ವಿಷಯಕ್ಕೆ ಹೋಗು

ರಾಜ್ಯವರ್ಧನ್ ಸಿಂಗ್ ರಾಥೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Rajyavardhan Singh Rathore
Born (1970-01-29) ೨೯ ಜನವರಿ ೧೯೭೦ (ವಯಸ್ಸು ೫೪)
OccupationSportsman (Shooter)
ರಾಜ್ಯವರ್ಧನ್ ಸಿಂಗ್ ರಾಥೋಡ್
ಪದಕ ದಾಖಲೆ
Representing  ಭಾರತ
Men's shooting
Olympic Games
Silver medal – second place 2004 Athens Double trap
Commonwealth Games
Gold medal – first place 2006 Melbourne Double trap
Silver medal – second place 2006 Melbourne Double trap pairs
Asian Games
Bronze medal – third place 2006 Doha Double trap
Silver medal – second place 2006 Doha Double trap teams

ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ (1970 ರ ಜನವರಿ 29 ರಂದು ರಾಜಸ್ಥಾನದ ಜೈಸಲ್ಮಾರ್ ನಲ್ಲಿ ಜನಿಸಿದರು.) ಅವರು ಅಥೆನ್ಸ್ ನಲ್ಲಿ ನಡೆದ 2004 ರ ಬೇಸಿಗೆಯ ಒಲಿಂಪಿಕ್ಸ್ ನಲ್ಲಿ, ಪುರುಷರ ಡಬಲ್ ಟ್ರ್ಯಾಪ್ ನಲ್ಲಿ ಬೆಳ್ಳಿಯ ಪದಕ ಗೆದ್ದ ಭಾರತದ ಶೂಟರ್(ಗುರಿಕಾರ) ಆಗಿದ್ದಾರೆ.[] ಇವರು ವೈಯಕ್ತಿಯ ಪಂದ್ಯದಲ್ಲಿ ನಾರ್ಮನ್ ಪ್ರಿಚರ್ಡ್ರವರ ನಂತರ ಬೆಳ್ಳಿಯ ಪದಕ ಗಳಿಸಿದ ಮೊದಲನೆಯ ಭಾರತೀಯರಾಗಿದ್ದಾರೆ. ನಾರ್ಮನ್ ರವರು 1900 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದ್ದರು.[]

ವೃತ್ತಿಜೀವನ

[ಬದಲಾಯಿಸಿ]

2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ರಾಥೋಡ್ ರವರು ಚಿನ್ನದ ಪದಕ ವಿಜೇತರಾದ ಅಹ್ಮದ್ ಅಲ್ ಮಕ್ಟುಮ್ ರವರ 144 ಪಾಯಿಂಟ್ ಗಳ ಎದುರು 135 ಪಾಯಿಂಟ್(ಅಂಕ) ಗಳೊಂದಿಗೆ ಅರ್ಹತೆಯ ಸುತ್ತಿನಲ್ಲಿ ಐದನೇಯದನ್ನು ಪೂರ್ಣಗೊಳಿಸಿದರು. ಹ್ಯಾಕನ್ ಡಾಲ್ಬಿ (138) ಮತ್ತು ವ್ಯಾಂಗ್ ಜೆಂಗ್ (137) ರವರಿಗೆ ಎರಡನೆಯ ಮತ್ತು ಮೂರನೆಯ ಸ್ಥಾನ ಲಭಿಸಿತು. ಈ ಸಂದರ್ಭದಲ್ಲಿ ವ್ಯಾಲ್ಡ್ಮರ್ ಸ್ಕ್ಯಾನ್ಜ್ ರವರು ಗಳಿಸಿದ್ದ 135 ಪಾಯಿಂಟ್ ಗಳು ರಾಥೋಡ್ ರವರ ಪಾಯಿಂಟ್, ಅಂಕಗಳಿಗೆ ಸಮನಾಗಿದ್ದವು. ರಾಥೋಡ್ ರವರು ಪ್ರತಿ ಸುತ್ತಿನಲ್ಲಿ 46, 43 ಮತ್ತು 46 ಅಂಕ ಗಳಿಸಿದ್ದರು.

ಫೈನಲ್ಸ್ ನಲ್ಲಿ ಅಲ್ ಮಾಕ್ಟುಮ್ ರವರ 45 ಪಾಯಿಂಟ್ ಗಳ ಹಿಂದೆಯೇ ರಾಥೋಡ್ ರವರು 44 ನ್ನು ಗಳಿಸುವ ಮೂಲಕ ಎರಡನೆಯ ಅತ್ಯುತ್ತಮ ಆಟಗಾರರಾದರು. ಅವರ ಡಬಲ್ ಟ್ರ್ಯಾಪ್ ಶೂಟಿಂಗ್ ಕ್ರೀಡೆಯಲ್ಲಿನ ಅತ್ಯಂತ ಹೆಚ್ಚು ಪೈಫೋಟಿಯುತ ಸ್ಪರ್ಧೆಗಳಲ್ಲಿ 25 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ರಾಥೋಡ್ ರವರು 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ನಡೆದ ಪುರುಷರ ಡಬಲ್ ಟ್ರ್ಯಾಪ್ ನಲ್ಲಿ ಫೈನಲ್ ಅನ್ನು ಪ್ರವೇಶಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ 15 ನೇ ಸ್ಥಾನ ಗಳಿಸಿದ್ದರು.[]

ಈಗ ಅವರು ಭಾರತದ ರಕ್ಷಣಾ ಪಡೆಯಲ್ಲಿ ಕರ್ನಲ್ ಆಗಿದ್ದಾರೆ. ಇವರು ಪುಣೆಯ ಖಡಕ್ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡಮಿ (N.D.A) ಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಪ್ರಶಸ್ತಿಗಳು ಮತ್ತು ಮಾನ್ಯತೆಗಳು

[ಬದಲಾಯಿಸಿ]
  • 2003-2004 - ಅರ್ಜುನ ಪ್ರಶಸ್ತಿ
  • 2004-2005 - ರಾಜೀವ್ ಗಾಂಧಿ ಖೇಲ್ ರತ್ನ (ಇದು ಭಾರತದಲ್ಲಿ ಕ್ರೀಡಾಪಟುಗಳಿಗೆ ಕೊಡುವ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾಗಿದೆ).
  • ರಾಥೋಡ್ ರವರಿಗೆ ಪದ್ಮ ಶ್ರೀಯನ್ನು ಕೊಟ್ಟು ಗೌರವಿಸಲಾಗಿದೆ. ಇದುಭಾರತ ಸರ್ಕಾರ ನೀಡುವ ಉನ್ನತ ನಾಗರಿಕ ಪ್ರಶಸ್ತಿಯಾಗಿದೆ.
  • ಅತಿ ವಿಶಿಷ್ಟ ಸೇವಾ ಮೆಡಲ್ (AVSM), ಇದು ಅತ್ಯುತ್ತಮ ಸೇವೆಗಾಗಿ ಭಾರತ ಸರ್ಕಾರದಿಂದ, ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಮಿಲಿಟರಿ ಸೇನಾ ಪ್ರಶಸ್ತಿಯಾಗಿದೆ.
  • ರಾಥೋಡ್,ಚೀನಾಬೀಜಿಂಗ್ ನಲ್ಲಿ ನಡೆದ 2008 ರ ಬೇಸಿಗೆ ಒಲಿಂಪಿಕ್ಸ್ ಸಂದರ್ಭದಲ್ಲಿ ಭಾರತದ ಧ್ವಜ ಹೊತ್ತವರಾಗಿದ್ದರು.[]

ಇವನ್ನೂ ಗಮನಿಸಿ

[ಬದಲಾಯಿಸಿ]
  • ರಜಪೂತರ ಪಟ್ಟಿ

ಬ್ರಿಗೇಡಿಯರ್ ದರ್ಜೆಗಿಂತ ಕೆಳಗಿನ ದರ್ಜೆಯಲ್ಲಿದ್ದು AVSM ಪ್ರಶಸ್ತಿಯನ್ನು ಪಡೆದವರಲ್ಲಿ ರಾಥೋಡ್ ರವರು ಮೊದಲಿಗರಾಗಿದ್ದಾರೆ ಎಂಬುದು ಸುಳ್ಳಾಗಿದೆ. ಸುಬೇದಾರ್ ದರ್ಜೆಯ JCO ಪರ್ವತಾರೋಹಣದಲ್ಲಿ ಅತ್ಯುತ್ತಮ ಸಾಧನೆ ಗೈದಿರುವುದಕ್ಕಾಗಿ ಅವರಿಗೆ AVSM ಪ್ರಶಸ್ತಿ ಪ್ರಧಾನಮಾಡಲಾದ ಉದಾಹರಣೆಯಿದೆ.

ಉಲ್ಲೇಖಗಳು

[ಬದಲಾಯಿಸಿ]
  1. http://www.rediff.com/sports/2004/aug/17oly-shoot1.htm
  2. http://www.abc.net.au/olympics/2008/results/historical/athletes/16384.htm
  3. "Results of Men's Double Trap Qualification-Shoot-Off". Archived from the original on 2008-08-15. Retrieved 2006-08-13.
  4. "ŠRathore to be India's flag bearer in Beijing". www.ndtv.com. 2008-08-04.