ವಿಷಯಕ್ಕೆ ಹೋಗು

ವಿಕಿಪೀಡಿಯ:ಕಾರ್ಯಾಗಾರ/ಕನ್ನಡ ವಿಕಿಪೀಡಿಯ-ಅಳಿವಿನಂಚಿನ ಭಾಷೆಗಳು ೨೦೨೧-೨೦೨೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯ ಸಂಪಾದಕರೊಂದಿಗೆ ಅಳಿವಿನಂಚಿನ ಭಾಷೆಗಳ ಕುರಿತ ಕಾರ್ಯಾಗಾರ. ಕರಾವಳಿ ಪ್ರದೇಶದ ತುಳು, ಕೊರಗ ಹೀಗೆ ಹಲವು ಭಾಷೆಗಳು ಅಳಿವಿನಂಚಿನ ಭಾಷೆಗಳ ಪಟ್ಟಿಯಲ್ಲಿವೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅರೆಭಾಷೆ ನಿಘಂಟನ್ನು ತಯಾರಿಸಿದ್ದು, ಅದನ್ನು ಬಿಡುಗಡೆ ಮಾಡುವ ಮತ್ತು ಆ ನೆಲೆಯಲ್ಲಿ ನಾಡಿನ ಹಿರಿಯ ವಿದ್ವಾಂಸರ ವಿಶೇಷ ಭಾಷಣವನ್ನು ಏರ್ಪಡಿಸಲಾಗಿದೆ. ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ), ಮಂಗಳೂರು ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕೊಡಗು ಈ ಕಾರ್ಯಾಗಾರದಲ್ಲಿ ಸಹಯೋಗಗೊಂಡು ಭಾಗವಹಿಸಲಿವೆ. ತುಳು, ಕನ್ನಡ ಸಂಪಾದಕರು ಅರೆಭಾಷಿಗರೊಂದಿಗೆ ಸೇರಿ ಪ್ರಥಮ ಕಾರ್ಯಕ್ರಮವನ್ನು ನಡೆಸುತ್ತಿದೆ. ಅರೆಭಾಷೆಯು ISO ಕೋಡ್ ಹೊಂದದ, ಇನ್ನೂ ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಳ್ಳದ ಭಾಷೆ. ಪ್ರಸ್ತುತ ಕರಾವಳಿ ವಿಕಿಮೀಡಿಯನ್ಸ್‌ನ ಇಬ್ಬರು ಸದಸ್ಯರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದು ಅರೆಭಾಷೆ ನಿಘಂಟು ತಯಾರಿಸುವಲ್ಲಿ ಶ್ರಮವಹಿಸಿದ್ದಾರೆ. ಈ ನೆಲೆಯಲ್ಲಿ ನಿಘಂಟು ಬಿಡುಗಡೆಯ ಸಂದರ್ಭದಲ್ಲಿ ಎರಡು ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್‌ನ ಸದಸ್ಯರು ಪಾಲ್ಗೊಳ್ಳುವರು.

  • ಕರಾವಳಿ ವಿಕಿಪೀಡಿಯನ್ನರು ಗುಂಪು ಕೊಂಡಿ ಇಲ್ಲಿದೆ

ಮಾಹಿತಿ ನೀಡುವವರು

[ಬದಲಾಯಿಸಿ]
  1. ಪ್ರೊ. ಚೆ. ರಾಮಸ್ವಾಮಿ, ವಿಶ್ವಾಂತ ಪ್ರಾಧ್ಯಾಪಕರು, ಮದ್ರಾಸು ವಿಶ್ವವಿದ್ಯಾಲಯ
  2. ತನ್ವೀರ್ ಹಸನ್, ವಿಕಿಮೀಡಿಯ ಫೌಡೇಶನ್ ಉದ್ಯೋಗಿ
  3. ಓಂಶಿವಪ್ರಕಾಶ್, ಸಂಚಯ, ಬೆಂಗಳೂರು

ಸ್ಥಳ ಮತ್ತು ದಿನಾಂಕ

[ಬದಲಾಯಿಸಿ]
  • ಸ್ಥಳ : ಸಾನಿಧ್ಯ ಸಭಾಂಗಣ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು
  • ದಿನಾಂಕ : ಅಗಸ್ಟ್ ೦೬ ೨೦೨೨

ಭಾಗವಹಿಸುವ ಸದಸ್ಯರು

[ಬದಲಾಯಿಸಿ]
  1. --Vishwanatha Badikana (ಚರ್ಚೆ) ೧೮:೨೩, ೨೩ ಮೇ ೨೦೨೨ (UTC)
  2. --Bharathesha Alasandemajalu (ಚರ್ಚೆ) ೧೮:೨೬, ೨೩ ಮೇ ೨೦೨೨ (UTC)
  3. -- ಮಹಾವೀರ ಇಂದ್ರ (ಚರ್ಚೆ) ೧೪:೨೧, ೨೪ ಮೇ ೨೦೨೨ (UTC)
  4. --Anvith VB (ಚರ್ಚೆ) ೧೭:೨೦, ೨೬ ಮೇ ೨೦೨೨ (UTC)
  5. --2405:201:D018:F822:7194:6017:A334:B751 ೧೭:೪೮, ೨೬ ಮೇ ೨೦೨೨ (UTC)
  6. --Saroja MK (ಚರ್ಚೆ) ೧೭:೪೯, ೨೬ ಮೇ ೨೦೨೨ (UTC)