ಅವನೇ ಶ್ರೀಮನ್ನಾರಾಯಣ (ಚಲನಚಿತ್ರ)
ಅವನೇ ಶ್ರೀಮನ್ನಾರಾಯಣ | |
---|---|
ನಿರ್ದೇಶನ | ಸಚಿನ್ ರವಿ |
ನಿರ್ಮಾಪಕ | ಹೆಚ್.ಕೆ ಪ್ರಕಾಶ್ ಪುಷ್ಕರ್ ಮಲ್ಲಿಕಾರ್ಜುನಯ್ಯ |
ಲೇಖಕ | ರಕ್ಷಿತ್ ಶೆಟ್ಟಿ ಚಂದ್ರಜಿತ್ ಬಳಿಯಪ್ಪ ಅಭಿಜಿತ್ ಮಹೇಶ್ ಅನಿರುಧ್ ನಾಗಾರ್ಜುನ್ ಶರ್ಮ ಅಭಿಲಾಷ್ |
ಚಿತ್ರಕಥೆ | ಸಚಿನ್ ರವಿ |
ಪಾತ್ರವರ್ಗ |
|
ಸಂಗೀತ |
|
ಛಾಯಾಗ್ರಹಣ | ಕರ್ಮ ಚಾವ್ಲ |
ಸಂಕಲನ | ಸಚಿನ್ |
ಸ್ಟುಡಿಯೋ | ಶ್ರೀ ದೇವಿ ಎಂಟರ್ಪೈಸಸ್ ಪುಷ್ಕರ್ ಫಿಲ್ಮ್ಸ್ ಪರ್ಮ ಸ್ಟುಡಿಯೋ |
ವಿತರಕರು | ಪುಷ್ಕರ್ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | ೨೭ ಡಿಸೆಂಬರ್, ೨೦೧೯ |
ದೇಶ | ಭಾರತ |
ಭಾಷೆ | ಕನ್ನಡ |
ಅವನೇ ಶ್ರೀಮನ್ನಾರಾಯಣ ಸಚಿನ್ ರವಿಯವರ ನಿರ್ದೇಶನದಲ್ಲಿ ಬಿಡುಗಡೆಯಾದ ಕನ್ನಡ ಫ್ಯಾಂಟಸಿ ಹಾಗು ಸಾಹಸಭರಿತ ಚಲನಚಿತ್ರ[೧]. ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗು ಎಚ್.ಕೆ ಪ್ರಕಾಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗು ಸಾನ್ವಿ ಶ್ರೀವಾಸ್ತವ್ ಅವರು ಕಾಣಿಸಿಕೊಂಡಿದ್ದಾರೆ. ಮೂಲ ಭಾಷೆ ಕನ್ನಡದ ಜೊತೆಗೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಆರಂಭದಲ್ಲಿ, ಚಿತ್ರತಂಡ ಈ ಚಿತ್ರವನ್ನು ಎಲ್ಲಾ ಬಾಷೆಗಳಲ್ಲಿ ಏಕಕಾಲದಲ್ಲಿ ೨೭ ಡಿಸೆಂಬರ್ ೨೦೧೯ ರಂದು ಬಿಡುಗಡೆ ಮಾಡಲು ಬಯಸಿದ್ದರು. ತದನಂತರ ಪೈರಸಿಯನ್ನು ತಡೆಗಟ್ಟಲು ಕೇವಲ ಕನ್ನಡ ಅವೃತ್ತಿಯನ್ನು ೨೭ರಂದು ಬಿಡುಗಡೆ ಮಾಡಲಾಗಿತ್ತು. ಹಾಗೆ ತೆಲುಗು ಭಾಷೆಯಲ್ಲಿ ಈ ಚಿತ್ರ ಜನವರಿ ೧, ೨೦೨೦ರಂದು ಬಿಡುಗಡೆಯಾಗಿದೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಜನವರಿ ೩ರಂದು ಬಿಡುಗಡೆಯಾಗಿದೆ. ಹಿಂದಿಯಲ್ಲಿ ಜನವರಿ ೧೭ಕ್ಕೆ ಬಿಡುಗಡೆಯಾಗಲಿದೆ.[೨] [೩][೪]
ಸಾರಾಂಶ
[ಬದಲಾಯಿಸಿ]ಅಮರಾವತಿ ಎನ್ನುವ ಊರಿನ ರಹಸ್ಯ ತಿಳಿಯುವುದರಲ್ಲಿ ಹೊಸದಾಗಿ ನೇಮಕವಾದ ಪೊಲೀಸ್ ಅಧಿಕಾರಿ ನಾರಾಯಣ(ರಕ್ಷಿತ್ ಶೆಟ್ಟಿ),ಜಯರಾಮ ಹಾಗು ತುಕರಾಮ ಎನ್ನುವ ವ್ಯಕ್ತಿಗಳೊಡನೆ ಹೋರಾಡಿ ಸೋಲಿಸುತ್ತಾನೋ ಇಲ್ಲವೋ ಎನ್ನುವುದು ಈ ಚಿತ್ರದ ಸಾರಾಂಶ.[೫]
ಪಾತ್ರಗಳು
[ಬದಲಾಯಿಸಿ]- ರಕ್ಷಿತ್ ಶೆಟ್ಟಿ- ನಾರಾಯಣ ಪಾತ್ರದಲ್ಲಿ
- ಸಾನ್ವಿ ಶ್ರೀವಾಸ್ತವ- ಲಕ್ಷ್ಮಿ ಪಾತ್ರದಲ್ಲಿ
- ಅಚ್ಯುತ್ ಕುಮಾರ್- ಅಚ್ಯುತ್ತಣ್ಣ
- ಬಾಲಾಜಿ ಮನೋಹರ್- ಜಯರಾಮ ಪಾತ್ರದಲ್ಲಿ
- ಪ್ರಮೋದ್ ಶೆಟ್ಟಿ- ತುಕರಾಮ
- ರಿಷಬ್ ಶೆಟ್ಟಿ- ಅಥಿತಿ ಪಾತ್ರದಲ್ಲಿ
- ಗೋಪಾಲ್ ಕ್ರಿಷ್ಣ ದೇಶ್ಪಾಂಡೆ
- ಮದುಸುದನ್ ರಾವ್
- ಗೌತಮ್ ರಾಜ್
- ಸಲ್ಮಾನ್ ಅಹೆಮದ್
- ಅನಿರುದ್ ಮಹೇಶ್ [೬]
ತಯಾರಿಕೆ
[ಬದಲಾಯಿಸಿ]ಅವನೇ ಶ್ರೀಮನ್ನಾರಾಯಣ ಸಚಿನ್ ರವಿಯವರ ಚೊಚ್ಚಲ ಚಿತ್ರ. ರಕ್ಷಿತ್ ಇದರಲ್ಲಿ ಬಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಮೊದಲನೆಯ ಬಾರಿ ಕನ್ನಡ ಚಿತ್ರಕ್ಕೆ ಕಂಠ ನೀಡಿದ್ದಾರೆ.ಈ ಚಿತ್ರದಲ್ಲಿ ಕಾರ್ಮ್ ಚಾವ್ಲ ಅವರ ಕ್ಯಾಮರ ಕೆಲಸವಿದೆ. ಚರಣ್ ರಾಜ್ ಸಂಗೀತ ಸಂಯೋಜನೆ ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಈ ಸಿನಿಮಾಕ್ಕಿದೆ.[೭]
ಹಾಡುಗಳು
[ಬದಲಾಯಿಸಿ]- ಹ್ಯಾಂಡ್ಸ್ ಅಪ್<ref>https://www.kannadaprabha.com/cinema/news/2019/dec/11/hands-up-first-single-from-rakshit-shetty-starrer-asn-to-be-released-on-december-12-407497.html<ref>
- ನಾರಾಯಣ ನಾರಾಯಣ[ಶಾಶ್ವತವಾಗಿ ಮಡಿದ ಕೊಂಡಿ]
ಉಲ್ಲೇಖಗಳು
[ಬದಲಾಯಿಸಿ]- ↑ https://twitter.com/onlynikil/status/1200097479531696128?s=19
- ↑ https://www.newindianexpress.com/entertainment/kannada/2019/dec/17/avane-srimannarayana-to-get-multiple-release-dates-2077030.html
- ↑ "ಆರ್ಕೈವ್ ನಕಲು". Archived from the original on 11 ಡಿಸೆಂಬರ್ 2019. Retrieved 11 ಡಿಸೆಂಬರ್ 2019.
- ↑ https://m.dailyhunt.in/news/india/kannada/news18+kannada-epaper-nwseika/asntrailer+aidu+bhaashegalalli+saddu+maadalu+bandha+yaaravanu+avane+shrimannaaraayana-newsid-150167912
- ↑ https://www.facebook.com/AvaneSrimannarayana/
- ↑ https://en.wikipedia.org/wiki/Avane_Srimannarayana
- ↑ https://kannada.news18.com/news/entertainment/avane-srimannarayana-trailer-gets-good-reaction-from-audience-rmd-300261.html
- Short description is different from Wikidata
- Use dmy dates from November 2018
- Articles with invalid date parameter in template
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಚಲನಚಿತ್ರ
- ವರ್ಷ-೨೦೧೯ ಕನ್ನಡಚಿತ್ರಗಳು
- ಕನ್ನಡ ಚಲನಚಿತ್ರಗಳು