ಪಂತೇರಾ
- ಇದನ್ನು Panthera, the Big Cat genus ಎಂದು ತಪ್ಪು ತಿಳಿಯಬಾರದು .
Pantera | |
---|---|
ಚಿತ್ರ:Panterapromo.jpg | |
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Ennis, Texas, United States |
ಸಂಗೀತ ಶೈಲಿ | Heavy metal, thrash metal,[೧][೨] groove metal, glam metal (early) |
ಸಕ್ರಿಯ ವರ್ಷಗಳು | 1981–2003 |
Labels | Metal Magic, Atco, EastWest, Elektra |
Associated acts | Damageplan, Down, Superjoint Ritual, Hellyeah |
ಅಧೀಕೃತ ಜಾಲತಾಣ | www.officialpantera.com |
ಮಾಜಿ ಸದಸ್ಯರು | Vinnie Paul Dimebag Darrell Rex Brown Phil Anselmo Terry Glaze |
ಅಮೆರಿಕದ ಹೆವಿ ಮೆಟಲ್ ವಾದ್ಯ ಸಮೂಹ (ಬ್ಯಾಂಡ್) ಪಂತೇರಾ ವನ್ನು 1981ರಲ್ಲಿ ಅರ್ಲಿಂಗ್‌ಟನ್, ಟೆಕ್ಸಾಸ್ ಮೂಲದ ಅಬ್ಬೋಟ್ ಸಹೋದರರೆಂದೇ ಹೆಸರುವಾಸಿಯಾದ ವಿನ್ನಿ ಪೌಲ್(ಡ್ರಮ್ ವಾದಕ) ಹಾಗೂ ಡಿಮೆಬಾಗ್ ಡಾರ್ರೆಲ್(ಗಿಟಾರ್ ವಾದಕ) ಪ್ರಾರಂಭಿಸಿದರು.[೩] 1981ರ ಅಂತಿಮ ಭಾಗದಲ್ಲಿ ಗಾಯಕ ಟೆರ್ರಿ ಗ್ಲೇಜ್ ಜೊತೆಯಲ್ಲಿ ಬಾಸ್ಸಿಸ್ಟ್ ರೆಕ್ಸ್ ಬ್ರೌನ್ ಪಂತೇರಾ ತಂಡಕ್ಕೆ ಸೇರ್ಪಡೆಗೊಂಡರು. 1987ರಲ್ಲಿ ಫಿಲ್ ಅನ್ಸೆಲ್ಮೊ ಪಂತೇರಾ ತಂಡದ ಮುಖ್ಯ ಗಾಯಕರಾಗಿ ಹೊರ ಹೊಮ್ಮಿದ್ದರು. ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ 2003 ರಲ್ಲಿ ಈ ಸಂಗೀತ ತಂಡದಲ್ಲಿ ಬಿರುಕು ಮೂಡಿತು.[೪] 2004ರಲ್ಲಿ ಒಹಾಯೋದ ಕೊಲೊಂಬಸ್‌ನ ಅಲ್ರೋಸಾ ವಿಲ್ಲಾದಲ್ಲಿ ತಮ್ಮ ಹೊಸ ತಂಡ ಡಮಾಗಪ್ಲಾನ್ ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದ ಡಿಮೆಬಾಗ್ ಅವರನ್ನು ನಾಥನ್ ಗೇಲ್ ಎಂಬ ದುಷ್ಕರ್ಮಿ ಹತ್ಯೆಗೈಯುವುದರ ಮೂಲಕ ಭವಿಷ್ಯದಲ್ಲಾದರೂ ಈ ತಂಡ ಒಗ್ಗೂಡಬಹುದು ಎಂಬ ಚಿಕ್ಕ ಆಸೆಯೂ ನಂದಿ ಹೋಯಿತು.
ಇತಿಹಾಸ
[ಬದಲಾಯಿಸಿ]ಸ್ಥಾಪನೆ ಹಾಗೂ ಮೊದಲ ಗ್ಲ್ಯಾಮ್ ವರ್ಷಗಳು (1981–1987)
[ಬದಲಾಯಿಸಿ]ಪ್ರಾರಂಭದಲ್ಲಿ ಈ ತಂಡದ ಸದಸ್ಯರಾಗಿದ್ದವರು ಎಂದರೆ, ಗಾಯಕ ಡೊನ್ನಿ ಹಾರ್ಟ್, ಗಿಟಾರ್ ವಾದಕ ಪ್ಯಾಟ್ ಹಾಗೂ ಡಿಮೆಬಾಗ್ ಡಾರೆಲ್ (ಅವರನ್ನು ಡೈಮಂಡ್ ಡಾರೆಲ್ ಎಂದೂ ಕರೆಯಲಾಗುತ್ತಿತ್ತು), ಬಾಸ್‌ನಲ್ಲಿ ಟಾಮಿ ಬ್ರಾಡ್‌ಫೋರ್ಡ್ ಹಾಗೂ ಡ್ರಮ್‌ವಾದಕ ವಿನ್ನಿ ಪೌಲ್. 1982ರಲ್ಲಿ ಡೊನ್ನಿ ಹಾರ್ಟ್ ತಂಡವನ್ನು ತ್ಯಜಿಸುವ ಮೂಲಕ ಗ್ಲೇಜ್ ತಂಡದ ಮುಖ್ಯ ಗಾಯಕರಾದರೆ, ಡಾರೆಲ್ ಗಿಟಾರ್ ವಾದಕರಾಗಿಯೇ ಮುಂದುವರಿದರು. ಅದೇ ವರ್ಷದ ಅಂತಿಮ ಭಾಗದಲ್ಲಿ ಬ್ರಾಡ್‌ಫೋರ್ಡ್ ಕೂಡ ತಂಡದಿಂದ ಹೊರಬಿದ್ದರು. ತೆರವಾದ ಅವರ ಸ್ಥಾನಕ್ಕೆ ಬಂದದ್ದು ಈಗ ರೆಕ್ಸ್ ರಾಕರ್ ಎಂದೇ ಕರೆಯಲ್ಪಡುವ ರೆಕ್ಸ್ ಬ್ರೌನ್. ಪಂತೇರಾ ತಂಡ ತನ್ನ ಪ್ರಾಂತೀಯ ಪ್ರವಾಸಗಳಲ್ಲಿ ಎಂದಿಗೂ ಟೆಕ್ಸಾಸ್, ಒಕ್ಲಹೊಮಾ ಹಾಗೂ ಲ್ಯುಸಿಯಾನಾ ಪ್ರಾಂತಗಳನ್ನು ದಾಟಿ ಒಂದೆಜ್ಜೆ ಇಡದಿದ್ದರೂ ನಿರೀಕ್ಷೆ ಮೀರಿ ಜನಪ್ರಿಯತೆಗಳಿಸಿತು. ತಂಡ ನಿಧಾನವಾಗಿ ಸ್ಟ್ರೈಪರ್, ಡೊಕ್ಕನ್ ಹಾಗೂ ಕ್ವಯಟ್ ರಯಟ್ ರೀತಿಯ ಹೆವೀ ಮೆಟಲ್ ಸಂಗೀತ ತಂತ್ರಗಳಿಗೆ ತನ್ನ ಒಲವು ತೋರತೊಡಗಿತು. ನಂತರ ಇದೇ ಪಂತೇರಾದ ಚೊಚ್ಚಲ ’ಮೆಟಲ್ ಮ್ಯಾಜಿಕ್ ’ ಗೆ ನಾಂದಿ ಹಾಡಿತು. 1983 ರಲ್ಲಿ ಬ್ಯಾಂಡ್‌ನ ರೆಕಾರ್ಡ್ ಲೇಬಲ್‌ನಲ್ಲಿ ಬಿಡುಗಡೆಯಾದ ಮೆಟಲ್ ಮ್ಯಾಜಿಕ್ ಅನ್ನು ಅಬ್ಬೊಟ್ ಸಹೋದರರ ತಂದೆ ಜೆರ್ರಿ ಅಬ್ಬೊಟ್ (ಅವರನ್ನು ಎಲ್ಡೆನ್ ಎಂದೂ ಕರೆಯುತ್ತಾರೆ) ಪಂಟೆಗೊ ಸ್ಟುಡಿಯೋದಲ್ಲಿ ನಿರ್ಮಿಸಿದ್ದರು.[೩]
ನಂತರದ ವರ್ಷದಲ್ಲಿ ಪಂತೇರಾ ತನ್ನ ಎರಡನೇ ಆಲ್ಬಂ ಪ್ರೋಜೆಕ್ಟ್ಸ್ ಇನ್ ದ ಜಂಗಲ್ ಅನ್ನು ಲೋಕಾರ್ಪಣೆ ಮಾಡಿತು. ಅದು ಅತಿ ಹೆಚ್ಚು ಗ್ಲ್ಯಾಮ್ ಮೆಟಲ್ ಆಲ್ಬಂ ಆಗಿದ್ದರೂ ಮೆಟಲ್ ಮ್ಯಾಜಿಕ್ ಆಲ್ಬಂಗೆ ಹೋಲಿಸಿದರೆ ಕಡಿಮೆ ತೀವ್ರತೆ ಮೆಲೋಡಿಕ್ ಪ್ರಭಾವ ಹೊಂದಿತ್ತು. ಅದರ ಜೊತೆ ಆದ ಇನ್ನೊಂದು ಬದಲಾವಣೆ ಎಂದರೆ ಟೆರ್ರಿ ಗ್ಲೇಜ್ ಅವರ ಹೆಸರು. ಈವರೆಗೆ ಅವರು “ಟೆರ್ರೆನ್ಸ್ ಲೀ” ಎಂದು ಕರೆಯಲ್ಪಡುತ್ತಿದ್ದರು. ಇದಕ್ಕೆ ಹೆಚ್ಚುವರಿಯಾಗಿ, ಆಲ್ಬಂನ ಪ್ರಧಾನ ಸೌಂಡ್ ಟ್ರ್ಯಾಕ್ “ಆಲ್ ಓವರ್ ಟುನೈಟ್” ಅನ್ನು ಅಂತಿಮ ಹಂತದಲ್ಲಿ ರಚಿಸಲಾಯಿತು. ’ಪ್ರೋಜೆಕ್ಟ್ ಇನ್ ದ ಜಂಗಲ್’ ಕೂಡ ಸ್ವತಂತ್ರ ಮೆಟಲ್ ಮ್ಯಾಜಿಕ್ ರೆಕಾರ್ಡ್ಸ್ ಲೇಬಲ್‌ನಲ್ಲಿ ಬಿಡುಗಡೆಯಾಯಿತು. ಹಾಗೂ ಅದನ್ನೂ ಜೆರ್ರಿ ಅಬ್ಬೊಟ್ ನಿರ್ಮಿಸಿದ್ದರು.
1985ರಲ್ಲಿ ಪಂತೇರಾ ಮೆಟಲ್ ಮ್ಯಾಜಿಕ್ ರೆಕಾರ್ಡ್‌ಗಳೊಂದಿಗೆ ಐ ಆಮ್ ದ ನೈಟ್ ಎಂಬ ಮತ್ತೊಂದು ಆಲ್ಬಂ ಅನ್ನು ಬಿಡುಗಡೆ ಮಾಡಿತು. ಪ್ರೊಜೆಕ್ಟ್ಸ್ ಇನ್ ದ ಜಂಗಲ್ ನಲ್ಲಿರುವಂತೆ ಈ ಆಲ್ಬಂನಲ್ಲೂ ಪಂತೇರಾದ ಸಂಗೀತ ಸಾಕಷ್ಟು ಬಿರುಸಾಗಿತ್ತು (ಅದರ ಮೂಲವಿನ್ನೂ ಗ್ಲ್ಯಾಮ್ ಮೆಟಲ್‌ನಲ್ಲಿಯೇ ಇತ್ತು), ಮತ್ತು ಹೆವೀ ಮೆಟಲ್ ಬ್ಯಾಂಡ್‌ಗೆ ಪಂತೇರಾ ನೀಡಿದ್ದ ಒತ್ತು ಈ ಸಮಯದಲ್ಲಿ ಸಂಗೀತ ಲೋಕದ ಗಮನ ಸೆಳೆದಿತ್ತು. ಅಸಮರ್ಪಕ ವಿತರಣೆಯಿಂದಾಗಿ ಐ ಆಮ್ ದ ನೈಟ್ ಆಲ್ಬಂನ ಬೆಲೆ ಬಹುತೇಕ ಅಭಿಮಾನಿಗಳ ಕೈಗೆಟಕುವಂತಿರಲಿಲ್ಲ. ಆಲ್ಬಂ ಕೇವಲ 25 ಸಾವಿರದಷ್ಟು ಮಾತ್ರ ಮಾರಾಟವಾಯಿತು. ಪಂತೇರಾ ತಂಡದ ಎರಡನೇ ವೀಡಿಯೋ ಅನ್ನು “ಹಾಟ್ ಅಂಡ್ ಹೇವಿ” ಟ್ರ್ಯಾಕ್‌ಗೆ ನಿರ್ಮಿಸಲಾಯಿತು.
ಹೊರ ಹೊಮ್ಮಿದ ಹೊಸ ಗಾಯಕ (1987–1989)
[ಬದಲಾಯಿಸಿ]1986ರಲ್ಲಿ ಹಲವಾರು ತ್ರ್ಯಾಶ್ ಮೆಟಲ್ ಆಲ್ಬಂ ಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾದವು. ಇವುಗಳು ನವೀನ ಪ್ರಕಾರದ ಸಂಗೀತವೊಂದಕ್ಕೆ ಕಾವು ನೀಡುತ್ತಿದ್ದ ಪಂತೇರಾ ತಂಡದ ಪಾಲಿಗಂತೂ ಪ್ರೇರಣಾದಾಯಕವಾಗಿದ್ದವು ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇವುಗಳಲ್ಲಿ ಬಹುಮುಖ್ಯವಾದವುಗಳೆಂದರೆ, ಮೆಟಾಲಿಕಾ ಅವರ ’ಮಾಸ್ಟರ್ ಆಫ್ ಪಪ್ಪೆಟ್ಸ್ ’, ಸ್ಲೇಯರ್ ಅವರ ’ರೇನ್ ಇನ್ ಬ್ಲಡ್ ’ ಹಾಗೂ ಮೆಗಾಡೆಥ್ ಅವರ ’ಪೀಸ್ ಸೆಲ್ಸ್...ಬಟ್ ಹೂ ಬೈಯಿಂಗ್? ’.[೪] ಟೆರ್ರೆನ್ಸ್ ಲೀ ಅವರ ಗ್ಲ್ಯಾಮ್ ರೂಪುರೇಷೆ ಬ್ಯಾಂಡ್‌ನ ಹೊಸ ಅವತಾರಕ್ಕೆ ಯಾವ ರೀತಿಯಿಂದಲೂ ಹೊಂದಾಣಿಕೆಯಾಗುವಂತಿರಲಿಲ್ಲ. ಮತ್ತು, ಅವರು ಹಾಗೂ ಅವರ ತಂಡದ ಸದಸ್ಯರು ತಮ್ಮ ತಮ್ಮ ಹಾದಿಯನ್ನು ಕಂಡುಕೊಂಡಾಗ ಹೊಸ ಸದಸ್ಯರನ್ನು ಹುಡುಕುವ ಅನಿವಾರ್ಯತೆ ಸೃಷ್ಟಿಯಾಯಿತು. ಆಗಲೇ ಟೆರ್ರೆನ್ಸ್ ತಮ್ಮ ಸ್ವಂತದ ಸಂಗೀತ ತಂಡ ’ಲಾರ್ಡ್ ಟ್ರೇಸಿ’ ಎಂಬ ಹೊಸ ತಂಡವನ್ನು ಘೋಷಣೆ ಮಾಡಿದರು.
1987ರಲ್ಲಿ ನ್ಯೂ ಒರ್ಲಿಯಾನ್ಸ್ ಮೂಲದ ಫಿಲ್ ಅನ್ಸೆಲ್ಮೋ ಅವರು ಬ್ಯಾಂಡ್ ಅನ್ನು ಪ್ರವೇಶಿಸುವ ವರೆಗೆ ತಾತ್ಕಾಲಿಕವಾಗಿ ರಿಕ್ ಮೈಥೀಷಿಯನ್ ಹಾಗೂ ಮ್ಯಾಟ್ ಎಲ್’ಅಮೊರ್ ಬ್ಯಾಂಡ್‌ನ ಧ್ವನಿಯಾಗಿದ್ದರು. ಈ ಮೊದಲು ಅನ್ಸೆಲ್ಮೋ ಅವರು ’ಸಮೈನ್’ (ಗಮನಿಸಿ; ಗ್ಲೆನ್ ಡ್ಯಾನ್ಜಿಗ್ ಅದೇ ಹೆಸರಿನದಲ್ಲ, ಅಂದರೆ ’ಸಮೈನ್’ ಸಂಗೀತ ತಂಡವಲ್ಲ) ಹಾಗೂ ’ರೇಜರ್ ವೈಟ್’ ಸಂಗೀತ ತಂಡಗಳಲ್ಲಿ ಗಾಯಕರಾಗಿದ್ದವರು.[೩] ಹಾಡಲೆಂದು ’ಪಂತೇರಾ’ ತಂಡದೊಳಗೆ ಕಾಲಿಟ್ಟದ್ದೇ ಅನ್ಸೆಲ್ಮೋ ಇನ್ನುಳಿದ ಮೂವರು ಸದಸ್ಯರೊಂದಿಗೆ ಸರಾಗವಾಗಿ ಹೊಂದಿಕೊಂಡರು. ಬದಲಾಗಿದ್ದು ಬ್ಯಾಂಡ್‌ನ ಸ್ವರೂಪ ಮಾತ್ರವಲ್ಲ. 1988ರಲ್ಲಿ ಪಂತೇರಾ ಅನ್ಸೆಲ್ಮೋ ಜೊತೆಗಿನ ತನ್ನ ಮೊದಲ ಆಲ್ಬಂ, ’ಪವರ್ ಮೆಟಲ್ ’ ಅನ್ನು ಬಿಡುಗಡೆ ಮಾಡಿತು. ಬ್ಯಾಂಡ್‌ನ ಹೆವಿಯಸ್ಟ್ ಆಲ್ಬಂಗಿಂತ ತೀರಾ ವಿಭಿನ್ನವಾದ, ಪವರ್ ಮೆಟಲ್ 1980ರ ದಶಕದ ಹಾರ್ಡ್ ರಾಕ್ ಹಾಗೂ ರಭಸದ ಮೆಟಲ್ ಸಂಗೀತದ ಸಮಾಗಮದಂತಿತ್ತು.ಕೆಲವೊಮ್ಮೆ ಅವುಗಳು ಕೇವಲ ಒಂದು ಹಾಡಿನಲ್ಲಿಯೇ ಮಿಳಿತಗೊಂಡ ನಿದರ್ಶನಗಳೂ ಸಾಕಷ್ಟಿದ್ದವು. ಬ್ಯಾಂಡ್ ಹುಟ್ಟು ಹಾಕಿದ ಹೊಸ ಸಂಗೀತ ಪ್ರಕಾರವನ್ನು ಶ್ಲಾಘಿಸುವ ಸಂದರ್ಭದಲ್ಲಿಯೇ ಅನ್ಸೆಲ್ಮೋ ಅವರ ಗಡಸು ಸಂಗೀತವನ್ನು ಟೆರ್ರೆನ್ಸ್ ಲೀ ಅವರ ಸಂಗೀತದೊಂದಿಗೆ ಹೋಲಿಕೆ ಮಾಡಲಾಗಿತ್ತು. ಪವರ್ ಮೆಟಲ್ ಬಿಡುಗಡೆಯಾದ ಬಳಿಕ ತಂಡದ ಸದಸ್ಯರು ತಮ್ಮ ಗ್ಲ್ಯಾಮ್ ಮೆಟಲ್ ಸಂಗೀತ ಹಾಗೂ ಇಮೇಜ್ ಅನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದರು. ತಂಡದ ಚರ್ಮವನ್ನಪ್ಪಿದ, ಎಲಾಸ್ಟಿಕ್ ರೀತಿಯ ವೇಷಭೂಷಣ ಕುರಿತು ಬ್ಯಾಂಡ್‌ನ ಸಭೆಯೊಂದರಲ್ಲಿ ಮಾತನಾಡಿದ ವಿನ್ನಿ ಪೌಲ್, “ಈ ಮಾಂತ್ರಿಕ ವಸ್ತ್ರಗಳು ಸಂಗೀತವನ್ನು ನುಡಿಸುವುದಿಲ್ಲ; ಬದಲಿಗೆ ನಾವೇ ನುಡಿಸಬೇಕು. ಆದ್ದರಿಂದ ಜೀನ್ಸ್‌ಗಳು, ಟಿ-ಶರ್ಟ್‌ಗಳು ಹೀಗೆ ಆದಷ್ಟು ನಿರಾಳವೆಂದೆನಿಸುವ ವಸ್ತ್ರಗಳನ್ನು ಧರಿಸಿ ಸಾಕು. ಆಗ ನೋಡಿ ಮುಂದಿನ ದಿನಗಳು ಹೇಗಿರುತ್ತವೆ ಎಂದು” ಎಂದು ತಮ್ಮ ತಂಡದವರಿಗೆ ಕಿವಿಮಾತು ಹೇಳಿದ್ದರು.[೪]
1980ರ ದಶಕದ ಮೊದಲ ಮೂರು ಆಲ್ಬಂಗಳಂತೆ ಪವರ್ ಮೆಟಲ್ ಕೂಡ ಮೆಟಲ್ ಮ್ಯಾಜಿಕ್ ರೆಕಾರ್ಡ್‌ಗಳ ಆಧಾರದಲ್ಲಿಯೇ ಬಿಡುಗಡೆಯಾಯಿತು. ಪವರ್ ಮೆಟಲ್ 80ರ ದಶಕದ ಗ್ಲ್ಯಾಮ್ ಮೆಟಲ್ ಗುಣಗಳನ್ನು ಹೊಂದಿಯೂ ಕ್ರಮೇಣ ಅದು ಪಂತೇರಾದ ವಿಶಿಷ್ಠ ಸಂಗೀತ ಗುಣಗಳನ್ನೇ ಪ್ರತಿಬಿಂಬಿಸತೊಡಗಿತು. ಬ್ಯಾಂಡ್ ಸದಸ್ಯರು ನಂತರ, ಪವರ್ ಮೆಟಲ್ ಅನ್ನೂ ಸೇರಿದಂತೆ, ತಮ್ಮ ಸ್ವತಂತ್ರ ಬಿಡುಗಡೆಗಳನ್ನು ನಿರ್ಲಕ್ಷಿಸಿ ತಮ್ಮದೇ ಆದ ’ಗ್ರೋವ್’ ಧ್ವನಿಯನ್ನು ಅಭಿವೃದ್ದಿಪಡಿಸುತ್ತಾ ಆ ಮೂಲಕ ತಮ್ಮದೇ ಆದ ಹೊಸತಾದ ಹೆವಿಯರ್ ಇಮೇಜ್ ಅನ್ನು ಕಟ್ಟಿಕೊಂಡರು. ಅವರ ನಾಲ್ಕು ಸ್ವತಂತ್ರ ಆಲ್ಬಂಗಳೂ ಬ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿನ ಆಲ್ಬಂಗಳ ಪಟ್ಟಿಗೆ ಸೇರಲಿಲ್ಲವಾದ್ದರಿಂದ ಅವುಗಳು ಸಂಗ್ರಹಗಾರರೂ ಹುಡುಕಲಸಾಧ್ಯವಾದ ಆಲ್ಬಂಗಳಾದವು.
ಕೌಬಾಯ್ಸ್ ಫ್ರಾಮ್ ಹೆಲ್ (1989–1991)
[ಬದಲಾಯಿಸಿ]ಪವರ್ ಮೆಟಲ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ, ಮೆಗಡೆಥ್ ಅವರ ತೆರವಾದ ಗಿಟಾರ್ ವಾದಕ ಸ್ಥಾನಕ್ಕೆ ನಡೆದ ಧ್ವನಿ ಪರೀಕ್ಷೆಯಲ್ಲಿ (ಅಡಿಷನ್) ಪಾಲ್ಗೊಂಡ “ಡೈಮಂಡ್ ಡಾರೆಲ್” ಅನ್ನೇ ತಂಡದ ಗಿಟಾರ್ ವಾದಕರಾಗಿ ಸೇರಿಕೊಳ್ಳವಂತೆ ಆಹ್ವಾನಿಸಲಾಯಿತು. ಡಾರೆಲ್ ತನ್ನ ಸಹೋದರ ಹಾಗೂ ಬ್ಯಾಂಡ್ ಸಹಸಂಗೀತಗಾರ ವಿನ್ನಿ ಪೌಲ್ ಅನ್ನೂ ತಂಡಕ್ಕೆ ಸೇರಿಸಿಕೊಳ್ಳವಂತೆ ಡಾರೆಲ್ ಒತ್ತಾಯಪಡಿಸಿದರು ಎನ್ನಲಾಗಿದೆ. ಆದರೆ ಪ್ರಧಾನ ಗಾಯಕ ಡೇವ್ ಮುಸ್ಟೈನ್ ಆಗಲೇ ನಿಕ್ ಮೆಂಝಾ ಎಂಬ ಒಬ್ಬ ಡ್ರಮರ್ ಅನ್ನು ಆಯ್ಕೆ ಮಾಡಿಬಿಟ್ಟಿದ್ದರಾದ ಕಾರಣ ಡಾರೆಲ್‌ನ ಬೇಡಿಕೆಗೆ ಕಿವಿಗೊಡಲಿಲ್ಲ. ತನ್ನ ಸಹೋದರನನ್ನು ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಕೊಳ್ಳದ ಕಾರಣ ಡಾರೆಲ್ ಕೂಡ ತನ್ನನ್ನು ಅರಸಿ ಬಂದ ಅವಕಾಶವನ್ನು ನಿರಾಕರಿಸಿದರು. ಆಗ ಡೇವ್ ಮುಸ್ಟೇನ್ ಡಾರೆಲ್ ಬದಲಿಗೆ ಮಾರ್ಟಿ ಫ್ರೀಡ್‌ಮನ್ ಎಂಬುವವರನ್ನು ಸೇರಿಸಿಕೊಳ್ಳಲು ಮುಂದಾದರು. ಅಬ್ಬೋಟ್ ಸಹೋದರರು ಕೂಡ ಪಂತೇರಾ ತಂಡದ ಕುರಿತು ಮತ್ತೊಮ್ಮೆ ತಮ್ಮ ಆಸಕ್ತಿಯನ್ನು ಕೇಂದ್ರೀಕರಿಸಿದರು. 1989ರಲ್ಲಿ ಪಂತೇರಾ ತಂಡ ತನ್ನ ಮೊದಲ ಕಮರ್ಷಿಯಲ್ ಯಶಸ್ಸನ್ನು ದಾಖಲಿಸಿತು. 1989ರಲ್ಲಿಯೇ ಪಂತೇರಾ ತಂಡ ಕಾಂಕ್ರೀಟ್ ಮ್ಯಾನೇಜ್‌ಮೆಂಟ್‌ನ ವಾಲ್ಟರ್ ಒ’ಬ್ರಿಯಾನ್ (ಕಾಂಕ್ರೀಟ್ ಮಾರ್ಕೆಟಿಂಗ್‌ನ ಒಂದು ನಿರ್ವಾಹಕ ವಿಭಾಗ) ಜೊತೆ ಕೈ ಜೋಡಿಸಿತು. ನಂತರ ಇದೇ ಸಂಸ್ಥೆ 2003ರ ತನಕ, ಅಂದರೆ ಪಂತೇರಾ ತಂಡ ಒಡೆಯುವ ತನಕವೂ, ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿತು.[೫]
“28 ಬಾರಿ ಜಗತ್ತಿನಲ್ಲಿ ಪ್ರತಿಯೊಂದು ಪ್ರಧಾನ ಲೇಬಲ್‌ನಿಂದ”[೬] ಆಟ್ಕೋ ರೆಕಾರ್ಡ್ಸ್ ಮುರಿದ ಬಳಿಕ ಹರ್ರಿಕೇನ್ ಹ್ಯೂಗೋ ನಂತರ ತಂಡದ ಪ್ರದರ್ಶನವನ್ನು ನೋಡಲೋಸುಗ ತಂಡದ ಜೊತೆ ವ್ಯವಹಾರ ಕುದುರಿಸಬೇಕೆಂಬ ಆಕಾಂಕ್ಷೆ ಹೊಂದಿದ್ದ ಡೆರೆಕ್ ಶುಲ್ಮಾನ್ ತಮ್ಮ ಪ್ರತಿನಿಧಿಗಳಾದ ಮಾರ್ಕ್ ರೋಸ್ ಹಾಗೂ ಸ್ಟೀವನ್ಸನ್ ಯುಜಿನೊ ಅವರಿಗೆ ಈ ಕುರಿತು ಸೂಚಿಸಿದ್ದರು. ತಂಡದ ಪ್ರದರ್ಶನದಿಂದ ರೋಸ್ ಎಷ್ಟು ಪ್ರಭಾವಿತರಾದರೆಂದರೆ ಅಂದೇ ರಾತ್ರಿ ತಮ್ಮ ಬಾಸ್‌ಗೆ ಕರೆ ಮಾಡಿ ಲೇಬಲ್‌ಗೆ ಸಹಿ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆಟ್ಕೊ ರೆಕಾರ್ಡ್ಸ್ ಅದನ್ನು ಒಪ್ಪಿಕೊಂಡಿತು ಮಾತ್ರವಲ್ಲ 1989ರ ಸನಿಹದಲ್ಲಿಯೇ ತಂಡ ಪೆಂಟೆಗೊ ಸ್ಟುಡಿಯೋದಲ್ಲಿ ಪ್ರಧಾನ ಲೇಬಲ್ ರಂಗಪ್ರವೇಶ ಮಾಡಿತು.
1990 ಜುಲೈ 24ರಂದು ಬಿಡುಗಡೆಯಾದ ಹಾಗೂ ಟೆರ್ರಿ ಡೇಟ್ ಹಾಗೂ ಪಂತೇರಾ ನಿರ್ಮಿಸಿದ, ಕೌಬಾಯ್ಸ್ ಫ್ರಾಮ್ ಹೆಲ್ ಹೆವಿ ಮೆಟಲ್ ಸಂಗೀತ ಕ್ಷೇತ್ರದ ಮೈಲಿಗಲ್ಲುಗಳಲ್ಲಿ ಒಂದು. ಗ್ಲ್ಯಾಮ್ ಮೆಟಲ್‌ನ ಪ್ರಭಾವವನ್ನು ಮೀರಿದ ಈ ಪ್ರಯತ್ನದಲ್ಲಿ ಪಂತೇರಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಥ್ರ್ಯಾಶ್ ಮೆಟಲ್ ಹಾಗೂ ಗ್ರೂವ್ ಮೆಟಲ್‌ಗಳನ್ನು ಒಂದುಗೂಡಿಸಿದ ’ಪವರ್ ಗ್ರೂವ್’ ಸಂಗೀತ ಪ್ರಕಾರವನ್ನು ಎತ್ತಿ ಹಿಡಿಯಿತು. ಅನ್ಸೆಲ್ಮೋ ರಾಬ್ ಹಾಲ್‌ಫೋರ್ಡ್ ಆಧಾರಿತ ಫಾಲ್ಸೆಟ್ಟೋ ಹಾಡುಗಾರಿಕೆಯನ್ನೇ ಅವಲಂಭಿಸಿದ್ದರೂ ಇನ್ನಷ್ಟು ಒರಟು ಹಾಡುಗಾರಿಕೆಯನ್ನು ಇಲ್ಲಿ ಪ್ರದರ್ಶಿಸಿದರು. ಡಾರೆಲ್ ಅವರ ಕ್ಲಿಷ್ಟಕರ ಗಿಟಾರ್ ಸೋಲೋಗಳು ಹಾಗೂ ವಿಶಿಷ್ಟ ಲಯಬದ್ಧತೆಗಳು ಹಾಗೂ ಅವುಗಳಿಗೆ ಸಾಥ್ ನೀಡಿದ ಅವರ ಸಹೋದರನ ಶೀಘ್ರಗತಿಯ ಡ್ರಮ್ ವಾದನ ಬ್ಯಾಂಡ್‌ನ ಬದಲಾದ ಮನೋಭಾವಕ್ಕೆ ಕನ್ನಡಿ ಹಿಡಿಯುವಂತಿದ್ದವು. ಬ್ಯಾಂಡ್‌ನ ಇತಿಹಾಸದಲ್ಲಿಯೇ ಈ ಆಲ್ಬಂ ಹೊಸದೊಂದು ವೃತ್ತಿಪರ ತಿರುವು ಎಂದರೆ ತಪ್ಪೇನಲ್ಲ. ತಂಡವೂ ಸೇರಿದಂತೆ ಬಹಳಷ್ಟು ಅಭಿಮಾನಿಗಳು ಈ ಆಲ್ಬಂ ಅನ್ನು ಪಂತೇರಾದ “ಅಧಿಕೃತ ರಂಗಪ್ರವೇಶ” ಎಂದೇ ಪರಿಗಣಿಸಿದ್ದರು.[೭] ಕವ್‌ಬಾಯ್ಸ್ ಆಲ್ಬಂ ಸಾವು ಹಾಗೂ ಧರ್ಮವನ್ನು ಕುರಿತು ಚಿಂತನೆಗೆ ಹಚ್ಚುವ ಏಳು ನಿಮಿಷಗಳ ಜನಪ್ರಿಯ ಹಾಡು “ಸಿಮೆಟರಿ ಗೇಟ್ಸ್” ಅನ್ನೂ ಒಳಗೊಂಡಿತ್ತು. ಹಾಗೆಯೇ, ಟೈಟಲ್ ಟ್ರ್ಯಾಕ್ ಸಂಗೀತ ತಂಡದ ಹಾಡುಗಾರರಿಗೆ ಅಡ್ಡ ಹೆಸರುಗಳನ್ನು ನೀಡಿದ್ದಲ್ಲದೇ ಅವರ ಕರ್ಕಶ ಹಾಗೂ ಅಸಂಪ್ರದಾಯಿಕ ವ್ಯಕ್ತಿತ್ವ, ಅಶಿಸ್ತಿನ ಜೀವನ ಶೈಲಿಯನ್ನು ಪ್ರತಿಬಿಂಬಿಸುವಂತಿತ್ತು.
ಎಕ್ಸೋಡಸ್ ಹಾಗೂ ಸುಯಿಸೈಡಲ್ ಟೆಂಡೆನ್ಸಿಸ್ ರೀತಿಯ ಥ್ರ್ಯಾಶ್ ಸಂಪ್ರದಾಯಗಳ ಜೊತೆ ಕೌಬಾಯ್ಸ್ ಫ್ರಾಮ್ ಹೆಲ್ ನ ಪ್ರವಾಸ ಪ್ರಾರಂಭವಾಗಿದ್ದು ಹೀಗೆ. 1991ರಲ್ಲಿ ರಾಬ್ ಹಾಲ್‌ಫೋರ್ಡ್ ಜೊತೆ ವೇದಿಕೆ ಹಂಚಿಕೊಳ್ಳುವ ಮೂಲಕ ಪಂತೇರಾ ತನ್ನ ಮೊದಲ ಯೂರೋಪ್ ಪ್ರವಾಸದಲ್ಲಿ ಪ್ರಖ್ಯಾತ ಬ್ಯಾಂಡ್ ಜುದಾಸ್ ಪ್ರೀಸ್ಟ್ ಜೊತೆ ಪ್ರದರ್ಶನ ನೀಡಿತು. ಅಂತಿಮವಾಗಿ ಬ್ಯಾಂಡ್ ಎಸಿ/ಡಿಸಿ ಹಾಗೂ ಮೆಟಾಲಿಕಾ ಜೊತೆಗೆ “ಮಾನ್‌ಸ್ಟ್‌ರ್ ಇನ್ ಮಾಸ್ಕೊ” ಎಂಬ ಹಣೆಪಟ್ಟಿ ಹೊಂದುವುದರಲ್ಲಿ ಸಾರ್ಥಕ್ಯವನ್ನು ಪಡೆಯಿತು. 1991ರಲ್ಲಿ ಸೋವಿಯತ್ ರಷ್ಯಾ ಪತನಗೊಂಡ ಬಳಿಕ ಪಾಶ್ಚಾತ್ಯ ಸಂಗೀತ ಪ್ರದರ್ಶನಕ್ಕೆ ದೊರೆತ ಹೊಸ ಸ್ವಾತಂತ್ರವನ್ನು ಸಂಭ್ರಮಿಸಲೆಂದು ನೆರೆದ ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ಸಂಗೀತಾಭಿಮಾನಿಗಳ ಎದುರು ಪ್ರದರ್ಶನ ನೀಡುವ ಮೂಲಕ ತಾನೂ ಸಂಭ್ರಮಿಸಿದ್ದು ಪಂತೇರಾ ತಂಡ. ಡಲ್ಲಾಸ್ ಕ್ಲಬ್ “ದ ಬೇಸ್‌ಮೆಂಟ್”ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಬ್ಯಾಂಡ್ ಅಲ್ಲಿ “ಕೌಬಾಯ್ಸ್ ಫ್ರಾಮ್ ಹೆಲ್” ಹಾಗೂ “ಸೈಕೊ ಹಾಲಿಡೇ” ವಿಡಿಯೋಗಳನ್ನು ಚಿತ್ರೀಕರಿಸುತ್ತಿತ್ತು. ಬ್ಯಾಂಡ್‌ನ 2006ರ ಹೋಮ್ ವಿಡಿಯೋ, “3 ವಲ್ಗರ್ ವಿಡಿಯೋಸ್ ಫ್ರಾಮ್ ಹೆಲ್ ”, ಹಾಗೂ ಮಾಸ್ಕೋದಲ್ಲಿ ನೀಡಿದ “ಪ್ರೈಮಲ್ ಕಾಂಕ್ರೀಟ್ ಸ್ಲೆಡ್ಜ್,” “ಕೌಬಾಯ್ಸ್ ಫ್ರಾಮ್ ಹೆಲ್”, “ಡಾಮಿನೇಷನ್” ಮತ್ತು “ಸೈಕೋ ಹಾಲಿಡೇ” ಪ್ರದರ್ಶನಗಳ ಚಿತ್ರಿಕೆಗಳನ್ನೂ ಅವರು ಇಲ್ಲಿಯೇ ಚಿತ್ರಿಸಿದರು.
ವಲ್ಗರ್ ಡಿಸ್‌ಪ್ಲೇ ಆಫ್ ಪವರ್ ಮತ್ತು ಫಾರ್ ಬಿಯೋಂಡ್ ಡ್ರೈವನ್ (1992–1994)
[ಬದಲಾಯಿಸಿ]ಪಂತೇರಾದ ವಿಶಿಷ್ಟ “ಗ್ರೂವ್” ಶೈಲಿ ತನ್ನೆಲ್ಲಾ ಸಮಗ್ರತೆಯೊಡನೆ ಒಡಮೂಡಿದ್ದು 1992 ಫೆಬ್ರವರಿ 25ರಂದು ಬಿಡುಗಡೆಯಾದ ವಲ್ಗರ್ ಡಿಸ್‌ಪ್ಲೇ ಆಫ್ ಪವರ್ ಎಂಬ ಆಲ್ಬಂನಲ್ಲಿ. ಈ ಆಲ್ಬಂನಲ್ಲಿ ಪವರ್ ಮೆಟಲ್ ಫಾಲ್ಸೆಟ್ಟೊ ಹಾಡುಗಾರಿಕೆಯ ಬದಲಿಗೆ ಹಾರ್ಡ್‌ಕೋರ್ ಪ್ರಭಾವವಿದ್ದ ತಾರಕಧ್ವನಿ ಹಾಗೂ ಹೆವಿಯರ್ ಗಿಟಾರ್ ಸಂಗೀತವನ್ನು ಅಳವಡಿಸಿಕೊಳ್ಳಲಾಯಿತು. ಕೆಲವು ವಿಮರ್ಶಕರು ಗ್ಲ್ಯಾಮ್ ಮೆಟಲ್‌ಗೆ ಪರ್ಯಾಯವಾಗಿ ಗ್ರಂಜ್ ಉದ್ಭವವಾಗುವುದನ್ನು ಎತ್ತಿ ತೋರಿದರೆ ಇನ್ನು ಕೆಲವರು ವಲ್ಗರ್ ಡಿಸ್‌ಪ್ಲೇ ಮೂಲಕ 1980ರ ದಶಕದ ಮೆಟಲ್ ಸಂಗೀತವನ್ನು ಮೀರುವ ಸಂಗೀತ ತಂಡವಾಗಿ ಪಂತೇರಾವನ್ನು ಗುರುತಿಸಿದರು. ಅದೇನೇ ಇರಲಿ, ಇದು ಬ್ಯಾಂಡ್‌ನ ಅತ್ಯುತ್ತಮ ಪ್ರಯತ್ನ ಎಂಬುದನ್ನು ವಿಮರ್ಶಕರು ಹಾಗೂ ಅಭಿಮಾನಿಗಳು ಒಕ್ಕೊರಲಿನಲ್ಲಿ ಅನುಮೋದಿಸಿದ್ದರು.[೬] “ಫಕಿಂಗ್ ಹಾಸ್ಟಿಲ್” ರೀತಿಯ ಹಾಡುಗಳು ಶೀಘ್ರಗತಿಯ, ಅಧಿಕಾರಕ್ಕೆ ವಿರುದ್ಧವಾದ ಆಕ್ರಮಣಕಾರಿ ಸವಾಲು, ಲಯಬದ್ಧತೆಯ(ರಿಫ್) “ವಾಕ್” ಹಾಗೂ “ಮೌತ್ ಫಾರ್ ವಾರ್” ಹೀಗೆ ಪಂತೇರಾದ ಬತ್ತಳಿಕೆಯಲ್ಲಿರುವ ಜನಪ್ರಿಯ ಹಾಡುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆಲ್ಬಂನಲ್ಲಿರುವ ಪಂತೇರಾದ ಅತ್ಯಂತ ಜನಪ್ರಿಯ ಲಾವಣಿಗಳೆಂದರೆ; ಕಾಮ ಹಾಗೂ ನಿಂದನೆಯನ್ನೇ ಮೂಲವಾಗಿಟ್ಟುಕೊಂಡ “ದಿಸ್ ಲವ್” ಹಾಗೂ ಕೌಬಾಯ್ಸ್ ನಲ್ಲಿರುವ “ಸಿಮೆಟರಿ ಗೇಟ್ಸ್” ಅನ್ನು ನೆನಪಿಸುವಂಥ “ಹಾಲೊ”. . ಲೈವ್ ಪ್ರದರ್ಶನಗಳಲ್ಲಿ ದೊರೆತ ಜನಪ್ರಿಯತೆಗೆ “ಹಾಲೊ” ಹೆಸರುವಾಸಿ. ಕೌಬಾಯ್ಸ್ ನ “ಡಾಮಿನೇಷನ್” ಅನ್ನು ಹಾಡುವ ಪಂತೇರಾ ತಂಡ ಹಾಡಿನ ಅಂತಿಮ ಭಾಗದಲ್ಲಿ (2:30 ನಿಮಿಷಗಳಷ್ಟಿರುವ) “ಹಾಲೊ” ಅನ್ನು ಹಾಡುತ್ತದೆ. “ಡಾಮ್/ಹಾಲೊ” ಎಂದೇ ಕರೆಯಲ್ಪಡುವ ಇದನ್ನು ಬ್ಯಾಂಡ್‌ನ 1997ರ ನೇರ ಪ್ರದರ್ಶನದ ಆಲ್ಬಂನಲ್ಲಿ ಕೇಳಬಹುದು. ವಲ್ಗರ್ ನ ಕೆಲವು ಹಾಡುಗಳನ್ನು ರೇಡಿಯೋದಲ್ಲಿ ಸಾಕಷ್ಟು ಬಾರಿ ಪ್ರಸಾರ ಮಾಡಲಾಗಿದೆ. ಹಾಗೆಯೇ ಅದರ ವಿಡಿಯೋ ಅನ್ನು ಎಂಟಿವಿ ವಾಹಿನಿಯಲ್ಲಿ ಸ್ಥಾನ ಗಳಿಸಿಕೊಂಡಿತ್ತು. ಈ ಆಲ್ಬಂ ಅಮೆರಿಕನ್ ಚಾರ್ಟ್‌ಗಳಲ್ಲಿ 44ನೇ ಸ್ಥಾನ ಪಡೆದುಕೊಂಡಿತ್ತು. ಮತ್ತೊಮ್ಮೆ ರಸ್ತೆಗಿಳಿದ ಪಂತೇರಾ 1992 ಜುಲೈನಲ್ಲಿ ಮತ್ತೊಮ್ಮೆ ರಸ್ತೆಗಿಳಿದ ಪಂತೇರಾ ಮೊಟ್ಟ ಮೊದಲ ಬಾರಿಗೆ ಜಪಾನ್ ಪ್ರವಾಸ ಕೈಗೊಂಡಿತು. ಜಪಾನ್‌ನಲ್ಲಿ ನಡೆದ “ಮಾನ್‌ಸ್ಟರ್ಸ್ ಆಫ್ ರಾಕ್” ಸಂಗೀತ ಹಬ್ಬದಲ್ಲಿ ಇಟಲಿಯ ಐರನ್ ಮೈಡನ್ ಹಾಗೂ ಬ್ಲ್ಯಾಕ್ ಸಬ್ಬಾತ್ ಜೊತೆ ಪಂತೇರಾ ಕೂಡ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು. ಇದೇ ಸಂದರ್ಭದಲ್ಲಿ ಎಂದು ಕಾಣುತ್ತದೆ ಡಾರೆಲ್ ಅಬ್ಬೋಟ್ ತಮ್ಮ “ಡೈಮಂಡ್ ಡಾರೆಲ್” ಎಂಬ ಅಡ್ಡ ಹೆಸರನ್ನು ಕೈಬಿಟ್ಟು “ಡೈಮಬಾಗ್ ಡಾರೆಲ್” ಎಂಬ ಹೆಸರನ್ನು ಧಾರಣೆ ಮಾಡಿದದು. ಹಾಗೆಯೇ ರೆಕ್ಸ್ ಬ್ರೌನ್ ಕೂಡ “ರೆಕ್ಸ್ ರಾಕರ್” ಎಂಬ ಅಡ್ಡ ಹೆಸರನ್ನು ಕೈ ಬಿಟ್ಟರು.
ವಲ್ಗರ್ ಡಿಸ್‌ಪ್ಲೇ ಆಫ್ ಪವರ್ ಆಲ್ಬಂನ ಜನಪ್ರಿಯತೆ ಯಾವ ಮಟ್ಟಕ್ಕೆ ಏರಿತ್ತೆಂದರೆ ಅದನ್ನು ಅಳೆಯಲು ಅದರ ನಂತರ (1994 ಮಾರ್ಚ್ 22 ರಂದು) ಬಿಡುಗಡೆಯಾದ ಫಾರ್ ಬಿಯಾಂಡ್ ಡ್ರೈವನ್ ಆಲ್ಬಂನ ಜನಪ್ರಿಯತೆಯನ್ನು ನೋಡಬೇಕು. ಸಂಗೀತ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅದು ಅಮೆರಿಕ ಹಾಗೂ ಆಸ್ಟ್ರೇಲಿಯಾದ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಆಲ್ಬಂ ನ ಮೊದಲ ಹಾಡು “ಐ ಆಮ್ ಬ್ರೋಕನ್” ಮೂಲಕ ಬ್ಯಾಂಡ್ 1995ರಲ್ಲಿ ಪ್ರಥಮ ಬಾರಿಗೆ “ಅತ್ಯುತ್ತಮ ಮೆಟಲ್ ಪ್ರದರ್ಶನ”ಕ್ಕೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಡ್ರೈವನ್ ಮೂಲಕ ಪಂತೇರಾ ತಾನು ಸಂಗೀತ ಕ್ಷೇತ್ರದಲ್ಲಿ ತಳೆದ ಆತ್ಯಂತಿಕ ವಿಭಿನ್ನ ಮಾರ್ಗದ ನಡುವೆಯೂ ಗ್ರೂವ್ ಮೆಟಲ್ ಸಂಪ್ರದಾಯವನ್ನೇ ಮುಂದುವರಿಸಿತ್ತು. ಆಲ್ಬಂನ ಮೂಲ ಕಲೆಗಾರಿಕೆಯನ್ನು ನಿಷೇಧಿಸಲಾದ ಕಾರಣ (ಅದು ಪೃಷ್ಠವೊಂದಕ್ಕೆ ತೂತು ಕೊರೆಯುವ ದೃಶ್ಯವಿತ್ತು) ಹೊಸದೊಂದು ಕಲೆಗಾರಿಕೆಯನ್ನು (ತಲೆಬುರುಡೆಗೆ ತೂತು ಕೊರೆಯುವ ದೃಶ್ಯ) ಹೊಂದಿದಂತೆ ಆಲ್ಬಂ ಅನ್ನು ಮರುಬಿಡುಗಡೆ ಮಾಡಲಾಯಿತು. ಮಿತ ಪ್ರಮಾಣದ ಆವೃತ್ತಿಗಳು ಸ್ಲಿಪ್- ಕವರ್ ಗಳೊಂದಿಗೆ ಬಿಡುಗಡೆಯಾದವು. ಡ್ರೈವನ್ ಡೌನ್‌ಅಂಡರ್ ಟೂರ್ `94 ಸಾವನೀರ್ ಕಲೆಕ್ಷನ್ ಪೆಟ್ಟಿಗೆಯ ರೂಪದಲ್ಲಿದ್ದ ಸೆಟ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ಅಲ್ಲಿಯೇ ಬಿಡುಗಡೆಗೊಂಡಿತು. ಇದು ಫಾರ್ ಬಿಯಾಂಡ್ ಡ್ರೈವನ್ (ಇದರ ಮೂಲ ಕಲಾಕೃತಿಯನ್ನು ನಿಷೇಧಿಸಲಾಗಿತ್ತು) ಅನ್ನು ಹೆಚ್ಚುವರಿ 13ನೇ ಹಾಡು “ದ ಬ್ಯಾಡ್ಜ್” (ಪಾಯ್ಸನ್ ಐಡಿಯಾ ಕವರ್) ಜೊತೆ ಚಿತ್ರೀಕರಿಸಿತ್ತು. ಹಾಗೂ 5-ಟ್ರ್ಯಾಕ್ ಲೈವ್ ಅಂಡ್ ಹಾಸ್ಟೈಲ್ ಮತ್ತು ಜಪಾನೀಸ್ ಕಲೆಕ್ಟರ್ ರ ಆವೃತ್ತಿ ವಾಕ್ ಇಪಿ|ಲೈವ್ ಅಂಡ್ ಹಾಸ್ಟೈಲ್ ಮತ್ತು ಜಪಾನೀಸ್ ಕಲೆಕ್ಟರ್ ರ ಆವೃತ್ತಿ ವಾಕ್ ಇಪಿ ಇವೆಲ್ಲವನ್ನೂ ವಿಶೇಷ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಎಂಟು ಪುಟಗಳ ಬಯೋಗ್ರಫಿಯ ಜೊತೆಗೆ ಬಿಡುಗಡೆಗೊಳಿಸಲಾಯಿತು. ಫಾರ್ ಬಿಯಾಂಡ್ ಡ್ರೈವನ್ ರೀತಿಯ ಅತ್ಯಪರೂಪದ ಆವೃತಿಗಳಂತೆ ಈ ಬಾಕ್ಸ್ ಸೆಟ್ ಕೂಡ ಅತ್ಯಪರೂಪವಾದದ್ದು ಹಾಗೂ ಅತಿ ಹೆಚ್ಚು ಬೇಡಿಕೆಯುಳ್ಳದ್ದು.
ಮತ್ತೊಮ್ಮೆ ರಸ್ತೆಗಿಳಿದ ಪಂತೇರಾ ಮತ್ತೊಂದು “ಮಾನ್‌ಸ್ಟರ್ಸ ಆಫ್ ರಾಕ್” ಹಣೆಪಟ್ಟಿಯೊಡನೆ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡಿತು. 1994 ಜೂನ್ 4ರ ಆ ಸಂಗೀತ ಹಬ್ಬದಲ್ಲಿ ಅಬ್ಬೋಟ್ ಸಹೋದರರು ಡ್ರಮ್ ವಾದಕ ವಿನ್ನಿ ಪೌಲ್ ಅವರನ್ನು ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದರು ಎಂಬ ಕಾರಣಕ್ಕೆ ಅಲ್ಲಿನ ಸಂಗೀತ ಮ್ಯಾಗಜೀನ್ ಕೆರ್ರಾಂಗ್! ನ ವರದಿಗಾರರೊಂದಿಗೆ ಮಾತಿನ ಚಕಮಕಿಗಿಳಿದರು. 1994 ಜೂನ್ 4ರ ಆ ಸಂಗೀತ ಹಬ್ಬದಲ್ಲಿ ಅಬ್ಬೋಟ್ ಸಹೋದರರು ಡ್ರಮ್ ವಾದಕ ವಿನ್ನಿ ಪೌಲ್ ಅವರನ್ನು ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದರು ಎಂಬ ಕಾರಣಕ್ಕೆ ಅಲ್ಲಿನ ಸಂಗೀತ ಮ್ಯಾಗಜೀನ್ ಕೆರ್ರಾಂಗ್ ! ನ ವರದಿಗಾರರೊಂದಿಗೆ ಮಾತಿನ ಚಕಮಕಿಗಿಳಿದರು. ಜೂನ್ ತಿಂಗಳಿನಲ್ಲಿ ವೇದಿಕೆಯ ಮೇಲೇರುತ್ತಿದ್ದ ಅಭಿಮಾನಿಯೊಬ್ಬನನ್ನು ತಡೆದ ಕಾರಣಕ್ಕೆ ಅನ್ಸೆಲ್ಮೋ ಅವರು ರಕ್ಷಣಾ ಸಿಬ್ಬಂದಿಯೊಬ್ಬರನ್ನು ಥಳಿಸಿ ವಿವಾದ ಸೃಷ್ಟಿಸಿದರು. ಅವರ ಮೇಲೆ ಮೊಕದ್ದಮೆಯನ್ನೂ ಹೂಡಲಾಯಿತು. ನಂತರ ಅವರನ್ನು $5,000 ಡಾಲರುಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.[೮][೯][೧೦] ವಿಚಾರಣೆ ಮೂರು ಬಾರಿ ತಡವಾಯಿತು.[೧೧] 1995 ಮೇ ತಿಂಗಳಲ್ಲಿ ಕೋರ್ಟ್‌ನಲ್ಲಿ ತನ್ನ ತಪ್ಪೊಪ್ಪಿಗೆ ಮಾಡಿಕೊಂಡ ಅನ್ಸೆಲ್ಮೋ ಅವರನ್ನು 100 ಗಂಟೆಗಳ ಸಮುದಾಯ ಸೇವೆಗೆ ನಿಯೋಜಿಸಲಾಯಿತು.[೧೨][೧೩] 1994ರಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ಪ್ರವಾಸವನ್ನು ಮುಂದುವರಿಸಿದ ಪಂತೇರಾ ತಂಡ ಅಮೆರಿಕದಲ್ಲಿ ಮತ್ತೊಂದು ಮೆಟಲ್ ಬ್ಯಾಂಡ್ ಪ್ರೋಂಗ್ ಅನ್ನು ಎದುರುಗೊಳ್ಳುವುದರೊಂದಿಗೆ ಮುಕ್ತಾಯಗೊಳಿಸಿತು.
ಬ್ಯಾಂಡ್‌ನಲ್ಲಿ ಗೊಂದಲ ಮತ್ತು ದ ಗ್ರೇಟ್ ಸದರ್ನ್ ಟ್ರೆಂಡ್ ಕಿಲ್ (1994–1996)
[ಬದಲಾಯಿಸಿ]ಅಬ್ಬೋಟ್ ಸಹೋದರರ ಪ್ರಕಾರ 1995ರಲ್ಲಿ ಪಂತೇರಾ ಮತ್ತೊಮ್ಮೆ ಪ್ರವಾಸ ಕೈಗೊಂಡ ಬಳಿಕ ಮುಖ್ಯ ಗಾಯಕ ಫಿಲ್ ಅನ್ಸೆಲ್ಮೋ ಅವರ ವರ್ತನೆಯಲ್ಲಿ ವಿರೋಧಾಭಾಸ ಕಂಡುಬರುತೊಡಗಿತು. ಇನ್ನುಳಿದ ಬ್ಯಾಂಡ್ ಸದಸ್ಯರು ವಿಚಾರ ಮಾಡಿದ್ದೇನೆಂದರೆ, ಪಂತೇರಾದ ಯಶಸ್ಸು ಅನ್ಸೆಲ್ಮೋ ಅವರ ನೆತ್ತಿಗೇರಿದೆ ಎಂದು. ಆದರೆ, ಸತತ ಪ್ರವಾಸಗಳ ದೆಸೆಯಿಂದಾಗಿ ಪ್ರಾರಂಭವಾಗಿರುವ ಸಹಿಸಲಸಾಧ್ಯ ಬೆನ್ನುಹುರಿಯ ನೋವೇ ತಮ್ಮೆಲ್ಲ ವಿಚಿತ್ರ ವರ್ತನೆಗೆ ಕಾರಣ ಎಂದು ಈ ಕುರಿತು ಅನ್ಸೆಲ್ಮೋ ನಂತರ ಸಮಜಾಯಿಷಿ ನೀಡಿದರು. ತಮ್ಮ ಈ ದೈಹಿಕ ಯಾತನೆಯನ್ನು ಮಧ್ಯಪಾನದ ಮೂಲಕ ಮರೆಯಲು ಅನ್ಸೆಲ್ಮೋ ಪ್ರಯತ್ನಿಸಿದರಾದರೂ, ಅದು ಅವರ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿತು ಮಾತ್ರವಲ್ಲ “ಬ್ಯಾಂಡ್‌ನಲ್ಲಿ ಅದು ಕೊಂಚ ಆತಂಕಕ್ಕೂ ಕಾರಣವಾಗಿತ್ತು”. ಹಾಗೆಂದು ಅವರೇ ಒಪ್ಪಿಕೊಂಡಿದ್ದಾರೆ.[೪] ಬೆನ್ನು ಹುರಿಯ ನೋವಿಗೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಸಲಹೆ ಮಾಡಿದರೂ ಅದು ವಾಸಿಯಾಗಲು ಕನಿಷ್ಠ ಒಂದು ವರ್ಷವಾದರೂ ಕಾಲಾವಕಾಶ ಬೇಕು ಎಂದರು. ಆದರೆ ವರ್ಷಗಳ ಕಾಲ ಬ್ಯಾಂಡ್ ಅನ್ನು ತೊರೆದು ಇರಲಾರದ ಅನ್ಸೆಲ್ಮೋ ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ. ಬದಲಿಗೆ ಅವರು ತಮ್ಮನ್ನು ಹೈರಾಣಾಗಿಸುತ್ತಿದ್ದ ನೋವಿಗೆ ಪರಿಹಾರವನ್ನು ಹೆರಾಯಿನ್‌ನಂಥ ಮಾದಕ ದ್ರವ್ಯದಲ್ಲಿಯೇ ಕಂಡುಕೊಂಡರು.
ಇವೆಲ್ಲವುಗಳ ನಡುವೆ ಅನ್ಸೆಲ್ಮೋ ಅವರ ಹೇಳಿಕೆಗಳು ಇನ್ನಿಲ್ಲದ ವಿವಾದ ಸೃಷ್ಟಿಸತೊಡಗಿದ್ದವು. ಮಾಂಟ್ರಿಯಲ್ ಸಂಗೀತ ಕಛೇರಿಯಲ್ಲಿ “ರಾಪ್ ಸಂಗೀತ ಶ್ವೇತವರ್ಣೀಯರ ಹತ್ಯೆಯನ್ನು ಪ್ರತಿಪಾದಿಸುತ್ತದೆ” ಎಂದು ಹೇಳಿಕೆ ನೀಡುವ ಮೂಲಕ ಅನ್ಸೆಲ್ಮೋ ಅನಗತ್ಯ ವಿವಾದ ಸೃಷ್ಟಿಸಿದ್ದರು. ನಂತರ ತಮ್ಮ ಮೇಲಿನ ಜನಾಂಗೀಯ ದ್ವೇಷದ ಆರೋಪವನ್ನು ಅಲ್ಲಗಳೆದ ಅನ್ಸೆಲ್ಮೋ ನಂತರ ತಾವು ಕುಡಿತದ ಅರೆಪ್ರಜ್ಞಾವಸ್ಥೆಯಲ್ಲಿ ತಪ್ಪಿ[೩] ನುಡಿದಿದ್ದಾಗಿ ಹೇಳಿ ತಮ್ಮ ನಡವಳಿಕೆಗೆ ಕ್ಷಮೆಯಾಚಿಸಿದರು.[೧೪]
1995ರಲ್ಲಿ ಅನ್ಸೆಲ್ಮೋ ಅವರ ಹಲವು ಪಾರ್ಶ್ವ ಯೋಜನೆಗಳಲ್ಲಿ ಒಂದಾದ ’ಡೌನ್’ ಪ್ರವರ್ಧಮಾನಕ್ಕೆ ಬಂತು. ಅನ್ಸೆಲ್ಮೋ ಹಾಗೂ ಕ್ರೌಬಾರ್‌ನ ಸದಸ್ಯರಾಗಿದ್ದ ಗಿಟಾರ್ ವಾದಕ ಕಿರ್ಕ್ ವಿಂಡ್‌ಸ್ಟೈನ್, ಬಾಸ್ಸಿಸ್ಟ್ ಟೊಡ್ ಸ್ಟ್ರೇಂಜ್ ಹಾಗೂ ಡ್ರಮ್ ವಾದಕ ಜಿಮ್ಮಿ ಬೋವರ್ (ಐಹೇಟ್‌ಗಾಡ್ ಕೂಡ) ಸಂಗೀತಗಾರರ ಸೂಪರ್‌ಗ್ರೂಪ್ ತಂಡವಾಗಿದ್ದ ’ಡೌನ್’ ಜೊತೆ ಕೊರಿಶನ್ ಆಫ್ ಕನ್ಫರ್ಮಿಟಿ ಗಿಟಾರ್ ವಾದಕ ಪೆಪ್ಪರ್ ಕೀನನ್ ಕೂಡ ಗುರುತಿಸಿಕೊಂಡಿದ್ದರು. 1995ರ ಡೌನ್‌ನ ಚೊಚ್ಚಲ ಪ್ರಯತ್ನ ನೋಲಾ ಯಶಸ್ವಿಯಾಗಿತ್ತು. ಆದರೆ, ತಂಡದ ಸದಸ್ಯರೆಲ್ಲರೂ ತಮ್ಮ ಮಾತೃತಂಡಗಳಿಗೆ ಮರಳಿದ ಕಾರಣ ಹಲವಾರು ವರ್ಷಗಳ ವರೆಗೆ ಡೌನ್ ನಿಷ್ಕ್ರಿಯವಾಗಿರಬೇಕಾಗಿತ್ತು.
ಪಂತೇರಾದ ನಂತರದ ಆಲ್ಬಂ ದ ಗ್ರೇಟ್ ಸದರ್ನ್ ಟ್ರೆಂಡ್‌ಕಿಲ್ (1996 ಮೇ 22ರಂದು ಬಿಡುಗಡೆಯಾಯಿತು) ಬಿಡುಗಡೆಯಾದಾಗ ಸಂಗೀತ ಕ್ಷೇತ್ರವನ್ನು ಒಂದು ಕಡೆ ಗ್ರಂಜ್ ರಾಕ್ ಆಳುತ್ತಿದ್ದರೆ ಇನ್ನೊಂದೆಡೆ ರಾಕ್ ಮೆಟಲ್ ದಾಪುಗಾಲಿಕ್ಕುತ್ತಾ ಸಂಗೀತ ಕ್ಷೇತ್ರವನ್ನು ಪ್ರವೇಶಿಸುತ್ತಿತ್ತು. ಇದನ್ನು ಪಂತೇರಾದ “ನಿರ್ಲಕ್ಷಿತ” ಆಲ್ಬಂ ಎಂದೇ ಕರೆಯಲಾಗುತ್ತದೆ.[೬] ಈ ಆಲ್ಬಂಗಾಗಿ ನ್ಯೂ ಆರ್ಲಿಯಾನ್ಸ್‌ನಲ್ಲಿರುವ ಫಿಲ್ ಅನ್ಸೆಲ್ಮೊ ನೈನ್ ಇಂಚ್ ನೈಲ್ಸ್‌ನ ಗಾಯಕ ಟ್ರೆಂಟ್ ರೆಝನರ್ ನ ಸ್ಟುಡಿಯೋದಲ್ಲಿ ತನ್ನ ಹಾಡುಗಳ ಧ್ವನಿ ಮುದ್ರಣ ನಡೆಸಿದರೆ ತಂಡದ ಉಳಿದ ಸದಸ್ಯರು ಡಲ್ಲಾಸ್‌ನಲ್ಲಿ ಧ್ವನಿಮುದ್ರಣವನ್ನು ಪೂರ್ಣಗೊಳಿಸಿದರು. ಅನ್ಸೆಲ್ಮೊ ಹಾಗೂ ತಂಡದ ಇನ್ನಿತರ ಸದಸ್ಯರ ನಡುವೆ ದಿನೇ ದಿನೆ ಬೆಳೆಯುತ್ತಿದ್ದ ಕಂದಕಕ್ಕೆ ಇದು ಅತ್ಯುತ್ತಮ ನಿದರ್ಶನವೆಂದರೆ ತಪ್ಪಾಗಲಾರದು. ತಂಡದ ಪ್ರಾರಂಭದ ಪರಿಶ್ರಮಕ್ಕೆ ಹೋಲಿಸಿದರೆ ಪುನರ್ ಧ್ವನಿಮುದ್ರಣಕ್ಕೆ “ರಾಕ್ಷಸೀ” ಶೈಲಿಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮವೇ ಟ್ರೆಂಡ್‌ಕಿಲ್ ನ ಜನಪ್ರಿಯ ವಸ್ತು ವಿಷಯವಾಗಿತ್ತು. ಉದಾಹರಣೆಗೆ, “ಸುಸೈಡ್ ನೋಟ್ ಪಾರ್ಟ್ 1 ”, “ಸುಸೈಡ್ ನೋಟ್ ಪಾರ್ಟ್ 2” ಹಾಗೂ “ಲಿವಿಂಗ್ ಥ್ರೂ ಮಿ(ಹೆಲ್’ಸ್ ರಾಥ್) ಹಾಡುಗಳು. ಟ್ರೆಂಡ್‌ಕಿಲ್ ನ ಅತ್ಯಂತ ಜನಪ್ರಿಯ ಹಾಡು ಎಂದರೆ ಪ್ರಾಯಶಃ “ಡ್ರ್ಯಾಗ್ ದ ವಾಟರ್ಸ್”. ಸಂಗೀತ ವಿಡಿಯೋ ಚಿತ್ರೀಕರಣಗೊಂಡ ಹಾಗೂ ಬ್ಯಾಂಡ್‌ನ ಹಾಡುಗಳ ಸಂಕಲನದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಲ್ಬಂನ ಏಕೈಕ ಹಾಡು ಎಂದರೆ “ಡ್ರ್ಯಾಗ್ ದ ವಾಟರ್ಸ್”. ಅತ್ಯಂತ ಹೆಚ್ಚು ಪ್ರಶಂಸೆಗೊಳಪಟ್ಟ ಟ್ರೆಂಡ್‌ಕಿಲ್ ನ ಮತ್ತೊಂದು ಹಾಡು ಎಂದರೆ, “ಫ್ಲಡ್ಸ್”. ಈ ಹಾಡಿನಲ್ಲಿದ್ದ ಡಾರೆಲ್‌ನ ಕ್ಷಿಷ್ಟಕರ ಗಿಟಾರ್ ಸೋಲೋ ಗಿಟಾರ್ ವರ್ಲ್ಡ್ ಮ್ಯಾಗಜೀನ್ ಆಯೋಜಿಸಿದ್ದ ಸಾರ್ವಕಾಲಿಕ “100 ಶ್ರೇಷ್ಠ ಗಿಟಾರ್ ಸೋಲೋ”ಗಳ ಪಟ್ಟಿಯಲ್ಲಿ 15ನೇ ಸ್ಥಾನ ಗಳಿಸಿತ್ತು.[೧೫]
ಅಲ್ಪಾಯುಷ್ಯದ ಆಸ್ಟ್ರೇಲಿಯಾದ ಲೈಂಗಿಕ ಸಲಹೆಯ ಕಾರ್ಯಕ್ರಮ “ಸೆಕ್ಸ್ ಲೈಫ್”ನ ಒಂದು ಎಪಿಸೋಡಿನಲ್ಲಿ ಒಬ್ಬ ಮನುಷ್ಯನ ಸಿಡಿಗಳ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸುವುದು ಯಾವುದು ಎಂಬುದಕ್ಕೆ ಕಾರ್ಯಕ್ರಮದ ನಿರೂಪಕ ದ ಗ್ರೇಟ್ ಸದರ್ನ್ ಟ್ರೆಂಡ್‌ಕಿಲ್ ನ ಪ್ರತಿಯೊಂದನ್ನು ತೆಗೆದು ತೋರಿಸಿದ್ದರು ಹಾಗೆಯೇ ಪಂತೇರಾವನ್ನು “ಪ್ರಪಂಚದ ಅತ್ಯಂತ ಅಬ್ಬರದ ಬ್ಯಾಂಡ್” ಎಂದು ಬಣ್ಣಿಸಿದ್ದರು.
ಓವರ್ ಡೋಸ್, ಅಫಿಷಿಯಲ್ ಲೈವ್: 101 ಪ್ರೂಫ್ ಹಾಗೂ ಇನ್ನಿತರ ಉಪಯೋಜನೆಗಳು (1996–2000)
[ಬದಲಾಯಿಸಿ]1993 ಜುಲೈ 13 ರಂದು ಟೆಕ್ಸಾಕ್‌ಗೆ ಮರಳಿದ ಅನ್ಸೆಲ್ಮೋ ತುಸು ಹೆಚ್ಚೇ ಹೆರಾಯಿನ್ ಅನ್ನು ಸೇವಿಸಿದ್ದರು.[೧೬][೧೭] ಅವರ ಹೃದಯ ಬಡಿತ ಸುಮಾರು ಐದು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ತಕ್ಷಣ ಎಚ್ಚೆತ್ತ ವೈದ್ಯರು ಅನ್ಸೆಲ್ಮೋಗೆ ಅಡ್ರೆನಾಲಿನ್ ದ್ರಾವಣವನ್ನು ಚುಚ್ಚಿ ಅವರ ಆಸ್ಪತ್ರೆಗೆ ಸೇರಿಸಿದ್ದರು. ಹೀಗೆ ಸಾವಿನ ಬಾಗಿಲು ತಟ್ಟಿ ಬಂದ ಅನ್ಸೆಲ್ಮೋ ಆಸ್ಪತ್ರೆಯಲ್ಲಿ ಎಚ್ಚೆತ್ತಾಗ ಅವರ ದೇಖರೇಖಿ ನೋಡಿಕೊಳ್ಳುತ್ತಿದ್ದ ನರ್ಸು “ಜೀವನಕ್ಕೆ ಮತ್ತೊಮ್ಮೆ ಸ್ವಾಗತ, ಓಹ್ ನೀವು ತುಸು ಹೆಚ್ಚೇ ಹೆರಾಯಿನ್ ಸೇವಿಸಿದ್ದಿರಿ” ಎಂದು ಉಲಿದಿದ್ದಳು. ಇದಾದ ಬಳಿಕ ನಂತರ ರಾತ್ರಿ ತಮ್ಮ ತಂಡದ ಸದಸ್ಯರಲ್ಲಿ ಕ್ಷಮೆಯಾಚಿಸಿದ ಅನ್ಸೆಲ್ಮೋ ತಾವು ಇನ್ನು ಮಾದಕದ್ರವ್ಯ ಸೇವನೆಯನ್ನು ತ್ಯಜಿಸುವುದಾಗಿ ಭರವಸೆ ನೀಡಿದ್ದರು.[೧೮] ಡಾರೆಲ್‌ನ ಗೆಳತಿ ರಿಟಾ ಹನಿ ಪ್ರಕಾರ, ಅನ್ಸೆಲ್ಮೋ ಅವರ ಮಾದಕದ್ರವ್ಯ ಸೇವನೆಯ ದುರಭ್ಯಾಸ ಬೆಳಕಿಗೆ ಬಂದಂತೆ ಇದರಿಂದ ಅತಿ ಹೆಚ್ಚು ಅಘಾತಕ್ಕೊಳಗಾದವರು ಹಾಗೂ ಅವರ ನಡವಳಿಕೆಯಿಂದ ಮುಜುಗರಕ್ಕೊಳಗಾದವರು ವಿನ್ನಿ ಹಾಗೂ ಡಾರೆಲ್. ಈ ಘಟನೆಯ ಬಳಿಕವೂ ಮತ್ತೆರಡು ಬಾರಿ ಎಡವಿದ್ದಾಗಿ ಅನ್ಸೆಲ್ಮೋ ಹೇಳಿಕೊಂಡಿದ್ದಾರೆ. ಹಾಗೆ ಹಾದಿ ತಪ್ಪಿದಾಗಲೆಲ್ಲಾ ಅವರನ್ನು ಭರಿಸಲಾಗದಷ್ಟು ಪಾಪಪ್ರಜ್ಞೆ ಕಾಡಿತ್ತಂತೆ.[೪]
ಬ್ಯಾಂಡ್‌ನ ಹಲವಾರು ಲೈವ್ ಕಾರ್ಯಕ್ರಮಗಳು ಅಂತಿಮವಾಗಿ ಒಂದು ಸಂಕಲನದ ರೂಪ ಪಡೆದುಕೊಂಡು ಬಿಡುಗಡೆಯಾಗಿದ್ದು 1997 ಜುಲೈ 29ರಂದುOfficial Live: 101 Proof . ಇದು ಹದಿನಾಲ್ಕು ಹಾಡುಗಳನ್ನು ಹಾಗೂ “ವೇರ್ ಯು ಕಮ್ ಫ್ರಾಮ್” ಹಾಗೂ “ಐ ಕಾಂಟ್ ಹೈಡ್” ಎಂಬ ಎರಡು ಹೊಸ ಸ್ಟುಡಿಯೋ ಧ್ವನಿಮುದ್ರಣಗಳನ್ನು ಒಳಗೊಂಡಿತ್ತು. ನೇರ ಕಾರ್ಯಕ್ರಮದ ಆಲ್ಬಂ ಬಿಡುಗಡೆಯಾಗುವ ಎರಡು ವಾರಗಳು ಮೊದಲು ಪಂತೇರಾ ತಮ್ಮ ಕೌಬಾಯ್ಸ್ ಫ್ರಾಮ್ ಹೆಲ್ ಗೆ ಪ್ರಥಮ ಪ್ಲಾಟಿನಂ ಆಲ್ಬಂ ಅನ್ನು ಸ್ವೀಕರಿಸಿತು. ಆದಾಗಿ ನಾಲ್ಕು ತಿಂಗಳ ನಂತರ ವಲ್ಗರ್ ಡಿಸ್‌ಪ್ಲೇ ಆಫ್ ಪವರ್ ಹಾಗೂ ಫಾರ್ ಬಿಯಾಂಡ್ ಡ್ರೈವನ್ ಆಲ್ಬಂಗಳಿಗೂ ಪ್ಲಾಟಿನಂ ಆಲ್ಬಂ ದೊರೆಯಿತು.[೧೯] ಹಾಗೆಯೇ 1997 ಹಾಗೂ 1998 ರಲ್ಲಿ ಕ್ರಮವಾಗಿ ಪಂತೇರಾ ಬ್ಯಾಂಡ್ ಟ್ರೆಂಡ್‌ಕಿಲ್ಸ್ ನ “ಸುಸೈಡ್ ನೋಟ್ (ಪಾರ್ಟ್ 1)” ಹಾಗೂ ಕೌಬಾಯ್ಸ್ ನ “ಸಿಮೆಟರಿ ಗೇಟ್ಸ್” ಹಾಡುಗಳಿಗೆ “ಅತ್ಯುತ್ತಮ ಮೆಟಲ್ ಪ್ರದರ್ಶನ” ಕ್ಕೆ ದ್ವಿತೀಯ ಹಾಗೂ ತೃತೀಯ ಗ್ರ್ಯಾಮಿ ಪ್ರಶಸ್ತಿಗೆ ನಾಮಕರಣಗೊಂಡಿದ್ದವು.
1997ರಲ್ಲೂ ಕೂಡ ಓಝ್ ಫೆಸ್ಟ್‌ನಲ್ಲಿ ವೇದಿಕೆಯನ್ನೇರಿದ ಪಂತೇರಾ ಓಝಿ ಓಸ್ಬೊರ್ನ್, ಬ್ಲ್ಯಾಕ್ ಸಬ್ಬಾತ್, ಮರಿಲಿನ್ ಮ್ಯಾನ್ಸನ್, ಟೈಪ್ ಒ ನೆಗೆಟಿವ್, ಫಿಯರ್ ಫ್ಯಾಕ್ಟರಿ, ಮಿಷಿನ್ ಹೆಡ್ ಹಾಗೂ ಪವರ್ ಮ್ಯಾನ್ 5000 ಮುಂತಾದ ಘಟಾನುಘಟಿಗಳ ಜೊತೆಯಲ್ಲಿ ಪ್ರದರ್ಶನ ನೀಡಿತ್ತು. ಇದರ ಜೊತೆಗೆ, 1998ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಓಝ್‌ಫೆಸ್ಟ್ ಪ್ರವಾಸದಲ್ಲೂ ಬ್ಯಾಂಡ್ ಬ್ಲ್ಯಾಕ್ ಸಬ್ಬಾತ್, ಓಝಿ ಒಸ್ಬೊರ್ನ್, ಫೂ ಫೈಟರ್ಸ್, ಸ್ಲೇಯರ್, ಸೋಲ್‌ಫ್ಲೈ, ಫಿಯರ್ ಫ್ಯಾಕ್ಟರಿ ಹಾಗೂ ಥೆರಪಿ? ಬ್ಯಾಂಡಗಳ ಜೊತೆ ಧ್ವನಿ ಸೇರಿಸಿತ್ತು.
ಈ ಮಧ್ಯೆ, ಅನ್ಸೆಲ್ಮೋ ಇನ್ನಷ್ಟು ಉಪ-ಯೋಜನೆಗಳಲ್ಲಿ ನಿರತರಾಗಿದ್ದರು. 1999ರಲ್ಲಿ ಬಿಡುಗಡೆಯಾದ ನೆಕ್ರೊಫಾಗಿಯಾ ಬ್ಯಾಂಡ್‌ನ ಹೊಲೊಕಾಸ್ತೊ ದೆ ಲಾ ಮಾರ್ತ್ ಆಲ್ಬಂಗೆ “ಆಂಟನ್ ಕ್ರೌಲಿ” ಹೆಸರಿನಲ್ಲಿ ಗಿಟಾರ್ ವಾದಕರಾಗಿ ಕಾರ್ಯನಿರ್ವಹಿಸಿದರು. ಚರ್ಚ್ ಆಫ್ ಸ್ಯಾಟನ್ ನ ಸ್ಥಾಪಕ ಆಂಟನ್ ಲಾವೇ ಹಾಗೂ ಇಂದ್ರಜಾಲ ತಜ್ಞ ಅಲೆಸ್ಟರ್ ಕ್ರೌಲಿ ಅವರ ಹೆಸರುಗಳನ್ನೂ ಈ ಆಲ್ಬಂ ಒಳಗೊಂಡಿತ್ತು. ಅವರು ತಾತ್ಕಾಲಿಕವಾಗಿ ಬ್ಲ್ಯಾಕ್ ಮೆಟಲ್ ಸೂಪರ್ ಗ್ರೂಪ್ ಐಬನ್ ಹಾಗೂ 2000ರಲ್ಲಿ ಬಿಡುಗಡೆಯಾದ ಆ ಬ್ಯಾಂಡ್‌ನ ಆಲ್ಬಂನಲ್ಲೂ ಅನ್ಸೆಲ್ಮೋ ತಮ್ಮ ಸೇವೆ ಸಲ್ಲಿಸಿದರು. ಅನ್ಸೆಲ್ಮೋ ಅವರ ಇನ್ನೊಂದು “ಆಂಟನ್ ಕ್ರೌಲಿ” ಯೋಜನೆಯೆಂದರೆ, ಬ್ಯ್ಲಾಕ್ ಮೆಟಲ್ ಬ್ಯಾಂಡ್ ವೈಕಿಂಗ್ ಕ್ರೌನ್. ಅಬ್ಬೋಟ್ ಸಹೋದರರು ಹಾಗೂ ರೆಕ್ಸ್ ಬ್ರೌನ್ ತಮ್ಮದೇ ಆದ ಹೆವಿ ಮೆಟಲ್/ದೇಸಿ ಸಂಗೀತ ಯೋಜನೆಯೊಂದನ್ನು ಕೈಗೊಂಡರು. ಅದೇ ಸಮಯದಲ್ಲಿ ರೆಬೆಲ್ ಮೀಟ್ಸ್ ರೆಬೆಲ್ ಕೂಡ ಡೇವಿಡ್ ಅಲೆನ್ ಕೊ ಜೊತೆ ಯೋಜನೆಯೊಂದಕ್ಕೆ ಕೈ ಹಾಕಿತು.
ಪಂತೇರಾ 1999ರಲ್ಲಿ ನಡೆದ ಸ್ಟ್ಯಾನ್ಲೀ ಕಪ್ ಹಾಕಿ ಚಾಂಪಿಯನ್‌ಶಿಪ್ ನಲ್ಲಿ ತಮ್ಮ ಫೇವರಿಟ್ ಹಾಕಿ ತಂಡದ ಕುರಿತು ಬರೆದಿದ್ದ ಹಾಡಿಗೆ ಎನ್‌ಎಚ್‌ಎಲ್ ಡಲ್ಲಾಸ್ ಸ್ಟಾರ್ಸ್‌ನ ಅಭಿಮಾನಿಗಳು ಹುಚ್ಚೆದ್ದು ಹೆಜ್ಜೆ ಹಾಕಿದ್ದರು. ಪಂದ್ಯಾವಳಿ ನಡೆದ ಕಾಲಮಾನ ಪೂರ್ತಿ ಅಲ್ಲಿನ ಅಭಿಮಾನಿಗಳು ಪಂತೇರಾದ ತಂಡದ ಜೊತೆ ಸಖ್ಯ ಬೆಳೆಸಿದ್ದರು. ಡ್ರಮ್ ವಾದಕ ವಿನ್ನಿ ಪೌಲ್ ಏರ್ಪಡಿಸಿದ್ದ ಸ್ಟ್ಯಾನ್ಲಿ ಕಪ್ ಔತಣಕೂಟದಲ್ಲಿ ಗೈ ಕಾರ್ಬನ್ಯೂ ವಿನ್ನಿ ಪೌಲ್ ಮನೆಯ ಮಹಡಿಯ ಮೇಲೆ ನಿಂತು ಕೊಂಡು ತನ್ನ ಮನೆಯ ಈಜುಕೊಳಕ್ಕೆ ಎಸೆಯುವ ಭರದಲ್ಲಿ ಸ್ಟ್ಯಾನ್ಲಿ ಕಪ್ ಅನ್ನು ಊನಗೊಳಿಸಿದ್ದ. ಕಾಂಕ್ರೀಟ್ ಕಟ್ಟೆಯ ಮೇಲೆ ಬಿದ್ದು ಘಾಸಿಕೊಂಡಿದ್ದ ಕಪ್ ಅನ್ನು ನಂತರ ಎನ್‌ಎಚ್‌ಎಲ್ ನಿಯೋಜಿಸಿದ್ದ ಅಕ್ಕಸಾಲಿಗರು ಸರಿಪಡಿಸಿದ್ದರು.
ರೀಇನ್ವೆಂಟಿಂಗ್ ದ ಸ್ಟೀಲ್ ಹಾಗೂ ಒಡಕು (2000–2003)
[ಬದಲಾಯಿಸಿ]1999ರಲ್ಲಿ ಮತ್ತೊಮ್ಮೆ ಅನ್ಸೆಲ್ಮೋ ಜೊತೆ ಧ್ವನಿಮುದ್ರಣ ಸ್ಟುಡಿಯೋ ಮೆಟ್ಟಿಲು ತುಳಿದ ಪಂತೇರಾ ತನ್ನ ಕೊನೆಯ ಆಲ್ಬಂ ರೀಇನ್ವೆಂಟಿಂಗ್ ದ ಸ್ಟೀಲ್ ಅನ್ನು 2000 ಮಾರ್ಚ್ 21 ರಲ್ಲಿ ಬಿಡುಗಡೆ ಮಾಡಿತು. ಬಿಲ್‌ಬೋರ್ಡ್ 200ರಲ್ಲಿ #4 ರ ಸ್ಥಾನಗಳಿಸಿದ ಸ್ಟೀಲ್ “ರೆವಲ್ಯೂಷನ್ ಈಸ್ ಮೈ ನೇಮ್” ಹಾಗೂ “ಗಾಡಮ್ ಎಲೆಕ್ಟ್ರಿಕ್” ಹಾಡುಗಳನ್ನು ಒಳಗೊಂಡಿತ್ತು. ಇವುಗಳಲ್ಲಿ ಎರಡನೆಯದರಲ್ಲಿ ಕೆರ್ರಿ ಕಿಂಗ್ ಕೂಡ ಮುಖದೋರಿದ್ದು ಅದನ್ನು ಡಲ್ಲಾಸ್‌ನಲ್ಲಿ ನಡೆದ ಓಝ್‌ಫೆಸ್ಟ್‌ನಲ್ಲಿ ಮುದ್ರಿಸಿಕೊಳ್ಳಾಗಿತ್ತು. “ರೆವಲ್ಯೂಷನ್ ಈಸ್ ಮೈ ನೇಮ್” “ಅತ್ಯುತ್ತಮ ಮೆಟಲ್ ಪ್ರದರ್ಶನ” ಎಂಬುದಾಗಿ 2001ನೇ ಸಾಲಿನ ಗ್ರ್ಯಾಮಿಗೆ ನಾಮಕರಣಗೊಂಡಿತ್ತು. ಹೀಗೆ ನಾಮಕರಣಗೊಂಡ ಬ್ಯಾಂಡ್‌ನ ನಾಲ್ಕನೇ ಹಾಡು ಇದು.
2000ರಲ್ಲಿ, ಒಝಿ ಒಸ್ಬೊರ್ನ್, ಗಾಡ್ಸಮ್ಯಾಕ್, ಸ್ಟ್ಯಾಟಿಕ್-ಎಕ್ಸ್, ಮೆಥಡ್ಸ್ ಆಫ್ ಮೆಹೆಮ್, ಇಂಕ್ಯುಬಸ್, ಪಿ.ಓ.ಡಿ., ಬ್ಲ್ಯಾಕ್ ಲೇಬಲ್ ಸೊಸೈಟಿ, ಕ್ವೀನ್ಸ್ ಆಫ್ ದ ಸ್ಟೋನ್ ಏಜ್ ಹಾಗೂ ಅಪಾರ್ಟ್‌ಮೆಂಟ್ 26 ತಂಡಗಳೊಡಗೂಡಿ ಪಂತೇರಾ ಕೂಡ ಓಝ್‌ಫೆಸ್ಟ್‌ನಲ್ಲಿ ಹೆಜ್ಜೆ ಹಾಕಿತ್ತು. ನವಂಬರ್ ನಲ್ಲಿ ಬ್ಯಾಂಡ್ ತನ್ನ ಯೋಜಿತ ಪ್ರವಾಸವನ್ನು ರದ್ದು ಪಡಿಸಿತು. ಹೀಗೆ ರದ್ದು ಪಡಿಸುವುದರೊಳಗಾಗಿಯೇ ಎಂಟನೇ ವಾರ್ಷಿಕ ಹೌಸ್ ಆಫ್ ಶಾಕ್ ಈವೆಂಟ್‌ನಲ್ಲಿ ಪ್ರದರ್ಶನ ನೀಡುವ ವೇಳೆಯಲ್ಲಿ ಕೆಳಗೆ ಬಿದ್ದು ಅನ್ಸೆಲ್ಮೋ ಪಕ್ಕೆ ಮುರಿದುಕೊಂಡಿದ್ದರು.[೨೦]
ಮತ್ತೊಮ್ಮೆ ಪ್ರವಾಸಕ್ಕೆ ಹಿಂದಿರುಗಿದ ಬ್ಯಾಂಡ್ ಅಮೆರಿಕ (ಅಲ್ಲಿ ಅವರನ್ನು ಸ್ಪೊಂಜ್‌ಬೊಬ್ ಸ್ಕ್ವೇರ್ಪ್ಯಾಂಟ್ಸ್ ಅವರ “ಪ್ರಿ-ಹೈಬರ್ ನೇಶನ್ ವೀಕ್” ಪ್ರದರ್ಶನಕ್ಕೆ ಅತಿಥಿ ಕಲಾವಿದರಾಗಿ ಬಂದಿದ್ದರು), ಕೆನಡಾ, ಸೌತ್ ಕೊರಿಯಾ, ಆಸ್ಟ್ರೇಲಿಯಾ, ಯುರೋಪ್ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಸಗೈದಿತು. ಯುರೋಪ್‌ನ ಪ್ರವಾಸ ಅತ್ಯಂತ ಚಿಕ್ಕ ಅವಧಿಯದಾಗಿತ್ತು. 2001 ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ಪರಿಣಾಮವಾಗಿ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದರಿಂದ ಆರು ದಿನಗಳ ಕಾಲ ಅವರು ಐರ್ಲ್ಯಾಂಡ್‌ನ ಡಬ್ಲಿನ್‌ನಲ್ಲಿಯೇ ಸಿಲುಕಬೇಕಾಯಿತು. ಬಹುಶಃ ಇದೇ ಕೊನೆಯ ಬಾರಿ ಇರಬೇಕು ಪಂತೇರಾ ತಂಡ ಒಂದಾಗಿ ಪ್ರದರ್ಶನ ನೀಡಿದ್ದು. ಸ್ವದೇಶಕ್ಕೆ ಹಿಂದಿರುಗಿದ ಬಳಿಕ 2002ರಲ್ಲಿ ಬ್ಯಾಂಡ್ ತನ್ನ ನಾಲ್ಕನೇ ಆಲ್ಬಂ ಅನ್ನು ಬಿಡುಗಡೆಗೊಳಿಸಲು ಚಿಂತನೆ ನಡೆಸಿತ್ತು. ಹಾಗೂ, ಅದೇ ವರ್ಷದಲ್ಲಿ ಮತ್ತೊಂದು ಸ್ಟುಡಿಯೋ ಆಲ್ಬಂ ಅನ್ನು ಚಿತ್ರೀಕರಿಸಲೂ ತಂಡ ನಿಶ್ಚಯಿಸಿತ್ತು. ಆದರೆ ಅದ್ಯಾವುದೂ ನನಸಾಗಲೇ ಇಲ್ಲ.[೨೧]
ಅನ್ಸೆಲ್ಮೋ ಮತ್ತೊಮ್ಮೆ ಹಲವಾರು ಉಪ-ಯೋಜನೆಗಳಲ್ಲಿ ತೊಡಗಿಕೊಂಡರು. 2002 ಮಾರ್ಚ್ ತಿಂಗಳಲ್ಲಿ ಡೌನ್ ತನ್ನ ಎರಡನೇಯ ಸ್ಟುಡಿಯೋ ಆಲ್ಬಂ Down II: A Bustle in Your Hedgerow ಅನ್ನು ಬಿಡುಗಡೆ ಮಾಡಿತು. 1999ರಲ್ಲಿಯೇ ಟಾಡ್ ಸ್ಟ್ರೇಂಜ್ ತಂಡವನ್ನು ತೊರೆದಿದ್ದರಿಂದ ತೆರವಾಗಿದ್ದ ಬಾಸ್ ವಾದನದ ಜವಾಬ್ದಾರಿ ರೆಕ್ಸ್ ಬ್ರೌನ್ ಹೆಗಲೇರಿತ್ತು. ನಂತರ ಬ್ರೌನ್ ’ಡೌನ್’ ತಂಡದ ಪೂರ್ಣಾವಧಿ ಸದಸ್ಯರಾದ ಬ್ರೌನ್ ನಂತರ 2007ರಲ್ಲಿ ಬಿಡುಗಡೆಯಾದ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದರು. ಅದೇ ವರ್ಷದ ಮೇ ತಿಂಗಳಲ್ಲಿ ಯೂಸ್ ಒನ್ಸ್ ಎಂಡ್ ಡಿಸ್ಟ್ರಾಯ್ ಎಂಬ ಅನ್ಸೆಲ್ಮೋ ಅವರ ಸೂಪರ್ ಜಾಯಿಂಟ್ ರಿಚುವಲ್ ಪ್ರಥಮ ಬಾರಿಗೆ ಬಿಡುಗಡೆಯಾಯಿತು. 2001 ಸೆಪ್ಟೆಂಬರ್ 11ರ ಘಟನೆಯಿಂದ ಘಾಸಿಗೊಂಡಿರುವ ಅನ್ಸೆಲ್ಮೋ ಒಂದು ವರ್ಷಗಳ ಕಾಲ ತಂಡದ ಪ್ರದರ್ಶನಗಳಿಂದ ದೂರವಿರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವಿನ್ನಿ ಪೌಲ್ ಘೋಷಿಸಿದ್ದರು. ಆದರೆ ತಮ್ಮ ಸೂಪರ್ ಜಾಯಿಂಟ್ ರಿಚುವಲ್ ಹಾಗೂ ಡೌನ್ ಕುರಿತು ಅನ್ಸೆಲ್ಮೋ ಪ್ರವಾಸ ಕೈಗೊಂಡಿದ್ದು ವಿನ್ನಿ ಅವರ ಹೇಳಿಕೆಗೆ ವ್ಯತಿರಿಕ್ತವಾಗಿತ್ತು. ಇದರಿಂದ ಹತಾಶರಾದ ಅಬ್ಬೋಟ್ ಸಹೋದರರು ಅನ್ಸೆಲ್ಮೋ ಹಿಂದಿರುಗಬಹುದು ಎಂಬ ಸಹನೆಯಲ್ಲಿ ಕಾದರು. ಇಷ್ಟೆಲ್ಲಾ ಆದಾಗ್ಯೂ ತಂಡದ ಸದಸ್ಯರ ಪರಸ್ಪರ ಒಪ್ಪಿಗೆಯ ಮೇರೆಗೇ ತಾವು ಪಂತೇರಾದಿಂದ ಹೊರಬಿದ್ದದ್ದಾಗಿ ಅನ್ಸೆಲ್ಮೋ ಹೇಳಿಕೆ ನೀಡಿದ್ದರು.[೨೨]
ಬ್ಯಾಂಡ್ ಅಧಿಕೃತವಾಗಿ ವಿಸರ್ಜನೆಯಾದ 2003ರಲ್ಲಿಯೇ ಅವರ “ಅತ್ಯುತ್ತಮ” ಎನ್ನಬಹುದಾದ ಸಂಗೀತದ ಸಂಕಲನ ಬಿಡುಗಡೆಯಾಯಿತು(ಸೆಪ್ಟೆಂಬರ್ 23ರಂದು). ಅದೇ ಸಂದರ್ಭದಲ್ಲಿಯೇ ಅಬ್ಬೋಟ್ ಸಹೋದರರು ಅನ್ಸೆಲ್ಮೋ ಪಂತೇರಾ ತಂಡವನ್ನು ತೊರೆದ ಕುರಿತು ಅಧಿಕೃತ ಹೇಳಿಕೆ ನೀಡಿದ್ದರು. ಬ್ಯಾಂಡ್‌ನ ವಿಸರ್ಜನೆಯಾದದ್ದು ಹೇಳಿಕೊಳ್ಳುವಷ್ಟು ಸೌಹಾರ್ಧವಾಗಿರಲಿಲ್ಲ. ತಂಡದ ಮಾಜಿ ಸದಸ್ಯರು ಹೆವಿ ಮೆಟಲ್ ಹಾಗೂ ಸಂಗೀತ ಗೋಷ್ಠಿಯ ಮೂಲಕ ಒಬ್ಬರನ್ನೊಬ್ಬರು ದೂಷಿಸತೊಡಗಿದ್ದರು. ಪಂತೇರಾವನ್ನು ಒಗ್ಗೂಡಿಸಲು ತಾವು ಅನ್ಸೆಲ್ಮೋ ಅವರನ್ನು ದೂರವಾಣಿಯ ಮುಖಾಂತರ ಸಾಕಷ್ಟು ಬಾರಿ ಸಂಧಿಸಲು ಪ್ರಯತ್ನಿಸಿದ್ದಾಗಿ ಅಬ್ಬೋಟ್ ಸಹೋದರರು ಹಾಗೂ ಪಂತೇರಾ ತಂಡದ ಸದಸ್ಯರು ಹೇಳಿಕೆ ನೀಡಿದರೆ ಅತ್ತ, ಅವರೆಂದೂ ತಮಗೆ ದೂರವಾಣಿ ಕರೆ ಮಾಡಲೇ ಇಲ್ಲ ಎಂದು ಅನ್ಸೆಲ್ಮೋ ದೂಷಿಸತೊಡಗಿದರು. ಆದರೆ ಈ ಶಾಬ್ದಿಕ ಕದನದಲ್ಲಿ ಸಿಕ್ಕು ಹೈರಾಣಾಗಿದ್ದು ಮಾತ್ರ ರೆಕ್ಸ್ ಬ್ರೌನ್. ಈ ಕುರಿತು ಹೇಳಿಕೆ ನೀಡಿದ ಅವರು, “ಇದು ಅವರು ಹೇಳಿದರು, ಅವಳು ಹೇಳಿದಳು ಎಂಬ ಅಂತೆಗಳ ಸಂತೆ. ಇದರಲ್ಲಿ ಮೂಗು ತೂರಿಸಲು ನನಗೆ ಸುತಾರಾಂ ಇಷ್ಟವಿಲ್ಲ” ಎಂದು ರೋಸಿ ನುಡಿದಿದ್ದರು.[೪] ಮೆಟಲ್ ಮ್ಯಾಗಜೀನ್ ಪತ್ರಿಕೆಗೆ 2004ರಲ್ಲಿ ಅನ್ಸೆಲ್ಮೋ ನೀಡಿದ ಹೇಳಿಕೆ “ಒದೆ ತಿನ್ನಲು ಡಿಮೆಬಾಗ್ ಲಾಯಕ್ಕಿದ್ದಾರೆ” ಪಂತೇರಾ ತಂಡದಲ್ಲಿ ಮೂಡಿದ್ದ ಕಂದಕಕ್ಕೆ ಕನ್ನಡಿ ಹಿಡುವಂತಿತ್ತು. ತದ ನಂತರ ಸ್ಪಷ್ಟೀಕರಣ ನೀಡಿದ ಅನ್ಸೆಲ್ಮೋ ಅದು ವ್ಯಂಗ್ಯವಾಗಿ ನುಡಿದದ್ದು ಎಂದಿದ್ದರು.[೪] 2004ರಲ್ಲಿ, ತಮ್ಮ ಸಹೋದರನ ಹತ್ಯೆಯ ಬಳಿಕ ಈ ಸ್ಪಷ್ಟೀಕರಣವನ್ನು ತಳ್ಳಿ ಹಾಕಿದ ವಿನ್ನಿ ಪೌಲ್, “ಅನ್ಸೆಲ್ಮೋ ಮಾತುಗಳನ್ನೇನೂ ತಿರುಚಲಾಗಿರಲಿಲ್ಲ. ತಾನು ಅವರ ಸಂದರ್ಶನದ ಸಂಪೂರ್ಣ ಮುದ್ರಣವನ್ನು ಆಲಿಸಿದ್ದು ಪತ್ರಿಕೆಯಲ್ಲಿ ಪ್ರಕಟವಾದ ಭಾಷೆಯನ್ನೇ ಅವರು ಚಾಚೂ ತಪ್ಪದೇ ಬಳಸಿದ್ದಾರೆ” ಎಂದು ಬಿರುನುಡಿದಿದ್ದರು.[೪]
2004 ಜುಲೈ ತಿಂಗಳಲ್ಲಿ ವಲ್ಗರ್ ಡಿಸ್‌ಪ್ಲೇ ಆಫ್ ಪವರ್ ಡಬಲ್-ಪ್ಲಾಟಿನಂಗೆ ತೆರಳಿತು ಹಾಗೂ ನಂತರದ ತಿಂಗಳಿನಲ್ಲಿ ದ ಗ್ರೇಟ್ ಸದರ್ನ್ ಟ್ರೆಂಡ್‌ಕಿಲ್ ಕೂಡ ಪ್ಲಾಟಿನಂ ಬಳಿ ಸಾರಿತು.[೧೯]
ಡ್ಯಾಮೇಜ್‌ಪ್ಲ್ಯಾನ್, ಡಾರೆಲ್ ರ ಹತ್ಯೆ ಹಾಗೂ ಪರಿಣಾಮ (2004)
[ಬದಲಾಯಿಸಿ]ಪಂತೇರಾ ತಂಡ ವಿಸರ್ಜನೆಯಾದ ಬಳಿಕ ಡಾರೆಲ್, ವಿನ್ನಿ ಗಾಯಕ ಪ್ಯಾಟ್ ಲಾಚ್‌ಮ್ಯಾನ್ ಹಾಗೂ ಬಾಸ್ ವಾದಕ ಬಾಬ್ ಝಿಲ್ಲಾ ಜೊತೆಗೂಡಿ ತಮ್ಮದೇ ಆದ ಡ್ಯಾಮೇಜ್‌ಪ್ಲ್ಯಾನ್ ಎಂಬ ಬ್ಯಾಂಡ್ ಒಂದನ್ನು ಹುಟ್ಟು ಹಾಕಿದರು. ಈ ತಂಡ ತನ್ನ ಮೊದಲ ಆಲ್ಬಂ ನ್ಯೂ ಫೌಂಡರ್ ಪವರ್ ಅನ್ನು ಫೆಬ್ರುವರಿ 2004ರಲ್ಲಿ ಬಿಡುಗಡೆ ಮಾಡಿತು. ವ್ಯವಹಾರಿಕವಾಗಿ ಈ ಆಲ್ಬಂ ಯಶಸ್ವಿಯಾಯಿತು. ಮೊದಲ ವಾರದಲ್ಲಿಯೇ 44, 000ಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿದ್ದವು. ವರ್ಷವೊಂದರಲ್ಲಿಯೇ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಆದರೂ, ಪಂತೇರಾದ ಮೆಟೀರಿಯಲ್‌ನ ಗುಣಮಟ್ಟಕ್ಕೆ ಡ್ಯಾಮೇಜ್‌ಪ್ಲ್ಯಾನ್ ಸರಿಸಾಟಿಯಲ್ಲ ಎಂಬ ಭಾವನೆ ಅಭಿಮಾನಿಗಳಲ್ಲಿ ಬಂದಿದ್ದರೆ ಅಚ್ಚರಿ ಇಲ್ಲ.[೪]
ಆದರೆ ದುರಂತ ಮಗ್ಗುಲಲ್ಲೇ ಕಾದಿತ್ತು. 2004 ಡಿಸೆಂಬರ್ 8ರಂದು ಓಹಾಯೋನ ಕೋಲಂಬಸ್‌ನಲ್ಲಿ ನಡೆಯುತ್ತಿದ್ದ ಆಲ್ಬಂ ಪ್ರಚಾರ ಸಂಗೀತ ಗೋಷ್ಠಿಯಲ್ಲಿ ಮೊದಲ ಹಾಡು ಮುಗಿದದ್ದೇ ತಡ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಾಜಿ ನೌಕಾಪಡೆ ಅಧಿಕಾರಿ ನಾಥನ್ ಗೇಲ್,25, ವೇದಿಕೆ ಮೇಲೇರಿ ಡಾರೆಲ್,38,ಗೆ ಗುಂಡಿಕ್ಕಿ ಹತ್ಯೆಗೈದ. ಅಲ್ಲಿನ ಟ್ಯಾಟೂ ಡೀಲರ್ ಜೊತೆ ಶುರುವಾದ ವಾಗ್ಯುದ್ಧ ಡಾರೆಲ್ ಹತ್ಯೆಯಲ್ಲಿ ಪರ್ಯಾವಸನಗೊಂಡಿತ್ತು. ನಾಥನ್ ಗೇಲ್ ಡಾರೆಲ್ ಒಬ್ಬರನ್ನೇ ಹತ್ಯೆಗೈಯಲಿಲ್ಲ, ಸ್ಥಳದಲ್ಲಿ ಹಾಜರಿದ್ದ ಅಭಿಮಾನಿ ನಾಥನ್ ಬ್ರೇ, 23, ಕ್ಲಬ್ ಉದ್ಯೋಗಿ ಎರಿನ್ ಹಲ್ಕ್,29, ಹಾಗೂ ಪಂತೇರಾ ತಂಡದ ಸೆಕ್ಯುರಿಟಿ ಅಧಿಕಾರಿ ಜೆಫ್ ”ಮೇಹೆಮ್” ಥಾಮ್ಸನ್,40, ಅವರಿಗೂ ಗುಂಡಿಕ್ಕಿದ್ದ. ಪೊಲೀಸ್ ಅಧಿಕಾರಿ ಜೇಮ್ಸ್ ನಿಗ್ಗೆಮೆಯೆರ್ ಗುಂಡಿಗೆ ಹತನಾಗುವ ಮುಂಚೆ ನಾಥನ್ ಗೇಲ್, ಪಂತೇರಾ ಹಾಗೂ ಡ್ಯಾಮೇಜ್‌ಪ್ಲ್ಯಾನ್‌ನ ದೀರ್ಘಕಾಲೀನ ಡ್ರಮ್ ತಂತ್ರಜ್ಞ ಜಾನ್”ಕ್ಯಾಟ್”ಬ್ರೂಕ್ಸ್ ಹಾಗೂ ಡ್ಯಾಮೇಜ್‌ಪ್ಲ್ಯಾನ್‌ನ ಪ್ರವಾಸದ ಉಸ್ತುವಾರಿ ಹೊತ್ತಿದ್ದ ಮ್ಯಾನೇಜರ್ ಕ್ರಿಸ್ ಪಲುಸ್ಕಾ ಅವರನ್ನೂ ಗಾಯಗೊಳಿಸಿದ್ದ.[೨೩]
ಹತ್ಯೆ ನಡೆದ ಬಳಿಕ ಡಾರೆಲ್‌ನ ಗೆಳತಿ ರಿಟಾ ಹನೀಗೆ ಅನ್ಸೆಲ್ಮೋ ಹಲವು ಬಾರಿ ದೂರವಾಣಿ ಕರೆ ಮಾಡಿದ್ದರು. ದೂರವಾಣಿ ಕರೆಯನ್ನು ಸ್ವೀಕರಿಸಿದ್ದ ರೀಟಾ ಹನೀ ಒಂದು ವೇಳೆ ಅನ್ಸೆಲ್ಮೋ ಡಾರೆಲ್‌ನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರೆ “ಅನ್ಸೆಲ್ಮೋನ ತಲೆ ಒಡೆಯುವುದಾಗಿ” ಹೇಳಿದ್ದರು.[೪] ಡಾರೆಲ್ ಹತ್ಯೆಯ ಬಳಿಕ ಸಾರ್ವಜನಿಕ ಹೇಳಿಕೆ ನೀಡಿದ್ದ ಅನ್ಸೆಲ್ಮೋ ಡಾರೆಲ್ ಹತ್ಯೆಯಾಗುವುದಕ್ಕಿಂತ ಮೊದಲು ಬ್ಯಾಂಡ್ ಅನ್ನು ಒಗ್ಗೂಡಿಸುವ ಕುರಿತು ಚಿಂತನೆ ನಡೆಸಿದ್ದ ಎಂದು ಹೇಳಿದ್ದರು.[೨೪] ಅದೇನೇ ಇರಲಿ, ಡಾರೆಲ್ ಹತ್ಯೆಯಾಗಿ ಒಂದು ವರ್ಷದ ಬಳಿಕ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ ವಿನ್ನಿ ಬ್ಯಾಂಡ್‌ನ ಒಗ್ಗೂಡುವಿಕೆ ಅಸಾಧ್ಯವಾಗಿತ್ತು ಎಂದು ಒಪ್ಪಿಕೊಂಡಿದ್ದರು.[೨೫]
2006 ಮೇ 11ರಂದು ಪಂತೇರಾ ಕುರಿತ VH1 ಬಿಹೈಂಡ್ ದ ಮ್ಯೂಸಿಕ್ ಅಧ್ಯಾಯದ ಪ್ರೀಮಿಯರ್ ನಡೆಯಿತು. ಡಾರೆಲ್ ಹತ್ಯೆಯನ್ನೇ ಮುಖ್ಯವಾಗಿಟ್ಟುಕೊಂಡಿದ್ದ ಆ ಅಧ್ಯಾಯದಲ್ಲಿ ಬ್ಯಾಂಡ್‌ನ ಗ್ಲ್ಯಾಮ್ ಮೆಟಲ್‌ನ ಪ್ರಾರಂಭ, ಸಂಗೀತ ಪ್ರಕಾರದಲ್ಲಿ ತಿರುವು ಪಡೆದುಕೊಳ್ಳುತ್ತಲೂ ಮೇಲ್ಮುಖಗೊಂಡ ಅದರ ಜನಪ್ರಿಯತೆ, ಹಾಗೂ ಅನ್ಸೆಲ್ಮೋ ಮತ್ತು ಅಬ್ಬೋಟ್ ಸಹೋದರರ ನಡುವಿನ ಶೀತಲ ಸಮರ ಹಾಗೂ ಅದರಿಂದಾಗಿಯೇ ಛಿದ್ರಗೊಂಡ ಬ್ಯಾಂಡ್ ಹೀಗೆ ಪ್ರತಿಯೊಂದು ಆಯಾಮವನ್ನೂ ಈ ಅಧ್ಯಾಯ ಕಟ್ಟಿಕೊಡುತ್ತದೆ.
ಫಿಲ್ ಅನ್ಸೆಲ್ಮೋ ಜೊತೆ ಒಂದಾಗುವ ಸಾಧ್ಯತೆ ಏನಾದರೂ ಇದೆಯೇ ಎಂದು 2006ರಲ್ಲಿ ಕ್ರೇವ್ ಮ್ಯೂಸಿಕ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ವಿನ್ನಿ ಪೌಲ್ “ಖಂಡಿತವಾಗಿಯೂ ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿದ್ದರು.[೨೬] ಪಂತೇರಾದ ಮಾಜಿ ಡ್ರಮ್ ವಾದಕ ಕೊನೆಗೆ ಹಾಗೂ ಮುದ್ವಯ್ನೆ ಹಾಗೂ ನಥಿಂಗ್‌ಫೇಸ್ ಜೊತೆಗೂಡಿ ಹೆಲ್‌ಯಾ ಕುರಿತು ಕೆಲಸ ಪ್ರಾರಂಭಿಸಿದ್ದರು. ಅನ್ಸೆಲ್ಮೋ ಹಾಗೂ ಬ್ರೌನ್ ಡೌನ್ ಜೊತೆ ಮತ್ತೆ ಕೈ ಜೋಡಿಸಿದರು ಮತ್ತು 2007ರ ಕೆನಡಾ ಪ್ರವಾಸದಲ್ಲಿ ಹೆವನ್ ಅಂಡ್ ಹೆಲ್ ಮತ್ತು ಮೆಗಾಡೆತ್‌ಗೂ ಸಹಕಾರ ನೀಡಿದರು. ಅದರ ಜೊತೆಗೆ ಅವರ ಜಾಗತಿಕ ಮ್ಯಾಗ್ನಟಿಕ್ ಪ್ರವಾಸದ ಮೊದಲರ್ಧ ಭಾಗದಲ್ಲಿ ಮೆಟಾಲಿಕಾಗೂ ಸಾಥ್ ನೀಡಿದರು.
2010 ಮಾರ್ಚ್ 30ರಂದು ಪಂತೇರಾ ತನ್ನ ಗ್ರೇಟೆಸ್ಟ್ ಹಿಟ್‌ಗಳ ಸಂಕಲನ "1990-2000 : ಎ ಡಿಕೇಡ್ ಆಫ್ ಡಾಮಿನೇಷನ್"ಅನ್ನು ಲೋಕಾರ್ಪಣೆ ಮಾಡಿತು. ಪರಿಷ್ಕರಿಸಿದ 10 ಹಾಡುಗಳನ್ನು ಒಳಗೊಂಡಿದ್ದ ಸಂಕಲವನ್ನು ಹೆಚ್ಚಾಗಿ ವಾಲ್‌ಮಾರ್ಟ್ ಮಳಿಗೆಗಳಲ್ಲಿ ಲಭ್ಯವಿರುವಂತೆ ಮಾಡಲಾಯಿತು.[೨೭]
ಪರಂಪರೆ ಹಾಗೂ ಪ್ರಭಾವಗಳು
[ಬದಲಾಯಿಸಿ]ಮೆಟಲ್‌ಕೊರ್ ಹಾಗೂ ನು ಮೆಟಲ್ ಅಭಿವೃದ್ಧಿಯಲ್ಲಿ ಪಂತೇರಾದ ಪ್ರಭಾವ ಅಪಾರ.[೨೮] ಹೊಸ ಅಲೆಯ ಅಮೆರಿಕನ್ ಹೆವಿ ಮೆಟಲ್‌ನ ಸಂಸ್ಥಾಪಕರಲ್ಲಿ ಪಂತೇರಾ ಕೂಡ ಒಂದು ಎಂಬುದು ತರ್ಕಾತೀತ.[೨೯] ಪಾಪ್‌ಮ್ಯಾಟರ್ ಪ್ರಕಾರ, “ಡಾರೆಲ್ ಅಬ್ಬೋಟ್‌ರು ಹೆವಿ ಮೆಟಲ್ ಎಂಬ ಒಂದು ಸಂಪೂರ್ಣ ಸಂಗೀತ ಪ್ರಕಾರದ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ. ಕೌಬಾಯ್ಸ್ ಫ್ರಾಮ್ ಹೆಲ್ ಹಾಗೂ ವಲ್ಗರ್ ಡಿಸ್‌ಪ್ಲೇ ಆಫ್ ಪವರ್ ನಂತರ ಅಮೆರಿಕದ ಪ್ರತಿಯೊಬ್ಬ ಯುವ ಮೆಟಲ್ ಬ್ಯಾಂಡ್ ಒಂದಲ್ಲಾ ಒಂದು ರೀತಿಯಲ್ಲಿ ಗಿಟಾರ್ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಅವರಿಗೆ ಪ್ರೇರಣೆಗೆ ನೀಡಿದ ಮುದ್ರಣಗಳೆಂದರೆ; ಟೂಲ್, ಕಾರ್ನ್, ಲಿಂಪ್ ಬಿಝ್ಕಿತ್, ಸ್ಲಿಪ್‌ನಾಟ್, ಹೇಟ್‌ಬ್ರೀಡ್, ಲ್ಯಾಂಬ್ ಆಫ್ ಗಾಡ್, ಶಾಡೋಸ್ ಫಾಲ್, ಮಸ್ಟೊಡನ್...ಹೀಗೆ ಪಟ್ಟಿ ಅಂತ್ಯವೇ ಇಲ್ಲದೇ ಬೆಳೆಯುತ್ತದೆ”. ಎಂದು ಅಭಿಪ್ರಾಯಪಟ್ಟಿದ್ದು.[೩೦]
ಪ್ರಮುಖ ವೇದಿಕೆಯ ಕಾರ್ಯಕ್ರಮಕ್ಕಾಗಿ ಪಂತೇರಾ ಓಝ್‌ಫೆಸ್ಟ್ ಜೊತೆ ಎರಡು ಬಾರಿ ಪ್ರವಾಸ ಮಾಡಿದೆ. 1997ರಲ್ಲಿ ನಡೆದ ಎರಡನೇಯ ಹಾಗೂ 2000ದಲ್ಲಿ ಜರುಗಿದ ಐದನೇ ವಾರ್ಷಿಕ ಓಝ್‌ಫೆಸ್ಟ್‌ಗಳಲ್ಲಿ ಪಂತೇರಾ ಬ್ಯಾಂಡ್ ಕಾರ್ಯಕ್ರಮ ನೀಡಿತ್ತು. ತಮ್ಮ ವೃತ್ತಿಬದುಕಿನ ಹಾದಿಗುಂಟ ಪಂತೇರಾದ ಸದಸ್ಯರು ತಮ್ಮ ವಿಪರೀತ ಎನ್ನಬಹುದಾದ ಪಾರ್ಟಿಗಳು ಹಾಗೂ ವ್ಯಭಿಚಾರಕ್ಕೋಸ್ಕರ ಹೆಸರುವಾಸಿಯಾಗಿದ್ದರು. ಮಾತ್ರವಲ್ಲ, “ಬ್ಲ್ಯಾಕ್ ಟೂತ್ ಗ್ರಿನ್” ಎಂಬ ಮದ್ಯವನ್ನೂ ಅಧಿಕೃತವಾಗಿ ಹೊಂದಿದ್ದರು. ಕ್ರೌನ್ ರಾಯಲ್ ಅಥವಾ ಸೀಗ್ರಾಮ್ 7 ವಿಸ್ಕಿ ಮತ್ತು ಕೊಕಾಕೋಲದ ಮಿಶ್ರಣವಾಗಿರುವ ಈ ಮದ್ಯಕ್ಕೆ “ಬ್ಲ್ಯಾಕ್ ಟೂತ್ ಗ್ರಿನ್” (ಪರ್ಯಾಯ ನಾಮಗಳು “ಬ್ಲ್ಯಾಕ್ ಟೂತ್”, “ದ ಗ್ರಿನ್”, ಅಥವಾ “ಬಿಟಿಜಿ”) ಎಂಬ ಹೆಸರನ್ನು ಮೆಗಡೆಥ್‌ನ “ಸ್ವೆಟಿಂಗ್ ಬುಲೆಟ್ಸ್” ಎಂಬ ಸಾಹಿತ್ಯದಿಂದ ಪಡೆದುಕೊಳ್ಳಲಾಗಿತ್ತು.
ಪಂತೇರಾ ತನ್ನದೇ ವಿಶ್ಲೇಷಣೆಯಾದ “ಟೇಕ್ ನೋ ಶಿಟ್” ದೃಷ್ಟಿಕೋನವನ್ನು ಅಳವಡಿಸಿಕೊಂಡಿತು. ಮಾತ್ರವಲ್ಲ ಫಾರ್ ಬಿಯಾಂಡ್ ಡ್ರೈವನ್ ಆಲ್ಬಂನಲ್ಲಿರುವ ತನ್ನ ಜನಪ್ರಿಯ “5 ಮಿನಿಟ್ಸ್ ಅಲೋನ್” ಎಂಬ ಹಾಡಿನ ಮೂಲಕ ಅದನ್ನು ಮೂರ್ತ ದೃಷ್ಟಾಂತವನ್ನಾಗಿಸಿತು. ವಿನ್ನಿ ಪೌಲ್ ಪ್ರಕಾರ, ಸ್ಯಾನ್ ಡಿಯಾಗೊ, ಕ್ಯಾಲಿಫೋರ್ನಿಯಾ ಪ್ರದರ್ಶನದ ವೇಳೆಯಲ್ಲಿ ತಮಗೆ ಅಡಚಣೆ ಮಾಡುತ್ತಿದ್ದ ಒಬ್ಬ ತಂಟಕೋರನೊಬ್ಬನನ್ನು ಉದ್ದೇಶಿಸಿ ಅನ್ಸೆಲ್ಮೋ, "jump [his] ass and beat the shit out of him on the spot” ಎಂದು ಕಿಡಿಕಾರಿದ್ದರು. ಪರಿಣಾಮವಾಗಿ ಬ್ಯಾಂಡ್ ಮೇಲೆ ಮೊಕದ್ದಮೆ ದಾಖಲಿಸಲಾಯಿತು. ಪಂತೇರಾದ ಮ್ಯಾನೇಜರ್ ಗೆ ಕರೆ ಮಾಡಿದ ಆ ತಂಟೆಕೋರನ ತಂದೆ “ಫಿಲ್ ಅನ್ಸೆಲ್ಮೋ ಜೊತೆ ನನಗೆ ಕೇವಲ ಐದು ನಿಮಿಷಗಳ ಸಮಯ ನೀಡಿ, ಇಲ್ಲಿ ಬಿಗ್ ಡ್ಯಾಡಿ ಯಾರೆಂಬುದನ್ನು ಆತನಿಗೆ ಮನವರಿಕೆ ಮಾಡಿಕೊಡುತ್ತೇನೆ” ಎಂದಿದ್ದರು. ಅದಕ್ಕೆ ಪ್ರತ್ಯುತ್ತರ ನೀಡಿದ ಫಿಲ್ ಅನ್ಸೆಲ್ಮೋ “ಆ ಬೆಕ್ಕಿನ ತಂದೆಯೊಂದಿಗಿರಲು ನನಗೆ ಕೇವಲ ಐದು ನಿಮಿಷಗಳ ಸಮಯ ನೀಡಿ ಅವರ ಅಂಡಿನ ಮೇಲೆ ಬಾರಿಸುತ್ತೇನೆ” ಎಂದಿದ್ದರು.[೬]
ತಮ್ಮನ್ನು ತಾವು ಬಿಕರಿ ಮಾಡಿಕೊಳ್ಳದೇ, ಟ್ರೆಂಡ್‌ಗಳಿಗೆ ಬಲಿಯಾಗದ ತಮ್ಮ ರಾಜಿರಹಿತ ವೃತ್ತಿ ಜೀವನದ ಕುರಿತು ತಂಡದವರಿಗೆ ಅಗಾಧ ಹೆಮ್ಮೆ ಇತ್ತು. ಆ ಹೆಮ್ಮೆ ಅವರ ದ ಗ್ರೇಟ್ ಸದರ್ನ್ ಟ್ರೆಂಡ್‌ಕಿಲ್ ನ ಶೀರ್ಷಿಕೆ ಹಾಗೂ ಹಾಡುಗಳಲ್ಲಿ ಪ್ರತಿಧ್ವನಿತವಾಗುತ್ತದೆ. ಪಂತೇರಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಅನ್ಸೆಲ್ಮೋ ಈ ಕುರಿತು ತಮ್ಮದೇ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ;
ನಾವು ಹೆವಿ ಮೆಟಲ್, ’ಗ್ರಂಜ್‌ಮೆಟಲ್’, ಫಂಕ್ ಮೆಟಲ್, ರ್ಯಾಪ್ ಮೆಟಲ್ ಹೀಗೆ ಎಲ್ಲಾ ಬಗೆಯ ಟ್ರೆಂಡ್‌ಗಳ ಅಲೆಗಳನ್ನು ಎದುರಿಸಿಯೂ ಇಂದಿಗೂ ಚಾಲ್ತಿಯಲ್ಲಿದ್ದೇವೆ. ಸಿಕ್ಕಲ್ಲೆಲ್ಲಾ ಕೈಯಾಡಿಸುವುದಿಲ್ಲ ಎಂಬುದು ನಮ್ಮ ಸುತ್ತಮುತ್ತಲಿನವರ ಗಮನಕ್ಕೂ ಬರುವಂತಿದೆ. ನಾವು ಸೂಕ್ತ ಸ್ಥಾನದಲ್ಲಿಯೇ ಇದ್ದೇವೆ ಎಂಬುದು ನಮ್ಮ ಅಭಿಮಾನಿಗಳಿಗೂ ಗೊತ್ತಿದೆ.[೩೧]
ಹಾಗೆಯೇ, “ವಿ ವಿಲ್ ಗ್ರಿಂಡ್ ದಟ್ ಏಕ್ಸ್ ಫಾರ್ ಎ ಲಾಂಗ್ ಟೈಮ್” (ರೀಇನ್ವೆಂಟಿಂಗ್ ದ ಸ್ಟೀಲ್ ) ಮನೋಭಾವ ಕೂಡ, ಅನ್ಸೆಲ್ಮೋ ಹೇಳುವಂತೆ, “ನಮ್ಮ ಧ್ಯೇಯ”.
ತಮ್ಮ ಮೇಲಾದ ಥ್ರ್ಯಾಷ್ ಮೆಟಲ್‌ನ ಪ್ರಭಾವವನ್ನು ಹೊರತುಪಡಿಸಿದರೆ ಹೆವಿ ಮೆಟಲ್ ಲೋಕದ ದಿಗ್ಗಜರಾದ ಬ್ಲ್ಯಾಕ್ ಸಬ್ಬೋತ್ ಕೂಡ ತಮ್ಮ ನೆಚ್ಚಿನ ಬ್ಯಾಂಡ್ ಎನ್ನುತ್ತಾರೆ ಪಂತೇರಾ ಬ್ಯಾಂಡ್‌ನ ಸದಸ್ಯರು. ಶ್ರದ್ಧಾಂಜಲಿಯ ರೂಪದಲ್ಲಿ ಪಂತೇರಾ ತಂಡ ಬ್ಲ್ಯಾಕ್ ಸಬ್ಬಾತ್ ಹಾಡುಗಳಿಗೆ ಮೂರು ವಿಭಿನ್ನ ಮಾದರಿಯ ಕವರ್ ಗಳ ಧ್ವನಿಮುದ್ರಣ ಮಾಡಿದೆ (ಎಲ್ಲವೂ ಓಝೀ ಒಸ್ಬೋರ್ನ್ ಸಂಗೀತ ಯುಗಕ್ಕೆ ಸೇರಿದವುಗಳು). ಮೊದಲನೆಯದು “ಪ್ಲಾನೆಟ್ ಕಾರವಾನ್”, ಮಂದಗತಿಯ ಈ ಹಾಡನ್ನು ಮೊದಲ ಸಬ್ಬಾತ್ ಟ್ರೈಬ್ಯೂಟ್ ಆಲ್ಬಂ ನೇಟಿವಿಟಿ ಇನ್ ಬ್ಲ್ಯಾಕ್ ಗೆ ಯೋಚಿಸಲಾಗಿತ್ತು. ನಂತರ ಅದೇ ಫಾರ್ ಬಿಯಾಂಡ್ ಡ್ರೈವನ್ ಆಲ್ಬಂನ ಕೊನೆಯ ಹಾಡಾಗಿಯೂ ಬಳಕೆಯಾಯಿತು. ನಂತರ ಬ್ಯಾಂಡ್ ಸಬ್ಬಾತ್‌ನ “ಎಲೆಕ್ಟ್ರಿಕ್ ಫ್ಯುನರಲ್” ಅನ್ನು ಎರಡನೇಯ ನೇಟಿವಿಟಿ ಇನ್ ಬ್ಲ್ಯಾಕ್ ನಲ್ಲಿ ಪ್ರದರ್ಶಿಸಿದರು. 2003ರಲ್ಲಿ ಬಿಡುಗಡೆಯಾದ ಪಂತೇರಾದ ಸಂಕಲನ, ದ ಬೆಸ್ಟ್ ಆಫ್ ಪಂತೇರಾ: ಫಾರ್ ಬಿಯಾಂಡ್ ದ ಗ್ರೇಟ್ ಸದರ್ನ್ ಕೌಬಾಯ್ಸ್ ವಲ್ಗರ್ ಹಿಟ್ಸ್! ನಲ್ಲಿಯೂ ಬಿಡುಗಡೆಯಾಗದ ಸಬ್ಬಾತ್‌ರ ಕವರ್ “ಹೋಲ್ ಇನ್ ದ ಸ್ಕೈ” ಅನ್ನೂ ಸೇರಿಸಿಕೊಳ್ಳಲಾಗಿತ್ತು. ಸಬ್ಬಾತ್ ಜೊತೆ ಪಂತೇರಾ ಹೊಂದಿದ್ದ ಆತ್ಮೀಯತೆಯನ್ನು ಸಾಹಿತ್ಯದ ಮೂಲಕವೂ ಪ್ರಕಟಿಸಲಾಯಿತು, “ಗಾಡ್‌ಡಾಮ್ ಎಲೆಕ್ಟ್ರಿಕ್” ಸಂಕಲನದಲ್ಲಿರುವ “ಯುವರ್ ಟ್ರಸ್ಟ್ ಇಸ್ ಇನ್ ವಿಸ್ಕಿ ಅಂಡ್ ವೀಡ್ ಅಂಡ್ ಬ್ಲ್ಯಾಕ್ ಸಬ್ಬಾತ್” ಅದಕ್ಕೊಂದು ಉತ್ತಮ ಉದಾಹರಣೆ. ಇದೇ ಹಾಡಿನಲ್ಲಿ ಬ್ಯಾಂಡ್‌ನ ಥ್ರ್ಯಾಷ್ ಮೆಟಲ್ ಪ್ರಭಾವವಾದ ಸ್ಲೇಯರ್ ಅನ್ನೂ ಪ್ರಸ್ತಾಪಿಸಲಾಗಿದೆ.
ಎಕ್ಸೋಡರ್ ವಿವಾದ
[ಬದಲಾಯಿಸಿ]ನ್ಯೂ ಓರ್ಲಿಯಾನ್‌ನ ಥ್ರ್ಯಾಷ್ ಮೆಟಲ್ ಬ್ಯಾಂಡ್ ಎಕ್ಸೋಡರ್ ಗೆ ಸಂಬಂಧಿಸಿದಂತೆ ಹೆವಿ ಮೆಟಲ್ ಸಂಗೀತ ಲೋಕದಲ್ಲಿಯೇ ಪಂತೇರಾ ಕುರಿತು ಟೀಕೆ ಕೇಳಿ ಬರಲಾರಂಭಿಸಿತ್ತು. ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಗ್ರೂವ್ ಮೆಟಲ್ ಸೌಂಡ್ ಮೂಲತಃ ಪಂತೇರಾ ಬ್ಯಾಂಡ್‌ನದ್ದಲ್ಲ. ಪಂತೇರಾ ಅದನ್ನು ಎಕ್ಸೋಡರ್ ನಿಂದ ಕದ್ದಿದೆ ಎಂದು ಕೆಲವು ಅಭಿಮಾನಿಗಳು ಆರೋಪಿಸಿದ್ದರು. [who?] ಎಕ್ಸೋಡರ್ ನ ಚೊಚ್ಚಲ ಆಲ್ಬಂ ಸ್ಲಾಟರ್ ಇನ್ ದ ವ್ಯಾಟಿಕನ್ ಬಿಡುಗಡೆಯಾಗುವ ಸಾಕಷ್ಟು ಮುನ್ನವೇ ಪಂತೇರಾದ ವಿಭಿನ್ನ ಶೈಲಿಯ ಕೌಬಾಯ್ಸ್ ಫ್ರಾಮ್ ಹೆಲ್ ಬಿಡುಗಡೆಯಾಗಿತ್ತಾದರೂ ಎಕ್ಸೋಡರ್ ನ ಸ್ವಯಂ-ಬಿಡುಗಡೆಯ ಎರಡು ಪ್ರಾತ್ಯಕ್ಷಿಕೆಗಳು 1998ರ ಅಂತಿಮ ಭಾಗದಲ್ಲಿಯೇ ಬಿಡುಗಡೆಯಾಗಿದ್ದವು (ಪಂತೇರಾ ಆಗಿನ್ನೂ ಗ್ಲ್ಯಾಮ್ ಮೆಟಲ್ ಅನ್ನೇ ನೆಚ್ಚಿಕೊಂಡಿತ್ತು).
ಗ್ರೂವ್ ಮೆಟಲ್‌ನ ಮೂಲವಿರುವುದು ನಿಜಕ್ಕೂ ಈ ಪ್ರಾತ್ಯಕ್ಷಿಕೆಗಳಿಲ್ಲಿಯೇ. ಆದರೆ, ಅದನ್ನು ಜನಪ್ರಿಯಗೊಳಿಸಿದ್ದು ಮಾತ್ರ ಪಂತೇರಾ ಎಂಬುದು ಅಭಿಮಾನಿಗಳನೇಕರ ಭಾವನೆ. ಪಂತೇರಾಗೆ ಹೋಲಿಸಿದರೆ ಎಕ್ಸೋಡರ್ ತನ್ನ ಪ್ರಪ್ರಥಮ ಪ್ರವೇಶದಲ್ಲಿಯೇ ಅನುಭವಿಸಿದ ವೈಫಲ್ಯದ ಕುರಿತು ಅದರ ಹಲವು ಅಂಶಗಳ ಮೇಲೆ ಆಲ್‌ಮ್ಯೂಸಿಕ್ ಬೆಳಕು ಚೆಲ್ಲುತ್ತದೆ. ಎಕ್ಸೋಡರ್ ಎಂದರೆ “ಉತ್ತಮ ಹಾಡುಗಳ ಅನುಪಸ್ಥಿತಿಯ ಪಂತೇರಾ” ಎಂಬ ಅಭಿಪ್ರಾಯದ ಕುರಿತು ಅದು ಅಸಮಾಧಾನ ವ್ಯಕ್ತಪಡಿಸುತ್ತದೆ. ಎಎಮ್‌ಜಿ ಸ್ಲಾಟರ್ ಇನ್ ದ ವ್ಯಾಟಿಕನ್ ಕುರಿತ ವಿಮರ್ಶೆಯಲ್ಲಿ ಎಎಮ್‌ಜಿ “ಬಹುಶಃ ಯಾವುದೇ ದೊಡ್ಡ ಪ್ರಮಾಣದ ಹಣೆಪಟ್ಟಿ ಹಚ್ಚದೇ ಎಕ್ಸೋಡರ್ ತಂಡವನ್ನು ಪಂತೇರಾ ಎಂದು ಕರೆಯುವುದೇ ಸೂಕ್ತ.” ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಮಾತ್ರವಲ್ಲದೇ, ಎಕ್ಸೋಡರ್ ನ ಚೊಚ್ಚಲ ಆಲ್ಬಂನ ಶೀರ್ಷಿಕೆಯ ಕುರಿತೂ ಗಮನ ಸೆಳೆಯುತ್ತಾ, ಆಲ್ಬಂನ ಕವರ್ “ಖಂಡಿತವಾಗಿ ಅದರ ಉದ್ದೇಶ ಸಾಧನೆಗೆ ಯಾವುದೇ ಸಹಾಯವಾಗಿಲ್ಲ” ಎಂದು ಶರಾ ಹಾಕಿತ್ತು.[೩೨]
ಆದಾಗ್ಯೂ, ಕೆಲವು ವಿಮರ್ಶಕರು ಹಾಗೂ ಅಭಿಮಾನಿಗಳು ಪಂತೇರಾ ಎಕ್ಸೋಡರ್ ನ ಸಂಗೀತವನ್ನು “ಕದ್ದಿದೆ” ಎಂಬರ್ಥದ ಯಾವುದೇ ಮಾತನ್ನೂ ವಿರೋಧಿಸುತ್ತಾರೆ. ಈ ಸಂಗತಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಂತರಜಾಲ ರೇಡಿಯೋ ಸ್ಟೇಷನ್ ’ಕೆಎನ್‌ಎಸಿ’ನ ಕಾಂಟ್ರಿಬ್ಯೂಟರ್ ಬ್ರಿಯಾನ್ ಡೇವಿಸ್:
ಎಲ್ಲರೂ ಅಂದುಕೊಂಡಂತೆ ಎಕ್ಸೋಡರ್ ತಂಡದ ಮುಖ್ಯ “ಖ್ಯಾತಿಗೋಸ್ಕರ ನೀಡಿದ ಹೇಳಿಕೆ” ಏನೆಂದರೆ ತಮ್ಮ ಸಂಗೀತದ ಕೃತಿಚೌರ್ಯವೆಸಗಿದ್ದು ಪಂತೇರಾ ಎಂಬುದು. ಅದು ನಿಜಕ್ಕೂ ಅರ್ಥವಿಲ್ಲದ ಹೇಳಿಕೆ. ಗಿಟಾರ್ ಶೈಲಿಯಲ್ಲಿ ಕೆಲವೊಂದು ಚಿಕ್ಕ ಹೋಲಿಕೆಗಳಿರಬಹುದು ಹಾಗೂ ಕೆಲವು ಸಂದರ್ಭಗಳಲ್ಲಿ ಗಾಯಕ ಕೈಲ್ ಥಾಮಸ್ ಕೆಲವು ಸಾಲುಗಳನ್ನು ಕೈಬಿಟ್ಟು ಕಿರುಚುವುದನ್ನು ನೋಡಿದರೆ ಪಂತೇರಾ ನೆನೆಪಿಗೆ ಬರುತ್ತದೆ. ಹಾಗೆಂದು, ಪಂತೇರಾ ಎಕ್ಸೋಡರ್ ನ ತದ್ರೂಪು ಎನ್ನುವುದು ಮೂರ್ಖತನವಾದೀತು .[೩೩]
ಪಂತೇರಾ ತನ್ನ ಸಂಗೀತವನ್ನೇ ಕದಿಯುತ್ತಿದೆ ಎಂದು ಏರಿದ ಸ್ವರದಲ್ಲಿ ಕೂಗುವುದರ ನಡುವೆಯೂ ಎಕ್ಸೋಡರ್ ನ ಪ್ರಧಾನ ಗಾಯಕ, ಕೈಲ್ ಥಾಮಸ್, ತಾನು ಈ ಬಗೆಯ ಟೀಕೆಗಳಿಗೆ ಕಿವಿಗೊಡುವುದಿಲ್ಲ ಮಾತ್ರವಲ್ಲ ಪ್ರತಿಯೊಂದು ವಿಚಾರಕ್ಕೂ ಎಕ್ಸೋಡರ್ ಜೊತೆ ಪಂತೇರಾ ಹೆಸರು ಸೇರಿಸುವ ಚಾಳಿಯನ್ನ ನೋಡಿ ನಿಜಕ್ಕೂ ಬೇಸರವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಪಂತೇರಾದ ಸದಸ್ಯರೊಂದಿಗೆ ತಾವು ಆತ್ಮೀಯ ಸಂಬಂಧ ಹೊಂದಿದ್ದು ಒಟ್ಟಿಗೇ ಪ್ರವಾಸವನ್ನೂ ಮಾಡಿದ್ದೇವೆ ಎನ್ನುವ ಥಾಮಸ್, ಡಿಮೆಬಾಗ್ ಡಾರೆಲ್ ಹತ್ಯೆಗೆ ವಿಷಾದಿಸುತ್ತಾರೆ.[೩೪][೩೫] ಇತ್ತೀಚೆಗಷ್ಟೇ ಹೇಳಿಕೆ ನೀಡಿದ ಥಾಮಸ್, ಒಂದು ವೇಳೆ ಪಂತೇರಾ ತಂಡ ತಮ್ಮ ಬ್ಯಾಂಡ್‌ನಿಂದ ಪ್ರೇರಣೆ ಪಡೆದಿದ್ದರೂ ಪಂತೇರಾದ ಸದಸ್ಯರು “ತಮಗಿಂತಲೂ ಹೆಚ್ಚು ಪರಿಶ್ರಮದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ” ಎಂದು ಶ್ಲಾಘಿಸಿದ್ದರು.[೩೬]
ವಾದ್ಯ-ವೃಂದದ ಸದಸ್ಯರು
[ಬದಲಾಯಿಸಿ]- ಕೋನೆ ಸಾಲು
ಫಿಲ್ ಅನ್ಸೆಲ್‌ಮೊ - ಶಬ್ದದ ಪರಿಣಾಮ (1987–2003)
ಡಿಮೆಬ್ಯಾಗ್ ಡ್ಯರ್ರೆಲ್ - ಗಿಟಾರ್, ಹಿಂದಿನ ಧ್ವನಿಗಳು (1981–2003)
ರೆಕ್ಸ್ ಬ್ರೌನ್ - ಬ್ಯಾಸ್, ಹಿಂದಿನ ಧ್ವನಿಗಳು (1982–2003)
ವಿನ್ನೀ ಪೌಲ್ - ಮೃದಂಗ, ಪೆರ್ಕ್ಯೂಶನ್ (1981–2003)
ಮೊದಲಿನ ಸದಸ್ಯರು
- ಟೆರ್ರಿ ಗ್ಲ್ಯಾಜ್ - ಗಿಟಾರ್ ತಾಳ(1981–1982), ಶಬ್ದದ ಪರಿಣಾಮ (1982–1986)
- ಅವಧಿಯ(ಸೆಷನ್) ಸಂಗೀತಗಾರರು
ರಾಜ ಕೆರ್ರಿ(ಸ್ಲೆಯರ್) - ಸ್ಟೀಲ್‌ನ ರಿಇನ್ವೆಸ್ಟ್‌ಮೆಂಟ್ ನಿಂದ ಗೊಡ್ಡಮ್ನಾ ಎಲೆಕ್ಟ್ರಿಕ್ ಮೇಲೆ ಔರ್ಟೊ ಗಿಟಾರ್ (2000)
ಸೆತ್ ಪುಟ್‌ನಮ್ (ಅನಲ್ ಕನ್ಟ್) - ದ ಗ್ರೇಟ್ ಸೌಥೆರನ್ ಟ್ರೆಂಡ್‌ಕಿಲ್ ಮೇಲಿನ ಅಭಿಪ್ರಾಯಗಳು (1996)
ಮಾರ್ಕ್ ಫೆರಾರಿ - ಪವರ್ ಮೆಟಲ್ ದ ಮೇಲಿನ ಹಿಂದಿನ ಶಬ್ದಗಳು, ಗಿಟಾರಿನ ಲಯ
ರೊಸ್ ಕರ್ಪೆಲ್‌ಮ್ಯಾನ್ - ಗ್ರೇಟ್ ಸೌಥೆರನ್ ಟ್ರೆಂಡ್‌ಕಿಲ್ ಮೇಲಿನ ಕೀಲಿಮಣೆ ಮತ್ತು ಶಬ್ದದ ಪರಿಣಮಗಳು (1996)
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]ಕಲಾಮಂದಿರದ ಚಿತ್ರ ಸಂಪುಟಗಳು
ಮೆಟಲ್ ಮ್ಯಾಜಿಕ್ (1983)
- ಪ್ರಾಜೆಕ್ಟ್ಸ್ ಇನ್ ದ ಜಂಗಲ್ (1984)
ಐ ಆಯ್‌ಮ್ ದ ನೈಟ್ (1985)
ಪವರ್ ಮೆಟಲ್ಸ್ (1988)
ಕೌಬಾಯ್ಸ್ ಫ್ರಂ ದ ಹೆಲ್ (1990)
ವಲ್ಗರ್ ಡಿಸ್‌ಪ್ಲೇ ಆಫ್ ಪವರ್ (1992)
ಫಾರ್ ಬಿಯಾಂಡ್ ಡ್ರೈವನ್ (1994)
ದ ಗ್ರೇಟ್ ಸದರ್ನ್ ಟ್ರೆಂಡ್‌ಕಿಲ್ (1996)
ರೀಇನ್ವೆಂಟಿಂಗ್ ದ ಸ್ಟೀಲ್ (2000)
ಆಕರಗಳು
[ಬದಲಾಯಿಸಿ]- ↑ Woehrle, Seth (February 2005), "Cold Blooded", Spin
{{citation}}
: External link in
(help); Italic or bold markup not allowed in:|title=
|magazine=
(help) - ↑ Norris, Chris; Connolly, John. "Death Metal - Blender". Blender. Retrieved 26 May 2010.
{{cite web}}
: Italic or bold markup not allowed in:|publisher=
(help) - ↑ ೩.೦ ೩.೧ ೩.೨ ೩.೩ "Pantera biography". MusicMight. Retrieved 2005-12-29.
- ↑ ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ VH1 (2006). Behind the Music (TV series).
- ↑ http://www.guitarworld.com/article/walter_o039brien_strength_beyond_strength
- ↑ ೬.೦ ೬.೧ ೬.೨ ೬.೩ Kaye, Don (2003). "Pantera: A Vulgar Display of Metal". Warner Music Group. Retrieved 2008-01-16.
- ↑ "A short biography on Pantera". Allmusic. Retrieved 2008-01-03.
- ↑ "DARIEN LAKE CONCERT FRAYS NERVES AGAIN BAND'S SINGER CHARGED WITH ASSAULT". Buffalo News. June 29, 1994. Retrieved 2008-04-06.
- ↑ "N.O. native, Pantera singer, arrested in guard's assault". The Advocate. October 26, 1994. Retrieved 2008-04-06.
- ↑ "Pantera Singer Assault". Daily Herald. July 1, 1994. Archived from the original on 2009-07-04. Retrieved 2008-04-06.
- ↑ "ROCK SINGER ASSAULT CASE ADJOURNED FOR THIRD TIME". Buffalo News. October 26, 1994. Retrieved 2008-04-06.
- ↑ "The Scuttlebutt". Salt Lake Tribune. May 12, 1995. Retrieved 2008-04-06.
- ↑ "PANTERA SINGER CHANGES HIS TUNE". Grand Forks Herald. April 21, 1995. Retrieved 2008-04-06.
- ↑ Shanafelt, Steve (9 July 2003). "You'll like them when they're angry". Mountain Xpress. Retrieved 2007-06-25.
- ↑ "100 Greatest Guitar Solos (11-20)". Guitar World. Archived from the original on 2011-07-07. Retrieved 2008-03-05.
- ↑ "Pantera singer says he overdosed on heroin". Fort Worth Star-Telegram. July 18, 1996. Retrieved 2008-04-06.
- ↑ "The Heroin Experience; The Drug Has Smacked Into More Than One Generation of Musicians". Washington Post. August 11, 1996. Archived from the original on 2013-10-11. Retrieved 2008-04-06.
- ↑ "Overdose put Pantera's anselmo on straighter path". Dallas Morning News. February 13, 1997. Retrieved 2008-04-06.
- ↑ ೧೯.೦ ೧೯.೧ "RIAA US Sales Search". Retrieved 2007-11-03.
- ↑ "Pantera Cancel Tour". Rolling Stone. November 1, 2000. Retrieved 2008-04-06.
- ↑ Wiederhorn, Jon (December 21, 2001). "Pantera Members Rip It Up With Rebellious Side Projects". MTV. Archived from the original on 2007-12-13. Retrieved 2006-11-04.
- ↑ "Phil Anselmo speaks on the future of Pantera". Blabbermouth.net. 2003-05-27. Retrieved 2005-10-17.
- ↑ "Dimebag Darrell, Four Others Killed In Ohio Concert Shooting". MTV. Archived from the original on 2010-08-06. Retrieved 2005-12-29.
- ↑ "Philip H. Anselmo; On Behalf of Darrell Lance Abbott, Pt. I". Archived from the original on 2015-02-18. Retrieved 2005-10-17.
- ↑ Bowcott, Nick (January 2006). "Dimebag: One Year On". Metal Hammer.
- ↑ "Vinnie Paul Says There is "Absolutely" No Chance of Reconciliation With Philip Anselmo". Blabbermouth.net. 2006-07-28. Retrieved 2006-08-10.
- ↑ "PANTERA: '1990-2000: A Decade Of Domination' Artwork, Track Listing Revealed". Roadrunnerrecords.com. Retrieved 2010-03-29.
- ↑ Wiederhorn, Jon. "'Dimebag' Darrell Abbott: A Larger-Than-Life Guitarist And Human Being - News Story". MTV. Archived from the original on 20 ಜೂನ್ 2010. Retrieved 13 July 2010.
- ↑ Monger, James Christopher. "allmusic (((Mastodon > Biography)))". Allmusic. Retrieved 13 July 2010.
- ↑ Begrand, Adrien. ""Dimebag" Darrell: Forever Stronger Than All". Popmatters. Retrieved 13 July 2010.
- ↑ "Band". Official Pantera. Archived from the original on 2011-01-01. Retrieved 2009-04-09.
- ↑ "Slaughter in the Vatican review". Allmusic. Retrieved 2005-10-21.
- ↑ "Exhorder Slaughter in the Vatican/The Law 2-in-1 Re-Release". KNAC.com. Retrieved 2005-10-21.
- ↑ "Former EXHORDER Frontman: We 'Lost An Innovator, A Warrior, And A Metal God'". Blabbermouth.net. 2004-12-12. Retrieved 2005-11-05.
- ↑ "Kyle Thomas Speaks Out on the Pantera/Exhorder 'Feud'". Blistering. Retrieved 2005-11-05.
- ↑ Dave Larmore. "Interview with Kyle Thomas". Midwest Metal Magazine. Archived from the original on 2018-11-05. Retrieved 2010-07-29.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 errors: external links
- CS1 errors: markup
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hCards
- Articles with hAudio microformats
- All articles with specifically marked weasel-worded phrases
- Articles with specifically marked weasel-worded phrases from March 2009
- Commons category link is locally defined
- ಪಂತೆರ
- ಕೊರಕಲು ಲೋಹದ ಸಂಗೀತ ತಂಡಗಳು
- ಟೆಕ್ಸಾಸ್ನ ತೂಕದ ಲೋಹದ ಸಂಗೀತ ತಂಡಗಳು
- ಟೆಕ್ಸಾಸ್ನಿಂದ ಸಂಗೀತ ತಂಡಗಳು
- ನಾಲ್ವರು ಗಾಯಕರು ಅಥವಾ ವಾದ್ಯಗಾರರಿಗೆ ಸಂಯೋಜಿಸಲಾದ ಸಂಗೀತ ರಚನೆ
- ಗ್ಲಾಮ್ ಲೋಹದ ಸಂಗೀತ ತಂಡಗಳು
- 1981ರಲ್ಲಿ ಸ್ಥಾಪನೆಯಾದ ಸಂಗೀತ ಸಮೂಹಗಳು
- 2003ರಲ್ಲಿ ಸ್ಥಗಿತಗೊಂಡ ಸಂಗೀತ ತಂಡಗಳು
- 1980ರ ಸಂಗೀತ ತಂಡಗಳು
- 1990ರ ಸಂಗೀತ ತಂಡಗಳು
- 2000ರ ಸಂಗೀತ ತಂಡಗಳು