ವಿಷಯಕ್ಕೆ ಹೋಗು

ಸದಸ್ಯ:Pavanaja/ಮಿಲಿಂದ ಚಿತ್ತಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮಿಲಿಂದ ಚಿತ್ತಾಲ
ಹಿನ್ನೆಲೆ ಮಾಹಿತಿ
ಜನ್ಮನಾಮಮಿಲಿಂದ ಚಿತ್ತಾಲ
ಜನನ (1959-07-19) ೧೯ ಜುಲೈ ೧೯೫೯ (ವಯಸ್ಸು ೬೫)
ಕಾರವಾರ, ಕರ್ನಾಟಕ, ಭಾರತ
ಮೂಲಸ್ಥಳಮುಂಬಯಿ, ಮಹಾರಾಷ್ಟ್ರ, ಭಾರತ
ಸಂಗೀತ ಶೈಲಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕ, ಚಾರ್ಟರ್ಡ್ ಅಕೌಂಟೆಂಟ್
ಅಧೀಕೃತ ಜಾಲತಾಣmilindchittal.com


ಮಿಲಿಂದ ಚಿತ್ತಾಲ ಒಬ್ಬ ಭಾರತೀಯ ಶಾಸ್ತ್ರೀಯ ಗಾಯಕ. [] [] [] ಚಿತ್ತಾಲರು ಕನ್ನಡದ ಲೇಖಕ ಯಶವಂತ ಚಿತ್ತಾಲರ ಮಗ. ಅವರು ಕಿರಾನಾ ಘರಾನಾದ ಫಿರೋಜ್ ದಸ್ತೂರ್ ಅವರಿಂದ ತರಬೇತಿ ಪಡೆದರು. ಅವರು ಅರ್ಹ ಚಾರ್ಟರ್ಡ್ ಅಕೌಂಟೆಂಟ್ ಕೂಡ ಆಗಿದ್ದಾರೆ. []

ವೃತ್ತಿ

[ಬದಲಾಯಿಸಿ]

ಚಿತ್ತಾಲರ ಭಕ್ತಿಗೀತೆಯ ಆಲ್ಬಂ ಎನ್‌ಚ್ಯಾಂಟಿಂಗ್ ರಾಮ್ ಭಜನ್ಸ್ ೨೦೧೫ ರಲ್ಲಿ ಅತ್ಯುತ್ತಮ ಭಕ್ತಿಗೀತೆಗಳ ಆಲ್ಬಮ್‌ ಎಂದು GiMA ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು [] [] ಅವರು ಭಾರತಾದ್ಯಂತ [] [] [] ಪ್ರಮುಖ ಸಂಗೀತ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ ಮತ್ತು ಅಮೆರಿಕ, ಕೆನಡಾ, ಇಂಗ್ಲೆಂಡ್, ನ್ಯೂಝೀಲ್ಯಾಂಡ್, ಯುಎಇ ಮತ್ತು ಓಮನ್‌ ಮೊದಲಾದ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. [೧೦] ಅವರು ಶ್ಯಾಮ್ ಬೆನಗಲ್ ನಿರ್ಮಿಸಿದ ದೂರದರ್ಶನ ಧಾರಾವಾಹಿ ದಿ ಡಿಸ್ಕವರಿ ಆಫ್ ಇಂಡಿಯಾಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. [೧೧] ಅವರು ೧೯೯೮ ರಲ್ಲಿ ಸುರಭಿ [೧೨] ಮತ್ತು ೨೦೧೧ರಲ್ಲಿ [೧೩] ರಲ್ಲಿ ಉಮಂಗ್ ದೂರದರ್ಶನ ಕಾರ್ಯಕ್ರಮ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ತಾಲ ಅವರು 3iii ಇಂಟರ್ನ್ಯಾಷನಲ್ ಇಂಡಿಯನ್ ಐಕಾನ್ ಸ್ಪರ್ಧೆಯ ತೀರ್ಪುಗಾರ ಸದಸ್ಯರಾಗಿದ್ದರು. [೧೪] ಮಿಲಿಂದ ಅವರು ಟೈಮ್ಸ್ ಮ್ಯೂಸಿಕ್, ಮ್ಯಾಗ್ನಾಸೌಂಡ್, ಮಿಸ್ಟಿಕಾ ಮ್ಯೂಸಿಕ್ ಮತ್ತು ಫೌಂಟೇನ್ ಮ್ಯೂಸಿಕ್ ನಂತಹ ಹಲವಾರು ಸಂಗೀತ ಕಂಪನಿಗಳಿಗೆ ಸಂಗೀತ ಆಲ್ಬಂಗಳನ್ನು ರೆಕಾರ್ಡ್ ಮಾಡಿದ್ದಾರೆ. [೧೫]

ಧ್ವನಿಮುದ್ರಿಕೆಗಳು

[ಬದಲಾಯಿಸಿ]
  • ‘Exuberance’-Ragas Marwa,Kalavati and Jogia by Mystica Music Co.
  • ‘Embracing Krishna’ –Bhajans CD by Mystica Music Co.
  • ‘Thumris of Kirana Gharana’ by Times Music
  • Classical -Ragas Darbari Kanada and Jog -Fountain Music
  • Classical -Ragas Puriya Kalyan and Miyan Ki Malhar-Fountain Music
  • Classical -Ragas Ahir Bhairav and Hindol-Fountain Music
  • Classical -Ragas Yaman Kalyan,Basant and Gujari Todi-Fountain Music
  • Classical – Ragas Malkauns,Abhogi Kanada and Shankara-Fountain Music
  • ‘Enchanting Ram bhajans’ –Bhajans CD by Mystica Music Co.

ಪ್ರಶಸ್ತಿಗಳು ಮತ್ತು ಬಹುಮಾನಗಳು

[ಬದಲಾಯಿಸಿ]

ಮಿಲಿಂದ ಚಿತ್ತಾಲ ಅವರು ೨೦೧೫ ರ ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಭಕ್ತಿಸಂಗೀತ ಆಲ್ಬಮ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು [೧೬]

ಉಲ್ಲೇಖಗಳು

[ಬದಲಾಯಿಸಿ]
  1. "Fanfare Joel Flegler". 1994.
  2. "Profiles in Creativity". 1992.
  3. Mohan Nadkarni (April 1999). The great masters: profiles in Hindustani classical vocal music. HarperCollins Publishers India. pp. 31, 396. ISBN 9788172232849.
  4. "Firoz Dastur ITCSRA". Archived from the original on 10 February 2015.
  5. "Best Devotional Album", "2015 Global Indian Film Award nominees". GIFA website.
  6. "Armaan Malik, Lagori and Kanishk Seth lead GiMA 2015 Non-Film Music Awards". Radio and Music, 10 February 2015.
  7. "Soak in the music at Gunidas sangeet sammellan DNA".
  8. "Harballabh music festival star performers".
  9. "Sawai Gandharva Mahotsav".
  10. "Neema Newcastle UK concerts".
  11. "Discovery of India (Bharat Ek Khoj) credits track".
  12. Episode 313 surabhi
  13. Dhaneshwar, Amarendra "Youth enthral with lilting music". Afternoon Dispatch and Courier, 7 June 2011.
  14. 3iii International Indian Icon
  15. "itunes.apple.com".
  16. "Best Devotional Album", "2015 Global Indian Film Award nominees". GIFA website."2015 Global Indian Film Award nominees". GIFA website.