ವಿಷಯಕ್ಕೆ ಹೋಗು

ರಿದಂ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿದಂ (ಚಲನಚಿತ್ರ)
ನಿರ್ದೇಶನಮಂಜು ಮಿಲನ್
ನಿರ್ಮಾಪಕಮಂಜುನಾಥ್
ಚಿತ್ರಕಥೆಮಂಜು ಮಿಲನ್
ಪಾತ್ರವರ್ಗಮಂಜು ಮಿಲನ್, ಸುಮನ್, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್, ವಿನಯಾ ಪ್ರಸಾದ್, ಮೇಘಶ್ರೀ, ಮಹೇಶ್ ಮಹದೇವ್, ಶಿವರಾಂ, ಶ್ರೀನಿವಾಸ್ ಮೂರ್ತಿ, ಭವ್ಯ, ಪದ್ಮಾವಾಸಂತಿ
ಸಂಗೀತಎ. ಟಿ. ರವೀಶ್

ರಿದಂ - ಮಂಜು ಮೂವೀಸ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ ಮುಂಬರುವ ಪ್ರೇಮ ಕಥಾನಕ, ಆಕ್ಷನ್ ಮತ್ತು ಕೌಟುಂಬಿಕ ಕನ್ನಡ ಚಲನಚಿತ್ರ. ಮಂಜು ಮಿಲನ್ ಈ ಚಿತ್ರಕ್ಕೆ ನಾಯಕ ನಟನಾಗಿ ನಿರ್ದೇಶಿಸಿದ್ದಾರೆ. ಮೇಘಶ್ರೀ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.[] ಚಿತ್ರವು ದೊಡ್ಡ ತಾರಾಬಳಗವನ್ನು ಹೊಂದಿದೆ, ತೆಲುಗು ನಟ ಸುಮನ್ ನಾಯಕಿಯ ತಂದೆಯ ಪಾತ್ರದಲ್ಲಿ ವಿನಯಾ ಪ್ರಸಾದ್ ಮುಖ್ಯ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ, ಮಹೇಶ್ ಮಹದೇವ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹಿರಿಯ ಕಲಾವಿದರಾದ ಶಿವರಾಂ, ಭವ್ಯ, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಮೂರ್ತಿ, ಪದ್ಮಾವಾಸಂತಿ, ಮಿಮಿಕ್ರಿ ದಯಾನಂದ್, ಶ್ರೀನಾಥ್ ವಶಿಷ್ಟ, ಮಹೇಶ್, ಜಗದೀಶ್, ರವಿ ಮುಂತಾದವರು ನಟಿಸಿದ್ದಾರೆ.[][][]

ಪಾತ್ರವರ್ಗ

[ಬದಲಾಯಿಸಿ]

ನಿರ್ಮಾಣ

[ಬದಲಾಯಿಸಿ]

ಮಂಜು ಮೂವೀಸ್‌ನ ಬ್ಯಾನರ್‌ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸಿಂಗಾಪುರ, ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. [][]

ಬಿಡುಗಡೆ

[ಬದಲಾಯಿಸಿ]

ಸೆನ್ಸಾರ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.[][]

ಹಿನ್ನೆಲೆಸಂಗೀತ

[ಬದಲಾಯಿಸಿ]

ಈ ಚಿತ್ರಕ್ಕೆ ಎ. ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಲ್ಲಾ ಹಾಡುಗಳ ಸಾಹಿತ್ಯವನ್ನು ಮಂಜುಮಿಲನ್ ಬರೆದಿದ್ದಾರೆ. ಈ ಚಿತ್ರದ ಗೀತೆಗಳು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ನೀನೆ ನನ್ನಲು"ಮಂಜು ಮಿಲನ್ಪ್ರಿಯದರ್ಶಿನಿ, ನಿಖಿಲ್ ಪಾರ್ಥಸಾರಥಿ4:32
2."ಆ ವಿಧಿ ಬರೆದಂತೆ"ಮಂಜು ಮಿಲನ್ವಿಹಾನ್ ಆರ್ಯ6:05
3."ಗೆಳೆಯ ನೀನು"ಮಂಜು ಮಿಲನ್ರಾಧಿಕ5:48
4."ಈ ಜಗವೇ"ಮಂಜು ಮಿಲನ್ಶರಣ್ ಅಯ್ಯಪ್ಪ4:41
5."ನೆನೆದು ನೆನೆದು"ಮಂಜು ಮಿಲನ್ಶರಣ್ ಅಯ್ಯಪ್ಪ3:21
ಒಟ್ಟು ಸಮಯ:24:27

ಉಲ್ಲೇಖಗಳು

[ಬದಲಾಯಿಸಿ]
  1. https://archive.org/details/rhythm-movie-article-in-indu-sanje-news-paper
  2. ೨.೦ ೨.೧ ೨.೨ https://web.archive.org/web/20230312162426/https://epaper.hosadigantha.com/epaper/edition/6516/bengaluru/page/16
  3. ೩.೦ ೩.೧ ೩.೨ https://cinilahari.in/2022/08/25/ridam-meghasri-new-film/
  4. https://web.archive.org/web/20220829202133/https://www.sanjevani.com/wp-content/uploads/2022/08/27082022BGL.pdf

ಬಾಹ್ಯ ಕೊಂಡಿಗಳು

[ಬದಲಾಯಿಸಿ]