ಏಪ್ರಿಲ್ ೩೦
ಗೋಚರ
ಏಪ್ರಿಲ್ ೩೦ - ಏಪ್ರಿಲ್ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೦ನೇ ದಿನ (ಅಧಿಕ ವರ್ಷದಲ್ಲಿ ೧೨೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೫ ದಿನಗಳಿರುತ್ತವೆ. ಏಪ್ರಿಲ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೦೦೬ - ಇತಿಹಾಸದಲ್ಲಿ ದಾಖಲಿತ ಅತ್ಯಂತ ಪ್ರಕಾಶಮಾನವಾದ ಸೂಪರ್ನೋವ ಎಸ್ಎನ್೧೦೦೬ ಉಂಟಾಯಿತು.
- ೧೮೦೩ - ಅಮೇರಿಕ ಸಂಯುಕ್ತ ಸಂಸ್ಥಾನವು ಫ್ರಾನ್ಸ್ನಿಂದ ಲೂಯಿಸಿಯಾನ್ ಪ್ರದೇಶವನ್ನು ೧೫ ಮಿಲಿಯನ್ ಡಾಲರ್ಗಳಿಗೆ ಖರೀದಿಸಿತು. ಇದರಿಂದ ಅಮೇರಿಕ ದೇಶದ ಗಾತ್ರ ದ್ವಿಗುಣಕ್ಕಿಂತ ಹೆಚ್ಚಾಯಿತು.
- ೧೯೪೫ - ಅಡೊಲ್ಫ್ ಹಿಟ್ಲರ್ ತನ್ನ ಮಡಿದಿ ಈವ ಬ್ರೌನ್ಳೊಂದಿಗೆ ಆತ್ಮಹತ್ಯೆ ಮಾಡಿಕೊಂಡನು.
- ೧೯೭೫ - ಸೈಗಾನ್ ಅನ್ನು ಎಡಪಂಥದ ಸೈನ್ಯೆ ವಶಪಡಿಸಿಕೊಂಡು ವಿಯೆಟ್ನಾಮ್ ಯುದ್ಧ ಅಧಿಕೃತವಾಗಿ ಕೊನೆಗೊಂಡಿತು.
- ೧೯೯೧ - ಬಾಂಗ್ಲಾದೇಶವನ್ನು ಅಪ್ಪಳಿಸಿದ ಭೀಕರ ಸುಂಟರಗಾಳಿಗೆ ಅಂದಾಜಿತ ೧೩೮,೦೦೦ ಜನರು ಬಲಿಯಾದರು.
- ೧೯೯೩ - ಸೆರ್ನ್ನಲ್ಲಿ ವಿಶ್ವವ್ಯಾಪಿ ಅಂತರಜಾಲ ಸೃಷ್ಟಿಯಾಯಿತು.
ಜನನ
[ಬದಲಾಯಿಸಿ]- ೧೬೬೨ - ಇಂಗ್ಲೆಂಡ್ನ ಮಹಾರಾಣಿ ಎರಡನೇ ಮೇರಿ.
- ೧೯೧೬ - ಕ್ಲಾಡ್ ಶಾನನ್, ಅಮೇರಿಕ ದೇಶದ ತಂತ್ರಜ್ಞಾನಿ ಮತ್ತು ಗಣಿತಜ್ಞ.
- ೧೮೭೦ - ದಾದಾ ಸಾಹೇಬ್ ಫಾಲ್ಕೆ ಅಲಿಯಾಸ್ ದುಂಡಿರಾಹ್ ಗೋಬಿಂದ್ ಫಾಲ್ಕೆಮಹಾರಾಷ್ಟ್ರದ ತ್ರಯಂಬಕೇಶ್ವರ್ನಲ್ಲಿ ಜನನ.
ನಿಧನ
[ಬದಲಾಯಿಸಿ]- ೧೯೪೫ - ಅಡೋಲ್ಫ್ ಹಿಟ್ಲರ್, ಜರ್ಮನಿಯ ನಾಜಿ ಸರ್ವಾಧಿಕಾರಿ.
- ೧೦೩೦ - ಸುಲ್ತಾನ್ ಮೊಹಮ್ಮದ್ ಘಝನಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ವಿಯೆಟ್ನಾಮ್ - ಬಿಡುಗಡೆ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |