣಾಮಗಳಲ್ಲಿ, ಶಾಲೆಯ ನಂತರದ ಚಟುವಟಿಕೆಗಳಲ್ಲಿ , ೬೮% ಹೆಚ್ಚಳವನ್ನು ತರಲಾಯಿತು.
  • ಟಿವಿ ನೋಡುವ ಪ್ರಮಾಣದಲ್ಲಿ ೨೧%ಕಡಿಮೆ ಮಾಡಲಾಯಿತು ಮತ್ತು ಇದರಲ್ಲಿ ನಿಯಂತ್ರಿತ ಸಮೂಹದ ತುಲನೆಯಲ್ಲಿ, ತೂಕದಲ್ಲಿ ಸರಾಸರಿ ೧ ಕೆ.ಜಿ ಯಷ್ಟು ಇಳಿಕೆ ಕಂಡು ಬಂತು.[೫೫]
  • ಅಮೇರಿಕನ್ ಒಬೆಸಿಟಿ ಅಸೋಸಿಯೇಶನ್‌, ಅತಿಯಾದ ತೂಕವುಳ್ಳ ಮಕ್ಕಳ ಪೋಷಕರ ಮೇಲೆ ಮಾಡಿದ ಅವಲೋಕನ( ಸರ್ವೆ)ಯ ಪ್ರಕಾರ, ಅವರಲ್ಲಿ ಅನೇಕ ಪೋಷಕರು ವಿರಾಮವನ್ನು ಕಡಿಮೆ ಮಾಡಬಾರದು ಅಥವಾ ಯಥಾ ಸ್ಥಿತಿಯಲ್ಲಿ ಇಡಬಾರದು ಎಂದು ಆಲೋಚಿಸುತ್ತಾರೆ. ಅವರಲ್ಲಿ ಸುಮಾರು ೩೦% ಪೋಷಕರು ತಮ್ಮ ಮಕ್ಕಳ ಬಗ್ಗೆ ಚಿಂತಿತ ರಾಗಿದ್ದರೆ, ೩೫% ಪೋಷಕರು, ತಮ್ಮ ಮಕ್ಕಳ ಶಾಲೆಗಳು ಅವರಿಗೆ ಬಾಲ್ಯಾವಸ್ಥೆಯ ಸ್ಥೂಲತೆಯ ಬಗೆಗೆ ಅವರಿಗೆ ಸೂಕ್ತವಾದ ಶಿಕ್ಷಣವನ್ನು ನೀಡುತ್ತಿಲ್ಲವೆಂದು ಯೋಚಿಸುತ್ತಾರೆ, ಮತ್ತು ೫%ಕ್ಕಿಂತ ಹೆಚ್ಚಿನ ಪೋಷಕರು ಬಾಲ್ಯಾವಸ್ಥೆಯ ಸ್ಥೂಲತೆಯು ತಮ್ಮ ಮಕ್ಕಳ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವುದೆಂದು ಆಲೋಚಿಸುತ್ತಾರೆ.[೫೬]
  • ನಾರ್ಥ್‌ವೆಸ್ಟರ್ನ್ ಯುನಿವರ್ಸಿಟಿಸೂಚನೆಯಂತೆ ನಿದ್ರೆಯು, ಮಕ್ಕಳ ಶಾಲೆಯಲ್ಲಿನ ಚಟುವಟಿಕೆ ಮತ್ತು ಅವರ ಸಾಮಾಜಿಕ ಮತ್ತು ಮಾನಸಿಕ ಸೌಖ್ಯದ ಮೇಲೆ ವಿರುದ್ಧ ಪರಿಣಾಮ ವನ್ನು ಬೀರುತ್ತದೆ ಮತ್ತು ಅವರ ಅತಿಯಾದ ತೂಕದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಮೊಟ್ಟ ಮೊದಲು ರಾಷ್ಟ್ರೀಯ ಪ್ರತಿನಿಧಿತ್ವವನ್ನು ಮಾಡಿದ, ನಿದ್ರೆ ಮತ್ತು ಬಾಡಿ ಮಾಸ್ ಇಂಡೆಕ್ಸ್ (ಬಿಎಮ್‌ಐ) ನಡುವಿನ ನೇರ ಸಂಬಂಧ ಮತ್ತು ೩ ರಿಂದ ೧೮ ವರ್ಷಗಳ ನಡುವಿನ ಮಕ್ಕಳಲ್ಲಿ ಅತಿಯಾದ ತೂಕದ ಪ್ರಮಾಣವನ್ನು ಅಧ್ಯಯನ ಮಾಡಿದ ಮೊಟ್ಟ ಮೊದಲ ಅಧ್ಯಯನವಾಗಿದೆ.
  • ಒಂದು ಅದ್ಯಯನದ ಪ್ರಕಾರ ಸಾಮಾನ್ಯ ನಿದ್ದೆಗಿಂತ ಒಂದು ತಾಸು ಹೆಚ್ಚು ನಿದ್ದೆ ಮಾಡುವುದರಿಂದ ಈ ಸ್ಥೂಲಕಾಯತೆಯ ಸಮಸ್ಯೆಯು ಕಡಿಮೆಯಾಗಿರುವುದು ಕಂಡು ಬಂದಿದೆ. ಇದು ೩೬%ರಿಂದ ೩೦% ಇದ್ದದ್ದು ೩೪%ರಿಂದ ೩೦%ಕ್ಕೆ ಇಳಿದಿದೆ.[೫೭]
  • ಒಂದು ಅಧ್ಯಯನದ ಪ್ರಕಾರ, ಬಾಲ್ಯಾವಸ್ಥೆಯ ಸ್ಥೂಲಕಾಯತೆಯಿಂದ ಮುಕ್ತಿ ಹೊಂದಿದ ಮೇಲೆ, ನಂತರದ ಜೀವನದಲ್ಲಿ ತಿನ್ನುವಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.[೫೮]

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಪೀಡಿಯಾಟ್ರಿಕ್ ಒಬೆಸಿಟಿಯ ಅಂತರಾಷ್ಟ್ರೀಯ ದಿನಪತ್ರಿಕೆ
  • ಬಾಲ್ಯದ ಸ್ಥೂಲಕಾಯತೆಯ ಮೇಲೆ ಗಮನವಿಡಲು ಟಾಸ್ಕ್‌ ಫೋರ್ಸ್‌

ಉಲ್ಲೇಖಗಳು‌

[ಬದಲಾಯಿಸಿ]
  1. ೧.೦ ೧.೧ Peter G. Kopelman (2005). [http:// books. google.com/?id=u7RvldSr5M0C&pg=PA87&dq=80+percent+of+ the+offspring+of+two+ obese+parents+ become +obese Clinical obesity in adults and children: In Adults and Children]. Blackwell Publishing. p. 493. ISBN 978-1-4051-1672-5. {{cite book}}: Check |url= value (help)
  2. ೨.೦ ೨.೧ Bessesen DH (2008). "Update on obesity". J. Clin. Endocrinol. Metab. 93 (6): 2027–34. doi:10.1210/jc.2008-0520. PMID 18539769. {{cite journal}}: Unknown parameter |month= ignored (help)
  3. Deurenberg P, Weststrate JA, Seidell JC (1991). "Body mass index as a measure of body fatness: age- and sex-specific prediction formulas". Br. J. Nutr. 65 (2): 105–14. doi:10.1079/BJN19910073. PMID 2043597. {{cite journal}}: Unknown parameter |month= ignored (help)CS1 maint: multiple names: authors list (link)
  4. "Healthy Weight: Assessing Your Weight: BMI: About BMI for Children and Teens". CDC.
  5. Great Britain Parliament House of Commons Health Committee (2004). Obesity - Volume 1 - HCP 23-I, Third Report of session 2003-04. Report, together with formal minutes. London, UK: TSO (The Stationery Office). ISBN 978-0-215-01737-6. Retrieved 2007-12-17. {{cite book}}: Unknown parameter |month= ignored (help)
  6. [೧]
  7. ೭.೦ ೭.೧ "ಬಾಲ್ಯಾವಸ್ಥೆಯ ಸ್ಥೂಲಕಾಯತೆ". Archived from the original on 2015-09-24. Retrieved 2011-04-22.
  8. ಬಾಲ್ಯಾವಸ್ಥೆಯ ಸ್ಥೂಲಕಾಯತೆ: ತೊಡಕುಗಳು - MayoClinic.com
  9. Must A, Jacques PF, Dallal GE, Bajema CJ, Dietz WH (1992). "Long-term morbidity and mortality of overweight adolescents. A follow-up of the Harvard Growth Study of 1922 to 1935". The New England journal of medicine. 327 (19): 1350–5. doi:10.1056/NEJM199211053271904. PMID 1406836. {{cite journal}}: Unknown parameter |month= ignored (help)CS1 maint: multiple names: authors list (link)
  10. Janssen I, Craig WM, Boyce WF, Pickett W (2004). "Associations between overweight and obesity with bullying behaviors in school-aged children". Pediatrics. 113 (5): 1187–94. doi:10.1542/peds.113.5.1187. PMID 15121928.{{cite journal}}: CS1 maint: multiple names: authors list (link)
  11. ೧೧.೦ ೧೧.೧ [57] ^ Obesity.Org Org Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
  12. "ಎಸ್‌ಆರ್‌ಟಿಎಸ್ ಮಾರ್ಗದರ್ಶಿ: ಆರೋಗ್ಯದ ಸಮಸ್ಯೆಗಳು". Archived from the original on 2011-03-21. Retrieved 2011-04-22.
  13. "Obese kids have arteries of 45-year-olds: study". CTV News. Archived from servlet/ ArticleNews/story/CTVNews/20081111/kids_arteries_081111/20081111?hub=TopStories the original on 2014-04-29. Retrieved 2008-11-11. {{cite web}}: Check |url= value (help)
  14. Polotsky AJ, Hailpern SM, Skurnick JH, Lo JC, Sternfeld B, Santoro N (2010). "Association of adolescent obesity and lifetime nulliparity—the Study of Women's Health Across the Nation (SWAN)". Fertil. Steril. 93 (6): 2004–11. doi:10.1016/j.fertnstert.2008.12.059. PMC 2891509. PMID 19185860. {{cite journal}}: Unknown parameter |month= ignored (help)CS1 maint: multiple names: authors list (link)
  15. Cornette R (2008). "The emotional impact of obesity on children". Worldviews Evid Based Nurs. 5 (3): 136–41. doi:10.1111/j.1741-6787.2008.00127.x. PMID 19076912.
  16. Uptodate.com|http://www.uptodate.com/online/content/topic.do?topicKey=pedigast/13911#25
  17. Ebbeling CB, Pawlak DB, Ludwig DS (2002). "Childhood obesity: public-health crisis, common sense cure". Lancet. 360 (9331): 473–82. doi:10.1016/S0140-6736(02)09678-2. PMID 12241736.{{cite journal}}: CS1 maint: multiple names: authors list (link)
  18. Dietz WH (1998). "Health consequences of obesity in youth: childhood predictors of adult disease". Pediatrics. 101 (3 Pt 2): 518–25. PMID 12224658.
  19. Speiser PW, Rudolf MC, Anhalt H; et al. (2005). "Childhood obesity". J. Clin. Endocrinol. Metab. 90 (3): 1871–87. doi:10.1210/jc.2004-1389. PMID 15598688. {{cite journal}}: Explicit use of et al. in: |author= (help)CS1 maint: multiple names: authors list (link)
  20. Kimm SY, Obarzanek E (2002). "Childhood obesity: a new pandemic of the new millennium". Pediatrics. 110 (5): 1003–7. doi:10.1542/peds.110.5.1003. PMID 12415042.
  21. Miller J, Rosenbloom A, Silverstein J (2004). "Childhood obesity". J. Clin. Endocrinol. Metab. 89 (9): 4211–8. doi:10.1210/jc.2004-0284. PMID 15356008.{{cite journal}}: CS1 maint: multiple names: authors list (link)
  22. Caballero B, Clay T, Davis SM; et al. (2003). "Pathways: a school-based, randomized controlled trial for the prevention of obesity in American Indian schoolchildren". Am. J. Clin. Nutr. 78 (5): 1030–8. PMID 14594792. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  23. Nader PR, Stone EJ, Lytle LA; et al. (1999). "Three-year maintenance of improved diet and physical activity: the CATCH cohort. Child and Adolescent Trial for Cardiovascular Health". Arch Pediatr Adolesc Med. 153 (7): 695–704. PMID 10401802. Archived from the original on 2009-02-02. Retrieved 2011-04-22. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  24. ೨೪.೦ ೨೪.೧ Kolata,Gina (2007). Rethinking Thin: The new science of weight loss — and the myths and realities of dieting. Picador. ISBN 978-0-312-42785-6.
  25. James J, Kerr D (2005). "Prevention of childhood obesity by reducing soft drinks". Int J Obes (Lond). 29 (Suppl 2): S54–7. doi:10.1038/sj.ijo.0803062. PMID 16385753.
  26. French SA, Story M, Neumark-Sztainer D, Fulkerson JA, Hannan P (2001). "Fast food restaurant use among adolescents: associations with nutrient intake, food choices and behavioral and psychosocial variables". Int. J. Obes. Relat. Metab. Disord. 25 (12): 1823–33. doi:10.1038/sj.ijo.0801820. PMID 11781764.{{cite journal}}: CS1 maint: multiple names: authors list (link)
  27. ಟ್ರೇಸಿ, ಬೆನ್. "ಫಾಸ್ಟ್‌ ಫುಡ್ ರೆಸ್ಟೊರೆಂಟ್ಸ್‌ ನಾಟ್‌ ಫೈಟಿಂಗ್‌ ಚೈಲ್ಡ್‌ ಒಬೆಸಿಟಿ-ಸಿಬಿಎಸ್ ಇವನಿಂಗ್‌ ನ್ಯೂಸ್‌-ಸಿಬಿಎಸ್ ನ್ಯೂಸ್‌." ವಿರಾಮದ ಸುದ್ದಿಯ ಮುಖ್ಯಾಂಶಗಳು: ಉದ್ಯೋಗ ಮನರಂಜನೆ ಮತ್ತು ಜಗತ್ತಿನ ಸುದ್ದಿ - ಸಿಬಿ ಎಸ್ ಸುದ್ದಿ ಸಿಬಿಎಸ್ ಸಂಜೆಯ ಸುದ್ದಿ, ೮ ನವೆಂಬರ್ ೨೦೧೦. ಜಾಲ. ೨೨ Nov. ೨೦೧೦. <http://www.cbsnews.com/stories/2010/11/08/eveningnews/main7035550.shtml Archived 2011-04-23 ವೇಬ್ಯಾಕ್ ಮೆಷಿನ್ ನಲ್ಲಿ.>.
  28. Thompson OM, Ballew C, Resnicow K; et al. (2004). "Food purchased away from home as a predictor of change in BMI z-score among girls". Int. J. Obes. Relat. Metab. Disord. 28 (2): 282–9. doi:10.1038/sj.ijo.0802538. PMID 14647177. {{cite journal}}: Explicit use of et al. in: |author= (help)CS1 maint: multiple names: authors list (link)
  29. Davis B, Carpenter C (2008). "Proximity of Fast-Food Restaurants to Schools and Adolescent Obesity". Am J Public Health. 99 (3): 505. doi:10.2105/AJPH.2008.137638. PMID 19106421. {{cite journal}}: Unknown parameter |month= ignored (help)
  30. Allen RE, Myers AL (2006). "Nutrition in toddlers". American Family Physician. 74 (9): 1527–32. PMID 17111891. {{cite journal}}: Unknown parameter |month= ignored (help)
  31. Ortega FB, Ruiz JR, Castillo MJ, Sjöström M (2007). "Physical fitness in childhood and adolescence: a powerful marker of health". Int J Obes (Lond). 23 (1): 1–11. doi:10.1038/sj.ijo.0803774. PMID 18043605.{{cite journal}}: CS1 maint: multiple names: authors list (link)
  32. ೩೨.೦ ೩೨.೧ Horton TJ, Drougas H, Brachey A, Reed GW, Peters JC, Hill JO (1995). "Fat and carbohydrate overfeeding in humans: different effects on energy storage". Am. J. Clin. Nutr. 62 (1): 19–29. PMID 7598063.{{cite journal}}: CS1 maint: multiple names: authors list (link)
  33. Epstein LH, Roemmich JN, Robinson JL; et al. (2008). "A randomized trial of the effects of reducing television viewing and computer use on body mass index in young children". Arch Pediatr Adolesc Med. 162 (3): 239–45. doi:10.1001/archpediatrics.2007.45. PMC 2291289. PMID 18316661. Archived from the original on 2009-02-02. Retrieved 2011-04-22. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  34. Lluch A, Herbeth B, Méjean L, Siest G (2000). "Dietary intakes, eating style and overweight in the Stanislas Family Study". Int. J. Obes. Relat. Metab. Disord. 24 (11): 1493–9. doi:10.1038/sj.ijo.0801425. PMID 11126347.{{cite journal}}: CS1 maint: multiple names: authors list (link)
  35. ೩೫.೦ ೩೫.೧ "The Inactivity Of Preschoolers Amid Rising Childhood Obesity". Medical News Today. February 2009. Archived from the original (Summarized from Child Development, Vol. 80, Issue 1, Social and Environmental Factors Associated with Preschoolers' Non-sedentary Physical Activity by Brown, WH (University of South Carolina), Pfeiffer, KA (Michigan State University), McIver, KL (East Carolina University), Dowda, M, Addy, CL, and Pate, RR (University of South Carolina).) on ಫೆಬ್ರವರಿ 11, 2009. Retrieved September 25, 2010. {{cite web}}: Cite has empty unknown parameter: |coauthors= (help)
  36. Farooqi S, O'Rahilly S (2006). "Genetics of obesity in humans". Endocr. Rev. 27 (7): 710–18. doi:10.1210/er.2006-0040. PMID 17122358. Archived from the original on 2010-07-10. Retrieved 2011-04-22. {{cite journal}}: Unknown parameter |month= ignored (help)
  37. Yang W, Kelly T, He J (2007). "Genetic epidemiology of obesity". Epidemiol Rev. 29: 49–61. doi:10.1093/epirev/mxm004. PMID 17566051.{{cite journal}}: CS1 maint: multiple names: authors list (link)
  38. Videon TM, Manning CK (2003). "Influences on adolescent eating patterns: the importance of family meals". J Adolesc Health. 32 (5): 365–73. doi:10.1016/S1054-139X(02)00711-5. PMID 12729986.
  39. "Grandparents 'boost obesity risk'". BBC News. 2010-02-15. Retrieved 2010-04-28.
  40. "Childhood obesity risk tied to amount of work mother does lineup announced". Sydney Morning Hearld. 8 February 2011. Retrieved 8 February 2011.
  41. ೪೧.೦ ೪೧.೧ ೪೧.೨ "North American Society for Pediatric Gastroenterology, Hepatology and Nutrition". Archived from the original (PDF) on 2016-03-04. Retrieved 2014-08-05.
  42. Ong KK, Ahmed ML, Emmett PM, Preece MA, Dunger DB (2000). "Association between postnatal catch-up growth and obesity in childhood: prospective cohort study". BMJ. 320 (7240): 967–71. doi:10.1136/bmj.320.7240.967. PMC 27335. PMID 10753147.{{cite journal}}: CS1 maint: multiple names: authors list (link)
  43. Stettler N, Zemel BS, Kumanyika S, Stallings VA (2002). "Infant weight gain and childhood overweight status in a multicenter, cohort study". Pediatrics. 109 (2): 194–9. doi:10.1542/peds.109.2.194. PMID 11826195.{{cite journal}}: CS1 maint: multiple names: authors list (link)
  44. Bujalska IJ, Kumar S, Stewart PM (1997). "Does central obesity reflect "Cushing's disease of the omentum"?". Lancet. 349 (9060): 1210–3. doi:10.1016/S0140-6736(96)11222-8. PMID 9130942.{{cite journal}}: CS1 maint: multiple names: authors list (link)
  45. Tagliaferri M, Berselli ME, Calò G; et al. (2001). "Subclinical hypothyroidism in obese patients: relation to resting energy expenditure, serum leptin, body composition, and lipid profile". Obes. Res. 9 (3): 196–201. doi:10.1038/oby.2001.21. PMID 11323445. {{cite journal}}: Explicit use of et al. in: |author= (help)CS1 maint: multiple names: authors list (link)
  46. Strauss RS (2000). "Childhood obesity and self-esteem". Pediatrics. 105 (1): e15. doi:10.1542/peds.105.1.e15. PMID 10617752.
  47. Ogg EC, Millar HR, Pusztai EE, Thom AS (1997). "General practice consultation patterns preceding diagnosis of eating disorders". Int J Eat Disord. 22 (1): 89–93. doi:10.1002/(SICI)1098-108X(199707)22:1<89::AID-EAT12>3.0.CO;2-D. PMID 9140741.{{cite journal}}: CS1 maint: multiple names: authors list (link)
  48. Goodman E, Whitaker RC (2002). "A prospective study of the role of depression in the development and persistence of adolescent obesity". Pediatrics. 110 (3): 497–504. doi:10.1542/peds.110.3.497. PMID 12205250.
  49. Dixon JB, Dixon ME, O'Brien PE (2003). "Depression in association with severe obesity: changes with weight loss". Arch. Intern. Med. 163 (17): 2058–65. doi:10.1001/archinte.163.17.2058. PMID 14504119.{{cite journal}}: CS1 maint: multiple names: authors list (link)
  50. ಬಾಲ್ಯಾವಸ್ಥೆಯ ಸ್ಥೂಲಕಾಯತೆ: ಉಪಚಾರಗಳು ಮತ್ತು ಔಷಧಗಳು - ಮಯೋಕ್ಲಿನಿಕ್.ಕಾಮ್
  51. Han JC, Lawlor DA, Kimm SY (2010). "Childhood obesity". Lancet. 375 (9727): 1737–48. doi:10.1016/S0140-6736(10)60171-7. PMID 20451244. {{cite journal}}: Unknown parameter |month= ignored (help)CS1 maint: multiple names: authors list (link)
  52. ೫೨.೦ ೫೨.೧ Flynn MA, McNeil DA, Maloff B; et al. (2006). "Reducing obesity and related chronic disease risk in children and youth: a synthesis of evidence with 'best practice' recommendations". Obes Rev. 7 (Suppl 1): 7–66. doi:10.1111/j.1467-789X.2006.00242.x. PMID 16371076. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  53. Ogden CL, Carroll MD, Flegal KM (2008). "High body mass index for age among US children and adolescents, 2003–2006". JAMA. 299 (20): 2401–5. doi:10.1001/jama.299.20.2401. PMID 18505949. {{cite journal}}: Unknown parameter |month= ignored (help)CS1 maint: multiple names: authors list (link)
  54. ಸಂಯುಕ್ತ ರಾಷ್ಟ್ರಗಳ ಬಾಲ್ಯಾವಸ್ಥೆಯ ಸ್ಥೂಲಕಾಯತೆಯ ಪ್ರಮಾಣಗಳ ಹಂತದ ನಿಯಂತ್ರಣ
  55. " 24/ 1156012648038.html ಒಬೆಸಿಟಿ ಸ್ಟಡಿ ಬಿಯರ್ಸ್ ಫ್ರೂಟ್t", ಜಾಮಿ ಒಲಿವರ್ , ೨೪ ಆಗಸ್ಟ್ ೨೦೦೬.
  56. ಪೋಷಕರ, ತಮ್ಮ ಮಕ್ಕಳ ತೂಕದ ಬಗೆಗಿನ ಗೃಹಿಕೆಯ ಅವಲೋಕನ Archived 2007-10-17 ವೇಬ್ಯಾಕ್ ಮೆಷಿನ್ ನಲ್ಲಿ., ಅಮೇರಿಕನ್ ಒಬೆಸಿಟಿ ಅಸೋಸಿಯೇಶನ್. ಆಗಸ್ಟ್ ೨೦೦೦. ೨೦೦೬-೧೧-೨೧ರಂದು ಮರು ಸಂಪಾದಿಸಲಾಗಿದೆ.
  57. Snell, Emily (January/February). "Sleep and the Body Mass Index and Overweight Status of Children and Adolescents". Child Development. 78 (1). Society for Research in Child Development's: 309–23. doi:10.1111/j.1467-8624.2007.00999.x. PMID 17328707. {{cite journal}}: Check date values in: |date= and |year= / |date= mismatch (help); Unknown parameter |coauthors= ignored (|author= suggested) (help)
  58. "How To Deal With Overweight/Obese Children". Sydney Morning Hearld. 19 October 2010. Retrieved 20 October 2010.


ಬಾಹ್ಯ ಕೊಂಡಿಗಳು‌

[ಬದಲಾಯಿಸಿ]