ವಿಷಯಕ್ಕೆ ಹೋಗು

ಇಂಗಾಲದ ಕಣಗಳ ಚಕ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಗಾಲ ಚಕ್ರದ ರೇಖಾಚಿತ್ರ. ಕಪ್ಪು ಸಂಖ್ಯೆಗಳು ವಿವಿಧ ಭಂಡಾರಗಳಲ್ಲಿ ಎಷ್ಟು ಇಂಗಾಲ ಸಂಗ್ರಹವಾಗಿದೆ ಎಂಬುದನ್ನು ಬಿಲಿಯನ್ ಟನ್‍ಗಳಲ್ಲಿ ಸೂಚಿಸುತ್ತದೆ. ("GtC" ಅಂದರೆ ಗೀಗಾ ಟನ್ಸ್ ಆಫ್ ಕಾರ್ಬನ್ ಮತ್ತು ಅದರ ಪ್ರಮಾಣ 2004ರಲ್ಲಿ) ಗಾಢ ನೀಲಿ ಸಂಖ್ಯೆಗಳು ಭಂಡಾರಗಳ ನಡುವೆ ಪ್ರತಿ ವರ್ಷ ಎಷ್ಟು ಪ್ರಮಾಣದಲ್ಲಿ ಇಂಗಾಲ ಚಲಿಸುತ್ತದೆ ಎಂಬುದನ್ನು ಸೂಚಿಸುತ್ತವೆ. ಇಂತಹ ಗಟ್ಟಿಗೊಂಡ ನಿಕ್ಷೇಪಗಳು, ಈ ರೇಖಾಚಿತ್ರದಲ್ಲಿ ವ್ಯಾಖ್ಯಾನಿಸಿದಂತೆ, ~70ದಶಲಕ್ಷ GtC ಯಷ್ಟು ಕಾರ್ಬೊನೇಟ್ ಬಂಡೆ ಮತ್ತು ಕೆರೊಗೆನ್‍ಗಳನ್ನು ಒಳಗೊಳ್ಳುವುದಿಲ್ಲ.

ಇಂಗಾಲದ ಚಕ್ರವೆಂಬುದು ಜೀವಭೂರಾಸಾಯನಿಕ ಚಕ್ರ. ಇದರಿಂದ ಇಂಗಾಲವು ಹಲವು ವಲಯಗಳೊಂದಿಗೆ ವಿನಿಮಯ ಹೊಂದುತ್ತದೆ; ಅದರಲ್ಲಿ ಭೂಮಿಯ ಜೀವ ಮಂಡಳ, ಭೂಖಂಡ ಗೋಳ, ಮಣ್ಣುಗೋಳ, ಜಲಗೋಳ ಮತ್ತು ವಾಯುಗೋಳ ಇತ್ಯಾದಿ. ಇದು ಭೂಮಿ ಮೇಲಿನ ಅತ್ಯಂತ ಮಹತ್ವದ ಚಕ್ರಗಳಲ್ಲೊಂದಾಗಿದೆ. ಇದು ಜೀವಗೋಳ ಮತ್ತು ಅದರ ಎಲ್ಲ ಜೀವಾಣುಗಳಾದ್ಯಂತ ಇಂಗಾಲದ ಮರುಬಳಕೆಗೆ ಅನುಮತಿಸುತ್ತದೆ.

ಈ ಇಂಗಾಲದ ಚಕ್ರವನ್ನು ಮೊದಲು ಪತ್ತೆಹಚ್ಚಿದವರು ಜೊಸೆಫ್ ಪ್ರಿಸ್ಟ್ಲಿಯೆ ಮತ್ತು ಅಂಟೊನಿ ಲ್ಯಾವೊಸಿಯರ್, ಅಲ್ಲದೇ ಹಂಫ್ರೆ ಡೇವಿ ಎಂಬಾತ ಈ ಪರಿಕಲ್ಪನೆಯನ್ನು[] ಜನಪ್ರಿಯಗೊಳಿಸಿದ. ಇದೀಗ ಸಾಮಾನ್ಯವಾಗಿ ಇಂಗಾಲದ ಐದು ಪ್ರಮುಖ ಭಂಡಾರಗಳು ವಿನಿಮಯದ ಹಾದಿಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿವೆ ಎಂದು ಭಾವಿಸಲಾಗಿದೆ. ಈ ಭಂಡಾರಗಳೆಂದರೆ:

  • ವಾತಾವರಣ
  • ಇದು ಭೂ ಜೀವವಲಯವನ್ನು ಅಂದರೆ ಸಿಹಿನೀರು ವ್ಯವಸ್ಥೆಗಳು ಮತ್ತು ನಿರ್ಜೀವ ಸಾವಯವ ವಸ್ತುಗಳು,ಅಂದರೆ ಮಣ್ಣಲ್ಲಿನ ಇಂಗಾಲಗಳನ್ನು ಒಳಗೊಂಡಿರುತ್ತದೆ.
  • ಸಮುದ್ರಗಳು ಅಂದರೆ, ವಿಲೀನವಾದ ಅಜೈವಿಕ ಇಂಗಾಲ ಮತ್ತು ಜೈವಿಕ ಹಾಗೂ ಅಜೈವಿಕ ಸಮುದ್ರ-ಸಾಗರಗಳಲ್ಲಿನ ಸಸ್ಯ-ಪ್ರಾಣಿ ಸಮೂಹ ಜಲಚರಗಳ ವಲಯವೂ ಇದರಲ್ಲಿ ಸೇರಿದೆ.
  • ಪಳೆಯುಳಿಕೆಯ ಇಂಧನಗಳು ಸೇರಿದಂತೆ ಗಟ್ಟಿಗೊಂಡ ನಿಕ್ಷೇಪಗಳು
  • ಭೂಮಿಯೊಳಗೆ ಅಂದರೆ ಭೂಮಿಯ ಮಧ್ಯಭಾಗ ಮತ್ತು ಮೇಲ್ಭಾಗಗಳಿಂದ ವಾತಾವರಣ ಮತ್ತು ಜಲಗೋಳಕ್ಕೆ ಜ್ವಾಲಾಮುಖಿ ಮತ್ತು ಭೂಗರ್ಭದ ಶಾಖದ ವಿಧಾನಗಳಿಂದ ಇಂಗಾಲ ಹೊರಸೂಸುತ್ತದೆ.

ವಾರ್ಷಿಕ ಇಂಗಾಲ ಚಲನೆಗಳು, ಭಂಡಾರಗಳ ನಡುವೆ ಇಂಗಾಲ ವಿನಿಮಯಗಳು ವಿವಿಧ ರಾಸಾಯನಿಕ, ಭೌತಿಕ, ಭೌಗೋಳಿಕ ಮತ್ತು ಜೈವಿಕ ಪ್ರಕ್ರಿಯೆಗಳ ಕಾರಣದಿಂದ ಸಂಭವಿಸುತ್ತವೆ. ಸಾಗರವು ಭೂಮಿಯ ಮೇಲ್ಪದರದ ಹತ್ತಿರ ಇಂಗಾಲದ ಅತಿ ಹೆಚ್ಚು ಸಕ್ರಿಯ ಇಂಗಾಲ ಸಂಗ್ರಹವನ್ನು ಹೊಂದಿರುತ್ತದೆ. ಆದರೆ ಈ ಸಂಗ್ರಹದ ಆಳವಾದ ಸಮುದ್ರದ ಭಾಗ ವೇಗವಾಗಿ ವಾತಾವರಣದೊಂದಿಗೆ ಇಂಗಾಲ ವಿನಿಮಯ ಮಾಡುವುದಿಲ್ಲ.

ಜಾಗತಿಕ ಇಂಗಾಲ ಬಜೆಟ್‍ ಎಂದರೆ ಇಂಗಾಲದ ಭಂಡಾರಗಳ ನಡುವೆ ಅಥವಾ ಒಂದು ನಿರ್ದಿಷ್ಟ ಆವರ್ತನೆಯ ನಡುವೆ (ಉದಾಹರಣೆಗಾಗಿ ವಾತಾವರಣ -ಜೈವಿಕ ವಲಯ) ಇಂಗಾಲದ ವಿನಿಮಯಗಳ (ಆದಾಯ ಮತ್ತು ವೆಚ್ಚಗಳು) ಸಮತೋಲನ. ಒಂದು ಸಂಗ್ರಹ ಅಥವಾ ಭಂಡಾರದ ಇಂಗಾಲ ಬಜೆಟ್‍ನ ಪರೀಕ್ಷೆಯು ಸಂಗ್ರಹ ಅಥವಾ ಭಂಡಾರವು ಇಂಗಾಲದ ಡೈಆಕ್ಸೈಡ್ ಗೆ ಮೂಲವಾಗಿ ಅಥವಾ ಗುಂಡಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಒದಗಿಸಬಲ್ಲದು.

ವಾತಾವರಣದಲ್ಲಿ

[ಬದಲಾಯಿಸಿ]
2008ರಲ್ಲಿ ವಾತಾವರಣದಲ್ಲಿ ಇಂಗಾಲದ ಸಂಗ್ರಹ

ಭೂಮಿಯ ವಾತಾವರಣದಲ್ಲಿ ಇಂಗಾಲ ಮುಖ್ಯವಾಗಿ ಅನಿಲ ರೂಪದ ಕಾರ್ಬನ್ ಡೈಆಕ್ಸೈಡ್ (CO2) ಆಗಿ ಅಸ್ತಿತ್ವದಲ್ಲಿದೆ. ಇದು ವಾತಾವರಣದಲ್ಲಿ ಅತ್ಯಲ್ಪ ಶೇಕಡಾವಾರನ್ನು ಹೊಂದಿದ್ದರೂ (ಸುಮಾರು 0.04% ಅದೂ ಮೋಲಾರ್ ಆಧಾರದಲ್ಲಿ), ಇದು ಜೀವಕ್ಕೆ ಆಸರೆಯಾಗುವಲ್ಲಿ ಬಹು ದೊಡ್ಡ ಪಾತ್ರ ವಹಿಸುತ್ತದೆ. ವಾತಾವರಣದಲ್ಲಿ ಇಂಗಾಲವನ್ನು ಹೊಂದಿರುವ ಇತರ ಅನಿಲಗಳೆಂದರೆ ಮೀಥೇನ್ ಮತ್ತು ಕ್ಲೊರೊಫ್ಲುರೋಕಾರ್ಬನ್ (ಇದು ಸಂಪೂರ್ಣ ಮಾನವಜನ್ಯವಾದುದು). ಮರಗಳು ಕಾರ್ಬನ್ ಡೈಆಕ್ಸೈಡ್ ನ್ನು ದ್ಯುತಿ ಸಂಶ್ಲೇಷಣೆಯಲ್ಲಿ ಕಾರ್ಬೊಹೈಡ್ರೇಟ್‍ಗಳಾಗಿ ಪರಿವರ್ತಿಸುತ್ತವೆ. ಈ ಸಂದರ್ಭದಲ್ಲಿ ಜೀವರಕ್ಷಕ ಆಮ್ಲಜನಕ ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಯು ವೇಗವಾಗಿ ಬೆಳೆಯುತ್ತಿರುವ ಮರಗಳಿರುವ ತುಲನಾತ್ಮಕವಾಗಿ ನೂತನವಾದ ಅರಣ್ಯಗಳಲ್ಲಿ ಅತ್ಯಂತ ಸಮೃದ್ಧವಾಗಿರುತ್ತದೆ. ಪರ್ಣಪಾತಿ ಅರಣ್ಯಗಳಲ್ಲಿ ಈ ಪರಿಣಾಮವು ವಸಂತ ಋತುವಿನಲ್ಲಿ ಎಲೆಗಳು ಹೊಸ ಚಿಗುರು ಪಡೆಯುವಾಗ ಅತಿ ಪ್ರಬಲವಾಗಿರುತ್ತದೆ. ಅಳೆದ CO2 ಸಾರೀಕರಣದ ಕೀಲಿಂಗ್ ವಕ್ರರೇಖೆಯಲ್ಲಿ ಒಂದು ವಾರ್ಷಿಕ ಸಂಜ್ಞೆಯಾಗಿ ಇದು ಕಾಣುತ್ತದೆ. ಉತ್ತರದ ಗೋಳಾರ್ಧದ ವಸಂತ ಋತುವಿನದು ಮೇಲುಗೈ, ಏಕೆಂದರೆ ಅದರಲ್ಲಿನ ಸಮಶೀತೋಷ್ಣ ಅಕ್ಷಾಂಶಗಳಲ್ಲಿ ದಕ್ಷಿಣದ ಭಾಗದಲ್ಲಿಗಿಂತ ಬಹಳ ಹೆಚ್ಚು ಭೂಮಿಯಿದೆ.

  • ಅರಣ್ಯಗಳು 86%ರಷ್ಟು ಭೂಮಿಯ ಮೇಲ್ಭಾಗದ ಮಟ್ಟದಲ್ಲಿ ಇಂಗಾಲ ಮತ್ತು ಭೂಗ್ರಹದ ಮಣ್ಣಿನಲ್ಲಿನ 73%ರಷ್ಟು ಇಂಗಾಲವನ್ನು[] ಶೇಖರಿಸುತ್ತವೆ.
  • ಸಾಗರಗಳ ಮೇಲ್ಭಾಗದಲ್ಲಿ ಧ್ರುವಗಳ ಕಡೆಗೆ, ಸಮುದ್ರದ ನೀರು ತಂಪಾಗುತ್ತದೆ ಮತ್ತು CO2 ಹೆಚ್ಚು ವಿಲೇಯವಾಗುವುದರಿಂದ ಹೆಚ್ಚು ಇಂಗಾಲಾಮ್ಲವು ರೂಪಗೊಳ್ಳುತ್ತದೆ. ಇದು ಸಾಗರದ ಉಷ್ಣಲವಣ ಪರಿಚಲನೆಗೆ ಜೋಡಣೆಯಾಗುತ್ತದೆ. ಇದರಿಂದಾಗಿ ಸಾಂದ್ರ ಮೇಲ್ಮೈ ನೀರು ಸಮುದ್ರದ ಒಳಗಡೆ ತಳ್ಳಲ್ಪಡುತ್ತದೆ.
  • ಅಧಿಕ ಜೈವಿಕ ಉತ್ಪಾದಕತೆಯ ಸಮುದ್ರದ ಮೇಲ್ಭಾಗದಲ್ಲಿ, ಜೀವಿಗಳು ಕಡಿಮೆಯಾದ ಇಂಗಾಲದ ಪ್ರಮಾಣವನ್ನು ಊತಕಗಳಾಗಿ, ಅಥವಾ ಕಾರ್ಬೊನೇಟ್‍ಗಳನ್ನು ಗಟ್ಟಿದೇಹದ ಚಿಪ್ಪುಗಳು ಮತ್ತು ಗಟ್ಟಿಹೊದಿಕೆಗಳಾಗಿ ಪರಿವರ್ತಿಸುತ್ತವೆ. ಇವುಗಳನ್ನು ಅನುಕ್ರಮವಾಗಿ ಸಾಗರಗಳ ತುಲನಾತ್ಮಕವಾಗಿ ಕಡಿಮೆ ಸರಾಸರಿ ಮಟ್ಟಗಳಲ್ಲಿ ಉತ್ಕರ್ಷಿಸಲಾಗುತ್ತದೆ ಮತ್ತು ಪುನಃ ಕರಗಿಸಲಾಗುತ್ತದೆ. ಇದರಿಂದ ಇಂಗಾಲ ಕೆಳಮುಖವಾಗಿ ಹರಿಯುತ್ತದೆ.
  • ಸಿಲಿಕೇಟ್ ಬಂಡೆಯ ಶಿಥಿಲಗೊಳ್ಳುವಿಕೆ. ಇಂಗಾಲಾಮ್ಲವು ಶಿಥಿಲಗೊಂಡ ಬಂಡೆಯೊಂದಿಗೆ ಪ್ರತಿಕ್ರಿಯಿಸಿ ಬಯೊಕಾರ್ಬೊನೇಟ್ ಅಯಾನುಗಳನ್ನು ಉತ್ಪಾದಿಸುತ್ತದೆ. ಉತ್ಪತ್ತಿಯಾದ ಬಯೊಕಾರ್ಬೊನೇಟ್ ಅಯಾನುಗಳು ಸಮುದ್ರದೆಡೆಗೆ ಸಾಗಿ ನಂತರ ಅವು ಕಡಲ ಕಾರ್ಬೊನೇಟ್‍ಗಳ ಉತ್ಪತ್ತಿಯಲ್ಲಿ ಉಪಯೋಗವಾಗುತ್ತವೆ. ಸಮತೋಲನದಲ್ಲಿರುವ ಕರಗಿದ CO2 ಅಥವಾ ಕೊಳೆಯುವ ಊತಕಗಳಂತೆ ಆಗದೆ, ಶಿಥಿಲಗೊಳ್ಳುವಿಕೆಯು ಇಂಗಾಲವನ್ನು ಭಂಡಾರ ರೂಪದಲ್ಲಿ ಸಾಗಿಸುವುದಿಲ್ಲ. ಹೀಗಾಗಿ ಅದು ಆ ಸ್ಥಿತಿಯಲ್ಲಿ ವಾತಾವರಣದಲ್ಲಿ ಬೆರೆತುಕೊಳ್ಳುವುದಿಲ್ಲ.
  • ಸುಮಾರು 1958ರಲ್ಲಿ ವಾತಾವರಣದ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮೌನಾ ಲೊವಾದಲ್ಲಿ ಪ್ರತಿ ದಶಲಕ್ಷಕ್ಕೆ 320 (ppm),ಕಣಾಂಶವಾಗಿತ್ತು.ಅಲ್ಲದೇ 2010ದಲ್ಲಿ ಇದು 385(ppm),ಆಗಿತ್ತು.
  • ಮುಂದಿನ CO2 ಹೊರಸೂಸುವಿಕೆಯನ್ನು ಕಾಯಾ ಅನನ್ಯತೆಯ ಮೂಲಕ ಲೆಕ್ಕಹಾಕಬಹುದು.

ಇಂಗಾಲವು ವಾತಾವರಣದಲ್ಲಿ ವಿಭಿನ್ನ ರೀತಿಗಳಿಂದ ಬಿಡುಗಡೆಯಾಗುತ್ತದೆ:

  • ಸಸ್ಯಗಳು ಮತ್ತು ಪ್ರಾಣಿಗಳ ಉಸಿರಾಟದ ಮೂಲಕ ಬಿಡುಗಡೆಯಾಗುತ್ತದೆ. ಇದು ಶಾಖ ಬಿಡುಗಡೆಯ ಪ್ರತಿಕ್ರಿಯೆಯಾಗಿದ್ದು ಮತ್ತು ಗ್ಲುಕೋಸ್ (ಅಥವಾ ಇನ್ನಿತರ ಸಾವಯವ ಅಣುಗಳು) ವಿಭಜನೆಗೊಂಡು ರಾಸಾಯನಿಕ ಕ್ರಿಯೆಗೆ ಒಳಗಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರು ಬಿಡುಗಡೆಯಾಗುತ್ತವೆ.
  • ಪ್ರಾಣಿ ಮತ್ತು ಸಸ್ಯಗಳು ಕೊಳೆಯುವುದರಿಂದ ಉತ್ಪತ್ತಿಯಾಗುತ್ತದೆ. ಫಂಗಿ ಮತ್ತು ಬ್ಯಾಕ್ಟೀರಿಯಾಗಳು ಸತ್ತ ಸಸ್ಯ ಮತ್ತು ಪ್ರಾಣಿಗಳಿಂದ ಕಾರ್ಬನ್ ಸಂಯುಕ್ತಗಳನ್ನು ವಿಭಜಿಸುತ್ತವೆ. ಇಲ್ಲಿ ಆಮ್ಲಜನಕವಿದ್ದರೆ ಇಂಗಾಲವು ಇಂಗಾಲದ ಡೈಆಕ್ಸೈಡ್ ಆಗುತ್ತದೆ, ಅಥವಾ ಇರದಿದ್ದರೆ ಮಿಥೇನ್ ಆಗಿ ವಾತಾವರಣ ಸೇರಿಕೊಳ್ಳುತ್ತದೆ.
  • ಜೈವಿಕ ವಸ್ತುಗಳನ್ನು ದಹಿಸುವುದರಿಂದ ಅದರಲ್ಲಿನ ಇಂಗಾಲವು ಉತ್ಕರ್ಷಣೆಗೊಂಡು ಕಾರ್ಬನ್ ಡೈಆಕ್ಸೈಡ್ ಆಗಿ (ಇನ್ನುಳಿದ ವಸ್ತುಗಳಾದ ನೀರಿನ ಆವಿ) ಬಿಡುಗಡೆಯಾಗುತ್ತದೆ. ಕಲ್ಲಿದ್ದಲು, ಪೆಟ್ರೋಲಿಯಮ್ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲಗಳಂತಹ ಪಳೆಯುಳಿಕೆ ಇಂಧನಗಳ ದಹನದಿಂದ ದಶಲಕ್ಷಗಟ್ಟಲೇ ವರ್ಷಗಳಿಂದ ಭೂಖಂಡದಲ್ಲಿ ಕೂಡಿಕೊಂಡಿದ್ದ ಇಂಗಾಲ ಬಿಡುಗಡೆ ಆಗುತ್ತದೆ. ಕೃಷಿಇಂಧನಗಳನ್ನು ದಹಿಸುವುದರಿಂದ ಕೂಡಾ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇವು ಕೆಲವೇ ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಷ್ಟು ಕೂಡಿಟ್ಟವುಗಳು.
  • ಸಿಮೆಂಟ್ ಉತ್ಪಾದನೆ. ಸುಣ್ಣದಕಲ್ಲನ್ನು (ಕ್ಯಾಲ್ಸಿಮ್ ಕಾರ್ಬೊನೇಟ್ )ವನ್ನು ಸಿಮೆಂಟ್‍ನ ಮಿಶ್ರಣಾಂಶವಾದ ಕ್ಯಾಲ್ಷಿಯಮ್ ಆಕ್ಸೈಡ್ ಆಗಿಸಲು ಶಾಖಕ್ಕೆ ಒಡ್ಡಿದಾಗ ಇಂಗಾಲದ ಡೈಕ್ಸೈಡ್ ಉತ್ಪತ್ತಿಯಾಗುತ್ತದೆ.
  • ವಾತಾವರಣದ ಶಾಖದಿಂದ ಬೆಚ್ಚಗಾಗುವ ಸಮುದ್ರ ಮೇಲ್ಭಾಗದ ನೀರಿನಲ್ಲಿನ ಕರಗಿರುವ ಇಂಗಾಲದ ಡೈಆಕ್ಸೈಡ್ ನಂತರ ವಾತಾವರಣಕ್ಕೆ ವಾಪಸು ಆಗುತ್ತದೆ.
  • ಜ್ವಾಲಾಮುಖಿ ಸ್ಫೋಟನಗಳು, ಮತ್ತು ಶಿಲಾ ರೂಪಾಂತರಗಳು ವಾತಾವರಣಕ್ಕೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಜ್ವಾಲಾಮುಖಿಯಿಂದಾದ ಅನಿಲಗಳೆಂದರೆ ಪ್ರಮುಖವಾಗಿ ನೀರಾವಿ, ಇಂಗಾಲದ ಡೈಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್. ಬಿಡುಗಡೆಯಾದ ಇಂಗಾಲದ ಡೈಆಕ್ಸೈಡ್ ಸುಮಾರಾಗಿ ಸಿಲಿಕೇಟ್ ಶಿಥಿಲಗೊಳ್ಳುವಿಕೆಯ ಪ್ರಮಾಣಕ್ಕೆ ಸಮನಾಗಿರುತ್ತದೆ. ಹಾಗಾಗಿ ಈ ಪ್ರಕ್ರಿಯೆಗಳು ಒಂದಕ್ಕೊಂದಕ್ಕೆ ರಾಸಾಯನಿಕವಾಗಿ ವ್ಯತಿರಿಕ್ತವಾಗಿದ್ದು ಪರಿಣಾಮಗಳನ್ನು ಶೂನ್ಯಗೊಳಿಸುತ್ತವೆ, ಮತ್ತು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್‍ನ ಪ್ರಮಾಣ ಅಷ್ಟೇ ಇರುತ್ತದೆ.

ಜೀವಗೋಳದಲ್ಲಿ

[ಬದಲಾಯಿಸಿ]

ಸುಮಾರು 42,000 ಗಿಗಾಟನ್‍ಗಳಷ್ಟು ಇಂಗಾಲವು ಜೀವಗೋಳದಲ್ಲಿರುತ್ತದೆ. ಇಂಗಾಲವು ಭೂಮಿಯ ಜೀವಿಸಂಕುಲಕ್ಕೆ ಅಗತ್ಯವಾಗಿದೆ. ಅದು ಎಲ್ಲ ಜೀವಕೋಶಗಳ ರಚನೆ, ಜೀವರಾಸಾಯನಶಾಸ್ತ್ರ ಮತ್ತು ಪೌಷ್ಟಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.

  • ಸ್ವಯಂಪೋಷಕಗಳು ನೀರು ಮತ್ತು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಬಳಸಿ ಉಪಯೋಗಿಸಿಕೊಂಡು ತಮ್ಮದೇ ಆದ ಸಾವಯವ ಸಂಯುಕ್ತಗಳನ್ನು ತಯಾರಿಸಿಕೊಳ್ಳುವ ಜೀವಿಗಳು. ಇದನ್ನು ಮಾಡಲು ಅವುಗಳಿಗೆ ಬಾಹ್ಯ ಶಕ್ತಿಮೂಲ ಬೇಕಾಗುತ್ತದೆ. ಬಹುತೇಕ ಎಲ್ಲ ಸ್ವಯಂಪೋಷಕಗಳು ಇದನ್ನು ಸೂರ್ಯನಿಂದ ಪಡೆಯುತ್ತವೆ, ಈ ಉತ್ಪಾದನಾ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ ಎನ್ನುತ್ತಾರೆ. ಈ ಜೀವಿಗಳ ಸಣ್ಣ ಪ್ರಮಾಣ ರಾಸಾಯನಿಕ ಶಕ್ತಿಮೂಲಗಳನ್ನು ಬಳಸಿಕೊಳ್ಳುವ ಪ್ರಕ್ರಿಯೆಗೆ ರಾಸಾಯನಿಕ ಸಂಶ್ಲೇಷಣೆ ಎನ್ನುತ್ತಾರೆ. ಇಂಗಾಲದ ಚಕ್ರಕ್ಕೆ ಬಹು ಮಹತ್ವದ ಸ್ವಯಂಪೋಷಕಗಳೆಂದರೆ ಭೂಮಿಯ ಮೇಲಿನ ಅರಣ್ಯದಲ್ಲಿನ ಗಿಡಮರಗಳು ಮತ್ತು ಸಾಗರಗಳಲ್ಲಿನ ತೇಲುಸಸ್ಯಗಳು. ದ್ಯುತಿಸಂಶ್ಲೇಷಣೆಯು ಈ ಪ್ರತಿಕ್ರಿಯೆಯನ್ನು ಅನುಸರಿಸುತ್ತದೆ: 6CO2 + 6H2O → C6H12O6 + 6O2
  • ಪರಾವಲಂಬಿಗಳು ಇತರ ಜೀವಿಗಳು ಅಥವಾ ಅವುಗಳ ಭಾಗಗಳನ್ನು (ಉದಾಹರಣೆಗೆ ಹಣ್ಣುಗಳು) ಸೇವಿಸಿದಾಗ ಜೀವಗೋಳದೊಳಗೆ ಇಂಗಾಲದ ವರ್ಗಾವಣೆಯಾಗುತ್ತದೆ. ಇದು ಕಿಣ್ವನ ಅಥವಾ ಕೊಳೆಯುವಿಕೆಗೆ ಫಂಗಿ ಮತ್ತು ಬ್ಯಾಕ್ಟೀರಿಯಾಗಳಿಂದ ಸತ್ತ ಜೈವಿಕ ವಸ್ತುವಿನ (ಕೊಳೆತದ್ದು) ಗ್ರಹಿಸುವಿಕೆಯನ್ನು ಒಳಗೊಳ್ಳುತ್ತದೆ.
  • ಉಸಿರಾಟದ ಮೂಲಕ ಬಹಳಷ್ಟು ಇಂಗಾಲವು ಜೀವಗೋಳಕ್ಕೆ ಹರಿಯುತ್ತದೆ. ಆಮ್ಲಜನಕವಿದ್ದಾಗ ಶ್ವಾಸಕ್ರಿಯೆಯಿಂದ ಇಂಗಾಲದ ಡೈಆಕ್ಸೈಡ್ ಸುತ್ತಮುತ್ತಲಿನ ಗಾಳಿ ಅಥವಾ ನೀರಿನಲ್ಲಿ ಬಿಡುಗಡೆಯಾಗುತ್ತದೆ; ಈ ಪ್ರತಿಕ್ರಿಯೆ ಉಂಟಾಗುತ್ತದೆ. C6H12O6 + 6O2 → 6CO2 + 6H2O. ಅಥವಾ ಆಮ್ಲಜನಕರಹಿತ ಶ್ವಾಸಕ್ರಿಯೆ ಉಂಟಾಗಿ ಸುತ್ತಲಿನ ಪರಿಸರಕ್ಕೆ ಮಿಥೇನ್ ಬಿಡುಗಡೆಯಾಗುತ್ತದೆ. ಮುಂದೆ ಇದರ ಪರಿಣಾಮವಾಗಿ ಇದು ವಾತಾವರಣ ಅಥವಾ ಜಲಗೋಳವನ್ನು ಪ್ರವೇಶಿಸುತ್ತದೆ. (ಉದಾಹರಣೆಗೆ ಜವಳು ಅನಿಲ ಅಥವಾ ಅಪಾನವಾಯುವಾಗಿ)
  • ಜೀವರಾಶಿಯ ದಹನದಿಂದ (ಉದಾಹರಣೆಗೆ ಕಾಡ್ಗಿಚ್ಚು, ಸೌದೆ ಉರುವಲು ಅಥವಾ ಶಾಖಕ್ಕಾಗಿ ಬಳಸುವ ಕಟ್ಟಿಗೆ) ದೊಡ್ಡ ಪ್ರಮಾಣದಲ್ಲಿ ಇಂಗಾಲ ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತದೆ.
  • ಸತ್ತ ಜೈವಿಕ ವಸ್ತುಗಳು (ಸಸ್ಯಾಂಗಾರ) ಭೂಖಂಡದಲ್ಲಿ ಸಂಗ್ರಹವಾದಾಗ ಇಂಗಾಲವು ಜೀವಗೋಳದೊಳಗೆ ಪರಿಚಲನೆಯಾಗುತ್ತದೆ. ಕ್ಯಾಲ್ಸಿಯಮ್ ಕಾರ್ಬೊನೆಟ್ ಇರುವ ಪ್ರಾಣಿಗಳ ಕೋಶಕವಚಗಳು ಬರಬರುತ್ತಾ ಕಾಲಾಂತರದಲ್ಲಿ ಮಡ್ಡೀಕರಣದ ಮೂಲಕ ಸೀಮೆ ಸುಣ್ಣವಾಗಿ ಪರಿವರ್ತನೆಯಾಗುತ್ತವೆ.
  • ಆಳದ ಸಮುದ್ರದಲ್ಲಿ ಇಂಗಾಲದ ಚಕ್ರದ ಬಗ್ಗೆ ಬಹಳ ಕಲಿಯುವುದಿದೆ. ಉದಾಹರಣೆಗೆ ಇತ್ತೀಚಿನ ಸಂಶೋಧನೆಯ ಪ್ರಕಾರ ಲಾರ್ವೇಸಿಯಾದ ಲೋಳೆಯು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿ ಇಂಗಾಲವನ್ನು ಹೊರಕ್ಕೆ ಆಳದ ಸಮುದ್ರದಲ್ಲಿ ಬಿಡುಗಡೆ ಮಾಡುತ್ತದೆ, ಎಷ್ಟೆಂದರೆ ಈಗಾಗಲೇ ಕೆಸರು ಕೊಂಕುಗಳಿಂದ ಪತ್ತೆಯಾಗಿರುವಷ್ಟು.[] ಅವುಗಳ ಗಾತ್ರ ಮತ್ತು ಸಂಯೋಜನೆಯ ಕಾರಣದಿಂದ ಈ ಭಂಡಾರಗಳು ಅಂತಹ ಕೊಂಕುಗಳಲ್ಲಿ ಅಪರೂಪವಾಗಿ ಸಂಗ್ರಹವಾಗಿರುತ್ತವೆ, ಹಾಗಾಗಿ ಬಹುತೇಕ ಜೀವಭೂರಾಸಾಯನಿಕ ವಿಶ್ಲೇಷಣೆಗಳು ಅವನ್ನುತಪ್ಪಾಗಿ ನಿರ್ಲಕ್ಷಿಸಿವೆ.

ಜೀವಗೋಳದಲ್ಲಿನ ಇಂಗಾಲದ ಸಂಗ್ರಹವು ವಿಭಿನ್ನ ಕಾಲಪ್ರಮಾಣಗಳಲ್ಲಿ ಹಲವಾರು ಪ್ರಕ್ರಿಯೆಗಳಿಂದ ಪ್ರಭಾವಿತವಾಗಿರುತ್ತದೆ. ನಿವ್ವಳ ಪ್ರಾಥಮಿಕ ಉತ್ಪಾದಕತೆಯು ದೈನಿಕ ಮತ್ತು ಕಾಲಿಕ ಚಕ್ರವನ್ನು ಅನುಸರಿಸುತ್ತದೆ. ಆದರೆ ಇಂಗಾಲವು ಹಲವು ನೂರಾರು ವರ್ಷ ಗಿಡಮರಗಳಲ್ಲಿ ಮತ್ತು ಮಣ್ಣಿನಲ್ಲಿ ಸಾವಿರಾರು ವರ್ಷ ಸಂಗ್ರಹವಾಗಿರಬಹುದು. ಈ ದೀರ್ಘಾವಧಿಯ ಇಂಗಾಲ ಸಂಗ್ರಹಗಳಲ್ಲಿನ ಬದಲಾವಣೆಗಳು ಜಾಗತಿಕ ವಾಯುಗುಣ ಬದಲಾವಣೆ ಮೇಲೆ ಪ್ರಭಾವ ಬೀರಬಹುದು (ಉದಾಹರಣೆಗೆ ಅರಣ್ಯೀಕರಣ ಅಥವಾ ಅರಣ್ಯನಾಶದಿಂದ ಅಥವಾ ಮಣ್ಣಿನ ಶ್ವಾಸಕ್ರಿಯೆಯಲ್ಲಿ ಉಷ್ಣಾಂಶ ಸಂಬಂಧಿತ ಬದಲಾವಣೆಗಳ ಮೂಲಕ)

ಸಮುದ್ರದಲ್ಲಿ

[ಬದಲಾಯಿಸಿ]
"Present day" (1990s) sea surface dissolved inorganic carbon concentration (from the GLODAP climatology)

ಸಮುದ್ರಗಳಲ್ಲಿ ಸುಮಾರು 36,000 ಗೀಗಾಟನ್‍ಗಳಷ್ಟು ಇಂಗಾಲವಿದೆ. ಇದು ಸಾಮಾನ್ಯವಾಗಿ ಬೈಕಾರ್ಬೊನೇಟ್ ಅಯಾನುಗಳ ರೂಪದಲ್ಲಿರುತ್ತದೆ (ಸುಮಾರು 90%ರಷ್ಟು, ಉಳಿದದ್ದೆಲ್ಲ ಕಾರ್ಬೊನೇಟ್ ರೂಪದಲ್ಲಿರುತ್ತದೆ). ಚಂಡಮಾರುತಗಳಂತಹ ತೀವ್ರ ಬಿರುಗಾಳಿಗಳು ಬಹಳಷ್ಟು ಇಂಗಾಲವನ್ನು ಒಳಹಾಕುತ್ತವೆ. ಏಕೆಂದರೆ ಅವುಗಳು ಬಹಳ ಕೆಸರನ್ನು ಕೊಚ್ಚಿಕೊಂಡು ಬರುತ್ತವೆ. ಉದಾಹರಣೆಗೆ ವಿದ್ವತ್ಪತ್ರಿಕೆ ಜುವಾಲಜಿಯ ಜುಲೈ 2008ರ ಸಂಚಿಕೆಯಲ್ಲಿ ವಿವರಿಸಿದಂತೆ ತೈವಾನದಲ್ಲಿ ಒಂದೇ ಚಂಡಮಾರುತವು ಕೆಸರಿನ ರೂಪದಲ್ಲಿ ಸಾಗರದಲ್ಲಿ ಬಹಳಷ್ಟು ಇಂಗಾಲವನ್ನು ಒಳಹಾಕುತ್ತದೆ, ಎಷ್ಟೆಂದರೆ ಆ ದೇಶದಲ್ಲಿ ವರ್ಷವಿಡಿಯ ಮಳೆಗಳು ಒಟ್ಟಾಗಿ ಸೇರಿಸುವಷ್ಟು.[] ಅಜೈವಿಕ ಇಂಗಾಲ, ಅಂದರೆ ಇಂಗಾಲ-ಇಂಗಾಲ ಅಥವಾ ಇಂಗಾಲ-ಜಲಜನಕ ಬಂಧಗಳಿಲ್ಲದ ಇಂಗಾಲದ ಸಂಯುಕ್ತಗಳು ನೀರಿನಲ್ಲಿನ ಅವುಗಳ ಪ್ರತಿಕ್ರಿಯೆಗೆ ಮಹತ್ವದ್ದಾಗಿವೆ. ಈ ಇಂಗಾಲದ ವಿನಿಮಯವು pH (ಜಲಜನಕದ ಆಮ್ಲಿಯತೆಯನ್ನ)ನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಉಪಯುಕ್ತವಾಗುತ್ತದೆ. ಇದು ಇಂಗಾಲದ ಮೂಲ ಅಥವಾ ಗುಂಡಿಯಾಗಿ ಬದಲಾಗಬಹುದು. ಇಂಗಾಲವು ವಾತಾವರಣ ಮತ್ತು ಸಮುದ್ರದ ಮಧ್ಯೆ ಸರಾಗವಾಗಿ ವಿನಿಮಯಗೊಳ್ಳುತ್ತದೆ. ಸಾಗರದ ಏರಿಕೆಯಿರುವ ಪ್ರದೇಶಗಳಲ್ಲಿ, ಇಂಗಾಲವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಇಳಿಕೆಯಿರುವ ಪ್ರದೇಶಗಳಲ್ಲಿ ವಾತಾವರಣದಿಂದ ಸಮುದ್ರಕ್ಕೆ ಇಂಗಾಲ (CO2) ಸೇರಿಕೊಳ್ಳುತ್ತದೆ. CO2 ಸಮುದ್ರವನ್ನು ಸೇರಿದಾಗ ಸ್ಥಳೀಯವಾಗಿ ಅದು ವಿವಿಧ ರೀತಿಯ ಪ್ರತಿಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತದೆ.

ದ್ರಾವಣ

CO2(ವಾತಾವರಣದಿಂದ) CO2(ವಿಲೇಯವಾದದ್ದು)

ಇಂಗಾಲಾಮ್ಲವಾಗಿ ಪರಿವರ್ತನೆ:

CO2(ಕರಗಿದ್ದು) + H2O H2CO3

ಮೊದಲ ಅಯಾನೀಕರಣ:

H2CO3 H+ + HCO3 (ಬೈಕಾರ್ಬೊನೇಟ್ ಅಯಾನು)

ಎರಡನೆಯ ಅಯಾನೀಕರಣ:

HCO3 H+ + CO3−− (ಕಾರ್ಬೊನೇಟ್ ಅಯಾನು)

ಈ ಕ್ರಿಯೆಗಳ ಸಮೂಹಗಳು (ಪ್ರತಿಯೊಂದು ತನ್ನದೇ ಸಮತೋಲನ ಗುಣಾಂಕವನ್ನು ಹೊಂದಿರುತ್ತದೆ) ಅಜೈವಿಕ ಇಂಗಾಲವು ಸಾಗರಗಳಲ್ಲಿ ತೆಗೆದುಕೊಳ್ಳುವ ರೂಪವನ್ನು ನಿರ್ಧರಿಸುತ್ತದೆ.[] ಈ ಗುಣಾಂಕಗಳನ್ನು ಸಾಗರದ ನೀರಿಗಾಗಿ ಪ್ರಾಯೋಗಿಕವಾಗಿ ನಿರ್ಧರಿಸಲಾಗಿರುತ್ತದೆ. ಇವು ಉಷ್ಣಾಂಶ, ಒತ್ತಡ ಮತ್ತು ಇನ್ನುಳಿದ ಅಯಾನುಗಳ (ವಿಶೇಷವಾಗಿ ಬೊರೇಟ್‍ಗಳು) ಅಸ್ತಿತ್ವದ ಫಲನಗಳಾಗಿರುತ್ತವೆ. ಸಾಗರದಲ್ಲಿ ಸಮಸ್ಥಿತಿಗಳು ಬಯೊಕಾರ್ಬೊನೇಟ್‍‍ನ್ನು ಬಲವಾಗಿ ಬೆಂಬಲಿಸುತ್ತವೆ. ಈ ಅಯಾನು ವಾತಾವರಣದ CO2ಗಿಂತ ಮೂರು ಹಂತ ದೂರವಿರುವುದರಿಂದ ಸಾಗರದಲ್ಲಿನ ಅಜೈವಿಕ ಇಂಗಾಲದ ಸಂಗ್ರಹದ ಮಟ್ಟವು CO2 ವಿನ ವಾತಾವರಣದ ಭಾಗಶಃ ಒತ್ತಡದೊಂದಿಗೆ ಏಕತೆಯ ಪ್ರಮಾಣವನ್ನು ಹೊಂದಿರುವುದಿಲ್ಲ. ಸಾಗರಕ್ಕೆ ಈ ಅಂಶ ಸುಮಾರು ಹತ್ತು ಇರುತ್ತದೆ: ವಾತಾವರಣದಲ್ಲಿನ CO2 ಪ್ರಮಾಣದ 10% ಗೆ ಸಾಗರದ ಸಂಗ್ರಹವು (ಸಮಸ್ಥಿತಿಯಲ್ಲಿ) ಸುಮಾರು 1% ಏರುತ್ತದೆ. ಈ ಕಾದಿಟ್ಟ ಅಂಶವನ್ನು ಹಲವುವೇಳೆ "ರೆವೆಲ್ ಅಂಶ"ವೆಂದು ಕರೆಯಲಾಗುತ್ತದೆ. ರೊಜರ್ ರೆವೆಲ್ ತರುವಾಯ ಆತನ ಹೆಸರನ್ನಿಡಲಾಗಿದೆ.

ಕಾರ್ಬನ್ ಚಕ್ರ

ಸಾಗರಗಳಲ್ಲಿ, ಕರಗಿದ ಕ್ಯಾಲ್ಸಿಯಮ್‍ನೊಂದಿಗೆ ಕರಗಿದ ಕಾರ್ಬೊನೇಟ್ ಸಂಯೋಜಿಸಿ ಘನ ಕ್ಯಾಲ್ಸಿಯಮ್ ಕಾರ್ಬೊನೇಟ್ CaCO3 ಕೆಳಸೇರುತ್ತದೆ. ಇದು ಬಹುತೇಕ ಸೂಕ್ಷ್ಮಜೀವಾಣುಗಾಳ ಕವಚವಾಗಿ. ಈ ಸೂಕ್ಷ್ಮಜೀವಿಗಳು ಮೃತವಾದಾಗ ಅವುಗಳ ಕವಚಗಳು ಕೆಳಸೇರಿ ಸಮುದ್ರದ ತಳದಲ್ಲಿ ಶೇಖರಣೆಯಾಗುತ್ತವೆ. ಕಾಲ ಕಳೆದಂತೆ ಈ ಕಾರ್ಬೊನೇಟ್ ಕೆಸರು ಸುಣ್ಣದ ಕಲ್ಲಾಗಿ ರೂಪಗೊಳ್ಳುತ್ತದೆ. ಇಂಗಾಲದ ಚಕ್ರದಲ್ಲಿ ಇದು ಇಂಗಾಲದ ಅತಿ ದೊಡ್ಡ ಭಂಡಾರವಾಗಿದೆ. ಸಾಗರಗಳಲ್ಲಿನ ಕರಗಿದ ಕ್ಯಾಲ್ಸಿಯಮ್, ಕ್ಯಾಲ್ಸಿಯಮ್ ಸಿಲಿಕೇಟ್ ಕಲ್ಲುಗಳ ರಾಸಾಯನಿಕ ಶಿಥಿಲಗೊಳ್ಳುವಿಕೆಯಿಂದ ಬರುತ್ತದೆ. ಈ ಸಂದರ್ಭದಲ್ಲಿ ಅಂತರ್ಜಲದಲ್ಲಿನ ಇಂಗಾಲಾಮ್ಲ ಮತ್ತು ಇನ್ನಿತರ ಆಮ್ಲಗಳು ಕ್ಯಾಲ್ಸಿಯಮ್ ಇರುವ ಖನಿಜಗಳೊಂದಿಗೆ ಪ್ರತಿಕ್ರಿಯಿಸಿ ಕ್ಯಾಲ್ಸಿಯಮ್ ಅಯಾನುಗಳು ಬಿಡುಗಡೆಯಾಗುತ್ತವೆ. ಹೊಸದಾಗಿ ರೂಪಗೊಂಡ ಅಲ್ಯುಮಿನಿಯಂ ಸಮೃದ್ಧ ಜೇಡಿಮಣ್ಣಿನ ಖನಿಜಗಳು ಮತ್ತು ಕರಗಲಾರದ ಕ್ವಾರ್ಟ್ಜ್‌ಗಳ ಶೇಷವನ್ನು ಹಿಂದೆ ಬಿಡುತ್ತದೆ.

ಇಂಗಾಲ ಚಕ್ರ

ಆಕರಗಳು

[ಬದಲಾಯಿಸಿ]
  1. ಹೊಲ್ಮ್ಸ್, ರಿಚರ್ಡ್ಸ್. "ದಿ ಏಜ್ ಆಫ್ ವಂಡರ್", ಪ್ಯಾಂಥಾನ್ ಬುಕ್ಸ್, 2008. ISBN 978-0-375-42222-5.
  2. ಸೆಡ್ಜೊ, ರೊಗರ್.1993. ಇಂಗಾಲದ ಚಕ್ರ ಮತ್ತು ಜಾಗತಿಕ ಅರಣ್ಯ ಪರಿಸರ ಪದ್ದತಿ ಜಲ, ವಾಯು, ಮತ್ತು ಮಣ್ಣು ಮಲಿನತೆ 70, 295-307. (via ಒರ್ಗಾನ್ ವೈಲ್ಡ್ ರಿಪೊರ್ಟ್ ಆನ್ ಫಾರೆಸ್ಟ್ಸ್, ಕಾರ್ಬನ್ , ಅಂಡ್ ಗ್ಲೊಬಲ್ ವಾರ್ಮಿಂಗ್ Archived 2010-06-28 ವೇಬ್ಯಾಕ್ ಮೆಷಿನ್ ನಲ್ಲಿ.)
  3. ""Sinkers" provide missing piece in deep-sea puzzle" (PDF) (Press release). Monterey Bay Aquarium Research Institute (MBARI). 2005-06-09. Archived from the original (PDF) on 2007-09-27. Retrieved 2007-10-07. {{cite press release}}: line feed character in |publisher= at position 22 (help)
  4. ಟೈಫೂನ್ಸ್ ಬರಿ ಟನ್ಸ್ ಆಫ್ ಕಾರ್ಬನ್ ಇನ್ ದಿ ಒಸಿಯನ್ಸ್ Newswise, ಮರು ಪಡೆದದ್ದು ಜುಲೈ 27, 2008.
  5. Millero, Frank J. (2005). Chemical Oceanography (3 ed.). CRC Press. ISBN 0849322804.


ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]
  • Appenzeller, Tim (2004). "The case of the missing carbon". National Geographic Magazine. {{cite journal}}: Cite has empty unknown parameter: |coauthors= (help) - ಆರ್ಟಿಕಲ್ ಅಬೌಟ್ ದಿ ಮಿಸ್ಸಿಂಗ್ ಕಾರ್ಬನ್ ಸಿಂಕ್
  • Bolin, Bert (1979). The global carbon cycle. Chichester ; New York: Published on behalf of the Scientific Committee on Problems of the Environment (SCOPE) of the International Council of Scientific Unions (ICSU) by Wiley. ISBN 0471997102. Archived from the original on 2002-10-28. {{cite book}}: Unknown parameter |coauthors= ignored (|author= suggested) (help)
  • Houghton, R. A. (2005). "The contemporary carbon cycle". In William H Schlesinger (editor) (ed.). Biogeochemistry. Amsterdam: Elsevier Science. pp. 473–513. ISBN 0080446426. {{cite book}}: |editor= has generic name (help)
  • Janzen, H. H. (2004). "Carbon cycling in earth systems—a soil science perspective". Agriculture, ecosystems and environment. 104 (3): 399–417. doi:10.1016/j.agee.2004.01.040. {{cite journal}}: Cite has empty unknown parameter: |coauthors= (help)
  • Millero, Frank J. (2005). Chemical Oceanography (3 ed.). CRC Press. ISBN 0849322804.
  • Sundquist, Eric (1985). The Carbon Cycle and Atmospheric CO2: Natural variations Archean to Present. Geophysical Monographs Series. American Geophysical Union. {{cite book}}: Unknown parameter |coauthors= ignored (|author= suggested) (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]