ಸದಸ್ಯ:Kavya.S.M/ನನ್ನ ಪ್ರಯೋಗಪುಟ2
ಕರ್ನಾಟಕದ 'ಹಿಡನ್ ಜೆಮ್ಸ್' ಪ್ರವಾಸಿ ತಾಣಗಳು
[ಬದಲಾಯಿಸಿ]ನಮ್ಮ ಕರ್ನಾಟಕದಲ್ಲಿ 'ಗುಪ್ತ ರತ್ನಗಳು' ಎಂದು ಕರೆಸಿಕೊಳ್ಳುವ ಪ್ರವಾಸಿ ತಾಣಗಳಿವೆ. ಬಹುಶಃ ನೀವು ಆ ತಾಣಗಳಿಗೆ ಭೇಟಿ ನೀಡದೆ ಇರಬಹುದು. ಅಂತಹ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ.ಭಾರತದ ಪ್ರವಾಸಿಗರು ಜೀವನದಲ್ಲಿ ಒಮ್ಮೆಯಾದರೂ ದಕ್ಷಿಣ ಭಾರತದ ಅದರಲ್ಲೂ, ಕರ್ನಾಟಕದ ಪ್ರವಾಸ ಮಾಡಬೇಕು ಎಂದು ಹಾತೊರೆಯುತ್ತಾರೆ.ಏಕೆಂದರೆ, ಕರ್ನಾಟಕವು ಶ್ರೀಮಂತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪರ್ವತಗಳು, ಭವ್ಯವಾದ ದೇವಾಲಯಗಳು, ಐತಿಹಾಸಿಕತೆಯನ್ನು ನೆನಪಿಸುವ ಸ್ಮಾರಕ, ಅರಮನೆಗಳನ್ನು ಹೊಂದಿದೆ. ಅಷ್ಟಕ್ಕೂ ‘ಕರ್ನಾಟಕದ ಗುಪ್ತ ರತ್ನ’ ಎಂದು ಕರೆಸಿಕೊಳ್ಳುವ ಆ ತಾಣಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.
ಬಂಡಾಜೆ ಜಲಪಾತ
[ಬದಲಾಯಿಸಿ]ಕರ್ನಾಟಕದ ಹಿಡನ್ ಜೆಮ್ಸ್ ತಾಣಗಳಲ್ಲಿ ಈ ಬಂಡಾಜೆ ಜಲಪಾತವು ಒಂದಾಗಿದೆ[೧]. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಾಟ್ನಲ್ಲಿ ನೆಲೆಸಿದೆ. ಈ ಜಲಪಾತವನ್ನು ‘ಬಂಡಾಜೆ ಅರ್ಬಿ ಜಲಪಾತ’ ಎಂದೂ ಕೂಡ ಕರೆಯುತ್ತಾರೆ. ನೇತ್ರಾವತಿ ನದಿಯ ಉಪನದಿಯಿಂದ ಈ ಜಲಪಾತವು ರೂಪುಗೊಳ್ಳುವ ಮೂಲಕ, ಸುಮಾರು ೨೦೦ ಅಡಿ ಎತ್ತರದಿಂದ ಧರೆಗೆ ಧುಮ್ಮಿಕ್ಕಿ ಹರಿಯುತ್ತದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತವನ್ನು ವೀಕ್ಷಿಸಲು ಮಾನ್ಸುನ್ನಲ್ಲಿ ಸೂಕ್ತವಾದ ಸಮಯವಾಗಿದೆ.[೧]
ಕೋಡಿ ಬೀಚ್
[ಬದಲಾಯಿಸಿ]ಕೋಡಿ ಬೀಚ್ ಅನ್ನು ಡೆಲ್ಟಾ ಬೀಚ್ ಎಂದೂ ಸಹ ಕರೆಯುತ್ತಾರೆ. ಕರ್ನಾಟಕದಲ್ಲಿರುವ ಗುಪ್ತ ರತ್ನ ತಾಣಗಳಲ್ಲಿ ಇದು ಕೂಡ ಒಂದಾಗಿದ್ದು, ಪ್ರವಾಸಿಗರು ಅತಿ ಹೆಚ್ಚಾಗಿ ಅನ್ವೇಷಣೆ ಮಾಡಿದ ತಾಣ ಇದಾಗಿದೆ. ಈ ಆಹ್ಲಾದಕರವಾದ ಬೀಚ್ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕೋಡಿ ಬೆಂಗ್ರೆ ಎಂಬ ಸಣ್ಣ ಹಳ್ಳಿಯಲ್ಲಿದೆ. ಈ ಸಮುದ್ರ ಆಹಾರ ಪ್ರಿಯರಿಗೆ ನೆಚ್ಚಿನ ತಾಣ ಎಂದೇ ಹೇಳಬಹುದು. ಈ ಡೆಲ್ಟಾ ಬೀಚ್ನ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯವು ಕಂಡುಬರುತ್ತದೆ.[೨]
ಕವಲೇ ದುರ್ಗ ಕೋಟೆ
[ಬದಲಾಯಿಸಿ]ಹಿಂದಿನ ಕಾಲದಲ್ಲಿ ಇದನ್ನು ಕಾವಲು ದುರ್ಗ ಎಂದು ಕರೆಯಲಾಗುತ್ತಿತು. ತೀರ್ಥಹಳ್ಳಿಯಿಂದ ಕೇವಲ ೧೮ ಕಿ.ಮೀ ದೂರದಲ್ಲಿ ಮತ್ತು ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ದೂರದಲ್ಲಿರುವ ಕೋಟೆಯಾಗಿದೆ. ಬಹುಶಃ ಬಹಳಷ್ಟು ಮಂದಿ ಪ್ರವಾಸಿಗರು ಈ ಪ್ರಾಕೃತಿಕ ಮಡಿಲಿನಲ್ಲಿ ಅಡಗಿರುವ ಈ ಕೋಟೆಗೆ ಭೇಟಿ ನೀಡಿರುವುದಿಲ್ಲ. ಈ ಕೋಟೆಯ ಸೌಂದರ್ಯವನ್ನು ವರ್ಣಿಸುವುದಕ್ಕಿಂತ ಭೇಟಿ ನೀಡಿಯೇ ಸವಿಯಬೇಕು.[೩]
ಜೋಮ್ಲು ತೀರ್ಥ ಜಲಪಾತ
[ಬದಲಾಯಿಸಿ]ಜೋಮ್ಲು ತೀರ್ಥ ಜಲಪಾತ ಕರ್ನಾಟಕದ ಹಿಡನ್ ಜೇಮ್ಸ್ಗಳಲ್ಲಿ ಇದು ಕೂಡ ಒಂದಾಗಿದೆ. ಇದು ಕರ್ನಾಟಕದ ಉಡುಪಿ ಜಿಲ್ಲೆಯ ಹೆಬ್ರಿ ಪಟ್ಟಣದಿಂದ ಸುಮಾರು ೧೪ ಕಿ.ಮೀ ದೂರದಲ್ಲಿದೆ. ಈ ತೀರ್ಥವು ಸೀತಾ ನದಿಯ ದೊಡ್ಡ ಬಂಡೆಗಳ ಮೇಲೆ ಹರಿಯುತ್ತದೆ. ಮುಖ್ಯವಾಗಿ ಈ ಜೋಮ್ಲು ತೀರ್ಥ ಜಲಪಾತವು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಡಗಿರುವ ತಾಣವಾಗಿರುವ ಕಾರಣ, ಪ್ರವೇಶವನ್ನು ಅರಣ್ಯ ಇಲಾಖೆಯು ನಿಯಂತ್ರಿಸುತ್ತದೆ.
ಮಲ್ಪೆ ಬೀಚ್
[ಬದಲಾಯಿಸಿ]ಮಲ್ಪೆ ಬೀಚ್ ಕೂಡ ಕರ್ನಾಟಕದ ಗುಪ್ತ ರತ್ನಗಳ ತಾಣಗಳಲ್ಲಿ ಒಂದಾಗಿದೆ. ಉಡುಪಿಯಿಂದ ಕೇವಲ ೬ ಕಿ.ಮೀ ದೂರದಲ್ಲಿದೆ. ಸಮುದ್ರವನ್ನು ಪ್ರೀತಿಸುವವರು ಒಮ್ಮೆ ಈ ಬೀಚ್ ಗೆ ಭೇಟಿ ನೀಡಬಹುದು.ಮಲ್ಪೆ ಬೀಚ್ ಗೆ ಭೇಟಿ ನೀಡಿದಾಗ ತಪ್ಪದೇ ಸೈಂಟ್ ಮೇರೀಸ್ ದ್ವೀಪಕ್ಕೆ ದೋಣಿ ವಿಹಾರದಲ್ಲಿ ಪ್ರಯಾಣಿಸಲು ಮರೆಯದಿರಿ. ಮಲ್ಪೆ ತೀರವು ತನ್ನ ಪ್ರಶಾಂತವಾದ ಸರೋವರಗಳ ಮತ್ತು ನಿರ್ಮಲ ನೀಲಾಕಾಶವನ್ನು ಹೊಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.[೪]
ಕೂಡ್ಲು ತೀರ್ಥ ಜಲಪಾತ
[ಬದಲಾಯಿಸಿ]ಕರ್ನಾಟಕದ ಗುಪ್ತ ರತ್ನಗಳ ತಾಣಗಳಲ್ಲಿ ಈ ಕೂಡ್ಲು ಜಲಪಾತವು ಒಂದಾಗಿದೆ. ಇದನ್ನು ಸೀತಾ ಜಲಪಾತವೆಂದೂ ಕೂಡ ಕರೆಯುತ್ತಾರೆ. ಈ ಜಲಪಾತವು ಆಹ್ಲಾದಕರವಾದ ವಾತಾವರಣವನ್ನು ಹೊಂದಿದ್ದು, ಅನೇಕ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಈ ಜಲಪಾತವು ಸುಮಾರು ೧೫೦ ಅಡಿ ಎತ್ತರದಿಂದ ಧರೆಗೆ ಧುಮ್ಮಿಕ್ಕುವ ದೃಶ್ಯ ಉಲ್ಲಾಸದಾಯಕವಾಗಿರುತ್ತದೆ. ದಟ್ಟವಾದ ಹಸಿರಿನಿಂದ ಕೂಡಿದ ಪಶ್ಚಿಮ ಘಟ್ಟಗಳ ನಡುವೆ ಧುಮ್ಮಿಕ್ಕುವ ಅಪೂರ್ವವಾದ ದೃಶ್ಯವನ್ನು ಕಣ್ಣಾರೆ ಕಂಡೇ ಆನಂದಿಸಬೇಕು.
ಶರಾವತಿ ಬ್ಯಾಕ್ ವಾಟರ್
[ಬದಲಾಯಿಸಿ]ಈ ಶರಾವತಿ ಬ್ಯಾಕ್ ವಾಟರ್ ಅಥವಾ ಹಿನ್ನೀರು ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಲಿಂಗನಮಕ್ಕಿ ಅಣೆಕಟ್ಟಿನಿಂದ ರೂಪುಗೊಂಡ ಹಿನ್ನೀರಾಗಿದೆ. ಇಲ್ಲಿ ಬಹುತೇಕ ಮಂದಿ ಸಾಹಸ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸುತ್ತಾರೆ.[೫]