ರೊಮ್ಯಾಂಟಿಸಿಸಂ(ಭಾವಪ್ರಧಾನತೆ ತತ್ವ,ಸಿದ್ದಾಂತ)
ಈ ಭಾವಪ್ರಧಾನತೆ ಸಿದ್ದಾಂತ ಅಥವಾ ಭಾವಪ್ರಧಾನತೆಯ ಯುಗ ವು ಒಂದು ಸಂಕೀರ್ಣ ಕಲಾತ್ಮಕ,ಸಾಹಿತ್ಯಿಕ ಮತ್ತು ಬೌದ್ದಿಕ ಚಳವಳಿಯಾಗಿ ಹುಟ್ಟಿಕೊಂಡಿತು.ಇದು 18 ನೆಯ ಶತಮಾನ ದ ದ್ವಿತಿಯಾರ್ಧದಲ್ಲಿ ಯುರೊಪ್ ನಲ್ಲಿ ತನ್ನ ಮೂಲವನ್ನು ತೋರಿಸಿತು.ಇದು ಕೈಗಾರಿಕಾ ಕ್ರಾಂತಿಗೆ ಪೂರಕವಾಗಿ ಅದರ ಜೊತೆ ಜೊತೆಯಲ್ಲಿಯೇ ತನ್ನ ಬಲ [೧]ವೃದ್ಧಿಸಿಕೊಂಡಿತು. ಇದು ಶ್ರೀಮಂತ ಸಮಾಜದ ಪ್ರಭುತ್ವ ಮತ್ತು ರಾಜಕೀಯ ಲಕ್ಷಣಯುಳ್ಳ ಜ್ಞಾನಾಭಿವೃದ್ಧಿಯ ಯುಗದ ವಿರುದ್ದದ ಕ್ರಾಂತಿಯ ಭಾಗವಾಗಿ ಹುಟ್ಟಿಕೊಂಡಿತು.ಅದಲ್ಲದೇ [೨]ಪ್ರಕೃತಿಯನ್ನು ವೈಜ್ಞಾನಿಕಗೊಳಿಸುವ ಕ್ರಮಕ್ಕೆ ವಿರುದ್ದವಾಗಿ ತನ್ನ ಅಭಿಪ್ರಾಯ ಮಂಡಿಸುವಲ್ಲಿ ಸಫಲತೆ ಪಡೆಯಿತು.ಹೀಗೆ ಇದು ದೃಶ್ಯ ಕಲೆ,ಸಂಗೀತ ಮತ್ತು ಸಾಹಿತ್ಯದ ಕಡೆಗೆ ತನ್ನ ಒಲವು ತೋರಿಸಿ,[೩]ಚರಿತೆ ರಚನಾ ಶಾಸ್ತ್ರ,[೪]ಶಿಕ್ಷಣ ಮತ್ತು [೫]ನೈಸರ್ಗಿಕ ಇತಿಹಾಸದ ಮೇಲೂ ತನ್ನ ಪ್ರಭಾವ ಬೀರುವಂತೆ ಮಾಡಿತು.
ಈ ಚಳವಳಿಯು ಸೌಂದರ್ಯ ಪ್ರಜ್ಞೆಯ ಅನುಭವದ ಮೂಲವಾಗಿ ಬೆಳೆಯಿತು.ಇದು ಮನಸ್ಸಿನ ತಲ್ಲಣ,ಭಯ ಮತ್ತು ಭಯಾನಕತೆ ಮತ್ತು ವಿಸ್ಮಯಗಳ ಭಾವನಾಭೂತಿಗಳ ಮೇಲೆ ಪ್ರಭಾವ ಬೀರಿತು.ಬಹುಮುಖ್ಯವಾಗಿ ನಿಸರ್ಗದ ಭವ್ಯತೆ ಮತ್ತು ಅದರ ಅದ್ಭುತ ಚಿತ್ರಣದ ಗುಣಲಕ್ಷಣಗಳು ಪ್ರಸಕ್ತ ಸೌಂದರ್ಯಪ್ರಜ್ಞೆಯ ಉದಾಹರಣೆಗಳಾಗಿವೆ. ಇದು ಜನಪದ ಕಲೆ ಮತ್ತು ಪ್ರಾಚೀನ ಆಚರಣೆಗಳನ್ನು ಉದಾತ್ತವೆನ್ನುವಂತೆ ಚಿತ್ರಿಸಲು ಸಹಾಯ ಮಾಡಿತು.ಇದು ಅಗತ್ಯವಿರುವ ಗುಣಲಕ್ಷಣಗಳ ಬಗ್ಗೆ ಸ್ವಾಭಾವಿಕವಾಗಿ ಸಂಗೀತದ ವಿಷಯದಲ್ಲಿ ಸಮಯಸ್ಪೂರ್ತಿಯನ್ನು ಬೆಳೆಸುತ್ತದೆ.ಅದರಂತೆ "ನೈಸರ್ಗಿಕ"ವಾಗಿಯೇ ಮನುಷ್ಯನಲ್ಲಿ ಐತಿಹಾಸಿಕ ಪ್ರಜ್ಞೆಯ ತತ್ವಶಾಸ್ತ್ರದ ಹುಟ್ಟಿಗೆ ಕಾರಣವಾಗಿ ಮಾನವರಲ್ಲಿ ಭಾಷೆ ಮತ್ತು ಪದ್ದತಿ-ಆಚರಣೆಗೆ ನಾಂದಿಯಾಯಿತು.
ಭಾವಪ್ರಧಾನತೆಯ ಸಿದ್ದಾಂತವು ವೈಚಾರಿಕ ಕ್ರಾಂತಿ ಮತ್ತು ವರ್ಗೀಕರಣದ ವಿಚಾರಗಳ ಮಾದರಿಗಳ ಅಭಿವೃದ್ದಿಗೆ ಕಾರಣವಾಯಿತು.ಅದೇ ರೀತಿ ಮಧ್ಯಯುಗೀನ ತತ್ವಗಳ ಬೆಳವಣಿಗೆ ಹಾಗು ಕಾಲಕ್ಕೆ ತಕ್ಕಂತೆ ತನ್ನ ತಿರುವುಗಳನ್ನು ತರಲು ಅದಕ್ಕೆ ಸಹಾಯವಾಯಿತು.ಇದರಲ್ಲಿ ಜನಸಂಖ್ಯೆ ಹೆಚ್ಚಳ,ನಗರಿಕರಣದ ನುಸುಳುವಿಕೆ ಮತ್ತು ಕೈಗಾರಿಕಾ ಕ್ರಾಂತಿಯ ಸಿದ್ದಾಂತಗಳ ಬಿಸಿಗಳ ಮಧ್ಯೆಯೂ ಇದು ತನ್ನತನ ಕಳೆದುಕೊಳ್ಳಲಿಲ್ಲ.ಬದುಕಿನ ಶೈಲಿಯಲ್ಲಿ ಚೀನೀಕರಣ ಗೊಂಡರೂ ಅದು ತನ್ನ ಅಪರಿಚಿತತೆ ತೋರದೇ ಆ ಕಾಲದಲ್ಲಿ ಅಂತಹದೇ ನಿಯಮಗಳಿಗೆ ಅಂಟಿಕೊಳ್ಳಲಿಲ್ಲ.
ಆಧುನಿಕ ಭಾವಪ್ರಧಾನತೆಯ ಲಕ್ಷಣವನ್ನು ಪ್ರಸಿದ್ದ ಆಂಗ್ಲ ಕವಿ ಬೈರೊನ್ ನ ವಿಚಾರಗಳಲ್ಲಿ ಮಂಡಿಸಬಹುದಾಗಿದೆ.ತಪ್ಪಾಗಿ ಗ್ರಹಿಸಿದ ಏಕಾಂಗಿಯೊಬ್ಬ ತನ್ನಲ್ಲಿ ಹುಟ್ಟುವ ಸ್ಪೂರ್ತಿಯನ್ನು ಹೆಚ್ಚಾಗಿ ಪಡೆದು ಹೊರಗಿನ ಸಾಮಾಜಿಕ ವಾತಾವರಣಕ್ಕೆ ಅಷ್ಟಾಗಿ ಹೊಂದಿಕೊಳ್ಳಲಾರ.ಇದರಲ್ಲಿನ ಶಿಷ್ಟಾಚಾರ ಗಳಿಗೆ ಮತ್ತು ಸಮಕಾಲೀನ ಸಮಾಜಕ್ಕೆ ಆತ ತಲೆಕೆಡಿಸಿಕೊಳ್ಳಲಾರ.
ಆದರೂ ಈ ಚಳವಳಿಯು ಜರ್ಮನ್ ನ ಸ್ಟರ್ಮ್ ಅಂಡ್ ಡ್ರಾಂಗ್ ಚಳವಳಿಯಲ್ಲಿ ತನ್ನ ಬೇರನ್ನು ಕಂಡುಕೊಂಡಿದೆ.ಇದರಲ್ಲಿ ಜ್ಞಾನೋದಯದ ಅಂತಃಸತ್ವ ಹಾಗು ಭಾವಾತಿರೇಕದ ವೈಚಾರಿಕತೆ ಇದೆ.ಅದೇ ತೆರನಾಗಿ ಫ್ರೆಂಚ್ ಕ್ರಾಂತಿಯಲ್ಲಿಯೂ ಕೂಡಾ ಭಾವಪ್ರಧಾನತೆ ಮತ್ತು ಜ್ಞಾನೋದಯದ ಪ್ರತಿಕ್ರಿಯಾತ್ಮಕ ಕಾರ್ಯಚಟುವಟಿಕೆಗಳು ಸೇರಿವೆ. ವೇಗದ ಕೈಗಾರಿಕರಣದ ಮೇಲೂ ಭಾವಪ್ರದಾನತೆಯ ಸಿದ್ದಾಂತದ ತನ್ನ ಪ್ರಭಾವ ಬೀರಿದೆ.ಆಧುನಿಕ ಸತ್ಯಗಳ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಮನುಷ್ಯರು ರಸಾಭಿವ್ಯಕ್ತಿಯ ಭಾವನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾದರು.19 ನೆಯ ಶತಮಾನದಲ್ಲಿ ಜನರು ಈ "ವಾಸ್ತವತೆ ತತ್ವ"ದ ವಿರುದ್ದ ರಕ್ಷಣೆಗಾಗಿ ಭಾವಪ್ರಧಾನತೆಯ ತತ್ವ ಸಿದ್ದಾಂತಗಳಿಗೆ [೬]ಮಾರುಹೋದರು. ಹೀಗೆ ಭಾವಪ್ರಧಾನತೆಯು ತನ್ನ ಸಾಧನೆಗಳನ್ನು ನಾಯಕನ ನೇತೃತ್ವದಲ್ಲಿ ಮಾಡುವಂತೆ ವ್ಯಕ್ತಿಗಳು ಮತ್ತು ಕಲಾವಿದರಲ್ಲಿ ಹೊಸ ಹುರುಪು ತಂದಿತು.ಅದರಂತೆಯೇ ಇಂತಹ ಪ್ರವರ್ತಕರಿಂದಾಗಿ ಸಮಾಜ ಉನ್ನತಿಯೆಡೆಗೆ ಹೋಗಲು ಸಾಧ್ಯವಾಯಿತು. ವೈಯುಕ್ತಿಕ ಕಲ್ಪನಾಶಕ್ತಿಯನ್ನು ಅದು ವಿಸ್ತಾರಗೊಳಿಸಿ ದೇಶ-ಭಾಷೆಗಳ-ಕಲೆ ಭೇದವಿಲ್ಲದೇ ವರ್ಗೀಕೃತ ಶ್ರೇಣಿಯನ್ನು ಮೀಮಾಂಸೆಗೊಳಪಡಿಸಲು ಅನುವು ಮಾಡಿತು. ಇಲ್ಲಿ ಐತಿಹಾಸಿಕ ಮತ್ತು ನೈಸರ್ಗಿಕ ಅನಿವಾರ್ಯತೆಗೆ ಇದು ಆಸರೆಯಾಯಿತು.ಅದರ ವಿಚಾರಗಳಿಗೆ ಪೂರಕವಾಗುವಂತೆ ಯುಗಧರ್ಮದ ಕಾಲಕ್ಕನುಗುಣ ವಾಗಿ ಅದರ ವೈಚಾರಿಕತೆಗೆ ತನ್ನ ಪ್ರತಿನಿಧಿತ್ವ ಸ್ಥಾಪಿತಿಸಿತು.
ಗುಣಲಕ್ಷಣಗಳು
[ಬದಲಾಯಿಸಿ]"ಭಾವಪ್ರಧಾನತೆಯ ತತ್ವ"ವು ಹಲವಾರು ವಿಶಿಷ್ಟ ವ್ಯಕ್ತಿಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ.ಇದರಲ್ಲಿ ಕಲಾವಿದರು,ಕವಿಗಳು,ಬರೆಹಗಾರರು,ಸಂಗೀತಗಾರರು ಅದಲ್ಲದೇ ರಾಜಕೀಯ,ತತ್ವಸಿದ್ದಾಂತ ಮತ್ತು ಸಾಮಾಜಿಕ ವಿಚಾರವಾದಿಗಳು, ದಾರ್ಶನಿಕರು ಕೂಡಾ 18 ಮತ್ತು 19 ನೆಯ ಶತಮಾನದ ಆರಂಭಿಕ ಸಂದರ್ಭದಲ್ಲಿ ತಮ್ಮ ಸ್ಥಾನ ಪಡೆದಿದ್ದಾರೆ. ಇದನ್ನು ಆ ಕಾಲಮಾನದ ಹಲವಾರು ಕಲಾತ್ಮಕ,ಬೌದ್ದಿಕ ಮತ್ತು ಸಾಮಾಜಿಕ ಬದಲಾವಣೆಗಳಲ್ಲಿಯೂ ಸಮನಾಗಿ ಬಳಸಲಾಗುತ್ತದೆ. ಈ ಸರ್ವೆಸಾಮಾನ್ಯವಾದ ಭಾವಪ್ರಧಾನತೆಯ ಅರ್ಥವನ್ನು ಅದರ ವಿಶಿಷ್ಟ ಮತ್ತು ನಿರ್ಧಿಷ್ಟ ವ್ಯಾಖ್ಯಾನಕ್ಕಾಗಿ ಸದ್ಯ ವಿವಿಧ ರೀತಿಯ ಚರ್ಚೆಗಳು ನಡೆದಿವೆ.ಬೌದ್ದಿಕ ವಲಯದ ಇತಿಹಾಸಕಾರರು ಮತ್ತು ಸಾಹಿತ್ಯದ ಚರಿತ್ರೆಕಾರರ ವಲಯದಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ.ಇದು ಇಪ್ಪತ್ತನೆಯ ಶತಮಾನದ ಆರಂಭದಿಂದಲೂ ಚರ್ಚೆಯ ಪ್ರಮುಖ ವಿಷಯವಾದರೂ ಇನ್ನೂ ಅದಕ್ಕೆ ಯಾವುದೇ ಒಟ್ಟಾಭಿಪ್ರಾಯ ಮೂಡಿಲ್ಲ. ಆರ್ಥರ್ ಲೌಜಾಯ್ ಎಂಬಾತ ತನ್ನ ಎಸ್ಸೇಸ್ ಇನ್ ದಿ ಹಿಸ್ಟ್ರಿ ಆಫ್ ಐಡಿಯಾಸ್ (1948);ಎಂಬ ಕೃತಿಯಲ್ಲಿನ ಭಾವಪ್ರಧಾನತೆಯ ವಿಷಯ ಕುರಿತ ಲೇಖನ ಮಾಲೆಯಲ್ಲೊಂದಾದ "ಆನ್ ದಿ ಡಿಸ್ಕ್ರಿಮಿನೇಶನ್ ಆಫ್ ರೊಮಾಂಟಿಸಿಸಮ್ಸ್ "ನ್ನು ಟಿಪ್ಪಣಿ ಮಾಡಿ ಇದಕ್ಕೆ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದಾನೆ.ಕೆಲವು ಪ್ರತಿಭಾನ್ವಿತರ ಪ್ರಕಾರ ಭಾವಪ್ರಧಾನತೆಯ ತತ್ವ ಸಿದ್ದಾಂತವು ಪ್ರಸಕ್ತಕ್ಕೆ ಮುಖಾಮುಖಿಯಾಗಿದೆ ಎಂದು ಹೇಳಿದರೆ ಇನ್ನೂ ಕೆಲವರು ಆಧುನಿಕರಣೆಗೆ ಈ ತತ್ವವು ಹೆಬ್ಬಾಗಿಲು ಎನ್ನುತ್ತಾರೆ.ಇನ್ನೂ ಹಲವರು ಇದನ್ನು ಜ್ಞಾನೋದಯಕ್ಕೆ ವೈಚಾರಿಕ ನೆಲೆಗಟ್ಟಿನ ಆರಂಭವೆಂದು ಹೇಳುತ್ತಾರೆ.ಅಲ್ಲದೇ ಫ್ರೆಂಚ್ ಕ್ರಾಂತಿಯ ನಂತರದ ಫಲಿತಾಂಶವೇ ಇದಕ್ಕೆ ಮೂಲ ಕಾರಣವೆನ್ನುತ್ತಾರೆ. ಇದರ ಆರಂಭಿಕ ವ್ಯಾಖ್ಯಾನವು ಚಾರ್ಲ್ಸ್ ಬೋದಿಲೇರ್ ನಿಂದ ಬಂದಿದೆ ಎನ್ನಲಾಗಿದೆ.ಆತನ ಪ್ರಕಾರ "ಈ ಭಾವಪ್ರಧಾನತೆಯ ತತ್ವವು ವಿಷಯದ ಆಯ್ಕೆಯಲ್ಲಿಯೂ ಇರದೇ ಸತ್ಯದ ಅನ್ವಷಣೆಯಲ್ಲಿಯೂ ಬರದೇ,ಕೇವಲ ಭಾವನಾಲಹರಿಗಳ ಹರಿಯುವ [೭]ಹಾದಿಯಷ್ಟೆ."
ಬಹಳಷ್ಟು ಬೌದ್ದಿಕ ವಲಯದ ಇತಿಹಾಸಕಾರರ ಪ್ರಕಾರ ಭಾವಪ್ರಧಾನತೆಯ ತತ್ವ ಸಿದ್ದಾಂತವು 18 ನೆಯ ಶತಮಾನದ ಅಂತ್ಯ ಹಾಗು 19 ನೆಯ ಶತಮಾನದಲ್ಲಿ ಆರಂಭಗೊಂಡ ಚಳವಳಿಗೆ ಒಂದು ಕೀಲಿಕೈನಂತೆ ವರ್ತಿಸಿತು.ಇಲ್ಲಿ ಆ ಯುಗದ ಜ್ಞಾನೋದಯಕ್ಕೆ ಇದು ವಿರುದ್ದ ಪ್ರತಿಕ್ರಿಯೆಯಾಗಿತ್ತು. ಆದರೆ ಜ್ಞಾನಮಟ್ಟದ ಯೋಚನಾಲಹರಿ ಹರಿಬಿಟ್ಟ ವಿಚಾರವಾದಿಗಳು ಇದನ್ನು ಹಿಮ್ಮುಖ ಚಲನೆಯ ವ್ಯವಕಲನದ ಕಾರಣ ಎಂದು ತಿಳಿಸಿದರು.ಆದ್ದರಿಂದ ಭಾವಪ್ರಧಾನತೆಯ ಸಿದ್ದಾಂತವು ಅಂತಃಸತ್ವ,ಕಲ್ಪನಾ ಲಹರಿ ಮತ್ತು ಭಾವನೆಗಳ ಸುತ್ತ ಸುತ್ತುತ್ತದೆ.ಆದರೆ ಕೆಲವರು ಈ ಬಗೆಯ ವಿಚಾರವಾದಿಗಳನ್ನು ಅತಾರ್ಕಿಕರೆಂದು [ಸೂಕ್ತ ಉಲ್ಲೇಖನ ಬೇಕು]ದೂರುತ್ತಾರೆ.
ಭಾವಪ್ರಧಾನತೆಯ ಸಿದ್ದಾಂತ ಮತ್ತು ಸಂಗೀತ
[ಬದಲಾಯಿಸಿ]ಆದರೆ ಈ "ಭಾವಪ್ರಧಾನತೆ ಸಿದ್ದಾಂತ"ವು ಸಂಗೀತಕ್ಕೆ ಅಳವಡಿಸಿದ ಕಾಲವೆಂದರೆ ಬಹುತೇಕ 1820 ರಿಂದ 1900 ರ ವರೆಗೆ ಅತ್ಯಂತ ಉಚ್ರಾಯ ಸ್ಥಿತಿಯನ್ನು ಕಂಡಿತೆಂದು ಹೇಳಲಾಗುತ್ತದೆ.ಆದರೆ ಆಧುನಿಕ ಯುಗದಲ್ಲಿ "ಭಾವಪ್ರಧಾನತೆ"ಸಂಗೀತಕ್ಕೆ ಜೊತೆಯಾಗಿದ್ದು ಅದರ ಹಿಂದಿರುವ ಭಾವನಾಶಕ್ತಿಯೇ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸುಮಾರು 1810 ರಲ್ಲಿ ಈ.ಟಿ.ಎ. ಹಾಫ್ ಮ್ಯಾನ್ ಅಲ್ಲದೇ ಮೊಜಾರ್ಟ್ , ಹಯ್ಡನ್ ಮತ್ತು ಬೀತ್ ಹೂವನ್ ಈ ಮೂವರನ್ನು "ಭಾವನಾಪ್ರಧಾನ ಗೀತರಚನೆಕಾರರು ", ಎಂದು ಕರೆಯಲಾಗುತಿತ್ತು.ಲುಡ್ವಿಗ್ ಸ್ಪೊಹ್ರ್ ಎಂಬಾತ "ಉತ್ತಮ ಭಾವಪ್ರಧಾನ ಶೈಲಿ" ಎಂಬ ಪದವನ್ನು ಬಳಕೆಗೆ ತಂದ.ಬೀತ್ ಹೂವನ್ ನ ಫಿಫ್ತ ಸಿಂಫನಿಯ ಭಾಗಗಳಿಗೆ ಇದನ್ನು ಅಳವಡಿಸಿದ. ತಾಂತ್ರಿಕವಾಗಿ ಮೊಜಾರ್ಟ್ ಮತ್ತು ಹಾಯ್ಡನ್ ಇವರನ್ನು ಶಾಸ್ತ್ರೀಯ ಗೀತ ರಚನೆಗಾರರು ಎಂಬ ಹೆಸರಿನಿಂದ ಸಂಭೋಧಿಸಲಾಗುತ್ತದೆ.ಆದರೆ ಬೀತ್ ಹೂವನ್ ನನ್ನು ಸಂಗೀತದಲ್ಲಿ ಭಾವಪ್ರಧಾನತೆಯ ಸಿದ್ದಾಂತವನ್ನು ಪ್ರತಿನಿಧಿಸುವ ವ್ಯಕ್ತಿ ಎನ್ನಲಾಗುತ್ತದೆ. ಆದರೆ ಆರಂಭಿಕ ಇಪ್ಪತ್ತನೆಯ ಶತಮಾನದ ಕಾಲಾವಧಿಯಲ್ಲಿ ಭಾವನೆಗಳಿಗೆ ಹೊಸ ರೂಪ ನೀಡುವ ಈ ಪ್ರಕ್ರಿಯೆಗೆ ಚಾಲನೆ ದೊರೆಯಿತು.ಆವಾಗಲೇ ಹತ್ತೊಬ್ಬತ್ತನೆಯ ಶತಮಾನವು ದಿ ರೊಮ್ಯಾಂಟಿಕ್ ಎರಾ (ಭಾವಪ್ರಧಾನತೆಗೆ ಒತ್ತು ಕೊಟ್ಟ ಕಾಲ)ಎಂಬ ಪ್ರತೀತಿ ಇತ್ತು.ಹೀಗೆ ಇದರ ಬಗ್ಗೆ ಸಂಗೀತದ ಸಮಗ್ರ ಮಾಹಿತಿಯ ಎನ್ ಸೈಕ್ಲೊಪಿಡಿಯಾದಲ್ಲಿ ಪ್ರಕಟವಾಯಿತು.
ಸಾಂಪ್ರದಾಯಿಕ ಆಧುನಿಕ ಭಾವಪ್ರಧಾನದ ಸಿದ್ದಾಂತದ ಸಂಗೀತದ ಬಗ್ಗೆ ಅದರಲ್ಲಿನ ಅಂಶಗಳ ಬಗ್ಗೆ ಚರ್ಚೆ ಆರಂಭವಾಯಿತು.ಆಗ ಬೆಳೆಯುತ್ತಿದ್ದ ಜನಪದ ಸಂಗೀತದಲ್ಲಿ ನೇರವಾಗಿ ಬಳಸಿ(ಭಾವಪ್ರಧಾನತೆಯುಳ್ಳ)ರೊಮ್ಯಾಂಟಿಕ್ ರಾಷ್ಟ್ರೀಯತೆ ಹುಟ್ಟುಹಾಕಲು ಕಾರಣವಾಯಿತು.ಹಾಗೆಯೇ ಇದು [೮]ಕಲೆಗಳಲ್ಲಿ,ಹದಿನೆಂಟನೆಯ ಶತಮಾನದ ಸಂಗೀತದಲ್ಲಿ(ರಸಾಭಿವ್ಯಕ್ತಿಗೆ) ಅನ್ವಯಿಸಲು ಕಾರಣವಾಯಿತು.ಉದಾಹರಣೆಗೆ [೯]ಸುಮಧುರತೆಯುಳ್ಳ ಲಲಿತ ಸಂಗೀತ ಆರಂಭಗೊಂಡಿತು.ಅದರಲ್ಲೂ ಭಾವಪ್ರಧಾನಗೀತೆ ರಚನೆಕಾರರ ದಂಡು ಫ್ರಾಂಜ್ ಸ್ಕಬರ್ಟ್ ಅಂತವರ ತಿರುವುಗಳ ಅನುಸರಿಸಿದರು.ಅಲ್ಲದೇ ಅವರೂ ಕೂಡಾ ಸಂಗೀತ ಕೀ ಗಳ ರೂಪಾಂತರಗಳಲ್ಲಿ ಅವಿಶ್ರಾಂತ ಕೆಲಸ ಮಾಡಿದರು.
ಆಗ ಉಚ್ರಾಯಸ್ಥಿತಿಯಲ್ಲಿದ್ದ ವೈರುದ್ಧ್ಯಗಳು ಮತ್ತು ಭಾವಾವೇಶಗಳು ಬಹುಮುಖ್ಯವಾಗಿ ಸ್ಟರ್ಮ್ ಅಂಡ್ ಡ್ರಾಂಗ್ ಪ್ರತಿಪಾದಿಸಿದ(ಜರ್ಮನ್ ರು "ಸ್ಟಾರ್ಮ್ ಅಂಡ್ ಸ್ಟ್ರೆಸ್ ")ಇದು ಗೊಥಿಕ್ ಕಾದಂಬರಿಯ ಸಾಹಿತ್ಯವನ್ನು ಭಾವಪ್ರಧಾನತೆ ತತ್ವಕ್ಕೆ ಅಳವಡಿಸಲಾಯಿತಲ್ಲದೇ ಇನ್ನಿತರ ಒಪೆರಾಗಳು ಇಲ್ಲವೇ ಸಂಗೀತ ಕಚೇರಿಗಳು ಫ್ರೆಂಚ್ ಕ್ರಾಂತಿಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಸಫಲವಾದವು. ಲೊರೆಂಜೊ ಡ ಪೊಂಟೆ ಅವರ ಲಿಬರೆಟ್ಟಿ ಮೊಜಾರ್ಟ್ ನ ಅಪರೂಪದ ಸಂಗೀತಕ್ಕೆ ಹೊಸ ಭಾವ ತೀವ್ರತೆಗಳನ್ನು ತುಂಬಲು ಯತ್ನಿಸಲಾಯಿತು. ಭಾವಪ್ರಧಾನದ ಸಿದ್ದಾಂತದ ಈ ಪೀಳಿಗೆಗೆ ಬೀತ್ ಹೂವನ್ ತಮ್ಮ ನಾಯಕನಾಗಿ,ಮಾದರಿಯಾಗಿ ಕಾಣಿಸುತ್ತಾನೆ.ಈತ ತನ್ನ ಮೊದಲ ಸಂಗೀತ ಕಾರ್ಯಕ್ರಮವನ್ನು ಬೊನಾಪಾರ್ಟ್ ನ ಅಧಿಕಾರಿಯೊಬ್ಬರಿಗೆ ಇದನ್ನು ಅರ್ಪಣೆ ಮಾಡಿದ.ಈ ಅಧಿಕಾರಿ ಸ್ವಾತಂತ್ರ್ಯ ಪ್ರೇಮಿಯಾಗಿದ್ದ.ನಂತರ ಚಕ್ರವರ್ತಿ ನೆಪೊಲಿಯನ್ ನನ್ನು ಸವಾಲೆನ್ನುವಂತೆ ಎರೊಯಿಕಾ ಸಿಂಫನಿ ಸಂಗೀತ ಕಾರ್ಯಕ್ರಮವನ್ನು ಅರ್ಪಿಸಿದ. ಬೀತ್ ಹೂವನ್ ನ ಫೆಡೆಲಿಯೊ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ತನ್ನ 'ರೆಸ್ಕು ಒಪೆರಾಸ್ 'ನಲ್ಲಿ ಸಂಗೀತದ ಸಂಸ್ಕೃತಿಯನ್ನು ಆದರ್ಶವೆನ್ನುವಂತೆ ಆತ ಆಯೋಜಿಸಿದ್ದ.ಸ್ವಾತಂತ್ರ್ಯದ ಕಹಳೆ ಊದುವ ವೇಳೆಗೆ ತನ್ನ ರಚನೆಗಳನ್ನು ಎಲ್ಲರೂ ಗುನುಗುನಿಸುವಂತೆ ಆತ ಮಾಡಿದ.ಆಗಿನ ವೈಚಾರಿಕ ಅಭಿವೃದ್ದಿಪರ ಕಲಾವಿದರು ಇದಕ್ಕೆ ಸಮ್ಮತಿಸಿದರು.ಕಾಂಗ್ರೆಸ್ ಆಫ್ ವಿಯೆನ್ನಾದ ಸಂದರ್ಭದಲ್ಲಿ ಆಶಾದಾಯಕ ಸ್ಪಂದನೆಗಳ ಪಡೆಯುವ ಭರವಸೆಯನ್ನು ಆಗ ಹೊಂದಲಾಗಿತ್ತು.
ಅದರ ಸಮಕಾಲೀನ ಸಂಗೀತ ಸಂಸ್ಕೃತಿಯನ್ನು ಭಾವಪ್ರಧಾನ ಸಂಗೀತಕ್ಕೆ ಸಾದೃಶ್ಯಗೊಳಿಸಿ ಅದನ್ನು ಸಾರ್ವಜನಿಕ ಬದುಕಿಗೂ ತರಲಾಯಿತು.ಮಧ್ಯಮವರ್ಗದ ಭಾವುಕರಿಗೆ ಈ ಸಂಗೀತದ ರುಚಿ ಉಣಬಡಿಸಲಾಯಿತು.ಇದು ಕೇವಲ ಆಸ್ಥಾನ ವರ್ಗದ ಗಣ್ಯರಿಗೆ ಮಾತ್ರ ಆಗಿನ ಸಂಗೀತಗಾರರು ಮತ್ತು ಗೀತ ರಚನೆಗಾರರು ಮೀಸಲಾಗಿದ್ದರು. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸಂಗೀತ ನೀಡಲು ಹಲವರು ತಮ್ಮ ಶ್ರಮ ವ್ಯಯಿಸಿದರು.ಅದರಲ್ಲೂ ಅತ್ಯುತ್ತಮ ವಾಯೊಲಿನ್ ವಾದಕ ಪಗ್ನಿನಿ ಮತ್ತು ಲಿಸ್ಜಿ ಅವರ ಸಂಗೀತ ಕಾರ್ಯಕ್ರಮದ ಪ್ರವಾಸಗಳು ಇದರ ಆಸೆಗೆ ನೀರೆರೆದವು.
ಬೀತ್ ಹೂವನ್ ನ ತಾಂತ್ರಿಕ ವಿನ್ಯಾಸಗಳು ಒಟ್ಟಾರೆ ಮಹತ್ವದ ವಿಸ್ತರಣೆಗೆ ಕಾರಣವಾದವು.ಸಂಗೀತದಲ್ಲಿ ಅಳವಡಿಸುವ ರೂಪಕಗಳು ಮತ್ತು ರಚನೆಗೆ ಹೆಚ್ಚು ಒತ್ತು ಕೊಡಲಾಯಿತು.ಹೀಗೆ ಸಂಗೀತಕ್ಕೆ ಹೊಸ ಆಯಾಮ ತರುವಲ್ಲಿ ಯಶಸ್ವಿಯಾದರು. ಆತನ ನಂತರದ ಪಿಯಾನೊ ಸಂಗೀತ ಮತ್ತು ತಂತಿ ವಾದ್ಯಗಳ ಸುಮಧುರ ಸಂಗೀತವು ಸಂಪೂರ್ಣ ಸಂಗೀತ ಲೋಕದ ವಿಸ್ಮಯವನ್ನೇ ತೆರೆದಿಟ್ಟಿತು. ಇದೇ ಸಂದರ್ಭದಲ್ಲಿ ಈ.ಟಿ.ಎ.ಹಾಫ್ ಮ್ಯಾನ್ ತಂತಿ ಸಂಗೀತದ ಉಪಕರಣಗಳ ಬಗ್ಗೆ ಬರೆಯಲು ಶಕ್ತನಾದ.ಸುಗಮ ಸಂಗೀತಕ್ಕೆ ಲಾಲಿತ್ಯವನ್ನು ತರುವಲ್ಲಿ ಆತ ಸಫಲನಾದ.ಭಾವಾಭಿವ್ಯಕ್ತಿಯ ಪರಿಕಲ್ಪನೆಯನ್ನು ಈ ಹಿಂದೆ ಅಸಂಬದ್ದ ಎಂದು ಟೀಕಿಸಲಾಗಿತ್ತು. ಹಾಫ್ ಮ್ಯಾನ್ ಸಂಗೀತಗಾರ ಮತ್ತು ಗೀತರಚನೆಕಾರ ಆಗಿದ್ದರಿಂದ ಸಂಗೀತಕ್ಕೆ ಒಂದು 'ಆಯೋಜಿತ' ಅಥವಾ ವಿವರಣಾತ್ಮಕ ಆಲೋಚನೆಯನ್ನು ತಂದು ಹೊಸ ಪ್ರೇಕ್ಷಕ ವರ್ಗವನ್ನು ಆಕರ್ಷಿಸಿದ. ಹತ್ತೊಂಬ್ಬತ್ತನೆಯ ಶತಮಾನದ ಆರಂಭದಲ್ಲಿ ತಂತಿ ವಾದ್ಯಗಳ ತಂತ್ರಜ್ಞಾನದಲ್ಲಿ ಸುಧಾರಣೆಗಳಾದವು.ಪಿಯಾನೊಗಳ ಚೌಕಟ್ಟುಗಳಿಗೆ ಲೋಹದ ಚೌಕಟ್ಟು ಬಂತು.ತಂತಿ ಸಂಗೀತ ಸಲಕರಣೆಗಳಿಗೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಅವು ಅಧಿಕ ಧ್ವನಿ ಹೊರಡಿಸಲು ಸಾಧ್ಯವಾಯಿತು. ಈ ಸುಧಾರಣೆಯು ಸಣ್ಣ ಸಂಗೀತ ಕಾರ್ಯಕ್ರಮಗಳು ವಿಶಾಲತೆ ಪಡೆದು ಆಯೋಜಿತ ಕಾರ್ಯಕ್ರಮಗಳಿಗೆ ಶೀರ್ಷಿಕೆ ನೀಡಲಾಯಿತು.ಉದಾಹರಣೆಗೆ ಬಿಡುವಾಗಿ ನಿಂತು ಹಾಡುವ ಸಂಗೀತ ಗೋಷ್ಟಿಗಳು ಅಥವಾ ಧ್ವನಿ ಕವಿತೆ ಸಂಗೀತ , ಪಿಯಾನೊದ ಅದ್ಭುತ , ನಿಶಾ ಸಂಗೀತ ಮತ್ತು ಉದ್ವೇಗಪೂರ್ಣ ಸಂಗೀತ, ಮತ್ತು ವಿಶಿಷ್ಟ ವಾದ್ಯಗೋಷ್ಟಿ,ಭಾವಪ್ರಧಾನ ಸಂಗೀತಕ್ಕೆ ಧ್ವನಿಯಾದವು.
ರಾತ್ರಿ ಸಂಗೀತಗೋಷ್ಟಿ,ಒಪೆರಾಗಳಲ್ಲಿ ಭಾವಪ್ರಧಾನತೆ ಅಲ್ಲಿನ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ.ಸುಮಧುರ ಸಂಗೀತವು ಜನಪದೀಯ ಪಠ್ಯ ಸತ್ವದ ಮೇಲೆ ಮೊದಲ ಬಾರಿಗೆ ಯಶಸ್ವಿಯಾಯಿತು.ಇದಕ್ಕೆ ವೆಬರ್ ನ ಡೆರ್ ಫ್ರೆಸ್ಕಚ್ (1817, ಪರಿಷ್ಕೃತ 1821)ಎಂಬುದು ಹೆಸರು ಮಾಡಿತು. ಆಗಿನ ಕಾಲದ ಹೆಕ್ಟರ್ ಬೆರ್ಲಿಯೊಜ್ ನ ವಾದ್ಯಗೋಷ್ಟಿಯು ಉತ್ತಮ ನಾದಗುಣ ಮತ್ತು ವರ್ಣರಂಜಿತ ಸಂಗೀತವನ್ನು ಫ್ರಾನ್ಸ್ ನಲ್ಲಿ ನೀಡಿತು.ಅದಲ್ಲದೇ ಮೆಯೆರೆಬೀರ್ ಭವ್ಯ ಒಪೆರಾಗಳು(ಸಂಗೀತ ಪ್ರಧಾನ ರೂಪಕಗಳು) ಮುಂಚೂಣಿಯಲ್ಲಿದ್ದವು. ಇದರಲ್ಲಿ ಅತ್ಯಂತ ವಿಚಾರಪ್ರಚೋದಕ ಅಣಕಗಳನ್ನೊಳಗೊಂಡ ಕಾರ್ಯಕ್ರಮಗಳು ಜನಜನಿತವಾದವು.(ಇಲ್ಲಿ ವ್ಯಾಗ್ನರ್ ನ ಸ್ವಂತ ಶಬ್ದಗಳಲ್ಲಿ ವರ್ಣಿಸಲ್ಪಟ್ಟಿದ್ದವು)ಇದರಲ್ಲಿ ಭವಿಷ್ಯದ 'ಕಲಾವಿದರು'ಎನ್ನಲಾದ ಲಿಸ್ಜ್ ಮತ್ತು ವ್ಯಾಗ್ನರ್ ಅವರುಗಳು ಅತ್ಯಂತ ಮುಕ್ತ ಭಾವಪ್ರಧಾನ ಕಾರ್ಯಕ್ರಮಗಳು ಪ್ರಾರಂಭವಾದವು.ಇವು ಸ್ಪೂರ್ತಿದಾಯಕ,ಆಕರ್ಷಕ ಆಗಿದ್ದವು.ಇಲ್ಲಿ ವೈಯಕ್ತಿಕವಾಗಿ ಕಲಾವಿದರು ತಮ್ಮ ವರ್ಚಸ್ಸನ್ನು ಬೆಳೆಸಲು ಅವಕಾಶ ದೊರೆಯಿತು.
ಇಲ್ಲಿ ಭಾವಪ್ರಧಾನದ-ಯುಗದ ನೃತ್ಯವು ಪ್ಯಾರಿಸ್ ನಲ್ಲಿ ಒಪೆರಾಗಳಿಂದ ಮುಕ್ತವಾಗಿ ತನ್ನದೇ ಅಸ್ತಿತ್ವ ಉಳಿಸಲು ಪ್ರಾರಂಭಿಸಿತು.ಕೇವಲ ಆಸ್ಥಾನಿಕರಿಗೆ ಮೀಸಲಾದ ಸಂಗೀತ ಬೇರೆ ಬೇರೆ ರೂಪ ಧರಿಸಿ ಸಂಗೀತದ ವ್ಯಾಖ್ಯಾನಕ್ಕೆ ವಿವರ ನೀಡಿತು.ಅಣಕು ರೂಪಗಳು ಸಂಗೀತ ಗೋಷ್ಟಿಯಲ್ಲಿ ತಮ್ಮದೇ ಸ್ಥಾನ ಪಡೆದವು.ಸಾರ್ವತ್ರಿಕವಾಗಿ ಯುವಕರ ಭಗ್ನ ಪ್ರೇಮ,ನೃತ್ಯದ ಅದ್ಭುತ ಪ್ರದರ್ಶನಗಳು ರಂಗಮಂಚಕ್ಕೆ ಬಂದವು.ಪ್ರಕೃತಿಗೆ ಮೀರಿದ ವಿಷಯಗಳ ಪ್ರಸ್ತಾಪ ಮೊದಲು ಹೆಜ್ಜೆ ಇಟ್ಟಿತು:ಅದರಲ್ಲಿ ಗ್ರೆಸೆಲ್ಲೆ ರ (1841)ಉದಾಹರಣೆ ಮಾತ್ರ ಅತ್ಯಂತ ಪ್ರಾಧಾನ್ಯತೆ ಪಡೆದುಕೊಡಿತು.
ಸುಮಾರು 1815 ರಿಂದ 1848 ಕಾಲಾವಧಿಯು ಸಂಗೀತದಲ್ಲಿನ ನೈಜ ಭಾವಪ್ರಧಾನತೆಯ ತತ್ವ-ಸಿದ್ದಾಂತವನ್ನು ಪ್ರತಿಪಾದಿಸಿತು.ಈ ಯುಗದಲ್ಲಿ ಬೀತ್ ಹೂ ನ (d. 1827)ಕೊನೆಯ ರಚನೆಗಳು ಮೂಡಿದವು.ಸ್ಕಬರ್ಟ್ ನ (d. 1828)ಸ್ಕುಮನ್ (d. 1856)ಅವರ ರಚನೆ ಅಲ್ಲದೇ ಚೊಪಿಯ (d.1849)ಇವು ಆರಂಭಿಕ ಬರ್ಲಿಯೊಜ್ ಮತ್ತು ರಿಚರ್ಡ್ ವ್ಯಾಗ್ನರ್ ನ ಹೋರಾಟಗಳ ನೆನಪಿಸುತ್ತವೆ.ಇದರಲ್ಲಿ ಉತ್ತಮ ಸಂಗೀತ ವಾದ್ಯದ ವಾಯೊಲಿನ್ ವಾದಕ ಪಗ್ನಿನ್ (d. 1840)ಮತ್ತು ಯುವ ಲಿಸ್ಜ್ ಮತ್ತು ಥಲ್ಬೆರ್ಗ್ ಅವರ ಅಸ್ತಿತ್ವವು ಗೋಚರಿಸಿತು. ಸದ್ಯ ನಾವು ಮೆಂಡೆಲ್ಸೊನ್ ನ (d. 1847)ಕೃತಿಯನ್ನು ಕೇಳಲು ಸಾಧ್ಯವಿದೆ.ಈ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದ ಬಿಡೆಯರ್ ಮಿಯರ್ ಅವರ ಹೆಸರನ್ನು ಆತ ಕಿತ್ತಿಹಾಕುವಲ್ಲಿ ಸಫಲನಾದ.ಹೀಗೆ ಈ ಸಿದ್ದಾಂತ ತತ್ವದ ಪ್ರಚಾರಕ್ಕೆ ಆತ ಹೆಸರಾದ. ಈ ಕಾಲಾವಧಿಯ ನಂತರ ಚೊಪಿನ್ ಮತ್ತು ಪಗ್ನಿನ್ ಮೃತಪಟ್ಟರೆ ಲಿಸ್ತ್ಜ್ ಈ ಜರ್ಮನ್ ರಂಗಮಂಚದಿಂದಲೇ ನಿವೃತ್ತಿ ಪಡೆದರು.ವ್ಯಾಗ್ನರ್ ತಮಗೆ ಬವೆರಿಯಾದಲ್ಲಿ ರಾಜಮನೆತನದ ಪೋಷಕ ವರ್ಗ ಸಿಗುವವರೆಗೂ ಅಜ್ಞಾತವಾಸದಲ್ಲಿದ್ದರು.ಅದಲ್ಲದೇ ಬೆರ್ಲಿಯೊಜ್ ಅವರ ವಿಮೋಚನೆಗಾಗಿ ಯುರೊಪ್ ನಲ್ಲಿ ವಿಚಾರವಾದಿ ಕಲಾವಿದರ ಪರವಾಗಿ ಹೋರಾಟ ನಡೆಸುತ್ತಿದ್ದರು.ಇದು ಭಾವಪ್ರಧಾನತೆಯ ಸಿದ್ದಾಂತಕ್ಕೆ ಮೊದಲೇ ಶುರುವಾಗಿತ್ತಾದರೂ ಅದರ ಹಿಂದಿನ ಆರಂಭಿಕತೆಗೆ ಹೆಚ್ಚು ಒತ್ತು ಸಿಕ್ಕಿರಲಿಲ್ಲ.ಈ ಭಾವಪ್ರಧಾನತೆಯ ಸಿದ್ದಾಂತದ ಸಂಗೀತ ದ ಬಗ್ಗೆ ಆ ಕಾಲದಲ್ಲಿ ಮಹತ್ವ ಆರಂಭವಾಗಿತ್ತು. (ಈ ಲೇಖನ ನೋಡಿ ಭಾವಪ್ರಧಾನ ಸಂಗೀತ music) .
ಭಾವಪ್ರಧಾನ ಸಾಹಿತ್ಯ
[ಬದಲಾಯಿಸಿ]ಭಾವಪ್ರಧಾನ ಸಾಹಿತ್ಯದಲ್ಲಿ ಹಿಂದೆ ನಡೆದ ವಿವರ ಅಥವಾ ಘಟನೆಗಳ ಬಗ್ಗೆ ವಿಮರ್ಶೆ ಅಥವಾ ವಿಕಸನದ ಭಾಗವಿರುತ್ತದೆ.ಅಲ್ಲಿ "ಇಂದ್ರಿಯ ಗ್ರಾಹ್ಯ" ಅರ್ಥೈಸುವಿಕೆಯು ಮಹಿಳೆಯರು ಮತ್ತು ಮಕ್ಕಳ ಕುರಿತಾಗಿ ಹೆಚ್ಚು ಪ್ರಮಾಣದಲ್ಲಿ ಕಾಣಸಿಗುತ್ತದೆ.ಇಲ್ಲಿ ನಾಯಕಪ್ರಧಾನ ಸಾಹಿತ್ಯದಲ್ಲಿ ಅದರ ಕಲಾವಂತಿಕೆ,ನಿಸರ್ಗ ಪ್ರೀತಿ ಮತ್ತು ವಿವರಣೆಗಾರರ ಭಾವತೀವ್ರತೆ ಎದ್ದು ಕಾಣುತ್ತದೆ. ಮುಂದೆ ಹಲವಾರು ಭಾವಪ್ರಧಾನತೆಯ ಸಿದ್ದಾಂತ ಬಳಸಿದ ಬರಹಗಾರರೆಂದರೆ ಎಜ್ಜರ್ ಅಲೆನ್ ಪೊಯಿ ಮತ್ತು ನಾಥನಿಯಲ್ ಹಾವ್ ಥ್ರೊನೆ ತಮ್ಮ ಕೃತಿಗಳಲ್ಲಿ ವಿಶಿಷ್ಟತೆ ತೋರಿದರು.ಅವರ ಕೃತಿಗಳು ಬಹುಮುಖ್ಯವಾಗಿ ಅತೀಂದ್ರಿಯ ಶಕ್ತಿ ಅಥವಾ ಇಂದ್ರಜಾಲದ ಮಾಂತ್ರಿಕತೆ ಮತ್ತು ಮನುಷ್ಯರ ಮನಃಶಾಸ್ತ್ರ ಒಳಗೊಂಡಿತ್ತು. ಈ ಭಾವಪ್ರಧಾನತೆಯ ಸಿದ್ದಾಂತವು ಹೊಸ ಆಲೋಚನೆಗಳಿಗೆ ಇಂಬು ನೀಡಿತು.ಅದು ಧನಾತ್ಮಕ ಧ್ವನಿಗಳಿಗೆ ಅವಕಾಶ ಕೊಟ್ಟಿದ್ದರಿಂದ ಸಮಾಜದ ಕೆಳವರ್ಗಕ್ಕೂ ಇದು ಲಾಭದಾಯಕವೆನಿಸಿತು.
ಸ್ಕಾಟಿಶ್ ಕವಿ ಜೇಮ್ಸ್ ಮ್ಯಾಕ್ ಫೆರ್ಸನ್ ತನ್ನ ಕವನ ಸಂಕಲನ ಒಸ್ಸಿಯನ್ ಎಂಬ ಚಕ್ರೀಕೃತ(ಪುನರಾವರ್ತಿಕ) ಕಾವ್ಯಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಭಾವಪ್ರಧಾನತೆಯ ಯುಗಕ್ಕೆ ನಾಂದಿ ಹಾಡಿದ.ಆ ಕವನ ಸಂಕಲನ 1762 ರಲ್ಲಿ ಪ್ರಕಟಗೊಂಡು ಆ ಕಾಲದ ಇನ್ನಿತರರ ಮೇಲೆ ಪ್ರಭಾವ ಬೀರಿತು.ಇದಲ್ಲದೇ ಗೊಥೆ ಮತ್ತು ಯುವ ವಾಲ್ಟರ್ ಸ್ಕಾಟ್ ಅವರ ಮೇಲೆ ಸ್ಪೂರ್ತಿದಾಯಕ ಪರಿಣಾಮ ಬೀರಿತು.
ಆರಂಭಿಕ ಜರ್ಮನ್ ಪ್ರಭಾವವು ಜೊಹನ್ ವೂಲ್ಫ್ ಗ್ಯಾಂಗ್ ಗೊಥೆ ಅವರಿಂದ ಬಂದಿತು.ಆತ 1774 ರಲ್ಲಿ ದಿ ಸಾರ್ರೊ ಆಫ್ ಯಂಗ್ ವೆರ್ದರ್ ಎಂಬ ಕಾದಂಬರಿ ಬರೆದಾಗ ಅದು ಯುವಕರಲ್ಲಿ ಹೊಸ ಹುರುಪು ತಂದಿತು.ಇಡೀ ಯುರೊಪಿನಾದ್ಯಂತ ಅದು ತನ್ನ ಕಾದಂಬರಿಯಲ್ಲಿ ಬರುವ ನಾಯಕನ ವೀರತ್ವವನ್ನು ವಿವರಿಸಿದ್ದು ಯುವಕರಲ್ಲಿ ನವೀನ ಮಾದರಿಯ ಭಾವಪ್ರಧಾನತೆ ಉಕ್ಕುವಂತೆ ಮಾಡಿತು. ಆ ವೇಳೆಯಲ್ಲಿ ಜರ್ಮನ್ ಸಣ್ಣ ಸಣ್ಣ ಭಾಗಗಳಲ್ಲಿ ಹಂಚಿತ್ತು.ಆಗ ಗೊಥೆಕ್ ನ ಈ ಕಾದಂಬರಿ ಜರ್ಮನಿಯಲ್ಲಿ ಬೆಳೆಯುತ್ತಿರುವ ಒಂದುಗೂಡುವಿಕೆಯ ರಾಷ್ಟ್ರೀಯತೆ ಹುಟ್ಟು ಹಾಕಿತು. ಇನ್ನೊಬ್ಬ ಜರ್ಮನ್ ತತ್ವಜ್ಞಾನಿ ಜೊಹನ್ ಗೊಟಿಬ್ ಫಿಚ್ಟೆ ಮತ್ತು ಫ್ರೆಡ್ರಿಚ್ ಶೆಲ್ಲಿಂಗ್ ಅವರ ಅಲೋಚನಾ ಲಹರಿ ಕೂಡಾ ಆ ಪ್ರದೇಶದಲ್ಲಿ ತನ್ನ ಪ್ರಭಾವ ತೋರಿತು.ಅವರು ಜೆನಾ (ಫಿಚ್ಟೆ ವಾಸಿಸುತ್ತಿದ್ದ,ಅಲ್ಲದೇ ಸ್ಕೆಲ್ಲಿಂಗ್ ,ಹೆಗೆಲ್ .ಸ್ಕಿಲ್ಲರ್ ಮತ್ತು ಸಹೋದರರಾದ ಸ್ಕೆಲ್ಜೆಲ್ ಮತ್ತು ಇನ್ನಿತರರ ಸ್ಥಳವಾಗಿತ್ತು.ಅದು ಭಾವಪ್ರಧಾನತೆಯ ಸಾಹಿತ್ಯ ರಚನೆಗೆ ಕೇಂದ್ರವಾಗಿ ಪರಿಣಮಿಸಿತು.ಆರಂಭಿಕ ಭಾವಪ್ರಧಾನತೆಯು ಎಲ್ಲರನ್ನು ಸೆಳೆಯಿತು.("ಜೆನಿಯರ್ ರೊಮ್ಯಾಂಟಿಕ್ ") ಆಗ ಮಹತ್ವದ ಲೇಖಕರೆಂದರೆ ಲುಡ್ವಿಗ್ ಟೆಕ್ , ನೊವಾಲಿಸ್ (ಹೆನ್ರಿಚ್ ವೊನ್ ಒಫ್ಟರ್ ಡಿಂಜೆನ್ , 1799), ಹೆನ್ರಿಚ್ ವೊನ್ ಕ್ಲೆಸ್ಟ್ ಮತ್ತು ಫ್ರೆಡ್ರಿಚ್ ಹೊಲ್ಡಾರಿನ್ ಮುಂತಾದವರು. ನಂತರ ಹೆಡೆಲ್ ಬರ್ಗ್ ಜರ್ಮನಿಯ ಭಾವಪ್ರಧಾನತೆಯ ಸಿದ್ದಾಂತದ ಕೇಂದ್ರವಾದರು.ಹೀಗೆ ಆಗಿನ ಬರಗಾರರು ಮತ್ತು ಕವಿಗಳು ಉದಾಹರಣೆಗೆ ಕ್ಲೆಮೆನ್ಸ್ ಬ್ರೆಂಟಾನೊ , ಅಚಿಮ್ ವೊನ್ ಅರ್ನಿಮ್ , ಮತ್ತು ಜೊಸೆಫ್ ಫ್ರೆಯಿಹೆರ್ ವೊನ್ ಎಚಂಡ್ರಿಫ್ ಮೊದಲಾದವರು ನಿಯಮಿತವಾಗಿ ಭೇಟಿ ಮಾಡಿ ಆಧುನಿಕ ಭಾವಪ್ರಧಾನತೆಯ ಸಿದ್ದಾಂತವನ್ನು ಚರ್ಚಿಸುತ್ತಿದ್ದರು. ಹಲವಾರು ಜರ್ಮನಿಯ ಹಲವಾರು ಮಹತ್ವದ ಸಾಹಿತ್ಯಿಕ ಭಾವಪ್ರಧಾನತೆಯ ಸಿದ್ದಾಂತದ ಸಾಹಿತ್ಯವು ಪ್ರವಾಸ ಕಥನ,ನಿಸರ್ಗ ಮತ್ತು ಪ್ರಾಚೀನ ಪುರಾಣದ ಮೇಲೆ ಪ್ರಕಟಗೊಳ್ಳಲಾರಂಭಿಸಿತು. ನಂತರ ಜರ್ಮನ್ ಭಾವಪ್ರಧಾನತೆಯ ಸಿದ್ದಾಂತವು ಈ.ಟಿ.ಎ.ಹಾಫ್ ಮ್ಯಾನ್ ನ ಡೆರ್ ಸೆಂಡಾ ಮ್ಯಾನ್ ಮತ್ತು (ದಿ ಸೆಂಡಾ ಮ್ಯಾನ್ )1817 ಮತ್ತು ಜೊಸೆಫ್ ಫ್ರೆಹೆರ್ರ್ ವೊನ್ ಎನೆಚೆಂಡೊರ್ಫ್ ನ ದಾಸ್ ಮಾರ್ಮೊಬಿಲ್ಡ್ ,ದಿ ಮಾರ್ಬಲ್ ಸ್ಟಾಚು,1819 ಈತ ತನ್ನ ಸಾಹಿತ್ಯಿಕ ಅಂಶಗಳಲ್ಲಿ ಕೊಂಚ ಮಂದತೆ ತೋರಿದ್ದಲದೇ ಗೊಥೆಕ್ ಅಂಶಗಳನ್ನು ಬಳಸಿದ್ದಾನೆ.
ಸ್ಪೇನ್ ನಲ್ಲಿ ಭಾವಪ್ರಧಾನತೆಯ ಸಿದ್ದಾಂತ ಆಧಾರಿತ ಸಾಹಿತ್ಯವು ಸಾಕಷ್ಟು ಕವಿಗಳು ಮತ್ತು ನಾಟಕಕಾರರ ಹುಟ್ಟಿಗೆ ಕಾರಣವಾಯಿತು. ಈ ಚಳವಳಿಯ ಬಹುಮುಖ್ಯ ಕವಿ ಜೊಸೆ ಡೆ ಎಸ್ಪ್ರೊನ್ಸೆಡಾ ಆ ಕಾಲದ ಜನಪ್ರಿಯ ಬರಹಗಾರರೆನಿಸಿದ. ಆತನ ನಂತರ ಇನ್ನಿತರ ಕವಿಗಳೆಂದರೆ ಗುಸ್ತಾವೊ ಅಡೊಲ್ಫೊ ಬೆಕ್ಕರ್,ಮೇರಿಯಾನೊ ಜೊಸೆ ಡೆ ಲಾರಾ ಮತ್ತು ಡೊನ್ ಜೌನ್ ಟೆನೊರಿಯೊ ಬರೆದ ನಾಟಕಕಾರ ಜೊಸೆ ಝೊರಿಲ್ಲಾ ಇತ್ಯಾದಿ. ಅವರ ಮುಂಚೆ ಭಾವಪ್ರಧಾನತೆ ಸಿದ್ದಾಂತದ ಹುಟ್ಟುವಿಕೆಯ ಮೊದಲು ಜೊಸೆ ಕ್ಯಾಡಾಲ್ಸೊ ಮತ್ತು ಮ್ಯಾನ್ಯುವಲ್ ಜೊಸೆ ಕ್ವಿಂಟಾನಾಅವರುಗಳನ್ನು ಹೆಸರಿಸಬಹುದು.
ಸ್ಪ್ಯಾನಿಶ್ ಭಾವಪ್ರಧಾನತೆಯ ಸಿದ್ದಾಂತವು ಪ್ರಾದೇಶಿಕ ಸಾಹಿತ್ಯವನ್ನು ಪ್ರಭಾವಿಸಿತು. ಉದಾಹರಣೆಗಾಗಿ ಕ್ಯಾಟಲೊನಿಯಾ ಮತ್ತು ಗ್ಯಾಲಿಸಿಯಾದಲ್ಲಿ ಪ್ರಾದೇಶಿಕ ಬರಹಗಾರರ ಒಂದು ದಂಡು ರಾಷ್ಟ್ರೀಯತೆಗೆ ಅನುವು ಮಾಡಿಕೊಟ್ಟಿತು.ಕ್ಯಾಟಲಾನ್ ತರಹ ಜಾಸಿಂಟ್ ವೆರ್ದ್ಯಾಗುವರ್ ಮತ್ತು ಗ್ಯಾಲಿಸಿಯನ್ ರೊಸಾಲಿಯಾ ಡೆ ಕ್ಯಾಸ್ಟ್ರೊ ಇವರುಗಳು ರಾಷ್ಟ್ರೀಯ ಸುಧಾರಣಾ ಚಳವಳಿ ರೆನೈಕ್ಸೆನಕಾ ಮತ್ತು ರೆಕ್ಸುರ್ ಡೆಮೆಂಟೊಗಳಲ್ಲಿ ಪಾಲ್ಗೊಂಡ ಪ್ರಮುಖ ವ್ಯಕ್ತಿಗಳಾಗಿದ್ದಾರೆ.
ಬ್ರೆಜಿಲಿಯನ್ ಭಾವಪ್ರಧಾನತೆಯ ಸಿದ್ದಾಂತವು ಗುಣಲಕ್ಷಣಗಳ ಆಧಾರದ ಮೇಲೆ ಮೂರು ವಿಭಿನ್ನ ಕಾಲಮಾನದಲ್ಲಿ ವಿಭಜಿಸಲಾಗಿದೆ. ಮೊದಲನೆಯದಾಗಿ ರಾಷ್ಟ್ರೀಯತೆಯ ಗುರುತನ್ನು ಧೃಢಿಕರಿಸುವುದು,ಅದರ ಜಾಗೃತಿ ಮೂಡಿಸಲು ಭಾರತೀಯರ ನಾಯಕತ್ವದ ತತ್ವಗಳನ್ನು ಅಳವಡಿಸುವುದು. ಕೆಲವು ಉದಾಹರಣೆಗಳಂದರೆ ಜೊಸೆ ಡೆ ಅಲೆಂಕರ್ "ಐರೆಸೆಮಾ"ಮತ್ತು "ಒ ಗೌರನಿ" ಹಾಗು ಗೊಂಕಾಲ್ವ್ಸ್ ಡಯಾಸ್ ತನ್ನ "ಕ್ಯಾಂಕಾವೊ ಡೊ ಎಕ್ಸಿಲೊ"ಎಂಬ ಹಾಡು ರಚಿಸಿ ಹೆಸರು ಮಾಡಿದ.(ಅಜ್ಞಾತವಾಸದ ಹಾಡು) ಎರಡನೆಯ ಕಾಲಮಾನವು ಯುರೊಪಿಯನ್ನಿನ ಪಠ್ಯರಚನೆಗಳಿಂದ ಪ್ರಭಾವ ಪಡೆಯಿತು.ಇದರಲ್ಲಿ ಸಂಪ್ರದಾಯಗಳು,ಅದರಲ್ಲಿ ಸುಮಧುರತೆ,ದುಃಖ ಮತ್ತು ನಿರಾಸೆಗಳು ಗಟ್ಟಿ ಪ್ರೇಮದ ಭಗ್ನ ಗುಣಗಳಾಗಿವೆ. ಗೊಥೆ ಮತ್ತು ಲಾರ್ಡ್ ಬೈರೊನ್ ರನ್ನು ಈ ಕೃತಿಗಳಲ್ಲಿ ಹೆಸರಿಸಬಹುದು. ಮೂರನೆಯ ಕಾಲಗತಿಯ ಚಕ್ರದಲ್ಲಿ ಸಾಮಾಜಿಕ ಕಾವ್ಯ ಹೊರಬಂತು.ಸಾಮಾನ್ಯವಾಗಿ ನಿರ್ಮೂಲನಾ ಚಳವಳಿಗೆ ಸಂಬಂಧಿಸಿದ್ದು,ಇದರ ಬಹುದೊಡ್ಡ ಕವಿಯೆಂದರೆ ಕ್ಯಾಸ್ಟ್ರೊ ಅಲ್ವೆಸ್ ಪ್ರಸಿದ್ದಿಯಾಗಿದ್ದ.
ಇದರ ಕೆಲವೇ ಸಮಯದ ಅಂತರದಲ್ಲಿ ಬ್ರಿಟಿಶ್ ಸಾಹಿತ್ಯ ವಿಭಿನ್ನ ರೂಪ ಪಡೆದು ಅಭಿವೃದ್ದಿಯಾಯಿತು.ಇದರಲ್ಲಿನ ಪ್ರಮುಖ ಕವಿಗಳೆಂದರೆ ವಿಲಿಯಮ್ ವರ್ಡ್ಸ್ ವರ್ತ್ ಮತ್ತು ಸ್ಯಾಮ್ಯುವಲ್ ಟೇಲರ್ ಕೊಲೆರಿಜ್ ,ಈತ ಲಿರಿಕಲ್ ಬ್ಯಾಲೆಡ್ಸ್ ಕೃತಿಯ (1798)ಸಹಕರ್ತೃ ಆಗಿದ್ದಾನೆ.ಅಲ್ಲದೇ ಜನಪದ ಸಂಪ್ರದಾಯದಿಂದ ನೇರವಾಗಿ ಕೆಲ ಅಂಶಗಳನ್ನು ಪಡೆದ ಎಂಬ ಕಾರಣಕ್ಕಾಗಿ ಆಗಸ್ಟಿಯನ್ ಕಾವ್ಯವನ್ನು ನಿರಾಕರಿಸಲಾಯಿತು. ಈ ಇಬ್ಬರೂ ಕವಿಗಳು ಸಾಮಾಜಿಕ ಆದರ್ಶ ರಾಜ್ಯದ (ರಾಮ ರಾಜ್ಯ)ಪರಿಕಲ್ಪನೆಯನ್ನು ಫ್ರೆಂಚ್ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟು ಹಾಕಿದರು. ”ಕವಿ ಮತ್ತು ಚಿತ್ರ ಕಲಾವಿದ ವಿಲಿಯಮ್ ಬ್ಲೇಕ್ ,ಬ್ರಿಟನ್ನಿನಲ್ಲಿ ಭಾವಪ್ರಧಾನತೆಯ ಸಿದ್ದಾಂತಕ್ಕೆ ಅತ್ಯುತ್ತಮ ಉದಾಹರಣೆಯನ್ನು ತಮ್ಮ ಕಾವ್ಯದ ಮೂಲಕ ನೀಡಿದರು.ಆತನೇ ಘೋಷಿಸಿರುವಂತೆ "ನಾನು ಉತ್ತಮ ರಾಜ್ಯ,ಸುಖಿ ರಾಜ್ಯ ಪದ್ದತಿಯ ಕಲ್ಪನೆಯನ್ನು ಇನ್ನೊಬ್ಬರ ಅನುಕೂಲವಾಗುವ ಮಾದರಿಯಲ್ಲಿರಬೇಕೆಂದು ಅಪೇಕ್ಷಿಸುತ್ತೇನೆ." ಬ್ಲೇಕ್ ನ ಚಿತ್ರಕಲೆಯು ಮಧ್ಯಯುಗೀನ ಸಾಹಿತ್ಯ ಗ್ರಂಥಗಳಿಂದ ಪ್ರಭಾವಿತವಾಯಿತು. ಇನ್ನುಳಿದ ಚಿತ್ರ ಕಲೆಗಾರರಾದ ಜೆ.ಎಂ.ಡಬ್ಲು.ಟರ್ನರ್ ಮತ್ತು ಜಾನ್ ಕಾನ್ ಸ್ಟೇಬಲ್ ರಿಂದ ಭಾವಪ್ರಧಾನತೆ ಸಿದ್ದಾಂತ ಅನುಮೋದಿಸಲ್ಪಟ್ಟಿತು. ಲಾರ್ಡ್ ಬೆರೊನ್ , ಪರ್ಸಿ ಬೈಸಿ ಶೀಲ್ಲೆಯ್ , ಮೇರಿ ಶೆಲ್ಲೆಯೆ ಮತ್ತು ಜಾನ್ ಕೀಟ್ಸ್ ಇವರುಗಳು ಬ್ರಿಟೇನ್ ನಲ್ಲಿ ಎರಡನೆಯ ಹಂತದ ಭಾವಪ್ರಧಾನತೆಯ ಸಿದ್ದಾಂತಕ್ಕೆ ನಾಂದಿ ಹಾಡಿದರು.
ಬಹುತೇಕ ರೊಮನ್ ಕ್ಯಾಥೊಲಿಕ್ ದೇಶಗಳಲ್ಲಿ ಭಾವಪ್ರಧಾನತೆ ಸಿದ್ದಾಂತವು ಜರ್ಮನಿಯಷ್ಟು ತನ್ನ ಎತ್ತರದ ಧ್ವನಿ ಪಡೆಯಲಿಲ್ಲ.ಹೀಗೆ ಅದು ನಿಧಾನವಾಗಿ ನೆಪೊಲಿಯನ್ ನ ಉಗಮದ ನಂತರ ಪ್ರಗತಿ ಪಡೆಯಿತು. ಫ್ರಾಂಕೊಯಿಸ್-ರೆನೆ ಡೆ ಚಾಟಿಬ್ರಿಯಾಂಡ್ ನನ್ನು ಸಾಮಾನ್ಯವಾಗಿ "ಫ್ರೆಂಚ್ ನ ಭಾವಪ್ರಧಾನತೆಯ ಸಿದ್ದಾಂತ ಪ್ರತಿಪಾದನೆಯ ಜನಕ" ಎನ್ನುತ್ತಾರೆ. ಫ್ರಾನ್ಸ್ ನಲ್ಲಿ ಈ ಕ್ರಾಂತಿಯು ಹತ್ತೊಬ್ಬತ್ತನೆಯ ಶತಮಾನದೊಂದಿಗೆ ತಳಕು ಹಾಕಿಕೊಂಡಿತ್ತು.ದೆವೊದೊರೆ ಗೆರಿಕಾಲ್ಟ್ ನ ಚಿತ್ರಕಲೆಯಲ್ಲಿ ಮತ್ತು ಯುಗೆನೆ ಡೆಲೆಕ್ರೊಇಕ್ಸ್ ನ ನಾಟಕಗಳಲ್ಲಿ,ಕವಿತೆಗಳಲ್ಲಿ ಮತ್ತು ವಿಕ್ಟೊರ್ ಹುಗೊ ನ ಕಾದಂಬರಿಗಳಲ್ಲಿ (ಉದಾಹರಣೆಗೆ ಲೆಸ್ ಮಿಸ್ಜರೇಬಲ್ಸ್ ಮತ್ತು ನೈಂಟಿ ಥ್ರೀ ಹಾಗು ಸ್ಟೆಂಢಾಲ್ ನ ಕಾದಂಬರಿಗಳಲ್ಲಿ ಈ ಪರಿಕಲ್ಪನೆಯ ಪ್ರಸ್ತಾಪವಿದೆ.
ಆಧುನಿಕ ಪೊರ್ಚ್ ಗೀಸ್ ಕಾವ್ಯವು ಭಾವಪ್ರಧಾನತೆಯ ಸಿದ್ದಾಂತಗಳ ಗ್ರಂಥಗಳ ಸಾರದಲ್ಲಿ ಇದನ್ನು ಅಳವಡಿಸಿಕೊಂಡಿದೆ.ಇದರಲ್ಲಿ ಅಲ್ಮೆಡಾ ಗೆರ್ರೆಟ್ ಅತ್ಯಂತ ಖ್ಯಾತಿ ಪಡೆದ ಸಾಹಿತಿಯಾಗಿದ್ದಾನೆ.ಈತ ಈ ತತ್ವಕ್ಕೆ ಸಹಾಯಕನಾಗಿದ್ದಾನೆ.ಆತನ ಜನಪ್ರಿಯ ಗ್ರಂಥ Folhas Caídas (1853). ಹೀಗೆ ಇದು ತಡವಾಗಿ ಬಂದ ಭಾವಪ್ರಧಾನತೆಯ ತರಂಗದ ಅಲೆಯಾದರೂ ಇದರ ಶೈಲಿಯು 20 ನೆಯ ಶತಮಾನದ ಆರಂಭವನ್ನು ತೋರುತ್ತದೆ.ಪ್ರಮುಖವಾಗಿ ಕವಿಗಳಾದ ಸೆಸಾರಿಯೊ ವರ್ದೆ ಮತ್ತು ಆಂಟೊನಿಯೊ ನೊಬ್ರೆ ಅವರುಗಳು ಆಧುನಿಕತೆಗೆ ತಮ್ಮನ್ನು ಕೊಡಮಾಡಿಕೊಂಡರು. ಆದರೆ ಆರಂಭಿಕ ಪೊರ್ಚ್ ಗೀಸ್ ಭಾವಾಭಿವ್ಯಕ್ತಿಗಳು ಪ್ರತಿಭಾಶಾಲಿ ಮ್ಯಾನ್ಯುವಲ್ ಮೇರಿಯಾ ಬಾರ್ಬೊಸಾ ಡು ಬೊಕ್ಯಾಜ್ ಅವರ 18 ನೆಯ ಶತಮಾನದ ಸಾನೆಟ್ ಸರಣಿ ಹಾಡಿನ ಕೃತಿಗಳಲ್ಲಿ ಕಾಣಬಹುದು.
ರಶಿಯಾದಲ್ಲಿ ಅಲೆಕ್ಸಾಂಡರ್ ಪುಶ್ಕಿನ್ ಮತ್ತು ಮೈಖೆಲ್ ಲೆರ್ಮೊಂಟೊವ್ ಅವರ ಪ್ರಯತ್ನದಿಂದಾಗಿ ಈ ಭಾವಪ್ರಧಾನತೆಯ ಅಲೋಚನಾ ಸರಣಿಯ ಗಹನವಾದ ಕಾರಣಗಳ ಹುಡುಕಲು ಅನುವಾಯಿತು.ಸಾಮಾಜಿಕ ಬದುಕಿನಲ್ಲಿ ಇದರ ಅಗತ್ಯಗಳು,ಅದರ ಉಪಮೇಯಗಳು ಮತ್ತು ಅತೃಪ್ತಿಯ ಕುರಿತ ವಿಷಯಗಳ ಬಗ್ಗೆ ಲಾರ್ಡ್ ಬೆರೊನ್ ನ ಕೃತಿ ಪ್ರಭಾವ ಬೀರಿತು ಎನ್ನಬಹುದು. ಫಿಡೊರ್ ಟುಟ್ಚೇವ್ ಕವಿ ಕೂಡಾ ರಶಿಯಾದಲ್ಲಿ ಈ ಚಳವಳಿ ಬೆಳೆಯಲು ಕಾರಣನಾದ.ಈತ ಜರ್ಮನ್ ಭಾವಪ್ರಧಾನತೆಯ ಸಿದ್ದಾಂತದಿಂದ ಹೆಚ್ಚು ಸ್ಪೂರ್ತಿ ಪಡೆದ.
ಯುನೈಟೆಡ್ ಸ್ಟೇಟ್ಸ್ ಅಮೆರಿಕಾದಲ್ಲಿ ಗೊಥಿಕ್ ನ ಭಾವಪ್ರಧಾನತೆಯ ಸಾಹಿತ್ಯವು ವಾಶಿಂಗ್ಟನ್ ಇರ್ವಿಂಗ್ ನ ದಿ ಲೆಜೆಂಡ್ ಆಫ್ ಸ್ಲೀಪಿ ಹಾಲೊ (1820)ಮತ್ತು ರಿಪ್ ವ್ಯಾನ್ ವಿಂಕಲ್ (1819),ಇದರೊಂದಿಗೇ 1823 ರ ನಂತರ ಸೇರಿಕೊಂಡವು.ಜೇಮ್ಸ್ ಫೆನಿಮೊರ್ ಕೂಪರ್ ನ ಲೆದರ್ ಸ್ಟಾಕಿಂಗ್ ಟೇಲ್ಸ್ ಸುಮಾರಾಗಿ ನಾಯಕ ಪಾತ್ರಗಳನ್ನು ಸಾಹಿತ್ಯದಲ್ಲಿ ಪ್ರತಿಬಿಂಬಿಸಿದವು.ದೊಡ್ದವರ ಅಥವಾ ಗಣ್ಯರ ಉದಾತ್ತ ಪಯಣವನ್ನು ತೋರಿದವು.ಇದೇ ರೀತಿಯ ಅಂಶಗಳನ್ನೊಳಗೊಂಡ ರೌಸ್ಸವ್ ನ ಉಂಕಾಸ್ ರಚನೆಯು ದಿ ಲಾಸ್ಟ್ ಆಫ್ ದಿ ಮೊಹೊಕ್ಯಾನ್ಸ್ ನೊಂದಿಗೆ ಸಹಯೋಗ ಹೊಂದಿತು. ವಾಶಿಂಗ್ಟನ್ ಇರ್ವಿಂಗ್ ನ ಪ್ರಬಂಧಗಳು ಅದರಲ್ಲೂ ಮುಖ್ಯವಾಗಿ ಆತನ ಪ್ರವಾಸಿ ಕಥನಗಳ ಪುಸ್ತಕಗಳಲ್ಲಿ "ಸ್ಥಳೀಯತೆಯ ಬಣ್ಣ" ಸಮ್ಮಿಳಿತವಾಗಿದೆ. ಎಜ್ಗರ್ ಅಲೆನ್ ಪೊಯಿಯ ಮ್ಯಾಕ್ ಬ್ರೆ ಕಥೆಗಳು ಮತ್ತು ನೃತ್ಯರೂಪಕದ ಸಾಹಿತ್ಯಗಳು ಆತನ ತಾಯ್ನಾಡಿನಲ್ಲಿಗಿಂತ ಫ್ರಾನ್ಸನ್ಲ್ಲಿಯೇ ಹೆಚ್ಚು ಪ್ರಭಾವ ಬೀರಿದವು.ಆದರೆ ನ್ಯಾಥ್ನಿಯಲ್ ಹಾವ್ ಥೊರ್ನೆಯ ಕಾದಂಬರಿಯಲ್ಲಿ ಈ ತತ್ವವನ್ನು ಹೆಚ್ಚು ಬಳಸಿವೆ.ಇಲ್ಲಿ ಆ ವಾತಾವರಣ ಮತ್ತು ನಾಟಕೀಯ ಸನ್ನಿವೇಶಗಳ ಒಟ್ಟು ಸಂಗ್ರಹವಿದೆ. ನಂತರ ಬಂದ ದಾರ್ಶನಿಕ ತತ್ವವಾದಿ ಬರಹಗಾರರಾದ ಹೆನ್ರಿ ಡೇವಿಡ್ ಥೊರೆಯೊ ಮತ್ತು ರಾಲ್ಫ್ ವಾಲ್ಡೊ ಎಮರ್ಸನ್ ಅವರ ಕೃತಿಗಳಲ್ಲಿ ಇನ್ನೂ ವಾಲ್ಟ್ ವ್ಹೈಟ್ ಮನ್ ನ ಭಾವಪ್ರಧಾನ ಸಿದ್ದಾಂತದ ಪ್ರಭಾವವನ್ನು ತೋರುತ್ತಾರೆ.ಇಲ್ಲಿ ನೈಜತೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಆದರೆ 1880 ರಲ್ಲಿ ಮನಃಶಾಸ್ತ್ರೀಯ ಮತ್ತು ಸಾಮಾಜಿಕ ನೈಜತೆಯ ಲಕ್ಷಣವು ಭಾವಪ್ರಧಾನ ಸಿದ್ದಾಂತದೊಂದಿಗೆ ಪೈಪೋಟಿ ನಡೆಸುವ ಅಂಶಗಳು ಕಾದಂಬರಿಯಲ್ಲಿ ಕಂಡು ಬಂದವು. ಎಮಿಲಿ ಡಿಕಿನ್ಸಿನ್ ಆಕೆಯ ವೇಳೆಯಲ್ಲಿ ಅದನ್ನು ಓದುಗರು ಗಮನಿಸಿರಲಿಲ್ಲ.ಅದೇ ರೀತಿ ಹರ್ಮನ್ ಮೆಲ್ವಿಲೆ ನ ಕಾದಂಬರಿ ಮೊಬಿ ಡಿಕ್ ಇವುಗಳನ್ನು ಅಮೆರಿಕಾದ ಭಾವಪ್ರಧಾನ ಸಾಹಿತ್ಯ ಕೃತಿಗಳೆಂದು ಪರಿಗಣಿಸಲಾಗುತ್ತದೆ.
ಅಮೆರಿಕನ್ ಬರಹಗಾರರ ಮೇಲೆ ಯುರೊಪಿಯನ್ನಿನ ಭಾವಪ್ರಧಾನತೆಯ ಸಿದ್ದಾಂತದ ಪ್ರಭಾವ
[ಬದಲಾಯಿಸಿ]ಯುರೊಪಿಯನ್ ಭಾವಪ್ರಧಾನತೆಯ ಚಳವಳಿಯು ಹತ್ತೊಬ್ಬತ್ತನೆಯ ಶತಮಾನದ ಆರಂಭದಲ್ಲಿ ಅಮೆರಿಕಾಕ್ಕೆ ತಲುಪಿತು. ಅಮೆರಿಕನ್ ಭಾವಪ್ರಧಾನತೆಯ ಸಿದ್ದಾಂತವು ವಿಭಿನ್ನ ಮುಖಗಳನ್ನು ಹೊಂದಿತ್ತು,ಅಲ್ಲದೇ ವ್ಯಕ್ತಿಗತ ಸಿದ್ದಾಂತಕ್ಕೆ ಒತ್ತುಕೊಟ್ಟಿತು.ಈಗಾಗಲೇ ಇದು [ಸೂಕ್ತ ಉಲ್ಲೇಖನ ಬೇಕು]ಯುರೊಪಿನಲ್ಲಿತ್ತು.
...ಭಾವಪ್ರಧಾನತೆಯು ಸಾಮಾನ್ಯವಾಗಿ ನಿಶ್ಚಿತ ಗುಣಲಕ್ಷಣಗಳ ಹೊಂದಿರುತ್ತದೆ:ನೈತಿಕತೆಯ ಪ್ರೊತ್ಸಾಹ,ವ್ಯಕ್ತಿತ್ವ ವಿಕಾಸ ತತ್ವದಲ್ಲಿನ ವಿಶ್ವಾಸ ಮತ್ತು ಅಂತಃಶಕ್ತಿಯ ದೃಷ್ಟಿಕೋನ,ಅಂದರೆ ಇಲ್ಲಿ ನಿಸರ್ಗವು ದೇವ ನಿರ್ಮಿತ ಜಗತ್ತಾದರೆ ಮನುಷ್ಯ ನಿರ್ಮಿತ ಈ ಸಮಾಜವು ಭ್ರಷ್ಟಾಚಾರದಲ್ಲಿ ಮುಳುಗಿ [ಸೂಕ್ತ ಉಲ್ಲೇಖನ ಬೇಕು]ಎದ್ದಿದೆ.
ಭಾವಪ್ರಧಾನತೆಯ ಸಿದ್ದಾಂತವು ಅಮೆರಿಕದ ರಾಜಕಾರಣ,ತತ್ವಜ್ಞಾನ ಮತ್ತು ಕಲೆಯಲ್ಲಿ ಜನಪ್ರಿಯತೆ ಪಡೆಯಿತು. ಈ ಚಳವಳಿಯು ಕ್ರಾಂತಿಯ ಸ್ಪೂರ್ತಿ ತುಂಬುವಲ್ಲಿ ಯಶಸ್ವಿಯಾಗಿ ಅಮೆರಿಕಾಗೆ ಹಿಂದಿನ ಕೆಲವು ಜಡತೆಗಳಿಂದ ಬಿಡುಗಡೆ ತಂದಿತು ಎಂದು ಹೇಳಬಹುದಾಗಿದೆ.ಮೊದಲಿನ ಕಟ್ಟಳೆಗಳು ಧಾರ್ಮಿಕ ಮತ್ತು ಸಾಂಪ್ರದಾಯಿಕ ನಿಯಮಗಳ ಕಟು ವಿಮರ್ಶೆಗೆ ಇದು ದಾರಿ ಮಾಡಿಕೊಟ್ಟಿತು. ಈ ಭಾವಪ್ರಧಾನತೆಯ ಜಗತ್ತು ವಿಕಾಸವಾದ ಮತ್ತು ಧಾರ್ಮಿಕತೆಯ ಪ್ರತಿಭೆಯನ್ನು ತಿರಸ್ಕರಿಸಿತು. ದೇವರಿಲ್ಲದೇ ಮನುಷ್ಯನಿಲ್ಲ ಎಂಬ ಕಾಲ್ವಿನ್ ನ ವಾದದ ವಿರುದ್ದ ಅದು ಮನವಿ ಮಾಡಿಕೊಂಡಿತು.ಈ ಎಲ್ಲಾ ವಿಶ್ವ ದೇವರ ಶಕ್ತಿಗೆ ಅನುಗುಣವಾಗಿ ಬೆಳೆಯುತ್ತದೆ ಎಂಬುದನ್ನು ನಿರಾಕರಿಸಲು ಅದು ಹೇಳಿತು. ಈ ಭಾವಪ್ರಧಾನತೆಯ ಸಿದ್ದಾಂತವು ಹೊಸ ಇಂಗ್ಲೆಂಡನ ದಾರ್ಶನಿಕತೆಗೆ ದಾರಿ ಮಾಡಿಕೊಟ್ಟಿತು.ಇದು ದೇವರು ಮತ್ತು ವಿಶ್ವದ ನಡುವಿನ ಕಟ್ಟಳಗಳಿಗೆ ಹೆಚ್ಚು ಗಮನ ನೀಡಲಿಲ್ಲ. ಈ ಹೊಸ ತೆರನಾದ ಧರ್ಮವು ವ್ಯಕ್ತಿಯು ಹೆಚ್ಚು ದೇವರಿಗೆ ಹತ್ತಿರ ಸಂಬಂಧ ಬೆಳಸುವ ಅವಕಾಶ ನೀಡಿತು. ಈ ದಾರ್ಶನಿಕತೆಯ ತತ್ವಜ್ಞಾನ ಮತ್ತು ಭಾವಪ್ರಧಾನತೆಯ ಸಿದ್ದಾಂತ ಅಮೆರಿಕನ್ ರಿಗೆ ಒಂದೇ ತೆರನಾದ ಮನವಿ ಮಾಡಿದವು ಎನ್ನಬಹುದು.
ನೈತಿಕ ತತ್ವಶಾಸ್ತ್ರದ ಪ್ರಕಾರ ಈ ದಾರ್ಶನಿಕತೆಯು ತರ್ಕಬದ್ದವೂ ಅಲ್ಲ ಮತ್ತು ಶಿಸ್ತುಬದ್ದವೂ ಅಲ್ಲ. ಇದು ವೈಯಕ್ತಿಕ ಭಾವನೆಗಳ ಜಾಗದಲ್ಲಿ ಕಾನೂನುಗಳ ಕಟ್ಟಳೆ ಮತ್ತು ನಿರ್ಭಂದಗಳನ್ನು ತಂದು ನಿಲ್ಲಿಸಿತು. ಯಾರು ಈ ಗಡಸು ಪ್ರವೃತ್ತಿಯ ದೇವರನ್ನು ತಮ್ಮ ಆರಾಧನೆಗೆ ಬಳಸಿಕೊಳ್ಳುತ್ತಾರೊ ಯಾರು ಹೊಸ ಇಂಗ್ಲೆಂಡ್ ನ ನೂತನ ಧಾರ್ಮಿಕ ನಿಯಮಗಳಿಗೆ ಹೊಂದುತ್ತಾರೋ ಅವರ ಬಗ್ಗೆ ವಿವರ ನೀಡಿತು.....[]...ಅವರು ಸಾಂಸ್ಕೃತಿಕ ಉತ್ತೇಜನದ ಬಗ್ಗೆ ಮಾತನಾಡಿದರು.ಅಲ್ಲದೇ ಭೌತಿಕ ವಸ್ತುಗಳ ಹಪಾಪಿ ಇರುವ ಅಮೆರಿಕನ್ ರ ವಿರುದ್ದ ಮಾತನಾಡಿದರು. ಅವರು "ಅಂತರಾತ್ಮ"ದ ಪ್ರೊತ್ಸಾಹಕ್ಕಾಗಿ ದಾರ್ಶನಿಕ ತತ್ವದ ಮೊರೆ ಹೋದರಲ್ಲದೇ ಅದರಲ್ಲಿ ನಂಬಿಕೆ ತೋರಿದರು.ಒಳ್ಳೆತನ ಯಾವಾಗಲೂ ಹೆಚ್ಚು ಬಲಶಾಲಿಯಾಗಿರುತ್ತದೆ,ಇನ್ನುಳಿದ ವಿಷಯಗಳು ಇಲ್ಲಿ ಅಷ್ಟಾಗಿ [ಸೂಕ್ತ ಉಲ್ಲೇಖನ ಬೇಕು]ಪರಿಗಣಿತವಾಗುವುದಿಲ್ಲ.
ಅಮೆರಿಕನ್ ಭಾವಪ್ರಧಾನತೆಯು ವ್ಯಕ್ತಿಗತದ ವಿಚಾರವನ್ನು ಅಪ್ಪಿಕೊಂಡಿತು.ಹೊಸಶಾಸ್ತ್ರೀಯತೆ ಮತ್ತು ಹಳೆಯ ಸಂಪ್ರದಾಯಗಳಿಗೆ ಅಂಟಿಕೊಳ್ಳುವುದರ ವಿರುದ್ದ ಬಂಡೆದ್ದಿತು. ಅಮೆರಿಕಾದಲ್ಲಿನ ಭಾವಪ್ರಧಾನತೆಯ ಸಿದ್ದಾಂತದ ಚಳವಳಿಯು ಹೊಸ ಸಾಹಿತ್ಯಿಕ ಪೀಳಿಗೆ ಸೃಷ್ಟಿಸಿತು.ಅಲ್ಲದೇ ಅದು ಆಧುನಿಕ ಬರಹಗಾರರನ್ನು ಪ್ರಭಾವಿಸಿತು. ಕಾದಂಬರಿಗಳು,ಸಣ್ಣ ಕಥೆಗಳು ಮತ್ತು ಕವಿತೆಗಳು ಸಾಂಪ್ರದಾಯಿಕ ಆಚರಣಾ ಸಾಹಿತ್ಯದ ಸ್ಥಾನ ಆಕ್ರಮಿಸಲು ಆರಂಭಿಸಿದವು.ಈ ಮೊದಲು ಅಮೆರಿಕನ್ ಸಾಹಿತ್ಯದಲ್ಲಿ ಒಂದಾಗಿದ್ದ ಹಲವು ತತ್ವ-ಸಿದ್ದಾಂತಗಳು ಸಾಹಿತ್ಯಿಕ ಕೃತಿಗಳು ನಂತರ ಹಿಂದೆ ಉಳಿಯುವಂತಾದವು. ಈ ಭಾವಪ್ರಧಾನತೆಯ ಸಾಹಿತ್ಯವು ವ್ಯಕ್ತಿಗತ,ತೀವ್ರತೆ ಮತ್ತು ಅತ್ಯಧಿಕ ಭಾವಾಭಿವ್ಯಕ್ತಿಯನ್ನು ತೋರಿತು.ಇದು ಹೊಸ ಯುಗದ ಸಾಹಿತ್ಯಕ್ಕೆ ಸವಾಲೆನ್ನುವಂತೆ ಬೆಳೆಯಿತು. ಅಮೆರಿಕನ್ ನ ಸ್ವಾತಂತ್ರ್ಯ, ಮುಕ್ತತೆ ವಿಚಾರದಲ್ಲಿ ಭಾವಾನಾಭಿವ್ಯಕ್ತಿ ಪ್ರಧಾನ ಪಾತ್ರ ವಹಿಸಿತು.ಹಲವಾರು ಬರಹಗಾರರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮುಂದಾದರು.ಯಾರದೇ ಅಂಜಿಕೆ ಆತಂಕವಿಲ್ಲದೇ ಸಾಹಿತಿಗಳು ವಿವಾದಮುಕ್ತ ಬರಹಕ್ಕೆ ಮುಂದಾದರು. ಅವರು ತಮ್ಮ ಮನಶಾಸ್ತ್ರೀಯ ವಿಷಯಗಳ ಬೆಳವಣಿಗೆಗೂ ತಮ್ಮ ಗಮನ ಹರಿಸಿ ತಮ್ಮ ನಡತೆಯ ಗುಣವಿಶೇಷಗಳ ಪರಾಂಬರಿಸಿದರು. "ನಾಯಕರು ಮತ್ತು ನಾಯಕಿಯರು ತಮ್ಮ ಗರಿಷ್ಟ ಮಟ್ಟದ ಸ್ಪಂದನೆ ಮತ್ತು ಭಾವೋದ್ವೇಗ [ಸೂಕ್ತ ಉಲ್ಲೇಖನ ಬೇಕು]ಪ್ರದರ್ಶಿಸಿದರು".
ಭಾವಪ್ರಧಾನತೆಯ ಬರಹಗಳ ಮೇಲೆ ಯುದ್ದದ ಪ್ರಭಾವ
[ಬದಲಾಯಿಸಿ]ಇತಿಹಾಸದಲ್ಲಿ ಈ ಭಾವಪ್ರಧಾನತೆಯ ಯುಗದ ಸುತ್ತಲೂ ಯುದ್ದದ ಆತಂಕ ಮೆತ್ತಿಕೊಂಡಿತ್ತು. ದಿ ಸೆವೆನ್ ಇಯರ್ಸ್ ವಾರ್ (ಏಳು ವರ್ಷಗಳ ಯುದ್ದ) (1756–1763), ಅಲ್ಲದೇ ಫ್ರೆಂಚ್ ಮತ್ತು ಭಾರತೀಯ ಯುದ್ದ (1754–1763), ಮತ್ತು ದಿ ಅಮೆರಿಕನ್ ರೆವಲುಶನ್ (ಕ್ರಾಂತಿ)(1775–1783), ಇದು ನೇರವಾಗಿ ಫ್ರೆಂಚ್ ಕ್ರಾಂತಿಗೆ (1789–1799) ದಾರಿ ಮಾಡಿಕೊಟ್ಟಿತು.
ಈ ಯುದ್ದಗಳು ತಮ್ಮೊಂದಿಗೆ ಹೊತ್ತು ತಂದ ರಾಜಕೀಯ ಮತ್ತು ಸಾಮಾಜಿಕ ಕೋಲಾಹಲಗಳಲ್ಲಿ ಉಂಟಾದ ಫಲಿತಾಂಶವು ಭಾವಪ್ರಧಾನತೆಯ ಸಿದ್ದಾಂತದ ಸಾಹಿತ್ಯಕ್ಕೆ ಹಿನ್ನಲೆಯಾಯಿತು. ಆ ಯುದ್ದದ ಸಂದರ್ಭ ಕಲೆ ಮತ್ತು ಸಾಹಿತ್ಯದ ಕ್ಷೇತ್ರದಲ್ಲಿ ಹೊಸ ವೇಗದ ಅಲೆಯನ್ನೇ ಸೃಷ್ಟಿಸಿ,ಜನಮಾನಸದಲ್ಲಿ ಅತ್ಯಂತ ಭಾವಾವೇಶವನ್ನು ಸ್ಪುರಿಸಿತು ಎಂದು ಹೇಳಬಹುದು. ಆಗಿನ ಬರಹವು ತುಂಬಾ ವಿಭಿನ್ನವಾಗಿತ್ತು.ಅದು ಭಾವಪ್ರಧಾನ ಸಿದ್ದಾಂತದಲ್ಲಿ ತನ್ನದೇ ಆದ "ಯುಗ"ದ ಆರಂಭಕ್ಕೆ [೧೦]ನಾಂದಿಯಾಯಿತು.
ಆ ಭಾವಪ್ರಧಾನತೆಯ ಯುಗದ ಸಾಹಿತ್ಯಿಕ ಕೃತಿಗಳು ವಿಶಾಲ ಮತ್ತು ಅಪರೂಪದ ಸಂಗ್ರಹವಾಗಿದ್ದವು. ಹೇಗೆಯಾದರೂ ಅವುಗಳಲ್ಲಿ ಈ ಅಗತ್ಯ ಗುಣಲಕ್ಷಣಗಳಿರಬೇಕು:ನಿಸರ್ಗದ ಮೇಲಣದ ಪ್ರೀತಿ.ರಾಷ್ಟ್ರೀಯತೆ ಭಾವನೆ,ಭಾವನಾತ್ಮಕತೆ/ಅತೀಂದ್ರಯತೆ ಇತ್ಯಾದಿ. ಈ ಸಾಮಾನ್ಯ-ಸರಳ ಗುಣವಿಶೇಷಗಳು ಈ ಹಿಂದಿನ ರಾಜಕೀಯ ಗೊಂದಲ,ಕೋಲಾಹಲದ ಸಂದರ್ಭದಲ್ಲಿ ಬರಹದ ರೂಪ ಕಂಡವೆಂದು ನಾವು ಅದಕ್ಕೆ ಕೊಂಡಿಯಂತೆ ಜೋಡಿಸಬಹುದು. ಉದಾಹರಣೆಗೆ ರಾಷ್ಟ್ರೀಯತೆತತ್ವ ಸಿದ್ದಾಂತ ಪ್ರಮುಖವಾಗಿ ಭಾವಪ್ರಧಾನತೆಯ ಸಾಹಿತ್ಯದ ಬರಹಗಳಲ್ಲಿ ಕಾಣಿಸಿತು.ಇದಕ್ಕೆ ಪ್ರಮುಖ ಕಾರಣವೆಂದರೆ ಸಾಹಿತಿಗಳಲ್ಲಿರುವ ದೇಶ ಪ್ರೇಮ,ಅಭಿಮಾನ,ತಮ್ಮ ದೇಶಗಳ ಜನರ ಬಗೆಗಿನ ವಾತ್ಸಲ್ಯ ಮತ್ತು ಅವರ "ಅಗತ್ಯತೆ" ಈ ಬರವಣಿಗೆಗೆ ಕುಮ್ಮಕ್ಕು ನೀಡಿದವು. ಇದು ಬರಹಗಾರರು ತಮ್ಮ ಈ ಮಾರ್ಗದ ಮೂಲಕ ಹೋರಾಟಕ್ಕೆ ಕೊಡುಗೆ [೧೦]ನೀಡಿದರು.
ಈ ಭಾವಪ್ರಧಾನತೆಯ ಯುಗವು ಅದಕ್ಕಿಂತ ಮುಂಚೆ ಬಂದ ಸಾಹಿತ್ಯಕ್ಕಿಂತ ಬಹಳಷ್ಟು ಭಿನ್ನವಾಗಿದೆ.ಈಗಿರುವುದು "ಸಾಮಾನ್ಯ" ಜನರೊಂದಿಗೆ ಸಂವಾದಿಯಾಗಿರುತ್ತದೆ. ಹೀಗೆ ಭಾವಪ್ರಧಾನತೆ ಹೊತ್ತ ಸಾಹಿತ್ಯವು ಕೇವಲ ಉಳ್ಳವರಿಗಲ್ಲ ಇದು ಪ್ರತಿಯೊಬ್ಬನಿಗೂ ಮತ್ತು ಜನಸಾಮಾನ್ಯನಿಗೂ ಸಂದಿದೆ. ಈ ಭಾವಪ್ರಧಾನತೆಯ ಯುಗದ ಸಾಹಿತ್ಯಕ್ಕೆ ಮುಂಚಿನದನ್ನು ಕೇವಲ ಮೇಲ್ವರ್ಗದ ಸಿರಿವಂತರಿಗಾಗಿ ಬರೆಯಲಾಗಿತ್ತು. ಈ ಭಾವಪ್ರಧಾನತೆಯ ಸಾಹಿತ್ಯವು ಆಗಾಗ ಬದಲಾವಣೆಗೆ ಒಳಪಟ್ಟಿದೆ.ಯಾಕೆಂದರೆ ಸಾಹಿತ್ಯದ ವರ್ಗವು ಯಾವಾಗಲೂ ಅತಿ ಸಾಮನ್ಯರನ್ನು ತಲುಪಲು ಯತ್ನಿಸುತ್ತಿದೆ. ಯುದ್ದದ ಸಮಯ ಮತ್ತು ರಾಜಕೀಯ ಬಿಕ್ಕಟ್ಟುಗಳ ಸೃಷ್ಟಿಸುವವರ ಬಗ್ಗೆ ಸಾಹಿತಿಗಳು ತಮ್ಮ ಗಮನ ಕೇಂದ್ರೀಕರಿಸಿದರು,ಸಾಮಾನ್ಯ ಜನಜೀವನವನ್ನು ದುಷ್ಪ್ರಭಾವಿತಗೊಳಿಸುವ ಇಂತಹ ಘಟನೆಗಳಿಗೆ ಬರಹಗಾರರು ತಮ್ಮನ್ನು [೧೦]ಒಡ್ಡಿಕೊಂಡರು.
ಈ ಭಾವಪ್ರಧಾನತೆಯ ಕಾಲಮಾನದಲ್ಲಿ ಮಹಿಳಾವರ್ಗದ ಬರಹಗಾರರ ಸಂಖ್ಯೆ ಕೂಡ ಹೆಚ್ಚಿತು. ಈ ಸಾಹಿತ್ಯಕ ಯುಗವು ಯುದ್ದ ಯುಗದೊಂದಿಗೆ ತನ್ನನ್ನು ತಾನು ಸೇರಿಸಿಕೊಳ್ಳುವಲ್ಲಿ ಸಫಲವಾಯಿತು. ಮಹಿಳೆಯರು ಮನೆಗಳಿಗೇ ಅಂಟಿಕೊಂಡಿದ್ದರು,ಯಾವುದೇ ಭಾವನೆಗಳ ಅಭಿವ್ಯಕ್ತಿಗೆ ಹಾದಿ ಇರಲಿಲ್ಲ,ತಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ ಅವರ ಸ್ಪಂದನ ತೀರ ಮಂದಾಗಿತ್ತು.ಆದರೆ ಈ ಯುಗವು ಅವರ ಬರಹದ ಮಾಧ್ಯಮದೊಂದಿಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಹಾದಿಯಾಯಿತು. ಆಗಿನ ಕಾಲದ ಭಾವಪ್ರಧಾನತೆಯ ತತ್ವಗಳ ಅಳವಡಿಸಿ ಬರೆಯುವರಲ್ಲಿ ಮೇರಿ ಫೆವರೆಟ್ ನಂತವರು ಯುದ್ದದ ಸಾಮಗ್ರಿಗಳನ್ನೇ ತಮ್ಮ ಸಾಹಿತ್ಯಕ ವಿಷಯವನ್ನಾಗಿಸಿಕೊಂಡರು.ಉದಾಹರಣೆಗೆ ಆಕೆಯ ಫೆವ್ರೆಟ್ಸ್ ನ ಪ್ರಸಿದ್ದ ಕೃತಿ ವಾರ್ ಇನ್ ದಿ ಏರ್ ಬೆಳಕು [೧೦]ಕಂಡಿತು.
ಇಂತಹ ಒಂದು ಯುಗ ಯುದ್ದದಿಂದಾಗಿ ನುಂಗಿ ಹಾಕಿದರೆ ಸಮಾಜದ ಪ್ರತಿಯೊಂದು ಅಂಗದಲ್ಲಿಯೂ ಅದರ ಪರಿಣಾಮ ಉಂಟಾಗಿ,ಅಲ್ಲಿನ ಕಲೆ ಕೂಡಾ ಹಾಳಾಗಬಹುದು. ಹೀಗೆ ನಾವು ಪ್ರತಿಯೊಂದು ಸಾಹಿತ್ಯದ ತುಣುಕಿನಲ್ಲಿ ಯುದ್ದದ ಪರಿಣಾಮ,ರಾಜಕೀಯ ಅಸ್ಥಿರತೆ,ಅಶಾಂತಿ ಅಲ್ಲದೇ ಅಲ್ಲಿನ ಕಥಾನಕಗಳ ಪರಂಪರೆ ನಮಗೆ [೧೦]ಕಾಣುತ್ತದೆ.
ಭಾವಪ್ರಧಾನ ದೃಶ್ಯ ಮಾಧ್ಯಮ ಕಲೆ
[ಬದಲಾಯಿಸಿ]ಯುರೊಪಿಯನ್ ಚಿತ್ರ ಕಲೆಯು ಹೊಸ ಪೀಳಿಗೆಯ ಫ್ರೆಂಚ್ [೧೧]ಸ್ಕೂಲ್ ನಿಂದ ಮುನ್ನಡೆಯಿತು.ಆಧುನಿಕ ಭಾವಪ್ರಧಾನತೆಯು ಆಗಿನ ಪಾರಂಪರಿಕ ನವಯುಗೀನ ಶಾಸ್ತ್ರೀಯ ಸಾಹಿತ್ಯದೊಂದಿಗೆ ಪ್ರತಿಸ್ಪರ್ದಿಯಂತೆ ಕಂಡರೂ ಅದರ ಜನಪ್ರಿಯತೆ ಕಡಿಮೆಯಾಯಿತು. ಈ ಚಿತ್ರಕಲೆಯ ಮಾಧ್ಯಮದಲ್ಲೂ ವರ್ಣ ಮತ್ತು ವಿನ್ಯಾಸದ ನಡುವೆ ಘರ್ಷಣೆ ನಡೆಯಿತು.ಭಾವಾಭಿವ್ಯಕ್ತಿ ಮತ್ತು ವರ್ಣದ ಭಾವಾವಶೇಷ ಇತ್ಯಾದಿ ಆಯಾ ಸಂದರ್ಭದ ಕಲಾವಿದರಲ್ಲಿ ಕಾಣಿಸಿತು.ಉದಾಹರಣೆಗೆ ಕೃತಿಕಾರರಾದ ಜೆ.ಎಂ.ಡಬ್ಲು. ಟರ್ನರ್, ಫ್ರಾನ್ಸಿಸ್ಕೊ ಗೊಯಾ , ದೆವ್ ದೊರೆ ಗೆರಿಕಾಲ್ಟ್ ಮತ್ತುಈಗೆನೆ ಡೆಲಕ್ರೊಯಿಕ್ಸ್ ,ಇವರು ಹೊಸ ಕಲಾ ಆವಿಷ್ಕಾರಗಳ ಪರಿಚಯಿಸಿದರು. ಇದಲ್ಲದೇ ಇಂಪ್ಯಾಸ್ಟೊ ಕಲಾವಿದರ ಮುಕ್ತವಾಗಿ ಬಳಕೆಯ ಸಿದ್ದವಿದ್ದ ವರ್ಣ ಪ್ರಕಾರವು ಆಧುನಿಕತೆಯ ಮತ್ತು ಸಾಂಪ್ರದಾಯಿಕ ವ್ಯತ್ಯಾಸಗಳಿಗೆ ಅತ್ಯುತ್ತಮ ಸಾದೃಶ್ಯ ನೀಡಿತು.
ಇಂಗ್ಲೆಂಡ್ ನಲ್ಲಿ ಜೆ.ಎಂ.ಡಬ್ಲು. ಟರ್ನರ್ ಮತ್ತು ಸ್ಯಾಮ್ಯುವಲ್ ಪಾಮರ್, ಜರ್ಮನಿಯ ಕ್ಯಾಸ್ಪರ್ ಡೇವಿಡ್ ಫ್ರೆಡ್ರಿಚ್ , ನಾರ್ವೆಯ ಜೆ.ಸಿ. ಡಾಹ್ಲ್ ಮತ್ತು ಹ್ಯಾನ್ಸ್ ಗುಡೆ , ಸ್ಪೇನ್ ನ ಫ್ರಾನ್ಸಿಸ್ಕೊ ಗೊಯಾ , ಮತ್ತು ಫ್ರಾನ್ಸನ ದೆವ್ ದೊರೆ ಗೆರಿಕಾಲ್ಟ್, ಎಡಿಗೆನೆ ಡೆಲಕ್ರೊಇಕ್ಸ್, ದೆವ್ ದೊರೆ ಚಾಸ್ಸೆರೆವೂ, ಮತ್ತು ಇನ್ನಿತರು; ಅಮೆರಿಕಾದಲ್ಲಿ ಕೂಡಾ ಭಾವನಾಪ್ರಧಾನ ಸಿದ್ದಾಂತದ ಸಾಹಿತ್ಯವು ತನ್ನ ಪ್ರಭಾವವನ್ನು ದೃಶ್ಯ ಮಾಧ್ಯಮದ ಮೇಲೆ ಬೀರಿದ್ದು ಸ್ಪಷ್ಟವಾಗಿದೆ.ಇದರ ಬಗ್ಗೆ ಉದಾಹರಣೆ ಎಂದರೆ ಅಮೆರಿಕಾದ ಭೂಚಿತ್ರಣದ ಒಂದು ಕಚ್ಚಾ ಚಿತ್ರಣವು ಹಡ್ಸನ್ ರಿವರ್ ಸ್ಕೂಲ್ ನಲ್ಲಿ ದೊರಕಿರುವುದು ಸಾಕ್ಷಿಯಾಗಿದೆ. ವರ್ಣಚಿತ್ರ ಕಲಾವಿದರಾದ ಥಾಮಸ್ ಕೊಲೆ, ಅಲ್ಬರ್ಟ್ ಬೆರ್ಸ್ಟೆಡ್ ಮತ್ತು ಫ್ರೆಡ್ರಿಕ್ ಎಡ್ವಿನ್ ಚರ್ಚ್ ಹಾಗು ಇನ್ನಿತರ ಕಲಾವಿದರ ವರ್ಣಚಿತ್ರಗಳಲ್ಲಿ ಭಾವಪ್ರಧಾನತೆಯ ಸಿದ್ದಾಂತಾ ಛಾಯೆ ಕಾಣಬರುತ್ತದೆ. ಅವರು ಕೆಲವು ವೇಳೆ ಪುರಾತನ ಜಗತ್ತಿನ ಹಾಳಾದ ದೃಶ್ಯವನ್ನೂ ತಮ್ಮ ವರ್ಣಚಿತ್ರಗಳಲ್ಲಿ ಸೆರೆ ಹಿಡಿದಿದ್ದಾರೆ.ಸಿರಿಯಾದಲ್ಲಿರುವ ಫ್ರೆಡ್ರಿಕ್ ಎಡ್ವಿನ್ ಚರ್ಚ್ ನಲ್ಲಿನ ಸನ್ ರೈಜ್ ಇನ್ ಸಿರಿಯಾ ಇದಕ್ಕೆ ಪೂರಕ ಸಾಕ್ಷಿ ಎನಿಸಿದೆ. ಈ ಕೃತಿಗಳಲ್ಲಿ ಸಾವು ಮತ್ತು ಕೊಳೆತು ಹೋಗುವಿಕೆ ಬಗೆಗೆ ಗೊಥಿಕ್ ಪಂಥದ ಅನುಯಾಯಿ ಮತ್ತು ಗುರುಗಳ ಭಾವನೆಗಳನ್ನು ಚಿತ್ರಿಸಲಾಗಿದೆ. ಅವರು ಭಾವನಾಪ್ರಧಾನತೆಯ ಮಾದರಿಯ ಬಗ್ಗೆ ತೋರಿಸಿರುವ ಅವರು ನಿಸರ್ಗವು ಇವೆಲ್ಲದರಕ್ಕಿಂತ ಪ್ರಬಲವೆಂದು ಸಾರಿ ಹೇಳಿದ್ದಾರೆ. ಹಲವಾರು ಬಾರಿ ಆವರು ತಮ್ಮ ಯುರೊಪಿಯನ್ ಸಹಕಲಾವಿದರೊಂದಿಗೆ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಅಮೆರಿಕನ್ ದೃಶ್ಯಾವಳಿ ಮತ್ತು ಭೂಚಿತ್ರಣವನ್ನು ಪ್ರದರ್ಶಿಸಿದ್ದಾರೆ. ಅಮೆರಿಕನ್ ಸ್ವಂತಿಕೆ ಗುರುತಿಸಿದ ಈ ಆಲೋಚನೆಯು ಡಬ್ಲು.ಸಿ ಬ್ರ್ಯಾಯಂಟ್ ನ ಕವಿತೆಗಳಲ್ಲಿ ಮೂಡಿ ಬಂದಿದೆ.ಟೂ ಕೋಲೆ,ದಿ ಪೇಂಟರ್ ,ಡಿಪಾರ್ಟಿಂಗ್ ಫಾರ್ ಯುರೊಪ್ ಹೀಗೆ ಬ್ರಯಾಂಟೆ ಕೋಲೆನಿಗೆ ತನ್ನ ಚಿತ್ರಗಳ ಮೂಲಕ ಅಮೆರಿಕನ್ ಭೂಚಿತ್ರಣ ಜ್ಞಾಪಿಸಲು ಹೇಳಿದ್ದಾನೆ. [ಸೂಕ್ತ ಉಲ್ಲೇಖನ ಬೇಕು]ಈ ಕವಿತೆಯು ಭಾವಪ್ರಧಾನತೆಯ ಯುಗದಲ್ಲಿ ಸಾಹಿತ್ಯ ಮತ್ತು ದೃಶ್ಯಕಲಾವಿದರ ಭಾವತೀವ್ರತೆಯ ವ್ಯತ್ಯಾಸವನ್ನು [ಸೂಕ್ತ ಉಲ್ಲೇಖನ ಬೇಕು]ತಿಳಿಸುತ್ತದೆ.
ಕೆಲವು ಅಮೆರಿಕನ್ ವರ್ಣಚಿತ್ರಕಾರರು "ಉದಾತ್ತ ಪಯಣ"ದ ವಿಚಾರಕ್ಕೆ ಉತ್ತೇಜನ ನೀಡುವ ಕೆಲಸಗಳನ್ನೂ ಮಾಡಿದ್ದಾರೆ.(ಉದಾಹರಣೆಗೆ ಅಲ್ಬರ್ಟ್ ಬ್ಲೆರ್ಡಸ್ಟಾಡ್ ನ ದಿ ರಾಕಿ ಮೌಂಟೇನ್ಸ್ ,ಲ್ಯಾಂಡರ್ಸ್ ಪೀಕ್ )ಇದು ಅಮೆರಿಕನ್ ರು ನೈಸರ್ಗಿಕ ಜಗತ್ತಿನೊಂದಿಗೆ ಶಾಂತಿಯುತವಾಗಿದ್ದನ್ನು ತೋರಿಸುತ್ತದೆ.
ಥಾಮಸ್ ಕೋಲೆಯ ವರ್ಣಚಿತ್ರಗಳು ದಿ ವಾವೇಜ್ ಆಫ್ ಲೈಫ್ ಮೂಲಕ ಪ್ರಬಲ ವಿವರ ನೀಡುತ್ತವೆ.1840 ರ ಆರಂಭದಲ್ಲಿ ಆತ ಚಿತ್ರ ಸರಣಿಯನ್ನೇ ತಂದು ಇದನ್ನು ಪೂರ್ಣಗೊಳಿಸಿದ.(ವಿವರ ಕೆಳಗೆ ನೋಡಬಹುದು)
ವಾವೇಜ್ ಆಫ್ ಲೈಫ್ (ಬದುಕಿನ ಪಯಣ)
[ಬದಲಾಯಿಸಿ]-
ಥಾಮಸ್ ಕೋಲೆ, 1842, ದಿ ವಾವೇಜ್ ಆಫ್ ಲೈಫ್ ಚೈಲ್ಡ್ ಹುಡ್
-
ಥಾಮಸ್ ಕೊಲೆ, 1842, ದಿ ವಾವೇಜ್ ಆಫ್ ಲೈಫ್ ಮ್ಯಾನ್ ಹುಡ್
-
ಥಾಮಸ್ ಕೊಲೆ, 1842, ದಿ ವಾವೇಜ್ ಆಫ್ ಲೈಫ್ ಓಲ್ಡ ಏಜ್
ಭಾವಪ್ರಧಾನತೆಯ ರಾಷ್ಟ್ರೀಯತೆ
[ಬದಲಾಯಿಸಿ]ಭಾವಪ್ರಧಾನತೆಯ ಸಿದ್ದಾಂತದ ಪ್ರಮುಖ ವಿಚಾರವೆಂದರೆ ಇದು ರಾಷ್ಟ್ರೀಯತೆಯ ಭಾವವನ್ನು ಹುಟ್ಟುಹಾಕಿತು.ಇದು ಭಾವಪ್ರಧಾನ ಸಾಹಿತ್ಯ,ರಾಜಕಾರಣ, ತತ್ವಶಾಸ್ತ್ರ ಮತ್ತು ಚಿತ್ರಕಲೆಯ ಮುಖ್ಯ ಉದ್ದೇಶವಾಗಿ ಬೆಳೆಯಿತು. ಆರಂಭಿಕ ಚಳವಳಿಯ ಭಾಗವಾಗಿ ಇದು ರಾಷ್ಟ್ರೀಯ ಭಾಷೆ ಮತ್ತು ಜನಪದದ ಬೆಳವಣಿಗೆಗೆ ನಾಂದಿಯಾಯಿತು.ಸ್ಥಳೀಯ ಆಚರಣೆ,ಸಂಪ್ರದಾಯಗಳ ಉತ್ತೇಜನವು ಯುರೊಪಿಯನ ನಕ್ಷೆಯನ್ನೇ ಬದಲಿಸಿತು.ಭಾವಪ್ರಧಾನತೆಯ ಸಿದ್ದಾಂತದ ತತ್ವ ನಿಯಮಗಳು ಸಾಂಸ್ಕೃತಿಕ ಗಡಿಯಾಚೆ ಅಭಿವೃದ್ದಿ ಪಡೆದವು.ರಾಷ್ಟ್ರೀಯವಾದ ಮತ್ತು ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಟ್ಟಿತು.
ಆರಂಭಿಕ ಭಾವಪ್ರಧಾನತೆಯ ರಾಷ್ಟ್ರೀಯತೆಯು ರೌಸೆಯು ಮತ್ತು ಜೊನಾನ್ ಗೊಟ್ಟೆಫ್ರೆಡ್ ವೊನ್ ಹೆರ್ಡರ್ ಅವರ ವಿಚಾರಧಾರೆಗಳ ಮೂಲಕ ಸಾಕಷ್ಟು ಉತ್ತೇಜನ ಪಡೆಯಿತು.ಆತ 1784 ರಲ್ಲಿ ಜನಸಮೂದಾಯದ ನೈಸರ್ಗಿಕ ಆರ್ಥಿಕತೆಯು ಅವರ ಆಚರಣೆ ಮತ್ತು ಸಂಪ್ರದಾಯಗಳನು ರೂಪಿಸುತ್ತದೆ ಎಂದು ವ್ಯಾಖ್ಯಾನಿಸಿದ.
ಆದರೆ ಫ್ರೆಂಚ್ ಕ್ರಾಂತಿಯ ನಂತರ ರಾಷ್ಟ್ರೀಯತೆಯು ನಾಟಕೀಯವಾಗಿ ಬದಲಾಯಿತು.ಅದಲ್ಲದೇ ನೆಪೊಲಿಯನ್ ನ ಉಗಮ ಕೂಡಾ ಇನ್ನುಳಿದ ದೇಶಗಳಲ್ಲಿ ವಿಚಿತ್ರ ಪ್ರತಿಕ್ರಿಯೆಗಳ ತೋರಿತು. ನೆಪೊಲಿಯನ್ ನ ರಾಷ್ಟ್ರೀಯತೆ ವಾದ ಮತ್ತು ಸಾರ್ವಭೌಮತ್ವದ ವಿಚಾರಗಳು ಹಲವಾರು ದೇಶಗಳಲ್ಲಿ ಸ್ಪೂರ್ತಿ ತಂದವು:ಸ್ವಯಂ-ನಿರ್ಧಾರ ಮತ್ತು ಒಗ್ಗಟ್ಟಿನ ಬಗೆಗಿನ ಸಮಗ್ರತೆಯು ಹೆಚ್ಚು ಪರಿಣಾಮ ಬೀರಿತು.ಅದಕ್ಕಾಗಿಯೇ ಫ್ರಾನ್ಸ್ ಇನ್ನುಳಿದ ದೇಶಗಳನ್ನು ನಿರಾಂತಕವಾಗಿ ಸೋಲಿಸಲು ಸಮರ್ಥವಾಯಿತು. ಯಾವಾಗ ಫ್ರೆಂಚ್ ರಿಪಬ್ಲಿಕನ್ ನ ಸಾಮ್ರಾಟನಾಗಿ ನೆಪೊಲಿಯನ್ ಸಾಮ್ರಾಜ್ಯಕ್ಕೆ ಬಂದನೋ ಆಗ ಬರೀ ರಾಷ್ಟ್ರೀಯತೆಯಲ್ಲ ಹೋರಾಟದ ಬಗೆಗೂ ಜನರಲ್ಲಿ ಸ್ಪೂರ್ತಿ ಮೂಡಿತು. ಪ್ರುಸಿಯಾದಲ್ಲಿಯೂ ಈ ಸ್ಪೂರ್ತಿ ಕೆಲಸ ಮಾಡಿದ್ದು ನೆಪೊಲಿಯನ್ ವಿರುದ್ದದ ಹೋರಾಟಕ್ಕಾಗಿ; ಆದರೆ ಕಾಂಟ್ ನ ಕಟ್ಟಾ ಅನುಯಾಯಿಯಾದ ಜೊನಾನ್ ಗೊಟ್ಟಿಲೆಬ್ ಫಿಚೆ ಇದನ್ನು ತೀವ್ರವಾಗಿ ಖಂಡಿಸುತ್ತಾನೆ. ಈ ಪದ ವೊಲ್ಕಾಸ್ಟಮ್ ,ಅಥವಾ ರಾಷ್ಟ್ರೀಯತೆ ಎಂಬ ಶಬ್ದವು ಜರ್ಮನಿಯಲ್ಲಿ ಈ ಸಾಮ್ರಾಜ್ಯಶಾಹಿಯ ಹೋರಾಟದ ವಿರೋಧಕವಾಗಿ ಬೆಳೆಯಿತು. ಫಿಚ್ಟೆ ಕೂಡಾ ತನ್ನ "ಟು ದಿ ಜರ್ಮನ್ ನೇಶನ್ "ಎಂಬ ಭಾಷಣ ವನ್ನು 1806 ರಲ್ಲಿ ಮಾಡಿದ ಸಂದರ್ಭದಲ್ಲಿ ಭಾಷೆ ಮತ್ತು ರಾಷ್ಟ್ರಗಳ ಬಗ್ಗೆ ಉದ್ದೇಶಿಸಿ ಈ ಪ್ರಸ್ತಾಪ ಮಾಡಿದ.
ಯಾರು ಒಂದೇ ಭಾಷೆಯನ್ನು ಮಾತನಾಡುತ್ತಾರೋ ಅವರೆಲ್ಲ ಒಂದೆಡೆ ಸೇರಿ ನಿಸರ್ಗದ ವಾತಾವರಣದಲ್ಲಿ ಒಂದಾಗುತ್ತಾರೆ.ಅವರು ತಮ್ಮದೇ ಆದ ಪ್ರಾಕೃತಿಕ ವಿಷಯಗಳಿಗೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತಾರೆ.ತಮ್ಮಲ್ಲಿ ಯಾವುದೇ ಪ್ರತ್ಯೇಕತೆಯನ್ನು ಅವರು ತೋರಲಾರರು.... ಕೇವಲ ತಮ್ಮ ಭಾಗದ ಅಭಿವೃದ್ಧಿ ಮಾಡಲು ಅದು ಅನುಕೂಲ ಮಾಡಿಕೊಡುತ್ತದೆ.ಜನಸಮೂದಾಯದ ಅಭಿಪ್ರಾಯದ ಮೇರೆಗೆ ಸಾಮಾನ್ಯ ಗುಣಮಟ್ತದ ಬದುಕಿನ ಶೈಲಿಗೆ ಒಗ್ಗಿಕೊಳ್ಳಲು ಕೆಲ ಸಮಯ ಹಿಡಿಯುತ್ತದೆ,ಅಂದರೆ ವಿಶಿಷ್ಟ ಅಪರೂಪದ ಉದ್ದೇಶಗಳ ಜಾರಿಗೆ ಅದು ನೆರವಾಗುತ್ತದೆ.ದೇಶೀಯತೆ ಮತ್ತು ಜನಸಮೂದಾಯದ ಒಟ್ಟಾಭಿಪ್ರಾಯಕ್ಕೆ ಅನುವು ಮಾಡುತ್ತದೆ.
ಇಂತಹ ಒಟ್ಟಾಭಿಪ್ರಾಯದ ರಾಷ್ಟ್ರೀಯತೆಯು ಜನರಲ್ಲಿ ಹುರುಪು ತುಂಬಿತು.ಇದು ಜನಪದದ ಸಂಗ್ರಹಕ್ಕೆ ಒತ್ತುನೀಡಿತು.ಬ್ರದರ್ಸ್ ಗ್ರಿಮ್ ರಂತಹ ಜನರು ಹಳೆಯ ಪೌರಾಣಿಕ ಕಥೆಗಳ ಅನುಸರಣೆಗೆ ಪೂರಕವೆನಿಸಿದೆ.ಕಾಲೆವೆಲಾ ಫಿನ್ನಿಶ್ ಕಥೆಗಳ ಸಂಗ್ರಹ ಕೂಡಾ ಇದನ್ನು ಪ್ರಚೋದಿಸಿದೆ,ಅಥವಾ ಒಸ್ಸಿಯನ್ ಕೃತಿಯಲ್ಲಿ ಸಹ ಹಳೆಯ ರಾಷ್ಟ್ರೀಯತೆ ಬೇರುಗಳಿವೆ. ಇದರಲ್ಲಿ ಕೆಲವು ಕಾಲ್ಪನಿಕ ಕತೆಗಳನ್ನು ಬೇರೆಯೆಡೆಯಿಂದ ಪಡೆದು ದೋಷಪೂರಿತ ಮಾಡಲಾಗಿದೆ ಎಂಬ ವಾದವೂ ಇದೆ.ಇದು ಭಾವಪ್ರಧಾನತೆಯ ಸಿದ್ದಾಂತದ ವ್ಯಾಖ್ಯಾನದಲ್ಲಂತೂ ಅಲ್ಲವೆಂದೇ ಹೇಳಬಹುದು.ಜನರು ಆದಷ್ಟು ನೈಸರ್ಗಿಕ ಶಕ್ತಿಗಳ ಪರವಾಗಿ ತಮ್ಮ ದೇಶೀಯತೆಯನ್ನು ಉಳಿಸಿಕೊಳ್ಳುವ ಕ್ರಮಕ್ಕೆ ಮುಂದಾದರು. ಉದಾಹರಣೆಗಾಗಿ ಬ್ರದರ್ಸ್ ಗ್ರಿಮ್ ಅವರು ಹಲವಾರು ಕಥಾ ಸಂಕಲನಗಳನ್ನು ನಿರಾಕರಿಸುತ್ತಾರೆ.ಯಾಕೆಂದರೆ ಅವು ಚಾರ್ಲ್ಸ್ ಪೆರ್ರಾಳ್ಟ್ ಅವರ ಕಥೆಗಳ ಹೋಲಿಕೆ ಪಡೆಯುತ್ತಿವೆ,ಇವು ನಿಜವಾದ ಜರ್ಮನ್ ಕಥೆಗಳಲ್ಲ.ಸ್ಲೀಪಿಂಗ್ ಬ್ಯುಟಿ ಕಥಾ ಸಂಗ್ರಹ ಮಾತ್ರ ಅವರ ಸಂಗ್ರಹದಲ್ಲಿದೆ.ಯಾಕೆಂದರೆ ಬ್ವ್ರಿನ್ ಹೆಲ್ಡರ್ ಅವರನ್ನು ಈ ಬಗ್ಗೆ ವಿಶ್ವಾಸ ಬರುವಂತೆ ವಿವರ ನೀಡಿದ್ದಾನೆ,ಸ್ಲೀಪಿಂಗ್ ಪ್ರಿನ್ಸೆಸ್ ಇದು ನಿಜವಾಗಿಯೂ ಜರ್ಮನ್ ಕಥಾಹಂದರವಾಗಿದೆ.
ಭಾವಪ್ರಧಾನತೆಯ ಸಿದ್ದಾಂತವು ಕೇಂದ್ರೀಯ ಯುರೊಪಿಯನ್ ದೇಶಗಳಲ್ಲಿ ರಾಷ್ಟ್ರೀಯತೆಗೆ ಪ್ರೊತ್ಸಾಹ ನೀಡಿದೆ.ಕೊನೆಪಕ್ಷ ಪೊಲ್ಯಾಂಡ್ ನಲ್ಲಿ ಯಾವಾಗ ಅದು ಇತ್ತೀಚಿಗೆ ರಸಿಯಾಕ್ಕೆ ತನ್ನ ಸ್ವಾತಂತ್ರ್ಯ ಕಳೆದುಕೊಂಡಿತು. ನಿಕೊಲಾಸ್ ನ ನೇತೃತ್ವದಲ್ಲಿ ಇದು ಪೊಲ್ಯಾಂಡ್ ನ್ನು ವಿನಾಶಗೊಳಿಸಿತು. ನಂತರದ ಪರಿಷ್ಕರಣೆಯು ಭಾವಪ್ರಧಾನ ಕವಿಗಳಿಗೆ ಸ್ಪೂರ್ತಿ ನೀಡಿತು.ಹೀಗೆ ಒಟ್ಟಾರೆ ರಾಷ್ಟ್ರೀಯ ವಾದವು ಭಾವಪ್ರಧಾನತೆಯೊಂದಿಗೆ ತಳಕು ಹಾಕಿಕೊಂಡಿತು. ದೇಶಭಕ್ತಿ,ರಾಷ್ಟ್ರೀಯವಾದವು ಕ್ರಾಂತಿಕಾರಕ ಮತ್ತು ಸಶಸ್ತ್ರ ಹೋರಾಟಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವು.ಇದು ಕಲೆ ಮತ್ತು ಸಾಹಿತ್ಯಕ ಕಾಲಮಾನದಲ್ಲಿ ಹೊಸ ಆಯಾಮ ಪಡೆಯಿತು. ಯುರೊಪಿನ ಅತ್ಯಂತ ಯಶಸ್ವಿ ಕವಿ ಅಡಮ್ ಮಿಕೆವಿಚ್ ತನ್ನ ಭಾವಪ್ರಧಾನತೆಯ ಸಿದ್ದಾಂತದ ಅಳವಡಿಕೆಯಲ್ಲಿ ಖ್ಯಾತನಾಮನಾಗಿದ್ದ.ಆತ ಪೊಲ್ಯಾಂಡ್ ನಂತಹವು ಕೂಡಾ ಹೇಗೆ ರಾಷ್ಟ್ರೀಯ ಸಮಗ್ರತೆ ಗಣರಾಜ್ಯದ ಗುಣಗಳ ಪಡೆಯಹುದೆಂದು ಪ್ರತಿಪಾದಿಸಿ ಜೆಸಸ್ ಹೇಗೆ ಎಲ್ಲ ಜನರ ಸುಖಕ್ಕಾಗಿ ಕಷ್ಟ ಅನುಭವಿಸಿದ ಎಂಬುದನ್ನು ಆತ ಉದಾಹರಿಸಿದ್ದಾನೆ.
ಚಿತ್ರ ಸಂಪುಟ
[ಬದಲಾಯಿಸಿ]-
ಜೊಸೆಫ್ ವರ್ನೆಟ್, 1759, ಶಿಪ್ ರೆಕ್, ಗ್ರೊನೊಂಗೆ ಮ್ಯುಸಿಯಮ್, ಬ್ರುಗ್ಸ್
-
ಜೊಸೆಫ್ ರೈತ್ , 1774, ಕೇವ್ ಅಟ್ ಇವಿನಿಂಗ್, ಸ್ಮಿತ್ ಕಾಲೇಜ್ ಮ್ಯುಸಿಯಮ್ ಆಫ್ ಆರ್ಟ್, ನಾರ್ತಾಂಪ್ಟನ್, ಮ್ಯಾಸೆಚುಸೆಟ್
-
ಹೆನ್ರಿ ಫುಸಿಲಿ,1781, ದಿ ನೈಟ್ ಮೇರ್, ಡೆಟ್ರೊಯಿಟ್ ಇನ್ ಸ್ಟಿಟುಟ್ ಆಫ್ ಆರ್ಟ್ಸ್I
-
ಫಿಲಿಪ್ ಜೇಮ್ಸ್ ಡೆ ಲೌಥೆರ್ ಬರ್ಗ್, ಕೋಲ್ ಬ್ರೊಕ್ ಡೇಲ್ ಬೈ ನೈಟ್, 1801, ಸೈನ್ಸ್ ಮ್ಯುಸಿಯಮ್, ಲಂಡನ್
-
ಜೊಸೆಫ್ ಎಂಟೊನ್ ಕೊಚ್, ವಾಟರ್ ಫಾಲ್ಸ್ ಅಟ್ ಸುಬಿಕೊ(ಸುಬಿಕೊದಲ್ಲಿನ ಜಲಪಾತಗಳು) 1812-1813, ನ್ಯಾಶನಲ್ ಮ್ಯುಸಿಯಮ್ ಆಫ್ ಆರ್ಟ್, ಆರ್ಕಿಟೆಕ್ಚರ್ ಅಂಡ್ ಡಿಸೈನ್, ಒಸ್ಲೊ
-
ಜೇಮ್ಸ್ ವಾರ್ಡ್, 1814-1815, ಗೊರ್ಡೇಲ್ ಸ್ಕಾರ್
-
ಜಾನ್ ಕಾನ್ಸ್ಟೇಬಲ್, 1821, ದಿ ಹೇ ವೇನ್
-
ಜೆ. ಸಿ. ದಹಲ್, 1826, ಔಟ್ ಬ್ರೆಕ್ ಆಫ್ ದಿ ವೆಸುವಿಯೆಸ್, Städelsches Kunstinstitut, ಫ್ರಾಂಕಫರ್ಟ್ ಆಮ್ ಮೇನ್
-
ವಿಲಿಯಮ್ ಬ್ಲೇಕ್, c. 1824-27, [28], ಟಾಟೆ
-
ಜೆ. ಎಂ. ಡಬ್ಲು. ಟರ್ನರ್, ದಿ ಬರ್ನಿಂಗ್ ಆಫ್ ದಿ ಹೌಸಿಸ್ ಆಫ್ ಲಾರ್ಡ್ಸ್ ಅಂಡ್ ಕಾಮನ್ಸ್ (1835), ಫಿಲಿಡೆಲ್ಫಿಯಾ ಮ್ಯುಸಿಯಮ್ ಆಫ್ ಆರ್ಟ್
-
ಜಾರ್ಜ್ ಕ್ಯಾಲೆಬ್ ಬಿಂಘಮ್, c. 1845, ಮಿಸೊರಿ ನದಿ ದಂಡೆ ಮೇಲಿರುವ ತುಪ್ಪಳ ಮಾರಾಟಗಾರರು
-
ಹಾನ್ಸ್ ಗುಡೆ,ವಿಂಟರ್ ಆಫ್ಟರ್ ನೂನ್, 1847, ನ್ಯಾಶನಲ್ ಗ್ಯಾಲರಿ ಆಫ್ ನಾರ್ವೆ, ಒಸ್ಲೊ
-
ಜಾನ್ ಮಾರ್ಟಿನ್, 1852, ದಿ ಡಿಸ್ಟ್ರಕ್ಷನ್ ಆಫ್ ಸೊಡೊಮ್ ಅಂಡ್ ಗೊಮೊರ್ರಾ, ಲೆಂಗ್ ಆರ್ಟ್ ಗ್ಯಾಲರಿ
-
ಫ್ರೆಡ್ರಿಕ್ ಎರ್ವಿನ್ ಚರ್ಚ್, 1860, ಟ್ವಿಲೈಟ್ ಇನ್ ದಿ ವೈಲ್ಡರ್ನೆಸ್, ಕ್ಲೆವೆಲ್ಯಾಂಡ್ ಮ್ಯುಸಿಯಮ್ ಆಫ್ ಆರ್ಟ್
-
ಅಲ್ಬರ್ಟ್ ಬೆರ್ ಸ್ಟೆಡ್ , 1863, ದಿ ರಾಕಿ ಮೌಂಟೇನ್ಸ್: ಲ್ಯಾಂಡರ್ಸ್ ಪೀಕ್
-
ಸ್ಯಾಮ್ಯುವಲ್ ಪಾಮರ್, c.1864, ಎ ಡ್ರೀಮ್ ಇನ್ ದಿ ಅಪೆನ್ನೈನ್ ಟಾಟೆ ಬ್ರಿಟೇನ್
-
ಜೀನ್ -ಬ್ಯಾಪ್ಟಿಸ್ಟೆನ್ ಕ್ಯಾಮೆಲೆ ಕೊರೊಟ್, c. 1867, ವಿಲ್ಲೆ ಡೆ ಅವರಿ ನ್ಯಾಹ್ಸನಲ್ ಗ್ಯಾಲರಿ ಆಫ್ ಆರ್ಟ್, ವಾಶಿಂಗ್ಟನ್, ಡಿಸಿ.
-
ಐವಾನ್ ಶಿಶ್ಕಿನ್ , 1891, ದಿ ಫಾರೆಸ್ಟ್ ಆಫ್ ಕೌಂತೆಸ್ ಮೊರ್ಡ್ವಿನೊವಾ, ದಿ ಟ್ರೆಟಿಯಾಕೊ ಗ್ಯಾಲರಿ, ಮಾಸ್ಕೊ
-
ಐಸಾಕ್ ಲೆವಿಟನ್ , ಪ್ಯಾಸಿಫಿಕ್, 1898, ಸ್ಟೇಟ್ ರಸಿಯನ್ ಮ್ಯುಸಿಯಮ್, ಸೇಂಟ್ .ಪೀಟರ್ಸ್ ಬರ್ಗ್
ಇವನ್ನೂ ಗಮನಿಸಿ
[ಬದಲಾಯಿಸಿ]
ಸಂಬಂಧಿಸಿದ ಅಪ್ದಗಳು[ಬದಲಾಯಿಸಿ]
ವಿರುದ್ದ ಪದಗುಚ್ಛ[ಬದಲಾಯಿಸಿ]
|
ಸಂಬಂಧಿತ ವಿಷಯಗಳು[ಬದಲಾಯಿಸಿ]
|
ಸಂಬಂಧಿತ ಆಂದೋಲನಗಳು[ಬದಲಾಯಿಸಿ]
|
Romantic scholars[ಬದಲಾಯಿಸಿ]
|
ಆಕರಗಳು
[ಬದಲಾಯಿಸಿ]- ↑ ಭಾವಪ್ರಧಾನತೆ ತತ್ವ ಸಿದ್ದಾಂತ . ಮರುಪಡೆದದ್ದು 30 ಜನವರಿ 2008, ಫ್ರಾಮ್ ಎನ್ ಸೈಕ್ಲೊಪಿಡಿಯಾ ಬ್ರಿಟಾನಿಕಾ ಆನ್ ಲೈನ್
- ↑ Casey, Christopher (October 30, 2008). ""Grecian Grandeurs and the Rude Wasting of Old Time": Britain, the Elgin Marbles, and Post-Revolutionary Hellenism". Foundations. Volume III, Number 1. Archived from the original on 2009-05-13. Retrieved 2009-06-25.
- ↑ ಡೇವಿಡ್ ಲೆವಿನ್, ಹಿಸ್ಟ್ರಿ ಆಸ್ ರೊಮ್ಯಾಂಟಿಕ್ ಆರ್ಟ್: ಬಾಂಕ್ರೊಫ್ಟ್, ಪ್ರೆಸ್ಕೊಟ್, ಅಂಡ್ ಪಾರ್ಕ್ ಮ್ಯಾನ್ (1967)
- ↑ ಗೆರಾಲ್ಡ್ ಲೀ ಗುಟೆಕ್, ಎ ಹಿಸ್ಟ್ರಿ ಆಫ್ ದಿ ವೆಸ್ಟರ್ನ್ ಎಜುಕೇಶನಲ್ ಎಕ್ಸ್ ಪಿರಿಯನ್ಸ್ (1987) ch. 12 on ಜೊಹಾನ್ ಹಿನ್ರಿಚ್ ಪೆಸ್ಟಾಲೊಜಿ
- ↑ ಅಶ್ಟೊನ್ ನಿಕೊಲ್ಸ್, "ರೊಯರಿಂಗ್ ಅಲಿಗೇಟರ್ಸ್ ಅಂಡ್ ಬರ್ನಿಂಗ್ ಟೈಗರ್ಸ್ : ಪೊಯಟ್ರಿ ಅಂಡ್ ಸೈನ್ಸ್ ಫ್ರಾಮ್ ವಿಲಿಯಮ್ಸ್ ಬರ್ಟ್ರಾಮ್ ಟು ಚಾರ್ಲ್ಸ್ ಡಾರ್ವಿನ್," ಪ್ರೊಸೀಡಿಂಗ್ಸ್ ಆಫ್ ದಿ ಅಮೆರಿಕನ್ ಫಿಲಾಸೊಫಿಕಲ್ ಸೊಸೈಟಿ 2005 149(3): 304-315
- ↑ "'ಎ ರಿಮಾರ್ಕೇಬಲ್ ಥಿಂಗ್ ,' ಕಂಟಿನ್ಯುಡ್ ಬಾಜಾರೊವ್ , 'ದೀಸ್ ಫನ್ನಿ ಓಲ್ಡ್ ರೊಮ್ಯಾಂಟಿಕ್ಸ್! ಅವರು ಪ್ರತಿಭಟನೆಗಗಿ ತನ್ನ ಮಾನಸಿಕತೆಯನ್ನು ಸಿದ್ದಪಡಿಸಿಕೊಂಡಿರುತ್ತಾರೆ,ಯಾಕೆಂದರೆ ಸಮಾನತೆಯ ದೋಷದ ಕಾರಣ ಅಲ್ಲಿ ವಿಷಾದತೆ ಇದೆ." (ಐವಾನ್ ಟರ್ಗ್ನೆವ್ , ಫಾದರ್ಸ್ ಅಂಡ್ ಸನ್ಸ್ , ಚಾಪ್. 4 [1862])
- ↑ ಬಾಡ್ಲೊರೀಸ್ ಸ್ಪೀಚ್ ಅಟ್ ದಿ "ಸಾಲೊನ್ ಡೆಸ್ ಕುರಿಯೊಸಂಟ್ಸ್ ಎಸ್ಥಿಕ್ಯುಸ್
- ↑ ಅದರ ಸಂಗೀತದ ವಿನ್ಯಾಸ ರೂಪ ರಚನೆ ಬಗ್ಗೆ ಚರ್ಚೆ, ನೋಡಿಮ್ಯುಸಿಕಲ್ ನ್ಯಾಶನಾಲಿಸಮ್.
- ↑ ಇನ್ ಹೆರಿಟೆಡ್ ಫ್ರಾಮ್ ದಿ ಗ್ಯಾಲಂಟೆ ಪ್ರಿ-ಕ್ಲಾಸಿಕಲ್ ಸ್ಟೈಲ್.
- ↑ ೧೦.೦ ೧೦.೧ ೧೦.೨ ೧೦.೩ ೧೦.೪ ರೀಡ್ ಹೆಡ್ ಅಟ್ . ಆಲ್ ., "ನೊರ್ಟಾನ್ ಆಂಥೊಲಾಜಿ ಆಫ್ ಇಂಗ್ಲಿಷ್ ಲಿಟರೇಚರ್,"ದಿ ರೊಮ್ಯಾಂಟಿಕ್ ಪಿರಿಯಡ್ - ವಾಲ್ಯುಮ್ ಡಿ " (ಡಬ್ಲು.ಡಬ್ಲು. ನೊರ್ಟೊನ್ & ಕಂಪನಿ ಲಿಮಿಟೆಡ್ .) 2006
- ↑ ವಾಲ್ಟರ್ ಫ್ರೆಡ್ಲೆಂಡರ್,ಫ್ರಾಮ್ ಡೇವಿಡ್ ಟು ಡೆಲಾಕ್ರೊಇಕ್ಸ್ , 1974, ರಿಮೇನ್ಸ್ ದಿ ಬೆಸ್ಟ್ ಅವೈಲೇಬಲ್ ಅಕೌಂಟ್ ಆಫ್ ದಿ ಸಬ್ಜೆಕ್ಟ್.
ಗ್ರಂಥಸೂಚಿ
[ಬದಲಾಯಿಸಿ]- Abrams, Meyer H. (1971). The Mirror and the Lamp. London: O. U. P. ISBN 0195014715.
- ಅಬ್ರಾಮ್ಸ್, ಎಂ.ಎಚ್., ನ್ಯಾಚರಲ್ ಸುಪರ್ ನ್ಯಾಚುರಾಲಿಸಮ್: ಟ್ರೇಡಿಶನ್ ಅಂಡ್ ರೆವಲುಶನ್ ಇನ್ ರೊಮ್ಯಾಂಟಿಕ್ ಲಿಟರೇಚರ್ (ನ್ಯುಯಾರ್ಕ್: ಡಬ್ಲು.ಡಬ್ಲು. ನೊರ್ಟೊನ್, 1973).
- Berlin, Isaiah (1999). The Roots of Romanticism. London: Chatto & Windus. ISBN 0691086621.
- ಬ್ರೆಕ್ ಮ್ಯಾನ್, ವಾರೆನ್, ಯುರೊಪಿಯನ್ ರೊಮ್ಯಾಂಟಿಸಿಸಮ್: ಎ ಬ್ರೀಫ್ ಹಿಸ್ಟ್ರಿ ಉಯಿತ್ ಡಾಕುಮೆಂಟ್ಸ್ . ನ್ಯುಯಾರ್ಕ್: ಬೆಡ್ ಫೊರ್ಡ್/ಸ್ಟೇಂಟ್. ಮಾರ್ಟಿನ್ಸ್, 2007. [೧]
- Marcel, Brion (1966). Art of the Romantic Era. Henry Holt & Company, Inc. ISBN 0275420906.
- ಸಿಯೊಫಾಲೊ, ಜಾನ್ ಜೆ. "ದಿ ಅಸೆಂಟ್ ಆಫ್ ಜಿನಿಯಸ್ ಇನ್ ದಿ ಕೋರ್ಟ್ ಅಂಡ್ ಅಕಾಡೆಮಿ." ಫ್ರಾನ್ಸಿಸ್ಕೊ ಗೊಯಾನ ಸ್ವಯಂ ವ್ಯಕ್ತಿಚಿತ್ರಗಳು ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1996.
- ಫಾಯ್,ಎಲಿಜಾಬೆತ್, ರೊಮ್ಯಾಂಟಿಕ್ ಮೆಡಿವ್ಯಾಲಿಸಮ್. ಹಿಸ್ಟ್ರಿ ಅಂಡ್ ದಿ ರೊಮ್ಯಾಂಟಿಕ್ ಲಿಟರರಿ ಐಡಿಯಲ್. ಹೌಂಡ್ಸ್ ಮಿಲ್ಸ್, ಬೆಸಿಂಗ್ ಸ್ಟೊಕ್: ಪಲ್ಗ್ರೇವ್, 2002.
- ಫ್ರೈಡ್ ಲ್ಯಾಂಡರ್, ವಾಲ್ಟರ್, ಡೇವಿಡ್ ಟು ಡೆಲಾಕ್ರೊಇಕ್ಸ್ , (ಒರಿಜನಲಿ ಪಬ್ಲಿಶಡ್ ಇನ್ ಜರ್ಮನ್; ಮರುಮುದ್ರಣ 1980) 1952.
- ಗಿಲ್ಲೆಸ್ಪಿ, ಫೆರಾಲ್ಡ್/ ಮ್ಯಾನ್ ಫ್ರೆಡ್ ಎಂಜಿಲ್ / ಬೆರ್ನಾರ್ಡ್ ಡೈಟರ್ಲೆ (eds.), ರೊಮ್ಯಾಂಟಿಕ್ ಪ್ರೊಸ್ ಫಿಕ್ಸನ್ (= ಎ ಕಂಪೇರೇಟಿವ್ ಹಿಸ್ಟ್ರಿ ಆಫ್ ಲಿಟರೇಚರ್ಸ್ ಇನ್ ಯುರೊಪಿಯನ್ ಲ್ಯಾಂಗ್ವೇಜಿಸ್, Bd. XXIII; ed. ಬೈ ದಿ ಇಂಟರ್ ನ್ಯಾಶನಲ್ ಕಂಪೇರೇಟಿವಿ ಲಿಟರೇಚರ್ ಅಸೊಶಿಯೇಶನ್). ಅಮೆಸ್ಟರ್ ಡ್ಯಾಮ್, ಫಿಲ್ ಡೆಲ್ಫಿಯಾ: ಜಾನ್ ಬೆಂಜಾಮಿನ್ಸ್ 2008, pp. 263–295. ISBN 978-0804680752
- ಗೊಸ್ ಮ್ಯಾನ್, ಲೈನೊಲ್. “ಮೇಕಿಂಗ್ ಆಫ್ ಎ ರೊಮ್ಯಾಂಟಿಕ್ ಐಕಾನ್ : ದಿ ರಿಲಿಜಿಯಸ್ ಕಾಂಟೆಕ್ಸ್ಟ್ ಆಫ್ ಫ್ರೈಡ್ ರಿಚ್ ಒವರ್ ಬೆಕ್ಸ್ ‘ಇಟಾಲಿಯಾ ಅಂಡ್ ಜರ್ಮನಿಯಾ .’” ಅಮೆರಿಕನ್ ಫಿಲಾಸೊಫಿಕಲ್ ಸೊಸೈಟಿ, 2007. ISBN 0791067726 [೨]
- ಗ್ರೆವೆ, ಕೊರ್ಡುಲಾ, ಪೇಂಟಿಂಗ್ ದಿ ಸೇಕ್ರೆಡ್ ಇನ್ ದಿ ಏಜ್ ಆಫ್ ಜರ್ಮನ್ ರೊಮ್ಯಾಂಟಿಸಿಸಮ್ . ಬರ್ಲಿಂಗ್ಟೊನ್: ಆಶ್ಗೇಟ್, 2009. [೩]
- ಹೋಮ್ಸ್, ರಿಚಾರ್ಡ್. ದಿ ಏಜ್ ಆಫ್ ವಂಡರ್ : ದಿ ರೊಮ್ಯಾಂಟಿಕ್ ಜನರೇಶನ್ ಅಂಡ್ ದಿ ಡಿಸ್ಕವರಿ ಆಫ್ ದಿ ಬಿಯುಟಿ ಅಂಡ್ ಟೆರರ್ ಆಫ್ ಸೈನ್ಸ್ (2009) ISBN 978-1-4000-3187-0
- ಹಾನರ್, ಹುಗ್, ರೊಮ್ಯಾಂಟಿಸಿಸಮ್ , (ವೆಸ್ಟ್ ವಿವ ಪ್ರೆಸ್ ) 1979.
- ಲಿಮ್, ಸ್ವ್ಸಿಸ್ಫಾ, ರೊಮ್ಯಾಟಿಸಿಸಮ್ - ದಿ ಡಾನ್ ಆಫ್ ಎ ನಿವ್ ಎರಾ , 2002. (ಮರುಮುದ್ರಣ 2006)
- ಮಾಸನ್, ಸ್ಕೊಟ್, 'ರೊಮ್ಯಾಂಟಿಸಿಸಮ್', Ch.7 ಇನ್ದಿ ಆಕ್ಸಫರ್ಡ್ ಹಾಂಡ್ ಬುಕ್ ಆಫ್ ಇಂಗ್ಲಿಷ್ ಲಿಟರೇಚರ್ ಅಂಡ್ ಥೆಯಾಲಾಜಿ , (ಆಕ್ಸಫರ್ಡ್ ಯುನ್ವರ್ಸಿಟಿ ಪ್ರೆಸ್ ) 2007.
- ಮುರೆ, ಕ್ರಿಸ್ಟೊಫರ್, ed. ಎನ್ ಸೈಕ್ಲೊಪಿಡಿಯಾ ಆಫ್ ದಿ ರೊಮ್ಯಾಂಟಿಕ್ ಎರಾ, 1760-1850 (2 ಸಂ 2004); 850 ಆರ್ಟಿಕಾಲ್ಸ್ ಬೈ ಎಕ್ಸ್ಪರ್ಟ್ಸ್ ; 1600pp
- ನೊವೊಟ್ನಿ, ಫ್ರಿಟ್ಜ್, ಪೇಂಟಿಂಗ್ ಅಂಡ್ ಸ್ಕಲ್ಪ್ಚರ್ ಇನ್ ಯುರೊಪ್, 1780-1880 , 1971. (2 ನೆಯ ಆವೃತ್ತಿ 1980)
- ಮೆಕ್ ಕಾಲ್ಮನ್, ಐವಾನ್, ed. ಆನ್ ಆಕ್ಸ್ ಫರ್ಡ್ ಕಂಪಾನಿಯನ್ ಟು ದಿ ರೊಮ್ಯಾಂಟಿಕ್ ಏಜ್ (2009) ಆನ್ ಲೈನ್ ಆ ಆಕ್ಸ್ ಫರ್ಡ್ ರೆಫೆರನ್ಸ್ ಆನ್ ಲೈನ್
- ರೀಡ್ ಹೆಡ್ ಎಟ್ ಆಲ್., "ನೊರ್ಟೊನ್ ಆಂಥೊಲಾಜಿ ಆಫ್ ಇಂಗ್ಲಿಷ ಲಿಟರೇಚರ್,"ದಿ ರೊಮ್ಯಾಂಟಿಕ್ ಪಿರಿಯಡ್ - ಸಂಪುಟ D" (ಡಬ್ಲು.ಡಬ್ಲು. ನೊರ್ಟೊನ್ & ಕಂಪನಿ ಲಿ.) 2006
- ರೊಸೆನ ಬ್ಲಮ್, ರಾಬರ್ಟ್, ಮಾಡೆರ್ನ್ ಪಂಟಿಂಗ್ ಅಂಡ್ ದಿ ನಾರ್ದರ್ನ್ ರೊಮ್ಯಾಂಟಿಕ್ ಟ್ರೆಡಿಶನ್: ಫ್ರೈಡ್ ರಿಚ್ ಟು ರೊಥ್ಕೊ , (ಹಾರ್ಪರ್ & ರೊ) 1975.
- ಸ್ಕೆಂಕ್, ಎಚ್.ಜಿ., ದಿ ಮೈಂಡ್ ಆಫ್ ದಿ ಯುರೊಪಿಯನ್ ರೊಮ್ಯಾಂಟಿಕ್ಸ್ : ಆನ್ ಎಸ್ಸೆ ಇನ್ ಕಲ್ಚರಲ್ ಹಿಸ್ಟ್ರಿ , (ಕಾನ್ ಸ್ಟೇಬಲ್) 1966.
- ಟೆಕಿನರ್, ಡೆನಿಜ್, ಮಾಡೆರ್ನ್ ಆಅರ್ಟ್ ಅಂಡ್ ದಿ ರೊಮ್ಯಾಂಟಿಕ್ ವಿಜನ್ , (ಯುನ್ವರ್ಸಿಟಿ ಪ್ರೆಸ್ ಆಫ್ ಅಮೆರಿಕಾ ) 2000.
- ವಎರ್ಕ್ ಮ್ಯಾನ್, ಲೆಸ್ಲಿJ., "ಮೆಡಿವ್ಯಾಲಿಸಮ್ ಅಂಡ್ ರೊಮ್ಯಾಂಟಿಸಿಸಮ್ ," ಪೊಯೆಟಿಕಾ 39–40 (1994): 1–34.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಭಾವಪ್ರಧಾನ ವಲಯಗಳುCircles ಎಲೆಕ್ಟೃಅನಿಕ್ ಸಂಪುಟಗಳು, ಇತಿಹಾಸಗಳು, ಮತ್ತು ಭಾವಪ್ರಧಾನ ಯುಗದ ಪ್ರತಿಭಾನ್ವಿತರ ಲೇಖನಗಳು
- ಭಾವಪ್ರಧಾನ ಕವಿಗಳು
- ಡಿಕ್ಷನರಿ ಆಫ್ ಹಿಸ್ಟರಿ ಆಫ್ ಐಡಿಯಾಸ್ : ಆಲ್ಕೆಮಿ
- ಡಿಕ್ಷನರಿ ಆಫ್ ಹಿಸ್ಟರಿ ಆಫ್ ಐಡಿಯಾಸ್ Archived 2008-10-01 ವೇಬ್ಯಾಕ್ ಮೆಷಿನ್ ನಲ್ಲಿ., ರಾಜಕೀಯದಲ್ಲಿ ಭಾವಪ್ರಧಾನತೆಯ ವಿಚಾರ
- Pages using the JsonConfig extension
- Articles with hatnote templates targeting a nonexistent page
- Articles with unsourced statements from July 2010
- Articles with unsourced statements from January 2009
- Articles with unsourced statements from February 2010
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಸೌಂದರ್ಯಶಾಸ್ತ್ರದ ಸಿದ್ಧಾಂತಗಳು
- ರೊಮ್ಯಾಂಟಿಸಿಸಂ
- ಭಾವಪ್ರಧಾನ ಕಲೆ
- ಭಾವಪ್ರಧಾನ ವರ್ಣಚಿತ್ರ ಕಲೆಗಳು
- ಸಾಹಿತ್ಯದ ಪೀಳಿಗೆ
- ಸಾಹಿತ್ಯಿಕ ಚಳವಳಿಗಳು
- ವಿಚಾರಧಾರೆಯ ಇತಿಹಾಸ
- ಯುರೊಪಿನ ಇತಿಹಾಸ
- Pages using ISBN magic links