ವಿಷಯಕ್ಕೆ ಹೋಗು

ರಘುರಾಮ್ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಘುರಾಮ್ ಭಟ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಅದ್ವಾಯಿ ರಘುರಾಮ್ ಭಟ್
ಹುಟ್ಟು (1958-04-16) ೧೬ ಏಪ್ರಿಲ್ ೧೯೫೮ (ವಯಸ್ಸು ೬೬)
ಪುತ್ತೂರು, ಮೈಸೂರು ರಾಜ್ಯ, ಭಾರತ
ಬ್ಯಾಟಿಂಗ್ಎಡಗೈ
ಬೌಲಿಂಗ್ಎಡಗೈ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೧೬೫)೫ ಅಕ್ಟೋಬರ್ ೧೯೮೩ v ಪಾಕಿಸ್ತಾನ
ಕೊನೆಯ ಟೆಸ್ಟ್೨೧ ಅಕ್ಟೋಬರ್ ೧೯೮೩ v ವೆಸ್ಟ್ ಇಂಡೀಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಪ್ರಥಮ ದರ್ಜೆ
ಪಂದ್ಯಗಳು ೮೨
ಗಳಿಸಿದ ರನ್ಗಳು ೭೫೪
ಬ್ಯಾಟಿಂಗ್ ಸರಾಸರಿ ೩.೦೦ ೧೩.೦೦
೧೦೦/೫೦ ೦/೦ ೦/೦
Top score ೪೭*
ಎಸೆತಗಳು ೪೩೮ ೨೦೮೩೭
ವಿಕೆಟ್‌ಗಳು ೩೭೪
ಬೌಲಿಂಗ್ ಸರಾಸರಿ ೩೭.೭೫ ೨೨.೬೬
ಐದು ವಿಕೆಟ್ ಗಳಿಕೆ ೨೪
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೬೫ ೮/೪೩
ಹಿಡಿತಗಳು/ ಸ್ಟಂಪಿಂಗ್‌ ೦/– ೪೧/–
ಮೂಲ: CricInfo, ೩ ಜೂನ್ ೨೦೨೨

ಅದ್ವಾಯಿ ರಘುರಾಮ್ ಭಟ್ (ಜನನ ೧೬ ಏಪ್ರಿಲ್ ೧೯೫೮) ೧೯೮೩ ರಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ ಮಾಜಿ ಭಾರತೀಯ ಕ್ರಿಕೆಟಿಗ.

ದೇಶೀಯ ವೃತ್ತಿ

[ಬದಲಾಯಿಸಿ]

ರಘುರಾಮ್ ಭಟ್ ಇವರು ಶಾಲಾ ಮಟ್ಟದ ಕ್ರಿಕೆಟ್ ಆಟದಲ್ಲಿ ಉತ್ತಮ ಸ್ಥಾನ ಗಳಿಸಿದರು. ೧೯೭೯-೮೦ರಲ್ಲಿ ಇವರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮಿಳುನಾಡಿನ ವಿರುದ್ಧ ನಡೆದ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿ ಅದರಲ್ಲಿ ಯಶಸ್ಸನ್ನು ಕಂಡುಕೊಂಡರು.[] ೬ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಅವರು ಕೇರಳದ ವಿರುದ್ಧ ದಾವಣಗೆರೆಯಲ್ಲಿ ೯ ವಿಕೆಟ್‌ಗಳನ್ನು ಗಳಿಸಿದರು.[] ಪಂಜಾಬ್ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ೯ ವಿಕೆಟ್‌ಗಳನ್ನು ಕಬಳಿಸಿ ಕರ್ನಾಟಕವನ್ನು ಸೆಮಿಫೈನಲ್ ತಲುಪಲು ಸಹಾಯ ಮಾಡಿದರು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣ

೧೯೮೧-೮೨ ಸೆಮಿಫೈನಲ್

[ಬದಲಾಯಿಸಿ]

ಬಾಂಬೆ ವಿರುದ್ಧದ ನಡೆದ ಸೆಮಿಫೈನಲ್‌ನಲ್ಲಿ ರಘುರಾಮ್ ಭಟ್ ಅವರು ನಿರ್ವಹಿಸಿದ ಪಾತ್ರ ಮಹತ್ವದಾಗಿದೆ. ೧೯೮೧-೮೨ ರ ರಣಜಿ ಸೆಮಿಫೈನಲ್ ಪಂದ್ಯವನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬೆ ತಂಡ ಮತ್ತು ಕರ್ನಾಟಕದ ನಡುವೆ ಆಡಲಾಯಿತು. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಅಶೋಕ್ ಮಂಕಡ್, ಸಂದೀಪ್ ಪಾಟೀಲ್, ರವಿಶಾಸ್ತ್ರಿ ಮತ್ತು ಬಲ್ವಿಂದರ್ ಸಂಧು ಸೇರಿದಂತೆ ಹಲವರು ಬಾಂಬೆ ಕ್ರಿಕೆಟ್ ತಂಡದಲ್ಲಿ ಭಾಗವಹಿಸಿದರು.

ಸುನಿಲ್ ಗವಾಸ್ಕರ್ ನಾಯಕತ್ವದಲ್ಲಿ ಬಾಂಬೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಗವಾಸ್ಕರ್ ಅವರು ಗುಲಾಮ್ ಪಾರ್ಕರ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದರು ಮತ್ತು ೬೨ ರನ್‍ಗಳನ್ನು ನೀಡಿದರು. ರಘುರಾಮ್ ಭಟ್ ಶೀಘ್ರದಲ್ಲೇ ಕಾರ್ಯಪ್ರವೃತ್ತರಾದರು ಮತ್ತು ೪೧ ರನ್‍ಗಳಿಸಿ ಗವಾಸ್ಕರ್ ಅವರನ್ನು ಔಟ್ ಮಾಡಿದರು. ನಂತರ ಅವರು ವೆಂಗ್ಸರ್ಕರ್ ಬೌಲಿಂಗ್ನಲ್ಲಿ ೮ ರನ್ ಗಳಿಸಿದರು. ಇವರು ಗುಲಾಮ್ ಪಾರ್ಕರ್ ಮತ್ತು ಸಂದೀಪ್ ಪಾಟೀಲ್ ನಡುವೆ ೧೦೧ ರನ್‍ ಗಳಿಸಿದರು. ರಘುರಾಮ್ ಭಟ್ ಅವರು ೧೨೩ ರನ್‌ಗಳಿಗೆ ೮ ವಿಕೆಟ್‌ಗಳನ್ನು ಪಡೆದರು.[]

ಸೆಮಿಫೈನಲ್ ನಂತರ

[ಬದಲಾಯಿಸಿ]

ಕರ್ನಾಟಕವು ಮೊದಲ ಇನ್ನಿಂಗ್ಸ್‌ನಲ್ಲಿ ೭೦೫ ರನ್ ಗಳಿಸುವ ಮೂಲಕ ದೆಹಲಿಯ ವಿರುದ್ಧ ಫೈನಲ್‌ನಲ್ಲಿ ಸೋತಿತು.[] ಕರ್ನಾಟಕವು ೩ ಬಾರಿ ರಣಜಿ ಟ್ರೋಫಿಯನ್ನು ಗೆಲ್ಲಲು ಇವರು ಸಹಾಯ ಮಾಡಿದ್ದರು. ಅವರು ಫೈನಲ್‌ನಲ್ಲಿ ೪ ವಿಕೆಟ್‌ಗಳನ್ನು ಪಡೆದರು ಮತ್ತು ಅದ್ಭುತವಾದ ರಣಜಿ ಟ್ರೋಫಿ ಅಭಿಯಾನವನ್ನು ಮುಚ್ಚಿದರು.[] ಅವರು ಆ ವರ್ಷ ಇರಾನಿ ಟ್ರೋಫಿಯಲ್ಲಿ ಆಡಿದರು ಮತ್ತು ಆಟದಲ್ಲಿ ೭ ವಿಕೆಟ್‌ಗಳನ್ನು ಪಡೆದರು.[]

ಅಂತರರಾಷ್ಟ್ರೀಯ ವೃತ್ತಿಜೀವನ

[ಬದಲಾಯಿಸಿ]

ರಘುರಾಮ್ ಭಟ್ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಆಡಿದರು.[] ರಘುರಾಮ್ ಭಟ್ ಅವರ ಮುಂದಿನ ಟೆಸ್ಟ್ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಿತು.[] ಇದು ಭಟ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತದೆ.

ದೇಶೀಯ ವೃತ್ತಿಜೀವನ ನಂತರ

[ಬದಲಾಯಿಸಿ]

ರಘುರಾಮ್ ಭಟ್ ಕರ್ನಾಟಕದ ಅಚಲ ವ್ಯಕ್ತಿಗಳಲ್ಲಿ ಒಬ್ಬರು. ಅವರು ಬಿ.ವಿಜಯಕೃಷ್ಣ ಅವರೊಂದಿಗೆ ಕರ್ನಾಟಕದ ಬೌಲಿಂಗ್ ಕೆಲಸವನ್ನು ಮಾಡುತ್ತಿದ್ದರು. ಅವರು ರಣಜಿ ಟ್ರೋಫಿಯಲ್ಲಿ ೩೪೩ ವಿಕೆಟ್‌ಗಳನ್ನು ಗಳಿಸಿದರು. ೧೯೯೨-೯೩ರ ಮಧ್ಯಪ್ರದೇಶ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್‌ನ ನಂತರ ಇವರು ನಿವೃತ್ತರಾದರು.[]

ಕ್ರಿಕೆಟ್ ನಂತರ

[ಬದಲಾಯಿಸಿ]

ಇವರು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅಂಪೈರ್, ನಿರ್ವಾಹಕರು ಮತ್ತು ತರಬೇತುದಾರರಾಗಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜುಲೈ ೨೦೧೧ ರಲ್ಲಿ, ಇವರು ಗೋವಾ ಕ್ರಿಕೆಟ್ ತಂಡದ ತರಬೇತುದಾರರಾಗಿ ನೇಮಕಗೊಂಡರು.[೧೦]

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಕನ್ನಡ ಚಲನಚಿತ್ರ ಗಣೇಶನ ಮದುವೆಯಲ್ಲಿ ರಘುರಾಮ್ ಭಟ್ ಅವರ ವಿರುದ್ಧ ಸುನಿಲ್ ಗವಾಸ್ಕರ್ ಎಡಗೈ ಬ್ಯಾಟ್ ಮಾಡಿದ ಘಟನೆಯ ಉಲ್ಲೇಖವನ್ನು ಮಾಡಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]