ಬುಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುಟ್ಟಿಯು (ಗೂಡೆ, ಕುಕ್ಕೆ) ಸಾಂಪ್ರದಾಯಿಕವಾಗಿ ಬಿರುಸಾದ ನಾರುಗಳಿಂದ ನಿರ್ಮಿಸಲಾದ ಧಾರಕ. ಈ ನಾರುಗಳನ್ನು ಮರದ ದಬ್ಬೆಗಳು, ಬಳ್ಳಿಗಳು, ಮತ್ತು ಬೆತ್ತ ಸೇರಿದಂತೆ, ಅನೇಕ ವಸ್ತುಗಳಿಂದ ತಯಾರಿಸಬಹುದು. ಬಹುತೇಕ ಬುಟ್ಟಿಗಳನ್ನು ಸಸ್ಯ ವಸ್ತುಗಳಿಂದ ತಯಾರಿಸಲಾಗುತ್ತದಾದರೂ, ಜವಿ/ಜಮಿ, ತಿಮಿಯೆಲುಬು, ಅಥವಾ ಲೋಹದ ತಂತಿಯಂತಹ ಇತರ ವಸ್ತುಗಳನ್ನು ಬಳಸಬಹುದು. ಸಾಮಾನ್ಯವಾಗಿ ಬುಟ್ಟಿಗಳನ್ನು ಕೈಯಿಂದ ಹೆಣೆಯಲಾಗುತ್ತದೆ. ಕೆಲವು ಬುಟ್ಟಿಗಳಿಗೆ ಮುಚ್ಚಳವನ್ನು ಕೂಡಿಸಲಾಗುತ್ತದೆ, ಇತರ ಬುಟ್ಟಿಗಳನ್ನು ಹಾಗೆಯೇ ತೆರೆದು ಬಿಡಲಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

ಬುಟ್ಟಿಗಳು ಉಪಯುಕ್ತವಾದ ಜೊತೆಗೆ ಸೌಂದರ್ಯದ ಉದ್ದೇಶಗಳಿಗೆ ಕೆಲಸಕ್ಕೆ ಬರುತ್ತವೆ. ಕೆಲವು ಬುಟ್ಟಿಗಳು ವಿಧ್ಯುಕ್ತ, ಅಂದರೆ ಧಾರ್ಮಿಕ ಸ್ವರೂಪದ್ದಾಗಿರುತ್ತವೆ.[೧] ಸಾಮಾನ್ಯವಾಗಿ ಬುಟ್ಟಿಗಳನ್ನು ಶೇಖರಣೆ ಹಾಗೂ ಸಾಗಣೆಗಾಗಿ ಬಳಸಲಾಗುತ್ತದಾದರೂ, ವಿಶೇಷೀಕೃತ ಬುಟ್ಟಿಗಳನ್ನು ಜರಡಿಗಳಾಗಿ, ಅಡುಗೆಗಾಗಿ, ಬೀಜಗಳು ಹಾಗೂ ಧಾನ್ಯಗಳನ್ನು ಸಂಸ್ಕರಿಸಲು, ಜೂಜು ಕಾಯಿಗಳನ್ನು ಹಾರಿಸಲು, ಗಿಲಿಕೆಗಳು, ಬೀಸಣಿಗೆಗಳು, ಮೀನು ಬಲೆಗಳು, ದೋಬಿಖಾನೆಯಲ್ಲಿ, ಮತ್ತು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Hopi Basketry." Archived 2012-02-24 ವೇಬ್ಯಾಕ್ ಮೆಷಿನ್ ನಲ್ಲಿ. Northern Arizona Native American Culture Trail. (retrieved 13 Nov 2011)
"https://kn.wikipedia.org/w/index.php?title=ಬುಟ್ಟಿ&oldid=893985" ಇಂದ ಪಡೆಯಲ್ಪಟ್ಟಿದೆ