ಶೇನ್ ಬಾಂಡ್
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | Shane Edward Bond | |||||||||||||||||||||||||||||||||||||||||||||||||||||||||||||||||
ಎತ್ತರ | 6 ft 2 in (1.88 m) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | Right-handed | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | Right-arm fast | |||||||||||||||||||||||||||||||||||||||||||||||||||||||||||||||||
ಪಾತ್ರ | Bowler | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 216) | 22 November 2001 v Australia | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 24 November 2009 v Pakistan | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ 124) | 11 January 2002 v Australia | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 13 March 2010 v Australia | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | 27 | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
1996–present | Canterbury | |||||||||||||||||||||||||||||||||||||||||||||||||||||||||||||||||
2002 | Warwickshire | |||||||||||||||||||||||||||||||||||||||||||||||||||||||||||||||||
2008 | Hampshire | |||||||||||||||||||||||||||||||||||||||||||||||||||||||||||||||||
2010 | Kolkata Knight Riders | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, 16 March 2010 |
ಶೇನ್ ಎಡ್ವರ್ಡ್ ಬಾಂಡ್ , (ನ್ಯೂಜಿಲೆಂಡ್‌ನ ಕ್ರೈಸ್ಟ್ಚರ್ಚ್ನಲ್ಲಿ 1975ರ ಜೂನ್ 7ರಂದು ಜನನ) ನ್ಯೂಜಿಲೆಂಡ್‌ನ ಓರ್ವ ಕ್ರಿಕೆಟ್ ಆಟಗಾರನಾಗಿದ್ದು, "ಸರ್ ರಿಚರ್ಡ್ ಹ್ಯಾಡ್ಲೀಯ ನಂತರದ ನ್ಯೂಜಿಲೆಂಡ್‌ನ ಅತ್ಯುತ್ತಮ ವೇಗದ ಬೌಲರ್ ಎಂದು ಬಣ್ಣಿಸಲ್ಪಟ್ಟಿದ್ದಾನೆ.[೧] ಟೆಸ್ಟ್, ODI ಹಾಗೂ ಟ್ವೆಂಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅವನು ನ್ಯೂಜಿಲೆಂಡ್‌ನ್ನು ಪ್ರತಿನಿಧಿಸಿರುವುದರ ಜೊತೆಗೆ, ನ್ಯೂಜಿಲೆಂಡ್ ಸ್ವದೇಶಿ ಕ್ರಿಕೆಟ್‌ನಲ್ಲಿ ಕ್ಯಾಂಟರ್‌ಬರಿ ತಂಡದ ಪರವಾಗಿ ಮತ್ತು ಇಂಗ್ಲಿಷ್ ಸ್ವದೇಶಿ ಕ್ರಿಕೆಟ್‌ನಲ್ಲಿ ವಾರ್ವಿಕ್‌ಷೈರ್ ತಂಡದ ಪರವಾಗಿ ಆಡುತ್ತಿದ್ದಾನೆ. ಬಾಂಡ್ ಓರ್ವ ಬಲಗೈ ವೇಗದ ಬೌಲರ್ ಆಗಿದ್ದಾನೆ.
ಗಾಯಗಳಿಂದಾಗಿ, ಅದರಲ್ಲೂ ಮುಖ್ಯವಾಗಿ ಬೆನ್ನಿಗೆ ಸಂಬಂಧಿಸಿದ ಮರುಕಳಿಸುವ ಒತ್ತಡದ ಅಸ್ಥಿಭಂಗಗಳಿಂದಾಗಿ ಬಾಂಡ್‌ನ ವೃತ್ತಿಜೀವನವು ಆಗಾಗ ಸಂಕಷ್ಟಕ್ಕೀಡಾಗಿದೆ. ಮತ್ತಷ್ಟು ಗಾಯವಾಗದಂತೆ[೨] ಪ್ರಯತ್ನಿಸಲು ಮತ್ತು ಗಾಯವನ್ನು ತಡೆಗಟ್ಟಲು ಅವನು 2004ರಲ್ಲಿ ಶಸ್ತ್ರಚಿಕಿತ್ಸೆಗೊಳಗಾದನಾದರೂ, ಅದು ಕೇವಲ ಭಾಗಶಃ ಯಶಸ್ವಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ಆತ ಬೆನ್ನಿನ ಸಮಸ್ಯೆಗಳು, ಮೊಣಕಾಲು ಗಾಯಗಳು ಹಾಗೂ ಕಿಬ್ಬೊಟ್ಟೆಯ ಒಂದು ಹರಿತದಿಂದ ಬಳಲಿದ್ದಾನೆ. ಸಂಪೂರ್ಣವಾಗಿ ವೃತ್ತಿಪರವಾಗಿರುವ ಕ್ರಿಕೆಟ್ ವೃತ್ತಿಜೀವನವನ್ನು ಆತ ತಡವಾಗಿ ಶುರುಮಾಡಿದ್ದರ ಜೊತೆಗೆ ಈ ಸಮಸ್ಯೆಗಳೂ ಸೇರಿಕೊಂಡು, ಅಂತರರಾಷ್ಟ್ರೀಯ ಹಾಗೂ ಸ್ವದೇಶಿ ಕ್ರಿಕೆಟ್ ಎರಡರಲ್ಲೂ ಅವನ ಗೋಚರಿಸುವಿಕೆಗಳಿಗೆ ಮಿತಿಯನ್ನು ಹೇರಿವೆ ಎನ್ನಬಹುದು. 2001/02ರ ಋತುವಿನಲ್ಲಿ ಅವನ ರಂಗಪ್ರವೇಶವಾದಾಗಿನಿಂದ, ಆತನಿಗೆ ನ್ಯೂಜಿಲೆಂಡ್ ಪರವಾಗಿ ಕೇವಲ 18 ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. 2009ರ ಡಿಸೆಂಬರ್‌ನಲ್ಲಿ ತನ್ನ 34ನೇ ವಯಸ್ಸಿನಲ್ಲಿ ಬಾಂಡ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ.[೧]
2008ರ ಮಾರ್ಚ್ ಅವಧಿಯಲ್ಲಿ, 'ಬಂಡಾಯ'ದ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿನ ಡೆಲ್ಲಿ ಜೈಂಟ್ಸ್ ತಂಡದೊಂದಿಗೆ ಬಾಂಡ್ ತೊಡಗಿಸಿಕೊಂಡ ಕಾರಣದಿಂದಾಗಿ, ಅವನ ಅಂತರರಾಷ್ಟ್ರೀಯ ವೃತ್ತಿಜೀವನವು 18 ತಿಂಗಳುಗಳ[೩] ಸರಣಿಭಂಗವನ್ನು ಅನುಭವಿಸಬೇಕಾಗಿ ಬಂತು; ಇದರಿಂದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಅವನ ಪ್ರಧಾನ ಒಪ್ಪಂದವನ್ನು 2008ರ ಜನವರಿಯಲ್ಲಿ ಕೊನೆಗೊಳಿಸುವಂತಾಯಿತು.[೪] ಅದೇನೇ ಇರಲಿ, 2009ರ ಜೂನ್‌ನಲ್ಲಿ ಬಂಡಾಯ ಲೀಗ್‌ನೊಂದಿಗೆ ಬಾಂಡ್ ತನ್ನ ಬಾಂಧವ್ಯಗಳನ್ನು ಕಡಿದುಕೊಂಡ ಮತ್ತು ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕಾಗಿ ಆಯ್ಕೆಗೊಳ್ಳಲು ತಾನು ಲಭ್ಯವಿರುವುದಾಗಿ ಸ್ವತಃ ಘೋಷಿಸಿಕೊಂಡ.[೫] 2010ರ ಜನವರಿಯಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 3ನೇ ಋತುವಿನಲ್ಲಿ ಆಡಲು ಬಾಂಡ್ ಆಯ್ಕೆಯಾದ. 2010ರ ಮೇ ತಿಂಗಳ 13ರ ವೇಳೆಗೆ ಇದ್ದಂತೆ, ಆತ ಕ್ರಿಕೆಟ್ ಆಟದ ಎಲ್ಲಾ ಸ್ವರೂಪಗಳಿಂದ ನಿವೃತ್ತಿಯಾಗಿರುವುದರಿಂದ, ಇಂಡಿಯನ್ ಪ್ರೀಮಿಯರ್ ಲೀಗ್‌ನ 4ನೇ ಋತುವಿನಲ್ಲಿ ಮುಂದುವರಿಯಲು ಯೋಜಿಸುತ್ತಿಲ್ಲ.[೬]
ಆಡುವ ಶೈಲಿ
[ಬದಲಾಯಿಸಿ]ಬಾಂಡ್ ಓರ್ವ ವೇಗದ ಬೌಲರ್ ಆಗಿದ್ದು, ಗಂಟೆಗೆ 145 ಕಿ.ಮೀ.ಗೂ ಹೆಚ್ಚಿನ ವೇಗಗಳಲ್ಲಿ ನಿಯತವಾಗಿ ಬೌಲಿಂಗ್ ಮಾಡುವಷ್ಟು ಸಮರ್ಥನಾಗಿದ್ದಾನೆ. 2001/02ರ ಋತುವಿನಲ್ಲಿ ಗಂಟೆಗೆ 150 ಕಿ.ಮೀ. ವೇಗದ ಗಡಿಯನ್ನು ಮುರಿದ ಮೊದಲಿಗ ಎಂಬ ದಾಖಲೆಯನ್ನು ಅವನು ಹೊಂದಿದ್ದಾನೆ.[೭] ಇತರ ಕೆಲವೊಂದು ಅಪ್ಪಟ ವೇಗದ ಬೌಲರುಗಳಿಗೆ ತದ್ವಿರುದ್ಧವಾಗಿ, ನಿಯಂತ್ರಣ ಹಾಗೂ ನಿಖರತೆಯೊಂದಿಗೆ ಗತಿಯನ್ನು ಬಾಂಡ್ ಸಂಯೋಜಿಸುತ್ತಾನೆ; ಆಟದ ಎಲ್ಲಾ ಸ್ವರೂಪಗಳಲ್ಲಿ ಆತ ಯಶಸ್ಸನ್ನು ಕಾಣುವಲ್ಲಿ ಈ ಅಂಶಗಳು ಅವನಿಗೆ ನೆರವಾಗಿವೆ.
ಕನಿಷ್ಟ ಪಕ್ಷ 1000 ಚೆಂಡುಗಳನ್ನು ಬೌಲ್ ಮಾಡಿರುವ ಆಟಗಾರರಿಗೆ ಅಂಕಿ-ಅಂಶಗಳನ್ನು ಸೀಮಿತಗೊಳಿಸಿದಾಗ, ODIಗಳಲ್ಲಿ[೮] ಅತ್ಯುತ್ತಮ ಹೊಡೆತದ ಪ್ರಮಾಣವನ್ನು (27.5) ದಾಖಲಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ ಮತ್ತು ಆತ ಮೂರನೇ ಅತ್ಯುತ್ತಮ ಸರಾಸರಿಯನ್ನು (19.32) ಹೊಂದಿದ್ದಾನೆ.[೯] ಟೆಸ್ಟ್ ಪಂದ್ಯಗಳಲ್ಲಿ, ಕನಿಷ್ಟ ಪಕ್ಷ 2000 ಚೆಂಡುಗಳನ್ನು ಬೌಲ್ ಮಾಡಿದ ಆಟಗಾರರಿಗೆ ಅಂಕಿ-ಅಂಶಗಳನ್ನು ಸೀಮಿತಗೊಳಿಸಿದಾಗ, ಟೆಸ್ಟ್ ಪಂದ್ಯಗಳಲ್ಲಿನ ಅವನ ಹೊಡೆತದ ಪ್ರಮಾಣವು (38.9) ಸಾರ್ವಕಾಲಿಕ ಪಟ್ಟಿಯಲ್ಲಿ[೧೦] ಪ್ರಸಕ್ತವಾಗಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ ಮತ್ತು ಅವನ ಸರಾಸರಿಯು (22.39) ಸದ್ಯದ ಆಟಗಾರರ ಪೈಕಿ ಪ್ರಸಕ್ತವಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.[೧೧] ಟೆಸ್ಟ್ ಪಂದ್ಯಗಳಲ್ಲಿ 2000ಕ್ಕೂ ಹೆಚ್ಚಿನ ಚೆಂಡುಗಳನ್ನು ಬೌಲ್ ಮಾಡಿರುವ ಸದ್ಯದ ಆಟಗಾರರ ಪೈಕಿ, ಮುತ್ತಯ್ಯ ಮುರಳೀಥರನ್ ಮಾತ್ರವೇ ಒಂದು ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾನೆ. ಬಾಂಡ್‌ನ ಟೆಸ್ಟ್ ಪಂದ್ಯ ಹಾಗೂ ODI ಪಂದ್ಯಗಳ ಬೌಲಿಂಗ್ ಸರಾಸರಿಯು ಸ್ಟುವರ್ಟ್ ಕ್ಲಾರ್ಕ್ ಹಾಗೂ ಡೇಲ್ ಸ್ಟೆಯ್ನ್‌ರ ಮಟ್ಟಕ್ಕಿಂತಲೂ ಅತ್ಯುತ್ತಮವಾಗಿದ್ದು, ಪ್ರಸಕ್ತವಾಗಿ ಈ ಇಬ್ಬರು ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಅಗ್ರಗಣ್ಯ ವೇಗದ ಬೌಲರ್‌ಗಳಾಗಿದ್ದಾರೆ.
ತೀರಾ ಕೆಳಗಿನ ಕ್ರಮಾಂಕದಲ್ಲಿ ಅಂದರೆ, ಒಂಬತ್ತು ಅಥವಾ ನಂತರದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಾಂಡ್ ಸಾಮಾನ್ಯವಾಗಿ ಬ್ಯಾಟಿಂಗ್‌ಮಾಡುತ್ತಾನಾದರೂ, ಇನ್ನಿಂಗ್ಸ್‌ವೊಂದರ ಅಂತ್ಯದ ವೇಳೆಗೆ ಒಂದಷ್ಟು ಕ್ಷಿಪ್ರ ಹೊಡೆತಗಳನ್ನು ಸಿಕ್ಕಾಪಟ್ಟೆ ಹೊಡೆದು ರನ್‌ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ.
ಸ್ವದೇಶಿ ವೃತ್ತಿ ಜೀವನ
[ಬದಲಾಯಿಸಿ]1997ರ ಜನವರಿ 20ರಂದು, ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಕ್ಯಾಂಟರ್‌ಬರಿ ತಂಡದ ಪರವಾಗಿ ಬಾಂಡ್ ಪ್ರಥಮ-ದರ್ಜೆ ಕ್ರಿಕೆಟ್‌ಗೆ ಸಂಬಂಧಿಸಿದ ತನ್ನ ಪ್ರಥಮ ಪ್ರವೇಶವನ್ನು ಮಾಡಿದ.[೧೨] ಆತ ಪ್ರಥಮ-ದರ್ಜೆ ಕ್ರಿಕೆಟ್‌ಗೆ ಪ್ರಥಮ ಪ್ರವೇಶವನ್ನು ಮಾಡಿದಾಗ, ಅವನಿಗೆ ತುಲನಾತ್ಮಕವಾಗಿ ಸಾಕಷ್ಟು ವಯಸ್ಸಾಗಿತ್ತು, ಅಂದರೆ ಆಗ ಅವನಿಗೆ 21 ವರ್ಷಗಳು ಮತ್ತು 7 ತಿಂಗಳುಗಳಷ್ಟು ವಯಸ್ಸಾಗಿತ್ತು. ತನ್ನ ವೃತ್ತಿಜೀವನದ ಮೊದಲ ಕೆಲವೊಂದು ವರ್ಷಗಳಲ್ಲಿ ಅವನು ತುಲನಾತ್ಮಕವಾಗಿ ಅಲ್ಪಮಟ್ಟದ ಪ್ರಥಮ-ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ; ತನ್ನ ಮೊದಲ ಮೂರು ಋತುಗಳಲ್ಲಿ ಕ್ಯಾಂಟರ್‌ಬರಿ ತಂಡದ ಪರವಾಗಿ ಕೇವಲ 12 ಪಂದ್ಯಗಳನ್ನಷ್ಟೇ ಆಡಲು ಅವನಿಗೆ ಸಾಧ್ಯವಾಗಿತ್ತು. ಅವನ ಮೊದಲ ಮೂರು ಋತುಗಳಲ್ಲಿ, ಅವನ ಬೌಲಿಂಗ್ ಅಂಕಿ-ಅಂಶಗಳು ಮಜಬೂತಾಗಿದ್ದರೂ ಸಹ ಅವು ಆಕರ್ಷಕವಲ್ಲದ ರೀತಿಯಲ್ಲಿದ್ದವು.[೧೩] 1999ರಲ್ಲಿ ಬಾಂಡ್ ನ್ಯೂಜಿಲೆಂಡ್ ಪೊಲೀಸ್ ಇಲಾಖೆಗೆ ಸೇರಿಕೊಂಡ ನಂತರ, ಒಂದು ವರ್ಷದ ಅವಧಿಯವರೆಗೆ ವೃತ್ತಿಪರವಾಗಿ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ; ಉದ್ಯೋಗಕ್ಕೆ ಸೇರಿಕೊಂಡಿದ್ದರಿಂದ ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ಅವನಿಗೆ ಸಮಯ ಸಿಗಲಿಲ್ಲ.[೧೪] ಕ್ಯಾಂಟರ್‌ಬರಿ ತಂಡದ ಪರವಾಗಿ ಹಲವಾರು ಆಟಗಳನ್ನು ಆಡಲು 2000/01ರ ಋತುವಿನಲ್ಲಿ ಆತ ಆಟಕ್ಕೆ ಹಿಂದಿರುಗಿದ ಮತ್ತು ಒಂದು ವರ್ಷ ಅವಧಿಗೆ ಆಟದಿಂದ ಹೊರಗಿದ್ದ ಹೊರತಾಗಿಯೂ ಆತ ಯಥೋಚಿತವಾದ ಯಶಸ್ಸನ್ನು ಪಡೆದ.[೧೫] 2001/02ರ ಋತುವಿನಲ್ಲಿ ಸಾಕಷ್ಟು ಮುಂಚೆಯೇ ಅವನಿಗೆ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶವನ್ನು ನೀಡಲಾಯಿತು, ಮತ್ತು ಅಲ್ಲಿಂದೀಚೆಗೆ ಗಾಯಗಳು ಹಾಗೂ ಅಂತರರಾಷ್ಟ್ರೀಯ ಪಂದ್ಯಗಳ ಬದ್ಧತೆಯ ಕಾರಣದಿಂದಾಗಿ ಆತ ಮುಖ್ಯವಾಗಿ ಕ್ಯಾಂಟರ್‌ಬರಿ ತಂಡದ ಪರವಾಗಿ ಆಡಲು ಅಲಭ್ಯನಾದ ಮತ್ತು ಏಳು ಋತುಗಳಲ್ಲಿ ರಾಜ್ಯಮಟ್ಟದ ಚಾಂಪಿಯನ್‌ಗಿರಿಯ[೧೬] ಕೇವಲ ಎಂಟು ಪಂದ್ಯಗಳು ಹಾಗೂ ರಾಜ್ಯಮಟ್ಟದ ಪ್ರಶಸ್ತಿಫಲಕದ ಹತ್ತು ಆಟಗಳಲ್ಲಿ[೧೭] ಮಾತ್ರವೇ ಆವನು ಕಾಣಿಸಿಕೊಂಡ.
2002ರ ಋತುವಿನಲ್ಲಿ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಆತ ಒಂದು ಸಂಕ್ಷಿಪ್ತ ಅವಧಿಗೆ ಕಾಣಿಸಿಕೊಂಡು, ಜಿಲ್ಲಾಮಟ್ಟದ ಚಾಂಪಿಯನ್‌ಗಿರಿಯ ಮೂರು ಆಟಗಳಲ್ಲಿ ವಾರ್ವಿಕ್‌ಷೈರ್ ತಂಡವನ್ನು ಪ್ರತಿನಿಧಿಸಿದ ಮತ್ತು ಬೌಲಿಂಗ್‌ನಲ್ಲಿ ಹಿತಮಿತವಾದ ಯಶಸ್ಸನ್ನು ಕಂಡುಕೊಂಡ. 2008 ಋತುವಿನಲ್ಲಿ ಹ್ಯಾಂಪ್‌ಷೈರ್ ತಂಡದ ಪರವಾಗಿ ಆಡುವುದಕ್ಕಾಗಿ ಇಂಗ್ಲಂಡ್‌ಗೆ ಹಿಂದಿರುಗಲು ಅವನು ಸಹಿಹಾಕಿದ್ದಾನೆ.
ತನ್ನ ಇಂಡಿಯನ್ ಕ್ರಿಕೆಟ್ ಲೀಗ್ ವೃತ್ತಿಜೀವನದಲ್ಲಿ, ಲೀಗ್‌ನ 2008ರ ಮಾರ್ಚ್/ಏಪ್ರಿಲ್ ಸರಣಿಯಲ್ಲಿ ಡೆಲ್ಲಿ ಜೈಂಟ್ಸ್ ತಂಡದ ಪರವಾಗಿ ಏಳು ಟ್ವೆಂಟಿ20 ಆಟಗಳಲ್ಲಿ ಬಾಂಡ್ ಕಾಣಿಸಿಕೊಂಡ. ಆದರೆ 86.50ನಷ್ಟು ಪ್ರಮಾಣದ ರನ್ ನೀಡಿ ಕೇವಲ ಎರಡು ವಿಕೆಟ್ಟುಗಳನ್ನಷ್ಟೇ ಪಡೆಯಲು ಅವನಿಗೆ ಸಾಧ್ಯವಾಯಿತು.[೧೮]
ಅಂತರರಾಷ್ಟ್ರೀಯ ವೃತ್ತಿಜೀವನ
[ಬದಲಾಯಿಸಿ]2001/02ರ ಆಸ್ಟ್ರೇಲಿಯಾದ ಪ್ರವಾಸ
[ಬದಲಾಯಿಸಿ]ಅಂತರರಾಷ್ಟ್ರೀಯ ಮಟ್ಟದಲ್ಲಿ ಪಂದ್ಯವನ್ನಾಡುವ ಮೊದಲ ಅವಕಾಶವು ಬಾಂಡ್‌ಗೆ 2001/02ರ ಋತುವಿನ ಆರಂಭದಲ್ಲೇ ಸಿಕ್ಕಿತು; ಈ ಅವಧಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾದ ಅಕಾಡೆಮಿಯ ವಿರುದ್ಧದ ಒಂದು ಪಂದ್ಯದಲ್ಲಿ ನ್ಯೂಜಿಲೆಂಡ್ ಅಕಾಡೆಮಿಯ ಪರವಾಗಿ ಆತ ನೀಡಿದ ಪ್ರಭಾವಶಾಲಿ ಪ್ರದರ್ಶನವನ್ನು ಅನುಸರಿಸಿ, ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿದ್ದ ಟೆಸ್ಟ್ ತಂಡಕ್ಕೆ ಸೇರಿಕೊಳ್ಳುವಂತೆ ಅವನಿಗೆ ಕರೆಬಂದಿತು. ಬೌಲಿಂಗ್‌ನಲ್ಲಿ ಅವನು ಹೊಂದಿದ್ದ ಹೆಚ್ಚುವರಿ ಗತಿಯಿಂದಾಗಿ ಕ್ರಿಸ್ ಮಾರ್ಟಿನ್‌ನ್ನೂ ದಾಟಿಕೊಂಡು ಅವನು ಆಯ್ಕೆಗೊಂಡಾಗ, ಹೋಬರ್ಟ್‌ನಲ್ಲಿನ ಎರಡನೇ ಟೆಸ್ಟ್‌ನಲ್ಲಿ ಅವನ ಪ್ರಥಮ ಪ್ರವೇಶಕ್ಕೆ ಅವಕಾಶ ಸಿಕ್ಕಿದಂತಾಯಿತು.[೧೯] ಆಸ್ಟ್ರೇಲಿಯಾದ ಏಕೈಕ ಇನ್ನಿಂಗ್ಸ್‌ನಲ್ಲಿ 135 ರನ್‌ಗಳಿಗೆ ಕೇವಲ ಒಂದು ವಿಕೆಟ್‌ನ್ನು ಮಾತ್ರವೇ ಅವನು ಪಡೆಯಲು ಸಾಧ್ಯವಾಗಿದ್ದರಿಂದ, ಮಳೆಯಿಂದ-ತೊಂದರೆಗೊಳಗಾದ ಈ ಪಂದ್ಯದಲ್ಲಿನ ಒಂದು ಮರೆಯಬಹುದಾದ ರಂಗಪ್ರವೇಶಕ್ಕೆ ಅವನು ಸಾಕ್ಷಿಯಾಗುವಂತಾಯಿತು.[೨೦] ಪರ್ತ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 154 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ಕೊಂಚವೇ ಉತ್ತಮವೆನ್ನಬಹುದಾದ ಸಾಧನೆಯನ್ನು ಅವನು ಮೆರೆದನಾದರೂ, ಆ ಪಂದ್ಯವು ಒಂದು ಸರಿಸಮ ಪಂದ್ಯವಾಗಿ ಕೊನೆಗೊಂಡಿತು.[೨೧] ಅದಾದ ಕೆಲವೇ ದಿನಗಳ ನಂತರ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧದ 2001–02ರ VB ಸರಣಿಯಲ್ಲಿ, ಒಂಬತ್ತು ಆಟಗಳಲ್ಲಿ 21 ವಿಕೆಟ್ಟುಗಳನ್ನು ಪಡೆದುಕೊಳ್ಳುವ ಮೂಲಕ ಪಂದ್ಯಾವಳಿಯ-ಆಟಗಾರ ಎಂಬ ಪ್ರಶಸ್ತಿಯನ್ನು ಗಳಿಸುವಲ್ಲಿ ಬಾಂಡ್ ಸಫಲನಾದ.
2002ರ ವೆಸ್ಟ್ ಇಂಡೀಸ್ ಪ್ರವಾಸ
[ಬದಲಾಯಿಸಿ]ಪಂದ್ಯಾವಳಿಯ ನಂತರ ಪಾದಕ್ಕೆ ಆದ ಒಂದು ಗಾಯದಿಂದ ಅವನು ಬಳಲಿದ; ಇದು ಅವನ ವೃತ್ತಿಜೀವನವು ಹಾಳಾಗಲು ಕಾರಣವಾದ ಅನೇಕ ಗಾಯಗಳಲ್ಲಿ ಒಂದಾಗಿತ್ತು. ಆದರೂ ಸಹ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ತಂಡವು 2002ರಲ್ಲಿ ಹಮ್ಮಿಕೊಂಡ ಪ್ರವಾಸದ ವೇಳೆಗೆ ಅವನು ಗಾಯದಿಂದ ಚೇತರಿಸಿಕೊಂಡು ಮತ್ತೆ ಆಡಲು ಸಮರ್ಥನಾದ. ಕೆರಿಬಿಯನ್ ನೆಲದಲ್ಲಿ ತಂಡವು ಗಳಿಸಿದ ಮೊಟ್ಟ-ಮೊದಲ ಸರಣಿ ವಿಜಯದಲ್ಲಿ ಆತ ಅತಿಹೆಚ್ಚಿನ ವಿಕೆಟ್ಟು ಪಡೆದವ ಎನಿಸಿಕೊಂಡ.
2006ರ ವಿಶ್ವ ಕಪ್
[ಬದಲಾಯಿಸಿ]ತನ್ನ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಮುಂದುವರಿಸಿದ ಬಾಂಡ್, 2003ರ ವಿಶ್ವ ಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಬೌಲಿಂಗ್ ಸರಾಸರಿಗಳಲ್ಲಿ ಮತ್ತೊಮ್ಮೆ ಅಗ್ರಸ್ಥಾನವನ್ನು ಗಳಿಸಿದ.
ಪ್ರಮುಖ ಗಾಯದ ಸಮಸ್ಯೆಗಳು
[ಬದಲಾಯಿಸಿ]ಪಂದ್ಯಾವಳಿಯ ಕೆಲವೇ ದಿನಗಳ ನಂತರ, ತನ್ನ ಬೆನ್ನಿನಲ್ಲಿ ಕಾಣಿಸಿಕೊಂಡ ಒತ್ತಡದ ಅಸ್ಥಿಭಂಗದ ಒಂದು ಸಮಸ್ಯೆಯನ್ನು ಅವನು ಅನುಭವಿಸಬೇಕಾಯಿತು. 2004ರ ಫೆಬ್ರುವರಿಯಲ್ಲಿ ತಂಡಕ್ಕೆ ಮರಳಬೇಕು ಎಂದು ಆರಂಭದಲ್ಲಿ ಅವನು ಯೋಜಿಸಿದ್ದನಾದರೂ, 2005ರ ಆಗಸ್ಟ್‌ವರೆಗೂ ಅವನು ತಂಡದಿಂದ ಹೊರಗೆ ಉಳಿಯಬೇಕಾಗಿ ಬಂತು.
ಭಾರತದ ವಿರುದ್ಧ ಪುನರಾಗಮನ
[ಬದಲಾಯಿಸಿ]ಆದಾಗ್ಯೂ, ಬಾಂಡ್‌ನ ಮರುರೂಪಿಸಲ್ಪಟ್ಟ ಬೌಲಿಂಗ್ ಶೈಲಿಯು ಅದರ ಪೂರ್ವವರ್ತಿ ಶೈಲಿಗಿಂತ ಕಡಿಮೆ ಮಾರಕವಾಗೇನೂ ಇರಲಿಲ್ಲ: ಭಾರತದ ವಿರುದ್ಧ ಮರಳಿ ಆಡಿದ ತನ್ನ ಎರಡನೇ ಪಂದ್ಯದಲ್ಲಿ ಹತ್ತೊಂಬತ್ತು ಓಟಗಳಿಗೆ ಆರು ವಿಕೆಟ್‌ಗಳನ್ನು ಆತ ಗಳಿಸಿದ.
ICLಗೆ ಮಾಡಿದ ಪಕ್ಷಾಂತರ
[ಬದಲಾಯಿಸಿ]2008ರ ಜನವರಿಯಲ್ಲಿ, ದಕ್ಷಿಣ ಆಫ್ರಿಕಾದಲ್ಲಿನ ಪ್ರವಾಸದ ವೇಳೆಯಲ್ಲಿ ಉಂಟಾದ ಗಾಯವೊಂದರಿಂದ ಚೇತರಿಸಿಕೊಳ್ಳುತ್ತಿರುವಾಗ, ಅನಧಿಕೃತವಾದ ಇಂಡಿಯನ್ ಕ್ರಿಕೆಟ್ ಲೀಗ್ ಪರವಾಗಿ ಆಡಲು ಬಾಂಡ್ ಸಹಿಹಾಕಿದ್ದ ಎಂದು ಪ್ರಕಟಿಸಲಾಯಿತು.[೨೨] ಇದು ಅವನ ಅಂತರರಾಷ್ಟ್ರೀಯ ಭವಿಷ್ಯವನ್ನು ಅಪಾಯಕ್ಕೆ ಸಿಕ್ಕಿಸಿತು; ಏಕೆಂದರೆ ಲೀಗ್‌ನೊಂದಿಗೆ ಗುರುತಿಸಿಕೊಂಡಿರುವ ಆಟಗಾರರನ್ನು ಆಯ್ಕೆಮಾಡದಂತೆ ಆಯ್ಕೆದಾರರಿಗೆ ಉತ್ತೇಜನ ನೀಡಲಾಗುವುದು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಕೆಲವೇ ದಿನಗಳಿಗೆ ಮುಂಚಿತವಾಗಿ ಪ್ರಕಟಿಸಿತ್ತು.[೨೩] ಇದರ ಪರಿಣಾಮವಾಗಿ, ತಿಂಗಳ ಅಂತ್ಯದ ವೇಳೆಗೆ ಪ್ರಕಟಣೆಯೊಂದು ಹೊರಬಿದ್ದು, ಗುತ್ತಿಗೆಯ ಆಧಾರದ ಮೇಲಿರುವ ಆಟಗಾರರು ICLನಲ್ಲಿ ಪಾಲ್ಗೊಳ್ಳುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) (ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ನಿಷೇಧಿಸಿದ್ದರಿಂದಾಗಿ, ನ್ಯೂಜಿಲೆಂಡ್ ಕ್ರಿಕೆಟ್ ಜೊತೆಗಿನ ಬಾಂಡ್‌ನ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಅದು ತಿಳಿಸಿತು.[೨೪]
ಹ್ಯಾಂಪ್‌ಷೈರ್
[ಬದಲಾಯಿಸಿ]2008ರ ಫೆಬ್ರುವರಿ 22ರಂದು, ಇಂಗ್ಲಿಷ್ ಸ್ವದೇಶಿ ಕ್ರಿಕೆಟ್ ತಂಡವಾದ ಹ್ಯಾಂಪ್‌ಷೈರ್ ಪರವಾಗಿ ಆಡಲು ಬಾಂಡ್ ಸಹಿಹಾಕಿದ. ಸದರಿ ಕ್ಲಬ್‌ಗಾಗಿ ನಾಲ್ಕು ಕೌಂಟಿ ಚಾಂಪಿಯನ್‌ಗಿರಿ ಪಂದ್ಯಗಳನ್ನು ಆಡಿದ ಬಾಂಡ್, 19.21ರಷ್ಟಿದ್ದ ಒಂದು ಬೌಲಿಂಗ್ ಸರಾಸರಿಯಲ್ಲಿ 19 ವಿಕೆಟ್ಟುಗಳನ್ನು ಪಡೆದ; ಈ ಅವಧಿಯಲ್ಲಿ ಸಸೆಕ್ಸ್ ವಿರುದ್ಧದ ಪ್ರಥಮ ಪ್ರವೇಶದ ಪಂದ್ಯದಲ್ಲಿ ಪಡೆದ 7/66ರ ಸಾಧನೆಯು ಅವನ ಅಂಕಿ-ಅಂಶಗಳ ಪೈಕಿ ಅತ್ಯುತ್ತಮ ಎನಿಸಿಕೊಂಡಿತು. ಇದು ಸದರಿ ಕ್ಲಬ್‌ಗೆ ಸಂಬಂಧಿಸಿದಂತೆ ಬಾಂಡ್ ಪಡೆದ ಎರಡು ಬಾರಿಯ ಐದು ವಿಕೆಟ್ಟು ಗಳಿಕೆಗಳ ಪೈಕಿ ಒಂದೆನಿಸಿತ್ತು. ಇದರ ಜೊತೆಗೆ, ಹ್ಯಾಂಪ್‌ಷೈರ್ ತಂಡದ ಪರವಾಗಿ ಪಟ್ಟಿ-Aಗೆ ಸಂಬಂಧಿಸಿದ ಮೂರು ಪಂದ್ಯಗಳಲ್ಲಿ ಆಟವಾಡಿದ ಬಾಂಡ್, 17.00ಯಷ್ಟಿದ್ದ ಒಂದು ಬೌಲಿಂಗ್ ಸರಾಸರಿಯಲ್ಲಿ 3 ವಿಕೆಟ್ಟುಗಳನ್ನು ತೆಗೆದುಕೊಂಡ ಮತ್ತು 3-11ರ ಸಾಧನೆಯು ಅವನ ಅಂಕಿ-ಅಂಶಗಳ ಪೈಕಿ ಅತ್ಯುತ್ತಮವೆನಿಸಿಕೊಂಡಿತು.
ಅಧಿಕೃತ ಶ್ರೇಣಿಗಳಿಗೆ ಪುನರಾಗಮನ
[ಬದಲಾಯಿಸಿ]2009ರ ಮೇ ತಿಂಗಳಿನಲ್ಲಿ, ಇಂಡಿಯನ್ ಕ್ರಿಕೆಟ್ ಲೀಗ್ ಪ್ರಕಟಣೆಯೊಂದನ್ನು ನೀಡಿ ಹಲವಾರು ಆಟಗಾರರನ್ನು ಅವರ ಒಪ್ಪಂದಗಳಿಂದ ವಿಮೋಚನೆಗೊಳಿಸಿರುವುದಾಗಿ ತಿಳಿಸಿತು. ಅನಧಿಕೃತ ಲೀಗ್‌ನೊಂದಿಗಿನ ತನ್ನ ಬಾಂಧವ್ಯಗಳನ್ನು ಕಡಿದುಕೊಂಡಿರುವುದಾಗಿ ಜೂನ್ ತಿಂಗಳಿನಲ್ಲಿ ಬಾಂಡ್ ನ್ಯೂಜಿಲೆಂಡ್ ಕ್ರಿಕೆಟ್‌ಗೆ ದೃಢೀಕರಿಸಿದ; ಇದರಿಂದಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದಕ್ಕೆ ಸಂಬಂಧಿಸಿದಂತೆ ತಾನು ಲಭ್ಯವಿರುವುದನ್ನು ಆತ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಂತಾಯಿತು. 2009/10ರ ಕ್ರಿಕೆಟ್ ಋತುವಿಗೆ ಸಂಬಂಧಿಸಿದಂತೆ ಅವನೊಂದಿಗೆ ಯಥೋಚಿತವಾದ ಒಂದು ಪ್ರಧಾನವಾದ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.[೨೫]
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ
[ಬದಲಾಯಿಸಿ]ಅಂತಿಮವಾಗಿ, 2009ರ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಕೊಲಂಬೊದಲ್ಲಿ ನಡೆದ ಟ್ವೆಂಟಿ20 ಪಂದ್ಯವೊಂದರಲ್ಲಿ ಆಡುವ ಮೂಲಕ ಅವನು ಮತ್ತೊಮ್ಮೆ ನ್ಯೂಜಿಲೆಂಡ್ ತಂಡದಲ್ಲಿ ಒಬ್ಬನೆನಿಸಿಕೊಂಡ. ಟೆಸ್ಟ್ ತಂಡದೊಳಗೆ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಆತ ಸಾಕಷ್ಟು ಶ್ರಮವಹಿಸಿದ ಮತ್ತು ಪಾಕಿಸ್ತಾನದ ವಿರುದ್ಧದ ಡ್ಯುನೆಡಿನ್ ಟೆಸ್ಟ್‌ನಲ್ಲಿ ಒಂದು ಅಂತಿಮವಾದ ಪಂದ್ಯ-ಜಯಿಸುವ ಪ್ರದರ್ಶನವನ್ನು ನೀಡುವ ಮೂಲಕ ತನ್ನಲ್ಲಿನ್ನೂ ಕಸುವಿರುವುದನ್ನು ಸಾಬೀತುಮಾಡಿದ. ಟೆಸ್ಟ್ ಪಂದ್ಯಗಳನ್ನು ಕೈಬಿಟ್ಟು, ಕೇವಲ ಸೀಮಿತ-ಓವರುಗಳ ಕ್ರಿಕೆಟ್ ಕಡೆಗೆ ಗಮನಹರಿಸಲು ಅವನು ನಿರ್ಧರಿಸುವುದಕ್ಕೆ ಮುಂಚಿತವಾಗಿಯೇ, ಅವನಲ್ಲಿ ಕಂಡುಬಂದ ಕಿಬ್ಬೊಟ್ಟೆಯ ಹರಿತದ ಸಮಸ್ಯೆಯು ಸರಣಿಯ ಮಧ್ಯದಲ್ಲಿಯೇ ನಿರ್ಗಮಿಸುವಂತೆ ಅವನ ಮೇಲೆ ನಿರ್ಬಂಧ ಹೇರಿತು. 2010ರ ಜನವರಿಯಲ್ಲಿ, ಮುಂಬಯಿಯಲ್ಲಿ ನಡೆದ ಮೂರನೇ IPL ಹರಾಜು ಪ್ರಕ್ರಿಯೆಯಲ್ಲಿ ಅತಿಹೆಚ್ಚಿನ ಮೊತ್ತಕ್ಕೆ ಖರೀದಿಯಾದವರ ಪೈಕಿ ಬಾಂಡ್ ಕೂಡಾ ಒಬ್ಬನಾಗಿದ್ದ; ಕೋಲ್ಕತಾ ನೈಟ್ ರೈಡರ್ಸ್ ವತಿಯಿಂದ ಮಾಡಲಾದ 750,000$ನಷ್ಟು ಮೊತ್ತದ ಗರಿಷ್ಟ ಸಾಧ್ಯವಾದ ಸವಾಲು ಬೆಲೆಯು ಈ ಸಂದರ್ಭದಲ್ಲಿ ದಕ್ಕಿತು.[೨೬]
ಸಾಧನೆಗಳು ಮತ್ತು ಪ್ರಶಸ್ತಿಗಳು
[ಬದಲಾಯಿಸಿ]ತನ್ನ ವೃತ್ತಿಜೀವನದ ಅವಧಿಯಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮಜಬೂತಾದ ಯಶಸ್ಸನ್ನು ಬಾಂಡ್ ಅನುಭವಿಸಿದ. 2002ರ ಜನವರಿ 26ರಂದು, ಆಸ್ಟ್ರೇಲಿಯಾ ತಂಡದ ವಿರುದ್ಧ 25 ರನ್‌ಗಳಿಗೆ 5 ವಿಕೆಟ್ಟುಗಳನ್ನು ಪಡೆಯುವ ಮೂಲಕ, ನ್ಯೂಜಿಲೆಂಡ್ ತಂಡವು ವಿಜಯವನ್ನು ಸಾಧಿಸುವಲ್ಲಿ ಶೇನ್ ಬಾಂಡ್ ಪ್ರಮುಖ ಪಾತ್ರ ವಹಿಸಿದ. ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ವಿರುದ್ಧ 6/23 (ಇದು ಆ ಸಮಯದ ODIಗಳಲ್ಲಿನ ನ್ಯೂಜಿಲೆಂಡ್‌ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು)[ಸೂಕ್ತ ಉಲ್ಲೇಖನ ಬೇಕು] ಸಾಧನೆಯನ್ನು ಬಾಂಡ್ ದಾಖಲಿಸಿದ; ಅನುಕ್ರಮದ ಎಸೆತಗಳಲ್ಲಿ ಡೇಮಿಯನ್ ಮಾರ್ಟಿನ್ ಹಾಗೂ ಬ್ರಾಡ್ ಹಾಗ್ ಎಂಬಿಬ್ಬರು ಆಟಗಾರರ ವಿಕೆಟ್‌ಗಳನ್ನು ಪಡೆದ ನಂತರ ಒಂದು ಹ್ಯಾಟ್-ಟ್ರಿಕ್ ಸಾಧನೆಯನ್ನು ಮೆರೆದಿದ್ದೂ ಇದರಲ್ಲಿ ಸೇರಿತ್ತು. ಬೆನ್ನಿಗೆ ಸಂಬಂಧಿಸಿದ ಹಲವು ತೆರನಾದ ಸಮಸ್ಯೆಗಳೊಂದಿಗೆ ಬಾಂಡ್ ಹೆಣಗಿದ; ಈ ಸಮಸ್ಯೆಯಿಂದಾಗಿ ಮೃದು ಅಂಗಾಂಶದಲ್ಲಿ ಹರಿತವು ಕಂಡುಬಂತು.[ಸೂಕ್ತ ಉಲ್ಲೇಖನ ಬೇಕು] ಹಿಂದೆಲ್ಲಾ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅನೇಕ ಬಾರಿ ಆಚೆಗೆ ಉಳಿಯುವುದಕ್ಕೆ ಈ ಗಾಯಗಳು ಕಾರಣವಾಗಿದ್ದವು.
ಭಾರತದ ವಿರುದ್ಧದ ಪಂದ್ಯದಲ್ಲಿ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ವಿರೇಂದರ್ ಸೆಹ್ವಾಗ್ ಈ ಮೂವರ ವಿಕೆಟ್ಟುಗಳನ್ನು ಒಳಗೊಂಡಂತೆ 19 ರನ್‌ಗಳಿಗೆ 6 ವಿಕೆಟ್ಟುಗಳನ್ನು ಪಡೆಯುವ ಮೂಲಕ, ಬಾಂಡ್ ನ್ಯೂಜಿಲೆಂಡ್ ತಂಡವನ್ನು ಸೋಲಿನ ದವಡೆಯಿಂದ ಉಳಿಸಿದ. ಇವು ಇಂದಿನವರೆಗಿನ ಓರ್ವ ನ್ಯೂಜಿಲೆಂಡ್ ಆಟಗಾರನಿಂದ ನೀಡಲ್ಪಟ್ಟ ಅತ್ಯುತ್ತಮ ಒಂದು ದಿನದ ಅಂತರರಾಷ್ಟ್ರೀಯ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಬಾಂಡ್ 69 ರನ್ನುಗಳಿಗೆ 5 ವಿಕೆಟ್ಟುಗಳನ್ನು ಪಡೆದುಕೊಂಡ; ಕೇವಲ 13 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೇ ಬಾರಿಗೆ 5-ವಿಕೆಟ್ಟುಗಳನ್ನು ಗಳಿಸಿದ ಸಾಧನೆ ಇದಾಗಿತ್ತು. ಈ ಹಿನ್ನೆಲೆಯಲ್ಲಿ ಅವನಿಗೆ ಪಂದ್ಯಪುರುಷ ಪ್ರಶಸ್ತಿಯು ಲಭಿಸಿತು. ಇದು ತನ್ನ ಇದುವರೆಗಿನ ಅತ್ಯುತ್ತಮ ಬೌಲಿಂಗ್ ಪ್ರಯತ್ನಗಳಲ್ಲಿ ಒಂದಾಗಿತ್ತು ಎಂದು ಅವನು ಹೇಳಿಕೊಂಡಿದ್ದಾನೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ವೆಸ್ಟ್ ಇಂಡೀಸ್ ತಂಡವನ್ನು 27 ಓಟಗಳಿಂದ ಸೋಲಿಸಿತು.[ಸೂಕ್ತ ಉಲ್ಲೇಖನ ಬೇಕು]
2007ರ ಜನವರಿ 14ರಂದು ಬೆಲ್ಲೆರೈವ್ ಓವಲ್‌ನಲ್ಲಿ ನಡೆದ ಒಂದು-ದಿನದ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಕಡೆಯ ಓವರ್‌ನಲ್ಲಿ ಬಾಂಡ್ ಒಂದು ಹ್ಯಾಟ್-ಟ್ರಿಕ್ ಪಡೆದ; ಅನುಕ್ರಮದ ಎಸೆತಗಳಲ್ಲಿ ಕೆಮೆರಾನ್ ವೈಟ್, ಆಂಡ್ರ್ಯೂ ಸಿಮಂಡ್ಸ್ ಹಾಗೂ ನಾಥನ್ ಬ್ರೇಕನ್ ಈ ಮೂವರ ವಿಕೆಟ್‌ಗಳನ್ನು ಪಡೆದದ್ದು ಅವನ ಸಾಧನೆಯಾಗಿತ್ತು. ಈ ಆಟವನ್ನು 105 ಓಟಗಳಿಂದ ತಂಡವು ಸೋತಿತಾದರೂ, ಸೀಮಿತ-ಓವರುಗಳ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದು ಹ್ಯಾಟ್-ಟ್ರಿಕ್ ಸಾಧನೆಯನ್ನು ದಾಖಲಿಸಿದ ನ್ಯೂಜಿಲೆಂಡ್‌ನ ಎರಡನೇ ಆಟಗಾರ ಎಂಬ ಕೀರ್ತಿಗೆ ಬಾಂಡ್ ಪಾತ್ರನಾದ.[೨೭]
ಇದಾದ ಕೆಲದಿನಗಳ ನಂತರ 2007ರ ಜನವರಿ 23ರಂದು, ಒಂದು-ದಿನದ ಪಂದ್ಯಗಳಲ್ಲಿ 100 ವಿಕೆಟ್ಟುಗಳನ್ನು ಪಡೆದ ಇತಿಹಾಸದಲ್ಲಿನ ಎರಡನೇ-ಅತ್ಯಂತ ವೇಗದ ಬೌಲರ್ ಎಂಬ ಕೀರ್ತಿಯನ್ನು ಬಾಂಡ್ ಪಡೆದ; ಈ ನಿಟ್ಟಿನಲ್ಲಿ ಅತಿವೇಗವಾಗಿ 100 ವಿಕೆಟ್ಟುಗಳ ಗಡಿಯನ್ನು ತಲುಪಿದ ಅತ್ಯಂತ ವೇಗದ ಬೌಲರ್ ಆದ ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್‌ಗಿಂತ ಕೇವಲ ಒಂದು ಪಂದ್ಯದಲ್ಲಿ ಬಾಂಡ್ ಹಿಂದಿದ್ದ. ಆದಾಗ್ಯೂ, ಈ ಗಮನಾರ್ಹವಾದ ಸಾಧನೆಯನ್ನು ಮೆರೆಯಲು ಆ ಪಾಕಿಸ್ತಾನೀ ಆಟಗಾರನಿಗಿಂತ 54 ಕಡಿಮೆ ಎಸೆತಗಳನ್ನು ಬಾಂಡ್ ತೆಗೆದುಕೊಂಡ, ಮತ್ತು ಬೌಲ್ ಮಾಡಲ್ಪಟ್ಟ ಎಸೆತಗಳ ಸಂಖ್ಯೆಯ ಲೆಕ್ಕದಲ್ಲಿ ಹೇಳುವುದಾದರೆ ಆತ 100 ವಿಕೆಟ್ಟುಗಳನ್ನು ಪಡೆಯುವಲ್ಲಿನ ಅತ್ಯಂತ ವೇಗದ ಬೌಲರ್ ಆಗಿದ್ದ.[ಸೂಕ್ತ ಉಲ್ಲೇಖನ ಬೇಕು]
2007ರ ಫೆಬ್ರುವರಿ 16ರಂದು ನಡೆದ 2007ರ ಚಾಪೆಲ್-ಹ್ಯಾಡ್ಲೀ ಟ್ರೋಫಿಯಲ್ಲಿ 23 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆಯುವ ಮೂಲಕ, ತನ್ನ 5-ವಿಕೆಟ್ಟುಗಳ ಗಳಿಕೆಯನ್ನು ನಾಲ್ಕನೇ ಬಾರಿಗೆ ಆತ ದಾಖಲಿಸಿದ. ಈ ಸಾಧನೆಯಿಂದಾಗಿ ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾ ತಂಡದ ಸ್ಕೋರನ್ನು 149ಕ್ಕೇ ಮಿತಿಗೊಳಿಸುವಲ್ಲಿ ಯಶಸ್ವಿಯಾಯಿತು. ಇದರಿಂದ ಆಸ್ಟ್ರೇಲಿಯಾ ವಿರುದ್ಧ 10-ವಿಕೆಟ್ಟುಗಳ ವಿಜಯವನ್ನು ನ್ಯೂಜಿಲೆಂಡ್ ತಂಡವು ದಾಖಲಿಸಲು ಸಾಧ್ಯವಾಗಿದ್ದೇ ಅಲ್ಲದೇ, ಇದು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿನ ಆಸ್ಟ್ರೇಲಿಯಾ ತಂಡದ ಭಾರೀ ಸೋಲು ಎಂದೂ ಸಹ ದಾಖಲಾಯಿತು. ಚಾಪೆಲ್-ಹ್ಯಾಡ್ಲೀ ಸರಣಿಯ ಅಂತಿಮ ಪಂದ್ಯದಲ್ಲಿ ಬಾಂಡ್ ಹೊರಗುಳಿದಿದ್ದನಾದರೂ, ಚಾಪೆಲ್-ಹ್ಯಾಡ್ಲೀ ಟ್ರೋಫಿಯ ಇತಿಹಾಸದಲ್ಲೇ ಮೊದಲಬಾರಿಗೆ ಸಂಭಾವ್ಯ 3-0 ಸರಣಿ ವಿಜಯವನ್ನು ಪಡೆಯುವಲ್ಲಿ ಅವನು ಸಾಧನಭೂತ ಆಟಗಾರನಾಗಿ ಹೊರಹೊಮ್ಮಿದ್ದ.[ಸೂಕ್ತ ಉಲ್ಲೇಖನ ಬೇಕು]
2007ರ ಮೇ ತಿಂಗಳ 16ರಂದು, 2006/2007ರ ಋತುವಿಗೆ ಸಂಬಂಧಿಸಿದ ವರ್ಷದ ನ್ಯೂಜಿಲೆಂಡ್ ಕ್ರಿಕೆಟ್‌ಪಟು ಎಂಬುದಾಗಿ ಮತ್ತು ಆ ಋತುವಿಗೆ ಸಂಬಂಧಿಸಿದ ಅತ್ಯುತ್ತಮ ಬೌಲರ್ ಎಂಬುದಾಗಿ ಬಾಂಡ್ ಹೆಸರಿಸಲ್ಪಟ್ಟ. ಸೆಪ್ಟೆಂಬರ್‌ನಲ್ಲಿ, ಕಳೆದ ವರ್ಷದಲ್ಲಿನ ICCಯ ಅತ್ಯುತ್ತಮ ಟೆಸ್ಟ್ ಪ್ರದರ್ಶನದ ತಂಡದಲ್ಲಿ ಬಾಂಡ್ ಹೆಸರಿಸಲ್ಪಟ್ಟ.[ಸೂಕ್ತ ಉಲ್ಲೇಖನ ಬೇಕು]
ಅವನ ನೋಂದಣಿಯನ್ನು ರದ್ದುಪಡಿಸುವ ಪ್ರಯತ್ನಗಳ ನಡುವೆಯೂ, ECB ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಹ್ಯಾಂಪ್‌ಷೈರ್ ಪರವಾಗಿ ಆಡಲು ಸಹಿಹಾಕುವುದಕ್ಕೆ ಶೇನ್ ಬಾಂಡ್‌ಗೆ ಅನುಮತಿ ನೀಡಲಾಯಿತು. 2008ರ ಏಪ್ರಿಲ್ 16ರಂದು, 2007ರ ಚಾಂಪಿಯನ್ನರಾದ ಸಸೆಕ್ಸ್ ತಂಡದ ವಿರುದ್ಧ ಆತ ತನ್ನ ಪ್ರಥಮ ಪ್ರವೇಶವನ್ನು ಮಾಡಿ, ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಅಂಕಿ-ಅಂಶಗಳಲ್ಲಿ ತನ್ನ ಹೆಸರನ್ನು ದಾಖಲಿಸಿದ. 2009ರ ನವೆಂಬರ್ 27ರಂದು, ಪಾಕಿಸ್ತಾನದ ವಿರುದ್ಧದ ತನ್ನ ಪುನರಾಗಮನದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಅವನು ಐದು ವಿಕೆಟ್ ಗಳಿಕೆಯ ಸಾಧನೆಯನ್ನು ಐದನೇ ಬಾರಿಗೆ ದಾಖಲಿಸಿದ.
ಟೆಸ್ಟ್‌ಗಳಲ್ಲಿ ಐದು-ವಿಕೆಟ್‌ಗಳ ಗಳಿಕೆಗಳು
[ಬದಲಾಯಿಸಿ]- ಪಂದ್ಯ ಎಂಬ ಅಂಕಣದ ಶೀರ್ಷಿಕೆಯು ಅವನ ವೃತ್ತಿಜೀವನದ ಪಂದ್ಯದ ಸಂಖ್ಯೆ ಯನ್ನು ಉಲ್ಲೇಖಿಸುತ್ತದೆ.
ಶೇನ್ ಬಾಂಡ್‌ನ ಟೆಸ್ಟ್ ಪಂದ್ಯಗಳ 5-ವಿಕೆಟ್ ಗಳಿಕೆಗಳು[೨೮] | |||||||
---|---|---|---|---|---|---|---|
ವಿಕೆಟ್ಟುಗಳು | ಪಂದ್ಯ | ವಿರುದ್ಧ | ನಗರ/ರಾಷ್ಟ್ರ | ಸ್ಥಳ | ವರ್ಷ | ಫಲಿತಾಂಶ | |
[1] | 5-78 | 5 | ವೆಸ್ಟ್ ಇಂಡೀಸ್ | ಬ್ರಿಜ್‌ಟೌನ್, ಬಾರ್ಬಡಾಸ್ | ಕೆನ್ಸಿಂಗ್‌ಟನ್ ಓವಲ್ | 2002 | ವಿಜಯ |
[2] | 5-104 | 6 | ವೆಸ್ಟ್ ಇಂಡೀಸ್ | ಸೇಂಟ್ ಜಾರ್ಜ್'ಸ್, ಗ್ರೆನಡಾ | ಕ್ರಿಕೆಟ್ ನ್ಯಾಷನಲ್ ಸ್ಟೇಡಿಯಂ | 2002 | ಸರಿಸಮ ಪಂದ್ಯ |
[3] | 6-51 | 12 | ಜಿಂಬಾಬ್ವೆ | ಬುಲಾವಯೊ, ಜಿಂಬಾಬ್ವೆ | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ | 2005 | ವಿಜಯ |
[4] | 5-69 | 13 | ವೆಸ್ಟ್ ಇಂಡೀಸ್ | ಆಕ್ಲೆಂಡ್, ನ್ಯೂಜಿಲೆಂಡ್ | ಈಡನ್ ಪಾರ್ಕ್ | 2006 | ವಿಜಯ |
[5] | 5-107 | 18 | ಪಾಕಿಸ್ತಾನ | ಡ್ಯುನೆಡಿನ್, ನ್ಯೂಜಿಲೆಂಡ್ | ಯೂನಿವರ್ಸಿಟಿ ಓವಲ್ | 2009 | ವಿಜಯ |
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿನ 5 ವಿಕೆಟ್‌ಗಳ ಇನ್ನಿಂಗ್ಸ್
[ಬದಲಾಯಿಸಿ]ಶೇನ್ ಬಾಂಡ್‌ನ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿನ 5-ವಿಕೆಟ್ಟು ಗಳಿಕೆಗಳು[೨೯] | |||||||
---|---|---|---|---|---|---|---|
ವಿಕೆಟ್ಟುಗಳು | ಪಂದ್ಯ | ವಿರುದ್ಧ | ನಗರ/ರಾಷ್ಟ್ರ | ಸ್ಥಳ | ವರ್ಷ | ಫಲಿತಾಂಶ | |
[1] | 5-25 | 5 | ಆಸ್ಟ್ರೇಲಿಯಾ | ಅಡಿಲೇಡ್, ಆಸ್ಟ್ರೇಲಿಯಾ | ಅಡಿಲೇಡ್ ಓವಲ್ | 2002 | ವಿಜಯ |
[2] | 6-23 | 25 | ಆಸ್ಟ್ರೇಲಿಯಾ | ಪೋರ್ಟ್ ಎಲಿಜಬೆತ್, ದಕ್ಷಿಣ ಆಫ್ರಿಕಾ | ಸೇಂಟ್ ಜಾರ್ಜ್'ಸ್ ಓವಲ್ | 2003 | ಸೋಲು |
[3] | 6-19 | 29 | ಭಾರತ | ಬುಲಾವಯೊ, ಜಿಂಬಾಬ್ವೆ | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ | 2005 | ವಿಜಯ |
[4] | 5-23 | 58 | ಆಸ್ಟ್ರೇಲಿಯಾ | ವೆಲಿಂಗ್ಟನ್, ನ್ಯೂಜಿಲೆಂಡ್ | ವೆಸ್ಟ್‌ಪ್ಯಾಕ್ ಸ್ಟೇಡಿಯಂ | 2007 | ವಿಜಯ |
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ
[ಬದಲಾಯಿಸಿ]ಹಲವಾರು ವರ್ಷಗಳಿಂದ ತಾನು ಅನುಭವಿಸುತ್ತಲೇ ಬಂದಿದ್ದ ಗಾಯಗಳ ಕಾರಣದಿಂದಾಗಿ, ಟೆಸ್ಟ್ ಕ್ರಿಕೆಟ್‌ನಿಂದ ತಾನು ನಿವೃತ್ತಿಯಾಗುತ್ತಿರುವುದನ್ನು 2009ರ ಡಿಸೆಂಬರ್‌ನಲ್ಲಿ ಬಾಂಡ್ ಘೋಷಿಸಿದ. ಕ್ರಿಕೆಟ್ ಆಟದ ಸೀಮಿತ-ಓವರುಗಳ ಸ್ವರೂಪದ ಪಂದ್ಯಗಳಲ್ಲಿ ತನ್ನ ವೃತ್ತಿಜೀವನವನ್ನು ವಿಸ್ತರಿಸಲು ತಾನು ಬಯಸಿರುವುದಾಗಿ ಅವನು ಈ ಸಂದರ್ಭದಲ್ಲಿ ತಿಳಿಸಿದ. 22.09ರಷ್ಟು ಪ್ರಮಾಣದ ಒಂದು ಸರಾಸರಿಯಲ್ಲಿ, 18 ಪಂದ್ಯಗಳಲ್ಲಿ 87 ವಿಕೆಟ್ಟುಗಳನ್ನು ಪಡೆಯುವ ಮೂಲಕ ಹಾಗೂ 38.7ರಷ್ಟಿದ್ದ ಒಂದು ಹೊಡೆತದ ಪ್ರಮಾಣವನ್ನು ದಾಖಲಿಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿನ ತನ್ನ ವೃತ್ತಿಜೀವನಕ್ಕೆ ಅವನು ಮಂಗಳ ಹಾಡಿದ.
ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ
[ಬದಲಾಯಿಸಿ]2010ರಲ್ಲಿ[೩೦] ನಡೆದ ICC T20 ಸರಣಿಯ ಉಪಾಂತ್ಯಗಳಿಗೆ ನ್ಯೂಜಿಲೆಂಡ್ ತಂಡವು ತಲುಪಲು ವಿಫಲಗೊಂಡ ನಂತರ, 2010ರ ಮೇ ತಿಂಗಳ 14ರಂದು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ತಾನು ನಿವೃತ್ತಿಯಾಗುತ್ತಿರುವುದಾಗಿ ಶೇನ್ ಬಾಂಡ್ ಹಠಾತ್ತನೆ ಪ್ರಕಟಿಸಿದ.
IPL
[ಬದಲಾಯಿಸಿ]ಲಾಭದಾಯಕವಾದ IPLನ ಮೂರನೇ ಋತುವಿಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಹರಾಜಿನಲ್ಲಿ, ಶೇನ್ ಬಾಂಡ್ ಪ್ರಮುಖ ಆಕರ್ಷಣೆಗಳ ಪೈಕಿ ಒಬ್ಬನೆನಿಸಿಕೊಂಡಿದ್ದ; 750,000$ನಷ್ಟು ಮೊತ್ತವನ್ನೂ ಮೀರಿದ ಬಹಿರಂಗಪಡಿಸದ ಸಮಭಂಜಕ ಹಣದ (ಟೈಬ್ರೇಕರ್ ಹಣ) ಕಾರಣದಿಂದಾಗಿ, ಅವನ ಅಂತಿಮ ಬೆಲೆಯು 750,000 US$ಗೂ ಹೆಚ್ಚಿತ್ತು ಎಂದು ವರದಿಯಾದ ಹಿನ್ನೆಲೆಯಲ್ಲಿ ಬಾಂಡ್ ಈ ಆಕರ್ಷಣೆಯನ್ನು ಉಳಿಸಿಕೊಂಡಿದ್ದ.ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತಾ ನೈಟ್ ರೈಡರ್ಸ್ ಅವನ ಸೇವೆಗಳನ್ನು ಖರೀದಿಸಿತು.
ವೈಯಕ್ತಿಕ ಜೀವನ
[ಬದಲಾಯಿಸಿ]ಟ್ರೇಸಿ ಎಂಬಾಕೆಯನ್ನು ಬಾಂಡ್ ಮದುವೆಯಾಗಿದ್ದು, ಅವನಿಗೀಗ ಮೂರು ಮಕ್ಕಳಿವೆ.[೩೧]
ಆಕರಗಳು
[ಬದಲಾಯಿಸಿ]- ↑ ೧.೦ ೧.೧ http://www.cricinfo.com/newzealand/content/current/story/440750.html
- ↑ ಬಾಂಡ್ ಡಿಸೈಡ್ಸ್ ಟು ಗೋ ಅಂಡರ್ ದಿ ನೈಫ್ . ಕ್ರಿಸಿನ್ಫೋ, 2008ರ ಮಾರ್ಚ್ 28ರಂದು ಮರುಸಂಪಾದಿಸಲಾಯಿತು
- ↑ ಬಾಂಡ್‌ಸ್ ನ್ಯೂಜಿಲೆಂಡ್ ಡೇಸ್ ಅಪಿಯರ್ ಓವರ್ . ಕ್ರಿಸಿನ್ಫೊ, 2008ರ ಮಾರ್ಚ್ 28ರಂದು ಮರುಸಂಪಾದಿಸಲಾಯಿತು
- ↑ ನ್ಯೂಜಿಲೆಂಡ್ ಕೊನೆಗೊಳಿಸು ಬಾಂಡ್ ಒಪ್ಪಂದ . ಕ್ರಿಸಿನ್ಫೊ, 2008ರ ಮಾರ್ಚ್ 27ರಂದು ಮರುಸಂಪಾದಿಸಲಾಯಿತು
- ↑ http://www.cricinfo.com/newzealand/content/current/story/409911.html
- ↑ "Shane Bond retires from all cricket". Cricinfo. 2010-05-14. Retrieved 2010-05-15.
- ↑ ಬ್ರೆಟ್ ಲೀ, ದಿ ವರ್ಲ್ಡ್ಸ್ ಫಾಸ್ಟೆಸ್ಟ್ ಬೌಲರ್? . ಕ್ರಿಸಿನ್ಫೊ, 2008ರ ಮಾರ್ಚ್ 28ರಂದು ಮರುಸಂಪಾದಿಸಲಾಯಿತು
- ↑ ಬೆಸ್ಟ್ ಕೆರೀರ್ ಸ್ಟ್ರೈಕ್ ರೇಟ್ಸ್ ಇನ್ ODI ಕ್ರಿಕೆಟ್. ಕ್ರಿಸಿನ್ಫೊ, ಮಾರ್ಚ್ 28 ರಂದು ಮರುಸಂಪಾದಿಸಲಾಯಿತು
- ↑ ಬೆಸ್ಟ್ ಕೆರೀರ್ ಆವರೇಜಸ್ ಇನ್ ODI ಕ್ರಿಕೆಟ್. ಕ್ರಿಸಿನ್ಫೊ, 2008ರ ಮಾರ್ಚ್ 28ರಂದು ಮರುಸಂಪಾದಿಸಲಾಯಿತು
- ↑ ಬೆಸ್ಟ್ ಕೆರೀರ್ ಸ್ಟ್ರೈಕ್ ರೇಟ್ಸ್ ಇನ್ ಟೆಸ್ಟ್ ಕ್ರಿಕೆಟ್. ಕ್ರಿಸಿನ್ಫೊ, 2008ರ ಮಾರ್ಚ್ 28ರಂದು ಮರುಸಂಪಾದಿಸಲಾಯಿತು
- ↑ ಬೆಸ್ಟ್ ಕೆರೀರ್ ಆವರೇಜಸ್ ಇನ್ ಟೆಸ್ಟ್ ಕ್ರಿಕೆಟ್. ಕ್ರಿಸಿನ್ಫೊ, 2008ರ ಮಾರ್ಚ್ 28ರಂದು ಮರುಸಂಪಾದಿಸಲಾಯಿತು
- ↑ ಕ್ಯಾಂಟರ್‌ಬರಿ vs ಸೆಂಟ್ರಲ್ ಡಿಸ್ಟ್ರಿಕ್ಟ್ಸ್, ಷೆಲ್ ಟ್ರೋಫಿ 1996/97, ಅಟ್ ಡ್ಯೂಡ್ಲಿ ಪಾರ್ಕ್, 20–23 ಜನವರಿ 1997. ಕ್ರಿಕೆಟ್ ಆರ್ಕೀವ್, 2008ರ ಮಾರ್ಚ್ 29ರಂದು ಮರುಸಂಪಾದಿಸಲಾಯಿತು
- ↑ ಫಸ್ಟ್-ಕ್ಲಾಸ್ ಬೌಲಿಂಗ್ ಪರ್ಫಾರ್ಮೆನ್ಸ್ ಬೈ ಸೀಸನ್. ಕ್ರಿಕೆಟ್ ಆರ್ಕೀವ್, 2008ರ ಮಾರ್ಚ್ 29ರಂದು ಮರುಸಂಪಾದಿಸಲಾಯಿತು
- ↑ ಪೊಲೀಸ್‌ಮನ್ ಬಾಂಡ್ ಲುಕ್ಸ್ ಟು ಪುಟ್ ಇಂಗ್ಲಿಷ್ ಲೆಸನ್ಸ್ ಇನ್‌ಟು ಇಫೆಕ್ಟ್ . ಕ್ರಿಸಿನ್ಫೊ, 2008ರ ಮಾರ್ಚ್ 29ರಂದು ಮರುಸಂಪಾದಿಸಲಾಯಿತು
- ↑ ಫಸ್ಟ್-ಕ್ಲಾಸ್ ಬೌಲಿಂಗ್ ಪರ್ಫಾರ್ಮೆನ್ಸ್ ಬೈ ಸೀಸನ್. ಕ್ರಿಕೆಟ್ ಆರ್ಕೀವ್, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು
- ↑ ಫಸ್ಟ್-ಕ್ಲಾಸ್ ಮ್ಯಾಚಸ್ ಪ್ಲೇಯ್ಡ್ ಬೈ ಶೇನ್ ಬಾಂಡ್. ಕ್ರಿಕೆಟ್ ಆರ್ಕೀವ್, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು
- ↑ ಲಿಸ್ಟ್ A ಮ್ಯಾಚಸ್ ಪ್ಲೇಯ್ಡ್ ಬೈ ಶೇನ್ ಬಾಂಡ್. ಕ್ರಿಕೆಟ್ ಆರ್ಕೀವ್, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು
- ↑ ಡೆಲ್ಲಿ ಜೈಂಟ್ಸ್ ಬ್ಯಾಟಿಂಗ್ ಅಂಡ್ ಬೌಲಿಂಗ್ ಆವರೇಜಸ್, ಮಾರ್ಚ್/ಏಪ್ರಿಲ್ 2008. ಕ್ರಿಸಿನ್ಫೊ, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು
- ↑ ಬಾಂಡ್ ಅಂಡ್ ಟಫೆ ನೇಮ್ಡ್ ಇನ್ ಬ್ಲ್ಯಾಕ್ ಕ್ಯಾಪ್ಸ್ ಸೈಡ್ ಟು ಪ್ಲೇ ಆಸ್ಟ್ರೇಲಿಯಾ . ಕ್ರಿಸಿನ್ಫೊ, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು.
- ↑ ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 2ನ್ಡ್ ಟೆಸ್ಟ್, ಅಟ್ ಹೋಬರ್ಟ್, 22ನ್ಡ್-26 ನವೆಂಬರ್ 2001. ಕ್ರಿಕೆಟ್ ಆರ್ಕೀವ್, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು.
- ↑ ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 3ರ್ಡ್ ಟೆಸ್ಟ್, ಅಟ್ ಪರ್ತ್, 30 ನವೆಂಬರ್-4 ಡಿಸೆಂಬರ್ 2001. ಕ್ರಿಕೆಟ್ ಆರ್ಕೀವ್, 2008ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು.
- ↑ "ಶೇನ್ ಬಾಂಡ್ ಸೈನ್ಸ್ ಅಪ್ ಟು ದಿ ಇಂಡಿಯನ್ ಕ್ರಿಕೆಟ್ ಲೀಗ್". Archived from the original on 2008-03-08. Retrieved 2010-07-20.
- ↑ "ನ್ಯೂಜಿಲೆಂಡ್ ICL ಪಾರ್ಟಿಸಿಪೆಂಟ್ಸ್ ಲೆಫ್ಟ್ ಇನ್ ದಿ ಕೋಲ್ಡ್ ಬೈ NZC". Archived from the original on 2008-03-02. Retrieved 2010-07-20.
- ↑ "ಶೇನ್ ಬಾಂಡ್ ಹ್ಯಾಸ್ ನ್ಯೂಜಿಲೆಂಡ್ ಕಾಂಟ್ರಾಕ್ಟ್ ಟರ್ಮಿನೇಟೆಡ್". Archived from the original on 2008-02-13. Retrieved 2010-07-20.
- ↑ ಬೂತ್, ಲಾರೆನ್ಸ್. "ಮಿತ್‌ಸ್; ಅಂಡ್ ಸ್ಟಿರಿಯೋಟೈಪ್‌ಸ್." ದಿ ಸ್ಪಿನ್ , 30 ಜೂನ್ 2009.
- ↑ [೧].
- ↑ http://news.bbc.co.uk/sport2/hi/cricket/6258381.stm
- ↑ ಸ್ಟಾಟ್ಸ್‌ಗುರು: ಶೇನ್ ಬಾಂಡ್, ಕ್ರಿಸಿನ್ಫೊ , 12 ಮಾರ್ಚ್ 2010.
- ↑ ಸ್ಟಾಟ್ಸ್‌ಗುರು: ಶೇನ್ ಬಾಂಡ್, ಕ್ರಿಸಿನ್ಫೊ , 12 ಮಾರ್ಚ್ 2010.
- ↑ "ಆರ್ಕೈವ್ ನಕಲು". Archived from the original on 2010-05-16. Retrieved 2021-08-10.
- ↑ "ಆರ್ಕೈವ್ ನಕಲು". Archived from the original on 2008-06-21. Retrieved 2010-07-20.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- Pages using infobox cricketer with unknown parameters
- Articles with unsourced statements from January 2008
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons category link from Wikidata
- 1975ರಲ್ಲಿ ಜನಿಸಿದವರು
- ಸಮಕಾಲೀನ ಜನರು
- ಕ್ಯಾಂಟರ್‌ಬರಿ ಕ್ರಿಕೆಟಿಗರು
- ಹ್ಯಾಂಪ್‌ಷೈರ್ ಕ್ರಿಕೆಟಿಗರು
- ಗೈ ತಾಹು
- ನ್ಯೂಜಿಲ್ಯಾಂಡ್ ಏಕದಿನದ ಅಂತಾರಾಷ್ಟ್ರೀಯ ಕ್ರಿಕೆಟಿಗರು
- ನ್ಯೂಜಿಲೆಂಡ್ ಪೊಲೀಸ್ ಅಧಿಕಾರಿಗಳು
- ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟಿಗರು
- ನ್ಯೂಜಿಲೆಂಡ್ ಟ್ವೆಂಟಿ 20 ಅಂತರರಾಷ್ಟ್ರೀಯ ಕ್ರಿಕೆಟಿಗರು
- ನ್ಯೂಜಿಲ್ಯಾಂಡ್ ಕ್ರಿಕೆಟಿಗರು
- ಒಂದು ದಿನದ ಅಂತರರಾಷ್ಟ್ರೀಯ ಹ್ಯಾಟ್-ಟ್ರಿಕ್ ಪಡೆದವರು
- ವಾರ್ವಿಕ್‌ಷೈರ್ ಕ್ರಿಕೆಟಿಗರು
- ಕ್ರಿಕೆಟ್
- ನ್ಯೂ ಜೀಲ್ಯಾಂಡಿನ ಕ್ರಿಕೆಟ್ ಆಟಗಾರರು