ನಿರ್ಜಲೀಕರಣ
Dehydration | |
---|---|
Classification and external resources | |
ICD-10 | E86 |
ICD-9 | 276.5 |
ನಿರ್ಜಲೀಕರಣ (ನೀರಿನ ಕೊರತೆ ) ಎಂಬುದು ದೇಹದಲ್ಲಿನ ದ್ರವಾಂಶದ ಕೊರತೆ. ಅಕ್ಷರಶಃ ಇದರ ಅರ್ಥ ಒಂದು ವಸ್ತುವಿನಿಂದ ನೀರಿನ ಅಂಶ(ಪ್ರಾಚೀನ ಗ್ರೀಕ್:ὕδωρ) ವನ್ನು ಹೊರತೆಗೆಯುವುದು, ಆದಾಗ್ಯೂ ಶರೀರಶಾಸ್ತ್ರದ ಪರಿಭಾಷೆಯ ಪ್ರಕಾರ, ಇದು ಜೀವಿಯೊಂದರಲ್ಲಿರುವ ದ್ರವಾಂಶದ ಕೊರತೆಯನ್ನು ಸೂಚಿಸುತ್ತದೆ.
ನಿರ್ಜಲೀಕರಣದಲ್ಲಿ ಮೂರು ಪ್ರಮುಖ ವಿಧಗಳಿವೆ: ಹೈಪೋಟೋನಿಕ್/ಅವ ಕರ್ಷಣೀಯ (ಪ್ರಮುಖವಾಗಿ ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್‌ಗಳ ಕೊರತೆ, ನಿರ್ದಿಷ್ಟವಾಗಿ ಸೋಡಿಯಂ), ಹೈಪರ್‌ಟೋನಿಕ್/ಅತಿ ಕರ್ಷಣೀಯ (ಪ್ರಮುಖವಾಗಿ ಜಲ/ನೀರಿನ ಕೊರತೆ), ಹಾಗೂ ಐಸೋಟೋನಿಕ್/ಸಾಮಾನ್ಯ ಕರ್ಷಣೀಯ (ಜಲ/ನೀರು ಹಾಗೂ ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್‌ಗಳ ಸಮಾನ ಕೊರತೆ).[೧] ಮಾನವರಲ್ಲಿ, ಹೆಚ್ಚು ಸಾಧಾರಣವಾಗಿರುವ ನಿರ್ಜಲೀಕರಣದ ವಿಧವೆಂದರೆ ಐಸೋಟೋನಿಕ್/ಸಾಮಾನ್ಯ ಕರ್ಷಣೀಯ (ಐಸೋನಾಟ್ರೆಮಿಕ್ ) ನಿರ್ಜಲೀಕರಣವಾಗಿದೆ ಇದು ಕಾರ್ಯತಃ ಹೈಪೋವಾಲೆಮಿಯಾಗೆ ಸಮಾನವಾಗಿರುತ್ತದಾದರೂ, ಐಸೋಟೋನಿಕ್/ಸಾಮಾನ್ಯ ಕರ್ಷಣೀಯದಿಂದ ಹೈಪೋಟೋನಿಕ್/ಅವ ಕರ್ಷಣೀಯ ಅಥವಾ ಹೈಪರ್‌ಟೋನಿಕ್/ಅತಿ ಕರ್ಷಣೀಯ ನಿರ್ಜಲೀಕರಣಗಳನ್ನು ಪ್ರತ್ಯೇಕಿಸುವುದು ನಿರ್ಜಲೀಕೃತಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪ್ರಮುಖ ಅಗತ್ಯವಾಗಿದೆ. ಶರೀರಶಾಸ್ತ್ರದ ಪ್ರಕಾರ, ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕಾಗಿರುವ ವಿಚಾರವೇನೆಂದರೆ ನಿರ್ಜಲೀಕರಣ ಸ್ಥಿತಿಯು, ಅದರ ಹೆಸರಿನ ಹೊರತಾಗಿಯೂ, ಕೇವಲ ಜಲ/ನೀರಿನದ್ದಷ್ಟೇ ಕೊರತೆಯಾಗಿರಬೇಕಿಲ್ಲ, ಬದಲಿಗೆ ಜಲ/ನೀರು ಹಾಗೂ ವಿಲೇಯ/ದ್ರವ್ಯಗಳೆರಡೂ (ಪ್ರಮುಖವಾಗಿ ಸೋಡಿಯಂ) ಸಾಧಾರಣವಾಗಿ ರಕ್ತದ ಪ್ಲಾಸ್ಮಾದಲ್ಲಿರುವ ಪ್ರಮಾಣಕ್ಕನುಗುಣವಾಗಿ ಬಹುಮಟ್ಟಿಗೆ ಸಮಾನಪ್ರಮಾಣದಲ್ಲಿ ನಷ್ಟವಾಗುತ್ತವೆ.
ಹೈಪೋವಾಲೆಮಿಯಾ ಹಾಗೂ ನಿರ್ಜಲೀಕರಣಗಳ ಭಿನ್ನತೆಗಳು
[ಬದಲಾಯಿಸಿ]ಹೈಪೋವಾಲೆಮಿಯಾ ಎಂಬುದು ನಿರ್ದಿಷ್ಟವಾಗಿ ರಕ್ತದ ಪ್ಲಾಸ್ಮಾದಲ್ಲಿನ ಪರಿಮಾಣದಲ್ಲಿನ ಇಳಿಕೆ.[೨][೩] ಇಷ್ಟೇ ಅಲ್ಲದೇ, ಹೈಪೋವಾಲೆಮಿಯಾ ಜಲ/ನೀರಿನ ಕೊರತೆಯನ್ನು ಪರಿಮಾಣದ ಪರಿಭಾಷೆಯಲ್ಲಿ ಸೂಚಿಸುತ್ತದೆಯೇ ಹೊರತು ನಿರ್ದಿಷ್ಟವಾಗಿ ಜಲ/ನೀರಿನ ಕೊರತೆಯ ಪ್ರಮಾಣವನ್ನಲ್ಲ.
ಆದಾಗ್ಯೂ ಆಯಾ ಪರಿಸ್ಥಿತಿಗಳು ಸಾಧಾರಣವಾಗಿ ಏಕಕಾಲಿಕವಾಗಿ ಕಾಣಿಸಿಕೊಳ್ಳುತ್ತವೆ.
ಮಾನವರಲ್ಲಿನ ನಿರ್ಜಲೀಕರಣಕ್ಕೆ ವೈದ್ಯಕೀಯ ಕಾರಣಗಳು
[ಬದಲಾಯಿಸಿ]ಮಾನವರಲ್ಲಿ, ನಿರ್ಜಲೀಕರಣವು ವಿಸ್ತಾರ ವ್ಯಾಪ್ತಿಯ ರೋಗಗಳು ಹಾಗೂ ಸ್ಥಿತಿಗಳಿಂದ ಉಂಟಾಗಬಹುದಾಗಿದ್ದು, ಅವು ದೇಹದಲ್ಲಿನ ಜಲ/ನೀರು ಪರಿಚಲನಾ ವ್ಯವಸ್ಥೆಗೆ ಧಕ್ಕೆ ತರುವಂತಹವಾಗಿರುತ್ತವೆ. ಅವುಗಳೆಂದರೆ:
- ಬಾಹ್ಯ ಅಥವಾ ಒತ್ತಡ-ಸಂಬಂಧಿ ಕಾರಣಗಳು
- ವಿಶೇಷತಃ ಶಾಖಪೂರಿತ ಹಾಗೂ/ಅಥವಾ ಒಣ ಪರಿಸರಗಳಲ್ಲಿ ಅಗತ್ಯ ಜಲ/ನೀರು ಸೇವನೆ ಮಾಡದೇ ಬೆವರು ಹರಿಸುವಂತಹಾ ದೀರ್ಘಕಾಲೀನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ
- ದೀರ್ಘಕಾಲೀನ ಒಣಗಾಳಿ ಸೇವನೆ, e.g. ಎತ್ತರದಲ್ಲಿರುವ ವಿಮಾನಗಳಲ್ಲಿ (5–12% ಸಾಪೇಕ್ಷ ಆರ್ದ್ರತೆಯೊಂದಿಗೆ)
- ರಕ್ತ ನಷ್ಟ ಅಥವಾ ದೈಹಿಕ ಗಾಯದಿಂದಾಗಿ ಒತ್ತಡಹೀನತೆ
- ಅತಿಸಾರ ಭೇದಿ
- ಲಘುಉಷ್ಣತೆ
- ಆಘಾತ (ಹೈಪೋವಾಲೆಮಿಕ್ )
- ವಾಂತಿ ಮಾಡುವುದು
- ಸುಟ್ಟಗಾಯಗಳು
- ಅಶ್ರುಧಾರೆ
- ಮೆಥಾಂಫೆಟಾಮೈನ್, ಆಂಫೆಟಾಮೈನ್, ಕೆಫೀನ್ ಹಾಗೂ ಇತರೆ ಉತ್ತೇಜಕಗಳ ಬಳಕೆ
- ಮದ್ಯಸಾರೀಯ ಪಾನೀಯಗಳ ವಿಪರೀತ ಸೇವನೆ
- ಸಾಂಕ್ರಾಮಿಕ ರೋಗಗಳು
- ಅಪೌಷ್ಟಿಕತೆ
- ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್ ಪ್ರಕ್ಷುಬ್ಧತೆ
- ರಕ್ತದಲ್ಲಿ ಸೋಡಿಯಂ ಪ್ರಮಾಣದ ಹೆಚ್ಚಳ (ನಿರ್ಜಲೀಕರಣದಿಂದಲೂ ಆಗಲು ಸಾಧ್ಯ)
- ರಕ್ತದಲ್ಲಿ ಸೋಡಿಯಂ ಪ್ರಮಾಣದ ಇಳಿಕೆ, ವಿಶೇಷವಾಗಿ ಆಹಾರದಲ್ಲಿ ಉಪ್ಪಿನ ನಿಯಂತ್ರಿತ ಬಳಕೆಯಿಂದ ಆಗಲು ಸಾಧ್ಯ
- ಉಪವಾಸಾಚರಣೆ
- ಇತ್ತೀಚಿನ ತ್ವರಿತ ತೂಕ ಇಳಿಕೆಯು ದ್ರವದ ಪ್ರಮಾಣವು ಹೆಚ್ಚಾಗಿ ಇಳಿಕೆಯಾಗುತ್ತಿರುವುದನ್ನು ಸೂಚಿಸಬಹುದು (1 L ದ್ರವದ ನಷ್ಟವು 1 kgಯಷ್ಟು ತೂಕ ಇಳಿಕೆಯನ್ನು ಸೂಚಿಸಬಹುದು.[೪]
- ರೋಗಿಯು ಪೌಷ್ಟಿಕ ಆಹಾರ ಹಾಗೂ ನೀರನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಲು ನಿರಾಕರಿಸುವುದು
- ನುಂಗಲಾಗದಿರುವುದು (ಅನ್ನನಾಳದಲ್ಲಿನ ಅಡಚಣೆಯ ಕಾರಣ )
- ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್ ಪ್ರಕ್ಷುಬ್ಧತೆ
- ಬಂಧಕ ಜಲ/ನೀರು ನಷ್ಟದ ಇತರೆ ಕಾರಣಗಳು
- ವಿಪರೀತ ಹೆಚ್ಚಾದ ರಕ್ತದಲ್ಲಿನ ಸಕ್ಕರೆ ಅಂಶ , ವಿಶೇಷವಾಗಿ ಡಯಾಬಿಟಿಸ್ ಮೆಲ್ಲಿಟಸ್/ಸಕ್ಕರೆ ರೋಗದಲ್ಲಿ
ರೋಗ ಲಕ್ಷಣಗಳು ಹಾಗೂ ಮುನ್ನರಿವು
[ಬದಲಾಯಿಸಿ]ರೋಗಲಕ್ಷಣಗಳಲ್ಲಿ ಮೈಭಾರವಿರುವಾಗ ಬರುವಂತಹಾ ತಲೆನೋವು, ಸ್ನಾಯು ಸೆಳೆತ, ಇದಕ್ಕಿದ್ದಂತೆ ಎದ್ದುಕಾಣಿಸುವಷ್ಟು ಬಿಳಿಚಿಕೊಳ್ಳುವಿಕೆ, ರಕ್ತದೊತ್ತಡದ ಇಳಿಕೆ (ಒತ್ತಡದಇಳಿಕೆ), ಹಾಗೂ ತಲೆತಿರುಗುವಿಕೆ ಅಥವಾ ಎದ್ದು ನಿಂತಾಗ ಆಗುವ ಕಡಿಮೆ ರಕ್ತದೊತ್ತಡದಿಂದ ಮೂರ್ಛೆ ಬೀಳುವಿಕೆಯಂತಹವು ಸೇರಿವೆ. ನಿರ್ಜಲೀಕರಣಕ್ಕೆ ಚಿಕಿತ್ಸೆ ನೀಡದೆ ಹೋದರೆ ಸಾಧಾರಣವಾಗಿ ಭಾವೋದ್ರೇಕ ಸನ್ನಿ, ಪ್ರಜ್ಞೆಯಿಲ್ಲದಿರುವಿಕೆ, ನಾಲಿಗೆಯ ಊತ ಹಾಗೂ ತೀವ್ರತೆಯ ಸನ್ನಿವೇಶದಲ್ಲಿ ಸಾವೂ ಸಂಭವಿಸಬಹುದು.
ಓರ್ವ ವ್ಯಕ್ತಿಯ ಸಾಮಾನ್ಯ ಜಲದ/ನೀರಿನ ಪರಿಮಾಣದ 2%ರಷ್ಟು ನಷ್ಟವಾದ ನಂತರವಷ್ಠೇ ನಿರ್ಜಲೀಕರಣ ರೋಗಲಕ್ಷಣಗಳು ಸಾಧಾರಣವಾಗಿ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಬಹುಶಃ ಹಸಿವೆಯಿಲ್ಲದಿರುವಿಕೆ ಹಾಗೂ ಒಣಗಿದ ಚರ್ಮಗಳೊಂದಿಗೆ ಬಾಯಾರಿಕೆ ಹಾಗೂ ಅಸ್ವಸ್ಥತೆಯುಂಟಾಗಬಹುದು. ಇವುಗಳ ನಂತರ ಮಲಬದ್ಧತೆ ಉಂಟಾಗಬಹುದು. ಕ್ರೀಡಾಪಟುಗಳು 30%[೫] ರಷ್ಟು ಸಾಮರ್ಥ್ಯ ಇಳಿಕೆಯನ್ನು ಹಾಗೂ ಕಾವೇರುವಿಕೆ, ಅಸಹನೆ, ತೀವ್ರಗೊಂಡ ಹೃದಯ ಬಡಿತ, ಹೆಚ್ಚಿದ ದೇಹದ ತಾಪ, ಹಾಗೂ ತೀವ್ರ ಆಲಸ್ಯ/ಆಯಾಸಗಳ ಅನುಭವವಾಗಬಹುದು.
ಸೌಮ್ಯ ನಿರ್ಜಲೀಕರಣದ ರೋಗಲಕ್ಷಣಗಳಲ್ಲಿ ಬಾಯಾರಿಕೆ, ಮೂತ್ರದ ಪ್ರಮಾಣ ಇಳಿಕೆ , ಅಸಾಧಾರಣ ದಟ್ಟವರ್ಣದ ಮೂತ್ರದ, ವಿವರಿಸಲಾಗದ ದಣಿವು, ಕಿರಿಕಿರಿ, ಕಣ್ಣೀರಿನ ಕೊರತೆ, ತಲೆನೋವು, ನಾಲಿಗೆ/ಬಾಯಿ ಒಣಗುವಿಕೆ, ಎದ್ದು ನಿಂತಾಗ ಆಗುವ ಕಡಿಮೆ ರಕ್ತದೊತ್ತಡದಿಂದ ತಲೆತಿರುಗುವಿಕೆ ಸೇರಿವೆ ಹಾಗೂ ಕೆಲ ಸಂದರ್ಭಗಳಲ್ಲಿ ನಿದ್ರಾಹೀನತೆಯೂ ಕಾಡಬಹುದು. ರಕ್ತಪರೀಕ್ಷೆಗಳು ಹೈಪರ್‌ಆಲ್ಬಮಿನೇಮಿಯಾದ ಲಕ್ಷಣಗಳನ್ನು ತೋರಿಸಬಹುದು.
ಮಧ್ಯಮದಿಂದ ತೀವ್ರ ಮಟ್ಟದ ನಿರ್ಜಲೀಕರಣಗಳಲ್ಲಿ, ಮೂತ್ರವಿಸರ್ಜನೆಯೇ ಆಗದಿರುವ ಸಾಧ್ಯತೆಯಿದೆ. ಈ ಸನ್ನಿವೇಶಗಳಲ್ಲಿನ ಇತರೆ ರೋಗಲಕ್ಷಣಗಳಲ್ಲಿ ಆಲಸ್ಯ ಅಥವಾ ವಿಪರೀತ ನಿದ್ರೆ, ಹಠಾತ್ ಮೂರ್ಛೆ, ಎಳೆಮಕ್ಕಳಲ್ಲಿ ಗುಳಿಬಿದ್ದ ನೆತ್ತಿಸುಳಿ (ಸೂಕ್ಷ್ಮ ಪ್ರದೇಶ), ಮೂರ್ಛೆ ಹಾಗೂ ಗುಳಿಬಿದ್ದ ಕಣ್ಣುಗಳು ಸೇರಿವೆ.
ಜಲ/ನೀರಿನ ನಷ್ಟ ಹೆಚ್ಚಿದಂತೆ ರೋಗಲಕ್ಷಣಗಳ ತೀವ್ರತೆಯೂ ಹೆಚ್ಚುತ್ತದೆ. ಪ್ಲಾಸ್ಮಾದ ಪರಿಮಾಣ ಹಾಗೂ ರಕ್ತದೊತ್ತಡ ಕಡಿಮೆಯಾದುದನ್ನು ಸರಿದೂಗಿಸಲು ಹೃದಯದ ಬಡಿತ ಹಾಗೂ ಉಸಿರಾಟದ ವೇಗಗಳು ಹೆಚ್ಚಬಹುದಲ್ಲದೇ, ಬೆವರುವುದು ಕಡಿಮೆಯಾಗುವುದರಿಂದ ದೇಹದ ಉಷ್ಣಾಂಶ ಏರಿಕೆಯಾಗಬಹುದು. ಸುಮಾರು 5%ರಿಂದ 6%ರಷ್ಟು ಜಲ/ನೀರು ನಷ್ಟವಾದಾಗ, ತೂರಾಡುವಂತಾಗುವುದು ಅಥವಾ ನಿದ್ರಾ ಮಂಪರು, ತಲೆನೋವು ಅಥವಾ ಪಿತ್ತೋದ್ರೇಕಗಳು ಕಾಡಬಹುದು, ಹಾಗೂ ಅಂಗಗಳು ಜುಮ್ಮೆನಿಸಬಹುದು (ಅಸಾಧಾರಣ ಚರ್ಮಪ್ರತಿಕ್ರಿಯೆಗಳು). 10%ರಿಂದ 15% ದ್ರವ ನಷ್ಟವಿದ್ದಾಗ, ಸ್ನಾಯುಗಳು ಸೆಟೆದುಕೊಳ್ಳಬಹುದು, ಚರ್ಮವು ಸುರುಟಿಕೊಂಡು ಸುಕ್ಕುಗಟ್ಟಬಹುದು (ಚರ್ಮದ ಬಿಗಿತ ಕಳೆದುಕೊಳ್ಳುವಿಕೆ ), ದೃಷ್ಟಿಯು ಮಂದವಾಗಬಹುದು, ಮೂತ್ರವಿಸರ್ಜನೆ ಬಹುತೇಕ ಕಡಿಮೆಯಾಗಬಹುದಲ್ಲದೇ ತ್ರಾಸದಾಯಕವಾಗಬಹುದು, ಹಾಗೂ ಸನ್ನಿ ಆರಂಭಗೊಳ್ಳಬಹುದು. 15%ಗಿಂತ ಹೆಚ್ಚಿನ ನಷ್ಟವು ಸಾಧಾರಣವಾಗಿ ಮಾರಣಾಂತಿಕವಾಗಿರುತ್ತವೆ.
50ಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ, ದೇಹದ ಬಾಯಾರಿಕೆಯ ಸಂವೇದನೆ ಕಡಿಮೆಯಾಗಿರುತ್ತದೆ ಹಾಗೂ ವಯಸ್ಸಿನ ಏರಿಕೆಯೊಂದಿಗೆ ಇಳಿಕೆಯಾಗುತ್ತಾ ಹೋಗುತ್ತದೆ. ಅನೇಕ ಹಿರಿಯ ನಾಗರೀಕರು ನಿರ್ಜಲೀಕರಣದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಅತ್ಯುಷ್ಣತೆಯೊಂದಿಗಿನ ನಿರ್ಜಲೀಕರಣ ಅತಿರೇಕದ ಉಷ್ಣ ಹವಾಮಾನದಲ್ಲಿ ಹಿರಿಯರ ಸಾವಿಗೆ ಕಾರಣವಾಗಬಹುದು.
ಜಠರ ಕರುಳುಗಳ ತುಯ್ತದ ರೋಗಗಳು ನಿರ್ಜಲೀಕರಣಕ್ಕೆ ಅನೇಕ ರೀತಿಗಳಲ್ಲಿ ಕಾರಣವಾಗಬಲ್ಲವು. ಅನೇಕವೇಳೆ, ಸ್ವಯಂ-ನಿಯಂತ್ರಣದೊಂದಿಗೆ ಗುಣವಾಗಬಹುದಾಗಿದ್ದ ಅನಾರೋಗ್ಯಕ್ಕೆ ನಿರ್ಜಲೀಕರಣವು ಪ್ರಮುಖ ಕಾರಣವಾಗಬಲ್ಲದು. ದ್ರವನಷ್ಟವು ಜೀವಕ್ಕೆ ಅಪಾಯ ತಂದೊಡ್ಡುವಷ್ಟರ ಮಟ್ಟಿಗೆ ಅಪಾಯಕಾರಿ ಕೂಡ ಆಗಬಹುದು.
ಮಾರಣಾಂತಿಕ ಸ್ಥಿತಿಗಳಲ್ಲಿರುವ ರೋಗಿಗಳೂ ಸಾಯಲಿಚ್ಛಿಸಿದಾಗ ನಿರ್ಜಲೀಕರಣದಿಂದಾಗುವ ಸಾವು ಅಗತ್ಯವಾದ ನೋವು ನಿವಾರಕ ಔಷಧಿಗಳ ಸೇವನೆಯೊಂದಿಗೆ ಸಾಧಾರಣವಾಗಿ ನೆಮ್ಮದಿಕರವಾಗಿದ್ದು ನರಳುವಿಕೆ ಕಡಿಮೆಯಿರುತ್ತದೆ.[೬][೭][೮][೯][೧೦][೧೧]
ಚಿಕಿತ್ಸೆ
[ಬದಲಾಯಿಸಿ]ಅಲ್ಪ ಪ್ರಮಾಣದ ನಿರ್ಜಲೀಕರಣಕ್ಕೆ ಜಲ/ನೀರು ಕುಡಿಯುವಿಕೆ ಹಾಗೂ ದ್ರವ ನಷ್ಟವಾಗುವುದರ ತಡೆಯುವಿಕೆಗಳು ಹೆಚ್ಚು ಪ್ರಯೋಜನಕಾರಿ ಚಿಕಿತ್ಸೆಯಾಗಿ ಪರಿಗಣಿತವಾಗಿದೆ. ವಿಲೇಯ/ದ್ರವ್ಯ ಮಟ್ಟಗಳು ಮರುಪೂರಣವಾಗುವ ಮುನ್ನ ಬಾಯಾರಿಕೆ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುವ ಮೂಲಕ ಸಾಧಾರಣ ಜಲ/ನೀರು ಕೇವಲ ರಕ್ತದಲ್ಲಿನ ಪ್ಲಾಸ್ಮಾದ ಪರಿಮಾಣವನ್ನು ಪುನಃಸ್ಥಿತಗೊಳಿಸುತ್ತದೆ.[೧೨] ಅತಿಸಾರ ಹಾಗೂ ವಾಂತಿಗಳ ಮೂಲಕ ಘನ ಆಹಾರಗಳು ದ್ರವ ನಷ್ಟಕ್ಕೆ ಕೊಡುಗೆ ನೀಡುತ್ತದೆ.[೧೩]
ಮತ್ತೂ ತೀವ್ರತರವಾದಂತಹಾ ಸಂದರ್ಭಗಳಲ್ಲಿ ನಿರ್ಜಲೀಕರಣ ಸ್ಥಿತಿಯ ಸರಿಪಡಿಕೆಯನ್ನು ಅಗತ್ಯ ಜಲ/ನೀರು ಹಾಗೂ ವಿದ್ಯುತ್‌ವಿಚ್ಛೇದ್ಯಗಳು/ಎಲೆಕ್ಟ್ರೋಲೈಟ್‌ಗಳ ಮರುಪೂರಣದ ಮೂಲಕ ಮಾಡಬಹುದಾಗಿದೆ (ನೀರು ಕುಡಿಸುವ ಚಿಕಿತ್ಸೆ ಅಥವಾ ರಕ್ತನಾಳದ ಮೂಲಕ ಮಾಡುವ ಮರುಜಲಪೂರಣ ಚಿಕಿತ್ಸೆ). ಶುದ್ಧ/ಕುಡಿಯುವ ಜಲ/ನೀರಿನ ವಿಪರೀತ ಕೊರತೆಯ ಸಂದರ್ಭದಲ್ಲಿಯೂ (e.g. ಸಮುದ್ರದಲ್ಲಿ ಅಥವಾ ಮರಳುಗಾಡಿನಲ್ಲಿ), ಸಮುದ್ರ ಜಲ/ನೀರು ಅಥವಾ ಮೂತ್ರವನ್ನು ಕುಡಿಯುವುದು ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ, ಮಾತ್ರವಲ್ಲ ಮದ್ಯಸಾರದ ಸೇವನೆಯೂ ಅಪ್ರಯೋಜಕ. ಸಮುದ್ರ ಜಲ/ನೀರಿನ ಸೇವನೆಯಿಂದ ದೇಹಕ್ಕೆ ಹಠಾತ್ ಪ್ರವೇಶಿಸುವ ಉಪ್ಪಿನಂಶವು ಕೋಶಗಳನ್ನು ನಿರ್ಜಲೀಕೃತಗೊಳಿಸಿ, ಮೂತ್ರಪಿಂಡಗಳ ಮೇಲೆ ವಿಪರೀತ ಒತ್ತಡ ಹೇರಿ ಅವುಗಳನ್ನು ಸ್ಥಬ್ಧಗೊಳಿಸುತ್ತದೆ ಎಂಬ ಸಾಧಾರಣ ಭಾವನೆಯಿರುವುದಾದರೂ, ಸಾಮಾನ್ಯ ವಯಸ್ಕನೊಬ್ಬ ಪ್ರತಿದಿನ 0.1 ಲೀಟರ್‌ಗಳಷ್ಟು ಸಮುದ್ರ ಜಲ/ನೀರನ್ನು ಮೂತ್ರಕೋಶಗಳ ವಿಫಲತೆಯ ಭಯವಿಲ್ಲದೇ ಸೇವಿಸಬಹುದಾಗಿದೆ ಎಂದು ಗಣಿಸಲಾಗಿದೆ [ಸಾಕ್ಷ್ಯಾಧಾರ ಬೇಕಾಗಿದೆ]
ಮೂರ್ಛೆ ಹೋಗುವುದು, ಅಪ್ರಜ್ಞಾವಸ್ಥೆ, ಅಥವಾ ಇತರ ತೀವ್ರತೆಯ ಪ್ರತಿಬಂಧಕ ಲಕ್ಷಣಗಳು ಕಂಡುಬಂದಂತಹ ನಿರ್ಜಲೀಕರಣದ ಅನೇಕ ತೀವ್ರ ಸಂದರ್ಭಗಳಲ್ಲಿ (ರೋಗಿಯು ನಿಂತುಕೊಳ್ಳಲು ಹಾಗೂ ಸ್ಪಷ್ಟವಾಗಿ ಯೋಚಿಸಲು ಅಸಾಧ್ಯವಾದಾಗ), ತುರ್ತು ಗಮನ ಅತ್ಯಗತ್ಯ. ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್‌ಗಳ ಸ್ಥಿತಿಯ ಬಗ್ಗೆ ಅವಲೋಕಿಸುತ್ತಾ ಬದಲಿ ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್‌ಗಳ ಸೂಕ್ತ ಸಮತೋಲನವನ್ನು ಹೊಂದಿರುವ ದ್ರವವನ್ನು ಕುಡಿಸುತ್ತಾ ಅಥವಾ ರಕ್ತನಾಳದ ಮೂಲಕ ನೀಡಬೇಕು; ಕೈ ಮೀರಿದ ಪರಿಸ್ಥಿತಿಗಳನ್ನು ಹೊರತುಪಡಿಸಿ ಉಳಿದಂತೆ ಇದು ಪರಿಸ್ಥಿತಿಯನ್ನು ಸಂಪೂರ್ಣ ಶಮನಗೊಳಿಸಬಲ್ಲದು.
ನಿರ್ಜಲೀಕರಣದ ತಡೆಗಟ್ಟುವಿಕೆ
[ಬದಲಾಯಿಸಿ]ನಿರ್ಜಲೀಕರಣ ಅಗತ್ಯ ಪ್ರಮಾಣದ ಜಲ/ನೀರು ಸೇವನೆಯ ಮೂಲಕ ತಡೆಗಟ್ಟಬಹುದು. ಜಲ/ನೀರನ್ನು ಬೆವರಿನ ಮೂಲಕ ಕಳೆದುಕೊಂಡ ಪ್ರಮಾಣದಷ್ಟೇ, ಜಲ/ನೀರನ್ನು ಮರುಪೂರಣಗೊಳಿಸಿಕೊಂಡು ನಿರ್ಜಲೀಕರಣವನ್ನು ತಡೆಗಟ್ಟಬಹುದು. ಒಟ್ಟಾರೆ ದೇಹದ ಜಲ/ನೀರಿನ ಪ್ರಮಾಣದಲ್ಲಿನ ವಿಪರೀತ ಕೊರತೆ ಅಥವಾ ವಿಪರೀತ ಹೆಚ್ಚಳವನ್ನು, ದೇಹವು ತಡೆದುಕೊಳ್ಳಲಾಗದ ಕಾರಣ ಸರಿಸುಮಾರು ಜಲ/ನೀರಿನ ಸೇವನೆಯು ಕಳೆದುಕೊಳ್ಳುತ್ತಿರುವ ನೀರಿನಷ್ಟೇ ಇರಬೇಕಾದ್ದು ಅತ್ಯಗತ್ಯ (ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಓರ್ವ ವ್ಯಕ್ತಿ ಬೆವರುತ್ತಿದ್ದರೆ, ಅವರು ಆಗ್ಗಾಗ್ಗೆ ಜಲ/ನೀರು ಕುಡಿಯುತ್ತಿರಬೇಕು).
ಓರ್ವ ವ್ಯಕ್ತಿ ಹೆಚ್ಚು ಪ್ರಮಾಣದಲ್ಲಿ ಬೆವರದ ಯಾವುದೇ ದೈನಂದಿನ ಚಟುವಟಿಕೆಗಳಲ್ಲಿ ಮಾತ್ರವೇ ತೊಡಗಿದ್ದರೆ, ತನಗೆ ಬಾಯಾರಿಕೆಯಾದಾಗ ಮಾತ್ರವೇ ಅಗತ್ಯ ನೀರು ಕುಡಿಯುವುದು ಜಲಸಂಚಯನಕ್ಕೆ ಪೂರಕ. ಆದಾಗ್ಯೂ ಕಸ ರತ್ತುಗಳನ್ನು ಮಾಡಬೇಕಾದರೆ ಬಾಯಾರಿಕೆಯ ಮೇಲೆಯೇ ಅವಲಂಬಿಸಿದರೆ ನಿರ್ಜಲೀಕರಣವನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಇದು ನಿರ್ದಿಷ್ಟವಾಗಿ ಶಾಖಭರಿತ ವಾತಾವರಣಗಳಲ್ಲಿ ಅಥವಾ 65ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅನ್ವಯಿಸುತ್ತದೆ. ಸಾಧಾರಣ ತಾಲೀಮಿಗೆ ಮುನ್ನ ಹಾಗೂ ನಂತರದ ತೂಕದ ವ್ಯತ್ಯಾಸಗಳನ್ನು ಗಮನಿಸಿ, ತಾಲೀಮಿನ ಸಮಯದಲ್ಲಿ ನಷ್ಟವಾದ ದ್ರವದ ಪ್ರಮಾಣವೆಷ್ಟು ಎಂದು ಪತ್ತೆ ಹಚ್ಚುವ ಮೂಲಕ ಕಸರತ್ತಿನ ಸಂದರ್ಭದಲ್ಲಿ ತಾಲೀಮಿನ ಸಮಯದಲ್ಲಿ ಎಷ್ಟು ಪ್ರಮಾಣದ ದ್ರವದ ಅವಶ್ಯಕತೆಯಿದೆ ಎಂಬುದರ ನಿಖರವಾಗಿ ನಿರ್ಣಯಿಸುವುದು ಸಾಧ್ಯ.[೧೪][೧೫][೧೬][೧೭][೧೮]
ದೇಹದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಜಲ/ನೀರು ಸೇವನೆಯು ಮಿತವಾಗಿದ್ದರೆ, ಮೂತ್ರಪಿಂಡಗಳು ಸೂಕ್ತ ಸುರಕ್ಷಾತ್ಮಕವಾಗಿ ಹೆಚ್ಚುವರಿ ಜಲ/ನೀರನ್ನು ಮೂಮೂತ್ರಪಿಂಡಗಳು ತ್ರದ ಮೂಲಕ ಹೊರಗೆ ಹಾಕುವುದರಿಂದ ಅಪಾಯ ಕಡಿಮೆ.
ಯುನೈಟೆಡ್ ಕಿಂಗ್‌ಡಮ್‌ನಂತಹಾ ಸಮಶೀತೋಷ್ಣ ವಾತಾವರಣದಲ್ಲಿ ಓರ್ವ ವ್ಯಕ್ತಿಯ ದೇಹವು ಸರಾಸರಿ ದಿನದ ಅವಧಿಯಲ್ಲಿ ಅಂದಾಜು 2.5 ಲೀಟರ್‌ಗಳಷ್ಟು ಜಲ/ನೀರನ್ನು ಕಳೆದುಕೊಳ್ಳುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ಇದು ಶ್ವಾಸಕೋಶದ ಮೂಲಕ ನೀರಾವಿಯ ರೂಪದಲ್ಲಿ, ಬೆವರಿನ ರೂಪದಲ್ಲಿ ಚರ್ಮದ ಮೂಲಕ, ಅಥವಾ ಮೂತ್ರಪಿಂಡಗಳ ಮೂಲಕ ಮೂತ್ರದ ರೂಪದಲ್ಲಿ ಆಗಿರಬಹುದು. ಕೆಲ ಪ್ರಮಾಣದ ಜಲ/ನೀರು (ಅತಿಸಾರವಿಲ್ಲದ ಸಂದರ್ಭದಲ್ಲಿ ಗಮನಾರ್ಹವಲ್ಲದ ಪ್ರಮಾಣದಲ್ಲಿ) ಕರುಳಿನ ಮೂಲಕವೂ ಹೊರಹೋ/ವ್ಯಯವಾಗುತ್ತದೆ. ಆದಾಗ್ಯೂ ಬೆಚ್ಚನೆಯ ಅಥವಾ ತೇವಭರಿತ ವಾತಾವರಣದಲ್ಲಿ ಅಥವಾ ತೀವ್ರ ಪರಿಶ್ರಮದ ಸಮಯದಲ್ಲಿ, ನಷ್ಟಗೊಳ್ಳುವ ಜಲ/ನೀರಿನ ಪ್ರಮಾಣವು ಹೆಚ್ಚಬಹುದು ಅಥವಾ ಬೆವರಿನ ಮೂಲಕ ಹೆಚ್ಚೇ ಹೊರಹೋಗಬಹುದು; ಇದಷ್ಟೂ ಪ್ರಮಾಣವು ಸೂಕ್ತ ರೀತಿಯಲ್ಲಿ ಪೂರಣಗೊಳ್ಳಲೇಬೇಕು. ವಿಷಮ ಪರಿಸ್ಥಿತಿಗಳಲ್ಲಿ ನಷ್ಟವಾದ ನೀರಿನ ಪ್ರಮಾಣವು ಜಠರ ಕರುಳುಗಳ ಮೂಲಕ ಜಲ/ನೀರನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಮೀರಿದ್ದಾಗಿರಬಹುದು; ಇಂತಹಾ ಸಂದರ್ಭಗಳಲ್ಲಿ, ಅಗತ್ಯದಷ್ಟು ಜಲ/ನೀರು ಸೇವನೆ ಮಾತ್ರವೇ ಸಾಲದು, ಅಲ್ಲದೇ ನಿರ್ಜಲೀಕರಣವನ್ನು ತಡೆಗಟ್ಟಬಹುದಾದ ಏಕೈಕ ಮಾರ್ಗವೆಂದರೆ ಮೊದಲೇ ನೀರು ಕುಡಿದಿರುವುದು,[೧೬] ಅಥವಾ ಬೆವರುವಿಕೆಯನ್ನು ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳುವುದು (ವಿಶ್ರಾಂತಿ ಪಡೆಯುವುದು, ತಂಪಾದ ವಾತಾವರಣಕ್ಕೆ ಹೋಗುವುದು, etc.)
ಶಾಖಭರಿತ ಅಥವಾ ತೇವಭರಿತ ವಾತಾವರಣಗಳಲ್ಲಿ ಅಥವಾ ಒತ್ತಡದಾಯಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಹಾ ಸಂದರ್ಭಗಳಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಸಾಮಾನ್ಯ ಉಪಯುಕ್ತ ಸೂತ್ರವೆಂದರೆ ಮೂತ್ರವಿಸರ್ಜನೆ ಹಾಗೂ ಲಕ್ಷಣಗಳನ್ನು ಗಮನಿಸುವುದು. ಓರ್ವ ವ್ಯಕ್ತಿ ಪ್ರತಿ 3-5 ಗಂಟೆಗಳಿಗೊಮ್ಮೆ ಮೂತ್ರಿಸುತ್ತಾನೆ ಹಾಗೂ ಮೂತ್ರವು ತಿಳಿ ಬಣ್ಣದಾಗಿರುತ್ತದೆ ಅಥವಾ ಬಣ್ಣರಹಿತವಾಗಿರುತ್ತದೆ ಎಂದಾದರೆ ನಿರ್ಜಲೀಕರಣವಾಗದಿರುವ ಸಾಧ್ಯತೆ ಹೆಚ್ಚಿರುತ್ತದೆ; ಮೂತ್ರವು ದಟ್ಟವರ್ಣದ್ದಾಗಿದ್ದರೆ ಅಥವಾ ಮೂತ್ರವಿಸರ್ಜನೆಯು ಅನೇಕ ಗಂಟೆಗಳ ನಂತರ ಆಗುತ್ತಿದ್ದರೆ ಅಥವಾ ಮೂತ್ರವಿಸರ್ಜನೆಯೇ ಆಗದೇ ಇದ್ದರೇ, ಸೂಕ್ತ ಜಲಸಂಚಯಕ್ಕೆ ಬೇಕಾದಷ್ಟು ಜಲ/ನೀರು ಸಂಗ್ರಹ ಇಲ್ಲ ಎಂದೇ ಅರ್ಥ.
ಬೆವರಿನ ಮೂಲಕ ಹೆಚ್ಚಿನ ಪ್ರಮಾಣದ ಜಲ/ನೀರು ನಷ್ಟವಾಗುತ್ತಿದ್ದು ಅದಕ್ಕೆ ಸೂಕ್ತವಾಗಿ ಕುಡಿಯುತ್ತಿದ್ದರೆ ಸೂಕ್ತ ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಬೆವರುವಿಕೆಗೆ ಸಂಬಂಧಿಸಿದಂತೆ ಹೈಪರ್‌ಟೋನಿಕ್/ಅತಿ ಕರ್ಷಣೀಯ ಅಥವಾ ಹೈಪೋಟೋನಿಕ್/ಅವ ಕರ್ಷಣೀಯ ಎನಿಸುವಂತಹಾ ದ್ರವಗಳನ್ನು ಸೇವಿಸುವುದರಿಂದ ಜಲ/ನೀರಿನ ಪರಿಚಲನೆಯ ಒಟ್ಟಾರೆ ಪರಿಮಾಣವು ಹೆಚ್ಚುವುದರಿಂದ ವಿಷಮ ಪರಿಣಾಮಗಳುಂಟಾಗುವ ಸಾಧ್ಯತೆ ಇರುತ್ತದೆ (ಪ್ರಮುಖವಾಗಿ ಸೋಡಿಯಂ ರಾಹಿತ್ಯ ಅಥವಾ ಸೋಡಿಯಂಹೆಚ್ಚಳ).
ವಾಂತಿ ಅಥವಾ ಅತಿಸಾರಗಳಿಂದ ಅಸಾಧಾರಣ ಪ್ರಕ್ರಿಯೆಗಳ ಮೂಲಕ ಜಲ/ನೀರು ನಷ್ಟವಾಗಿದ್ದರೆ, ಈ ಅಸಮಾನತೆಯು ಬಹುಬೇಗ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಕಾರಣವಾಗಬಹುದು.
ಸುದೀರ್ಘ ಓಟದಂತಹಾ ಕ್ರೀಡಾ ಕಾರ್ಯಕ್ರಮಗಳಲ್ಲಿ, ಕ್ರೀಡಾಪಟುಗಳನ್ನು ನಿರ್ಜಲೀಕರಣ ಸಮಸ್ಯೆ ಬಾಧಿಸದಿರಲು ಜಲ/ನೀರು ನಿಲುಗಡೆಗಳೂ ಹಾಗೂ ಜಲ/ನೀರು ಬಿಡುವುಗಳನ್ನೂ ನೀಡಲಾಗುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಹೈಪೋವಾಲೆಮಿಯಾ, ನಿರ್ಜಲೀಕರಣದಿಂದ ಆಗಬಹುದಾದ ರಕ್ತ ಪರಿಮಾಣದ ಇಳಿಕೆ
- ಸುರಕ್ಷಿತ ಜಲ/ನೀರು
- ಉಪವಾಸ
- ಜಲ/ನೀರು ಮೈಮರೆಯುವಿಕೆ
- ಜಲ/ನೀರು ಚಿಕಿತ್ಸೆ
- ಜಲ/ನೀರು ನಷ್ಟ ಪರೀಕ್ಷೆ
ಆಕರಗಳು
[ಬದಲಾಯಿಸಿ]- ಇರಾ R. ಬ್ಯಾಕ್, M.D., ಪೇಷಂಟ್ ರೆಫ್ಯೂಸಲ್ ಆಫ್ ನ್ಯೂಟ್ರಿಷನ್ ಅಂಡ್ ಹೈಡ್ರೇಷನ್ : ವಾಕಿಂಗ್ ದ ಎವರ್-ಫೈನರ್ ಲೈನ್ Archived 2010-02-09 ವೇಬ್ಯಾಕ್ ಮೆಷಿನ್ ನಲ್ಲಿ. . ಅಮೇರಿಕನ್ ಜರ್ನಲ್ ಹಾಸ್ಪೈಸ್ & ಪಲ್ಲಿಯೇಟಿವ್ ಕೇರ್, pp. 8–13. (ಮಾರ್ಚ್/ಏಪ್ರಿಲ್ 1995)
ಟಿಪ್ಪಣಿಗಳು
[ಬದಲಾಯಿಸಿ]- ↑ TheFreeDictionary.com --> ನಿರ್ಜಲೀಕರಣ ದ ಅಮೇರಿಕನ್ ಹೆರಿಟೇಜ್ ಸೈನ್ಸ್ ಡಿಕ್ಷನರಿ 2005ಯ ಉದಾಹರಣೆಯಿಂದ. ಪಡೆದಿದ್ದು ಜುಲೈ 2, 2009ರಂದು
- ↑ MedicineNet > ಹೈಪೋವಾಲೆಮಿಯಾದ ವ್ಯಾಖ್ಯಾನ Archived 2014-01-23 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದಿದ್ದು ಜುಲೈ 2, 2009ರಂದು
- ↑ TheFreeDictionary.com --> ಹೈಪೋವಾಲೆಮಿಯಾ ಸಾಂಡರ್ಸ್ ಕಾಂಪ್ರೆಹೆನ್ಸೀವ್ ವೆಟೆರ್ನರಿ ಡಿಕ್ಷನರಿಯ ಉದಾಹರಣೆಯಿಂದ, 3 ed. ಪಡೆದಿದ್ದು ಜುಲೈ 2, 2009ರಂದು
- ↑ "ನಿರ್ಜಲೀಕರಣ ರೋಗಲಕ್ಷಣಗಳು - ಜಲ/ನೀರಿನ ಕುಡಿಯುವಿಕೆಯಿಂದಾಗುವ ಅನುಕೂಲ/ಲಾಭಗಳು - ದ್ರವ ಅಸಮತೋಲನದ ಸೂಚನೆಗಳು/ಲಕ್ಷಣಗಳು". Archived from the original on 2014-04-08. Retrieved 2010-06-16.
- ↑ Bean, Anita (2006). The Complete Guide to Sports Nutrition. A & C Black Publishers Ltd. pp. 81–83. ISBN 0713675586.
- ↑ Ganzini L, Goy ER, Miller LL, Harvath TA, Jackson A, Delorit MA (2003). "Nurses' experiences with hospice patients who refuse food and fluids to hasten death". The New England Journal of Medicine. 349 (4): 359–65. doi:10.1056/NEJMsa035086. PMID 12878744.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ McAulay D (2001). "Dehydration in the terminally ill patient". Nursing Standard (Royal College of Nursing (Great Britain) : 1987). 16 (4): 33–7. PMID 11977821.
- ↑ Van der Riet P, Brooks D, Ashby M (2006). "Nutrition and hydration at the end of life: pilot study of a palliative care experience". Journal of Law and Medicine. 14 (2): 182–98. PMID 17153524.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Miller FG, Meier DE (1998). "Voluntary death: a comparison of terminal dehydration and physician-assisted suicide". Annals of Internal Medicine. 128 (7): 559–62. PMID 9518401.
{{cite journal}}
: Unknown parameter|month=
ignored (help) - ↑ Printz LA (1992). "Terminal dehydration, a compassionate treatment". Archives of Internal Medicine. 152 (4): 697–700. doi:10.1001/archinte.152.4.697. PMID 1373053.
{{cite journal}}
: Unknown parameter|month=
ignored (help)[ಶಾಶ್ವತವಾಗಿ ಮಡಿದ ಕೊಂಡಿ] - ↑ Sullivan RJ (1993). "Accepting death without artificial nutrition or hydration". Journal of General Internal Medicine. 8 (4): 220–4. doi:10.1007/BF02599271. PMID 8515334.
{{cite journal}}
: Unknown parameter|month=
ignored (help) - ↑ "ಫಾರ್ಮ್ಯುಲೇಟಿಂಗ್ ಕಾರ್ಬೋಹೈಡ್ರೇಟ್ ಎಲೆಕ್ಟ್ರೋಲೈಟ್ ಡ್ರಿಂಕ್ಸ್ ಫಾರ್ ಆಪ್ಟಿಮಲ್ ಎಫಿಕಸಿ." ಮುರ್ರೆ, R. & ಸ್ಟೋಫನ್, J. (2001).
- ↑ "ಹೆಲ್ತ್‌ವೈಸ್ ಹ್ಯಾಂಡ್‌ಬುಕ್," ಹೆಲ್ತ್‌ವೈಸ್, Inc. 1999
- ↑ "Water, Water, Everywhere". WebMD.
- ↑ Dr. Mark Dedomenico. "Metabolism Myth #5". MSN Health.[ಶಾಶ್ವತವಾಗಿ ಮಡಿದ ಕೊಂಡಿ]
- ↑ ೧೬.೦ ೧೬.೧ "Exercise and Fluid Replacement". American College of Sports Medicine.
- ↑ Nancy Cordes. "Busting The 8-Glasses-A-Day Myth". CBS. Archived from the original on 2010-12-05. Retrieved 2010-06-16.
- ↑ ""Drink at Least 8 Glasses of Water a Day" - Really?". Dartmouth Medical School.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- CS1 maint: multiple names: authors list
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- No local image but image on Wikidata
- Articles with hatnote templates targeting a nonexistent page
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- ಸಾವಿನ ಕಾರಣಗಳು
- ವಿದ್ಯುತ್‌ವಿಚ್ಛೇದ್ಯ/ಎಲೆಕ್ಟ್ರೋಲೈಟ್ ಪ್ರಕ್ಷುಬ್ಧತೆಗಳು
- ಪೌಷ್ಟಿಕ ಆಹಾರ
- ರೋಗ-ಲಕ್ಷಣಗಳು
- ಆರೋಗ್ಯ