ವಿಷಯಕ್ಕೆ ಹೋಗು

ವಿಜಯ ನಾರಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯ ನಾರಸಿಂಹ (೧೯೨೭-೨೦೦೧) ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು.

೧೯೨೭,ಜುಲೈ ೧೨ ರಂದು ಮಂಡ್ಯ ಜಿಲ್ಲೆಯ ಮೇಲು ಕೋಟೆ ಬಲಿ ಇರುವ ಹಳೆಬೀಡಿನಲ್ಲಿ ಜನಿಸಿದರು. ತಮ್ಮ ಹಿರಿಯ ಸಹೋದರ ರಾಮಚಂದ್ರ ಶಾಸ್ರಿ ಅವರ ಮೂಲಕ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡರು.

ಚಿತ್ರ ನಿರ್ದೇಶಕ ಜಿ.ವಿ.ಅಯ್ಯರ್ ವಿಜಯ ನಾರಸಿಂಹ ಅವರಿಗೆ ಓಹಿಲೇಶ್ವರ ಚಿತ್ರಕ್ಕೆ ಗೀತೆ ಬರೆಯುವ ಅವಕಾಶ ಮಾಡಿಕೊಟ್ಟರು. ಈ ಚಿತ್ರದ ಗೀತೆಯಾದ ಈ ದೇಹದಿಂದ ದೂರವಾದೆ ಏಕೆ ಅತ್ಮನೇ, ಈ ಸಾವು ನ್ಯಾಯವೇ? ಬಹಳ ಜನಪ್ರಿಯವಾಯಿತು. ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳದೆ ಆಯ್ದ ಚಿತ್ರಗಳಿಗೆ ಮಾತ್ರ ಗೀತೆಗಳನ್ನು ರಚಿಸಿದರು. ಹಾಗಾಗಿ ತಮ್ಮ ೩೦ ವರ್ಷಗಳ ಅವಧಿಯಲ್ಲಿ ಕೇವಲ ೪೬೦ ಗೀತೆಗಳನ್ನು ಮಾತ್ರ ರಚಿಸಿದ್ದಾರೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಆತ್ಮೀಯ ಗೆಳೆಯರಾಗಿದ್ದ ವಿಜಯ ನಾರಸಿಂಹ ಪುಟ್ಟಣ್ಣ ನಿರ್ದೇಶನ ಮಾಡಿದ ಅನೇಕ ಚಿತ್ರಗಳಿಗೆ ಗೀತೆ ರಚಿಸಿದ್ದಾರೆ.

ವಿಜಯ ನಾರಸಿಂಹ ಬರೆದಿರುವ ಕೆಲವು ಜನಪ್ರಿಯ ಗೀತೆಗಳು : ನೀತಿವಂತ ಬಾಳಲೇ ಬೇಕು - ಬಾಳು ಬೆಳಗಿತು, ಪಂಚಮವೇದ ಪ್ರೇಮದ ನಾದ - ಗೆಜ್ಜೆಪೂಜೆ, ಆಡೋಣಾ ನೀನೂ ನಾನು - ಕಸ್ತೂರಿ ನಿವಾಸ, ತೋಟದಾಗೆ ಹೂವಾ ಕಂಡೆ, ಹೂವಾ ಒಳಗೆ ನಿನ್ನ ಕಂಡೆ, ನನ್ನ ರಾಜಾ ರೋಜಾ... - ಚಿರಂಜೀವಿ, ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ... - ಶುಭಮಂಗಳ, ಠೂ ಠೂ ಠೂ ಬೇಡಪ್ಪ ... ನಿನ್ನ ಸಂಗ ಆಡಲೆಂದು ಬಂದೆನಪ್ಪ - ಪ್ರೇಮಮಯಿ, ಆ ದೇವರೆ ನುಡಿದ ಮೊದಲ ನುಡಿ ಪ್ರೇಮ ಪ್ರೇಮ.. - ಬಿಳಿ ಹೆಂಡ್ತಿ, ಯಾವ ತಾಯಿಯೂ ಪಡೆದ ಮಗಳಾದರೇನು - ಬಿಳಿ ಹೆಂಡ್ತಿ, ನಿನ್ನ ಸವಿ ನೆನಪೆ - ಅನುರಾಗ ಬಂಧನ, ಮನದ ಮಾತಿಗೆ ಮೌಲ ಬೇಲಿ - ನಂದಗೋಕುಲ, ಬಾರೇ ಬಾರೇ ಚಂದದ ಚಲುವಿನ ತಾರೆ - ನಾಗರಹಾವು ಹಾಗೂ ವಸಂತ ಬರೆದನು ಒಲವಿನ ಓಲೆ-ಬೆಸುಗೆ."ನಮನ"

ವಿಜಯ ನಾರಸಿಂಹ ಗೀತೆ ರಚಿಸಿದ ಕೆಲವು ಚಿತ್ರಗಳು

[ಬದಲಾಯಿಸಿ]

ವಿಜಯ ನಾರಸಿಂಹ ಅವರು ೨೦೦೧,ಅಕ್ಟೋಬರ್ ೩೧ರಂದು ಹೃದಯಾಘಾತದಿಂದ ನಿಧನರಾದರು.

ಇತರ ವಿಷಯಗಳು

[ಬದಲಾಯಿಸಿ]

ಜನರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಹಲವಾರು ಗೀತೆಗಳನ್ನು ರಚಿಸಿರುವ ವಿಜಯ ನಾರಸಿಂಹ ಅವರಿಗೆ ರಾಜ್ಯ ಸರಕಾರವಾಗಲೀ,ಚಿತ್ರರಂಗದಿಂದಾಗಲೀ ಯಾವುದೇ ಪ್ರಶಸ್ತಿ ಪುರಸ್ಕಾರ ದೊರಕಿರಲಿಲ್ಲವೆಂಬುದು ಕಟು ಸತ್ಯ

ಆಕರಗಳು

[ಬದಲಾಯಿಸಿ]

ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ