ಮೈಗಾಲೊಮಾರ್ಫ
ಮೈಗಾಲೊಮಾರ್ಫ | |
---|---|
ಮಿಸುಲೆನಾ ಬ್ರ್ಯಾಡ್‍ಲೇಯಿ, ಒಂದು ಮೌಸ್ ಸ್ಪೈಡರ್ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಆರ್ಥ್ರೊಪೋಡಾ |
ಉಪವಿಭಾಗ: | ಚೆಲಿಸರೇಟಾ |
ವರ್ಗ: | ಅರಾಕ್ನಿಡಾ |
ಗಣ: | ಅರಾನಿಯೀ |
ಉಪಗಣ: | ಒಪಿಸ್ತೊಥೀಲೀ |
ಕೆಳಗಣ: | ಮೈಗಾಲೊಮಾರ್ಫ Pocock, 1892[೧] |
ಉಪವಿಭಾಗಗಳು | |
|
ಮೈಗಾಲೊಮಾರ್ಫ ಎಂಬುದು ಕೆಲತರದ ಜಾತಿಯ ಜೇಡಗಳನ್ನು ಕೂಡಿದ ಉಪಗಣ, ಆರ್ತೊಗ್ನಾತ ಪರ್ಯಾಯ ನಾಮ.
ವಿವರ
[ಬದಲಾಯಿಸಿ]ಈ ಗುಂಪಿಗೆ ಸೇರಿದ ಜೇಡಗಳ ಗಾತ್ರ ಹಿರಿದಾಗಿದ್ದು ಇವುಗಳಲ್ಲಿ ಶ್ವಾಸನಳಿಕೆಗಳಿರುವುದಿಲ್ಲ. ಉಸಿರಾಡಲು 2-4 ಜೊತೆ ಫುಪ್ಪುಸ ಸಂಪುಟಗಳಿವೆ. ತುಂಬ ಪ್ರಾಚೀನಕಾಲದವು ಎಂದು ಪರಿಗಣಿಸಲ್ಪಡುವ ಈ ಗುಂಪಿಗೆ ಸೇರಿದ ಜೇಡಗಳಲ್ಲಿ ಶಿರೋಕ್ಷಕವಚದ (ಕ್ಯಾರಪೆಸ್) ಮುಂಭಾಗದಲ್ಲಿ ಕಾಣಬರುವ ಕೆಲಿಸರಿ ಸಮಾಂತರವಾಗಿ ಚಲಿಸುವ ಕಾರಣ ಇವುಗಳನ್ನು ಆರ್ತೊಗ್ನಾತಗಳೆಂದು ಪರಿಗಣಿಸುತ್ತಾರೆ. ಇವುಗಳ ಉದರದ ಭಾಗಗಳಲ್ಲಿ ಯಾವಾಗಲೂ 4 ಜೊತೆಗಿಂತ ಕಡಿಮೆ ಸ್ನಾಯುಗಳಿರುತ್ತವೆ. ಬಲೆಯನ್ನು ರಚಿಸಲು ಬೇಕಾದ ಸ್ಪಿನರೆಟ್ಸ್ ದೇಹದ ಹಿಂಭಾಗದಲ್ಲಿರುತ್ತದೆ. ಮೈಗಾಲೊಮಾರ್ಫ ಜೇಡಗಳು ಆಲಿಕೆ ಆಕಾರದ ಬಲೆಯನ್ನು ಇಲ್ಲವೇ ನೆಲವನ್ನು ಕೊರೆದು ಗೂಡನ್ನು ರಚಿಸಿ ಜೀವಿಸುತ್ತವೆ. ಈ ಜೇಡಗಳು ಆಹಾರವಿಲ್ಲದೆ ಎರಡು ವರ್ಷಗಳ ಕಾಲ ಬದುಕಬಲ್ಲ ಸಾಮರ್ಥ್ಯ ಪಡೆದಿವೆ ಎಂದು ಬರ್ಗೆ ಎಂಬಾತ ವಿವರಿಸಿದ್ದಾನೆ.
ಪ್ರಸಿದ್ಧ ಪ್ರಭೇದಗಳು
[ಬದಲಾಯಿಸಿ]ಮೈಗಾಲೊಮಾರ್ಫ ತರದ ಜೇಡಗಳಲ್ಲಿ ಬೋನಬಾಗಿಲ ಜೇಡ (ಟ್ರ್ಯಾಪ್ ಡೋರ್ ಸ್ಪೈಡರ್) ಹಾಗೂ ಟರ‍್ಯಾಂಟುಲ ಜೇಡಗಳು ಬಲು ಪ್ರಸಿದ್ಧವಾದವು.
- ಬೋನಬಾಗಿಲ ಜೇಡ, ಸುಮಾರು 15 ಸೆಂ.ಮೀ. ಆಳದಷ್ಟು ದೊಡ್ಡ ಸುರಂಗವನ್ನು ಕೊರೆದು ಒಳಗಡೆಗೆ ರೇಷ್ಮೆದಾರದ ಹಾಸಿಗೆಯನ್ನು ರಚಿಸಿ ಉತ್ತಮ ತರದ ಕೀಲುಗಳಿರುವ ಬಾಗಿಲನ್ನು ರೂಪಿಸಿ ವೈರಿಗಳ ಕಣ್ಣುಮರೆಸಿ, ಸೊಳ್ಳೆಗಳನ್ನು ಉಪಾಯದಿಂದ ಹಿಡಿದು ತಿನ್ನುವುದು. ಉಷ್ಣವಲಯ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
- ಜೇಡಜಗತ್ತಿನ ರಾಕ್ಷಸನೆಂದು ಕರೆಯಲ್ಪಡುವ, ವಿಷಕಾರಿ ಟರ‍್ಯಾಂಟುಲ, ಚಿಕ್ಕಪುಟ್ಟ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡಿ ತಿನ್ನುತ್ತವೆ. ಅಮೆರಿಕದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತದೆ. ಇದರ ಕಡಿತದಿಂದ ಆಗುವ ಪರಿಣಾಮಕ್ಕೆ ಟರ‍್ಯಾಂಟಿಸಮ್ ಎಂದು ಹೆಸರು.
ಉಲ್ಲೇಖಗಳು
[ಬದಲಾಯಿಸಿ]- ↑ Dunlop, Jason A. & Penney, David (2011). "Order Araneae Clerck, 1757" (PDF). In Zhang, Z.-Q. (ed.). Animal biodiversity: An outline of higher-level classification and survey of taxonomic richness. Zootaxa. Auckland, New Zealand: Magnolia Press. ISBN 978-1-86977-850-7. Retrieved 2015-10-31.
ಸಾಮಾನ್ಯ ಉಲ್ಲೇಖಗಳು
[ಬದಲಾಯಿಸಿ]- Raven, R.J. (1985). "The spider infraorder Mygalomorphae: Cladistics and systematics". Bulletin of the American Museum of Natural History. 182: 1–180.
- Goloboff, Pablo A. (1993-03-23). A reanalysis of Mygalomorphae spider families (Araenae) (Report). American Museum Novitates. New York, NY: American Museum of Natural History. http://digitallibrary.amnh.org/dspace/bitstream/2246/5017/1/N3056.pdf.
ಹೊರಗಿನ ಕೊಂಡಿಗಳು
[ಬದಲಾಯಿಸಿ]- "Taxonomy, husbandry and captive breeding of Dipluridae".
- "Mygalomorphae or primitive spiders".
- "Suborder Mygalomorphae".