ವಿಷಯಕ್ಕೆ ಹೋಗು

ತಾನ್ ಚುಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾನ್ ಚುಂಗ್
ಜನನ(೧೯೨೯-೦೪-೧೮)೧೮ ಏಪ್ರಿಲ್ ೧೯೨೯
ಮತುಬಹಾರ್, ಜಹೋರ್, ಮಲಯ
ವೃತ್ತಿವಿದ್ವಾಂಸ, ಚೀನಾ-ಭಾರತ ಸಂಬಂಧಗಳ ತಜ್ಞ
ಪ್ರಮುಖ ಪ್ರಶಸ್ತಿ(ಗಳು)೨೦೧೦: ಪದ್ಮಭೂಷಣ
ಬಾಳ ಸಂಗಾತಿಹುವಾಂಗ್ ಇ-ಶು

ತಾನ್ ಚುಂಗ್ (ಜನನ ೧೮ ಏಪ್ರಿಲ್ ೧೯೨೯, ಮತುಬಹಾರ್, ಜಹೋರ್[]) ಅವರು ಚೀನಾದ ಇತಿಹಾಸ, ಚೀನಾ-ಭಾರತೀಯ ಸಂಬಂಧಗಳು ಮತ್ತು ಸಾಂಸ್ಕೃತಿಕ ವಿನಿಮಯದ ಬಗ್ಗೆ ಅಧಿಕಾರ ಹೊಂದಿದ್ದಾರೆ. ಅವರು ಸುಮಾರು ಅರ್ಧ ಶತಮಾನದಿಂದ ಭಾರತದಲ್ಲಿ ಚೀನೀ ಸಾಂಸ್ಕೃತಿಕ ಅಧ್ಯಯನದ ಮುಖ್ಯಸ್ಥರಾಗಿದ್ದಾರೆ. []

ಆರಂಭಿಕ ಜೀವನ

[ಬದಲಾಯಿಸಿ]

ಚೀನಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ೧೯೫೫ ರಲ್ಲಿ ಶಾಂತಿನಿಕೇತನಕ್ಕೆ ಬಂದರು. ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮುಗಿಸಿದ ನಂತರ, ಖಡಕ್‌ವಾಸ್ಲಾದ ಎನ್‌ಡಿಎಯಲ್ಲಿ ಬೋಧಕರಾಗಿದ್ದು, ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಚೈನೀಸ್ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಮತ್ತು ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಚೀನೀ ಮತ್ತು ಜಪಾನೀಸ್ ಅಧ್ಯಯನ ವಿಭಾಗದ ಮುಖ್ಯಸ್ಥರಾದರು. ಅವರ ಪತ್ನಿ ಹುವಾಂಗ್ ಇ-ಶು, ದೆಹಲಿ ವಿಶ್ವವಿದ್ಯಾಲಯದಲ್ಲಿ ಚೀನೀ ಭಾಷೆಯನ್ನು ಕಲಿಸುತ್ತಿದ್ದರು.[]

ವೃತ್ತಿ

[ಬದಲಾಯಿಸಿ]

ತಾನ್ ಚುಂಗ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‍ಯು) ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಬೋಧಕರಾಗಿದ್ದರು. ಅವರ ತಂದೆ, ತಾನ್ ಯುನ್-ಶಾನ್ (೧೮೯೮-೧೯೮೩), ಶಾಂತಿನಿಕೇತನದಲ್ಲಿ ಚೀನ ಭವನದ ಸ್ಥಾಪಕರಾಗಿದ್ದರು. ಹಾಗೂ ೧೯೩೦ ಮತ್ತು ೧೯೪೦ ದಶಕದ ಅವಧಿಯಲ್ಲಿ ರಾಷ್ಟ್ರೀಯವಾದಿ ಚೀನಾದ ಜೊತೆಗೆ ಭಾರತೀಯ ಸ್ವಾತಂತ್ರ್ಯ ಚಳುವಳಿಯೊಂದಿಗಿನ ಪರಸ್ಪರ ಸಂವಾಹಕರಾಗಿ ಪ್ರಮುಖ ವ್ಯಕ್ತಿಯಾಗಿದ್ದರು.[] ೧೯೯೪ ರಲ್ಲಿ ಜೆಎನ್‍ಯುನಿಂದ ತಾನ್ ಚುಂಗ್ ಅವರ ನಿವೃತ್ತಿಯ ನಂತರ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ನವ ದೆಹಲಿ, ಇಲ್ಲಿ ಸಂಶೋಧನಾ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ಪ್ರಸ್ತುತ ಇವರು ಯುನೈಟೆಡ್ ಸ್ಟೇಟ್ಸ್‌ನ ಚಿಕಾಗೊದಲ್ಲಿ ನೆಲೆಸಿರುವರು. ಅವರು ಐಸಿಎಸ್ (ಇನ್ಸ್ಟಿಟ್ಯೂಟ್ ಆಫ್ ಚೈನೀಸ್ ಸ್ಟಡೀಸ್), ನವದೆಹಲಿಯ ಗೌರವ ನಿರ್ದೇಶಕರಾಗಿದ್ದಾರೆ.

ಅವರ ಗೌರವಾರ್ಥವಾಗಿ, ಅವರ ೮೦ ನೇ ಜನ್ಮದಿನದ ಸಂದರ್ಭದಲ್ಲಿ, ಡಿಸೆಂಬರ್ ೨೦೦೮ ರಲ್ಲಿ ನವದೆಹಲಿಯಲ್ಲಿ ಸಮ್ಮೇಳನವನ್ನು ನಡೆಸಲಾಯಿತು.[]

ಪ್ರಶಸ್ತಿಗಳು

[ಬದಲಾಯಿಸಿ]

೨೦೧೦ ರಲ್ಲಿ, ಅವರಿಗೆ ಸರ್ಕಾರವು ಭಾರತ ಸರ್ಕಾರದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ನೀಡಿ ಗೌರವಿಸಿತು.[] ಮತ್ತು ಅದೇ ವರ್ಷದಲ್ಲಿ ಚೀನಾದ ಪ್ರಧಾನಿ ವೆನ್ ಜಿಯಾಬಾವೊ ಅವರಿಂದ ಚೀನಾ-ಭಾರತ ಸ್ನೇಹ ಪ್ರಶಸ್ತಿಯನ್ನು ಪಡೆದರು.[]

ಜೂನ್ ೨೦೧೩ ರಲ್ಲಿ, ಯುನ್ನಾನ್ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸ್ ಸಂಸ್ಥೆಯು ಅವರಿಗೆ ಅಕಾಡೆಮಿಯ ಗೌರವ ಫೆಲೋಶಿಪ್ ನೀಡಿತು.[]

ಡಿಸೆಂಬರ್ ೨೦೧೩ ರಲ್ಲಿ, ವಿಶ್ವಭಾರತಿ ವಿಶ್ವವಿದ್ಯಾಲಯವು ಪ್ರೊಫೆಸರ್ ತಾನ್ ಚುಂಗ್ ಅವರಿಗೆ ದೇಶಿಕೋತ್ತಮ (ಡಿ.ಲಿಟ್ ಮತ್ತು ವಿಶ್ವವಿದ್ಯಾಲಯದ ಅತ್ಯುನ್ನತ ಗೌರವ) ಪ್ರಶಸ್ತಿಯನ್ನು ನೀಡಿತು.

ಆಗಸ್ಟ್ ೨೦೧೮ ರಲ್ಲಿ, ಚೀನಾದ ಸೇಜ್ ಸಂಸ್ಥೆಯು ತಾನ್‍ ಚುಂಗ್‍ ಅವರ ಚೀನಾ: ಎ ೫,೦೦೦ ಇಯರ್ ಒಡಿಸ್ಸಿ ಎಂಬ ಪುಸ್ತಕವನ್ನು ಪ್ರಕಟಿಸಿದರು ಮತ್ತು ವಿಶ್ವದ ಪ್ರಮುಖ ವಿದ್ವಾಂಸರಿಂದ ಅತ್ಯುತ್ತಮ ವಿಮರ್ಶೆಗಳನ್ನು ಪಡೆದಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Chung Tan (ed.), In the Footsteps of Xuanzang: Tan Yun-shan and India (Gyan Books, 1999; ISBN 8121206308), p. 4.
  2. "New Delhi News : A doyen of Chinese cultural studies". The Hindu. Chennai, India. 8 December 2008. Archived from the original on 3 November 2012. Retrieved 2009-02-02.
  3. "In the Footsteps of Zuangzang: Tan Yun-Shan and India". Life sketch of Tan Yun-Shan by Tan Lee. Indira Gandhi National Centre for Arts. Retrieved 17 August 2019.
  4. Tsui, B. (2010). "The Plea for Asia--Tan Yunshan, Pan-Asianism and Sino-Indian Relations". China Report. 46 (4): 353–370. doi:10.1177/000944551104600403.
  5. The Hindu. Chennai, India http://blogs.thehindu.com/delhi/?p=8163. {{cite news}}: Missing or empty |title= (help)
  6. "This Year's Padma Awards announced" (Press release). Ministry of Home Affairs. 25 January 2010. Retrieved 25 January 2010.
  7. http://www.ndtv.com/article/india/karan-singh-turns-down-china-award-72856. {{cite news}}: Missing or empty |title= (help)
  8. "我院授予谭中教授荣誉院士称号" (in ಚೈನೀಸ್). Yunnan Academy of Social Sciences. 13 June 2013. Retrieved 29 January 2019.
  9. https://www.amazon.co.uk/China-000-year-Odyssey-Tan-Chung/dp/9352807243