ವಿಷಯಕ್ಕೆ ಹೋಗು

ರೇಡಿಯೋ ದೂರದರ್ಶಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾರ್ಕ್ಸ್ ವೀಕ್ಷಣಾಲಯದಲ್ಲಿರುವ ೬೪ ಮೀಟರ್ ರೇಡಿಯೋ ದೂರದರ್ಶಕ

ರೇಡಿಯೋ ದೂರದರ್ಶಕ ಎನ್ನುವುದು ಆಕಾಶದಿಂದ ಭೂಮಿಗೆ ಬರುವ ರೇಡಿಯೋ ಅಲೆಗಳನ್ನು ಸಂಗ್ರಹಿಸಿ, ನಾಭಿಸಿ (ಫೋಕಸ್) ವಿಸರಣಾಕರವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ನೆರವಾಗುತ್ತವೆ. ಇದು ಒಂದು ವಿಶೇಷೀಕೃತ ಆಂಟೇನಾ ಮತ್ತು ರೇಡಿಯೋ ರಿಸೀವರ್ ಆಗಿದೆ.[][][] ಈ ಕ್ರಿಯೆ ದೃಕ್ ದೂರದರ್ಶಕವು ಬೆಳಕಿನ ಕಿರಣಗಳನ್ನು ನಾಭಿಸುವ ಕ್ರಿಯೆಯಂತೆಯೇ ಉಂಟು-ಅಲ್ಲಿ ಬೆಳಕಿನ ಕಿರಣಗಳು ಇಲ್ಲಿ ರೇಡಿಯೋ ಅಲೆಗಳು. ರೇಡಿಯೋ ಟೆಲಿಸ್ಕೋಪುಗಳ ನೆರವಿನಿಂದ ವಿಶ್ವದ ರೇಡಿಯೊ ಚಿತ್ರವನ್ನು ರಚಿಸುವುದು ಸಾಧ್ಯವಾಗಿದೆ. ಪರವಲಯಾಕಾರದ ಪ್ರತಿಫಲನಕಾರಿ ಈ ಉಪಕರಣದ ಪ್ರಮುಖ ಭಾಗ. ದೊಡ್ಡ ಕುಕ್ಕೆಯನ್ನೊ ಬೋಗುಣಿಯನ್ನೊ ಆಕಾಶದೆಡೆಗೆ ಮುಖಮಾಡಿ ಹಿಡಿದಿರುವಂತೆ ಇದು ಕಾಣುತ್ತದೆ. ಪ್ರಪಂಚದ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ಇಂಗ್ಲೆಂಡಿನ ಜೋಡ್ರೆಲ್ ಬ್ಯಾಂಕಿನಲ್ಲಿದೆ (ಲವೆಲ್ ದೂರದರ್ಶಕ). ಇದರ ಪರವಲಯಾಕಾರದ ಪ್ರತಿಫಲನಕಾರಿಯ ವ್ಯಾಸ 250'.[]

ಉಲ್ಲೇಖಗಳು

[ಬದಲಾಯಿಸಿ]
  1. Marr, Jonathan M.; Snell, Ronald L.; Kurtz, Stanley E. (2015). Fundamentals of Radio Astronomy: Observational Methods. CRC Press. pp. 21–24. ISBN 978-1498770194.
  2. Britannica Concise Encyclopedia. Encyclopædia Britannica, Inc. 2008. p. 1583. ISBN 978-1593394929.
  3. Verschuur, Gerrit (2007). The Invisible Universe: The Story of Radio Astronomy (2 ed.). Springer Science & Business Media. pp. 8–10. ISBN 978-0387683607.
  4. "On This Day – 14 March 1960: Radio telescope makes space history". BBC News. 14 March 1960. Retrieved 2007-05-11.