ದಿ ಗ್ರಡ್ಜ್
The Grudge | |
---|---|
ಚಿತ್ರ:The Grudge movie.jpg | |
ನಿರ್ದೇಶನ | Takashi Shimizu |
ನಿರ್ಮಾಪಕ | Sam Raimi Robert Tapert |
ಲೇಖಕ | Stephen Susco |
ಪಾತ್ರವರ್ಗ | Sarah Michelle Gellar Jason Behr William Mapother KaDee Strickland Clea DuVall Bill Pullman |
ಸಂಗೀತ | Christopher Young |
ಛಾಯಾಗ್ರಹಣ | Katsumi Yanagishima |
ಸಂಕಲನ | Jeff Betancourt |
ವಿತರಕರು | Columbia Pictures |
ಬಿಡುಗಡೆಯಾಗಿದ್ದು | ಅಕ್ಟೋಬರ್ 22, 2004 |
ಅವಧಿ | 92 minutes |
ದೇಶ | United States |
ಭಾಷೆ | English Japanese |
ಬಂಡವಾಳ | $10 million[೧] |
ಬಾಕ್ಸ್ ಆಫೀಸ್ | $187,281,115 |
ದಿ ಗ್ರಡ್ಜ್ ಜಪಾನಿ ಚಲನಚಿತ್ರವನ್ನು ಆಧರಿಸಿ 2004 ರ ಅಮೇರಿಕಾದ ಪುನಃ ನಿರ್ಮಾಣಗೊಂಡ ಚಲನಚಿತ್ರJu-on: The Grudge , ಹಾಗೂ ಜೂ-ಆನ್1 ನ್ನಿನ, ಜೂ-ಆನ್ ಸರಣಿಯಲ್ಲಿನ ನಡುಕ ಹುಟ್ಟಿಸುವ ಮೊದಲನೆಯ ಚಲನಚಿತ್ರ. ಅಮೇರಿಕಾದ ಅತ್ಯಂತ ಭಯಾನಕ ದಿ ಗ್ರಡ್ಜ್ ಚಲನಚಿತ್ರ ಸರಣಿಯಲ್ಲಿನ ಚಲನಚಿತ್ರದ ಮೊದಲನೆಯ ಭಾಗವಾಗಿದೆ. ಕೊಲಂಬಿಯಾ ಪಿಕ್ಚರ್ಸ್ ರವರಿಂದ ಅಕ್ಟೋಬರ್ 22, 2004 ರಂದು ಉತ್ತರ ಅಮೇರಿಕಾದಲ್ಲಿ ಈ ಚಲನಚಿತ್ರವು ಬಿಡುಗಡೆಗೊಳಿಸಲ್ಪಟ್ಟಿತು,[೨] ಮತ್ತು ತಕಾಶಿ ಶಿಮಿಜು (ಮೂಲ ಸರಣಿಯ ನಿರ್ದೇಶಕರು) [೩] ರವರು ನಿರ್ದೇಶಿಸಿದ್ದರೆ, ಸ್ಟೀಫನ್ ಸುಸ್ಕೊ ರವರು ಪುನರ್ರಚನೆಯ ಚಿತ್ರಕಥೆಯನ್ನು ರಚಿಸಿದರು. ಮೂಲ ಸರಣಿಯ ಪರಂಪರೆಯಂತೆಯೇ, ಘಟನೆಗಳ ಒಂದು ಪುನರಾವಲೋಕನದ ಅನುಕ್ರಮವಾದ ಮುಖಾಂತರ ಚಲನಚಿತ್ರದ ಕಥಾವಸ್ತುವು ಹೇಳಲ್ಪಟ್ಟಿದೆ ಮತ್ತು ನಡುವೆ ಬರುವ ಅನೇಕ ಉಪ ಕಥೆಗಳನ್ನು ಒಳಗೊಂಡಿದೆ.
ಈ ಚಲನಚಿತ್ರವು ಇತರೆ ಎರಡು ಪುನರಾವೃತ್ತಿಗಳ ಹುಟ್ಟಿಗೆ ಕಾರಣವಾಯಿತು: ದಿ ಗ್ರಡ್ಜ್ 2 (ಇದು ಅಕ್ಟೋಬರ್ 13, 2006 ರಂದು ಪ್ರದರ್ಶಿಸಲ್ಪಟ್ಟಿತು)[೪] ಮತ್ತು ದಿ ಗ್ರಡ್ಜ್ 3 (ಇದು ಮೇ 12, 2009 ರಂದು ಬಿಡುಗಡೆಯಾಯಿತು).[೫]
ಸಾರಾಂಶ
[ಬದಲಾಯಿಸಿ]ಒಂದು ಶಕ್ತಿಶಾಲಿ ಕ್ರೋಧ ಅಥವಾ ಉತ್ಕಟ ದುಃಖದ ಗಟ್ಟಿ ಹಿಡಿತದಲ್ಲಿ ಯಾರಾದರೊಬ್ಬರು ಮರಣಹೊಂದಿದಾಗ ಹುಟ್ಟುವಂತಹ ಒಂದು ಶಾಪವನ್ನು ದಿ ಗ್ರಡ್ಜ್ ವರ್ಣಿಸುತ್ತದೆ (ಆನ್ರಿಯೊ ನೋಡಿರಿ). ಆ ವ್ಯಕ್ತಿಯು ಗತಿಸಿದ ಸ್ಥಳದಲ್ಲಿ ಆ ಅಭಿಶಾಪವು ಸಂಗ್ರಹಿಸಲ್ಪಟಡುತ್ತದೆ. ಈ ಕ್ರೂರ ಹತ್ಯೆಗೆ ಸಂಬಂಧಿಸಿದ ಅತಿ ಮಾನವ ಶಕ್ತಿಯನ್ನು ಎದುರಿಸಿದವರು ಸಾಯುತ್ತಾರೆ ಮತ್ತು ಆ ಕೇಡು ಪದೇ ಪದೇ ಪುನರ್ಜನ್ಮಿಸುತ್ತದೆ, ಭಯಾನಕ ಕೊನೆಯಿಲ್ಲದ ಬೆಳೆಯುತ್ತಿರುವ ಕೊಂಡಿಯಲ್ಲಿ ಬಲಿಪಶುವಿನಿಂದ ಬಲಿಪಶುವಿಗೆ ದಾಟಿಸಲ್ಪಡುತ್ತದೆ. ಈ ಕೆಳಗಿನ ಘಟನೆಗಳು ಅವುಗಳ ಯಥಾರ್ಥ ಕ್ರಮದಲ್ಲೇ ವಿವರಿಸಲ್ಪಟ್ಟಿವೆ (ಇದು ಚಲನಚಿತ್ರದಲ್ಲಿ ತೋರಿಸುವ ಕ್ರಮದ ವ್ಯವಸ್ಥೆಗಿಂತ ಭಿನ್ನವಾಗಿದೆ).
ಪರಿಚಯ
[ಬದಲಾಯಿಸಿ]ತನ್ನ ಮುಖದ ಮೇಲೆ ಗಾಬರಿಯ ನೋಟ ಹೊಂದಿರುವ, ತಮ್ಮ ಹೆಚ್ಚು ಎತ್ತರದ ಬಾಲ್ಕನಿಯ ಮೇಲೆ ನಿಂತಿರುವ, ಪೀಟರ್ ಕಿರ್ಕ್ (ಬಿಲ್ ಪುಲ್ ಮನ್), ಎಂಬ ವ್ಯಕ್ತಿಯ ಮೇಲೆ ಚಲನಚಿತ್ರವು ಪ್ರಾರಂಭವಾಗುತ್ತದೆ. ಅವರ ಪತ್ನಿ, ಮರಿಯ (ರೋಸಾ ಬ್ಲಸಿ), ತಮ್ಮ ಪ್ರತ್ಯೇಕ ಬಹುಮಹಡಿ ಕಟ್ಟಡದ ಮನೆಯ ಒಳಗಿನಿಂದ ಅವರ ಕಡೆ ನೋಡಿ ಏನು ತಪ್ಪಾಗಿದೆಯೆಂದು ಕೇಳುತ್ತಾಳೆ. ಯಾವುದೇ ಮಾತು ಅಥವಾ ಹಿಂಜರಿತವಿಲ್ಲದೆ, ಅವರು ತಾವೇ ಸ್ವತಃ ಬಾಲ್ಕಾನಿಯಿಂದಾಚೆ ಧುಮುಕಿ, ಗಾಬರಿಯಾದ ಮರಿಯ ನೋಡುತ್ತಿರುವಂತೆಯೇ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ವಿಲಿಯಮ್ಸ್ ಕುಟುಂಬ
[ಬದಲಾಯಿಸಿ]ಮಾಥ್ಯೂ ವಿಲಿಯಮ್ಸ್ (ವಿಲಿಯಮ್ ಮಾಪೊಥರ್), ಅವರ ಪತ್ನಿ ಜೆನ್ನಿಫರ್ (ಕ್ಲಿಯಾ ಡುವಲ್), ಹಾಗೂ ಅವರ ನರಳುತ್ತಿರುವ ತಾಯಿ, ಎಮ್ಮಾ, ಸೈಕಿ ಮನೆಗೆ ಹೋಗಿರುತ್ತಾರೆ. ಜೆನ್ನಿಫರ್ ಗೆ ತನ್ನ ಜಪಾನಿನಲ್ಲಿನ ಜೀವನದಿಂದ ಅಸುಖಿಯಾಗಿದ್ದಳು; ಆಕೆ ಅಲ್ಲಿನ ಭಾಷೆ ಮಾತನಾಡಲಾರಳು ಹಾಗೂ ಕಾಲ್ನಡಿಗೆ ಹೋಗುವಾಗ ಒಮ್ಮೆ ಕಳೆದುಹೋಗಿದ್ದಳು. ಮಾಥ್ಯೂ ಆಕೆಗೆ ಅಲ್ಲಿನ ಪರಿಸ್ಥಿತಿಗಳು ಸುಧಾರಿಸುತ್ತವೆ, ಮತ್ತು ಹಾಗಾಗದಿದ್ದರೆ ತಮ್ಮ ಕುಟುಂಬವು ಸಂಯುಕ್ತ ಸಂಸ್ಥಾನಕ್ಕೆ ಹಿಂದಿರುಗುವುದೆಂದು ಭರವಸೆ ಕೊಡುತ್ತಾರೆ.
ಜೆನ್ನಿಫರ್ ತನ್ನ ಒಂದು ಕೊಠಡಿಯಲ್ಲಿನ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾಳೆ. ಆಕೆಯ ಬೋಗುಣಿಯಂತಹ ಪಾತ್ರೆಯು ನೆಲಕ್ಕೆ ಬಿದ್ದ ಶಬ್ದವು ಆಕೆಯು ಗಾಬರಿಯಿಂದ ಏಳುವಂತೆ ಮಾಡುತ್ತದೆ ಹಾಗೂ ಆಕೆಯು ನೆಲದ ಮೇಲೆ ಪಾತ್ರೆಯನ್ನು ಕಾಣುತ್ತಾಳೆ, ಅದರಲ್ಲಿರುವ ಪದಾರ್ಥಗಳು ಎಲ್ಲಾ ಕಡೆಯೂ ಚೆಲ್ಲಾಪಿಲ್ಲಿಯಾಗಿರುತ್ತವೆ. ಆಕೆಯು ಎಮ್ಮಾಳನ್ನು ಈ ರೀತಿ ಗಲೀಜು ಮಾಡಿದ್ದಕ್ಕಾಗಿ ಬಯ್ಯುತ್ತಾಳೆ, ಆದರೆ ನಂತರ ಒಂದು ಮಗುವಿನ ಎಳೆದುಕೊಂಡು ಹೋದಂತಹ ಒದ್ದೆಯಾದ ಹೆಜ್ಜೆಗುರುತುಗಳು ನಡುಮನೆಯಿಂದ ಹೊರಗೆ ಹೋಗಿರುವುದನ್ನು ಕಾಣುತ್ತಾಳೆ. ಆಕೆಯು ಮೆಟ್ಟಿಲುಗಳು ಇಳಿಯುವ ಸ್ಥಳದ ಮೇಲೆ ಒಂದು ಬೆಕ್ಕನ್ನು ನೋಡುತ್ತಾಳೆ ಹಾಗೂ ಬಿಳಿಯ ತೋಳುಗಳ ಒಂದು ಜೊತೆ ನಿಧಾನವಾಗಿ ಅದನ್ನು ಎತ್ತಿಕೊಳ್ಳುವುದನ್ನು ಗಮನಿಸುತ್ತಾಳೆ. ಆಕೆಯು ಹಾಗೆಯೇ ಮಹಡಿಯ ಮೇಲೆ ಹೋಗಿ ತನ್ನ ಮಲಗುವ ಕೊಠಡಿಯನ್ನು ಪ್ರವೇಶಿಸುತ್ತಾಳೆ (ತೊಷಿಯೊ ನ ಹಿಂದಿನ ಮಲಗುವ ಕೊಠಡಿ). ಬಾಗಿಲು ಆಕೆಯ ಹಿಂದೆಯೇ ಮುಚ್ಚಿಕೊಳ್ಳುತ್ತದೆ.
ಮಾಥ್ಯೂ ಕೆಲಸದಿಂದ ಹಿಂತಿರುಗಿ ಬಂದಾಗ, ಕಸವು ಎಲ್ಲಾ ಕಡೆಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮನೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುವುದನ್ನು ಕಂಡರು. ಅವರು ತಮ್ಮ ಪತ್ನಿಯನ್ನು ಕರೆಯುತ್ತಾರೆ, ಆಕೆಯು ಅವರಿಗೆ ಉತ್ತರಿಸುವುದಿಲ್ಲ. ಅವರು ಕೊನೆಗೆ ಆಕೆಯು ತಮ್ಮ ಹಾಸಿಗೆಯ ಮೇಲೆ ಚಲಿಸಲು ಇಲ್ಲವೇ ಮಾತನಾಡಲೂ ಸಾಧ್ಯವಾಗದೆ ಉಸಿರಾಡಲು ಕಷ್ಟಪಡುತ್ತಿರುವಂತಹ ಪರಿಸ್ಥಿತಿಯಲ್ಲಿ ಕಂಡರು. ಅವರು ಒಂದು ತುರ್ತು ಚಿಕಿತ್ಸಾ ವಾಹನವನ್ನು ಕರೆಯುವ ಮೊದಲೇ, ಬೆಕ್ಕಿನಂತೆ ಧ್ವನಿ ಮಾಡುತ್ತಿರುವ ತೊಷಿಯೊ (ಯುಯಾ ಒಜೇಕಿ ) ಎಂಬ ಯುವಕನ ತಕ್ಷಣದ ಬಾಹ್ಯ ಚಹರೆಯಿಂದ ಅವರು ಗಾಬರಿಗೊಂಡರು. ಇದ್ದಕ್ಕಿದ್ದಂತೆ ತೊಷಿಯೊ ತಮ್ಮ ತಲೆಯ ಮೇಲೆ ಕಾಣಿಸಿಕೊಂಡಾಗ ಅವರು ಹೋಗಿ ಬಚ್ಚಲು ಮನೆಗೆ ಒರಗಿಕೊಂಡರು.
ಆ ನಂತರ, ಮಾಥ್ಯೂ ಅವರ ಸಹೋದರಿ, ಸುಸಾನ್, ಕಛೇರಿಯಿಂದ ಹೊರಡಲು ತಯಾರಾಗುತ್ತಿದ್ದರು. ಕರೆ ಮಾಡಲು ಪ್ರಯತ್ನಿಸಿದ ನಂತರ, ಸುಸಾನ್ ಮಾಥ್ಯೂ ಅವರನ್ನು ತಲುಪಲು ಸಾಧ್ಯವಾಗದೇ ಹೋದುದರಿಂದ ಹೆಚ್ಚು ಚಿಂತೆಗೊಳಗಾಗುತ್ತಾರೆ. ಆಕೆಯು ತನ್ನ ಕಛೇರಿಯ ಕಟ್ಟಡವನ್ನು ಬಿಟ್ಟು ಹೊರಡಲು ಪ್ರಾರಂಭಿಸಿದಾಗ, ಆಕೆಯು ಹಜಾರದ ದಾರಿಯಿಂದ ಬರುತ್ತಿರುವ ನರಳುವಿಕೆಯ ಧ್ವನಿಯಿಂದ ನಿಲ್ಲಿಸಲ್ಪಟ್ಟರು. ಆಕೆಯು ಕೂಡಲೆ ಮೆಟ್ಟಿಲುಗಳ ಕಡೆ ನಿರ್ಗಮಿಸುತ್ತಾರೆ ಆದರೆ ದೀಪಗಳು ಮಿನುಗುಟ್ಟುತ್ತಾ ಒಡೆದು ಚೂರು ಚೂರಾದಾಗ ಆಕೆಯು ಗಾಬರಿಗೊಳ್ಳುತ್ತಾರೆ. ಸುಸಾನ್ ಕಯಕೊ (ಟಕಕೊ ಫುಜಿ) ನ ಭೂತವು ಮೆಟ್ಟಿಲುಗಳ ಮೇಲೆ ತೆವಳುತ್ತಾ ಬರುತ್ತಿರುವುದನ್ನು ಕಟಕಟೆಯ ಮೇಲಿನಿಂದ ನೋಡುತ್ತಾರೆ. ಸುಸಾನ್ ಅತ್ಯಂತ ಹತ್ತಿರದ ಹಜಾರದ ದಾರಿಗೆ ವೇಗವಾಗಿ ನುಗದ್ಗಿದರು ಆದರೆ ಕಯಕೊ ಅವರ ಸೆಲ್ ಫೋನನ್ನು ಹಿಡಿದು ಕಿತ್ತಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸುಸಾನ್ ಸಹಾಯ ಬೇಡುತ್ತಾ, ಸುರಕ್ಞಾ ಕಛೇರಿಗೆ ಹೋದರು. ಅಲ್ಲಿ, ಸುರಕ್ಷಾ ಕಾವಲುಗಾರನು ಅದೇನೆಂದು ತಿಳಿಯಲು ಪ್ರಯತ್ನಿಸುತ್ತೇನೆಂದು ವಾಗ್ದಾನ ಮಾಡಿದನು. ರಕ್ಷಣಾ ಕಾವಲುಗಾರನು ತನಿಖೆ ಮಾಡುವಾಗ ಸುಸಾನ್ ಮಾಹಿತಿ ಪರದೆಯನ್ನು ಗಮನಿಸುತ್ತಿದ್ದರು. ಆದಾಗ್ಯೂ, ಅವನಿಗೆ ಏನೂ ಮಾಹಿತಿ ಸಿಗದ ಕಾರಣ ಹೊರಟು ಹೋದನು. ಆ ನಂತರ, ದೀಪಗಳು ಮಿನುಗುಟ್ಟಿತು ಮತ್ತು ಕಯಕೊ ನಡುಮನೆಯ ಮಾರ್ಗದಲ್ಲಿ ನೆರಳುಗಳಾಚೆಯಿಂದ ಎದ್ದನು ಹಾಗೂ ಸುರಕ್ಷಾ ಕ್ಯಾಮರಾದ ಕಡೆಗೆ ನಡೆದನು. ಸುಸಾನ್ ಓಡಿದರು.
ಸುಸಾನ್ ತನ್ನ ಬಹುಮಹಡಿ ಕಟ್ಟಡದ ಮನೆಗೆ ಒಂದು ಟಾಕ್ಸಿ ಕ್ಯಾಬ್ ಅನ್ನು ತೆಗೆದುಕೊಂಡು ಬಂದರು. ಆಕೆಯು ಲಿಫ್ಟ್ ಅನ್ನು ಪ್ರವೇಶಿಸಿದಾಗ, ಅದು ಅನೇಕ ಮಹಡಿಗಳನ್ನು ಏರಿತು. ಸುಸಾನ್ ಗಮನಿಸಲೇ ಇಲ್ಲ, ಆದರೂ, ಆಕೆಯು ದಾಟಿದ ಪ್ರತಿ ಲಿಫ್ಟ್ ನ ಬಾಗಿಲುಗಳಾಚೆ ತೊಷಿಯೊ ನಿಂತಿದ್ದು ದಾಟುತ್ತಿದ್ದ ಪ್ರತಿ ಮಹಡಿಯ ಹತ್ತಿರಕ್ಕೆ ನಿರಂತರವಾಗಿ ಬರುತ್ತಲೇ ಇತ್ತು. ಸುಸಾನ್ ಸುರಕ್ಷಿತವಾಗಿ ಒಳಗೆ ಬಂದರು ಆಗ ಆಕೆಯ ಫೋನ್ ಬಾರಿಸಿತು. ಅದು ಮಾಥ್ಯೂ ಆಗಿದ್ದು ತಮ್ಮ ಬಹುಮಹಡಿ ಕಟ್ಟಡದ ಮನೆಯ ಸಂಖ್ಯೆಯನ್ನು ಮರೆತಿರುವ ಕಾರಣ ಮತ್ತು ಮನೆಯ ಕರೆಗಂಟೆಯನ್ನು ಬಾರಿಸಿ ಒಳಗೆ ಹೋಗಲು ಕೇಳುತ್ತಿದ್ದರು. ತನ್ನನ್ನು ಎಲ್ಲಿ ಕಾಣಬೇಕೆಂದು ಅವರಿಗೆ ತಿಳಿಸಿದರು ಮತ್ತು ಆ ಕರೆಗಂಟೆಯನ್ನು ತನ್ನ ಫೋನಿನ ಮೂಲಕ ನಡೆಯುವಂತೆ ಮಾಡಿದರು. ಆಕೆಯು ಸರಿಯಾಗಿ ನಡೆಯುವಂತೆ ಮಾಡಿದ ತಕ್ಷಣ ಆ ಮನೆಯ ಕರೆಗಂಟೆಯು ಹೊಡೆದುಕೊಂಡಿತು. ಮಾಥ್ಯೂಗೆ ಬರಲು ಬಹುಶಃ ಸಮಯ ಇನ್ನೂ ಆಗಿರಲಿಕ್ಕಿಲ್ಲವೆಂದು ಯೋಚಿಸಿ, ಆಕೆಯು ಬಾಗಿಲಿನ ಇಣುಕು ಕಿಂಡಿಯಿಂದ ನೋಡಿ ಪರೀಕ್ಷಿಸಿದರು. ಅದು ಮಾಥ್ಯೂನೇ ಎಂದು ತಿಳಿದು ಆಶ್ಚರ್ಯಗೊಂಡು, ಸುಸಾನ್ ಅವರು ಕುಚೇಷ್ಟೆ ಮಾಡುತ್ತಿರ ಬಹುದೆಂದು ನಂಬಿದರು. ಆಕೆಯು ಜೋರಾಗಿ ಕೋಪದಿಂದ ಬಾಗಿಲನ್ನು ತೆರೆದರು, ಆದರೆ ಅಲ್ಲಿ ಯಾರೂ ಇರಲಿಲ್ಲ. ಮರಣದ ಭಯಂಕರ ನಡುಗುವ ಶಬ್ದ ಸುಸಾನ್ ಕೈಯಲ್ಲಿರುವ ಫೋನ್ ಮುಖಾಂತರ ಜೋರಾಗಿ ಹೊರಬಂದಿತು. ಆಕೆಯು ತನ್ನ ಫೋನ್ ಅನ್ನು ಬೀಳಿಸಿ ಮುರಿದು ಹಾಕುತ್ತಾರೆ, ಆದರೂ ನಡುಗುವ ಆ ಶಬ್ದವು ಇನ್ನೂ ಕೇಳುತ್ತಲೇ ಇರುತ್ತದೆ. ಹಾಸಿಗೆಯಲ್ಲಿ ಭಯದಿಂದ ಕುಗ್ಗಿ ಸುಸಾನ್ ಹೊದಿಕೆಯಡಿಯಲ್ಲಿ ತಲುಪಿದರು ಹಾಗೂ ತನ್ನ ಫೋನ್ ನಿಂದ ಮೊಲದ ಪಾದದ ಫೋನ್ ಚಾರ್ಮ್ ಅನ್ನು ಎಳೆದು ತೆಗೆದರು ಹಾಗೂ ಹೆದರಿಕೆಯಲ್ಲಿ ಅದನ್ನು ಕೆಳಗೆ ಬೀಳಿಸಿದರು. ಹೊದಿಕೆಯ ಕೆಳಗಿನಿಂದ ದೊಡ್ಡ ಅಲೆಯಂತೆ ಒಂದು ಗಂಟು ಮೇಲೆ ಬಂದಿತು ಹಾಗೂ ಸುಸಾನ್ ಕಡೆಗೆ ಚಲಿಸಿತು. ಆಕೆಯು ಹೊದಿಕೆಗಳನ್ನು ಎತ್ತಿ ಹಿಡಿದಾಗ, ಕಯಕೊ ನ ಮುಖವನ್ನು ನೋಡಿದರು. ಆಕೆಯು ಏಕಾಏಕಿ ಕೆಳಗೆ ಎಳೆಯಲ್ಪಟ್ಟರು ಮತ್ತು ಇಬ್ಬರೂ ಸಂಪೂರ್ಣವಾಗಿ ಮಾಯವಾದರು.
ಸಾಮಾಜಿಕ ಕಾರ್ಯಕರ್ತರು
[ಬದಲಾಯಿಸಿ](ವಿಲಿಯಮ್ಮರು ಆ ಮನೆಗೆ ಬಂದ ಸ್ವಲ್ಪ ದಿನಗಳ ನಂತರದ ಕಾಲದಲ್ಲಿ ಅವುಗಳು ನಡೆದದ್ದಾದರೂ, ಈ ವಿಭಾಗದ ಘಟನೆಗಳು ಚಲನಚಿತ್ರದುದ್ದಕ್ಕೂ ತೋರಿಸಲ್ಪಟ್ಟಿವೆ). ಎಮ್ಮಾಳ ಯೋಗಕ್ಷೇಮ ನೋಡಿಕೊಳ್ಳುವುದು ಹಾಗೂ ಮನೆಯನ್ನು ಚೊಕ್ಕಟಗೊಳಿಸುವುದು ಯೊಕೊ (ಯೊಕೊ ಮಾಕಿ) ಎಂಬ ಹುಡುಗಿಯ ಕೆಲಸ. ನೆಲದ ಮತ್ತು ಪಾವಟಿಗೆಗಳ ಮೇಲಿನ ಕಸವನ್ನು ತೆಗೆಯುವಾಗ, ಮಹಡಿಯ ಮೇಲಿನ ಕೊಠಡಿಯ ಸ್ಥಳದ ಸುತ್ತಲೂ ಯಾರೋ ಓಡಾಡುತ್ತಿರುವುದನ್ನು ಆಕೆ ಕೇಳಿಸಿಕೊಂಡಳು. ಆ ಶಬ್ದವನ್ನೇ ಅನುಸರಿಸಿಕೊಂಡು ಹೋದಾಗ, ಯೊಕೊ ಆ ಮಲಗುವ ಕೊಠಡಿಯಲ್ಲಿನ ಬಚ್ಚಲಿನ ಒಳಗಡೆ ಹೋದಳು ಹಾಗೂ ಮಹಡಿಗೆ ದಾರಿ ಮಾಡಿಕೊಡುವ ಒಂದು ಚಿಕ್ಕ ಬಾಗಿಲನ್ನು ಮಾಳಿಗೆಯಲ್ಲಿ ಕಂಡಳು. ಲೈಟರ್ ಉಪಯೋಗಿಸಿ, ಯೊಕೊ ಆ ಬಾಗಿಲಿನ ಮುಖಾಂತರ ತನ್ನ ತಲೆಯನ್ನು ಹೊರಹಾಕಿ ನೋಡಿದಳು ಮತ್ತು ಶಬ್ದದ ಮೂಲವನ್ನು ಹುಡುಕುತ್ತಾ, ನಿಧಾನವಾಗಿ ಸುತ್ತಲೂ ತಿರುಗಿದಳು. ಆಕೆಯು ಅಕಸ್ಮಾತ್ತಾಗಿ ಆನ್ರಿಯೊ ಜೊತೆ ಮುಖಾಮುಖಿಯಾದಳು, ಆದು ಈಗ ಕಯಾಕೊ ಸೈಕಿ ಯಾಗಿ ಪರಿವರ್ತಿತವಾಗಿತ್ತು, ಅದು ಆಕೆಯ ಮೇಲೆ ಆಕ್ರಮಣ ಮಾಡಿ, ಬಚ್ಚಲು ಮನೆಯ ತನಕ ಎಳೆದುಕೊಂಡು ಹೋಯಿತು.
ಯೊಕೊ ಮಾಯವಾದ ಮೇಲೆ ಆ ಮನೆಯಲ್ಲಿ (ಸೆಟಗಯ ದಲ್ಲಿ) ಕೆಲಸಗಳನ್ನು ಮಾಡಲು ಹಾಗೂ ಎಮ್ಮಾಳನ್ನು ನೋಡಿಕೊಳ್ಳಲು ಕರೆನ್ ಡೇವಿಸ್ (ಸಾರಾ ಮೈಖೆಲ್ ಗೆಲ್ಲರ್)ಳನ್ನು ಕರೆಸಿದರು. ಕೆಲಸ ಮಾಡುತ್ತಿರುವಾಗ, ಟೇಪುಗಳಿಂದ ಭದ್ರವಾಗಿ ಮುಚ್ಚಲ್ಪಟ್ಟ ಒಂದು ಬಚ್ಚಲು ಮನೆಯನ್ನು ಕರೆನ್ ಕಂಡಳು ಹಾಗೂ ಅದರಿಂದ ಬೆಕ್ಕು ಕೂಗುತ್ತಿರುವಂತಹ ಶಬ್ದವು ಬರುತ್ತಿತ್ತು. ಆಕೆಯು ಆ ಟೇಪುಗಳನ್ನು ಕಿತ್ತು ಮತ್ತು ಬಾಗಿಲನ್ನು ತೆರೆದಾಗ, ಅವಳಿಗೆ ಅಲ್ಲಿ ಒಬ್ಬ ಚಿಕ್ಕ ಹುಡುಗನು ದೊರಕಿದನು (ತೊಷಿಯೊ). ಆ ಹುಡುಗನು ಕೆಳಗಡೆ ಬರಲು ನಿರಾಕರಿಸಿದನು ಅದರಿಂದ ಆಕೆಯು ಅವನ ಹೆಸರನ್ನು ಕೇಳಿದಳು. ಅವನು ಒಂದು ಧ್ವನಿ ರಹಿತ ವಿಲಕ್ಷಣ ಸ್ವರದಲ್ಲಿ "ತೊಷಿಯೊ," ಎಂದು ತಿಳಿಸಿದನು. ಎಮ್ಮಾ ಮತ್ತೊಂದು ಕೊಠಡಿಯಲ್ಲಿ ಕದಲುತ್ತಾ ಗೊಣಗುಟ್ಟಲಾರಂಭಿಸಿದಳು. ಕರೆನ್ ಆಕೆಯನ್ನು ಸಮಾಧಾನ ಪಡಿಸುತ್ತಿರುವಂತೆ, ಕೊಠಡಿಯ ಒಂದು ಮೂಲೆಯಿಂದ ಕೂದಲಿನ ಒಂದು ಕಪ್ಪು ನೆರಳು, ಎಮ್ಮಾಳನ್ನು ಹೆದರಿಸುತ್ತಾ ಹೊರಬಂದಿತು. ಕಯಕೊ ಎಮ್ಮಾಳ ಬಳಿ ತಲುಪುತ್ತಿರುವುದನ್ನು ಕರೆನ್ ನೋಡಿದಳು. ಆಕೆಯ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದ ಕಯಕೊಳ ಕೂದಲು, ಹಿಂದಕ್ಕೆ ಹಾರಿ ಆಕೆಯ ಕಣ್ಣಿನ ಬಿಳಿಯನ್ನು ಪ್ರದರ್ಶಿಸಿತು. ಕಣ್ಣು ಗುಡ್ಡೆಗಳು ಒಂದು ಪಕ್ಕಕ್ಕೆ ಉರುಳಿ ಕರೆನ್ ಮೇಲೆ ಕೇಂದ್ರೀಕರಿಸಿತು ಆಗ ಆಕೆಯು ಅತ್ಯಂತ ಭೀತಿಯಿಂದ ಹಿಂದಕ್ಕೆ ಸರಿದಳು.
ಕರೆನ್ ಳ ಮೇಲಾಧಿಕಾರಿ ಅಲೆಕ್ಸ್, ಕೊನೆಗೆ ಬಂದು ಎಮ್ಮಾ ಮೂರ್ಛಿತಳಾಗಿದ್ದು ಹಾಗೂ ಕರೆನ್ ಗಾಬರಿಯ ಸ್ಥಿತಿಯಲ್ಲಿರುವುದನ್ನು ಕಂಡರು. ಕರೆನ್ ಳನ್ನು ಆಸ್ಪತ್ರೆಗೆ ಒಯ್ಯಲ್ಪಟ್ಟರೆ ಪತ್ತೇದಾರರು ಅಲೆಕ್ಸ್ ರನ್ನು ಪ್ರಶ್ನಿಸಿದರು. ಪತ್ತೇದಾರ ನಕಗಾವ (ರಿಯೊ ಇಷಿಬಾಷಿ) ಅಲೆಕ್ಸ್ ರನ್ನು ಅಲ್ಲಿ ವಾಸವಾಗಿದ್ದ ವ್ಯಕ್ತಿಗಳ ಬಗ್ಗೆ ವಿಚಾರಿಸಿದರು ಹಾಗೂ ಯೊಕೊ ಕೆಲಸದಿಂದ ಕಾಣೆಯಾಗಿದ್ದಾಳೆಂದು ಅವರಿಗೆ ಹೇಳಿದರು. ಫೋನ್ ಉಪಕರಣವು ತೊಟ್ಟಿಲಿನಿಂದ ಕಾಣೆಯಾಗಿರುವುದನ್ನು ಬೇಹುಗಾರರು ಗಮನಿಸಿದರು ಹಾಗೂ ಅದರ ಪೇಜ್ ಗುಂಡಿಯನ್ನು ಒತ್ತಿದರು. ಅವರು ಮಹಡಿಯ ಮೇಲಿರುವ ಒಂದು ಚಿಕ್ಕ ಕೊಠಡಿಯಿಂದ ಶಬ್ದ ಬರುತ್ತಿರುವ ಸುಳಿವು ಸಿಕ್ಕಿತು, ಅಲ್ಲಿ ಅವರಿಗೆ ಮಾಥ್ಯೂ ಮತ್ತು ಅವರ ಪತ್ನಿಯ ಶವಗಳು ದೊರಕಿತು ಅವರು ಒಂದು ಭಯಾನಕ ಮನುಷ್ಯನ ದವಡೆಯ ಶೋಧನೆಯನ್ನು ಸಹ ಮಾಡಿದರು, ಅದು ಯಾರಿಗೆ ಸೇರಿರಬಹುದು ಹಾಗೂ ದೇಹದ ಉಳಿದ ಭಾಗವು ಎಲ್ಲಿರ ಬಹುದೆಂದು ಆಶ್ಚರ್ಯ ಪಟ್ಟರು. ನಂತರ ಚಲನಚಿತ್ರದಲ್ಲಿ ಮುಂದುವರಿದು, ಅಲೆಕ್ಸ್, ಕರೆನ್ ಮತ್ತು ಯೊಕೊ ಕೆಲಸ ಮಾಡುವ ಯೋಗಕ್ಷೇಮದ ಅನುಕೂಲತೆಯ ಮೆಟ್ಟಿಲುಗಳಿಂದ ಯೊಕೊ ತೇಲಿಹೋಗುತ್ತಾ ಇಳಿಯುತ್ತಿರುವಂತೆ ಅಲೆಕ್ಸ್ ಪುನಃ ನೋಡಿ ಗುರುತು ಹಿಡಿದರು. ಅವರು ಆಕೆಯ ಕಡೆಗೆ ನಡೆಯುತ್ತಾ ಬರುತ್ತಿರುವಾಗ, ಅದನ್ನು ಅವರು ಸ್ಪರ್ಶಿಸಿ ನೋಡಿದಾಗ ರಕ್ತವೆಂದು ತಿಳಿಯಲ್ಪಟ್ಟ ಒಂದು ದ್ರವದ ಮೇಲೆ ಅಕಸ್ಮಾತ್ತಾಗಿ ಕಾಲು ಜಾರಿದರು. ಅಲೆಕ್ಸ್ ಅವರು ಯೊಕೊಗೆ ಅನೇಕ ಬಾರಿ ಕೂಗಿದರೂ, ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತೋರಿಸದೇ ಆಕೆಯು ಮೆಟ್ಟಿಲುಗಳ ಕೆಳಭಾಗವನ್ನು ತಲುಪಿದಳು ಆಕೆಯು ತನ್ನ ಮುಖವನ್ನು ತೋರಿಸಲು ನಂತರ ತಿರುಗಿದಾಗ, ಅಲೆಕ್ಸ್ ಅತ್ಯಂತ ಭೀತಿಯಿಂದ ಕಿರುಚುತ್ತಾ ಮರಣಹೊಂದುತ್ತಾರೆ, ಆಕೆಯ ಮುಖವು ಈಗ ತಳ ಭಾಗದ ದವಡೆಯು ಇಲ್ಲದೆ ಹಾಗೂ ನಾಲಗೆಯು ಹೊರಚಾಚಿ ಜೋತಾಡುತ್ತಿರುವಂತೆ ಅತ್ಯಂತ ಭಯಾನಕವಾಗಿ ವಿಕಾರಗೊಳಿಸಲ್ಪಟ್ಟಂತೆ ತೋರಿಸಲಾಗುತ್ತದೆ ಮತ್ತು ಪರದೆಯು ಕಪ್ಪು ಬಣ್ಣಕ್ಕೆ ಕ್ರಮೇಣ ಮಾಸುತ್ತದೆ.
ಕರೆನ್ ಒಬ್ಬ ಹುಡುಗನು ಕಾಣಿಸಿಕೊಂಡಿದ್ಷರ ಮೇಲೆ ಒತ್ತಿ ಒತ್ತಿ ಹೇಳುತ್ತಾ ತನ್ನ ಕಥೆಯನ್ನು ಪತ್ತೆದಾರರಿಗೆ ತಿಳಿಸುತ್ತಾಳೆ. ಮುಂದೆ ಕೆಲವು ದಿನಗಳವರೆಗೆ, ಆಕೆಯು ಕಯಕೊಳಿಂದ ಬಸ್ಸಿನಲ್ಲಿ, ತನ್ನ ಸ್ನಾನದ ಮನೆಯಲ್ಲಿ, ಇತ್ಯಾದಿಗಳಲ್ಲಿ ಸತತವಾಗಿ ಯಾತನೆಗೊಳಪಡುತ್ತಾಳೆ, ಗಾಬರಿಗೊಂಡರೂ ನಿರ್ಧಾರ ಮಾಡಿ, ಆಕೆಯು ಆ ಮನೆಯ ಇತಿಹಾಸವನ್ನು ಸಂಶೋಧಿಸಲಾರಂಭಿಸಿದಳು. ಅಂತೂ ಕೊನೆಗೆ, ಆಕೆಯು ಅಲ್ಲಿನ ಕೊಲೆಗಳ ಬಗ್ಗೆ ತಿಳಿದುಕೊಂಡಳು.
ಸುಸಾನ್ ರ ಕಛೇರಿಯ ಕಟ್ಟಡದಲ್ಲಿ ತೆಗೆದುಕೊಂಡ ಸಂಪೂರ್ಣ ಸುರಕ್ಷಾ ವಿಡಿಯೊಗಳನ್ನು ಅವರು ಅವಲೋಕಿಸಿದಾಗ ಆತುರದ ಸಾವುಗಳು ಹಾಗೂ ಕಾಣೆಯಾದ ವ್ಯಕ್ತಿಗಳು ಈ ಮನೆಗೆ ಸಂಬಂಧಿಸಿ ಜೋಡಿಸಲ್ಪಟ್ಟಿದ್ದಾರೆಂಬುದು ಪತ್ತೆದಾರ ನಕಗಾವ ರಿಗೆ ನಂಬಿಕೆಯುಂಟಾಯಿತು. ಅವರು ಕಯಕೊ ಹಜಾರದ ಕೆಳಗೆ ಮುಂದುವರಿಯುವುದನ್ನು ಗಮನಿಸಿದರು, ನಂತರ ಕ್ಯಾಮರಾಗೆ ಮುಖಾಮುಖಿಯಾಗಿ ಬಂದಾಗ ವಿಡಿಯೊವು ನಿಧಾನವಾಗಿ ಮರೆಯಾಗುತ್ತದೆ. ನಂತರ ಅವರು ಎರಡು ಕ್ಯಾನ್ ಗ್ಯಾಸೋಲಿನ್ ನ ಸಹಿತ ಸೈಕಿಯ ಮನೆಗೆ ಹಿಂತಿರುಗಿದರು. ಅವರು ಸ್ನಾನದ ತೊಟ್ಟಿಯಲ್ಲಿ ಮುಳುಗುತ್ತಿರುವ ತೊಷಿಯೊ ನ ಧ್ವನಿಯಿಂದ ವಿಚಲಿತರಾದರು. ಅವರು ಪ್ರವೇಶಿಸಿದಾಗ ಸ್ನಾನದ ತೊಟ್ಟಿಯ ಹೊರಗಿನಿಂದ ನೇತಾಡುತ್ತಿರುವ ಒಬ್ಬ ಹುಡುಗನನ್ನು ನೋಡಿದರು ಮತ್ತು ಅವನನ್ನು ಪುನರುಜ್ಜೀವಿತಗೊಳಿಸಲು ಪ್ರಯತ್ನಿಸಿದರು. ಅವನ ಕಣ್ಣುಗಳು ಹರಿತವಾಗಿ ತೆಗೆದಿರುತ್ತವೆ ಹಾಗೂ ತಕೆಯೊ (ತಕಷಿ ಮತ್ಸುಯಾಮಾ) ಅವನ ಹಿಂದಿನಿಂದ ಕಾಣಿಸಿಕೊಳ್ಳುತ್ತದೆ. ತಕೆಯೊ ಅವರನ್ನು ಸ್ನಾನದ ತೊಟ್ಟಿಗೆ ದಬ್ಬಿ ತೊಷಿಯೊ ತರಹ ಅವರನ್ನು ಮುಳುಗಿಸುವ ಮುಂಚೆ ನಕಗಾವ ರಿಗೆ ಕೇವಲ ಸುತ್ತಲೂ ತಿರುಗುವಷ್ಟು ಮಾತ್ರ ಸಮಯವಿತ್ತು.
ಕರೆನ್ ಪೀಟರ್ ನ ವಿಧವೆ, ಮರಿಯಾ ಕಿರ್ಕ್ ಳನ್ನು ಪ್ರಶ್ನಿಸಿದಾಗ, ಆಕೆಗೆ ಮನೆಯ ಬಗ್ಗೆ, ಅದರಲ್ಲಿ ವಾಸಿಸುವವರು ಅಥವಾ ತನ್ನ ಪತಿ ಏಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ಬಗ್ಗೆ ಆಕೆಗೆ ಏನೂ ತಿಳಿದಿರುವಂತೆ ಕಾಣಿಸುತ್ತಿರಲಿಲ್ಲ. ಆಕೆ ಕರೆನ್ ಳನ್ನು ಹಳೆಯ ಛಾಯಾಚಿತ್ರಗಳ ಮುಖಾಂತರ ಹುಡುಕಲು ಅನುವುಮಾಡಿಕೊಟ್ಟಳು. ಪ್ರತಿಯೊಂದು ಛಾಯಾಚಿತ್ರದ ಹಿಂಬದಿಯಲ್ಲಿ ಸ್ಪಷ್ಟವಾಗಿ ದಂಪತಿಗಳನ್ನು ಹಿಂಬಾಲಿಸುತ್ತಿರುವ ಜೀವಂತ ಕಯೊಕೊ ವನ್ನು ಕರೆನ್ ಪತ್ತೆ ಹಚ್ಚಿದಳು ಕರೆನ್ ನಂತರ ಆಕೆಯ ಸ್ನೇಹಿತ, ಡೌಗ್ (ಜಾಸನ್ ಬೆಹ್ರ್) ನ ಜೊತೆ ಅವರ ಬಹುಮಹಡಿ ಕಟ್ಟಡದ ಮನೆಯಲ್ಲಿ ಹೋಗಿ ಮಾತನಾಡಲು ಪ್ರಯತ್ನಿಸುತ್ತಾಳೆ. ಆದಾಗ್ಯೂ, ಅವನು ತನ್ನದೇ ಸ್ವಂತ ತನಿಖೆಯ ನಂತರ ಆಕೆಯನ್ನೇ ಹುಡುಕುತ್ತಾ ಹೋಗಿದ್ದಾನೆಂದು ಆಕೆಯು ಪತ್ತೆಹಚ್ಚಿದಳು. ನಂತರ ಕರೆನ್ ಡೌಗ್ ನನ್ನು ಹುಡುಕುತ್ತಾ ಮನೆಗೆ ಹಿಂದಿರುಗಿದಳು.
ಮನೆಯ ಒಳಗಡೆ, ಕರೆನ್ ಳು ಪೀಟರ್ ಕಿರ್ಕ್ ನ ಭೇಟಿಯ ಒಂದು ಹಿನ್ನೋಟವನ್ನು ಅನುಭವಿಸಿದಳು. ಕಯಕೊ ಹಿಂದೆ ಪ್ರಾಧ್ಯಾಪಕ ಪೀಟರ್ ಕಿರ್ಕ್ ರವರ ಒಬ್ಬ ವಿದ್ಯಾರ್ಥಿಯಾಗಿದ್ದಳು ಹಾಗೂ ಅವರಿಂದ ಆಕರ್ಶಿಸಲ್ಪಟ್ಟಿದ್ದಳು ಎಂದು ನಂತರ ಗೊತ್ತಾಯಿತು. ಕಯಕೊ ರವರ ಪತಿ, ತಕೆಯೊ, ಆಕೆಯ ಅಭಿಲಾಷೆಯನ್ನು ಕಂಡುಹಿಡಿದರು ಮತ್ತು ಕೋಪದ ಭರದಲ್ಲಿ ಆಕೆಯನ್ನು ಹಾಗೂ ಅವರ ಮಗ, ತೊಷಿಯೊ ನನ್ನು ಕೊಂದು ಹಾಕಿದರು. ಇದು ಆ ಮನೆಯಲ್ಲಿದ್ದ ಕಳಂಕ, 'ದಿ ಗ್ರಡ್ಜ್' (ಆನ್ರಿಯೊ). ಕರೆನ್ ರವರ ಹಿನ್ನೋಟ ಮನೆಯಲ್ಲಿ ಪೀಟರ್ ಅವರು ತಮ್ಮ ದೇಹಗಳನ್ನು ಕಂಡುಹಿಡಿಯುವುದನ್ನು ತೋರಿಸುತ್ತದೆ. ತಕೆಯೊ ರಿಂದ ಕಯಕೊ ರವರ ಮಿತಿಮೀರಿದ ಪಾಶವೀಕೃತ್ಯದ ವಧೆಯಿಂದ ಭೀತಿಗೊಂಡು, ಕರೆನ್ ಮೆಟ್ಟಿಲುಗಳಿಂದ ತತ್ತರಿಸುತ್ತಾ ಇಳಿಯುತ್ತಾಳೆ ಹಾಗೂ ಮನೆಯು ಪ್ರಸಕ್ತಕಾಲಕ್ಕೆ ಹಿಂದಿರುಗುತ್ತದೆ. ಆಕೆಯು ಹೊರಡುವ ಮುಂಚೆಯೇ ಡೌಗ್ ಆಕೆಯ ಪಾದದ ಕೀಲನ್ನು ಹಿಡಿಯುತ್ತಾನೆ. ಆಗ ಅವರು ನಿತ್ರಾಣರಾದರು, ಮತ್ತು ಆಕೆಯು ಅವರನ್ನು ಬಾಗಿಲಿಂದಾಚೆಗೆ ಎಳೆಯಲು ಪ್ರಯತ್ನಿಸಿದಳು. ಮೇಲ್ಮಹಡಿಯಲ್ಲಿ ಒಂದು ಬಾಗಿಲು ತೆರೆದುಕೊಂಡಿತು ಈಗ ಆನ್ರಿಯೊ ಆಗಿರುವ ಕಯಕೊ ಮೆಟ್ಟಿಲುಗಳ ಮೇಲಿನಿಂದ ಅವರುಗಳ ಕಡೆಗೆ ತೆವಳುತ್ತದೆ ಹಾಗೂ ಡೌಗ್ ಗೆ ಅವನ ಸಾವಿನ ಮುತ್ತನ್ನು ಕೊಡುತ್ತದೆ. ಕರೆನ್ ಬಾಗಿಲನ್ನು ತೆರೆಯುತ್ತಾಳೆ, ಆದರೆ ಕಯಕೊನ ಭೂತ ಅನಿರೀಕ್ಷಿತವಾಗಿ ಅಲ್ಲಿರುತ್ತದೆ. ಆಕೆಯು ಬಾಗಿಲನ್ನು ಧಡ್ ಎಂದು ಹಾಕಿದಳು ಮತ್ತು ಗ್ಯಾಸ್ ಕ್ಯಾನಿನಲ್ಲಿ ಒಂದನ್ನು ಕಾಲಿನಿಂದ ಒದ್ದಳು. ಆಕೆಯು ಡೌಗ್ ನ ಲೈಟರ್ ತೆಗೆದುಕೊಂಡಳು ಮತ್ತು ಅದನ್ನು ಗ್ಯಾಸ್ ಮೇಲೆ ಹಾಕಿದಳು, ಆಗ ಡೌಗ್ ತಕ್ಷಣವೇ ಕಯಕೊ ಆಗಿ ಪರಿವರ್ತಿತವಾದನು. ಆಗ ಪರದೆಯು ಬಿಳಿ ಬಣ್ಣಕ್ಕೆ ತಿರುಗಿತು. (ನಿರ್ದೇಶಕರ ಅಣತಿಯಂತೆ, ಕರೆನ್ ರನ್ನು ಅಂಬುಲೆನ್ಸ್ ವ್ಯಾನ್ ನ ಒಳಗಡೆ ಹಾಕುವಂತ ದೃಶ್ಯಗಳಿವೆ
ಆಸ್ಪತ್ರೆಯಲ್ಲಿ, ಮನೆಯು ಹತ್ತಿ ಉರಿಯುವುದರಿಂದ ಉಳಿಸಲ್ಪಟ್ಟಿತೆಂದು ಕರೆನ್ ಗೆ ಗೊತ್ತಾಯಿತು ಹಾಗೂ ಡೌಗ್ ನ ಮೃತ ದೇಹದ ಮೇಲೆ ಗೋಳಾಡುತ್ತಾಳೆ. ಅನಿರೀಕ್ಷಿತವಾಗಿ, ಅವನನ್ನು ಮುಚ್ಚಿದ್ದಂತಹ ಹೊದಿಕೆಯಡಿಯಿಂದ ಕಯಕೊನ ಕೂದಲು ಮತ್ತು ತೋಳುಗಳು ಹೊರಬರುತ್ತವೆ, ಆದರೆ ಕರೆನ್ ಳು ಅದು ಕೇವಲ ತನ್ನ ಕಲ್ಪನೆಯೆಂದು ತಿಳಿದುಕೊಳ್ಳುತ್ತಾಳೆ (ಕೈಗಳು ಮೊದಲಿನಂತೆಯೇ ಬದಲಾದಾಗ). ಕಯೊಕೊ ನಂತರ ಕರೆನ್ ಹಿಂದೆ ಕಾಣಿಸಿಕೊಳ್ಳುತ್ತಾನೆ. ಕಯಕೊ ಆಕೆಯ ಮರಣ-ಮೃದಂಗವನ್ನು ಬಾರಿಸಿದಾಗ, ಚಲನಚಿತ್ರವು ಆಕೆಯ ಕಣ್ಣಿನ ನೋಟದಿಂದ ಮುಕ್ತಾಯವಾಗುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಸಾಮಾಜಿಕ ಅಧ್ಯಯನದ ಗೌರವ ಸಂಪಾದಿಸಲು ಯೋಗಕ್ಷೇಮ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿರುವ ಒಬ್ಬ ವಿನಿಮಯ ವಿದ್ಯಾರ್ಥಿ ಕರೆನ್ ಡೇವಿಸ್ ಪಾತ್ರದಲ್ಲಿ ಸಾರಾ ಮೈಖೆಲ್ ಗೆಲ್ಲರ್,
- ಒಂದು ಉಪಹಾರ ಗೃಹದಲ್ಲಿ ಅರೆ-ಕಾಲಿಕ ಕೆಲಸ ಮಾಡುತ್ತಾ ಹಾಗೂ ಟೋಕಿಯೊ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಕರೆನ್ ಳ ಗೆಳೆಯ ಡೌಗ್ ನ ಪಾತ್ರದಲ್ಲಿ ಜಾಸನ್ ಬೆಹ್ರ್.
- ಒಬ್ಬ "ಅರ್ಥ ಶಾಸ್ತ್ರಜ್ಞನಾಗಿ" ತನ್ನ ಮೇಲಧಿಕಾರಿಗಳಿಂದ ಪದೋನ್ನತಿ ಪಡೆದುದರಿಂದ ಅವರು ಟೋಕಿಯೊ ಗೆ ವಲಸೆ ಹೋಗಬೇಕಾಗಿರುವ ಮಾಥ್ಯೂ ವಿಲಿಯಮ್ಸ್ ಪಾತ್ರದಲ್ಲಿ ವಿಲಿಯಮ್ ಮಾಪೊಥೆರ್.
- ಜಪಾನಿನಲ್ಲಿ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಮಾಥ್ಯೂನ ಏಕೈಕ ಪತ್ನಿ ಜೆನ್ನಿಫರ್ ವಿಲಿಯಮ್ಸ್ ಪಾತ್ರದಲ್ಲಿ ಕ್ಲಿಯಾ ಡುವಲ್.
- ಟೋಕಿಯೊದಲ್ಲೇ ವಾಸಿಸುತ್ತಾ ಕೆಲಸ ಮಾಡುತ್ತಿದ್ದು, ತನ್ನ ಅಣ್ಣ, ಅತ್ತಿಗೆ ಹಾಗೂ ತಾಯಿಗೆ ಹೊಸಮನೆ ಆರಿಸಿಕೊಟ್ಟು ಮತ್ತು ಹೋಗಿ ವಾಸಿಸಲು ಸಹಾಯ ಮಾಡುತ್ತಿರುವ ಮಾಥ್ಯೂ ಅವರ ಚಿಕ್ಕ ತಂಗಿ ಸುಸಾನ್ ವಿಲಿಯಮ್ಸ್ ಪಾತ್ರದಲ್ಲಿ ಕಡೀ ಸ್ಟ್ರಿಕ್ ಲ್ಯಾಂಡ್.
- ಸ್ವಲ್ಪ ಚಿತ್ತ ವೈಕಲ್ಯದ ಜೊತೆ ವಿಪರೀತ ಸುಸ್ತಿನಿಂದ ನರಳುತ್ತಿರುವ, ಮಾಥ್ಯೂ ಅವರ ತಾಯಿ, ಎಮ್ಮಾ ವಿಲಿಯಮ್ಸ್ ಆಗಿ ಗ್ರೇಸ್ ಜೆಬ್ರಿಸ್ಕಿ.
- ತನಗೆ ಪರಿಚಯವಿಲ್ಲದ ಒಬ್ಬ ಮಹಿಳೆ, ಕಯಕೊ ಳಿಂದ ಅನೇಕ ಪ್ರೇಮ ಪತ್ರಗಳನ್ನು ಪಡೆಯುತ್ತಿದ್ದು, ಟೋಕಿಯೊದಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವ, ಪೀಟರ್ ಕಿರ್ಕ್ ಪಾತ್ರದಲ್ಲಿ ಬಿಲ್ ಪುಲ್ಮಾನ್.
- ಪೀಟರ್ ಅವರ ಪತ್ನಿ, ಮರಿಯಾ ಕಿರ್ಕ್ ಆಗಿ ರೋಸ ಬ್ಲಾಸಿ.
- ಯೊಕೊ ಮತ್ತು ಕರೆನ್ ಅವರು ಕೆಲಸಮಾಡುತ್ತಿದ್ದ ಒಂದು ಕೇರ್ ಸೆಂಟರ್ ನ ನಿರ್ದೇಶಕ ಅಲೆಕ್ಸ್ ನ ಪಾತ್ರದಲ್ಲಿ ಟೆಡ್ ರೈಮಿ.
- ಸೈಕಿ ಕುಟುಂಬದ ಕೊಲೆ ಪ್ರಕರಣದ ತನಿಖಾ ಅವಧಿಯಲ್ಲಿ ನಿಗೂಢ ಪರಿಸ್ಥಿತಿಗಳಲ್ಲಿ ಮರಣ ಹೊಂದಿದ ಅಥವಾ ಮಾಯವಾದ ಸಹೋದ್ಯೋಗಿಗಳಂತೆ ಒಬ್ಬ ಪತ್ತೇದಾರನಾದ, ಪತ್ತೇದಾರ ನಕಗಾವ ಪಾತ್ರದಲ್ಲಿ ರೈಯೊ ಇಷಿಬಾಷಿ. ಆ ಮನೆ ಹಾಗೂ ಅದರ ವಿಚಿತ್ರ ಇತಿಹಾಸದ ಬಗ್ಗೆ ಅವರು ಚೆನ್ನಾಗಿ ಅರಿತುಕೊಂಡಿದ್ದರು.
- ಎಮ್ಮಾ ವಿಲಿಯಮ್ಸ್ ರ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಲ್ಪಟ್ಟು, ಇಂಗ್ಲೀಷ್ ಮಾತನಾಡಬಲ್ಲ ಒಬ್ಬ ಜಪಾನಿ ಕೇರ್ ಕೆಲಸಗಾರ್ತಿ, ಯುಕೊ ಪಾತ್ರದಲ್ಲಿ ಯೊಕೊ ಮಕಿ.
- ಪೀಟರ್ ಕಿರ್ಕ್ ರ ಬಗ್ಗೆ ವ್ಯಾಮೋಹ ಬೆಳೆಸಿಕೊಂಡ ಒಬ್ಬ ವಿವಾಹಿತ ಮಹಿಳೆ, ಕಯಕೊ ಸೈಕಿ ಆಗಿ ತಕತೊ ಫುಜಿ .
- ಕಯಕೊ ಹಾಗೂ ತಕಿಯೊ ಸೈಕಿ ಯವರ ಎಂಟು ವರುಷದ, ಮಗ ತೊಷಿಯೊ ಸೈಕಿ ಪಾತ್ರದಲ್ಲಿ ಯುಯಾ ಒಜೆಕಿ.
- ಬೇರೊಬ್ಬ ಪುರುಷನ ಬಗ್ಗೆ ಆಕೆಯ ಭಾವನೆಗಳ ಬಗ್ಗೆ ಅವರಿಗೆ ತಿಳಿದಾಗ ಕೋಪಗೊಂಡ, ಕಯಕೊಳ ಪತಿ, ತಕಿಯೊ ಸೈಕಿ ಪಾತ್ರದಲ್ಲಿ ತಕಾಷಿ ಮಾತ್ಸುಯಾಮ. ಅವರು ಚಲನಚಿತ್ರದ ಘಟನೆಗಳ ಮೊದಲು ಕಯಕೊಳನ್ನು ಕೊಲೆ ಮಾಡಿ, ಆ ಮನೆಗೆ ಶಾಪ ಬರುವಂತೆ ಮಾಡುತ್ತಾರೆ.
ಪ್ರಮಾಣೀಕರಣ
[ಬದಲಾಯಿಸಿ]ಮಲೇಷಿಯಾ 18SG, ಐಸ್ಲ್ಯಾಂಡ್ 16, ಅಮೇರಿಕಾ ಸಂಯುಕ್ತ ಸಂಸ್ಥಾನ PG-13, ಸ್ವೀಡನ್ 15, ದಕ್ಷಿಣ ಕೊರಿಯಾ 15, ನ್ಯೂಜಿಲ್ಯಾಂಡ್ R-16, ಜಪಾನ್ PG-12, ಅರ್ಜೆಂಟಿನಾ 16, ಆಸ್ಟ್ರೇಲಿಯಾ M, ಬ್ರೆಜಿಲ್ 14, ಕೆನಡ 13+ (ಕ್ಯೂಬೆಕ್), ಕೆನಡ 14A (ಆಲ್ಬೆರ್ಟಾ/ಬ್ರಿಟಿಷ್ ಕೊಲಂಬಿಯಾ), ಕೆನಡ 14 (ನೊವಾ ಸ್ಕೊಟಿಯಾ), ಕೆನಡ PG (ಓಂಟಾರಿಯೊ), ಜೆಕ್ ರಿಪಬ್ಲಿಕ್ 15, ಫಿನ್ ಲ್ಯಾಂಡ್ K-15, ಫ್ರಾನ್ಸ್: -12, ಜರ್ಮನಿ 16, ಐರ್ಲೆಂಡ್ 15-PG (ಮೂಲ ಪ್ರಮಾಣ), ಐರ್ಲೆಂಡ್ 15 (ವಿಡಿಯೊ ಪ್ರಮಾಣ), ಇಟಾಲಿ T, ನಾರ್ವೆ 15, ಫಿಲಿಫೈನ್ಸ್ R-13, ಪೋಲ್ಯಾಂಡ್ 18, ಪೋರ್ಚುಗಲ್ M/16, ಸಿಂಗಾಪೂರ್ PG, ಸ್ವಿಟ್ಜರ್ ಲ್ಯಾಂಡ್ 14 (ಕ್ಯಾಂಟೂನ್ ಆಫ್ ಜಿನೆವಾ), ಸ್ವಿಟ್ಜರ್ ಲ್ಯಾಂಡ್ 14 (ಕ್ಯಾಂಟೂನ್ ಆಫ್ ವಾಡ್), ಸ್ವಿಟ್ಜರ್ ಲ್ಯಾಂಡ್ 16 (ಕ್ಯಾಂಟೂನ್ ಆಫ್ ಜ್ಯೂರಿಚ್), ಯುಕೆ 15, ಅಮೇರಿಕಾ ಸಂಯುಕ್ತ ಸಂಸ್ಥಾನ ದಲ್ಲಿ ಪ್ರಮಾಣೀಕರಿಸಿಲ್ಲ, ನೆದರ್ ಲ್ಯಾಂಡ್ಸ್ 16
ಮೂಲದಿಂದ ವ್ಯತ್ಯಾಸಗಳು
[ಬದಲಾಯಿಸಿ]ಮೂಲ ಜೂ-ಆನ್ ನಲ್ಲಿ: ದಿ ಗ್ರಡ್ಜ್, ಆಕೆಯ ಕೊಲೆಯ ನಂತರ ಅವನನ್ನು ತೋರಿಸುವ ಪ್ರಾರಂಭದಲ್ಲಿ ನಂತರ ಜೋಡಿಸಲ್ಪಟ್ಟ ಚಿತ್ರಕ್ಕೆ ಹೊರತುಪಡಿಸಿ, ತಕಿಯೊ ನಿಂದ ಚಿತ್ರ ಪರದೆಯ ಮೇಲೆ ಬರುವುದಕ್ಕೂ ಮುಂಚೆ ಕಯಕೊ ಕೊಲ್ಲಲ್ಪಟ್ಟಳು, ಇದು ಜೂ-ಆನ್ ನಲ್ಲಿನ ಕಯಕೊಳ ಕೊಲೆಯನ್ನು ಒಂದು ನಿಗೂಢವನ್ನಾಗಿ ಮಾಡುತ್ತದೆ. ಆಕೆಯ ದೇಹ ಹಾಗೂ ಮುಖದ ಮೇಲೆರಡರಲ್ಲೂ ಇರಿತದ ಗುರುತುಗಳ ಕಾರಣದಿಂದ ಒಂದು ಬಹುಉಪಯೋಗಿ ಚಾಕುವಿನಿಂದ ಕಯಕೊಳು ಕೊಲೆ ಮಾಡಲ್ಪಟ್ಟಿದ್ದಾಳೆಂದು ನಂಬಲಾಗಿದೆ. DVD ಬಿಡುಗಡೆಯಲ್ಲಿ ತಡವಾಗಿ ಚಿತ್ರಿಸಲ್ಪಟ್ಟ ದೃಶ್ಯದಲ್ಲಿ ಒಂದು ಚಿಕ್ಕ ಚಾಕುವಿನಿಂದ ತಕಿಯೊ ಅವರು ಕಯಕೊಳನ್ನು ಸೀಳುತ್ತಿರುವಂತೆ ತೋರಿಸುತ್ತದೆ. ತಮ್ಮ ಮಲಗುವ ಕೋಣೆಯಲ್ಲಿ ಅತ್ಯಂತ ಪ್ರಾಯಶಃವಾಗಿ ಆಕೆಯ ದಿನಚರಿ ಪುಸ್ತಕವನ್ನು ತಕಿಯೊ ಓದುತ್ತಿರುವುದನ್ನು ಕಯಕೊ ನೋಡಿರಬಹುದೆಂಬ ಒಂದು ಸಾಧ್ಯತೆಯಿದೆ ಹಾಗೂ ಆಕೆಯನ್ನು ಕೆಳಗೆ ತಳ್ಳಿ ಅವರು ಆಕೆಯ ಮೇಲೆ ಆಕ್ರಮಣಮಾಡಿದರು. ಆಕೆ ಮೆಟ್ಟಿಲುಗಳ ಕೆಳಗೆ ತೆವಳುತ್ತಾ ಬಂದಳು ಮತ್ತು ತಕಿಯೊ ಅವರು ಆಕೆಯನ್ನು ಹಿಂಬಾಲಿಸಿದರು. ಕಯಕೊಳು ತಕಿಯೊ ರಿಂದ ಮೂಲೆಗೆ ದಬ್ಬಲ್ಪಟ್ಟಳು ಹಾಗೂ ಬಾಗಿಲಿನ ಪಕ್ಕದ ಗೋಡೆಗೆ ಎದುರಾಗಿ ಸಹಾಯಪಡೆದು ನಿಂತಳು. ಅಲ್ಲಿ ಏನಾಗುತ್ತಿದೆಯೆಂದು ಸರಿಯಾಗಿ ಅರ್ಥವಾಗದೆ, ತೊಷಿಯೊ ಮೆಟ್ಟಿಲುಗಳ ಮೇಲಿನಿಂದ ನಿಂತು ನೋಡುತ್ತಿದ್ದನು. ಆಕೆಯ ಕುತ್ತಿಗೆಯನ್ನು ಸೀಳಲು ಕಯಕೊಳ ಮುಖಕ್ಕೆ ತಕಿಯೊ ತನ್ನ ಕೈಯನ್ನು ಚಾಚುತ್ತಾರೆ. ತೊಷಿಯೊ ಹೋಗುತ್ತಾನೆ ಮತ್ತು ಬಚ್ಚಲು ಮನೆಯಲ್ಲಿ ಅವಿತುಕೊಳ್ಳುತ್ತಾನೆ. ತಕಿಯೊ ರವರು ಕಯಕೊಳನ್ನು ತಮ್ಮ ಮಲಗುವ ಕೋಣೆಯ ತನಕ ಕರೆತರುತ್ತಾರೆ ಹಾಗೂ ಒಂದು ಉಪಯೋಗಿ ಚಾಕುವಿನಿಂದ ಇರಿಯುತ್ತಾರೆ. ನಂತರ ಆಕೆಯನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮಹಡಿಯ ಮೇಲಿನ ಕೊಠಡಿಯಲ್ಲಿಡುತ್ತಾರೆ. ಅವರು ತೊಷಿಯೊ ನನ್ನು ಮುಳುಗಿಸುತ್ತಾರೆ ಮತ್ತು ಅವನ ಬೆಕ್ಕಿನ ಕತ್ತನ್ನು ಕೊಯ್ಯುತ್ತಾರೆ. ತಕಿಯೊ ರವರು ತೊಷಿಯೊ ಮತ್ತು ಅವನ ಬೆಕ್ಕನ್ನು ಮತ್ತೆ ಬಚ್ಚಲಿನ ಒಳಗಡೆ ತುರುಕುತ್ತಾರೆ. ಮಹಡಿ ಮೇಲಿನ ಕೊಠಡಿಯಲ್ಲಿ ಕಯಕೊಳ ದೇಹವು ಕಂಡು ಬಂದಿತು ಹಾಗೂ ಕಯಕೊಳ ಭೂತದ ಕಾರಣದಿಂದ ಹತ್ತಿರದಲ್ಲಿನ ರಸ್ತೆಯ ಮೇಲೆ ತಕಿಯೊ ಮರಣಿಸಿದರು (ಮೂಲ ಜೂ-ಆನ್ ಚಿತ್ರದಲ್ಲಿ ತೋರಿಸಲಾಗಿದೆ: ಒಂದು ಶಾಪ). ಆದಾಗ್ಯೂ, ತನ್ನ ಕತ್ತನ್ನು ಆಕೆಯು ಅಲ್ಲಾಡಿಸಿದಾಗ ಆಕೆಯು ಮಾಡುವ ಕರ್ಕಶ ಶಬ್ದಗಳ ಸಾಕ್ಷಿಯಂತೆ, ಆಕೆಯನ್ನು ಚಾಕುವಿನಿಂದ ಮುಗಿಸುವ ಮೊದಲು ಕಯಕೊಳ ಕುತ್ತಿಗೆಯು ಮುರಿಯಲ್ಪಟ್ಟಿದೆಯೆಂದು ಸಹ ಪ್ರಾಯಶಃ ಇರಬಹುದು.
ಪುನರ್ರಚನೆಯಲ್ಲಿ, ತಕಿಯೊ ರವರು ಆಕೆಯ ಕತ್ತನ್ನು ಕತ್ತರಿಸಿದಾಗ ಕಯಕೊಲಳು ಕೊಲ್ಲಲ್ಪಟ್ಟಳು ಚಲನಚಿತ್ರದ ಚಿತ್ರಕಥೆಯಲ್ಲಿ ಪರದೆಯ ಹಿಂದೆ ಸಾಮೂಹಿಕ ಕೊಲೆಯದೃಶ್ಯಾವಳಿಗಳನ್ನು ತೋರಿಸಲಾಗಿದೆ, ಆದರೆ ಇವೆಲ್ಲವನ್ನೂ ನಿರ್ದೇಶಕರ ಚಿತ್ರಕಥೆಯಲ್ಲಿ ಸಂಪೂರ್ಣವಾಗಿ ನೇರವಾಗಿ ತೋರಿಸಲಾಗಿದೆ. ನಿರ್ದೇಶಕರ ಚಿತ್ರಕಥೆಯಲ್ಲಿ, ತಕಿಯೊ ತನ್ನ ದಿನಚರಿಯನ್ನ ಓದುತ್ತಿದ್ದಾರೆ ಹಾಗೂ ಪೀಟರ್ ಕಿರ್ಕ್ ರ ಜೊತೆ ತನ್ನ ಪ್ರೇಮದ ಹುಚ್ಚಿನ ಬಗ್ಗೆ ಗೊತ್ತಾಗುತ್ತದೆಯೆಂದು ತಿಳಿದು, ತನ್ನ ಮಲಗುವ ಕೋಣೆಯ ಬಾಗಿಲಿನ ದಾರಿಯಲ್ಲಿ ಕಯಕೊ ನಿಂತಿದ್ದು ಚಲನಚಿತ್ರದ ಮುಕ್ತಾಯದ ಮೊದಲಿನ ಒಂದು ಹಿನ್ನೋಟವು ತೋರಿಸುತ್ತದೆ. ನಂತರ ಅವರು ಹಜಾರದ ದಾರಿಯಲ್ಲಿ ಆಕೆಯನ್ನು ಅಟ್ಟಿಸಿಕೊಂಡು ಹೋಗಿ, ಆಕೆಯ ಉಡುಪನ್ನು ಹರಿಯುತ್ತಾರೆ ಹಾಗೂ ಅವರು ಕಿರುಚುತ್ತಾ ಗೋಡೆಗೆ ಹೊಡೆಯುತ್ತಾ ಆಕೆಯ ಪಾದದ ಕೀಲುಗಳನ್ನು ತಿರುಚಿ ನೆಲಕ್ಕೆ ಆಕೆಯನ್ನು ಜೋರಾಗಿ ಬಡಿಯುತ್ತಾರೆ. ಕಯಕೊ ನಂತರ ತಪ್ಪಿಸಿಕೊಳ್ಳುವ ಒಂದು ಪ್ರಯತ್ನದಲ್ಲಿ ಮೆಟ್ಟಿಲುಗಳ ಮೇಲಿನಿಂದ ಕೆಳಗೆ ತೆವಳುತ್ತಾಳೆ, ಆದರೆ ತಕಿಯೊ ರಿಂದ ಗಟ್ಟಿಯಾಗಿ ಹಿಡಿಯಲ್ಪಟ್ಟು ಎರಡೂ ಕೈಗಳಿಂದ ಆಕೆಯ ಕತ್ತನ್ನು ಥಟ್ಟನೆ ಮುರಿಯುತ್ತಾರೆ. ಈ ಘಟನೆಗಳನ್ನೆಲ್ಲಾ ಕಣ್ಣಾರೆ ಕಂಡ ತೊಷಿಯೊನನ್ನು ತಕ್ಷಣ ತಕಿಯೊ ರವರು ಆತನ ಬೆಕ್ಕಿನ ಜೊತೆ ಮುಳುಗಿಸಿ ಕೊಲ್ಲುತ್ತಾರೆ (ಇದನ್ನು ಸೈಕಿ ಮರಣದಲ್ಲಿ ವಿವರಿಸಲ್ಪಟ್ಟದೆ)
ಜೂ-ಆನ್ ನಲ್ಲಿನ ಒಂದು ಆಶ್ಚರ್ಯಕರವಾದ ಪ್ರಸ್ತಾವನೆಯೆಂದರೆ, ಅದನ್ನು ಪದೇ ಪದೇ ತೋರಿಸಲ್ಪಟ್ಟಂತೆ ತೊಷಿಯೊ ನ ದೇಹವನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಅವನನ್ನು ಅವಳ ತಾಯಿ ಕಯಕೊಳು ತಿಂದು ಹಾಕಿರಬಹುದೆಂಬ ಭಾವನೆ ಮೂಡಿಸುತ್ತದೆ.
ಕಾಲಗಣನೆಯ ಶಾಸ್ತ್ರ
[ಬದಲಾಯಿಸಿ]ಈ ಚಲನಚಿತ್ರದಲ್ಲಿ, ತಕಿಯೊ ರಿಂದ ನವೆಂಬರ್ 1, 2001 ರಲ್ಲಿ ಆದ ಕಯಕೊಳ ಕೊಲೆಯೇ ಮೊದಲನೆಯ ಕೊಲೆ, ಅವಳ ಮಗ ತೊಷಿಯೊ ನ ಕೊಲೆಯ ಜೊತೆಗೆ. ವರುಷಗಳ ನಂತರ, 2004 ರ ಪ್ರಾರಂಭದಲ್ಲಿ, ವಿಲಿಯಮ್ಸ್ ಕುಟುಂಬದ ಕಥೆಯು ಸಂಭವಿಸುತ್ತದೆ ಹಾಗೂ ನಂತರ ಅಕ್ಟೋಬರ್ 2004 ರಲ್ಲಿ ಕರೆನ್ ಮತ್ತು ಯೊಕೊ ರ ಕಥೆಗಳು ನಡೆಯುತ್ತವೆ.
ಸ್ವಾಗತ ವೈಖರಿ
[ಬದಲಾಯಿಸಿ]ಈ ಚಲನಚಿತ್ರವು ಉತ್ತರ ಅಮೇರಿಕಾದಲ್ಲಿ 3,348 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು.[೬] ಮೊದಲನೆ ವಾರದ ಕೊನೆಯ (ಅಕ್ಟೋಬರ್ 22-24, 2004) ಟಿಕೆಟ್ ಮಾರಾಟದಲ್ಲಿ 39.1 ಮಿಲಿಯನ್ ಡಾಲರುಗಳನ್ನು ಗಳಿಸಿತು. ನಂತರ 21.8 ಮಿಲಿಯನ್ ಡಾಲರ್ ಗಳನ್ನು ಗಳಿಸಿ ತನ್ನ ಎರಡನೆಯ ವಾರದ ಕೊನೆಯಲ್ಲಿ ಶೇಕಡಾ 43 ರರಷ್ಟು ಗಳಿಕೆಯಲ್ಲಿ ಕ್ಷೀಣಿಸಿತು, ಹಾಗೂ ಹೌಸ್ ಆನ್ ಹೌಂಟೆಡ್ ಹಿಲ್ ನಂತರ ಹ್ಯಾಲೋವಿಯನ್ ಗಲ್ಲಾ ಪಟ್ಟಿಗೆಯ ತುಟ್ಟತುದಿ ತಲುಪಿದ ಮೊದಲ ಭಯಾನಕ ಚಲನಚಿತ್ರ ಎಂದಾಯಿತು.[೭] ಉತ್ತರ ಅಮೇರಿಕಾ ಒಂದರಲ್ಲೇ 110,359,362 ಯು ಎಸ್ ಡಾಲರುಗಳನ್ನು ಗಳಿಸಿತು ಹಾಗೂ ಗಲ್ಲಾ ಪೆಟ್ಟಿಗೆಯ ವಿಶ್ಲೇಷಕರು ಮತ್ತು ಸೋನಿ ಚಿತ್ರಗಳ ಕಾರ್ಯನಿರ್ವಾಹಕರ ನಿರೀಕ್ಷೆಗಳನ್ನು ಮಿತಿಮೀರಿ, ವಿಶ್ವದಾದ್ಯಂತ 187,281,115 ಡಾಲರುಗಳ ಮೊತ್ತವನ್ನು ಗಳಿಕೆ ಮಾಡಿತು. ಈ ಚಲನಚಿತ್ರದ ತಯಾರಿಕೆಯ ವೆಚ್ಚವು 10 ಮಿಲಿಯನ್ ಡಾಲರುಗಳಿಗಿಂತಲೂ ಕಡಿಮೆಯೆಂದೂ ಸಹ ಸೋನಿ ತಿಳಿಸಿತು, ಇದರಿಂದ ಆ ವರ್ಷದ ಅತ್ಯಂತ ಲಾಭದಾಯಕ ಚಲನಚಿತ್ರಗಳಲ್ಲೊಂದಾಗುವಂತೆ ಮಾಡಿತು.[೮].
ರೊಟನ್ ಟೊಮಾಟೊಸ್ ನ ಮೇಲೆ ಶೇಕಡಾ 39 ರ "ರೋಟನ್" ರೇಟಿಂಗ್ ದರವನ್ನು ಪಡೆಯುತ್ತಾ, ಈ ಚಲನಚಿತ್ರವು ಮಿಶ್ರ ಪುನರಾವಲೋಕನಗಳನ್ನು ಪಡೆಯಿತು (ಜೊತೆಗೆ ಹೊಸದಾಗಿ ಎಣಿಸಲ್ಪಟ್ಟ 151 ಚಲನಚಿತ್ರ ವಿಮರ್ಶೆಗಳಲ್ಲಿ 59) ಕ್ಲಾಸಿಕ್ FM ನ ಚಲನಚಿತ್ರ ವಿಮರ್ಶಕ ಸೈಮನ್ ಬೇಟ್ಸ್ ರು ತಾವು ಎಂದಿಗೂ ನೋಡಿದ ಚಲನಚಿತ್ರಗಳಲ್ಲೇ ಇದು ಅತ್ಯಂತ ಭಯಾನಕ ಚಿತ್ರವಾಗಿತ್ತೆಂದು ಪರಿಗಣಿಸಿದರು.
ಉತ್ತರ ಭಾಗಗಳು
[ಬದಲಾಯಿಸಿ]ಈ ಚಲನಚಿತ್ರವು ಬಿಡುಗಡೆಯಾಗಿ ಮೂರು ದಿನಗಳ ನಂತರ, ಮುಂದಿನ ಉತ್ತರ ಭಾಗವಾದ, ದಿ ಗ್ರಡ್ಜ್ 2 ಘೋಷಿಸಲ್ಪಟ್ಟಿತು[೯] ಹಾಗೂ 2006 ರಲ್ಲಿ ಬಿಡುಗಡೆಯಾಯಿತು. ಕರೆನ್ ಳ ತಂಗಿ ಔಬ್ರೆ ಯಾಗಿ ಆಂಬರ್ ತಂಬ್ಲೈನ್ ಮುಂದಿನ ಪ್ರಕರಣದ ಪಾತ್ರಧಾರಿ, ಈಕೆಯು ಜಪಾನಿನಿಂದ ಕರೆನ್ ಳನ್ನು ಮನೆಗೆ ಹಿಂತಿರುಗಿ ಕರೆತರಲು ತನ್ನ ತಾಯಿಯಿಂದ ಜಪಾನಿಗೆ ಕಳುಹಿಸಲ್ಪಡುತ್ತಾಳೆ.
2006 ರ ಕಾಮಿಕ್-ಕಾನ್ ಕಾಲದಲ್ಲಿ ಸೋನಿಯಿಂದ ದಿ ಗ್ರಡ್ಜ್ 3 ಘೋಷಿಸಲ್ಪಟ್ಟಿತು. ತಾವು ಪ್ರಾರಂಭದಲ್ಲಿ ಉತ್ತರ ಭಾಗವನ್ನು ನಿರ್ದೇಶಿಸಲು ಆಹ್ವಾನಿಸಲ್ಪಟ್ಟಿದ್ದೆನು ಆದರೆ ಚಲನಚಿತ್ರವನ್ನು ನಿರ್ಮಾಣ ಮಾಡಲು ಇಷ್ಟಪಟ್ಟೆನೆಂದು ತಕಾಷಿ ಷಿಮಿಜು ತಿಳಿಸಿದರು.[೧೦] 2006 ರಲ್ಲಿ ದಿ ಗ್ರಡ್ಜ್ 2 ನ ಬಿಡುಗಡೆಗೆ ಮುಂಚೆ ಜಾಹಿರಾತಿನ ವಸ್ತುವಾಗಿ ಟೇಲ್ಸ್ ಫ್ರಂಮ್ ದಿ ಗ್ರಡ್ಜ್ ಸಣ್ಣ ಚಲನಚಿತ್ರ ಗಳನ್ನು ನಿರ್ದೇಶಿಸಿದ ಟೊಬೆ ವಿಲ್ಕಿನ್ಸ್ ರಿಂದ ಈ ಚಲನಚಿತ್ರವು ಬದಲಿಗೆ ನಿರ್ದೇಶಿಸಲ್ಪಡುವುದೆಂದು ಆಕ್ಟೋಬರ್ 23, 2007 ರಲ್ಲಿ ನಿರ್ಧರಿಸಲಾಯಿತು.[೧೧] ತಕಾಷಿ ಷಿಮಿಜು ಮತ್ತು ಸ್ಯಾಮ್ ರೈಮಿ ರಿಂದ ಚಲನಚಿತ್ರವು ತಯಾರಿಸಲ್ಪಡುವುದು. ಚಿತ್ರಕಥೆಯ ಎರಡನೆಯ ಕರಡು ಪ್ರತಿ ಪೂರ್ಣವಾಗಿದೆ [೫][೧೨] ಹಾಗೂ ಮುಂದಿನ ಕಥಾವಸ್ತುವಿನ ಬೆಳವಣಿಗೆಯನ್ನು ಅನುಸರಿಸಿ ಜನವರಿ 2008 ರಲ್ಲಿ ಆದಷ್ಟು ಬೇಗನೆ ಚಲನಚಿತ್ರದ ನಿರ್ಮಾಣವು ಪ್ರಾರಂಭವಾಗುವುದು. ದಿ ಗ್ರಡ್ಜ್ ಸರಣಿಯ ಚಿತ್ರಗಳಲ್ಲಿ ಇದು ಅಂತಿಮ ಚಲನಚಿತ್ರವಾಗುವುದು.[೧೩]
ಅಕ್ಟೋಬರ್ 31, 2007 ರಲ್ಲಿ, ಬ್ರಾಡ್ ಕೀನ್ ರವರಿಂದ ಚಲನಚಿತ್ರದ ಚಿತ್ರಕಥೆಯು ಬರೆಯಲ್ಪಟ್ಟಿದೆಯೆಂದು ಘೋಶಿಸಲಾಯಿತು ಮತ್ತು ಚಿತ್ರದ ಸಾರಾಂಶವನ್ನೂ ಸಹ ಪ್ರಕಟಿಸಲಾಯಿತು. ಆ ಚಿತ್ರಕಥೆಯು ಹೀಗಿದೆ "ಒಬ್ಬ ಜಪಾನಿ ಯುವತಿ ದಿ ಗ್ರಡ್ಜ್ ನ ಶಾಪವನ್ನು ಕೊನೆಗೊಳಿಸಲು ಒಂದು ರಹಸ್ಯವನ್ನು ಬಚ್ಚಿಟ್ಟುಕೊಂಡಿರುತ್ತಾಳೆ. ಭೂತಗಳ ಜೊತೆ ಹೋರಾಡುತ್ತಾ ಬದುಕಲು ಪ್ರಯತ್ನಿಸುತ್ತಿರುವ ಒಂದು ಕುಟುಂಬವನ್ನು ಎದುರಿಸುವ ಆಕೆ ಅಲ್ಲಿ ಒಂದು ಹೌಂಟೆಡ್ ಶಿಕಾಗೊಅಪಾರ್ಟಮೆಂಟ್ ಬಿಲ್ಡಿಂಗ್ ಗೆ ಪ್ರಯಾಣ ಬೆಳೆಸುತ್ತಾಳೆ. ತಮ್ಮ ಮುಂಬರುವ ಅಪಾಯಕಾರಿ ದುರಂತದ ಅದೃಷ್ಟದಿಂದ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕಯೊಕೊ ದೆವ್ವವನ್ನು ಅವರು ಒಟ್ಟಾಗಿ ಎದುರಿಸಿ ಪ್ರತಿಭಟಿಸುತ್ತಾರೆ." [೧೪]
ಜನವರಿ 19, 2008 ರಂದು ಜಾಕೆ ಯಾಗಿ ತನ್ನ ಪಾತ್ರವನ್ನು ಮಾಥ್ಯೂ ನೈಟ್ ಅವರು ಪುನಃ ಗಳಿಸಿಕೊಂಡು ಅಭಿನಯಿಸುತ್ತಾರೆಂದು ಹಾಗೂ ಮಾರ್ಚ್ 2008 ರಂದು ಬಲ್ಗೇರಿಯಾದಲ್ಲಿ ಚಲನಚಿತ್ರವು ತಯಾರಿಕೆಯನ್ನು ಪ್ರಾರಂಭಿಸುವುದೆಂದು ಪ್ರಕಟಿಸಲಾಯಿತು. ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಿಲ್ಲವೆಂದು, ಆದರೆ ಬದಲಾಗಿ ನೇರವಾಗಿ DVD ಯಲ್ಲಿ ಬಿಡುಗಡೆ ಮಾಡಲಾಗುವುದೆಂದು ಎಂದೂ ಸಹ ಬಹಿರಂಗ ಪಡಿಸಲಾಯಿತು.[೧೫]
ಜುಲೈ 2010 ರ ಪ್ರಕಾರ ಸರಣಿ ಮುಂದುವರಿಸುವ ಬಗ್ಗೆ ಯಾವುದೇ ಸಮಾಚಾರವನ್ನೂ ತಿಳಿಸಲಾಗಿಲ್ಲ.
ತಾಯ್ನಾಡಿನ ಬಿಡುಗಡೆ
[ಬದಲಾಯಿಸಿ]ಫೆಬ್ರುವರಿ 1, 2005 ರಲ್ಲಿ DVD ಮತ್ತು UMD ಯಲ್ಲಿ ಚಲನಚಿತ್ರವು ಬಿಡುಗಡೆಮಾಡಲ್ಪಟ್ಟಿತು. ಕೇವಲ ಕೆಲವೇ ವಿಶೇಷ ಲಕ್ಷಣಗಳ ಸಹಿತ ಚಲನಚಿತ್ರವ ಒಂದು ನಿರ್ದಿಷ್ಟ ಗುಣಮಟ್ಟದ ಅವತರಣಿಕೆಯಾಗಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು.[೧೬] ಮೇ 17, 2005 ರಂದು, ಉತ್ತರ ಅಮೇರಿಕಾದಲ್ಲಿ DVD ಯ ಮೇಲೆ ದಿ ಗ್ರದ್ಜ್ ಅನ್ನುMPAA-ಪ್ರಮಾಣ ಪತ್ರವಿಲ್ಲದೆ ನಿರ್ದೇಶಕರ ಚಿತ್ರಕಥೆಯ ಚಿತ್ರವನ್ನು ಬಿಡುಗಡೆ ಮಾಡಲಾಯಿತು. MPAA ಯಿಂದ ಕಡಿಮೆ ವಯಸ್ಸಿನ ವೀಕ್ಷಕರೂ ನೋಡುವಂತಹ ಪ್ರಮಾಣ ಪತ್ರವನ್ನು ಪಡೆಯಲು ಹಾಗೂ ಕಥೆಯನ್ನು ತೋರಿಸಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುವಂತೆ ಅನೇಕ ದೃಶ್ಯಾವಳಿಗಳನ್ನು ಕತ್ತರಿಸಿ ತೆಗೆದು ಹಾಕಿ ಬಿಡುಗಡೆ ಮಾಡಲಾಯಿತು. ಇದೇ ಆವೃತ್ತಿಯ ಚಲನಚಿತ್ರವನ್ನು ಜಪಾನಿನಲ್ಲಿ ಚಿತ್ರಮಂದಿರದ ಬಿಡುಗಡೆಗಾಗಿ ಉಪಯೋಗಿಸಲಾಯಿತು. ಚಲನಚಿತ್ರದ ಬಿಡುಗಡೆಯು ಹೊಸ ತೆಗೆದುಹಾಕಿದ ದೃಶ್ಯಗಳು ಹಾಗೂ ವ್ಯಾಖ್ಯಾನಗಳು, ಕಥೆಗಳು ಮತ್ತು ಮುಂತಾದುವುಗಳನ್ನು ಸಹ ಒಂದು ಕೊನೆಯಲ್ಲಿ ಹೊಂದಿದೆ.[೧೭]
2008 ರಲ್ಲಿ ಅದು ಐ ಟ್ಯೂನ್ಸ್ ನಲ್ಲಿ ಖರೀದಿಸಲು ದೊರಕುವಂತೆ ಮಾಡಲ್ಪಟ್ಟಿತು.
2008 ರಲ್ಲಿ ಜರ್ಮನಿಯಲ್ಲಿ ಬ್ಲೂ-ರೇ ಡಿಸ್ಕ್ ನಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಾಯಿತು. ಮೇ 12, 2009 ರಂದು ಯು ಎಸ್ ನಲ್ಲಿ ದಿ ಗ್ರಡ್ಜ್ 3 DVD ಬಿಡುಗಡೆ ಮಾಡಲ್ಪಟ್ಟ ದಿನದಂದೇ, ಬ್ಲೂ-ರೇ ಡಿಸ್ಕ್ ಮೇಲೆ ಅದನ್ನು ಬಿಡುಗಡೆ ಮಾಡಲಾಯಿತು.
ನಿರ್ದೇಶಕರ ಚಿತ್ರಕಥೆ
[ಬದಲಾಯಿಸಿ]ಪ್ರಚಲಿತ ನಿರ್ದೇಶಕರು ಚಿತ್ರಕಥೆ/ಪ್ರಮಾಣ ಪತ್ರವಿಲ್ಲದ DVD ಗಳಾದ ಸೋನಿ/ಕೊಲಂಬಿಯಾ ಗಳಲ್ಲಿ ಬಿಡುಗಡೆ ಮಾಡಲ್ಪಟ್ಟ ಚಿತ್ರಗಳು ತಾವೇ ಸ್ವತಃ ಪ್ರಯೋಜನಕರವಾದ ಮುಂದುವರಿದ ಅವತರಣಿಕೆಗಳಾಗಿ ಸಾಧಿಸಿವೆ. ಒಂದು ಕಡಿಮೆ PG-13 ಪ್ರಮಾಣ ಪತ್ರವನ್ನು ಪಡೆಯಲು ಆ ಚಿತ್ರದ ದೃಶ್ಯಗಳನ್ನು ಅಲ್ಲಲ್ಲಿ ತೆಗೆದು ಬಿಡುಗಡೆ ಮಾಡಲ್ಪಟ್ಟ ಚಿತ್ರಗಳಲ್ಲಿ ದಿ ಗ್ರಡ್ಜ್ ಒಂದಾಗಿತ್ತು. ಮುಂದುವರಿದ ಆತಂಕದ ಕ್ಷಣಗಳು, ಹೆಚ್ಚು ಹಿಂಸೆ ಹಾಗೂ ಆಳವಾದ ಪಾತ್ರಗಳು ಈ ಘಟನಾ ವಿವರವನ್ನು ನಿರೂಪಿಸುತ್ತವೆ (ನಿರ್ದೇಶಕ ಷಿಮಿಜು ರವರಿಂದ ಅನುಮತಿ ಕೊಟ್ಟಂತೆ) ಹಾಗೂ ಚಲನಚಿತ್ರದ ಚಿತ್ರಕಥೆಯ ಅವತರಣಿಕೆಯನ್ನು ಅಪ್ರಚಲಿತವನ್ನಾಗಿ ಮಾಡುತ್ತದೆ.
ಚಲನಚಿತ್ರದ ಕಥೆಯಿಂದ ಗೈರುಹಾಜರಿಯಾದ ಆದರೆ ಪ್ರತ್ಯೇಕವಾಗಿ ವಿಶೇಷವಾಗಿ ನಿರ್ದೇಶಕರ ಚಿತ್ರಕಥೆಯ DVD ಯಲ್ಲಿ ದೊರಕುವ ಕೆಲವು ದೃಶ್ಯಾವಳಿಗಳು ಈ ಕೆಳಗಿನಂತಿವೆ:
- ಪೀಟರ್ ಕಿರ್ಕ್ ರ ಮುಖದ ಹತ್ತಿರದ ದೃಶ್ಯ. ಅವರ ತಲೆಯಡಿಯಿಂದ ರಕ್ತವು ಹರಡಿರುವ ಒಂದು ಸಣ್ಣ ಗುಂಡಿ.
- ಇತ್ತೀಚೆಗೆ ಅದನ್ನು ಗಟ್ಟಿಯಾಗಿ ಹಿಡಿದಿರುವ ಎಮ್ಮಾಳಿಂದ ಅಂಟಿಕೊಳ್ಳುವ ಟೇಪಿನ ಒಂದು ರಕ್ತ ಸವರಿದ ಪಟ್ಟಿಯನ್ನು ಯೊಕೊ ತೆಗೆದುಕೊಳ್ಳುತ್ತಾಳೆ.
- ಕಯಕೊ ಳಿಂದ ಕೊಲೆ ಮಾಡಲ್ಪಡುವ ದೃಶ್ಯಕ್ಕೆ ಮೊದಲು ಸೈಕಿಯ ಮನೆಯ ಅನೇಕ ಭಾಗಗಳನ್ನು ಯೊಕೊ ಚೊಕ್ಕಟ ಮಾಡುತ್ತಿರುವ ಒಂದು ಹೆಚ್ಚು ಉದ್ದದ ಪರ್ಯಾಯ ದೃಶ್ಯ.
- ಡೌಗ್ ಕರೆನ್ ಳನ್ನು ಮುತ್ತಿಡುತ್ತಾನೆ ಹಾಗೂ ಜಪಾನಿನಲ್ಲಿ ಪ್ರೀತಿಯ ಸಾರ್ವಜನಿಕ ಪ್ರದರ್ಶನಗಳು ನಿಶಿದ್ಧವೆಂದು ಅವನಿಗೆ ತಿಳಿಸುತ್ತಾಳೆ, ನಂತರ ಅವರು ಒಂದು ಬೆಂಚಿನ ಮೇಲೆ ಒಬ್ಬ ಜಪಾನಿ ದಂಪತಿಗಳು ಕುಳಿತು ಮತ್ತು ಪರಸ್ಪರ ಅಪ್ಪಿಕೊಂಡು ಮುತ್ತಿಡುವ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತರ ಬಳಿ ಬಹಳ ತಡವಾಗಿ ಆಕೆ ಬರುವ ಸ್ವಲ್ಪವೇ ಮೊದಲು ಕಾಣುತ್ತಾರೆ.
- ಕರೆನ್ ಆಕೆಯ ಕೈ ಬೆರಳಿನ ಬಳಿ ರಕ್ತದ ಬ್ಯಾಂಡ್ ಏಯ್ಡ್ ಬಗ್ಗೆ ಎಮ್ಮಾ ಳನ್ನು ಕೇಳುತ್ತಾಳೆ ಆದರೆ ಎಮ್ಮಾ ಪ್ರತಿಕ್ರಿಯೆ ನೀಡುವುದಿಲ್ಲ.
- ನಿರ್ದೇಶಕರ ಚಿತ್ರಕಥೆಯು ಸಂಪೂರ್ಣ ಒಂದು ಹೊಸ ದೃಶ್ಯವನ್ನೇ ಪರಿಚಯಿಸುತ್ತದೆ. ಸುಸಾನ್ ಮೆಟ್ಟಿಲುಗಳ ಮೇಲಿರುವ ಕೋಣೆಗೆ ಪ್ರವೇಶಿಸಿ ಅಲ್ಲಿ ಒಂದು ಮೇಜಿನ ಮೇಲೆ ಒಂದು ಕಪ್ಪು ಬೆಕ್ಕಿನ ಪೋರ್ಸಲೀನ್ ಪ್ರತಿಮೆಯನ್ನು ಕಾಣುತ್ತಾಳೆ. ಆಕೆಯು ಕೊಠಡಿಯನ್ನು ಬಿಟ್ಟು ಹೊರಡುವಷ್ಟರಲ್ಲಿ ಆಕೆಯು ಗೋಡೆಗಳ ಮೇಲೆ ಬರೆದ ಬೆಕ್ಕುಗಳ ಚಿತ್ರಗಳನ್ನು ನೋಡುತ್ತಾಳೆ. ಅವಳು ಕೊಠಡಿಯನ್ನು ಬಿಟ್ಟ ನಂತರ ಹಜಾರದ ದಾರಿಯ ಕೆಳಗೆ ನೋಡುತ್ತಿದ್ದ ಮತ್ತೊಂದು ದೃಶ್ಯವು ಅಲ್ಲಿದೆ.
- ಜೆನ್ನಿಫರ್ ಮಲಗಲಾಗುವುದಿಲ್ಲ ಮತ್ತು ಏಳುತ್ತಾಳೆ. ಅವಳು ಮಲಗುವ ಕೋಣೆಯ ಎದುರಿನ ಕಟಾಂಜನದ ಮೇಲೆ ಆಯಾಸಗೊಂಡವಳಂತೆ ಕಾಣುತ್ತಾ ಬಾಗುತ್ತಾಳೆ.
- ಅಲ್ಲಿನ ವಿಲಿಯಮ್ಸ್ ಕುಟುಂಬದ ಪರ್ಯಾಯದ ದೃಶ್ಯ: ಅವರ ಸಾವಿಗೆ ಕೊನೆಗೆ ಕಾರಣವಾದ ಸೈಕಿ ಶಾಪದ ಪ್ರಕಟಣೆಯನ್ನು ಅದರ ಘೋರತೆಯನ್ನು ಮಾಥ್ಯೂ, ಜನ್ನಿಫರ್ ಮರ್ಣಿಸುತ್ತಾರೆ. ಕಯಕೊಗೆ ತಕಿಯೊ ಮಾಡಿದ ಸ್ಥಳದಲ್ಲಿಯೇ ಅದೇ ಹಿನ್ನೋಟದ ದೃಶ್ಯದಂತಯೇ ಮಾಡುತ್ತಾನೆ, ಜೆನ್ನಿಫರ್ ಳ ಕೂದಲನ್ನು (ಈಗ ಕಯಕೊಳ ಭೂತ ಹಿಡಿದಿರುವ) ಮಾಥ್ಯೂ (ಈಗ ತಕಿಯೊ ಭೂತ ಹಿಡಿದಿರುವ) ಬಲವಾಗಿ ಹಿಡಿದು ಆಕೆಯನ್ನು ಮಹಡಿಯ ಮೇಲಿರುವ ಕೋಣೆಗೆ ಎಳೆಯುತ್ತಾನೆ. ಸುಸಾನ್ ಮನೆಗೆ ಪ್ರವೇಶಿಸುತ್ತಾಳೆ, ಒಂದಾದ ಮೇಲೆ ಒಂದರಂತೆ ದಂಪತಿಗಳಿಗೆ ಕೆಳಗೆ ಬಂದು ಮತ್ತು ರಾತ್ರಿ ಊಟ ಮಾಡುವಂತೆ ಕೂಗುತ್ತಾ ನಂತರ ಆಕೆಯು ಭಾವನಾತ್ಮಕವಾಗಿ ಗಾಬರಿಯಾಗಿರಲು ತಯಾರಾಗಿರುವಂತೆ ಒಂದು ಸಂಜ್ಞೆಯನ್ನುಕೂಗುತ್ತಾಳೆ. ನಿಶ್ಯಬ್ಧವಾಗಿ ಮೆಟ್ಟಿಲುಗಳ ಮೇಲೆ ಕುಳಿತ ದೆವ್ವ ಹಿಡಿದಿರುವ ಮಾಥ್ಯೂನಿಂದ ಬೆಚ್ಚಿ ಕೂಡಲೆ ಆಕೆಯು ಮಟ್ಟಿಲುಗಳನ್ನು ಹತ್ತುತ್ತಾಳೆ, ಒಂದು ವಿಕಾರವಾದ ನಿಶ್ಚಲ ಸ್ಥಿತಿಯಲ್ಲಿ ಮಾಥ್ಯೂ ಸುಸಾನ್ ಳನ್ನು ತಳ್ಳಿ ಮತ್ತು ಮನೆಯಿಂದ ಹೊರಗೆ ದಬ್ಬಲು ಪ್ರಯತ್ನಿಸುತ್ತಾನೆ, ಆಗ ಸುಸಾನ್ ಳು ಆಶ್ಚರ್ಯದಿಂದ ಏನಾಗುತ್ತಿದೆಯೆಂದು ನೋಡುತ್ತಾಳೆ. ಮಾಥ್ಯೂ ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತುತ್ತಾನೆ, ಕೋಣೆಯ ಒಳಗಡೆ ಹೋದಾಗ ಕೂಡಲೇ ಒಂದು ಕಪ್ಪು ದೇಹದ ವ್ಯಕ್ತಿ ಅವನ ಹಿಂದಯೇ ಬರುತ್ತದೆ, ಅದು ಕಪ್ಪು ಉಡುಪಿನಲ್ಲಿ ವೇಷಮರೆಸಿಕೊಂಡಿರುವ ಕಯಕೊಳ ಭೂತದಂತೆ ಕಾಣಿಸುತ್ತಿತ್ತು, ನಂತರ ಕೋಣೆಯ ಬಾಗಿಲು ತನಗೆ ತಾನೇ ಮುಚ್ಚಿಕೊಳ್ಳುತ್ತದೆ, ನಂತರದ ಪರದೆಯು ಕಪ್ಪಾಗಿ ಮಾಸಿತು.
- ಸುಸಾನ್ ಳು ಕಯಕೊಳಿಂದ ತಾನು ತಪ್ಪಿಸಿಕೊಂಡ ನಂತರ ತನ್ನ ಬಹುಮಹಡಿ ಕಟ್ಟಡದ ಮನೆಯಲ್ಲಿ, ಆಕೆಯು ನಲ್ಲಿಯು ತೊಟ್ಟಿಕ್ಕುವ ಧ್ವನಿಯನ್ನು ಕೇಳಿದಳು. ಆಕೆಯು ನಲ್ಲಿಯ ಹತ್ತಿರ ಬರುತ್ತಾಳೆ ಹಾಗೂ ಆಕೆಯ ಚಿಕ್ಕ ತೊಟ್ಟಿಯ ಹೊರಗಿನಿಂದ ಕಯಕೊಳ ಕೈಗಳು ಬರುತ್ತಿರುವುದನ್ನು ಕಾಣುತ್ತಾಳೆ. ಅದರಿಂದ ಗಾಬರಿಯಾಗಿ, ಅವಳು ತನ್ನ ಮಲಗುವ ಕೋಣೆಗೆ ಓಡುತ್ತಾಳೆ ಹಾಗೂ ಕೊನೆಗೆ ಕಯಕೊಳಿಂದ ತನ್ನ ಹೊದಿಕೆಯಡಿಯಲ್ಲಿ ಕೊಲ್ಲಲ್ಪಡುತ್ತಾಳೆ.
- ವಿಲಿಯಮ್ಸ್ ದಂಪತಿಗಳ ಮಮ್ಮಿಯಾಗಿರು ದೇಹಗಳ ಹತ್ತಿರದ ದೃಶ್ಯ. ಚಲನಚಿತ್ರದ ಚಿತ್ರಕಥೆಯಲ್ಲಿನ ಆವೃತ್ತಿಯಲ್ಲಿ ಈ ದೃಶ್ಯವನ್ನು ದೂರದಿಂದ ತೋರಿಸಲಾಗಿದೆ.
- ಪೀಟರ್ ಕಿರ್ಕ್ ನ ಪತ್ನಿಯ ಜೊತೆ ಕರೆನ್ ಳ ಸಂಭಾಷಣೆಯು ವಿಸ್ತರಿಸಲ್ಪಟ್ಟಿದೆ.
- ನಿರ್ದೇಶಕರ ಚಿತ್ರಕಥೆಯಲ್ಲಿ ಹತ್ತಿರದಿಂದ ತೆಗೆದ ಯುಕೊನ ದವಡೆಯ ದೃಶ್ಯವು ಹೆಚ್ಚು ದೀರ್ಘವಾಗಿದೆ. ಚಲನಚಿತ್ರದ ಚಿತ್ರಕಥೆಯಲ್ಲಿನ ಆವೃತ್ತಿಯಲ್ಲಿ ಅದು ಸಾಧಾರಣವಾಗಿ ಸರಿಯಾಗಿ ಕಾಣಿಸುವುದಿಲ್ಲ.
- ಯೊಕೊನ ವಿಕಾರ ಹೊಂದಿದ ದೆವ್ವ ಅಲೆಕ್ಸ್ ಬಳಿ ಬರುವ ದೃಶ್ಯವು ಹೆಚ್ಚು ದೀರ್ಘವಾಗಿದೆ. ಚಲನಚಿತ್ರದ ಚಿತ್ರಕಥೆಯಲ್ಲಿ ಕೆಲವೇ ಸೆಕೆಂಡುಗಳ ಕಾಲ ನಾವು ಆಕೆಯ ಮುಖವನ್ನು ಕಾಣುತ್ತೇವೆ, ಆದರೆ ನಿರ್ದೇಶಕರ ಚಿತ್ರಕಥೆಯಲ್ಲಿ ದೃಶ್ಯವು ಹತ್ತು ಸೆಕೆಂಡುಗಳಷ್ಟು ಕಾಲ ಉದ್ದವಾಗಿದೆ, ಅಲ್ಲಿ ಆಕೆಯು ಹಿಂದಕ್ಕೆ ಬಾಗುತ್ತಾಳೆ ಹಾಗೂ ಒಂದು ಎತ್ತರದ ಧ್ವನಿಯಲ್ಲಿ ಅರಚುವ ಶಬ್ಧ ಮಾಡುತ್ತಾಳೆ.
- ನಿರ್ದೇಶಕರ ಚಿತ್ರಕಥೆಯಲ್ಲಿ ಅಮೇರಿಕಾದ ಉಪಾಹಾರ ಗೃಹದ ಹೆಚ್ಚಿನ ಕೆಲಸಗಾರರನ್ನು ಡೌಗ್ ಅಭಿನಂದಿಸುತ್ತಾನೆ.
- ಕೊನೆಯಲ್ಲಿ ಹೆಚ್ಚು ರಕ್ತಸಿಕ್ತ ಕಯಕೊ ಮೆಟ್ಟಿಲುಗಳ ಮೇಲಿನಿಂದ ಕೆಳಗೆ ತೆವಳುತ್ತಿರುವುದನ್ನು ನಾವು ನೋಡುತ್ತೇವೆ.
- ಚಲನಚಿತ್ರದ ಚಿತ್ರಕಥೆಗಿಂತ ಕಯಕೊ ಮತ್ತು ತೊಷಿಯೊ ರ ಸಾವಿನ ದೃಶ್ಯಾವಳಿಗಳು ಹೆಚ್ಚು ದೀರ್ಘ ಹಾಗೂ ಹಿಂಸಾತ್ಮಕವಾಗಿವೆ.
ಮೂಲಭೂತ ಆಕರಗಳು
[ಬದಲಾಯಿಸಿ]- ↑ IMDB (October 20, 2006). "The Grudge production budget". IMDB. Retrieved 2006-10-20.
- ↑ IMDB (October 5, 2006). "The Grudge release date". IMDB. Retrieved 2006-10-20.
- ↑ IMDB (October 20, 2006). "Grudge 2 directed by original Ju-on director". IMDB. Retrieved 2006-10-20.
- ↑ House of Horrors (October 5, 2006). "Grudge 2 release date". House of Horrors. Archived from the original on 2015-11-05. Retrieved 2006-10-20.
- ↑ ೫.೦ ೫.೧ Shock Till You Drop (October 16, 2007). "Screenplay sent in to Ghost House Pictures". Shock Till You Drop. Retrieved 2007-10-16.
- ↑ Box Office Mojo (October 20, 2006). "Grudge opens on 3,348 theatres". Box Office Mojo. Retrieved 2006-10-20.
- ↑ Box Office Mojo (October 20, 2006). "Grudge tops box office". Box Office Mojo. Retrieved 2006-10-20.
- ↑ Box Office Mojo (October 20, 2006). "The Grudge was expected to generate 20 Million". Box Office Mojo. Retrieved 2006-10-20.
- ↑ IMDB (September 10, 2006). "Grudge 2 announced 3 days after the release of The Grudge". IMDB. Retrieved 2006-10-20.
- ↑ Bloody Disgusting (October 20, 2006). "Grudge 3 announced at Comic Con". Bloody Disgusting. Retrieved 2006-10-20.
- ↑ Bloody Disgusting (October 22, 2007). "Toby Wilkins attached to direct The Grudge 3". Bloody Disgusting. Retrieved 2007-10-22.
- ↑ Bloody Disgusting (October 16, 2007). "Sam Raimi sends in a second draft for screenplay". Bloody Disgusting. Retrieved 2007-10-16.
- ↑ Shock Till You Drop (October 22, 2007). "Production to begin January 2008". Shock Till You Drop. Retrieved 2007-10-22.
- ↑ Bloody Disgusting (October 31, 2007). "Story for The Grudge 3 revealed". Bloody Disgusting. Archived from the original on 2007-02-22. Retrieved 2007-10-31.
- ↑ Bloody Disgusting (January 19, 2008). "First Official 'Grudge 3' Casting News!". Bloody Disgusting. Archived from the original on 2009-02-11. Retrieved 2008-01-19.
- ↑ Amazon (October 20, 2006). "Standard Version release". Amazon. Retrieved 2006-10-20.
- ↑ Amazon (October 20, 2006). "Uncut Version release". Amazon. Retrieved 2006-10-20.
ನಿರ್ದಿಷ್ಟವಾದ ಆಕರಗಳು:
[ಬದಲಾಯಿಸಿ]- Gray, Brandon (25 October 2004). "'Grudge' Grabs No. 1". Box Office Mojo.. 2005ರ ಜೂನ್ 9 ರಂದು ಮರುಸಂಪಾದಿಸಲಾಯಿತು.
- Gray, Brandon (1 November 2004). "'Ray,' 'Saw' See Robust Bows". Box Office Mojo.. 2005ರ ಜೂನ್ 9 ರಂದು ಮರುಸಂಪಾದಿಸಲಾಯಿತು.
- "The Grudge". Box Office Mojo. Retrieved June 13, 2005.
- "The Japanese Version of 'The Grudge' Exposed!!!". Bloody-Disgusting. March 5, 2005.. 2005ರ ಜೂನ್ 7 ರಂದು ಮರುಸಂಪಾದಿಸಲಾಯಿತು.
- "The Dance". October 13, 2006. Retrieved June 13, 2006.
- "How to do the grudge moves!!!". Youtube. October 5, 2006.. 2006ರ ಅಕ್ಟೋಬರ್ 7 ರಂದು ಪುನಸಂಪಾದಿಸಲಾಗಿದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using duplicate arguments in template calls
- Pages using the JsonConfig extension
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Film articles using infobox succession
- ಅಮೇರಿಕಾದ ಚಲನಚಿತ್ರಗಳು
- ಇಂಗ್ಲೀಷ್-ಭಾಷೆಯ ಚಲನಚಿತ್ರಗಳು
- 2004 ರ ಚಲನಚಿತ್ರಗಳು
- ಅಮೇರಿಕಾದ ಭಯಾನಕ ಚಲನಚಿತ್ರಗಳು
- ಜಪಾನ್ ನಲ್ಲಿ ಚಿತ್ರೀಕರಿಸಿದ ವಿದೇಶಿ ಚಲನಚಿತ್ರಗಳು
- ಜಪಾನಲ್ಲಿ ತಯಾರಾದ ಚಲನಚಿತ್ರಗಳು
- ಹಿಂದಿನ ನೆನಪಿನ ವೃತ್ತಾಂತದ ಚಲನಚಿತ್ರಗಳು
- ಪುನಃ ನಿರ್ಮಾಣಗೊಂಡ ಚಲನಚಿತ್ರಗಳು
- ಭೂತ ಬಂಗಲೆಯ ಚಲನಚಿತ್ರಗಳು
- 2000 ದರ ಭಯಾನಕ ಚಲನಚಿತ್ರಗಳು
- ದಿ ಗ್ರಡ್ಜ್
- ಕಲ್ಪನೆಯ ಶಾಪಗಳು
- ಭೂತದ ಚಲನಚಿತ್ರಗಳು
- ಅತಿಮಾನವ ಶಕ್ತಿಯ ಭಯಾನಕ ಚಲನಚಿತ್ರಗಳು
- ಅಮಾನುಶ ಚಲನಚಿತ್ರಗಳು
- ಕೊಲಂಬಿಯಾ ಪಿಕ್ಚರ್ಸ್ ರವರ ಚಲನಚಿತ್ರ