ವಿಷಯಕ್ಕೆ ಹೋಗು

ಮೀರಾ ನಾಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mira Nair

Nair at the 2008 IIFW Masterclass Directors Meet
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1957-10-15) ಅಕ್ಟೋಬರ್ ೧೫, ೧೯೫೭ (ವಯಸ್ಸು ೬೭)
Rourkela, Orissa, India
ವೃತ್ತಿ Film director, film producer
ಪತಿ/ಪತ್ನಿ Mitch Epstein (divorced)
Mahmood Mamdani (1988–present)

ಮೀರಾ ನಾಯರ್ (ಜನನ ಅಕ್ಟೋಬರ್ 15, 1957) ಇವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಗಿದ್ದು ನ್ಯುಯಾರ್ಕ್ ದಲ್ಲಿ ನೆಲೆಯಾಗಿದ್ದಾರೆ.[] ಅವರ ನಿರ್ಮಾಣ ಸಂಸ್ಥೆ ಹೆಸರು ಮೀರಾಬಾಯಿ ಫಿಲಮ್ಸ್ ಎಂದಿದೆ.

ಅವರು ದೆಹಲಿ ಯುನ್ವರ್ಸಿಟಿ ಮತ್ತು ಹಾರ್ವರ್ಡ್ ಯುನ್ವರ್ಸಿಟಿಗಳಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಅವರ ಚೊಚ್ಚಲ ಚಿತ್ರ, ಸಲಾಮ್ ಮುಂಬಯಿ! (1988),ರಲ್ಲಿ ಅದುಕೇಯನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಗೊಲ್ಡನ್ ಕ್ಯಾಮೆರಾ ಪ್ರಶಸ್ತಿ ಗಿಟ್ಟಿಸಿಕೊಂಡಿತು.ಅದಲ್ಲದೇ ಅಕಾಡಮಿ ಅವಾರ್ಡ್ ಫಾರ್ ಬೆಸ್ಟ್ ಫಾರೆನ್ ಲ್ಯಾಂಗ್ವೇಜ್ ಫಿಲ್ಮ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರವೆನಿಸಿದೆ. ಈ ಚಿತ್ರದ ಮೂಲಕ ಅವರು ಬೀದಿ ಮಕ್ಕಳ ಸಲುವಾಗಿ ಸಂಘಟನೆಯೊಂದನ್ನು ಹುಟ್ಟುಹಾಕಿದರು.ಅದನ್ನು ಸಲಾಮ್ ಬಾಲಕ್ ಟ್ರಸ್ಟ್ ಎಂದು ಭಾರತದಲ್ಲಿ ಅಸ್ತಿತ್ವಕ್ಕೆ ತಂದರು.[] ಅವರು ಸಾಮಾನ್ಯವಾಗಿ ಸುದೀರ್ಘ ಕಾಲದಿಂದಲೂ ಸೃಜನಾತ್ಮಕ ಸಹಭಾಗಿ,ಚಿತ್ರಕಥೆ ಬರೆಹಗಾರ ಸೋನಿ ತಾರಾಪೊರೆವಾಲಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.ಆಕೆ ಅವರನ್ನು ಹಾರ್ವರ್ಡ್ ನಲ್ಲಿ ಭೇಟಿಯಾಗಿದ್ದರು.

ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಅದರಲ್ಲಿಯೂ ನ್ಯಾಶನಲ್ ಫಿಲ್ಮ್ ಅವಾರ್ಡ್ ಮತ್ತು ವಿವಿಧ ಅಂತರರಾಷ್ತ್ರೀಯ ಚಲನಚಿತ್ರ ಉತ್ಸವ ಪ್ರಶಸ್ತಿಗಳು,ಅಲ್ಲದೇ ಅಕಾಡೆಮಿ ಅವಾರ್ಡ್ ಗಳಿಗೆ ಅವರು ನಾಮನಿರ್ದೇಶನಗೊಂಡಿದ್ದಾರೆ,ಪ್ರಮುಖವಾಗಿ ಗೊಲ್ಡನ್ ಗ್ಲೋಬ್ಸ್ BAFTA ಅವಾರ್ಡ್ಸ್ ಮತ್ತು ಫಿಲ್ಮ್ ಫೇರ್ ಅವಾರ್ಡ್ಸ್ ಇತ್ಯಾದಿಗಳಿಗೆ ಅವರ ಚಿತ್ರಗಳು ಪರಿಗಣನೆಗೆ ಬಂದಿವೆ. ಅವರು ಇಂಡಿಯಾ ಅಬ್ರಾಡ್ ಪರ್ಸನ್ ಎಂಬ 2007 ರ ವಾರ್ಷಿಕ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದಾರೆ.ಇದನ್ನು ಪೆಪ್ಸಿಕೊ ಇಂಕಾದ ಅಧ್ಯಕ್ಷ ಮತ್ತು ಸಿಇಒ ಇಂದ್ರ ನೂಯಿ ಅವರು ಪ್ರದಾನ ಮಾಡಿದ್ದಾರೆ.ಅದಲ್ಲದೇ ಇಂಡಿಯಾ ಅಬ್ರಾಡ್ ಪರ್ಸನ್ ಎಂದು 2006 ರ ವಾರ್ಷಿಕ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾರೆ.[]

ಅವರ ಇತ್ತೀಚಿನ ಚಲನಚಿತ್ರಗಳೆಂದರೆ ವ್ಯಾನಿಟಿ ಫೇರ್ ಇದನ್ನು ರೀಸೆ ಉಯಿದರ್ ಸ್ಪೂನ್ ಜೊತೆ,ದಿ ನೇಮ್ಸೇಕ್ ಮತ್ತು ಅಮೆಲಿಯಾ ಸೇರಿವೆ.[]

ಆರಂಭಿಕ ಜೀವನ

[ಬದಲಾಯಿಸಿ]

ಮೀರಾ ನಾಯರ್ ಅವರು ಭಾರತದ ರಾಜ್ಯ ಒಡಿಸ್ಸಾದ ರೂರ್ಕೆಲಾದಲ್ಲಿ ಒಂದು ಪಂಜಾಬಿ ಖತ್ರಿ ಕುಟುಂಬದಲ್ಲಿ ಜನಿಸಿದ್ದಾರೆ,ಒಡಿಸ್ಸಾದಲ್ಲಿ ಅವರ ತಂದೆ ಕೆಲಸ ಮಾಡುತ್ತಿದ್ದರು.[] ಮಧ್ಯಮ ವರ್ಗದ ಕುಟುಂಬವೊಂದರಲ್ಲಿನ ಮೂರನೆಯ ಕಿರಿಯ ಮಗುವಾಗಿ ಅವರು ಜನಿಸಿದ್ದಾರೆ. ಅವರ ತಂದೆ ನಾಗರಿಕ ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಸುತ್ತಿದ್ದರೆ ತಾಯಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.

ಮೀರಾ ತಮ್ಮ ಆರಂಭಿಕ ಶಾಲಾಶಿಕ್ಷಣವನ್ನು ಹಿಮಾಚಲ ರಾಜ್ಯದ ಶಿಮ್ಲಾದಲ್ಲಿನ ಬೋರ್ಡಿಂಗ್ ಸ್ಕೂಲ್ ಲೊರೆಟೊ ಕಾನ್ವೆಂಟ್ ತಾರಾ ಹಾಲ್ ನಲ್ಲಿ ಮುಗಿಸಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಲ್ಲಿ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.ಅಲ್ಲಿ ಅವರು ರಾಜಕೀಯ ಕುರಿತಾದ ಬೀದಿ ನಾಟಕ ಮತ್ತು ಸುಮಾರು ಮೂರು ವರ್ಷಗಳ ಕಾಲ ಹವ್ಯಾಸಿ ರಂಗಕಲಾವಿದೆಯಾಗಿಯೂ ನಾಟಕ ಕಂಪನಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ನಂತರ 1976 ರಲ್ಲಿ ಅವರು ವಿದ್ಯಾರ್ಥಿ ವೇತನ ಪಡೆದು US[] ಗೆ ತೆರಳಿ ಹಾರ್ವರ್ಡ್ ನಲ್ಲಿ ತಮ್ಮ ಸಮಾಜಶಾಸ್ತ್ರದಲ್ಲಿನ ಉನ್ನತ ಶಿಕ್ಷಣ ಮುಂದುವರೆಸಿದರು.[] ಆಕೆ ಹಾರ್ವರ್ಡ್ ನಲ್ಲಿ ತಮ್ಮ ಪತಿ ಛಾಯಾಗ್ರಾಹಕ ಮಿಚ್ ಎಪ್ಸ್ಟಿನ್ ಹಾಗು ಚಿತ್ರಕಥೆ ಬರೆಹಗಾರ ಸೂನಿ ತಾರಾಪೊರೆವಾಲಾ ಅವರನ್ನು ಭೇಟಿಯಾದರು.ಹೀಗೆ ನಿಧಾನವಾಗಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಮೂಲಕ ಪ್ರವರ್ಧನಮಾನಕ್ಕೆ ಬಂದರು.

ವೃತ್ತಿಜೀವನ

[ಬದಲಾಯಿಸಿ]

ಆರಂಭದಲ್ಲಿ ಅವರ ವೃತ್ತಿ ಜೀವನವು ಚಲನಚಿತ್ರದ ಕಲಾವಿದರಾಗಿ ಸುರುವಾದರೂ,ನಾಯರ್ ನಾಲ್ಕು ಟೆಲೆವಿಜನ್ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು. ಇಂಡಿಯಾ ಕ್ಯಾಬರೆ ಎಂಬ ಚಲನಚಿತ್ರವು ಮುಂಬಯಿ ನೈಟ್ ಕ್ಲಬ್ ಗಳಲ್ಲಿ ನಗ್ನವಾಗುವ ಸತ್ಯಗಳನ್ನು ಬಿಚ್ಚಿಟ್ಟ ಕಥಾನಕ, ಬ್ಲ್ಯು ರಿಬ್ಬನ್ ಪ್ರಶಸ್ತಿ ಪಡೆದುಕೊಂಡಿತು.ಅಮೆರಿಕನ್ ಫಿಲ್ಮ್ ಫೆಸ್ಟಿವಲ್ ನ 1986 ರ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಸಲಾಮ್ ಮುಂಬಯಿ! (1988)ಇದರ ಚಿತ್ರಕಥೆ ಸೂನಿ ತಾರಾಪೊರೆವಾಲಾ,ಬರೆದಿದ್ದಾರೆ,ಈ ಚಿತ್ರವು ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಫಾರೆನ್ ಲ್ಯಾಂಗ್ವೇಜ್ ಫಿಲ್ಮ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆಯಿತು.ಇದರೊಂದಿಗೆ ಹಲವು ಪ್ರಶಸ್ತಿಗಳನ್ನೂ ಪಡೆಯಿತು. ಇಂದು ಈ ಚಲನಚಿತ್ರವು ಅಭೂತಪೂರ್ವ ಶ್ರೇಷ್ಠ ಮಟ್ಟದ ಚಿತ್ರವೆನಿಸಿದ್ದು, ಚಲನಚಿತ್ರ ವಿದ್ಯಾರ್ಥಿಗಳಿಗೆ ಇದು ಮಾದರಿ ಪಾಠವೆನಿಸಿದೆ.

ಆಗ 1991 ರಲ್ಲಿ ಮಿಸ್ಸಿಸ್ಸಿಪಿ ಮಸಾಲಾ ಚಿತ್ರವು ಡೆಂಜೆಲ್ ವಾಶಿಂಗ್ಟನ್ ಮತ್ತು ಸರಿತಾ ಚೌಧರಿ ಅವರ ಅಭಿನಯದ ಇದು ಉಗಾಂಡಾದಲ್ಲಿನ-ಭಾರತೀಯರು ಮಿಸ್ಸಿಸ್ಸಿಪ್ಪಿಯಲ್ಲಿ ಹೇಗೆ ಬದುಕುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆಂಬುದರ ಚಿತ್ರಣವಾಗಿತ್ತು. ಇದರ ಚಲನಚಿತ್ರ ಕಥೆ-ಸಂಭಾಷಣೆಯನ್ನು ಮತ್ತೆ ಅವರೇ ಸೂನಿ ತಾರಾಪೊರೆವಾಲಾರೆ ಬರೆದಿದ್ದರೆ,ಮೈಕೆಲ್ ನೊಜಿಕ್ ಅದರ ನಿರ್ಮಾಪಕರಾಗಿದ್ದರು. ಅವರು 1995 ರಲ್ಲಿ ದಿ ಪೆರೆಜ್ ಫ್ಯಾಮಿಲಿ ಕೃತಿ ಆಧರಿಸಿದ ಕಥೆಯನ್ನುಚಲನಚಿತ್ರ ನಿರ್ಮಾಣಕ್ಕೆ ಅಳವಡಿಸಿ ಕೊಂಡಿದ್ದರು.ಕ್ರಿಸ್ಟೈನ್ ಬೆಲ್ ಈ ಕೃತಿ ರಚನೆಕಾರರಾಗಿದ್ದಾರೆ. ಈ ಚಲನಚಿತ್ರದಲ್ಲಿ ಮರಿಸಾ ಟೊಮಿಯ್,ಅಲ್ಫ್ರೈಡ್ ಮೊಲಿನಾ, ಮತ್ತು ಎಂಜಿಲಿಕಾ ಹುಸ್ಟನ್,ಅಭಿನಯಿಸಿದ್ದರು, ಅಲ್ಲದೇ ಮೈಕೆಲ್ ನೊಜಿಕ್ ಅವರೇ ಮತ್ತೆ ಇದಕ್ಕೆ ನಿರ್ಮಾಪಕರಾಗಿದ್ದರು.

ಆಕೆ ಅದರ ನಿರ್ದೇಶಕರಾಗಿದ್ದರಲ್ಲದೇ ಈ ಚಿತ್ರವುKama Sutra: A Tale of Love 16 ನೆಯ ಶತಮಾನದಲ್ಲಿನ ಭಾರತದ ಕಥಾನಕದ ಚಿತ್ರಣವಾಗಿತ್ತು. ಮೈ ಓನ್ ಕಂಟ್ರಿ ಇದರಲ್ಲಿ ನವೀನ್ ಅಂಡ್ರಿವ್ಸ್ ನಟಿಸಿದ್ದನ್ನು HBO ಫಿಲ್ಮ್ಸ್ ಗಾಗಿ ನಿರ್ಮಿಸಲಾಗಿತ್ತು.ಇದನ್ನು ಅಬ್ರಾಹ್ಮ್ ವರ್ಗೀಸ್ ಅವರ ನೆನಪುಗಳನ್ನು ಸೂನೊ ತಾರಾಪೊರೆವಾಲಾ ಅವರು ಚಿತ್ರಕಥೆಗೆ ಭಟ್ಟಿ ಇಳಿಸಿದ್ದರು.

ನಾಯರ್ ಅವರ ಅತ್ಯಂತ ಜನಪ್ರಿಯ ಮಾನ್ಸೂನ್ ವೆಡ್ಡಿಂಗ್ (2001)ರ ಚಲನಚಿತ್ರ,ಇದು ಭಾರತೀಯ ಪಂಜಾಬೀ ಕುಟುಂಬವೊಂದರ ಮದುವೆ ಬಗೆಗಿನ ವ್ಯವಸ್ಥೆಗಳ ಬಗ್ಗೆ ವಿವರ ನೀಡುತ್ತಿತ್ತು.ಇದಕ್ಕಾಗಿ ಸಬ್ರಿನಾ ಧವನ್ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ.ಇದಕ್ಕೆ ಪ್ರತಿಷ್ಠಿತ ಗೊಲ್ಡನ್ ಲೈಯಿನ್ ಅವಾರ್ಡ್ ನ್ನು ವೆನೀಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನೀಡಲಾಯಿತು. ನಾಯರ್ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.[] ಅವರ 2004 ರ ಆವೃತ್ತಿ ಠ್ಯಾಕರೆ ಅವರ ಕಾದಂಬರಿ ವ್ಯಾನಿಟಿ ಫೇರ್ ಆಧರಿತ ಚಿತ್ರದಲ್ಲಿರೀಸೆ ಉಯಿತ್ ಸ್ಪೂನ್ ನಟಿಸಿದ್ದಾರೆ.

ಅವರ ಚಲನಚಿತ್ರ ದಿ ನೇಮ್ಸೇಕ್ 2006 ರಲ್ಲಿ ಪ್ರಥಮ ಪ್ರಯೋಗದಲ್ಲಿ ಡಾರ್ಟ್ ಮೌತ್ ಕಾಲೇಜ್ ನಲ್ಲಿ ನಡೆಯಿತು.ನಾಯರ್ ಅವರಿಗೆ ಇದು ಡಾರ್ಟ್ ಮೌತ್ ಫಿಲ್ಮ್ ಪ್ರಶಸ್ತಿ ತಂದುಕೊಟ್ಟಿತು. ಮತ್ತೊಂದು ಪ್ರಯೋಗ 2006 ರ ಹೊತ್ತಿಗೆ ನ್ಯುಯಾರ್ಕ್ ನಲ್ಲಿನ ಇಂಡೊ-ಅಮೆರಿಕನ್ ಕಲ್ಚರಲ್ ಕೌನ್ಸಿಲ್ ನಲ್ಲಿ ಏರ್ಪಾಡಾಗಿತ್ತು. ದಿ ನೇಮ್ಸೇಕ್ ಚಿತ್ರಕ್ಕಾಗಿ ಪುಲ್ಟಿಜರ್ ಪ್ರಶಸ್ತಿ ವಿಜೇತ ಝುಂಪಾ ಲಾಹಿರಿ ಅವರ ಕಾದಂಬರಿಯನ್ನು ಸೂನಿ ತಾರಾಪೊರೆವಾಲಾ ಅವರು ಇದಕ್ಕೆ ಅಳವಡಿಸಿದ್ದರು.ಇದು ಮಾರ್ಚ್ 2007 ರಲ್ಲಿ ಬಿಡುಗಡೆಯಾಗಿತ್ತು.

ಅವರ ಅತ್ಯಂತ ಇತ್ತೀಚಿನ ಯೋಜನೆಯೆಂದರೆ ಮೈಶಾ,ಈ ಚಲನಚಿತ್ರ ಪ್ರಯೋಗಾಲಯವು ಪೂರ್ವ ಆಫ್ರಿಕನ್ ರು ಮತ್ತು ಸೌತ್ ಏಷಿಯನ್ ರಿಗೆ ಚಲನಚಿತ್ರ ನಿರ್ಮಾಣದ ಕುರಿತ ಶಿಕ್ಷಣವಾಗಿತ್ತು.[] ಮೈಶಾದ ಪ್ರಧಾನ ಕಚೇರಿಯು ಉಗಾಂಡಾದಲ್ಲಿ ನಾಯರ್ ಅವರು ದತ್ತು ಪಡೆದ ಕಂಪಾಲಾದಲ್ಲಿದೆ.

ಅವರು ನ್ಯುಯಾರ್ಕ್,ಐ ಲೌ ಯು ಒಂದು ರೋಮಾಂಚಕ ಪ್ರೇಮ ಕಥೆಯನ್ನು ಬಳಸಿ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.ನ್ಯುಯಾರ್ಕ್ ನಲ್ಲಿ ನಡೆದ ಸಣ್ಣ ಪ್ರಮಾಣದ ಪ್ರೇಮ ಕಥೆಗಳ ಸರಣಿಯನ್ನೇ ಅವರು ಚಿತ್ರಕಥೆಯಾಗಿಸಿದ್ದಾರೆ.ಅದಲ್ಲದೇ AIDSಏಡ್ಸ್ ಕುರಿತಾದ ಜಾಗೃತಿ ಕುರಿತಾದ ಚಿತ್ರ ನಿರ್ಮಾಣಕ್ಕಾಗಿ ಮೈಗ್ರೇಶನ್ ಎಂಬ ಹೆಸರಿನಲ್ಲಿ ಗೇಟ್ಸ್ ಫೌಂಡೇಶನ್ ಧನಸಹಾಯದೊ6ದಿಗೆ 12 ನಿಮಿಷಗಳ ಕಿರುಚಿತ್ರ ನಿರ್ಮಿಸಿದರು.[][೧೦]

ಅವರ ಚಲನಚಿತ್ರೋದ್ಯಮದಲ್ಲಿನ ಕೊಡುಗೆಗಾಗಿ 2007 ರಲ್ಲಿ 9ನೆಯ ಬಾಲಿಯುಡ್ ಫಿಲ್ಸ್ ಅವಾರ್ಡ್ಸ್ ನಲ್ಲಿ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ನೀಡಲಾಯಿತು.[೧೧][೧೨]

ಅವರ ಜೀವನ ಚರಿತ್ರೆ ಆಧಾರಿತ ಅಮೆಲಿಯಾ ಚಿತ್ರವು ಅಕ್ಟೋಬರ್ 2009 ರಲ್ಲಿ ಪ್ರಥಮ ಪ್ರದರ್ಶನ ಕಂಡಿತು.[೧೩][೧೪]

ಹಲವು ವರ್ಷಗಳ ಕಾಲ ಸುದೀರ್ಘ ಕಾಲದ ದೊಡ್ಡ ಬಜೆಟ್ ನ ಚಿತ್ರದ ಬಗ್ಗೆ ಅವರು ಮಗ್ನರಾಗಿದ್ದರು.ಆದರೆ ಶಾಂತಾರಾಮ್ ಕಾದಂಬರಿ ಆಧಾರಿತ ಇದರ ಯೋಜನೆ ಇನ್ನೂ ಅಲ್ಲಿಯೇ ಉಳಿದಿದೆ. ಅವರ ಮುಂಬರುವ ಚಿತ್ರ ಇಂಪ್ರೆಸ್ಸೆನಿಷ್ಟ್ ಭವಿಷ್ಯತ್ತಿನ ಕಾಲದ ಕಥೆ 1920 ರಲ್ಲಿನ ರಾಜ್ ನಲ್ಲಿ ಸೆಟ್ಟೇರಲಿದೆ. ನಾಯರ್ ಅವರು ಮೊಹ್ಸಿನ್ ಹಮೀದ್ ಅವರ 2007 ರ ಕಾದಂಬರಿ ದಿ ರಿಲೆಕ್ಟಂಟ್ ಫಂಡಾಮೆಂಟಲಿಸ್ಟ್ ನ ಹಕ್ಕುಗಳನ್ನೂ ಪಡೆದಿದ್ದಾರೆ.[೧೫] ಪ್ರತೀಕ್ ಬಬ್ಬರ್,ಅಲಿ ಝಾಫರ್ ಮತ್ತು ರೆಹಾನ್ ಖಾನ್ ಇವರೆಲ್ಲರೂ ನಾಯಕ ಪಾತ್ರಕ್ಕಾಗಿ ಈಗಾಗಲೇ ಧ್ವನಿ ಪರೀಕ್ಷೆಗೆ ಒಳಗಾಗಿದ್ದಾರೆ.[೧೬] ಸದ್ಯ ಅವರು ಸಾಕ್ಷ್ಯ ಚಿತ್ರ ದಿ ಬೀಟಲ್ಸ್ ಅಟ್ ಋಷಿಕೇಶ ಕುರಿತಾಗಿ ಕೆಲಸ ಮಾಡುತ್ತಿದ್ದಾರೆ,ಆದರೆ ಈ ಚಿತ್ರ ಬಿಡುಗಡೆ ಬಗ್ಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ.[೧೭]

ವೈಯಕ್ತಿಕ ಜೀವನ

[ಬದಲಾಯಿಸಿ]

ನಾಯರ್ ಅವರು ನ್ಯುಯಾರ್ಕ್ ಸಿಟಿಯಲ್ಲಿನ ಕೊಲಂಬಿಯಾ ಯುನ್ವರ್ಸಿಟಿ ಹತ್ತಿರ ವಾಸವಾಗಿದ್ದಾರೆ.ಅಲ್ಲಿನ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿನ ಚಲನಚಿತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.ಅಲ್ಲಿಯೇ ಅವರ ಪತಿ ಮಹ್ಮೂದ್ ಮಮ್ದಿನ್ ಕೂಡಾ ಅಲ್ಲಿಯೇ ಅಧ್ಯಾಪಕರಾಗಿದ್ದಾರೆ.[೧೮][೧೯] ನಾಯರ್ ತಮ್ಮ ಪತಿಯನ್ನು 1988 ರಲ್ಲಿ, ಅವರು ಉಗಾಂಡಾಕ್ಕೆ ಮಿಸ್ಸಿಸ್ಸಿಪ್ಪಿ ಮಸಾಲಾ ಚಿತ್ರದ ಅಧ್ಯಯನಕ್ಕೆ ಹೋದಾಗ ಮೊದಲ ಬಾರಿಗೆ ಭೇಟಿಯಾದರು.[] ನಾಯರ್ ಅವರು ದಶಕಗಳಿಂದಲೂ ಯೋಗ ಅಭ್ಯಾಸ ಮಾಡುವಲ್ಲಿ ಅತ್ಯಾಸಕ್ತಿ ಹೊಂದಿದವರಾಗಿದ್ದಾರೆ.ಅವರು ತಮ್ಮ ಯಾವುದೇ ಚಿತ್ರ ನಿರ್ಮಿಸುವುದಕ್ಕೆ ಮುಂಚೆ ತಮ್ಮ ತಂಡದೊಂದಿಗೆ ಯೋಗಾಭ್ಯಾಸ ನಡೆಸಿಯೇ ಅಂದಿನ ಕಾರ್ಯಕ್ಕೆ ಮುಂದುವರೆಯುತ್ತಾರೆ.[೨೦] ನಾಯರ್ ಅವರಿಗೆ ಝೊಹ್ರನ್ ಮಮ್ದಿನ್[೨೧] ಎಂಬ ಪುತ್ರನಿದ್ದಾನೆ,1991 ರಲ್ಲಿ ಜನಿಸಿದ ಆತ 2010 ರಲ್ಲಿ ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ ನಿಂದ ಪದವಿ ಪಡೆದಿದ್ದಾರೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
  • ಜಾಮಾ ಸ್ಟ್ರೀಟ್ ಮಸ್ಜಿದ್ ಜರ್ನಲ್ (1979)
  • ಸೊ ಫಾರ್ ಫ್ರಾಮ್ ಇಂಡಿಯಾ (1982)
  • ಇಂಡಿಯಾ ಕ್ಯಾಬರೆCa (1985)
  • ಚಿಲ್ಡ್ರನ್ ಆಫ್ ಎ ಡಿಸೈರ್ಡ್ ಸೆಕ್ಸ್ (1987)
  • ಸಲಾಮ್ ಮುಂಬಯಿ! (1988)[]
  • ಮಿಸ್ಸಿಸ್ಸಿಪ್ಪಿ ಮಸಾಲಾ (1991)[]
  • ದಿ ಡೇ ದಿ ಮೆರ್ಸಿಡೀಸ್ ಬಿಕಮ್ ಎ ಹ್ಯಾಟ್ (1993)
  • ದಿ ಪೆರೆಜ್ ಫ್ಯಾಮಿಲಿ (1995)[]
  • Kama Sutra: A Tale of Love (1996)[]
  • ಮೈ ಓನ್ ಕಂಟ್ರಿ (1998) (ಶೊಟೈಮ್ ಟೀವಿ)
  • ಮಾನ್ಸೂನ್ ವೆಡ್ಡಿಂಗ್ (2001)[]
  • ಹಿಸ್ಟಿರೀಕಲ್ ಬ್ಲೈಂಡ್ ನೆಸ್ (2002)[]
  • 11'9"01 ಸೆಪ್ಟೆಂಬರ್11 (ಸೆಗ್ಮೆಂಟ್- "ಇಂಡಿಯಾ") (2002)[]
  • ಸ್ಟಿಲ್, ದಿ ಚಿಲ್ಡ್ರನ್ ಅರ್ ಹಿಯರ್ (2003)
  • ವ್ಯಾನಿಟಿ ಫೇರ್ (2004)[]
  • ದಿ ನೇಮ್ಸೇಕ್ (2006)[]
  • ಮೈಗ್ರೇಶನ್(AIDS (ಏಡ್ಸ)ಜಾಗೊ) (2007)[]
  • ನ್ಯುಆರ್ಕ್, ಐ ಲೌ ಯುವ್ (ಸೆಗ್ಮೆಂಟ್- "ಕೊಶೆರ್ ವೆಜೆಟೇರಿಯನ್") (2008)[]
  • 8 (ಸೆಗ್ಮೆಂಟ್- "ಹೌ ಕ್ಯಾನ್ ಇಟ್ ಬಿ?") (2008)[][೨೨]
  • ಅಮೆಲಿಯಾ (2009)[]

ಪ್ರಶಸ್ತಿಗಳು

[ಬದಲಾಯಿಸಿ]

ಗೆಲುವುಗಳು

[ಬದಲಾಯಿಸಿ]
  • 1985:ಅತ್ಯತ್ತಮ ಸಾಕ್ಷ್ಯಚಿತ್ರ,ಗ್ಲೊಬಲ್ ವಿಲೇಜ್ ಫಿಲ್ಮ್ ಫೆಸ್ಟಿವಲ್:ಇಂಡಿಯಾ ಕ್ಯಾಬರೆ
  • 1986:ಗೊಲ್ಡನ್ ಅಥೆನ್ಸಾ,ಅಥೆನ್ಸ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್:ಇಂಡಿಯಾ ಕ್ಯಾಬರೆ
  • 1986:ಬ್ಲ್ಯು ರಿಬ್ಬನ್,ಅಮೆರಿಕನ್ ಫಿಲ್ಮ್ ಫೆಸ್ಟಿವಲ್:ಇಂಡಿಯಾ ಕ್ಯಾಬರೆ
  • 1988: ಆಡಿಯನ್ಸ್ ಅವಾರ್ಡ್, ಕ್ಯಾನಿಸ್ ಫಿಲ್ಮ್ ಫೆಸ್ಟಿವಲ್: ಸಲಾಮ್ ಮುಂಬಯಿ!
  • 1988:ಗೊಲ್ಡನ್ ಕ್ಯಾಮೆರಾ(ಅತ್ಯುತ್ತಮ ಚಿತ್ರ), ಕ್ಯಾನಿಸ್ ಫಿಲ್ಮ್ ಫೆಸ್ಟಿವಲ್:ಸಲಾಮ್ ಮುಂಬಯಿ!
  • 1988: ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಫೀಚರ್ ಫಿಲ್ಮ್ ಇನ್ ಹಿಂದಿ:ಸಲಾಮ್ ಮುಂಬಯಿ! [೨೩]
  • 1988:ನ್ಯಾಶನಲ್ ಬೋರ್ಡ್ ಆಫ್ ರಿವಿವ್ ಅವಾರ್ಡ್ ಅತ್ಯುತ್ತಮ ವಿದೇಶೀ ಚಿತ್ರಗಳು: ಸಲಾಮ್ ಮುಂಬಯಿ!
  • 1988:"ಜೂರ್ರಿ ಪ್ರೈಜ್", "ಮೊಸ್ಟ್ ಪಾಪ್ಯುಲರ್ ಫಿಲ್ಮ್" ಅತ್ಯುತ್ತಮ, ಜನಪ್ರಿಯ ಚಿತ್ರ ಮತ್ತು"ಪ್ರೈಜ್ ಆಫ್ ದಿ ಇಕ್ಯುಮೆನಿಕಲ್ ಜೂರ್ರಿ" ಇದುಮೊಂಟ್ರಿಯಲ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್ ನಲ್ಲಿ ದೊರಕಿದ್ದು: ಸಲಾಮ್ ಮುಂಬಯಿ!
  • 1988: ನಿವ್ ಜನರೇಶನ್ ಅವಾರ್ಡ್,ಲಾಸ್ ಎಂಜಿಲ್ಸ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್
  • 1988:ಲಿಲಿಯನ್ ಗಿಶ್ ಅವಾರ್ಡ್(ಕಲಾತ್ಮಕ ಚಿತ್ರಗಳಲ್ಲಿ ಸಾಧನೆ), ಲಾಸ್ ಎಂಜಿಲ್ಸ್ ಉಮೆನ್ ಇನ್ ಫಿಲ್ಮ್ ಫೆಸ್ಟಿವಲ್: ಸಲಾಮ್ ಮುಂಬಯಿ!
  • 1991:ಗೊಲ್ಡನ್ ಒಸ್ಸೆಲ್ಲಾ (ಅತ್ಯುತ್ತಮ ಚಿತ್ರಕತೆ ಮೂಲ ಸಂಭಾಷಣೆ),ವೆನೀಸ್ ಫಿಲ್ಮ್ ಫೆಸ್ಟಿವಲ್:ಮಿಸ್ಸಿಸ್ಸಿಪ್ಪಿ ಮಸಾಲಾ (ಸೂನಿ ತಾರಾಪೊರೆವಾಲಾ)[೨೪] ಅವರ ಜೊತೆ.
  • 1991:ಕ್ರಿಟಿಕಲ್ ಸ್ಪೇಸಿಯಲ್ ಅವಾರ್ಡ್,ಸಾವೊ ಪುಲೊ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್: ಮಿಸ್ಸಿಸ್ಸಿಪ್ಪಿ ಮಸಾಲಾ
  • 1992: ಅತ್ಯುತ್ತಮ ನಿರ್ದೇಶಕ(ವಿದೇಶೀ ಚಿತ್ರ),ಇಟಾಲಿಯನ್ ನ್ಯಾಶನಲ್ ಸಂಡಿಕೇಟ್ ಆಫ್ ಫಿಲ್ಮ್ ಜರ್ನಾಲಿಸ್ಟ್ಸ್:ಮಿಸ್ಸಿಸ್ಸಿಪ್ಪಿ ಮಸಾಲಾ
  • 1992: ಏಶಿಯನ್ ಮಿಡಿಯಾ ಅವಾರ್ಡ್, ಏಶಿಯನ್ ಅಮೆರಿಕನ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್
  • 1993:ಇಂಡೆಪೆಂಡೆಂಟ್ ಸ್ಪಿರಿಟ್ ಅವಾರ್ಡ್ ಅತ್ಯುತ್ತಮ ಕಲಾತ್ಮಕ ಚಿತ್ರ:ಮಿಸ್ಸಿಸ್ಸಿಪ್ಪಿ ಮಸಾಲಾ
  • 2000: ಸ್ಪೇಸಿಯಲ್ ಮೆನ್ಶನ್ (ವಿಶೇಷ ಪ್ರಶಸ್ತಿ)(ಡಾಕ್ಯುಮೆಂಟರಿ ಅಂಡ್ ಎಸ್ಸೆ),ಬೈರೆಟಿಸ್ಜ್ ಇಂಟರ್ ನ್ಯಾಶನಲ್ ಫೆಸ್ಟಿವಲ್ ಆಫ್ ಆಡಿಯೊವಿಜಿವಲ್ ಪ್ರೊಗ್ರಾಮ್ಮಿಂಗ್:ದಿ ಲಾಫಿಂಗ್ ಕ್ಲಬ್ ಆಫ್ ಇಂಡಿಯಾ
  • 2001:ಗೊಲ್ಡನ್ ಲೈಯಿನ್(ಅತ್ಯುತ್ತಮಚಿತ್ರ),ವೆನೀಸ್ ಫಿಲ್ಮ್ ಫೆಸ್ಟಿವಲ್: ಮಾನ್ಸೂನ್ ವೆಡ್ಡಿಂಗ್
  • 2001: ಲ್ಯಾಟೆರ್ನಾ ಮ್ಯಾಜಿಕಾ ಪ್ರೈಜ್, ವೆನೀಸ್ ಫಿಲ್ಮ್ ಫೆಸ್ಟಿವಲ್:ಮಾನ್ಸೂನ್ ವೆಡ್ದಿಂಗ್
  • 2002:ಆಡಿಯನ್ಸ್ ಅವಾರ್ಡ್,ಕ್ಯಾನ್ ಬೆರ್ರಾ ಇಂತರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್: ಮಾನ್ಸೂನ್ ವೆಡ್ಡಿಂಗ್
  • 2002: ಸ್ಪೆಸಿಯಲ್ ಅವಾರ್ಡ್ ಫಾರ್ ಇಂಟರ್ ನ್ಯಾಶನಲ್ ಸಿನೆಮಾ,ಝೀ ಸಿನೆ ಅವಾರ್ಡ್ಸ್:ಮಾನ್ಸೂನ್ ವೆಡ್ಡಿಂಗ್
  • 2002: UNESCO ಅವಾರ್ಡ್, ವೆನೀಸ್ ಫೆಸ್ಟಿವಲ್:11'9"01 ಸೆಪ್ಟೆಂಬರ್11
  • 2004:ಫೇಟ್ ಹಬ್ಲೆಯ್ ವೆಬ್ ಆಫ್ ಲೈಫ್ ಅವಾರ್ಡ್, ರೊಚೆಸ್ಟರ್-ಹೈ ಫಾಲ್ಸ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್
  • 2007:"ಗೊಲ್ಡನ್ ಅಫ್ರೊಡೈಟ್", ಲೌ ಈಸ್ ಫೊಲ್ಲಿ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ (ಬಲ್ಗೇರಿಯಾ):ದಿ ನೇಮ್ಸೇಕ್

ನಾಮನಿರ್ದೇಶನಗಳು

[ಬದಲಾಯಿಸಿ]
  • 1989: ಅಕಾಡಮಿ ಅವಾರ್ಡ್ ಫಾರ್ ಬೆಸ್ಟ್ ಫಾರಿನ್ ಲ್ಯಾಂಗ್ವೇಜ್ ಫಿಲ್ಮ್:ಸಲಾಮ್ ಮುಂಬಯಿ!
  • 1989:ಸೀಜರ್ ಅವಾರ್ಡ್ ಫಾರ್ ಬೆಸ್ಟ್ ಫಾರಿನ್ ಫಿಲ್ಮ್ (ಮೈಲ್ಲಿಯುರ್ ಫಿಲ್ಮ್ ಎಟ್ರಾಂಜರ್ ): ಸಲಾಮ್ ಮುಂಬಯಿ!
  • 1989:ಗೊಲ್ಡನ್ ಗ್ಲೋಬ್ ಅವಾರ್ಡ್ ಫಾರ್ ಬೆಸ್ಟ್ ಫಾರಿನ್ ಲ್ಯಾಂಗ್ವೇಜ್ ಫಿಲ್ಮ್:ಸಲಾಮ್ ಮುಂಬಯಿ!
  • 1990:BAFTA ಫಿಲ್ಮ್ ಅವಾರ್ಡ್ ಬೆಸ್ಟ್ ಫಿಲ್ಮ್ ನಾಟ್ ಇನ್ ಇಂಗ್ಲೀಷ್ ಲ್ಯಾಂಗ್ವೇಜ್:ಸಲಾಮ್ ಮುಂಬಯಿ!
  • 1990:ಫಿಲ್ಮ್ ಫೇರ್ ಬೆಸ್ಟ್ ಡೈರೆಕ್ಟರ್ ಅವಾರ್ಡ್: ಸಲಾಮ್ ಮುಂಬಯಿ!
  • 1990: ಫಿಲ್ಮ್ ಫೇರ್ ಬೆಸ್ಟ್ ಮೂವಿ ಅವಾರ್ಡ್:ಸಲಾಮ್ ಮುಂಬಯಿ!
  • 1991: ಗೊಲ್ಡನ್ ಲೈಯಿನ್ (ಅತ್ಯುತ್ತಮ ಚಿತ್ರ),ವೆನೀಸ್ ಫಿಲ್ಮ್ ಫೆಸ್ಟಿವಲ್: ಮಿಸ್ಸಿಸ್ಸಿಪ್ಪಿ ಮಸಾಲಾ
  • 1996: ಗೊಲ್ಡನ್ ಸೀಶೆಲ್, ಸ್ಯಾನ್ ಸೆಬ್ಯಾಸ್ಟಿಯನ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್: Kama Sutra: A Tale of Love
  • 1999: ಅತ್ಯುತ್ತಮ ಚಿತ್ರ, ವೆರ್ಜೌಬರ್ಟ್ ಇಂಟರ್ ನ್ಯಾಶನಲ್ ಗೇ & ಲೆಸ್ಬಿಯನ್ ಫಿಲ್ಮ್ ಫೆಸ್ಟಿವಲ್:ಮೈ ಓವನ್ ಕಂಟ್ರಿ
  • 2001: ಸ್ಕ್ರೀನ್ ಇಂಟರ್ ನ್ಯಾಶನಲ್ ಅವಾರ್ಡ(ಅತ್ಯುತ್ತಮ ಯುರೊಪಿಯನ್ ಫಿಲ್ಮ್), ಯುರೊಪಿಯನ್ ಫಿಲ್ಮ್ ಅವಾರ್ಡ್ಸ್: ಮಾನ್ಸೂನ್ ವೆಡ್ಡಿಂಗ್
  • 2001:ಗೊಲ್ಡನ್ ಗ್ಲೋಬ್ ಅವಾರ್ಡ್ ಫಾರ್ ಬೆಸ್ಟ್ ಫಾರಿನ್ ಲ್ಯಾಂಗ್ವೇಜ್ ಫಿಲ್ಮ್:ಮಾನ್ಸೊನ್ ವೆಡ್ಡಿಂಗ್
  • 2002:BAFTA ಫಿಲ್ಮ್ ಅವಾರ್ಡ್ ಬೆಸ್ಟ್ ಫಿಲ್ಮ್ ನಾಟ್ ಇನ್ ದಿ ಇಂಗ್ಲೀಷ್ ಲ್ಯಾಂಗ್ವೇಜ್: ಮಾನ್ಸೂನ್ ವೆಡ್ಡಿಂಗ್
  • 2003: ಕ್ಲೊಟ್ರೊಡಿಯಸ್ ಅವಾರ್ಡ್ ಫಾರ್ ಬೆಸ್ಟ್ ಡೈರೆಕ್ಟರ್: ಮಾನ್ಸೊನ್ ವೆಡ್ಡಿಂಗ್
  • 2003: ಗೊಲ್ಡನ್ ಸ್ಟಾರ್, ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಮಾರಕೆಚ್: ಹಿಸ್ಟೀರಿಕಲ್ ಬ್ಲೈಂಡ್ ನೆಸ್
  • 2003: ಸೀಜರ್ ಅವಾರ್ಡ್ ಫಾರ್ ಬೆಸ್ಟ್ ಫಿಲ್ಮ್ ಫ್ರ್ರಾಮ್ ದಿ ಯುರೊಪಿಯನ್ ಯುನಿಯನ್: 11'9"01 ಸೆಪ್ಟೆಂಬರ್11
  • 2004: ಗೊಲ್ಡನ್ ಲೈಯಿನ್ (ಅತ್ಯುತ್ತಮ ಚಿತ್ರ),ವೆನೀಸ್ ಫಿಲ್ಮ್ ಫೆಸ್ಟಿವಲ್: ವ್ಯಾನಿಟಿ ಫೇರ್
  • 2007: ಗೊಥಮ್ ಅವಾರ್ಡ್ ಫಾರ್ ಬೆಸ್ಟ್ ಫಿಲ್ಮ್: ದಿ ನೇಮ್ಸೇಕ್

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಜಿಗ್ನಾ ದೇಸಾಯಿ: ಬಿಯಾಂಡ್ ಬಾಲಿಯುಡ್: ದಿ ಕಲ್ಚರಲ್ ಪಾಲಿಟಿಕ್ಸ ಆಫ್ ಸ್ತ್ ಏಶಿಯನ್ ಡೈಯಸ್ಪ್ರಿಕ್ ಫಿಲ್ಮ್ . ನ್ಯುಯಾರ್ಕ್: ರೂಟ್ ಲೆಜ್, 2004, 280 pp. ill. ISBN 0-415-96684-1 (inb.) / ISBN 0-415-96685-X (hft.)
  • ಗೀತಾ ರಾಜನ್:ಪ್ಲೇಂಟ್ ಅಂಡ್ ಕಂಪ್ಲೇಇಂಟ್: ಕೊಲೊನಿಯಲ್ ಇಂಡಿಯನ್ ಆರ್ಟ್ ಅಂಡ್ ಪೊಸ್ಟ್ ಕೊಲೊನಿಯಲ್ ಸಿನೆಮಾ . - ಆಕ್ಸಫರ್ಡ್(ಮುದ್ರಣ), ISSN 0957-4042 ; 13(2002):1, pp. 48–69.
  • ಅಲ್ಪನಾ ಶರ್ಮಾ:ಬಾಡಿ ಮ್ಯಾಟರ್ಸ್: ದಿ ಪಾಲಿಟಿಕ್ಸ್ ಆಫ್ ಪ್ರೊವೇಕೇಶನ್ ಇನ್ ಮೀರಾ ನಾಯರ್ಸ್ ಫಿಲ್ಮ್ಸ್ . QRFV : ಕ್ವಾರ್ಟರ್ಲಿ ರಿವಿವ್ ಆಫ್ ಫಿಲ್ಮ್ ಅಂಡ್ ವಿಡಿಯೊ , ISSN 1050-9208 ; 18(2001):1, pp. 91–103.
  • ಪ್ರತಿಭಾ ಪಾರ್ಮರ್:ಮೀರಾ ನಾಯರ್: ಫಿಲ್ಮ್ ಮೇಕಿಂಗ್ ಇನ್ ದಿ ಸ್ಟೃಈಟ್ಸ್ ಆಫ್ ಮುಂಬಯಿ . ಸ್ಪೇರ್ ರಿಬ್ , ISSN 0306-7971; 198, 1989, pp. 28–29.
  • ಗ್ವೆಂಡೊಲಿನ್ ಆಡ್ರೆಯ್ ಫೊಸ್ಟರ್:ಉಮೆನ್ ಫಿಲ್ಮ್ ಮೇಕರ್ಸ್ ಆಫ್ ದಿ ಆಫ್ರಿಕಾ ಅಂಡ್ ಏಶಿಯನ್ ಡೈಯೊಸ್ಪರಾ :ಡಿಕೊಲೊನೈಜಿಂಗ್ ದಿ ಗೇಜ್, ಲೋಕೇಟಿಂಗ್ ಸಬ್ಜೆಕ್ಟಿವಿಟಿ . ಕಾರ್ಬೊಂಡೇಲ್, ಇಲ್.:ಸದರ್ನ್ ಇಲ್ಲಿಯೊನಸ್ ಯುನ್ವರ್ಸಿಟಿ ಪ್ರೆಸ್, 1997. ISBN 0-8248-0075-3.
  • ಜಾನ್ ಕೆನ್ನಿತ್ ಮುಯಿರ್: ಮರ್ಸಿ ಇನ್ಹರ್ ಐಜ್: ದಿ ಫಿಲ್ಮ್ಸ್ ಆಫ್ ಮೀರಾ ನಾಯರ್ . ಹಾಲ್ ಲಿಯೊನಾರ್ಡ, 2006. ISBN 1557836493, 9781557836496.

ಉಲ್ಲೇಖಗಳು

[ಬದಲಾಯಿಸಿ]
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ [163] ^ http://www.imdb.com/name/nm0819803/
  2. Crossette, Barabara (1990-12-23). "Homeless and Hungry Youths of India". New York Times. Retrieved 2008-10-13. {{cite news}}: Cite has empty unknown parameter: |coauthors= (help)
  3. ಮೀರಾ ನಾಯರ್ ಈಸ್ ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್ 2007 ನಿವ್ಸ್, Rediff.com , 29 ಮಾರ್ಚ್ 2008.
  4. 'ನೇಮ್ಸೇಕ್ ಎ ಟ್ರಿಬ್ಯುಟ್ ಟು ರಿತ್ವಿಕ್ ಘಟಕ್', ಸೇಯ್ಸ್ ಮೀರಾ ನಾಯರ್- ಮೀರಾ ನಾಯರ್ ಇಂಟರ್ ವಿವ್ ಇಂಡಿಯನ್ ಎಕ್ಸ್ಪ್ರೆಸ್ , 22 ಮೇ 2005.
  5. ೫.೦ ೫.೧ ನೇಮ್ಸೇಕ್ ಇಂಟರ್ ವಿವ್ ನಿವ್ಸ್ , Rediff.com , 21 ಮಾರ್ಚ್ 2007.
  6. "Mira Nair". The South Asian Women's NETWork. Retrieved 2008-10-13.
  7. Anna Whitney (10 September 2001). "Indian director is first woman to win Golden Lion". The Independent. London. Archived from the original on 9 March 2011. Retrieved 8 December 2009.
  8. "ಮೈಶಾ ಫಿಲ್ಮ್ ಲ್ಯಾಬ್". Archived from the original on 2005-10-26. Retrieved 2021-08-11.
  9. ಮೀರಾ ನಾಯರ್ಸ್ ಲೇಟೆಸ್ಟ್ ಫಿಲ್ಮ್ ಪ್ರೊಜೆಕ್ತ್ಸ್ ಟೇಕ್ಸ್ ದಿ ಮೆಸೇಜ್ ಟು ಇಂಡಿಯನ್ ಸಿನೆಮಾ ಹಾಲ್ಸ್
  10. "Migration". Jaman. Archived from the original on 2008-10-06. Retrieved 2008-10-13.
  11. ಬಾಲಿಯುಡ್ ಟು ಹಾನರ್ ಮೀರಾ ನಾಯರ್ ಉಯಿತ್ 'ಪ್ರೈಡ್ ಆಫ್ ಇಂಡಿಯಾ' ಅವಾರ್ಡ್ Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.ಹಿಂದೂಸ್ತಾನ ಟೈಮ್ಸ್ , 23 ಏಪ್ರಿಲ್ 2007.
  12. "Mira Nair, Asha Parekh honoured at Bollywood awards in New York". Malaysia Sun. 28 May 2007. Archived from the original on 7 ಫೆಬ್ರವರಿ 2012. Retrieved 8 December 2009.
  13. " 'ಅಮೆಲಿಯಾ' (2009): ರಿವಿವ್ಸ್." ಮೆಟಾಕ್ರಿಟಿಕ್
  14. " 'ಅಮೇಲಿಯಾ' ರಿವಿವ್ಸ್, ಪಿಕ್ಚರ್ಸ್." ರಾಟನ್ ಟೊಮೊಟೊಸ್, IGN ಎಂಟರ್ ಟೇನ್ ಮೆಂಟ್ .
  15. Debesh Bannerjee (8 December 2009). "'Politeness can kill you in movies'". Screen. Archived from the original on 27 ಫೆಬ್ರವರಿ 2011. Retrieved 8 December 2009.
  16. http://timesofindia.indiatimes.com/entertainment/bollywood/news-interviews/Cant-wait-for-you-says-Mira-to-Shahid/articleshow/6945624.cms
  17. Walters, Ben (27 March 2007). "Mira Nair Q&A". Time Out London. Time Out. Archived from the original on 2011-06-07. Retrieved 2010-03-15.
  18. ಫ್ಯಾಕಲ್ಟಿ Archived 2006-04-30 ವೇಬ್ಯಾಕ್ ಮೆಷಿನ್ ನಲ್ಲಿ. ಕೊಲಂಬಿಯಾ ಯುನ್ವರ್ಸಿಟಿ ಸ್ಕೂಲ್ ಆಫ್ ದಿ ಆರ್ಟ್ಸ್
  19. Solomon, Deborah (29 August 2004). "All's Fair". The New York Times. Archived from the original on 29 ಏಪ್ರಿಲ್ 2014. Retrieved 27 March 2010.
  20. "ಮೀರಾ ನಾಯರ್ ಇಂಟರ್ ವಿವ್ ಉಯಿತ್ ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್". Archived from the original on 2009-12-28. Retrieved 2011-01-10.
  21. Miller, Winter (2007-03-18). "Personal Sound Effects: A Night Out with Mira Nair". New York Times. Retrieved 2008-10-13. {{cite news}}: Cite has empty unknown parameter: |coauthors= (help)
  22. "8 Official website". Retrieved 25 November 2010.
  23. [7] ^ ಪ್ರಶಸ್ತಿಗಳು ಇಂಟರ್ ನೆಟ್ ಮೂವೀ ಡೇಟಾಬೇಸ್.
  24. ಮಿಸ್ಸಿಸ್ಸಿಪ್ಪಿ ಮಸಾಲಾ - ಅವಾರ್ಡ್ಸ್ ಇಂಟರ್ ನೆಟ್ ಮೂವಿ ಡಾಟಾ ಬೇಸ್ .


ಬಾಹ್ಯ ಕೊಂಡಿಗಳು

[ಬದಲಾಯಿಸಿ]