ಎಡ್ವರ್ಡ್ ಕಲೆನ್‌ (ಟ್ವಿಲೈಟ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Edward Cullen
Twilight series character
ಚಿತ್ರ:EdwardCullen.jpg
Edward Cullen as portrayed by Robert Pattinson in the New Moon film.
ಮೊದಲು ಚಿತ್ರಣ Twilight
ಕರ್ತೃ Stephenie Meyer
Portrayed by Robert Pattinson
Information
AliasesEdward Anthony Masen (human name)
SpeciesVampire
ಲಿಂಗMale
ವೃತ್ತಿStudent
ಕುಟುಂಬEdward Masen, Sr. (biological father)
Elizabeth Masen (biological mother)
Esme Cullen (adoptive mother)
Carlisle Cullen (adoptive father)
Alice Cullen and Rosalie Hale (adoptive sisters)
Jasper Hale and Emmett Cullen (adoptive brothers)
Charlie Swan (father-in-law)
Renée Dwyer (mother-in-law)
ಗಂಡ/ಹೆಂಡತಿIsabella Marie Swan
ಮಕ್ಕಳುRenesmee Carlie Cullen

ಎಡ್ವರ್ಡ್ ಕಲೆನ್‌ (ಅಥವಾ ಎಡ್ವರ್ಡ್ ಅಂತೋನಿ ಮಸೇನ್ ) ಎಂಬುದು ಸ್ಟೇಫೆನಿ ಮೆಯೇರ್ ಅವರ ಟ್ವಿಲೈಟ್ ಸರಣಿಯ ಒಂದು ಕಾಲ್ಪನಿಕ ಪಾತ್ರ. ಇವನು ಟ್ವಿಲೈಟ್ , ನ್ಯೂ ಮೂನ್ , ಎಕ್ಲಿಪ್ಸ್ ಮತ್ತು ಬ್ರೇಕಿಂಗ್ ಡಾನ್ ಪುಸ್ತಕಗಳಲ್ಲಿ, ಜೊತೆಗೆ ಟ್ವಿಲೈಟ್ ಚಲನಚಿತ್ರ, ಮತ್ತು ಅಪೂರ್ಣ ಕಾದಂಬರಿಯಾದ ಮಿಡ್ನೈಟ್ ಸನ್ ನಲ್ಲಿ ಕಂಡುಬರುತ್ತಾನೆ - ಇದು ಟ್ವಿಲೈಟ್‌ನಲ್ಲಿ ನಡೆದ ಘಟನೆಗಳನ್ನು ಎಡ್ವರ್ಡ್‌ನ ದೃಷ್ಟಿಕೋನದಿಂದ ಮರು-ಹೇಳುವುದೇ ಆಗಿದೆ. ಎಡ್ವರ್ಡ್ ಒಬ್ಬ ರಕ್ತಪಿಶಾಚಿಯಾಗಿದ್ದು, ಅವನು ಟ್ವಿಲೈಟ್ ಸರಣಿಯ ಅವಧಿಯಲ್ಲಿ, ಬೆಲ್ಲಾ ಸ್ವಾನ್‌ಳನ್ನು ಪ್ರೀತಿಸಿ, ಮದುವೆಯಾಗಿ, ಒಂದು ಮಗುವನ್ನು ಪಡೆಯುತ್ತಾನೆ. ಬೆಲ್ಲಾ ಸ್ವಾನ್‌ ಓರ್ವ ಹದಿಹರೆಯದ ಮಾನವಳಾಗಿದ್ದು, ನಂತರದಲ್ಲಿ ತಾನೂ ಓರ್ವ ರಕ್ತಪಿಶಾಚಿಯಾಗಿ ಮಾರ್ಪಡಲು ಬಯಸುತ್ತಾಳೆ. 2008ರಲ್ಲಿ ಬಂದ ಟ್ವಿಲೈಟ್ ಚಲನಚಿತ್ರದಲ್ಲಿ ಎಡ್ವರ್ಡ್ ಪಾತ್ರವನ್ನು ರಾಬರ್ಟ್ ಪ್ಯಾಟಿನ್ಸನ್‌ ನಿರ್ವಹಿಸಿದ್ದ.

ಪರಿಕಲ್ಪನೆ ಮತ್ತು ರಚನೆ[ಬದಲಾಯಿಸಿ]

ಪಾತ್ರದ ಬೆಳವಣಿಗೆಯು ಗಿಲ್ಬರ್ಟ್ ಬ್ಲಿಥ್‌‌, ಫಿಟ್ಜ್ ವಿಲಿಯಮ್ ಡಾರ್ಸಿ, ಮತ್ತು ಎಡ್ವರ್ಡ್‌ ರೋಚೆಸ್ಟರ್ ಇವರುಗಳಿಂದ ಪ್ರಭಾವಿತಗೊಂಡಿದೆ- ವಿಶೇಷವಾಗಿ, ಎಡ್ವರ್ಡ್‌ ರೋಚೆಸ್ಟರ್ ಎಡ್ವರ್ಡ್ ಕಲೆನ್‌ ತರಹ ತನ್ನನ್ನು ತಾನು ಒಬ್ಬ "ಪೆಡಂಭೂತ" ಎಂದು ಗುರುತಿಸಿಕೊಳ್ಳುತ್ತಾನೆ.[೧]

ಕಾಣಿಸಿಕೊಳ್ಳುವಿಕೆಗಳು[ಬದಲಾಯಿಸಿ]

ಟ್ವಿಲೈಟ್ [ಬದಲಾಯಿಸಿ]

ಟ್ವಿಲೈಟ್‌‌ ನಲ್ಲಿ, ಬೆಲ್ಲಾ ಸ್ವಾನ್‌ ಎಂಬ ಒಬ್ಬ ಮಾನವ ಕನ್ಯೆಯನ್ನು ಎಡ್ವರ್ಡ್ ಭೇಟಿಮಾಡುತ್ತಾನೆ, ಆದರೆ ಅವಳ ವಿಚಾರಗಳನ್ನು ಅವನಿಂದ ಅರ್ಥ ಮಾಡಿಕೊಳ್ಳಲಾಗುವುದಿಲ್ಲ ಹಾಗೂ ಅವಳ ರಕ್ತವು ಅವನನ್ನು ಅತ್ಯಂತ ಮಧುರವಾಗಿ ಪರವಶಗೊಳಿಸುತ್ತದೆ.[೨] ಅವಳ ಬಗ್ಗೆ ತನಗೆ ಆಕರ್ಷಣೆ ಬೆಳೆಯುತ್ತಿರುವುದನ್ನು ಅವನು ಹತ್ತಿಕ್ಕುತ್ತಾನಾದರೂ, ಅವಳ ಜೀವವನ್ನು ಹಲವಾರು ಸಂದರ್ಭಗಳಲ್ಲಿ ಕಾಪಾಡಿದ ನಂತರ, ಅವನು ಅವಳಿಗೆ ಈಡಾಗುತ್ತಾನೆ. ಅಂತಿಮವಾಗಿ ಅವಳ ಪ್ರೇಮಪಾಶದಲ್ಲಿ ಸಿಲುಕುತ್ತಾನೆ. ತಾನೊಬ್ಬ ರಕ್ತಪಿಶಾಚಿಯೆಂದೂ, ಮತ್ತು ಹದಿನೇಳು ವರ್ಷದ ಯುವಕನೊಬ್ಬನ ಭೌತಿಕ ಶರೀರವನ್ನು ತಾನು ಉಳಿಸಿಕೊಂಡಿದ್ದರೂ, ವಾಸ್ತವವಾಗಿ ತಾನು 1901ರ ಜೂನ್‌ 20ರಂದು ಹುಟ್ಟಿದುದಾಗಿಯೂ ಬೆಲ್ಲಾಳ ಹತ್ತಿರ ಎಡ್ವರ್ಡ್ ಒಪ್ಪಿಕೊಳ್ಳುತ್ತಾನೆ ಇಲಿನಾಯ್ಸ್‌ನ ಚಿಕಾಗೋದಲ್ಲಿ ಹರಡಿದ್ದ ಸ್ಪ್ಯಾನಿಷ್‌ ಇನ್‌ಫ್ಲುಯೆನ್ಜಾ ಸಾಂಕ್ರಾಮಿಕ ರೋಗದಿಂದ ಅವನು ಸಾಯುವುದನ್ನು ತಡೆಗಟ್ಟಲು ಅವನ ಸಾಕು ತಂದೆ, ಕಾರ್ಲೈಲ್‌ ಕಲೆನ್‌, 1918ರಲ್ಲಿ ಅವನನ್ನು ಒಬ್ಬ ರಕ್ತಪಿಶಾಚಿಯನ್ನಾಗಿ ರೂಪಾಂತರಿಸಿರುತ್ತಾನೆ. ಬಹುತೇಕ ರಕ್ತಪಿಶಾಚಿಗಳಲ್ಲಿ ವಿರಳವಾಗಿರುವ ನೈತಿಕತೆಯನ್ನು ಕಾರ್ಲೈಲ್‌ ಅವನಲ್ಲಿ ನಿಧಾನವಾಗಿ ತುಂಬುತ್ತಾನೆ ಮತ್ತು ಮನುಷ್ಯರನ್ನು ಆಹಾರವೆಂದು ಪರಿಗಣಿಸಿರುವುದನ್ನು ತಿರಸ್ಕರಿಸುವುದು ಅವನ ಜೀವನದ ಧ್ಯೇಯವಾಗಿರುತ್ತದೆ. ಆದಾಗ್ಯೂ, ಬೆಲ್ಲಾ ತನ್ನ ಜೊತೆಗಿರುವುದನ್ನು ವಿರೋಧಿಸಿ ಎಡ್ವರ್ಡ್ ಸತತವಾಗಿ ಎಚ್ಚರಿಕೆ ನೀಡುತ್ತಾನೆ. ಅವಳು ಅವನ ಸಹಚಾರಿಯಾಗಿ ಮುಂದುವರಿದರೆ ಅವಳ ಜೀವನವು ಅಪಾಯದಲ್ಲಿ ಸಿಲುಕಬಹುದೆಂಬುದು ಅವನ ಗ್ರಹಿಕೆಯಾಗಿರುತ್ತದೆ. ಎಡ್ವರ್ಡ್‌ನಲ್ಲಿ ತನಗಿರುವ ಪ್ರೇಮ ಮತ್ತು ಭರವಸೆಯಿಂದಾಗಿ ಬೆಲ್ಲಾ ಅವನ ಎಚ್ಚರಿಕೆಗಳನ್ನು ಅಲಕ್ಷಿಸುತ್ತಾಳೆ. ತಾನು ರಕ್ತಪಿಶಾಚಿ ಜೇಮ್ಸ್‌ನ ಗುರಿಯಾಗಿ ಮಾರ್ಪಟ್ಟ ನಂತರವೂ ಸಹ ಇದು ಮುಂದುವರಿಯುತ್ತದೆ. "ಸಸ್ಯಾಹಾರಿ" ರಕ್ತಪಿಶಾಚಿಗಳಾಗಿರುವ (ಅಂದರೆ ಕೇವಲ ಪ್ರಾಣಿಗಳನ್ನಷ್ಟೇ ತಿನ್ನುವುದಕ್ಕೆ ಬದ್ಧರಾಗಿರುವ) ಕಲೆನ್‌ ಕುಟುಂಬಕ್ಕಿಂತ ಭಿನ್ನವಾಗಿ, ಜೇಮ್ಸ್‌ ನಿಯತವಾಗಿ ಮನುಷ್ಯರನ್ನು ಆಹಾರವಾಗಿ ಸೇವಿಸುತ್ತಿರುತ್ತಾನೆ ಮತ್ತು ಆತ ಬೆಲ್ಲಾಳ ರಕ್ತವನ್ನು ಕುಡಿಯುವವರೆಗೂ ಇದನ್ನು ನಿಲ್ಲಿಸಿರುವುದಿಲ್ಲ. ತನ್ನ ಕುಟುಂಬದ ಸಹಾಯದಿಂದ, ಎಡ್ವರ್ಡ್ ಬೆಲ್ಲಾಳನ್ನು ಜೇಮ್ಸ್‌ನ ಪರಭಕ್ಷಣೆಯಿಂದ ಕಾಪಾಡುತ್ತಾನೆ. ಆದರೆ ಬೆಲ್ಲಾಳನ್ನು ಹೇಗೆ ಮುಂದೆ ಸುರಕ್ಷಿತವಾಗಿ ಕಾಪಾಡುವುದು ಎಂಬುದು ಒಂದು ತೆರೆದ ಪ್ರಶ್ನೆಯಾಗಿಯೇ ಉಳಿಯುತ್ತದೆ.[೩]

ನ್ಯೂ ಮೂನ್ [ಬದಲಾಯಿಸಿ]

ನ್ಯೂ ಮೂನ್‌ ನಲ್ಲಿ, ಬೆಲ್ಲಾ ತನ್ನ ಬೆರಳನ್ನು ಕತ್ತರಿಸಿಕೊಂಡು, ಹೆಚ್ಚೂಕಮ್ಮಿ ತನ್ನ ಸೋದರ ಜಾಸ್ಪರ್‌ನಿಂದ ಆಕ್ರಮಣಕ್ಕೊಳಗಾದಾಗ, ಅವಳ ಸುರಕ್ಷತೆಯ ಕುರಿತಾದ ಎಡ್ವರ್ಡ್‌ನ ತಲ್ಲಣಗಳು ತೀವ್ರಗೊಳ್ಳುತ್ತವೆ. ಅವಳನ್ನು ರಕ್ಷಿಸುವ ಒಂದು ಪ್ರಯತ್ನದಲ್ಲಿ, ಅವಳನ್ನು ತಾನು ಇನ್ನು ಪ್ರೀತಿಸುವುದಿಲ್ಲವೆಂದು ಅವನು ಮನವರಿಕೆ ಮಾಡಿಕೊಡುತ್ತಾನೆ ಹಾಗೂ ಬೆಲ್ಲಾಳ ಹೃದಯಭಗ್ನಗೊಳಿಸಿ, ತನ್ನ ಕುಟುಂಬದ ಜೊತೆಗೆ ಹೊರಟು ಹೋಗುತ್ತಾನೆ. ಬೆಲ್ಲಾ ಇಲ್ಲದೆ ಬದುಕುವುದು ಕಷ್ಟವೆಂದು ಎಡ್ವರ್ಡ್‌ಗೆ ಅರಿವಾಗುತ್ತದೆ. ಒಂದು ಕೊನೆಯಿಲ್ಲದ ದೀರ್ಘವಾದ ಮತ್ತು ಅರ್ಥಹೀನ ಬದುಕಿನ ಪ್ರತೀಕ್ಷೆಯಲ್ಲಿ ಆತ ತೀವ್ರವಾಗಿ ನಿರುತ್ಸಾಹಕ್ಕೊಳಗಾಗುತ್ತಾನೆ. ಬೆಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ತಪ್ಪುಗ್ರಹಿಕೆಯ ಮಾಹಿತಿಯು ತನ್ನ ಸೋದರಿ ರೊಸಾಲಿಯಿಂದ ದೊರೆತಾಗ, ತನ್ನನ್ನು ಸಾಯಿಸಬೇಕೆಂದು ಇಟಲಿಯ ಒಂದು ರಕ್ತಪಿಶಾಚಿಗಳ ತಂಡವಾದ ವೊಲ್ತುರಿಯನ್ನು ಮನವೊಲಿಸಲು ಎಡ್ವರ್ಡ್‌ ಪ್ರಯತ್ನಿಸುತ್ತಾನೆ. ತನ್ನ ಸಹೋದರಿ ಆಲಿಸ್ ಜೊತೆಗೂಡಿ ಬೆಲ್ಲಾ ಇಟಲಿಗೆ ಧಾವಿಸುತ್ತಾಳೆ ಮತ್ತು ಎಡ್ವರ್ಡ್‌ನನ್ನು ವೊಲ್ತುರಿ ಗುಂಪು ನಾಶ ಮಾಡುವ ಮುಂಚೆ ಅವನನ್ನು ತಡೆಯುತ್ತಾಳೆ.ತಾನು ಅವಳನ್ನು ಬಿಟ್ಟಿದ್ದು ಏತಕ್ಕಾಗಿ ಎಂಬುದನ್ನು ಬೆಲ್ಲಾಳಿಗೆ ವಿವರಿಸುವ ಎಡ್ವರ್ಡ್‌, ಅವಳಲ್ಲಿ ಕ್ಷಮೆ ಕೋರುತ್ತಾನೆ. ಅವಳು ಅಂತಿಮವಾಗಿ ಅವನನ್ನು ಸಂಪೂರ್ಣ ಕ್ಷಮಿಸುತ್ತಾಳೆ, ಮತ್ತು ಎಡ್ವರ್ಡ್ ಅವಳನ್ನು ಬಿಟ್ಟೇ ಇರಲಿಲ್ಲವೇನೋ ಎಂಬುವಷ್ಟರ ಮಟ್ಟಿಗೆ ಅವರು ತಮ್ಮ ಸಂಬಂಧವನ್ನು ಮುಂದುವರೆಸುತ್ತಾರೆ. ಜಾಕೋಬ್ ಬ್ಲಾಕ್ ಎಂಬ ಹೆಸರಿನ ವೃಕಮಾನವನೊಂದಿಗೆ ಬೆಲ್ಲಾ ಹೊಂದಿರುವ ಮುರಿಯಲಾಗದ ಬಂಧನದ ಹೊರತಾಗಿ ಇವರ ಸಂಬಂಧ ಮುಂದುವರೆಯುತ್ತದೆ. ತಾನೋರ್ವ ರಕ್ತಪಿಶಾಚಿಯಾಗಿ ಬದಲಾಗುವಲ್ಲಿ ಬೆಲ್ಲಾ ಎಡ್ವರ್ಡ್‌ನ ಕುಟುಂಬದ ನೆರವನ್ನು ಪಡೆಯುವಲ್ಲಿ ಸಫಲಳಾಗುತ್ತಾಳೆ. ಇದೇ ವೇಳೆಯಲ್ಲಿ ಎಡ್ವರ್ಡ್ ಅವಳ ನಿರೀಕ್ಷೆಯ ಕುರಿತು ಕೋಪೋದ್ರಿಕ್ತನಾದರೂ, ತನ್ನನ್ನು ಅವಳು ಮೊದಲು ಮದುವೆಯಾಗಲು ಒಪ್ಪಿಕೊಂಡರೆ ಅವಳನ್ನು ಸ್ವತಃ ತಾನೇ ರಕ್ತಪಿಶಾಚಿಯಾಗಿ ಬದಲಾಯಿಸುವುದಾಗಿ ನಂತರ ಒಪ್ಪಿಕೊಳ್ಳುತ್ತಾನೆ.[೪]

ಎಕ್ಲಿಪ್ಸ್ [ಬದಲಾಯಿಸಿ]

ಎಕ್ಲಿಪ್ಸ್ ನಲ್ಲಿ, ತಾನಿನ್ನೂ ಮಾನವಳಾಗಿರುವಾಗಲೇ ತನ್ನನ್ನು ಹೊಂದಬೇಕೆಂಬ ಷರತ್ತಿನ ಮೇರೆಗೆ ಅವನನ್ನು ಮದುವೆಯಾಗಲು ಬೆಲ್ಲಾ ಒಪ್ಪಿಕೊಳ್ಳುತ್ತಾಳೆ. ಇದು ತಾವು ಮದುವೆಯಾದ ನಂತರವೇ ನಡೆಯಬೇಕೆಂದು ಷರತ್ತು ವಿಧಿಸುವ ಮೂಲಕ ಎಡ್ವರ್ಡ್ ಅಂತಿಮವಾಗಿ ಪಟ್ಟು ಸಡಿಲಿಸುತ್ತಾನೆ ಮತ್ತು ಒಪ್ಪಿಕೊಳ್ಳುತ್ತಾನೆ. ತನ್ನ ಸಂಗಾತಿ ಜೇಮ್ಸ್‌‌ನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾ ಬೆಲ್ಲಾಳನ್ನು ಬೆನ್ನಟ್ಟಿರುವ ಹಾಗೂ ಸೇನೆಯೊಂದನ್ನು ಕಟ್ಟುವುದಕ್ಕಾಗಿ ಹೊಸ ರಕ್ತಪಿಶಾಚಿಗಳನ್ನು ಸೃಷ್ಟಿಸುತ್ತಿರುವ ರಕ್ತಪಿಶಾಚಿ ವಿಕ್ಟೋರಿಯಾಳ ತಂತ್ರಗಾರಿಕೆಗಳಿಂದ ಸದರಿ ಕಥಾವಸ್ತುವು ಪ್ರೇರೇಪಿಸಲ್ಪಟ್ಟಿದೆ. ಒಂದು ಒಲ್ಲದ ಮನಸ್ಸಿನ ತಾತ್ಕಾಲಿಕ ಸಂಧಿಯು ಕಲೆನ್‌ ಕುಟುಂಬಗಳು ಹಾಗೂ ಅಮೆರಿಕಾ ಮೂಲದ ವೃಕ್ಷಮಾನವರ ತಂಡದ ನಡುವೆ ನಡೆಯುತ್ತದೆ. ಇದರ ನೇತೃತ್ವವನ್ನು ಸಾಮ್ ಉಲೆ, ಮತ್ತು ಬೆಲ್ಲಾಳ ಹೃದಯವನ್ನು ಎಡ್ವರ್ಡ್‌ ಭಗ್ನಗೊಳಿಸಿದ್ದಾಗ ಅವಳಿಗೋಸ್ಕರ ಮಿಡಿಯುತ್ತಿದ್ದ ಓರ್ವ ಸ್ನೇಹಿತನಾದ ಜಾಕೋಬ್ ಬ್ಲಾಕ್ ವಹಿಸುತ್ತಾರೆ. ಆದರೆ, ಜಾಕೋಬ್ ತಾನು ತಿಳಿದುಕೊಂಡಿದ್ದಕ್ಕಿಂತ ಹೆಚ್ಚು ತನಗೆ ಆಪ್ತವಾಗಿದ್ದಾನೆಂದು ಬೆಲ್ಲಾಳಿಗೆ ತಿಳಿದಾಗ ಈ ತಾತ್ಕಾಲಿಕ ಸಂಧಿಯು ಅಪಾಯದಲ್ಲಿ ಸಿಲುಕುತ್ತದೆ. ಅಂತಿಮವಾಗಿ, ಬೆಲ್ಲಾ ಜಾಕೋಬ್ ಬಗ್ಗೆ ಕಾಳಜಿ ವಹಿಸುವುದನ್ನು ಎಡ್ವರ್ಡ್ ಒಪ್ಪಿಕೊಳ್ಳುತ್ತಾನೆ ಮತ್ತು ವಿಕ್ಟೋರಿಯಳನ್ನು ನಾಶಮಾಡುವಲ್ಲಿ ಯಶಸ್ಸು ಕಾಣುತ್ತಾನೆ. ಎಡ್ವರ್ಡ್ ತನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿಯೆಂದು ಬೆಲ್ಲಾ ಪರಿಗಣಿಸುತ್ತಾಳೆ. ಇತರ ಜನರನ್ನು ಖುಷಿಪಡಿಸುವಲ್ಲಿ ಬೆಲ್ಲಾ ತನ್ನ ಜೀವನದ ಬಹುಸಮಯವನ್ನು ವ್ಯಯಮಾಡುತ್ತಾಳೆ ಎಂದು ಎಡ್ವರ್ಡ್‌ಗೆ ಅರಿವಾದಾಗ, ತಾವು ಮದುವೆಯಾಗುವುದಕ್ಕೆ ಮುಂಚೆಯೇ ಪ್ರಣಯಸಂಬಂಧದಲ್ಲಿ ತೊಡಗಲು ಯತ್ನಿಸಬಹುದೆಂದು ಬೆಲ್ಲಾಳಿಗೆ ಹೇಳುತ್ತಾನೆ. ಆದರೆ, ಅವಳು ಅವನ ಪ್ರಸ್ತಾಪವನ್ನು ತಿರಸ್ಕರಿಸಿ, ಮದುವೆ, ಪ್ರಣಯ ಸಂಬಂಧ, ಮತ್ತು ನಂತರ ಓರ್ವ ರಕ್ತಪಿಶಾಚಿಯಾಗುವುದು -ಹೀಗೆ ಎಲ್ಲವನ್ನೂ ತಾನು ಎಲ್ಲವನ್ನು ಕ್ರಮಬದ್ದವಾಗಿಯೇ ಮಾಡುವುದಾಗಿ ಹೇಳುತ್ತಾಳೆ.[೫]

ಬ್ರೇಕಿಂಗ್ ಡಾನ್[ಬದಲಾಯಿಸಿ]

ಬ್ರೇಕಿಂಗ್ ಡಾನ್‌‌ ನಲ್ಲಿ ಎಡ್ವರ್ಡ್ ಮತ್ತು ಬೆಲ್ಲಾ ಮದುವೆಯಾಗುವುದನ್ನು ಕಾಣಬಹುದು. ತಮ್ಮ ಮಧುಚಂದ್ರದ ಅವಧಿಯಲ್ಲಿ ಬೆಲ್ಲಾ ಗರ್ಭಿಣಿಯಾಗುತ್ತಾಳೆ, ಮತ್ತು ವೇಗವಾಗಿ ಬೆಳೆದ ಅರ್ಧ-ಮಾನವ, ಅರ್ಧ-ರಕ್ತಪಿಶಾಚಿ ರೂಪದ ಭ್ರೂಣವು ಬೆಲ್ಲಾಳ ಆರೋಗ್ಯದ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ. ತನ್ನ ಜೀವವುಳಿಸಿಕೊಳ್ಳುವ ಸಲುವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಎಡ್ವರ್ಡ್ ಅವಳನ್ನು ಒತ್ತಾಯಿಸಲು ಪ್ರಯತ್ನಿಸುತ್ತಾನೆ. ಆದರೆ, ಇನ್ನೂ ಹುಟ್ಟಿರದ ತನ್ನ ಮಗುವಿನೊಂದಿಗೆ ಒಂದು ಬಂಧವನ್ನು ಹೊಂದಿರುವ ಬೆಲ್ಲಾ, ಮಗುವಿಗೆ ಜನ್ಮ ನೀಡುವುದಾಗಿ ಪಟ್ಟು ಹಿಡಿಯುತ್ತಾಳೆ. ಮಗುವಿನ ಆಲೋಚನೆಗಳನ್ನು ಅವನು ಕೇಳಿಸಿಕೊಂಡ ನಂತರ ಹಾಗೂ ತನ್ನ ತಾಯಿಯ ಪ್ರೀತಿಗೆ ಪ್ರತಿಯಾಗಿ ಆ ಮಗುವೂ ಸಹ ಬೆಲ್ಲಾಳನ್ನು ಪ್ರೀತಿಸುತ್ತಿದೆ ಎಂದು ಅರಿತುಕೊಂಡ ನಂತರ, ಆ ಮಗುವಿನ ಕುರಿತು ಎಡ್ವರ್ಡ್‌ಗೂ ಸಹ ಪ್ರೀತಿಯುಕ್ಕುತ್ತದೆ. ತುರ್ತುಸ್ಥಿತಿಯ c-ವಿಭಾಗದಲ್ಲಿ ಮಗುವಿಗೆ ಜನ್ಮನೀಡುವಾಗ ಬೆಲ್ಲಾ ಹೆಚ್ಚೂಕಮ್ಮಿ ಸಾಯುವ ಸ್ಥಿತಿ ತಲುಪುತ್ತಾಳೆ, ಆದರೆ ಎಡ್ವರ್ಡ್ ಯಶಸ್ವಿಯಾಗಿ ತನ್ನ ಮಗಳನ್ನು ಹೆರಿಗೆ ಮಾಡಿಸಲು ನೆರವಾಗುತ್ತಾನೆ ಮತ್ತು ಬೆಲ್ಲಾಳ ಹೃದಯಕ್ಕೆ ತನ್ನ ನಂಜನ್ನು ಚುಚ್ಚುತ್ತಾನೆ. ಇದರಿಂದ ಅವಳ ಗಾಯಗಳು ಮಾಗುವುದರ ಜೊತೆಗೆ ಅವಳೊಬ್ಬ ಅಮರವಾದ ರಕ್ತಪಿಶಾಚಿಯಾಗಿ ಬದಲಾಗುತ್ತಾಳೆ. ಬೆಲ್ಲಾಳ ಯಾತನಾಮಯ ಮಾರ್ಪಾಡಿನ ಸಮಯದಲ್ಲಿ, ಜಾಕೋಬ್ ಅವರ ಹೆಣ್ಣು ಮಗುವಾದ ರೆನೆಸ್ಮೀ ಮೇಲೆ ಮುದ್ರೆಯೊತ್ತುತ್ತಾನೆ.ಇರಿನ ಎಂಬ ರಕ್ತಪಿಶಾಚಿಯು ರೆನೆಸ್ಮೀಯನ್ನು ಒಬ್ಬ ಅಮರಳಾದ ರಕ್ತಪಿಶಾಚಿ ಮಗುವೆಂದು ತಪ್ಪು ತಿಳಿದನಂತರ, ಇದು ರಕ್ತಪಿಶಾಚಿ ಪ್ರಪಂಚದಲ್ಲಿ ನಿಷೇಧಿಸಲ್ಪಟ್ಟಿರುವ ಒಂದು ಸೃಷ್ಟಿ ಎಂದು ಪರಿಗಣಿಸಿ ವೊಲ್ತುರಿ ಸಮೂಹವು ಕಲೆನ್‌ ಪರಿವಾರವನ್ನು ನಾಶಮಾಡಲು ಬರುತ್ತದೆ. ಬೆಲ್ಲಾ ಮತ್ತು ಅವರ ಮೈತ್ರಿಕೂಟದ ಜೊತೆಗೆ ನಿಲ್ಲುವ ಎಡ್ವರ್ಡ್‌, ರೆನೆಸ್ಮೀಯು ಒಂದು ಅಮರವಾದ ಮಗುವಲ್ಲ ಹಾಗೂ ಅವರ ಅಸ್ತಿತ್ವಕ್ಕೆ ಅದರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ವೊಲ್ತುರಿ ಸಮೂಹಕ್ಕೆ ಮನವರಿಕೆ ಮಾಡಿಕೊಡುತ್ತಾನೆ. ಒಮ್ಮೆ ವೊಲ್ತುರಿ ಅಲ್ಲಿಂದ ಹೊರಟ ಮೇಲೆ, ಎಡ್ವರ್ಡ್ ಮತ್ತು ಬೆಲ್ಲಾ ನಿರಾಳರಾಗಿ ತಮ್ಮ ಮಗಳ ಜೊತೆ ಶಾಂತಿಯಿಂದ ಜೀವನ ನಡೆಸುತ್ತಾರೆ.[೬]

ಪಾತ್ರ ನಿರೂಪಣೆ[ಬದಲಾಯಿಸಿ]

ಎಡ್ವರ್ಡ್‌ ಓರ್ವ ಮೋಹಕ, ವಿನೀತ, ದೃಢಸಂಕಲ್ಪದ, ಮತ್ತು ಅತ್ಯಂತ ಮೊಂಡುತನದ ಸ್ವಭಾವದವನಾಗಿ ಪುಸ್ತಕದಲ್ಲಿ ಹಾಗೂ ಬೆಲ್ಲಾಳಿಂದ ವಿವರಿಸಲ್ಪಟ್ಟಿದ್ದಾನೆ. ಬೆಲ್ಲಾಳ ವಿಷಯಕ್ಕೆ ಸಂಬಂಧಿಸಿದಂತೆ ಆತ ಅತ್ಯಂತ ರಕ್ಷಣಾತ್ಮಕ ಸ್ವಭಾವದವನಾಗಿದ್ದು, ಬೇರೆಲ್ಲದಕ್ಕಿಂತ ಮಿಗಿಲಾಗಿ ಅವಳ ಸುರಕ್ಷೆ, ಮನುಷ್ಯತ್ವ ಹಾಗೂ ಕ್ಷೇಮವೇ ಅವನಿಗೆ ಮುಖ್ಯವಾಗಿರುತ್ತದೆ. ಆತ ಯಾವಾಗಲೂ ಸನ್ನಿವೇಶಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ವಿಶ್ಲೇಷಿಸುತ್ತಾನೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ತೋರುವ ಪ್ರವೃತ್ತಿಯನ್ನು ಹೊಂದಿರುತ್ತಾನೆ. ವಿಶೇಷವಾಗಿ ಬೆಲ್ಲಾಳ ಸುರಕ್ಷತೆಯು ಅಪಾಯದ ಪರಿಸ್ಥಿತಿಯಲ್ಲಿರುವಾಗ ಈ ರೀತಿಯ ಪ್ರವೃತ್ತಿಯು ಅವನಿಂದ ಹೊರಹೊಮ್ಮುತ್ತದೆ. 20ನೇ ಶತಮಾನದ ಆರಂಭದಲ್ಲಿನ ತನ್ನ ಮಾನವ ಜೀವನದಿಂದ ಆಯ್ದ ಕೆಲವು ಹಳತಾದ ಭಾಷಣವನ್ನು ಉಳಿಸಿಕೊಂಡಿರುತ್ತಾನೆ. ಎಡ್ವರ್ಡ್ ಸ್ವತಃ ತನ್ನನ್ನು ಒಂದು ಪೆಡಂಭೂತದಂತೆ ಕಾಣುತ್ತಾನೆ, ಮತ್ತು ಬೆಲ್ಲಾಳ ಪ್ರೇಮದಲ್ಲಿ ಬಿದ್ದ ಮೇಲೆ, ತಾನು ಒಬ್ಬ ರಕ್ತಪಶಾಚಿಯಾಗುವ ಬದಲು ಮಾನವನಾಗಬೇಕಾಗಿತ್ತೆಂದು ವಿಪರೀತವಾಗಿ ಬಯಸುತ್ತಾನೆ.

ಭೌತಿಕ ರೂಪ[ಬದಲಾಯಿಸಿ]

ಟ್ವಿಲೈಟ್ ಸರಣಿಯಲ್ಲಿ ಬರುವ ಎಲ್ಲ ರಕ್ತಪಿಶಾಚಿಗಳಂತೆ, ಎಡ್ವರ್ಡ್ ಅಸಾಧ್ಯ ಸುಂದರನಾಗಿದ್ದಾನೆ ಎಂದು ಬೆಲ್ಲಾಳಿಂದ ವಿವರಿಸಲ್ಪಟ್ಟಿದ್ದಾನೆ. ಸರಣಿಯ ವಿವಿಧ ಹಂತಗಳಲ್ಲಿ, ಅವಳು ಅವನನ್ನು ಗ್ರೀಕ್‌ನ ಪೌರಾಣಿಕ ದೇವತೆ ಅಡೋನಿಸ್‌ಗೆ ಹೋಲಿಸುತ್ತಾಳೆ. ಅವನ ಚರ್ಮವು "ಅಮೃತಶಿಲೆಯ ತರಹ"- ತುಂಬಾ ಮಸುಕು, ಮಂಜುತಂಪಿನಂತಿದ್ದು, ಮತ್ತು ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತದೆ. ಅವನ ಮುಖಚರ್ಯೆಯು ಪರಿಪೂರ್ಣವಾಗಿ ಮತ್ತು ಕೋನಯುತವಾಗಿದ್ದು, ಎತ್ತರವಾದ ಕೆನ್ನೆಯೆಲುಬುಗಳು, ಬಲಿಷ್ಠ ದವಡೆ, ಒಂದು ನೀಳ ಮೂಗು, ಮತ್ತು ತುಂಬು ತುಟಿಗಳನ್ನು ಅವನು ಹೊಂದಿದ್ದ ಎಂದು ಅವಳು ವಿವರಿಸುತ್ತಾಳೆ. ಯಾವಾಗಲೂ ಗೋಜಲಾಗಿರುವ ಅವನ ಕೂದಲು, ವಿಶೇಷವಾದ ಕಂಚು ಬಣ್ಣವನ್ನು ಉಳಿಸಿಕೊಂಡಿದ್ದು, ಇದನ್ನು ಅವನು ಮಾನವ ಜನ್ಮದಲ್ಲಿ ತನ್ನ ಜೈವಿಕ ತಾಯಿಯಿಂದ ಪಡೆದುಕೊಂಡಿದ್ದ. ಒಂದೊಮ್ಮೆ ಹಸಿರು ಬಣ್ಣದಲ್ಲಿದ್ದ ಅವನ ಕಣ್ಣುಗಳು, ಈಗ ಗೋಮೇಧಿಕ ಬಣ್ಣದಲ್ಲಿವೆಯೆಂದು ವರ್ಣಿಸಲ್ಪಟ್ಟಿವೆ. ಅವನು ಆಹಾರವಿಲ್ಲದೆ ದೂರ ಪ್ರಯಾಣ ಮಾಡಿದರೆ ಅವನ ರೂಪವು ಬದಲಾಗುತ್ತದೆ: ಅವನ ಕಣ್ಣುಗಳು ಮಂಕಾಗಿ ಹೆಚ್ಚುಕಡಿಮೆ ಕಪ್ಪಾಗಿ ಬದಲಾಗುತ್ತವೆ, ಮತ್ತು ನೇರಳೆ ಬಣ್ಣದ ಮೂಗೇಟುಗಳು ಅವನ ಕಣ್ಣುಗಳ ಕೆಳಗೆ ಕಾಣಿಸುತ್ತವೆ. ಎಡ್ವರ್ಡ್ 6'2"ನಷ್ಟು ಎತ್ತರವಿದ್ದು, ಸಪೂರವಾದ ಆದರೆ ಶಕ್ತಿಯುತವಾದ ದೇಹವನ್ನು ಹೊಂದಿದ್ದಾನೆ.

ರಕ್ತಪಿಶಾಚಿಯಂತೆ ವರ್ತಿಸುವ ಲಕ್ಷಣಗಳು, ಸಾಮರ್ಥ್ಯಗಳು ಮತ್ತು ಆಸಕ್ತಿಗಳು[ಬದಲಾಯಿಸಿ]

ಟ್ವಿಲೈಟ್ ಸರಣಿಯ ಎಲ್ಲ ರಕ್ತಪಿಶಾಚಿಗಳಂತೆ, ಅತಿಮಾನುಷ ಶಕ್ತಿ, ವೇಗ, ಸಹಿಷ್ಣುತೆ, ಮತ್ತು ಚುರುಕುತನವನ್ನು ಹೊಂದಿರುತ್ತಾನೆ, ಮತ್ತು ಅವನು ಅಮಾನುಷವಾಗಿ ಸುಂದರನಾಗಿದ್ದಾನೆ ಎಂದು ವರ್ಣಿಸಲ್ಪಟ್ಟಿದ್ದಾನೆ. ಅವನ ಸುಗಂಧ ಮತ್ತು ಧ್ವನಿ ಬೆಲ್ಲಾಳನ್ನು ಎಷ್ಟೊಂದು ಅಗಾಧವಾಗಿ ವ್ಯಾಮೋಹಗೊಳಿಸಿದೆಯೆಂದರೆ, ಅವನು ಅನಿರೀಕ್ಷಿತವಾಗಿ ಅವಳನ್ನು ಸಂಪೂರ್ಣವಾಗಿ ಒಂದು ಆಜ್ಞಾನುವರ್ತಿ ಬೆರಗಿನೊಳಗೆ ಕಳಿಸುತ್ತಾನೆ. ಟ್ವಿಲೈಟ್‌‌ ನಲ್ಲಿ, ಇತರೆಲ್ಲಾ ರಕ್ತಪಿಶಾಚಿಗಳಂತೆ ಉಸಿರಾಡುವ ಅವಶ್ಯಕತೆ ತನಗಿಲ್ಲವೆಂದು ವಿವರಿಸುತ್ತಾನೆ. ಆದರೂ ಇದು ತನ್ನ ಪರಿಸರವನ್ನು ಆಘ್ರಾಣಿಸಲು ಸಹಾಯಕವಾಗಿರುವುದರಿಂದ, ರೂಢಿಯಲ್ಲಿ ಹಾಗೆ ಮಾಡಲು ಆಯ್ಕೆಮಾಡಿಕೊಳ್ಳುತ್ತಾನೆ. ಆತ ರೂಢಿಗತವಾದ ಆಹಾರವನ್ನು ಜೀರ್ಣಿಸಿಕೊಳ್ಳಲಾರ. ಜೊತೆಗೆ ಅದರೆಡೆಗೆ ತನಗಿರುವ ಆಕರ್ಷಣೆಯನ್ನು ಸಾಮಾನ್ಯ ಮನುಷ್ಯನೋರ್ವನ ಹೊಲಸು ತಿನ್ನುವ ಪ್ರಕ್ರಿಯೆಗೆ ಅವನು ಹೋಲಿಸುತ್ತಾನೆ. ಜೊತೆಗೆ, ಇತರ ರಕ್ತಪಿಶಾಚಿಗಳಂತೆ, ಎಡ್ವರ್ಡ್‌ಗೆ ನಿದ್ರೆ ಬರುವುದಿಲ್ಲ.ತನ್ನ ಜೊತೆಗಾರ ರಕ್ತಪಿಶಾಚಿಗಳ ತರಹ ವಿಶೇಷ ಲಕ್ಷಣಗಳನ್ನು ಒಳಗೊಳ್ಳುವುದರ ಜೊತೆಗೆ, ಎಡ್ವರ್ಡ್ ತನ್ನದೇ ಆದ ಕೆಲವೊಂದು ಸಾಮರ್ಥ್ಯಗಳನ್ನು ಹೊಂದಿದ್ದಾನೆ. ಕಲೆನ್‌ ಪರಿವಾರದವರ ಪೈಕಿ ಆತ ಅತ್ಯಂತ ವೇಗಿಯಾಗಿದ್ದು, ಅವರ ಪೈಕಿ ಯಾರನ್ನು ಬೇಕಾದರೂ ಹಿಂದಿಕ್ಕಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. ಬಹುಶಃ ತನ್ನ ಮಾನವ ಜೀವನದ ಪರಾನುಭೂತಿ ಶಕ್ತಿಯ ಪ್ರತಿಭೆಯ ಪರಿಣಾಮವಾಗಿ, ತನಗಿಂತ ಕೆಲವು ಮೈಲುಗಳೊಳಗಿನ ಅಂತರದಲ್ಲಿರುವ ಯಾರೇ ಒಬ್ಬರ ಮನಸ್ಸನ್ನು ಎಡ್ವರ್ಡ್ ಓದಬಲ್ಲವನಾಗಿದ್ದಾನೆ; ಬೆಲ್ಲಾ ಮಾತ್ರ ಈ ನಿಯಮಕ್ಕೆ ಏಕೈಕವಾಗಿ ಹೊರತಾಗಿದ್ದು, ಮೆಯೇರ್ ಹೇಳುವಂತೆ ಇದು ಬೆಲ್ಲಾ ಒಂದು ಖಾಸಗಿ ಮನಸ್ಸನ್ನು ಹೊಂದಿದ್ದರ ಪ್ರಯುಕ್ತವಾಗಿದೆ.[೭] ತನ್ನ 20 ಶತಮಾನದ ಆರಂಭದಲ್ಲಿನ ಮಾನವ ಜೀವನದಿಂದ ಬಂದಿರುವ ಕೆಲವೊಂದು ಸಾಂಪ್ರದಾಯಿಕ ಆಲೋಚನಾ ರೀತಿ ಮತ್ತು ಬಳಕೆತಪ್ಪಿದ ಮಾತಿನ ಶೈಲಿಗಳನ್ನು ಕೂಡ ಎಡ್ವರ್ಡ್‌ ಉಳಿಸಿಕೊಂಡಿದ್ದಾನೆ.ಎಡ್ವರ್ಡ್ ಒಬ್ಬ ಸಂಗೀತರಸಿಕನಾಗಿದ್ದು, ಪಿಯನೋವನ್ನು ಒಬ್ಬ ಪಾರಂಗತನಂತೆ ನುಡಿಸಬಲ್ಲ. ಸಂಗೀತದ ಒಂದು ವ್ಯಾಪಕ ಶ್ರೇಣಿಯನ್ನು ಅವನು ಆನಂದಿಸುತ್ತಾನೆ. ಶಾಸ್ತ್ರೀಯ, ಜಾಝ್‌, ಪ್ರಗತಿಶೀಲ ಲೋಹಸಂಗೀತ, ಪರ್ಯಾಯವಾದ ರಾಕ್‌, ಮತ್ತು ಪಂಕ್‌ ರಾಕ್‌ ಪ್ರಭೇದಗಳು ಇದರಲ್ಲಿ ಸೇರಿವೆಯಾದರೂ, ಹಳ್ಳಿಗಾಡಿನ ಸಂಗೀತ ಅವನಿಗಿಷ್ಟವಾಗುವುದಿಲ್ಲ. ಮುಖ್ಯವಾಹಿನಿಯ ಸಂಗೀತವಾಗಿ ಇಂಡೀ ರಾಕ್‌ಗೆ ಅವನು ಆದ್ಯತೆ ನೀಡುತ್ತಾನೆ, ಮತ್ತು ರಾಕ್‌ ಹಾಗೂ ಶಾಸ್ತ್ರೀಯ ಸಂಗೀತವನ್ನೂ ಆತ ಸಮಾನವಾಗಿ ಆಸ್ವಾದಿಸುತ್ತಾನೆ.[೮] ಅವನು ಟ್ವಿಲೈಟ್ ನಲ್ಲಿ ಉಲ್ಲೇಖಿಸುವಂತೆ, ಅರವತ್ತರ ದಶಕದ ಸಂಗೀತಕ್ಕಿಂತ ಐವತ್ತರ ದಶಕದ ಸಂಗೀತವನ್ನು ಅವನು ಇಷ್ಟಪಡುತ್ತಾನೆ, ಎಪ್ಪತ್ತರ ದಶಕದ ಸಂಗೀತವನ್ನು ಇಷ್ಟಪಡುವುದಿಲ್ಲ. ಆದರೆ ಎಂಬತ್ತರ ದಶಕದ ಸಂಗೀತವು "ಸಹನೀಯ"ವಾಗಿದ್ದವು ಎಂದು ಆತ ಹೇಳುತ್ತಾನೆ.ಕಾರುಗಳನ್ನು ಸಂಗ್ರಹಿಸುವುದು ಎಡ್ವರ್ಡ್‌ನ ಒಂದು ಹವ್ಯಾಸ.[೮] ಅವನು ಒಂದು ವೋಲ್ವೋ S60 R ಕಾರು ಮತ್ತು ಒಂದು "ವಿಶೇಷ ಸಂದರ್ಭ"ದ ಕಾರಾಗಿ ಅಸ್ಟೋನ್ ಮಾರ್ಟಿನ್ V12 ವ್ಯಾಂಕ್ವಿಷ್‌ನ್ನು ಹೊಂದಿದ್ದಾನೆ. ಅವನು ತನ್ನ ಸಹೋದರಿ ಆಲಿಸ್‌‌ಗೆ ಪೋರ್ಷೆ 911 ಟರ್ಬೋ ಕಾರನ್ನು ಎಕ್ಲಿಪ್ಸ್‌‌ ನಲ್ಲಿ ಉಡುಗೊರೆಯಾಗಿ ನೀಡಿದ್ದ. ಬೆಲ್ಲಾಳನ್ನು ಕೂಡಿಸಿಕೊಂಡು ಸವಾರಿ ಮಾಡಲು ಅವನು ಒಂದು ಮೋಟಾರ್ ಸೈಕಲ್‌ನ್ನು ಖರೀದಿಸಿದ. ಆದರೆ ನಂತರದಲ್ಲಿ ಅದನ್ನು ಜಾಸ್ಪರ್‌ಗೆ ಕೊಟ್ಟುಬಿಟ್ಟ. ಏಕೆಂದರೆ ಅವಳು ಜಾಕೋಬ್ ಜೊತೆಗೆ ಮೋಟಾರ್ ಸೈಕಲ್ ಸವಾರಿಯನ್ನು ಆನಂದಿಸುತ್ತಾಳೆ ಎಂಬುದು ಅವನಿಗೆ ಅರಿವಾಗಿತ್ತು.

ಚಲನಚಿತ್ರ ನಿರೂಪಣೆ[ಬದಲಾಯಿಸಿ]

ಪಾತ್ರ ಹಂಚಿಕೆ[ಬದಲಾಯಿಸಿ]

ಎಡ್ವರ್ಡ್ ಪಾತ್ರವನ್ನು 2008ರ ಟ್ವಿಲೈಟ್ ಚಿತ್ರಕ್ಕಾಗಿರುವ ಪಾತ್ರವರ್ಗದಲ್ಲಿ ಸೇರಿಸಿಕೊಳ್ಳುವ ಮೊದಲಿಗೆ, ಮೆಯೇರ್ ಹೀಗೆ ಅಭಿಪ್ರಾಯಪಟ್ಟಳು: ಎಡ್ವರ್ಡ್ ಪಾತ್ರವು "ಪ್ರಶ್ನಾತೀತವಾಗಿ ಪಾತ್ರಹಂಚಿಕೆಯಲ್ಲಿನ ಒಂದು ಅತ್ಯಂತ ಕ್ಲಿಷ್ಟ ಪಾತ್ರವಾಗಿದ್ದರೂ, ಅದು ನಾನು ಅತ್ಯಂತ ಉತ್ಕಟ ಭಾವದಿಂದ ನಿರ್ಧರಿಸಿದ ಒಂದು ಪಾತ್ರವೂ ಆಗಿದೆ. ನಾನು ಕಂಡಂತೆ ಎಡ್ವರ್ಡ್ ಕಲೆನ್‌ ಪಾತ್ರದೊಂದಿಗೆ ನಿಕಟತೆಯನ್ನು ಹೊಂದಿದ್ದ ಏಕೈಕ ನಟನೆಂದರೆ ....(ಡ್ರಮ್ ರೋಲ್).... ಹೆನ್ರಿ ಕ್ಯಾವಿಲ್."[೯] ಚಿತ್ರವನ್ನು ಸಮಿಟ್‌ ಎಂಟರ್ಟೈನ್ಮೆಂಟ್‌ ಸಂಸ್ಥೆಯು 2007ರ ಜುಲೈನಲ್ಲಿ ಆಯ್ಕೆ ಮಾಡಿದಾಗ, ಮೆಯೇರ್ ಈ ರೀತಿ ಹೇಳಿದಳು: "ನನ್ನ ಪರಿಪೂರ್ಣ ಎಡ್ವರ್ಡ್‌ನನ್ನು ಕಳೆದುಕೊಳ್ಳುವುದು ನನಗೆ ಅತ್ಯಂತ ನಿರಾಶೆಯ ಸಂಗತಿ",[೧೦] ಅಷ್ಟು ಹೊತ್ತಿಗಾಗಲೇ ಕ್ಯಾವಿಲ್‌ಗೆ 24 ವರ್ಷ ವಯಸ್ಸಾಗಿತ್ತು, ಮತ್ತು ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವಲ್ಲಿ ಪಾತ್ರಕ್ಕಿಂತ ಸಾಕಷ್ಟು ವಯಸ್ಸಾದವನಂತೆ ಕಾಣಿಸುತ್ತಿದ್ದು, ನೈಜತೆ ಮಾಯವಾಗಿತ್ತು." ತನ್ನ ಅಂತರ್ಜಾಲದಲ್ಲಿ ಮೆಯೇರ್ ವರದಿ ಮಾಡಿದಂತೆ, ಅಭಿಮಾನಿಗಳು ಸಲಹೆ ಮಾಡಿರುವ ಅನುಸಾರ ಎಡ್ವರ್ಡ್ ಪಾತ್ರವನ್ನು ನಿರ್ವಹಿಸಬಹುದಾದ ನಾಲ್ಕು ಅತ್ಯಂತ ಜನಪ್ರಿಯ ನಟರುಗಳೆಂದರೆ, ಹೇಡನ್‌ನ್ ಕ್ರಿಸ್ಟನ್ಸೇನ್, ರಾಬರ್ಟ್ ಪ್ಯಾಟಿನ್ಸನ್‌, ಓರ್ಲಾಂಡೋ ಬ್ಲೂಮ್ ಮತ್ತು ಗೆರಾರ್ಡ್ ವೇ.[೯] 2007ರ ಡಿಸೆಂಬರ್ 11ರಂದು, ಹ್ಯಾರಿ ಪಾಟರ್ ಚಿತ್ರಗಳಲ್ಲಿ ಸೆಡ್ರಿಕ್ ಡಿಗೊರಿ ಪಾತ್ರದಲ್ಲಿನ ಅಭಿನಯದ ಮೂಲಕ ಪರಿಚಿತನಾದ ಪ್ಯಾಟಿನ್ಸನ್‌ನನ್ನು, ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆಯೆಂದು ಘೋಷಿಸಲಾಯಿತು.[೧೧] ಈ ಕುರಿತು ಸಮಿಟ್‌ ಎಂಟರ್ಟೈನ್ಮೆಂಟ್‌ನ ನಿರ್ಮಾಣದ ಅಧ್ಯಕ್ಷನಾದ ಎರಿಕ್ ಫೇಗ್ ಹೀಗೆ ಹೇಳಿಕೆ ನೀಡಿದ: "ಒಂದು ಪಾತ್ರವು ಓದುಗರ ಕಲ್ಪನೆಯಲ್ಲಿ ಸ್ಪಷ್ಟವಾಗಿ ಛಾಪುಒತ್ತಿದ ಮೇಲೆ ಅಂತಹ ಪಾತ್ರಕ್ಕೆ ಒಬ್ಬ ಯೋಗ್ಯ ನಟನನ್ನು ಹುಡುಕುವುದು ಯಾವಾಗಲೂ ಒಂದು ಸವಾಲಾಗಿರುತ್ತದೆ. ಆದರೆ ನಾವು ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದೆವು ಮತ್ತು ರಾಬ್ ಪ್ಯಾಟಿನ್ಸನ್‌ ಪಾತ್ರದಲ್ಲಿರುವುದರಿಂದ ಟ್ವಿಲೈಟ್‌ ನಲ್ಲಿನ ಬೆಲ್ಲಾಳಿಗೆ ಒಬ್ಬ ಪರಿಪೂರ್ಣ ಎಡ್ವರ್ಡ್‌ನನ್ನು ಹುಡುಕಿದ್ದೇವೆ ಎಂದು ನಮಗೆ ಭರವಸೆಯಿದೆ."[೧೧] ಮೆಯೇರ್ ನೀಡಿದ ಹೇಳಿಕೆ ಹೀಗಿತ್ತು: "ಎಡ್ವರ್ಡ್ ಪಾತ್ರಕ್ಕೆ ಸಂಬಂಧಿಸಿದಂತೆ ಸಮಿಟ್‌ ಮಾಡಿದ ಆಯ್ಕೆಯಿಂದಾಗಿ ನಾನು ಭಾವಪರವಶಳಾಗಿದ್ದೇನೆ. ಏಕಕಾಲಕ್ಕೆ ಅಪಾಯಕಾರಿಯಾಗಿ ಹಾಗೂ ಸುಂದರವಾಗಿ ಕಾಣಿಸುವ ನಟರು ತುಂಬಾ ಅಪರೂಪ, ಮತ್ತು ನನ್ನ ಕಲ್ಪನೆಯಲ್ಲಿರುವ ಎಡ್ವರ್ಡ್‌ನಂತೆ ಇರುವ ನಟರಂತೂ ಇನ್ನೂ ಅಪರೂಪ. ರಾಬರ್ಟ್ ಪ್ಯಾಟಿನ್ಸನ್‌ ವಿಸ್ಮಯಕರವಾಗಿ ಕಾಣಿಸಿಕೊಳ್ಳಲಿದ್ದಾನೆ."[೧೨] ಪಾತ್ರಹಂಚಿಕೆಯ ಕುರಿತು ಟ್ವಿಲೈಟ್‌ ನ ನಿರ್ದೇಶಕಿ, ಕ್ಯಾಥೆರಿನ್ ಹಾರ್ಡ್ವಿಕ್‌ ಮಾತನಾಡುತ್ತಾ, "ಎಡ್ವರ್ಡ್ ಕುರಿತಾಗಿ ಪ್ರತಿಯೊಬ್ಬರು ಇಂಥದೊಂದು ಆದರ್ಶೀಕರಿಸಲ್ಪಟ್ಟ ದೃಷ್ಟಿಯನ್ನು ಹೊಂದಿದ್ದಾರೆ. [ನಾನು ಯಾರನ್ನು ಆಯ್ಕೆ ಮಾಡುವೆ ಎಂಬುದರ ಬಗ್ಗೆ] ಅವರು ಕ್ರೋಧೋನ್ಮತ್ತರಾಗಿದ್ದರು. ಒಂದು ರೀತಿಯಲ್ಲಿ ಇದು ವಯಸ್ಸಾದ ಹೆಂಗಸರು ಹೇಳುವ, 'ನೀನು ಸರಿಯಾದವರನ್ನೇ ಆಯ್ಕೆ ಮಾಡುವುದು ಒಳಿತು' ಎಂಬ ಮಾತಿನಂತೆ ಇತ್ತು."[೧೩] ಅವಳ ಬಹಿರಂಗಪಡಿಸಿದಂತೆ, ಪ್ಯಾಟಿನ್ಸನ್‌ನ ಒಂದು ಛಾಯಾಚಿತ್ರವನ್ನು ನೋಡಿದಾಗ ಆರಂಭದಲ್ಲಿ ಆಕೆ ಭಾವಪರವಶಳಾಗಲಿಲ್ಲ; ಆದರೆ ಅವನ ಅಭಿನಯ ಪರೀಕ್ಷೆಯವಾಗಲಿ ಎಂದು ಅವಳು ಹೇಳಿದಳು. ಸದರಿ ಸನ್ನಿವೇಶವು ಸಹ-ನಟಿಯಾದ ಕ್ರಿಸ್ಟನ್‌ ಸ್ಟೀವರ್ಟ್‌ ಜೊತೆಯಲ್ಲಿನ ಒಂದು ಪ್ರೇಮದ ದೃಶ್ಯವಾಗಿತ್ತು. ಈ ದೃಶ್ಯದ ಕುರಿತು ಅವಳು ಮಾತನಾಡುತ್ತಾ, "ಅದು ಉದ್ವೇಗಕಾರಿಯಾಗಿತ್ತು. ಕೋಣೆಯು ಕಿರಿದಾಗಿತ್ತು, ಆಕಾಶವು ತೆರೆದುಕೊಂಡಿತ್ತು, ಮತ್ತು ನನ್ನ ಪ್ರಕಾರ, 'ಇದು ಉತ್ತಮ ಫಲಿತಾಂಶವನ್ನು ನೀಡಲಿದೆ' ಎಂದು ನಾನು ಅಂದುಕೊಂಡೆ" ಎಂದು ನುಡಿದಳು.[೧೩][೧೩] ಇದನ್ನು ಒಪ್ಪಿಕೊಂಡು ಪ್ಯಾಟಿನ್ಸನ್‌ ಹೇಳಿದ್ದು ಹೀಗೆ: "ನಾನು ಒಳ ಹೋದಾಗ, ನನಗೆ ಪಾತ್ರವನ್ನು ಹೇಗೆ ಮಾಡಬೇಕೆಂಬ ಕಲ್ಪನೆ ಇರಲಿಲ್ಲ, ಮತ್ತು ಅಭಿನಯ ಪ್ರದರ್ಶನದ ಸಮಯದಲ್ಲಿ ತಿಳಿದು ಬಂದದ್ದು ಒಂದು ಒಳ್ಳೆಯ ವಿಷಯವಾಗಿತ್ತು. ವಾಸ್ತವದಲ್ಲಿ ಇದನ್ನು ನಂತರ ನಾನು ಬಯಸಿದ್ದೆ, ಆದರೆ ಅದೇನೆಂಬುದು ಸಹ ನನಗೆ ಗೊತ್ತಿರಲಿಲ್ಲ. ನಾನು ವಾಸ್ತವವಾಗಿ ಯಾವುದೇ ಪುಸ್ತಕಗಳನ್ನು ಓದಿರಲಿಲ್ಲ. ಹೀಗಾಗಿ ನನ್ನ ಮನಸ್ಸಿನಲ್ಲಿದ್ದುದು ಇಷ್ಟೇ, 'ನನಗೆ ಈ ಕೆಲಸ ಬೇಕು.' ಕ್ರಿಸ್ಟನ್ ಇದ್ದುದರಿಂದ ಮಾತ್ರವೇ ಇದು ಇಷ್ಟು ಸಾಧ್ಯವಾಯಿತು."[೧೪] ಈ ಪಾತ್ರಕ್ಕೆ ತನ್ನನ್ನು ಆರಿಸಿದ್ದನ್ನು ವಿರೋಧಿಸಿದ ಅಭಿಮಾನಿಯೊಬ್ಬನ ಪ್ರತಿಕ್ರಿಯೆಯ ಕುರಿತು, 2008ರ ಆರಂಭದಲ್ಲಿ ಎಂಟರ್ಟೈನ್ಮೆಂಟ್ ವೀಕ್ಲಿ ಗೆ ವಿಷಯವನ್ನು ಹೊರಗೆಡಹುತ್ತಾ, "ದಯವಿಟ್ಟು, ಬೇರೆ ಯಾರನ್ನಾದರೂ' ಎಂದು ಹೇಳುವ ಅಂಕಿತಗಳನ್ನು ನೋಡಿದ ನಂತರ ನಾನು [ಅಭಿಮಾನಿ ಜಾಲಗಳು ಮತ್ತು ಬ್ಲಾಗುಗಳನ್ನು] ಓದುವುದನ್ನು ನಿಲ್ಲಿಸಿದ್ದೇನೆ" ಎಂದು ತಿಳಿಸಿದ.[೧೩][೧೩] ಈವ್ನಿಂಗ್‌ ಸ್ಟ್ಯಾಂಡರ್ಡ್‌ ಪತ್ರಿಕೆಯೊಂದಿಗೆ ಅವನು ಮಾತನಾಡುತ್ತಾ, "ಪುಸ್ತಕಗಳು ಒಂದು ಅಗಾಧವಾದ ಅಭಿಮಾನಿ ಬಳಗವನ್ನು ಹೊಂದಿದೆ. ನನಗೆ ಕೋಪೋದ್ರಿಕ್ತ ಅಭಿಮಾನಿಗಳಿಂದ ಈಗಾಗಲೇ ಚೀಲಗಟ್ಟಲೇ ಪತ್ರಗಳು ಬಂದಿವೆ. ನಾನು ಡಿಗೊರಿಯಾಗಿರುವುದರಿಂದ, ಎಡ್ವರ್ಡ್‌ ಪಾತ್ರವನ್ನು ನಾನು ನಿರ್ವಹಿಸಲು ಆಗದಿರಬಹುದು ಎಂಬುದು ಆ ಪತ್ರಗಳಲ್ಲಿನ ಅಭಿಪ್ರಾಯ. ಅವರು ಹೇಳುತ್ತಿರುವುದು ತಪ್ಪೆಂದು ನಾನು ಸಾಬೀತುಪಡಿಸಬಲ್ಲೆ ಎಂಬುದು ನನ್ನ ನಂಬಿಕೆ."[೧೫]

ಅಭಿವೃದ್ಧಿ[ಬದಲಾಯಿಸಿ]

2008ರ ಏಪ್ರಿಲ್‌ನಲ್ಲಿ ಚಿತ್ರದ ಸೆಟ್‌ಗೆ ಭೇಟಿದ ನಂತರದಲ್ಲಿ,ಮೆಯೇರ್ ಅಭಿಪ್ರಾಯ ಪಟ್ಟ ಪ್ರಕಾರ, ಪ್ಯಾಟಿನ್ಸನ್‌ ಮತ್ತು ಸ್ಟೀವರ್ಟ್ ಒಂದು ಒಳ್ಳೆಯ ಸಂಯೋಜನೆಯನ್ನು ಬೆಳೆಸಿಕೊಂಡಿದ್ದು, ಅದು "ಮಿತಿಮೀರಿದ ಸಾರ್ವಜನಿಕ ಚರ್ಚೆಗಳಿಗೆ ಎಡೆಮಾಡಿಕೊಡಬಹುದು" ಎಂಬುವಷ್ಟರ ಮಟ್ಟಿಗಿತ್ತು.[೧೬] ಮಿಡ್‌ನೈಟ್‌ ಸನ್‌ ಕೃತಿಯ ಆರಂಭದ ಒಂದು ಪ್ರತಿಯನ್ನು ಮೆಯೇರ್‌ ತಮಗೆ ಕೊಡುಗೆಯಾಗಿ ನೀಡಿದ್ದನ್ನು ಪ್ಯಾಟಿನ್ಸನ್‌ ಬಹಿರಂಗಪಡಿಸಿದ್ದು, ಇದು ಎಡ್ವರ್ಡ್‌ನ ದೃಷ್ಟಿಕೋನದಿಂದ ನಿರೂಪಿಸಲ್ಪಟ್ಟ ಟ್ವಿಲೈಟ್‌ ನ ಘಟನೆಗಳ ಒಂದು ಮರುಕಥನವಾಗಿದೆ.[೧೭] ಆತ ವಿವರಿಸಿದ್ದು ಹೀಗಿದೆ: "ನಾನು ಈ ಕೆಲಸವನ್ನು ಒಪ್ಪಿಕೊಳ್ಳಲು ಇದೇ ಕಾರಣ. ಏಕೆಂದರೆ ವಾಸ್ತವವಾಗಿ ಆ ರೀತಿಯ ವ್ಯಕ್ತಿಯು ಅಸ್ತಿತ್ವದಲ್ಲಿಲ್ಲವಾದ್ದರಿಂದ, ನಿಮಗೇನು ಬೇಕೋ ಅದನ್ನು ನೀವು ಸೃಷ್ಟಿಸಬಹುದಾಗಿದೆ. ನಂತರ, ಎಡ್ವರ್ಡ್‌ನ ದೃಷ್ಟಿಕೋನದಿಂದ ರೂಪುಗೊಂಡಿರುವ ಇನ್ನೊಂದು ಪುಸ್ತಕ ಇರುವ ಬಗ್ಗೆ ನನಗೆ ಅರಿವಾದಾಗ, [ನಾನು ಅದನ್ನು ಓದಿದೆ ಮತ್ತು ಅದು ತಯಾರಾಯಿತು] ನಮಲ್ಲಿ ಸಮಾನ ದೃಷ್ಟಿಕೋನಗಳು ಉಂಟಾದವು!"[೧೭] ಪಾತ್ರದ ತಯಾರಿಯಲ್ಲಿ, ಎಡ್ವರ್ಡ್ ಎಂಬ ಹೆಸರಿನಿಂದ ಪ್ಯಾಟಿನ್ಸನ್‌ ದಿನಚರಿಯನ್ನು ದಾಖಲಿಸಿದ. ಜೊತೆಗೆ ತಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ದೂರವಿದ್ದ. ಆತ ಈ ಕುರಿತು ವಿವರಿಸುತ್ತಾ, "ತನ್ನ ಏಕಾಂಗಿತನವನ್ನು ಅನುಭವಕ್ಕೆ ತಂದುಕೊಳ್ಳುವುದು ತನ್ನ ಬಯಕೆಯಾಗಿತ್ತು.[೧೩] ಶಾರೀರಿಕವಾಗಿ ನಾನು ಒಂದು ಸಿಕ್ಸ್‌-ಪ್ಯಾಕ್‌ ಸ್ವರೂಪವನ್ನು ಹೊಂದುವುದು ಅವಶ್ಯವಾಗಿತ್ತು. ಆದರೆ ಇದು ವಾಸ್ತವವಾಗಿ ಕಾರ್ಯರೂಪಕ್ಕೆ ಬರಲಿಲ್ಲ" ಎಂದು ಹೇಳಿದ.[೧೩] ಓರ್ವ ಪ್ರತಿಭಾಶಾಲಿ ಪಿಯಾನೋವಾದಕನಾದ ಎಡ್ವರ್ಡ್‌ ಬೆಲ್ಲಾಗಾಗಿ ಒಂದು ಲಾಲಿಹಾಡನ್ನು ಸಂಯೋಜಿಸುವುದುನ್ನು ಕಥೆಯ ಒಂದು ದೃಶ್ಯದಲ್ಲಿ ಕಾಣಬಹುದು. ಈ ದೃಶ್ಯದ ಪರಿಗಣನೆಗಾಗಿ ಒಂದು ಸಂಯೋಜನೆಯನ್ನು ಸಲ್ಲಿಸಲು ಪ್ಯಾಟಿನ್ಸನ್‌ಗೆ ಅವಕಾಶ ನೀಡಲಾಯಿತು. ಈ ಕುರಿತು ಹಾರ್ಡ್ವಿಕ್‌ ಹೇಳಿದ್ದು ಹೀಗಿತ್ತು: "ನಾನು ಅವರಿಗೆ ಒಂದು ಹಾಡನ್ನು ಬರೆಯಬೇಕೆಂದು ಹೇಳಿ, ಇದು ಕೈಗೂಡಿದರೆ ಮುಂದಕ್ಕೆ ನೋಡೋಣ ಎಂದು ಅಂದುಕೊಂಡಿದ್ದೆ. ಏಕೆಂದರೆ ಅದು ರಾಬ್‌ನ ಹಾಡಾಗಿದ್ದರೆ ನಿಜಕ್ಕೂ ನಿರಾಳವಾಗಿರುತ್ತದೆ. ಅವನೊಬ್ಬ ಸೊಗಸಾದ ಸಂಗೀತಗಾರ, ಒಬ್ಬ ಸೃಜನಶೀಲ ವ್ಯಕ್ತಿ, ಎಡ್ವರ್ಡ್‌ನನ್ನು ತುಂಬಾ ಹೋಲುತ್ತಾನೆ. ಅತ್ಯಂತ ಕುತೂಹಲಕಾರಿ ಕೃತಿಯನ್ನು ಆತ ಸಂಪೂರ್ಣವಾಗಿ ಓದುತ್ತಾನೆ, ಜೊತೆಗೆ ಅತ್ಯಂತ ಕುತೂಹಲಕಾರಿ ಚಲನಚಿತ್ರಗಳನ್ನು ವೀಕ್ಷಿಸುತ್ತಾನೆ. ಆತನೊಬ್ಬ ಅತೀವವಾದ ಸ್ವಪರೀಕ್ಷಕನಾಗಿದ್ದು, ತನ್ನ ಅಸ್ತಿತ್ವಕ್ಕೆ ಸಂಬಂಧಿಸಿರುವುದರ ಕುರಿತು ಆಳವಾಗಿ ಒಳಹೊಕ್ಕು ಯೋಚಿಸುತ್ತಾನೆ." ಈ ಮಾತನ್ನು ಮೆಯೇರ್ ಅನುಮೋದಿಸುತ್ತಾ, "ರಾಬರ್ಟ್ ಒಂದು ಲಾಲಿ ಹಾಡನ್ನು ಬರೆಯಬಹುದಾದರೆ, ಅದು ಖಂಡಿತವಾಗಿ ಚಿತ್ರಕ್ಕೆ ಒಂದಷ್ಟು ಚಮತ್ಕಾರಗಳನ್ನು ಸೇರಿಸುತ್ತದೆ, ಅಲ್ಲವೇ?"[೧೮] ಪ್ಯಾಟಿನ್ಸನ್‌ನ ಎರಡು ಸಂಯೋಜನೆಗಳು ಅಂತಿಮ ಚಿತ್ರದಲ್ಲಿ ಪ್ರದರ್ಶಿತವಾದರೆ,ಅಂತಿಮವಾಗಿ ಆಯ್ಕೆಯಾದ ಲಾಲಿ ಹಾಡಿನ ತುಣುಕನ್ನು ಕಾರ್ಟರ್ ಬರ್ವೆಲ್‌ನಿಂದ ಸಂಯೋಜಿಸಲ್ಪಟ್ಟಿತು.[೧೯] ಪ್ಯಾಟಿನ್ಸನ್‌ನ ಛಾಯಾಚಿತ್ರವನ್ನು ಮೊದಲಬಾರಿಗೆ ನೋಡಿದಾಗ ತನ್ನಲ್ಲಿ ಉಂಟಾದ ಭಾವರಹಿತ ಪ್ರತಿಕ್ರಿಯೆಯನ್ನು ಮಾರ್ಪಾಡು ಮಾಡಿಕೊಂಡು, ಹಾರ್ಡ್ವಿಕ್‌ 2008ರ ಏಪ್ರಿಲ್‌ನಲ್ಲಿ ಉತ್ಸಾಹದಿಂದ ಹೇಳಿದ್ದು ಹೀಗೆ: "ಅವನ ಬಗೆಗಿನ ಒಂದು ಮಹತ್ವದ ಸಂಗತಿಯೆಂದರೆ [....] ಆತ ನಿಜವಾಗಿಯೂ ಪಾರಮಾರ್ಥಿಕ ಲಕ್ಷಣಗಳನ್ನು ಹೊಂದಿದವನಂತೆ ಕಾಣುತ್ತಾನೆ. ಅವನು ಸಾಮಾನ್ಯ ಹುಡುಗನಂತೆ ಕಾಣುವುದಿಲ್ಲ ಎಂಬುದು ನನ್ನ ಮಾತಿನ ಅರ್ಥ. ಮತ್ತು ನೀವು ಪುಸ್ತಕವನ್ನು ಓದಿದಾಗ, 'ಈ ವಿವರಣೆಗೆ ತಕ್ಕಂತೆ ಅಭಿನಯಿಸಲು ಅಥವಾ ಹೊಂದಿಕೊಳ್ಳಲು ಈ ಭೂಮಿಯ ಮೇಲಿರುವ ಯಾರಿಂದ ಸಾಧ್ಯ?' ಎಂದು ನೀವು ಆಲೋಚಿಸುತ್ತೀರಿ. ಆದರೆ ನನಗನಿಸಿದಂತೆ ಆತ ಇದಕ್ಕೆ ಸೂಕ್ತನಾಗಿದ್ದಾನೆ. ಪುಸ್ತಕದಲ್ಲಿ ವರ್ಣಿಸಿರುವ ರೀತಿಯಲ್ಲಿಯೇ ಅವನು ತಿದ್ದಿತೀಡಿದ ಮಾಟವಾದ ಮುಖವನ್ನು ಹೊಂದಿದ್ದಾನೆ. ಕಡೆದಿಟ್ಟಂತೆ ಇರುವ ಕಪೋಲಗಳು ಮತ್ತು ಮಾಟವಾದ ಕೆನ್ನೆಯೆಲುಬುಗಳು ಹಾಗೂ ಇತರ ಪ್ರತಿಯೊಂದು ವಿವರವನ್ನೂ ನೀವು ಓದಿದಾಗ, ಒಂದು ರೀತಿಯಲ್ಲಿ, 'ವೌ. ಅವಳು ಇದನ್ನು ರಾಬ್‌ಗೋಸ್ಕರವಾಗಿಯೇ ಬರೆದಿದ್ದಾಳೆಯೇ?" ಎಂದು ಭಾವಿಸುವಂತೆ ಮಾಡುತ್ತದೆ.[೨೦] ಪಾತ್ರವನ್ನು ತಾನು ಗ್ರಹಿಸಿದ್ದು ಹೇಗೆ ಎಂಬುದರ ಕುರಿತಾದ ಒಂದು ವಿವರವಾದ ಸಂದರ್ಶನದಲ್ಲಿ ಮಾತನಾಡುತ್ತಾ ಎಡ್ವರ್ಡ್‌ ಪಾತ್ರವನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ರೆಬೆಲ್‌ ವಿಥೌಟ್‌ ಎ ಕಾಸ್‌ ಚಿತ್ರದ ಭಾವಗಳನ್ನು ತಾನು ಅಳವಡಿಸಿಕೊಂಡಿರುವುದನ್ನು ಆತ ಒಪ್ಪಿಕೊಂಡ. ಈ ಕುರಿತಾದ ಅವನ ನಿರ್ಣಯವು ಹೀಗಿತ್ತು: "ಈ ಕಥೆಯಲ್ಲಿ ನಾನು ಕಂಡುಕೊಂಡ ಕುತೂಹಲಕರ ಸಂಗತಿಯೆಂದರೆ, ಆತ ನಿಸ್ಸಂದೇಹವಾಗಿ ಈ ಕಥೆಯ ನಾಯಕನಾಗಿದ್ದಾನೆ, ಆದರೆ ತಾನು ನಾಯಕ ಎಂಬುದನ್ನು ಆತ ಉಗ್ರವಾಗಿ ಅಲ್ಲಗಳೆಯುತ್ತಾನೆ. ಪ್ರತಿ ಹಂತದಲ್ಲೂ, ಅವನು ವಿರೋಚಿತ ಸಾಹಸಗಳನ್ನು ಮಾಡಿದ ಸಂದರ್ಭಗಳಲ್ಲೂ, ತಾನು [...] ಸುತ್ತುಮುತ್ತಲಿನ ಜೀವಿಗಳ ಪೈಕಿ ಅತ್ಯಂತ ಅಸಂಬದ್ಧವಾಗಿ ಸ್ವಾರ್ಥಿಯಾಗಿರುವ ಕೆಟ್ಟ ಜೀವಿ ಎಂದು ಭಾವಿಸುತ್ತಾನೆ. [..] ಬೆಲ್ಲಾ ತನ್ನೆಡೆಗೆ ತೋರಿಸುವ ಪ್ರೇಮವನ್ನು ಸ್ವೀಕರಿಸಲು ಆತ ನಿರಾಕರಿಸುತ್ತಾನಾದರೂ, ಅದೇ ವೇಳೆಗೆ ಅದಕ್ಕಾಗಿ ಹಾತೊರೆಯುತ್ತಾನೆ ಎಂಬುದೇ ಈ ಕಥಾಹಂದರ ಸಾರಾಂಶವಾಗಿದೆ."[೨೧] 2008ರ ಜುಲೈನಲ್ಲಿ ನಡೆದ ಕಾಮಿಕ್ ಕಾನ್‌ನಲ್ಲಿ ಆತ ಕಾಣಿಸಿಕೊಂಡ ಸಮಯದಲ್ಲಿ ಚಿತ್ರವು ನಿರ್ಮಾಣದ-ನಂತರದ ಹಂತದಲ್ಲಿತ್ತು. ಪ್ಯಾಟಿನ್ಸನ್‌ ಊಹಿಸಿದಂತೆ ಟ್ವಿಲೈಟ್‌‌ ನ ಅನುಭವದ ವಿವರಣೆಯು ಹೀಗಿತ್ತು: "ವಿಲಕ್ಷಣವಾಗಿದೆ. ನಿಮಗೆ ಅದು ಅವಶ್ಯವಾಗಿ ಪುಸ್ತಕದಲ್ಲಿರುವಂತೆ ತೋರುತ್ತದೆ. ಗೀಳಿಗೆ ಸಂಬಂಧಿಸಿದ, ಗೀಳು ಹಿಡಿದಂತೆ ನಿಷ್ಟಾವಂತರಾಗಿರುವ ಹಲವು ಅಭಿಮಾನಿಗಳನ್ನು ಪುಸ್ತಕವು ಹೊಂದಿದೆ. ಜನರು ನಿಮ್ನನ್ನು ಓರ್ವ ನಟನಾಗಿ ನೋಡುವ ಬದಲಾಗಿ ನೇರವಾಗಿ ನಿಮ್ಮನ್ನು ಪಾತ್ರದೊಂದಿಗೆ ತೀರಾ ಹತ್ತಿದರದಲ್ಲಿ ನಿಮ್ಮನ್ನು ಕಲ್ಪಿಸಿಕೊಂಡು ನೋಡುವುದು ಒಂದು ರೀತಿಯಲ್ಲಿ ವಿಚಿತ್ರವೆನಿಸುತ್ತದೆ."[೨೨] ಟ್ವಿಲೈಟ್‌ ನ ಸಂಭವನೀಯ ಉತ್ತರಭಾಗಗಳಾದ ನ್ಯೂಮೂನ್‌ ಹಾಗೂ ಎಕ್ಲಿಪ್ಸ್‌ ನಲ್ಲಿ ಎಡ್ವರ್ಡ್‌ ಪಾತ್ರವನ್ನು ವಹಿಸಲು ಪ್ಯಾಟಿನ್ಸನ್‌ ಒಪ್ಪಂದಕ್ಕೆ ಸಹಿಹಾಕಿದ್ದಾನೆ.[೨೩] ಸಂದರ್ಶನವೊಂದರಲ್ಲಿ, ಪ್ಯಾಟಿನ್ಸನ್‌ ಒಪ್ಪಿಕೊಂಡ ಪ್ರಕಾರ, ಅಮೆರಿಕನ್ ಶೈಲಿಯ ಉಚ್ಚಾರಣೆಯನ್ನು ಹೇಗೆ ಮಾಡುವುದೆಂಬುದರ ಕುರಿತು ಅವನಾವ ಔಪಚಾರಿಕ ತರಬೇತಿಯನ್ನೂ ಪಡೆದಿರಲಿಲ್ಲ;"...ನಾನು ಕೇವಲ ಅಮೆರಿಕನ್ ಚಲನಚಿತ್ರಗಳನ್ನು ನೋಡುತ್ತಾ ಬೆಳೆದೆ... ಹೇಗೆ ನಟಿಸಬೇಕೆಂಬುದನ್ನಾಗಲೀ, ಅಥವಾ ಬೇರಾವುದೇ ವಿಷಯಗಳನ್ನಾಗಲೀ ನಾನು ಕಲಿತದ್ದು ಅಮೆರಿಕಾದ ಚಲನಚಿತ್ರಗಳಿಂದ."[೨೪]

ಗೌರವ ಸ್ವೀಕಾರ[ಬದಲಾಯಿಸಿ]

MTV ಮೂವೀಸ್‌ನ ಲಾರಿ ಕಾರ್ರೋಲ್, ಎಡ್ವರ್ಡ್ ಮತ್ತು ಬೆಲ್ಲಾರನ್ನು "ಒಂದು ಇಡೀ ಜನಾಂಗಕ್ಕೆ ಪ್ರತಿಮಾರೂಪದ ಒಂದು ಪ್ರೇಮ ಕಥನ" ಎಂದು ಪರಿಗಣಿಸಿದ್ದರೆ[೨೫], ಟ್ವಿಲೈಟ್ ನಲ್ಲಿನ ಎಡ್ವರ್ಡ್‌ನ ಪಾತ್ರ ನಿರೂಪಣೆಯು ವಿಪರೀತವಾಗಿ ಬೈರನ್ನನ ಸಾಹಿತ್ಯಿಕ ಲಕ್ಷಣಗಳನ್ನು ಹೊಂದಿದೆ ಎಂದು ಕಿರ್ಕಸ್ ಉಲ್ಲೇಖಿಸಿದೆ.[೨೬] ಹಾಲಿವುಡ್‌ನ ಅತ್ಯಂತ 10 ಶಕ್ತಿಯುತ ರಕ್ತಪಿಶಾಚಿಗಳಿಗೆ ಸಂಬಂಧಿಸಿದ ಫೋರ್ಬ್ಸ್ ಪಟ್ಟಿಯಲ್ಲಿ ಎಡ್ವರ್ಡ್‌ ಕಲೆನ್‌ಗೆ #5ರ ಶ್ರೇಯಾಂಕವೂ ದಕ್ಕಿದೆ.[೨೭]ಟ್ವಿಲೈಟ್ ಸರಣಿಗಳ ಬಿಡುಗಡೆಯಾದಂದಿನಿಂದ, ಎಡ್ವರ್ಡ್ ಪಾತ್ರವು ಒಂದುರೀತಿಯ ಅನುಯಾಯಿಗಳ ಪಂಥವನ್ನು ಬೆಳೆಸಿದೆ. ಇದಕ್ಕೆ ವಿಶ್ವಾದ್ಯಂತದ ಲಕ್ಷಾಂತರ ಜನ ತಮ್ಮ ಅಚಲಶ್ರದ್ಧೆಯನ್ನು ವ್ಯಕ್ತಪಡಿಸಿದ್ದು, ಅವರ ಪೈಕಿ ಸ್ತ್ರೀ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ.[೨೮] ಆದಾಗ್ಯೂ, ಪಾತ್ರವನ್ನು ಓದುಗರು ಅಗಾಧವಾಗಿ ಮೆಚ್ಚಿ-ಸ್ವೀಕರಿಸಿರುವ ಮತ್ತು ಇದನ್ನು "ಹದಿಹರೆಯದ ಹುಡುಗಿಯರ ಗೀಳು" ಎಂದು ಕರೆಯಲಾಗಿರುವ ಸಂದರ್ಭದಲ್ಲೇ,[೨೯] ಆತನ ಪಾತ್ರದ ಕುರಿತಾಗಿ ಹಲವಾರು ವಿಮರ್ಶೆಗಳು, ವಿಶೇಷವಾಗಿ ಲಿಂಗಬೇಧಭಾವದ ಬಗ್ಗೆ ಇರುವ ಆಪಾದನೆಗಳು ಹೊರಹೊಮ್ಮಿವು. ನ್ಯಾಷನಲ್ ರಿವ್ಯೂ ಆನ್‌‌ಲೈನ್‌ ನ ಗಿನಾ R. ಡಲ್ಫೊನ್ಜೊ ವಿವರಿಸಿರುವ ಪ್ರಕಾರ, ಎಡ್ವರ್ಡ್ ಪಾತ್ರವು ಮಾನಸಿಕವಾಗಿ ಅಸ್ಥಿರವಾಗಿದೆ ಮತ್ತು "ಪರಭಕ್ಷಕ"ವಾಗಿದ್ದು, ಇಲ್ಲಿ ಬಳಸಲಾಗಿರುವ ಕೆಲವೊಂದು ವರ್ತನೆಯ ಉದಾಹರಣೆಗಳು ಇದಕ್ಕೆ ಪುಷ್ಟಿ ನೀಡುತ್ತವೆ; ಉದಾಹರಣೆಗೆ ಬೆಲ್ಲಾ ನಿದ್ರೆಯಲ್ಲಿದ್ದಾಗ ಅವಳ ಮೇಲೆ ಒಂದುಕಣ್ಣಿಟ್ಟಿರುವುದು, ಅವಳ ಮಾತುಕತೆಗಳನ್ನು ಕದ್ದಾಲಿಸುವುದು, ಅವಳು ಆರಿಸಿಕೊಂಡ ಸ್ನೇಹಿತರಿಗೆ ಅಪ್ಪಣೆ ಮಾಡುವುದು, ಜೊತೆಗೆ ಅವಳು ತನ್ನ ತಂದೆಗೆ ಮೋಸ ಮಾಡುವುದನ್ನು ಪ್ರೋತ್ಸಾಹಿಸುವುದು ಇವೇ ಮೊದಲಾದ ಕಾರಣಗಳಿಂದಾಗಿ ಅವನನ್ನು "ಆಧುನಿಕ ಕಾಲ್ಪನಿಕ ಕಥೆಯಲ್ಲಿನ ಒಂದು ಆದೇಶವನ್ನು ನಿಗ್ರಹಿಸುವ ಅತ್ಯುತ್ತಮ ಅಭ್ಯರ್ಥಿ"ಯಾಗಿ ಅವಳು ನಂಬುತ್ತಾಳೆ."[೩೦] ಪ್ಯಾಟಿನ್ಸನ್‌ ಕೂಡ ಪಾತ್ರವನ್ನು ವಿಮರ್ಶಿಸುತ್ತಾ ಹೀಗೆ ಹೇಳುತ್ತಾನೆ, "ಒಂದು ವೇಳೆ ಎಡ್ವರ್ಡ್ ಎಂಬಾತ ಒಂದು ಕಾಲ್ಪನಿಕ ಪಾತ್ರವಾಗಿರದಿದ್ದರೆ ಮತ್ತು ಅವನನ್ನು ನೀವು ವಾಸ್ತವದಲ್ಲಿ ಸಂಧಿಸಿದ್ದರೆ, ಪ್ರಾಯಶಃ ಅವನೊಬ್ಬ ಕೊಡಲಿ ಹಿಡಿದ ಕೊಲೆಗಾರನ ಅಥವಾ ಏನೋ ಒಂದು ಆಗಿರುತ್ತಿದ್ದ ಹುಡುಗರ ಪೈಕಿ ಒಬ್ಬನಾಗಿರುತ್ತಿದ್ದ."[೩೧]

ಆಕರಗಳು[ಬದಲಾಯಿಸಿ]

  1. Purdon, Fiona (19 July 2008). "Stephenie Meyer's chaste vampires lure young readers". The Courier-Mail. Archived from the original on 2008-07-23. Retrieved 2008-07-20.
  2. Meyer, Stephenie. "1". Midnight Sun (PDF). Twilight series. Archived from the original (PDF) on 2009-10-26. Retrieved 2008-09-02.
  3. Meyer, Stephenie (October 5, 2005). Twilight. Twilight. Park Avenue, New York: Little, Brown. p. 498. ISBN 978-0-316-01584-4.
  4. Meyer, Stephenie (2006). New Moon. Twilight series. Park Avenue, New York: Little, Brown. p. 563. ISBN 978-0-316-16019-3. {{cite book}}: Cite has empty unknown parameter: |month= (help)
  5. Meyer, Stephenie (2007). Eclipse. Twilight series. Park Avenue, New York: Little, Brown. p. 629. ISBN 978-0-316-16020-9. {{cite book}}: Cite has empty unknown parameter: |month= (help)
  6. Meyer, Stephenie (2008). Breaking Dawn. Twilight series. Park Avenue, New York: Little, Brown. p. 756. ISBN 978-0-316-06792-8. {{cite book}}: Cite has empty unknown parameter: |month= (help)
  7. Twilight Lexicon | Personal Correspondence #10
  8. ೮.೦ ೮.೧ Twilight Lexicon | Personal Correspondence #1
  9. ೯.೦ ೯.೧ Stephenie Meyer. "Twilight the Movie". Stephenie Meyer.com. Retrieved 2008-09-02.
  10. Stephenie Meyer (7 July 2007). "Twilight the Movie ***July 7, 2007 Update***". Stephenie Meyer.com. Retrieved 2008-09-02.
  11. ೧೧.೦ ೧೧.೧ "Actor Robert Pattinson Joins the Cast of Twilight For Summit Entertainment". Summit Entertainment.com. 11 December 2007. Retrieved 2008-09-02.
  12. Stephenie Meyer (11 December 2007). "Actor Robert Pattinson joins cast of Twilight for Summit Entertainment". Stephenie Meyer.com. Retrieved 2008-09-02.
  13. ೧೩.೦ ೧೩.೧ ೧೩.೨ ೧೩.೩ ೧೩.೪ ೧೩.೫ ೧೩.೬ Nicole Sperling (10 July 2008). "'Twilight': Inside the First Stephenie Meyer Movie". Entertainment Weekly. Archived from the original on 2014-10-24. Retrieved 2008-09-02. {{cite web}}: Italic or bold markup not allowed in: |publisher= (help)
  14. "Vampires Get Romantic in 'Twilight'". MSN.com. 22 April 2008. Archived from the original on 2008-12-17. Retrieved 2008-09-02.
  15. Emily Bearn (25 February 2008). "A Surreal Career". Archived from the original (Reprint) on 2008-09-06. Retrieved 2008-09-02.
  16. Stephenie Meyer (16 April 2008). "Twilight the Movie". Stephenie Meyer.com. Retrieved 2008-09-02.
  17. ೧೭.೦ ೧೭.೧ Larry Carroll (15 April 2008). "'Twilight' Set Visit Confirms Edward And Bella's Chemistry, Offers A 'Midnight Sun' Preview". MTV.com. Retrieved 2008-09-02.
  18. Larry Carroll (22 April 2008). "Robert Pattinson Composing 'Bella's Lullaby' For 'Twilight' Movie". MTV.com. Retrieved 2008-09-02.
  19. Larry Carroll (29 August 2009). "'Twilight' reshoots: Why is Catherine Hardwicke filming again?". Entertainment Weekly. Archived from the original on 2008-09-02. Retrieved 2008-09-02. {{cite news}}: Italic or bold markup not allowed in: |publisher= (help)
  20. Cindy White (25 April 2008). "Exclusive Set Visit: Twilight". IGN.com. Archived from the original on 2008-07-27. Retrieved 2008-09-02.
  21. Jared Pacheco (28 April 2008). "INT: Robert Pattinson". Arrow in the Head. Archived from the original on 2008-12-08. Retrieved 2008-09-02.
  22. Fred Tope (26 August 2008). "Robert Pattinson on Twilight". CanMag. Archived from the original on 2010-02-12. Retrieved 2008-09-02.
  23. Larry Carroll (13 May 2008). "Exclusive: 'Twilight' Filmmakers Hope To Shoot Sequels Simultaneously". MTV.com. Retrieved 2008-09-02.
  24. none (none). "Robert Pattinson on his American Accent". Youtube.com. Retrieved 2008-12-16. {{cite web}}: Check date values in: |date= (help)
  25. Larry Carroll (22 April 2008). "'Twilight' Stars Robert Pattinson, Kristen Stewart Turn Up The Heat To Prepare For Love Story". MTV.com. Retrieved 2008-09-02.
  26. "Kirkus Review at B&N.com". B&N.com. Archived from the original on 2009-01-21. Retrieved 2009-01-21.
  27. Lauren Streib. "Hollywood's 10 Most Powerful Vampires". Forbes. Retrieved 2009-08-16.
  28. Steven D. Greydanus. "Twilight Appeal: The cult of Edward Cullen and vampire love in Stephenie Meyer's novels and the new film". Decent Films Guide. Retrieved 2009-01-21.
  29. Martha Brockenbrough. "Does 'Twilight' Suck the Brains Out of Teens?". MSN Movies. Archived from the original on 2012-03-26. Retrieved 2009-01-21.
  30. Gina R. Dalfonzo (2008-08-22). "In Love with Death". National Review Online. Archived from the original on 2012-03-26. Retrieved 2009-01-21.
  31. "ರಾಬರ್ಟ್ ಪ್ಯಾಟಿನ್ಸನ್‌ ಡಸ್ ನಾಟ್‌ ಗೆಟ್ ವೈ ವಿ ಲವ್ ಎಡ್ವರ್ಡ್ ಕಲೆನ್‌". Archived from the original on 2009-09-04. Retrieved 2010-03-09.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Portal