ಗಂದಿಗೆಗಾರನ ತೂಕ
ಗೋಚರ
ಗಂದಿಗೆಗಾರನ ತೂಕ ಎನ್ನುವುದು ಚಿನ್ನ, ಬೆಳ್ಳಿ, ವಜ್ರ, ಹರಳು, ಮದ್ದುಗಳ ಹೊರತಾಗಿ ಸಾಮಾನುಗಳನ್ನು ತೂಗಲು ಮುಖ್ಯವಾಗಿ ಇಂಗ್ಲೆಂಡ್, ಅಮೆರಿಕಗಳಲ್ಲಿ ಬಳಸುತ್ತಿದ್ದ ತೂಕ ಪದ್ಧತಿ (ಆವರ್ಡಪೋಯಿಸ್ ವೆಯ್ಟ್). ಇದರ ಮೂಲಮಾನ ತೂಕ ಒಂದು ಗ್ರೆಯ್ನು. ಒಂದು ಘನ ಅಂಗುಲದಷ್ಟು ನೀರು 252.458 ಗ್ರೆಯ್ನುಗಳು ತೂಗುತ್ತದೆ.[೧] ಇಂಥ 7000 ಗ್ರೆಯ್ನುಗಳು ಸೇರಿದರೆ ಗಂದಿಗೆಗಾರನ ಒಂದು ಪೌಂಡು ಆಗುತ್ತದೆ.[೨] ಒಂದು ಪೌಂಡಿನಲ್ಲಿ 16 ಔನ್ಸುಗಳು, ಒಂದು ಔನ್ಸಿನಲ್ಲಿ 16 ಡ್ರಾಮುಗಳೂ ಇರುವುವು. 14 ಪೌಂಡಿಗಳಿಗೆ ಒಂದು ಸ್ಟೋನು, 2 ಸ್ಟೋನುಗಳಿಗೆ ಒಂದು ಕ್ವಾರ್ಟರು, 4 ಕ್ವಾರ್ಟರುಗಳಿಗೆ ಒಂದು ಹಂಡ್ರಡ್‌ವೇಟ್, 20 ಹಂಡ್ರೆಡ್‌ವೇಟುಗಳಿಗೆ ಒಂದು ಟನ್ನೂ ಆಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Universal Dictionary of Weights and Measures. Baltimore. 1850. Retrieved 2016-09-23.
{{cite book}}
: CS1 maint: location missing publisher (link) - ↑ "Pound (Avoirdupois, pound-mass) to grain (Avoirdupois) conversion | Units of Mass".
ಹೊರಗಿನ ಕೊಂಡಿಗಳು
[ಬದಲಾಯಿಸಿ]- Chisholm, Hugh, ed. (1911). . Encyclopædia Britannica. Vol. 3 (11th ed.). Cambridge University Press. p. 66.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - A bronze Edward III standard weight of 14lb (1327-1377)
- A bronze Edward III standard weight of 91lb (1/4 sack) (1327-1377)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: