ಚಾರ್ಟರ್ಡ್ ಅಕೌಂಟೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯು ಬ್ರಿಟನ್‍ನಲ್ಲಿ ೧೮೫೪ರಲ್ಲಿ ಮೊದಲು ಪ್ರಾರಂಭಗೊಂಡಿತು. ಈ ವೃತ್ತಿಯು ವಾಣಿಜ್ಯ ವಿಭಾಗದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಳಕೆಯಾಗುತ್ತದೆ. ಉದಾಹರಣೆಗೆ ವ್ಯಾಪಾರ ಮತ್ತು ಹಣಕಾಸಿನ ವಿಚಾರಗಳಲ್ಲಿ ಒಳಗೊಂಡಿರುವ ಲೆಕ್ಕಪರಿಶೋಧನೆ, ತೆರಿಗೆಯ ವಿಷಯದಲ್ಲಿ, ಆರ್ಥಿಕ ವಿಷಯದಲ್ಲಿ ಮತ್ತು ಸಾಮಾನ್ಯ ನಿರ್ವಹಣೆಯ ವಿಷಯದಲ್ಲಿ ಚಾರ್ಟೆಡ್ ಅಕೌಂಟೆಂಟ್ ವೃತ್ತಿಯು ಬಳಕೆಯಲ್ಲಿದೆ. ಈ ವೃತ್ತಿಯು ಸಾರ್ವಜನಿಕ ವಲಯದಲ್ಲಿ, ಖಾಸಗಿ ವಲಯದಲ್ಲಿ ಹಾಗು ಸರ್ಕಾರಿ ವಲಯದಲ್ಲಿ ಉಪಯೋಗಿಸಲ್ಪಡುತ್ತದೆ. ಈ ವೃತ್ತಿಯು ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ[ಬದಲಾಯಿಸಿ]

ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯು ಪ್ರಾಥಮಿಕ ವೃತ್ತಿಗದ ಲೇಖಾಶಾಸ್ತ್ರದ ಅಂಗವಾಗಿ ಜುಲೈ ೧೯೪೯ರಲ್ಲಿ "ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ" (ಐ.ಸಿ.ಎ.ಐ) ಎಂಬ ಹೆಸರಿನಲ್ಲಿ ಸ್ಥಾಪನೆಗೊಂಡಿತು. ಈ ಪರಿಷತ್ತಿನಲ್ಲಿ ನಲವತ್ತು ಸಂಸದರು ಆಯ್ಕೆಯಾಗಿರುತ್ತಾರೆ. ಅದರಲ್ಲಿ ಎಂಟು ಸದಸ್ಯರನ್ನು ಭಾರತ ಸರ್ಕಾರವು ಆಯ್ಕೆ ಮಾಡಿದರೆ ಮತ್ತೆ ಮೂವತ್ತೆರಡು ಸಂಸದರನ್ನು ಸಂಸ್ಥೆಯ ಉಳಿದ ಸದಸ್ಯರು ಆಯ್ಕೆ ಮಾಡುತ್ತಾರೆ. ಈ ಸಂಸ್ಥೆಯ ಮೇಲ್ನೆಲೆಯು ದೆಹಲಿಯಲ್ಲಿದೆ. ಮತ್ತು ಐದು ಕೀಳ್ನೆಲೆಯ ಪರಿಷತ್ತು ಭಾರತದ ಪ್ರಮುಖ ನಗರವಾದ ಮುಂಬಯಿ, ಚೆನೈ, ಕೊಲ್ಕತ್ತ, ಕಾಂಪುರ ಹಾಗು ದೆಹಲಿಯಲ್ಲಿ ಇದೆ. ಭಾರತದಲ್ಲಿ ಅಷ್ಟೆ ಅಲ್ಲದೇ ಹೊರ ದೇಶವಾದ ಅಬು ಧಾಬಿ, ಬಹ್ರೈನ್, ಬೊಟ್ಸ್ವಾನ, ದೋಹ, ದುಬೈ, ಇಂಡೋನೇಷ್ಯ, ಜೆದ್ದಹ್, ಕುವೈಟ್, ಲಂಡನ್, ಮೆಲ್‍ಬೋರ್ನ್, ಮಸ್ಕಟ್, ನ್ಯೂಯಾರ್ಕ್, ನೈರೊಬಿ, ನೈಜೀರಿಯಾ, ರಿಯಧ್, ಸೌದಿ ಅರೇಬಿಯಾ, ಸಿಂಗಾಪುರ್, ಸಿಡ್ನಿ, ಟೊರೊಂಟೊ ಮತ್ತು ಜ಼ಾಂಬಿಯಾ ದೇಶಗಳಲ್ಲಿ ಸ್ಥಾಪನೆಗೊಂಡಿದೆ. ಈ ಸಂಸ್ಥೆಯು 'ಇಂಟರ್‍ನ್ಯಾಷನಲ್ ಫ಼ೆಡರೇಶನ್ ಆಫ಼್ ಅಕೌಂಟೆಂಟ್ಸ್' (ಐ.ಎಫ಼್.ಎ.ಸಿ), 'ಇಂಟರ್‍ನ್ಯಾಷನಲ್ ಅಕೌಂಟಿಂಗ್ ಸ್ಟ್ಯಾಂಡರ್ಡ್ ಬೋರ್ಡ್ಸ್' (ಐ.ಎ.ಎಸ್.ಬಿ), 'ಕಾಂಫ಼ೆಡರೇಷನ್ ಆಫ಼್ ಏಷ್ಯನ್ ಅಂಡ್ ಪೆಸಿಫ಼ಿಕ್ ಅಕೌಂಟೆಂಟ್ಸ್' (ಸಿ.ಎ.ಪಿ.ಎ) ಮತ್ತು 'ಸೌತ್ ಏಷ್ಯನ್ ಫ಼ೆಡರೇಷನ್ ಆಫ಼್ ಅಕೌಂಟೆಂಟ್ಸ್' (ಎಸ್.ಎ.ಎಫ಼್.ಎ) ಮುಂತಾದ ಅಂತರಾಷ್ಟ್ರೀಯ ಸಂಸ್ಥೆಯ ಜೊತೆ ಸದಸ್ಯತ್ವವನ್ನು ಹೊಂದಿದೆ ಮತ್ತು ಬಹಳ ಕ್ರಿಯಾಶೀಲತೆಯಿಂದ ಗಮನಾರ್ಹ ಕೆಲಸವನ್ನು ಮಾಡಿದೆ. ಅದರ ಪ್ರಮುಖ ಉದ್ದೇಶವನ್ನು ನಿರ್ವಹಿಸಿ ಎಲ್ಲರಲ್ಲಿಯೂ ಪ್ರಶಂಸೆಯನ್ನು ಪಡೆದುಕೊಂಡಿದೆ.

ಮುಖ್ಯ ಅಂಗಗಳು[ಬದಲಾಯಿಸಿ]

೧. ಅಧ್ಯಯನ ಮಂಡಳಿ[ಬದಲಾಯಿಸಿ]

ಅಧ್ಯಯನ ಮಂಡಳಿಯು ಸಂಸ್ಠೆಯ ಮುಖ್ಯ ಧ್ಯೇಯವೆಂದರೆ ವ್ಯಕ್ತಿಯಲ್ಲಿ ಪ್ರಬಲವಾದ ಜ್ಞಾನ, ಕೌಶಲ್ಯವನ್ನು ಹಾಗು ವೃತ್ತಿಪರ ಮೌಲ್ಯಗಳನ್ನು ರೂಪಿಸಿಕೊಳ್ಳುವಂತೆ ಸಹಾಯ ಮಾಡುವುದು. ಆದ್ದರಿಂದ ಈ ಅಂಗವು ಶಿಕ್ಷಣಕ್ಕೆ ಬೆಳವಣಿಗೆಯ ಅನುಕೂಲಕ್ಕೆ ಅನುಗುಣವಾಗಿ ನೀತಿಗಳನ್ನು ಹಾಗು ಅದರ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ಅದನ್ನು ಕಾರ್ಯ ರೂಪದಲ್ಲಿ ತರುವುದು.

೨. ನಿರಂತರ ವೃತ್ತಿಪರ ಹಾಗು ಶಿಕ್ಷಣದ ನಿರ್ದೇಶನಾಲಯ[ಬದಲಾಯಿಸಿ]

ಈ ಅಂಗವು ಸಂಸ್ಠೆಯಲ್ಲಿ ಕಾರ್ಯ ಮಾಡುವ ಸಂಸದರಿಗೆ ಅಧ್ಯಯನ ಗೋಷ್ಠಿ, ಉಪನ್ಯಾಸ ಹಾಗು ವಿದ್ಯುನ್ಮಾನ ಮಾಧ್ಯಮದ ಮೂಲಕ ಸತತವಾಗಿ ಪ್ರತ್ಯಾದಾನವನ್ನು ನೀಡುತ್ತಾರೆ. ಅದರಿಂದಾಗಿ ಸಂಸದರಿಗೆ ವಿದ್ಯಾರ್ಥಿಗಳಿಗೆ ಪ್ರಮಾಣಿತವಾದ ಶಿಕ್ಷಣದ ವ್ಯವಸ್ಠೆಯನ್ನು ಒದಗಿಸುವಂತೆ ಸಹಾಯ ಮಾಡುತ್ತಾರೆ.

೩. ತಾಂತ್ರಿಕ ನಿರ್ದೇಶನಾಲಯ[ಬದಲಾಯಿಸಿ]

ತಾಂತ್ರಿಕ ನಿರ್ದೇಶನಾಲಯ ಅಂಗವು ಸಂಶೋಧನೆ,ಪ್ರಮಾಣಿತವಾದ ಲೆಕ್ಕಪತ್ರ ಹಾಗು ಸ್ಥಳೀಯ ಸಂಸ್ಠೆಯ ಪ್ರಮಾಣಿತವಾದ ಲೆಕ್ಕಪತ್ರ ಸಿದ್ಧಪಡಿಸುವುದಕ್ಕೆಯಲ್ಲಿ ಸಹಾಯ ಮಾಡುತ್ತಾರೆ. ಇದು ಕೂಡ ಈ ಸಂಸ್ಠೆಯ ಬಹಳ ಪ್ರಮುಖವಾದ ಅಂಗವಾಗಿದೆ.

ಚಾರ್ಟರ್ಡ್ ಅಕೌಂಟೆನ್ಸಿ ವಿಷಯದ ವಿವಿಧ ಹಂತಗಳು[ಬದಲಾಯಿಸಿ]

೧.ಸಾಮಾನ್ಯ ಕುಶಲತೆಯ ಪರೀಕ್ಷೆ[ಬದಲಾಯಿಸಿ]

ಮೊದಲನೆಯದಾಗಿ ವಿದ್ಯಾಥಿಯು 'ಕಾಮನ್ ಪ್ರೊಫಿಶಿಯನ್ಸಿ ಪರೀಕ್ಷೆ' ಅಂದರೆ ಸಾಮಾನ್ಯ ಕುಶಲತೆಯ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇಲ್ಲಿ ವಿದ್ಯಾರ್ಥಿಯ ಸಾಮಾನ್ಯ ಕುಶಲತೆಯ ಸಾಮರ್ಥ್ಯ ಹೇಗಿದೆಯೆಂದು ತಿಳಿದುಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ಸಿದ್ಧಪಡಿಸಲಾಗುವುದು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಒಟ್ಟು ನಾಲ್ಕು ಗಂಟೆಗಳ ಕಾಲ ಹಾಜರಾಗಿರಬೇಕಾಗುತ್ತದೆ ಅದರಲ್ಲಿ ಎರಡು ಗಂಟೆಗಳ ಕಾಲ ಅವಧಿಯಂತೆ ಎರಡು ಪರೀಕ್ಷೆಯನ್ನು ಇಡಲಾಗುವುದು. ಈ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಯಾಗಿರುತ್ತದೆ. ಹಾಗೆಯೇ ಪ್ರತಿ ತಪ್ಪು ಪ್ರಶ್ನೆಗೆ ನಕಾರಾತ್ಮಕ ಅಂಕವಿರುತ್ತದೆ. ಈ ಪರೀಕ್ಷೆಯು ಪ್ರತಿ ವರ್ಷವು ಜೂನ್ ಹಾಗು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಹಾಗು ಈ ಪರೀಕ್ಷೆಯ ಗರಿಷ್ಠ ಅಂಕ ಇನ್ನೂರು. ಇದರಲ್ಲಿ ಒಟ್ಟು ಎರಡು ವಿಭಾಗಗಳು ಮತ್ತು ಪ್ರತಿ ವಿಭಾಗದಲ್ಲೂ ತಲಾ ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. ಅವುಗಳೆಂದರೆ: ವಿಭಾಗ ೧ ೧. ಸಾಮಾನ್ಯ ಲೆಕ್ಕಪತ್ರ - ಅರವತ್ತು ಅಂಕಗಳಲ್ಲಿ, ೨. ವಾಣಿಜ್ಯ ನಿಯಮಗಳು - ನಲವತ್ತು ಅಂಕಗಳಲ್ಲಿ, ವಿಭಾಗ ೨ ೩. ಸಾಮಾನ್ಯ ಅರ್ಥಶಾಸ್ತ್ರ - ಐವತ್ತು ಅಂಕಗಳಲ್ಲಿ ಮತ್ತು ೪. ಪರಿಮಾಣಾತ್ಮಕ ಯೋಗ್ಯತಾ ಪರೀಕ್ಷೆ - ಐವತ್ತು ಅಂಕಗಳಲ್ಲಿ ಇಡಲಾಗುವುದು. ಈ ಮೇಲಿನ ಪರೀಕ್ಷಾ ಪಟ್ಟಿಯು ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ (೧೦+೨) ಸಮ ಎಂದು ಹೇಳಲಾಗುವುದು. ವಿದ್ಯಾರ್ಥಿಯು ಈ ಪರೀಕ್ಷೆ ಬರೆಯುವುದಕ್ಕೂ ಮುನ್ನ ಪರೀಕ್ಷೆಯ ವಿಭಾಗದವರು ಸಲ್ಲಿಸಿದ ಅರ್ಜಿಯನ್ನು ಭರ್ತಿ ಮಾಡಬೇಕು ನಂತರ ಪರೀಕ್ಷೆಯನ್ನು ಬರೆಯಬೇಕು. ಮತ್ತು ವಿದ್ಯಾರ್ಥಿಯು ಪರೀಕ್ಷೆ ಬರೆಯುವುದಕ್ಕು ಮುನ್ನ ಮೂವತೈದು ಗಂಟೆಗಳ ಕಾಲ ಪೂರ್ವಾಭಿಮುಖ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.

೨.ಪೂರ್ವ ನಿಯೋಜಿತ ಕಾರ್ಯಕ್ರಮ[ಬದಲಾಯಿಸಿ]

ವಿದ್ಯಾರ್ಥಿಯು ಐ.ಪಿ.ಸಿ.ಸಿ ಪರೀಕ್ಷೆ ಬರೆಯುವುದಕ್ಕು ಮುನ್ನ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ತೇರ್ಗಡೆಯಾಗಬೇಕು. ಈ ಪರೀಕ್ಷೆಯ ತೇರ್ಗಡೆಯಾದ ನಂತರ ವಿದ್ಯಾರ್ಥಿಯು ಐ.ಪಿ.ಸಿ.ಸಿ ಭಾಗ ಒಂದರ ಲೇಖನ ತರಬೇತಿಯನ್ನು ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ. ಈ ಕಾರ್ಯಕ್ರಮವು ಒಂದು ವಾರದವರೆಗು ಇರುತ್ತದೆ ಮತ್ತು ಈ ಒಂದು ವಾರದಲ್ಲಿ ನಾಲ್ಕು ಅಧಿವೇಶನವಿರುತ್ತದೆ. ಈ ಕಾರ್ಯಕ್ರಮವು ವ್ಯಕ್ತಿತ್ವ ಬೆಳವಣಿಗೆಗೆ, ಸಂವಹನ ಕೌಶಲ್ಯ, ಕಚೇರಿಯ ವಿಧಿ-ವಿಧಾನಗಳು, ವ್ಯಾಪಾರದ ಪರಿಸರ, ಸಾಮಾನ್ಯ ವಾಣಿಜ್ಯ ಜ್ಞಾನ ಮುಂತಾದ ವಿಷಯಗಳನ್ನು ವಿದ್ಯಾರ್ಥಿಯರಿಗೆ ಕಲಿಸುತ್ತಾರೆ. ಈ ಕಾರ್ಯಕ್ರಮವನ್ನು ಪ್ರಾದೇಶಿಕ ಪರಿಷತ್ತು ಮತ್ತು ಶಾಖೆಗಳಲ್ಲಿ ಆಯೋಜಿಸುತ್ತಾರೆ.

೩.ಸಮಗ್ರ ವೃತ್ತಿಪರ ಹಾಗು ಸಾಮರ್ಥ್ಯದ ಪರೀಕ್ಷೆ[ಬದಲಾಯಿಸಿ]

ವಿದ್ಯಾರ್ಥಿಯು ಸಾಮಾನ್ಯ ಕುಶಲತೆ ಪರೀಕ್ಷೆ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆ ತೇರ್ಗಡೆಯಾದ ನಂತರ ಸಮಗ್ರ ವೃತ್ತಿಪರ ಹಾಗು ಸಾಮರ್ಥ್ಯದ ಪರೀಕ್ಷೆ ಅಂದರೆ 'ಇಂಟಿಗ್ರೇಟೆಡ್ ಪ್ರೊಫ಼ೆಶನಲ್ ಕಾಂಪಿಟೆಂಸ್ ಕೋರ್ಸ್' (ಐ.ಪಿ.ಸಿ.ಸಿ) ಪರೀಕ್ಷೆಯನ್ನ ಬರೆಯಬೇಕಾಗುತ್ತದೆ. ಈ ಪರೀಕ್ಷೆಯ ಪಠ್ಯಕ್ರಮದಲ್ಲಿ ವಿದ್ಯಾರ್ಥಿಯು ಅಕೌಂಟೆಂನ್ಸಿ ಸಂಬಂಧದ ವಿಷಯದ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ವಿದ್ಯಾರ್ಥಿಯು ಈ ಸಂದರ್ಭದಲ್ಲಿ ಐ.ಪಿ.ಸಿ.ಸಿ ಭಾಗ ಒಂದರ ಸೈದ್ಧಾಂತಿಕ ಶಿಕ್ಷಣವನ್ನು ಕಲಿಯಬೇಕು ಹಾಗು ಮೂರು ವರ್ಷ ಪ್ರಾಯೋಗಿಕ ತರಬೇತಿಯನ್ನು ಮಾಡಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಸೈದ್ಧಾಂತಿಕ ಶಿಕ್ಷಣದ ಜೊತೆಗೆ ಅದನ್ನು ಪ್ರಾಯೋಗಿಕವಾಗಿಯೂ ಹೇಗೆ ಬಳಸಬಹುದು ಎಂದು ಸಮವಾಗಿ ಕಲಿಯುತ್ತಾರೆ ಮತ್ತು ಇದು ಸಂಸ್ಥೆಯ ಮೂಲ ಉದ್ದೇಶವು ಕೂಡ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಆರು ವಿಷಯಗಳನ್ನು ಮತ್ತು ಏಳು ಪರಿಕ್ಷಾ ಪತ್ರಿಕೆಗಳಿರುತ್ತವೆ. ಅವುಗಳನ್ನು ಈ ಕೆಳ ಕಂಡಂತೆ ವಿಂಗಡಿಸಲಾಗಿದೆ ವಿಭಾಗ ೧ ಪ್ರಶ್ನೆ ಪತ್ರಿಕೆ ೧ - ಲೆಕ್ಕ ಪತ್ರ (೧೦೦ ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೨ - ಕಂಪನಿ ಮತ್ತು ಇತರೆ

       ಕಾನೂನುಗಳು
      ಭಾಗ ೧. ಕಂಪನಿ ಕಾನೂನು (ಅರವತ್ತು ಅಂಕಗಳಲ್ಲಿ)
              
      ಭಾಗ ೨. ಇತರೆ ವ್ಯಾಪಾರಿ ಕಾನೂನುಗಳು (ನಲವತ್ತು ಅಂಕಗಳು)
          

ಪ್ರಶ್ನೆ ಪತ್ರಿಕೆ ೩ - ಕಾಸ್ಟ್ ಮತ್ತು ಮ್ಯಾನೇಜ್ಮೆಂಟ್ ಅಕೌಂಟಿಂಗ್ (ನೂರು ಅಂಕಗಳು)

ಪ್ರಶ್ನೆ ಪತ್ರಿಕೆ ೪ - ತೆರಿಗೆ ಸಂಹಿತೆಯ ಪರೀಕ್ಷೆ

          ಭಾಗ ೧. ಆದಾಯ ತೆರಿಗೆ (ಅರವತ್ತು ಅಂಕಗಳು)
          ಭಾಗ ೨. ಸರಕು ಮತ್ತು ಸೇವಾ ತೆರಿಗೆ (ನಲವತ್ತು ಅಂಕಗಳು)
            

ವಿಭಾಗ ೨ ಪಶ್ನೆ ಪತ್ರಿಕೆ ೫ - ಮುಂದುವರಿದ ಲೆಕ್ಕಪತ್ರ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೬ - ಲೆಕ್ಕ ಪರಿಶೋಧನ ಪತ್ರ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೭ - ಮಾಹಿತಿ ತಂತ್ರಜ್ಞಾನ ಮತ್ತು ಕಾರ್ಯತಂತ್ರ ನಿರ್ವಹಣೆ

         ಭಾಗ ೧. ಮಾಹಿತಿ ತಂತ್ರಜ್ಞಾನ (ಐವತ್ತು ಅಂಕಗಳಲ್ಲಿ)
         ಭಾಗ ೨. ಕಾರ್ಯತಂತ್ರ ನಿರ್ವಹಣೆ (ಐವತ್ತು ಅಂಕಗಳಲ್ಲಿ) ಇರುತ್ತದೆ.

ಪ್ರಶ್ನೆ ಪತ್ರಿಕೆ ೮ - ಹಣಕಾಸು ನಿರ್ವಹಣೆ ಮತ್ತು ಅರ್ಥಶಾಸ್ತ್ರ (ನೂರು ಅಂಕಗಳು)

 ಭಾಗ - ೧. ಹಣಕಾಸು ನಿರ್ವಹಣೆ (ಅರವತ್ತು ಅಂಕಗಳು)
 ಭಾಗ - ೨. ಅರ್ಥಶಾಸ್ತ್ರ ( ನಲವತ್ತು ಅಂಕಗಳು)

ವಿದ್ಯಾರ್ಥಿಯು ಅವರ ಅನುಕೂಲಕ್ಕೆ ಅನುಗುಣವಾಗಿ ಈ ಎರಡು ವಿಭಾಗದ ಪ್ರಶ್ನೆ ಪರೀಕ್ಷೆಯನ್ನು ಒಟ್ಟಿಗೆ ಬರೆಯಬಹುದು ಅಥವಾ ಬೇರೆಬೇರೆಯಾಗಿ ಬರೆಯಬಹುದು.

೪.ಮಾಹಿತಿ ತಂತ್ರಜ್ಞಾನ ತರಬೇತಿ (ಐ.ಟಿ.ಟಿ)[ಬದಲಾಯಿಸಿ]

ಈ ಯೋಜನೆಯಲ್ಲಿ ಸಂಸ್ಥೆಯು ವಿದ್ಯಾರ್ಥಿಯನ್ನು ಕಂಪ್ಯೂಟರ್ ತರಬೇತಿಯನ್ನು ನೀಡಿ ಅದರಲ್ಲಿ ಪರಿಣಿತಿಯನ್ನು ಪಡೆಯುವಂತೆ ಮಾಡುತ್ತಾರೆ. ಇದರಲ್ಲಿ ವಿದ್ಯಾರ್ಥಿಯು ತರಗತಿಗೆ ನೂರು ಗಂಟೆ ಅಂದರೆ ಒಂಬತ್ತು ತಿಂಗಳು ಹಾಜರಾಗಬೇಕು. ಈ ಹಂತದಲ್ಲಿ ವಿದ್ಯಾರ್ಥಿಗೆ ಅದಕ್ಕೆ ಅನುಗುಣವಾಗಿ ಅಕೌಂಟಿಂಗ್ ಮತ್ತು ಲೆಕ್ಕ ಪರಿಶೋಧನೆಯನ್ನು ಕಲಿಸುತ್ತಾರೆ. ಅದರ ಜೊತೆಗೆ ಎಲೆಕ್ಟ್ರಾನಿಕ್ ಸ್ಪ್ರೆಡ್ ಶೀಟ್, ಡೇಟಾಬೇಸ್ ನಿರ್ವಹಣೆಯ ವ್ಯವಸ್ಥೆ, ಹೀಗೆ ಮುಂತಾದವನ್ನು ಕಲಿಸುತ್ತಾರೆ. ಈ ಹಂತವನ್ನು ಬರುವುದಕ್ಕು ಮುನ್ನ ವಿದ್ಯಾರ್ಥಿಯು ಐ.ಪಿ.ಸಿ.ಸಿ ಪರೀಕ್ಷೆಗಯಲ್ಲಿ ನೊಂದಣಿಯಾಗಿರಬೇಕು ಹಾಗು ಅದನ್ನು ತೇರ್ಗಡೆಯಾಗಿರಬೇಕು. ಇದನ್ನು ಮುಗಿಸಿದ ನಂತರ ಲೇಖನ ತರಬೇತಿಯನ್ನು ಪಡೆಯಬೇಕು. ಇದು ಸೈದ್ಧಾಂತಿಕ ವಿಷಯವಾಗಿದ್ದು, ಇದು ಐವತ್ತು ಅಂಕಗಳಲ್ಲಿ ಬರುತ್ತದೆ.

೫.ಅಂತಿಮ ಹಂತ[ಬದಲಾಯಿಸಿ]

ವಿದ್ಯಾರ್ಥಿಯ ಈ ಮೇಲಿನ ಎಲ್ಲಾ ಘಟ್ಟಗಳು ದಾಟಿದ ನಂತರ ಈ ಪರಿಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಯಲ್ಲಿ ಎರಡು ವಿಭಾಗವಿರುತ್ತದೆ. ವಿಭಾಗ ೧ ಪ್ರಶ್ನೆ ಪತ್ರಿಕೆ ೧. ಆರ್ಥಿಕ ವರದಿ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೨. ಆಯಕಟ್ಟಿನ ಆರ್ಥಿಕ ನಿರ್ವಹಣೆ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೩. ಆಡಿಟಿಂಗ್ ಮತ್ತು ವೃತ್ತಿಪರ ನೈತಿಕತೆ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೪. ಕಾರ್ಪೊರೇಟ್ ಮತ್ತು ಒಕ್ಕೂಟದ ಸಂಹಿತೆ (ನೂರು ಅಂಕಗಳಲ್ಲಿ)

      ಭಾಗ ೧. ಕಂಪನಿ ಸಂಹಿತೆ (ಎಪ್ಪತ್ತು ಅಂಕಗಳಲ್ಲಿ)
      ಭಾಗ ೨. ಒಕ್ಕೂಟದ ಸಂಹಿತೆ (ಮೂವತ್ತು ಅಂಕಗಳಲ್ಲಿ)

ವಿಭಾಗ ೨ ಪ್ರಶ್ನೆ ಪತ್ರಿಕೆ ೫. ಅಕೌಂಟಿಂಗ್ ನಿರ್ವಹಣೆ ಮುಂದುವರಿದ ಭಾಗ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೬. ಮಾಹಿತಿ ವ್ಯವಸ್ಥೆಯ ನಿಯಂತ್ರಣ ಮತ್ತು ಲೆಕ್ಕ ಪರಿಶೋಧನೆ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೭. ನೇರ ತೆರಿಗೆ ನಿಯಮ (ನೂರು ಅಂಕಗಳಲ್ಲಿ) ಪ್ರಶ್ನೆ ಪತ್ರಿಕೆ ೮. ಪರೋಕ್ಷ ತೆರಿಗೆ ನಿಯಮ (ನೂರು ಅಂಕಗಳಲ್ಲಿ)

      ಭಾಗ ೧. ಕೇಂದ್ರ ಅಬಕಾರಿ (ನಲವತ್ತು ಅಂಕಗಳಲ್ಲಿ)
      ಭಾಗ ೨. ಸೇವೆ ತೆರಿಗೆ (ನಲವತ್ತು ಅಂಕಗಳಲ್ಲಿ)
      ಭಾಗ ೩. ವ್ಯಾಪಾರ ಸಂಪ್ರದಾಯ (ಇಪ್ಪತ್ತು ಅಂಕಗಳಲ್ಲಿ) ಬರುತ್ತದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

http://gradestack.com/blogs/cpt-2015-exam-step-i-towards-becoming-a-chartered-accountant/ Archived 2015-12-08 ವೇಬ್ಯಾಕ್ ಮೆಷಿನ್ ನಲ್ಲಿ.

http://www.edzonex.com/curriculum-details/about-ca/steps-to-become-a-ca Archived 2016-01-31 ವೇಬ್ಯಾಕ್ ಮೆಷಿನ್ ನಲ್ಲಿ.

http://caultimates.com/how-to-become-ca/ Archived 2015-12-29 ವೇಬ್ಯಾಕ್ ಮೆಷಿನ್ ನಲ್ಲಿ.

http://caknowledgeclub.com/about-chartered-accountant.php

https://www.offcampusfreshers.com/sarkari-result/ Archived 2020-03-23 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು[ಬದಲಾಯಿಸಿ]

http://www.icai.org/post.html?post_id=3923

http://career.webindia123.com/career/options/accounting_finance/chartered_accountancy/eligibility.html[ಶಾಶ್ವತವಾಗಿ ಮಡಿದ ಕೊಂಡಿ]

http://www.knowise.co.in/ca.html Archived 2015-04-23 ವೇಬ್ಯಾಕ್ ಮೆಷಿನ್ ನಲ್ಲಿ.