ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೪
ಗೋಚರ
ಡಿಸೆಂಬರ್ ೪: ಯಹೂದಿ ಧರ್ಮದಲ್ಲಿ ಹಾನುಕ್ಕಾ (೨೦೦೭); ಭಾರತದಲ್ಲಿ ಜಲಸೇನೆ ದಿವಸ
- ೧೬೩೯ - ಇಂಗ್ಲೆಂಡ್ನ ಖಗೋಳಶಾಸ್ತ್ರ ತಜ್ಞ ಜೆರೆಮಿಯ ಹೊರ್ರೊಕ್ಸ್ ಶುಕ್ರ ಗ್ರಹವು ಸೂರ್ಯನ ಮುಂದೆ ಹಾಯುವುದನ್ನು (ಚಿತ್ರಿತ) ಮೊದಲ ಬಾರಿಗೆ ಪ್ರದರ್ಶಿಸಿದನು.
- ೧೮೨೯ - ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆನ್ಟಿನ್ಕ್ ಸತಿ ಪದ್ಧತಿಯನ್ನು ರದ್ದುಪಡಿಸಿದನು.
- ೧೯೫೨ - ಲಂಡನ್ ನಗರದಲ್ಲಿ ಉಂಟಾದ ಹೊಗೆ ಮತ್ತು ಮಂಜಿನ ಮಿಶ್ರಣವು (ಸ್ಮೊಗ್) ಮುಂದಿನ ದಿನಗಳಲ್ಲಿ ಸುಮಾರು ೧೨,೦೦೦ ಜನರ ಮರಣಕ್ಕೆ ಕಾರಣವಾಯಿತು.
- ೧೯೭೧ - ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಜಲಸೇನೆಯು ಕರಾಚಿಯ ಮೇಲೆ ಆಕ್ರಮಣ ಮಾಡಿತು.
- ೧೯೮೨ - ಚೀನಿ ಜನರ ಗಣರಾಜ್ಯ ತನ್ನ ಪ್ರಸಕ್ತ ಸಂವಿಧಾನವನ್ನು ಅಳವಡಿಸಿಕೊಂಡಿತು.
ಜನನಗಳು: ಫ್ರಾನ್ಸಿಸ್ಕೊ ಫ್ರಾಂಕೊ, ಸೆರ್ಗೈ ಬುಬ್ಕ; ಮರಣಗಳು: ಒಮಾರ್ ಖಯ್ಯಾಮ್, ಥಾಮಸ್ ಹಂಟ್ ಮಾರ್ಗನ್