ಶಂಕರಪುರ ಮಲ್ಲಿಗೆ
ಶಂಕರಪುರವು ಮಲ್ಲಿಗೆ ಕನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಹೂವಿನ ಕೃಷಿ. ಶಂಕರಪುರ ಉಡುಪಿ ಜಿಲ್ಲೆಯ ಮೂಡಬೆಟ್ಟು ಗ್ರಾಮದಲ್ಲಿದೆ.[೧] ಶಂಕರಪುರದ ನಿವಾಸಿಗಳು ಹಾಗೂ ಇತರ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲಿಗೆ ಕೃಷಿ ಮಾಡುತ್ತಾರೆ. ಈ ಮಲ್ಲಿಗೆಯು ಉಡುಪಿ ಮತ್ತು ದಕ್ಷಿಣಕನ್ನಡ ಭಾಗಗಳಲ್ಲಿ ಹೆಚ್ಚಾಗಿ ಪ್ರಸಿದ್ದವಾಗಿದೆ. ಶಂಕರಪುರದ ಮಲ್ಲಿಗೆಯು ದೇಶ ಅಲ್ಲದೆ ವಿದೇಶಗಳಿಗೆ ರಪ್ತು ಆಗುತ್ತದೆ. ಶಂಕರಪುರದ ಮಲ್ಲಿಗೆಯು ಹೂಗಳನ್ನು ಕಟ್ಟುವ ಶೈಲಿ ಮತ್ತು ಅದರ ಹೆಚ್ಚಿನ ಗಮದಿಂದ ಹೆಚ್ಚಾಗಿ ಬೆಳೆಸುತ್ತಾರೆ. ಶಂಕರಪುರದ ಜನರಿಗೆ ಇದೊಂದು ಆದಾಯದ ಮೂಲವಾಗಿದೆ. [೨]
ಗಿಡವನ್ನು ಬೆಳೆಸುವ ವಿಧಾನ
[ಬದಲಾಯಿಸಿ]ಮಲ್ಲಿಗೆ ಗಿಡವನ್ನು ಕೆಂಪು ಮತ್ತು ಸುಡು ಮಣ್ಣಿನಲ್ಲಿ ನೆಡಲಾಗುತ್ತದೆ. ಸಸಿಯನ್ನು ನೆಟ್ಟ ೩ ತಿಂಗಳಲ್ಲಿ ಅದರಲ್ಲಿ ಹೆಚ್ಚಿನ ಮೊಗ್ಗುಗಳು ಆಗುವುದರಿಂದ ಮಲ್ಲಿಗೆಯು ಉತ್ತಮವಾಗಿ ಬೆಳೆಯುತ್ತದೆ ಮತ್ತು ಸಸಿಯನ್ನು ನೆಡುವಾಗ ಅದಕ್ಕೆ ಅಗತ್ಯವಾದ ನೀರು ಮತ್ತು ಗೊಬ್ಬರವನ್ನು ಪೂರೈಸಬೇಕು. ೧೫ ದಿನಗಳಿಗೊಮ್ಮೆ ಸುಣ್ಣ ಮತ್ತು ಕಡಲೆ ಹಿಂಡಿಯ ಗೊಬ್ಬರವನ್ನು ನೀಡಬೇಕು ಇದರಿಂದ ಉತ್ತಮವಾದ ಫಸಲು ಪಡೆಯಬಹುದು. ಕೀಟಬಾಧೆ ತಡೆಯಲು ಕೀಟನಾಶಕವನ್ನು ಸಿಂಪಡಿಸಬೇಕು. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ತೆಗೆಯಬೇಕು.
ವ್ಯಾಪಾರ
[ಬದಲಾಯಿಸಿ]ಶಂಕರಪುರ ಮಲ್ಲಿಗೆಯನ್ನು ಅಲ್ಲಿನ ಸ್ಥಳೀಯ ವ್ಯಾಪಸ್ಥರು ಮಾರಾಟ ಮಾಡುತ್ತಾರೆ. ಅವರು ರೈತರಿಂದ ಮಲ್ಲಿಗೆಯನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ದಿನಕ್ಕೆ ಬೀಳುವ ಮೊತ್ತವನ್ನು ಒಂದು ಗೂಡಿಸಿ ವಾರದ ಅಂತ್ಯದಲ್ಲಿ ರೈತರಿಗೆ ನೀಡುತ್ತಾರೆ. ಶಂಕರಪುರ ಮಲ್ಲಿಗೆಯ ದರವು ನಿರ್ದಿಷ್ಟವಾಗಿಲ್ಲ ಇದು ಪೂರೈಕೆಯಮತ್ತುಬೇಡಿಕೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಶಂಕರಪುರ ಮಲ್ಲಿಗೆಯು ಅಟ್ಟೆಯ ರೂಪದಲ್ಲಿ ಸಿಗುತ್ತದೆ. ಅಟ್ಟೆ ಎಂದರೆ ನಾಲ್ಕು ಚೆಂಡು ಇರುತ್ತದೆ (ಒಂದು ಚೆಂಡುವಿನಲ್ಲಿ ೮೦೦ ಮಲ್ಲಿಗೆಯ ಮೊಗ್ಗುಗಳಿರುತ್ತದೆ) ಮಲ್ಲಿಗೆಯು ಸಾಮಾನ್ಯವಾಗಿ ಈ ಪ್ರದೇಶದ ಎಲ್ಲರ ಮನೆಗಳಲ್ಲಿ ಕಂಡು ಬರುತ್ತದೆ ಮತ್ತು ಉತ್ತಮ ಆದಾಯವನ್ನು ತರುವ ಬೆಳೆಯಾಗಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Shankarpura Mallige under pest threat". Deccan Herald (in ಇಂಗ್ಲಿಷ್). 25 February 2011. Retrieved 17 December 2022.
- ↑ "Before they Bloom: Udupi Mallige of Shankarapura". Sahapedia (in ಇಂಗ್ಲಿಷ್). Retrieved 17 May 2023.
- ↑ "ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರಸಿದ್ಧ 'ಶಂಕರಪುರ ಮಲ್ಲಿಗೆ' ಕೃಷಿ ಮಾಡುತ್ತಿರುವ ರೈತ!". Kannadaprabha. Retrieved 17 May 2023.