ರಾಜ ರಾಜೇಂದ್ರ (ಚಲನಚಿತ್ರ)
ರಾಜ ರಾಜೇಂದ್ರ - ಪೊನ್ ಕುಮಾರನ್ ಬರೆದು ನಿರ್ದೇಶಿಸಿದ 2015 ರ ಕನ್ನಡ ಹಾಸ್ಯ ಚಲನಚಿತ್ರವಾಗಿದೆ . [೧] ಇದರಲ್ಲಿ ಶರಣ್, ಇಶಿತಾ ದತ್ತಾ, ವಿಮಲಾ ರಾಮನ್ ಮತ್ತು ಪಿ. ರವಿಶಂಕರ್ ತಾರಾಗಣದಲ್ಲಿ ನಟಿಸಿದ್ದಾರೆ. ಈ ಚಿತ್ರವು ನಿರ್ದೇಶಕ ಕುಮಾರನ್ ಮತ್ತು ನಟ ಶರಣ್ ಅವರ ಹಿಂದಿನ ಸಾಹಸವಾದ ಜೈ ಲಲಿತಾ ನಂತರ ಪುನರ್ಮಿಲನವನ್ನು ಸೂಚಿಸುತ್ತದೆ. ಉದಯ್ ಕೆ. ಮೆಹ್ತಾ ನಿರ್ಮಿಸಿದ ಈ ಚಿತ್ರವು 6 ಫೆಬ್ರವರಿ 2015 ರಂದು ಬಿಡುಗಡೆಯಾಯಿತು. [೨] ಚಲನಚಿತ್ರದ ಮುಖ್ಯ ಕಥಾವಸ್ತುವು 1990 ರ ಮಲಯಾಳಂ ಚಲನಚಿತ್ರ ಹಿಸ್ ಹೈನೆಸ್ ಅಬ್ದುಲ್ಲಾವನ್ನು ಆಧರಿಸಿದೆ. [೩]
ಕಥಾವಸ್ತು
[ಬದಲಾಯಿಸಿ]ಈ ಕಥೆಯು ಮಣಿ ( ಶರಣ್ ಅಭಿನಯ) ಎಂಬ ವ್ಯಕ್ತಿಯ ಕುರಿತಾದದ್ದು, ಅವನು ಬಾಟಲ್ ಮಣಿ ( ಪಿ. ರವಿಶಂಕರ್ ಅಭಿನಯ) ಎಂಬ ಭಯಂಕರ ಗೂಂಡಾನ ಬದಲಿ ವೇಷಧಾರಿ. ಇದರಿಂದ ಬಾಟಲ್ ಮಣಿಯ ಕೋಪಕ್ಕೆ ಗುರಿಯಾಗುತ್ತಾನೆ. ಪರ್ಯಾಯವಾಗಿ, ರಾಜಮನೆತನದ ಸದಸ್ಯ ನೀಲಕಂಠ ರಾಜು (ರಾಮಕೃಷ್ಣ ಅಭಿನಯ)ಮೂರು ಹೆಣ್ಣುಮಕ್ಕಳು ಮತ್ತು ಮಗನನ್ನು ಹೊಂದಿರುವ ಮುದುಕ. ತನ್ನ ಮಗ ಮತ್ತು ಮೊಮ್ಮಗ ಒಂದು ದಿನ ತನ್ನ ಬಳಿಗೆ ಬರಬೇಕೆಂದು ಅವನು ಆಶಿಸುತ್ತಾನೆ, ಆದರೆ ಅವನ ಅಳಿಯಂದಿರು ಅವನು ಸಾಧ್ಯವಾದಷ್ಟು ಬೇಗ ಸಾಯಬೇಕೆಂದು ಬಯಸುತ್ತಾರೆ. ಮುದುಕನನ್ನು ಕೊಲ್ಲಲು, ಶಾಸ್ತ್ರಿ (ಸುಚೇಂದ್ರ ಪ್ರಸಾದ್) ಜೊತೆಗೆ ಮೂವರು ಅಳಿಯಂದಿರು ನಗರಕ್ಕೆ ಹೋಗುತ್ತಾರೆ ಮತ್ತು ನೀಲಕಂಠ ರಾಜು ಅವರ ಮೊಮ್ಮಗನಂತೆ ವರ್ತಿಸಲು ಮಣಿಯನ್ನು ಕಳುಹಿಸುವುದಾಗಿ ಭರವಸೆ ನೀಡುವ ವ್ಯಕ್ತಿಯನ್ನು ಸಂಪರ್ಕಿಸುತ್ತಾರೆ. ಒರಿಜಿನಲ್ ಬಾಟಲ್ ಮಣಿಯ ಬದಲಿಗೆ, ಅವನು ಮಣಿಯನ್ನು ಕಳಿಸುತ್ತಾನೆ, ಇದರಿಂದ ಮಣಿ ತನ್ನ ತಾಯಿಯನ್ನು ಆ ಒಪ್ಪಂದದ ಹಣದಿಂದ ಗುಣಸಬಹುದಾಗಿರುತ್ತದೆ.
ಮಣಿ ಅರಮನೆಗೆ ಹೋಗುತ್ತಾನೆ , ಆದರೆ ಕೋಮಲ ಹೃದಯದ ಅವನು ಮುದುಕನನ್ನು ಕೊಲ್ಲಲು ವಿಫಲನಾಗುತ್ತಾನೆ, ಬದಲಿಗೆ ಅವನು ಮುದುಕನ ಜೀವವನ್ನು ಉಳಿಸುತ್ತಾನೆ ಮತ್ತು ಅವನ ಆತ್ಮವಿಶ್ವಾಸವನ್ನು ಗಳಿಸುತ್ತಾನೆ. ಕಾಲಕಾಲಕ್ಕೆ ಶಾಸ್ತ್ರಿಯವರ ಮಗಳ ಮೇಲೆ ಪ್ರೀತಿಯೂ ಉಂಟಾಗುತ್ತದೆ. ಮೂವರು ಅಳಿಯಂದಿರು ಮತ್ತು ಶಾಸ್ತ್ರಿಗಳು, ಮಣಿಯು ಬಾಟಲ್ ಮಣಿಗಿಂತ ಭಿನ್ನ ಎಂದು ಕಂಡುಹಿಡಿದು ಅವನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ನೀಲಕಂಠರಾಜು ಅವರ ತಂದೆ ರಾಜ ರಾಜೇಂದ್ರನ ಆತ್ಮವು ಮಣಿಯನ್ನು ವಹಿಸಿಕೊಂಡು ಅವರಿಗೆ ಪಾಠ ಕಲಿಸುತ್ತದೆ. ದಿನದಿಂದ ದಿನಕ್ಕೆ, ಪ್ರತಿ ರಾತ್ರಿ ಆತ್ಮವು ಮಣಿಯ ಮೈಮೇಲೆ ಬರುತ್ತದೆ ಮತ್ತು ಕುಟುಂಬದ ಶತ್ರುಗಳನ್ನು ಹೊರಹಾಕಲು ಪ್ರಾರಂಭಿಸುತ್ತದೆ. ಇದು ಪೋಲೀಸರ ಗಮನವನ್ನು ಸೆಳೆಯುತ್ತದೆ ಮತ್ತು ಇನ್ಸ್ಪೆಕ್ಟರ್ ಇಂದ್ರಜಿತ್ ( ಸಾಧು ಕೋಕಿಲ ಅಭಿನಯ) ಸಮಸ್ಯೆಯನ್ನು ತನಿಖೆ ಮಾಡಲು ಬರುತ್ತಾರೆ.
ರಾಜ ರಾಜೇಂದ್ರನ ಆತ್ಮವನ್ನು ಬಾಟಲಿಯಲ್ಲಿ ಕೂಡಿ ಹಾಕಲು ಮೂವರು ಅಳಿಯಂದಿರು ಮಾಂತ್ರಿಕನನ್ನು ನೇಮಿಸಿಕೊಳ್ಳುತ್ತಾರೆ. ಇಂದ್ರಜಿತ್ ಬಾಟಲಿಯನ್ನು ತಪ್ಪಾಗಿ ಬಿಸಾಡಿದಾಗ ಆತ್ಮವು ಬಿಡುಗಡೆಯಾಗುತ್ತದೆ. ತಿಳಿಯದೆ, ಶಾಸ್ತ್ರಿಯವರ ಮಗಳು ಆರ್‌ಆರ್‌ನ ಆತ್ಮವನ್ನು ನೀಡುವಂತೆ ಮಾಂತ್ರಿಕನಿಗೆ ವಿನಂತಿಸುತ್ತಾಳೆ, ಬಾಟಲಿಗಳಿಗೆ ಯಾವುದೇ ಲೇಬಲ್‌ಗಳಿಲ್ಲದ ಕಾರಣ ಅವನು ಗೊಂದಲಕ್ಕೊಳಗಾಗುತ್ತಾನೆ. ಅವನು ಬಸ್ ಕಂಡಕ್ಟರ್, ಕಬಡ್ಡಿ ಆಟಗಾರ, ಸ್ವಾತಂತ್ರ್ಯ ಹೋರಾಟಗಾರ ಮತ್ತು ನಾಟಕ ಕಲಾವಿದರ ಆತ್ಮಗಳನ್ನು ತರುತ್ತಾನೆ.
ಮುಂದಿನದು ಕ್ಲೈಮ್ಯಾಕ್ಸ್‌ನಲ್ಲಿ ನಗುವಿನ ಅಲೆ, ಅಲ್ಲಿ ಈ ಎಲ್ಲಾ ಶಕ್ತಿಗಳು ಅಲ್ಲಿನ ವಿಭಿನ್ನ ಜನರನ್ನು ಆಕ್ರಮಿಸಿಕೊಳ್ಳುತ್ತವೆ ಮತ್ತು ಮಣಿ ಆ ಮೂವರು ಅಳಿಯಂದಿರನ್ನು ಹೇಗೆ ಗೆಲ್ಲುತ್ತಾನೆ ಎಂಬುದು ಇದೆ.
ಪಾತ್ರವರ್ಗ
[ಬದಲಾಯಿಸಿ]- ಶರಣ್ - ಮಣಿ ಮತ್ತು ರಾಜ ರಾಜೇಂದ್ರ ಆಗಿ (ದ್ವಿಪಾತ್ರ)
- ಶಾಸ್ತ್ರಿಯವರ ಮಗಳು ಸ್ವಾತಿಯಾಗಿ ಇಶಿತಾ ದತ್ತಾ
- ರಾಜ ರಾಜೇಂದ್ರನ ಪತ್ನಿ ಯಮುನಾ ಪಾತ್ರದಲ್ಲಿ ವಿಮಲಾ ರಾಮನ್
- ನೀಲಕಂಠರಾಜು, ರಾಜ ರಾಜೇಂದ್ರನ ಮಗ ರಾಮಕೃಷ್ಣ
- ಇನ್ಸ್ ಪೆಕ್ಟರ್ ಇಂದ್ರಜಿತ್ ಪಾತ್ರದಲ್ಲಿ ಸಾಧು ಕೋಕಿಲಾ
- ಶ್ರೀನಿವಾಸ ಮೂರ್ತಿ , ನೀಲಕಂಠರಾಜು ಅವರ ಬಾಲ್ಯದ ಗೆಳೆಯ , ಸಂಗೀತ ಶಿಕ್ಷಕರಾಗಿ
- ಪಿ ರವಿಶಂಕರ್ , ಬಾಟಲ್ ಮಣಿ ಆಗಿ
- ನೀಲಕಂಠರಾಜು ಅವರ ಮೂರನೇ ಅಳಿಯನಾಗಿ ನೀನಾಸಂ ಅಶ್ವಥ್
- ಸುಹಾಸ್ ಗಿರೀಶ್
- ತಬಲಾ ನಾಣಿ
- ಲಕ್ಷ್ಮೀ ಸಿದ್ದಯ್ಯ
- ಸ್ವಾತಿಯ ತಂದೆ ಶಾಸ್ತ್ರಿಯಾಗಿ ಸುಚೇಂದ್ರ ಪ್ರಸಾದ್
- ರೇಖಾ ಕುಮಾರ್
- ಇನ್ಸ್ ಪೆಕ್ಟರ್ ಇಂದ್ರಜಿತ್ ಅವರ ಪತ್ನಿಯಾಗಿ ನರ್ಸ್ ಜಯಲಕ್ಷ್ಮಿ
- ಕುರಿ ಪ್ರತಾಪ್ ಕಪ್ಪು ಜಾದೂಗಾರನಾಗಿ
ಈ ಹಿಂದೆ ಜೈ ಲಲಿತಾ ಚಿತ್ರದಲ್ಲಿ ಶರಣ್ ಜೊತೆ ಕೆಲಸ ಮಾಡಿದ್ದ ಪೊನ್ ಕುಮಾರನ್ ಸಿನಿಮಾ ಬಿಡುಗಡೆಗೂ ಮುನ್ನ ಪೌರಾಣಿಕ ಹಾಸ್ಯ ಸಿನಿಮಾ ಮಾಡಲು ಪರಸ್ಪರ ಒಪ್ಪಿಕೊಂಡಿದ್ದರು. ಚಿತ್ರವು ಜುಲೈ 2014 ರಲ್ಲಿ ಪ್ರಾರಂಭವಾಯಿತು ಮತ್ತು ಮೈಸೂರು ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿತು. ಜೈ ಲಲಿತಾ ಚಿತ್ರಕ್ಕೆ ಸಂಗೀತ ನೀಡಿರುವ ಶ್ರೀಧರ್ ವಿ.ಸಂಭ್ರಮ್ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದಾಗ್ಯೂ, ನಂತರ ಸಂಗೀತವನ್ನು ಟ್ಯೂನ್ ಮಾಡಲು ಅರ್ಜುನ್ ಜನ್ಯ ಅವರನ್ನು ನೇಮಿಸಲಾಯಿತು. ದೂರದರ್ಶನ ನಟಿ ಇಶಿತಾ ದತ್ತಾ ಅವರನ್ನು ಶರಣ್ ಎದುರು ನಾಯಕಿಯಾಗಿ ನಟಿಸಲು ನೇಮಿಸಲಾಯಿತು. [೪] ಈ ಹಿಂದೆ ಬ್ಲಾಕ್‌ಬಸ್ಟರ್ ಆಪ್ತರಕ್ಷಕದಲ್ಲಿ ನಟಿಸಿದ್ದ ಮತ್ತೊಬ್ಬ ಜನಪ್ರಿಯ ದಕ್ಷಿಣ ಭಾರತದ ನಟಿ ವಿಮಲಾ ರಾಮನ್, ಎರಡನೇ ನಾಯಕಿಯಾಗಿ ನಟಿಸಲು ನೇಮಕಗೊಂಡರು ಮತ್ತು 15 ನವೆಂಬರ್ 2014 ರಂದು ಅವರ ದೃಶ್ಯಗಳನ್ನು ಚಿತ್ರೀಕರಿಸಲು ತಂಡವನ್ನು ಸೇರಿಕೊಂಡರು. [೫]
ಹಿನ್ನೆಲೆಸಂಗೀತ
[ಬದಲಾಯಿಸಿ]ಅರ್ಜುನ್ ಜನ್ಯ ಚಿತ್ರದ ಹಿನ್ನೆಲೆಸಂಗೀತವನ್ನು ಸಂಯೋಜಿಸಿದ್ದಾರೆ. ನಟ ಶರಣ್ ಈ ಚಿತ್ರದ ಮೂಲಕ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಈ ಆಲ್ಬಂ ನಾಲ್ಕು ಹಾಡುಗಳನ್ನು ಒಳಗೊಂಡಿದೆ, ಸಾಹಿತ್ಯವನ್ನು ಕೆ. ಕಲ್ಯಾಣ್, ವಿ. ನಾಗೇಂದ್ರ ಪ್ರಸಾದ್ ಮತ್ತು ಯೋಗರಾಜ್ ಭಟ್ ಬರೆದಿದ್ದಾರೆ .
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ರಾಜ ರಾಜೇಂದ್ರ" | ಕೆ. ಕಲ್ಯಾಣ್ | ಫಯಾಜ್ ಖಾನ್ | |
2. | "ಮಿಣಿ ಮಿಣಿ ವಜ್ರಮುನಿ" | ವಿ. ನಾಗೇಂದ್ರ ಪ್ರಸಾದ್ | ವಿಜಯ್ ಪ್ರಕಾಶ್, ಫಯಾಜ್ ಖಾನ್ | |
3. | "ಮಧ್ಯಾಹ್ನ ಕನಸಿನಲೀ" | ಯೋಗರಾಜ ಭಟ್ | ಶರಣ್, ಮಂಜುಳಾ ಗುರುರಾಜ್ | |
4. | "ಹಾಡು ಹಾಡುತೀನಿ" | ವಿ. ನಾಗೇಂದ್ರ ಪ್ರಸಾದ್ | ಶಂಕರ್ ಶಾನುಭೋಗ್, ವಿಜಯ್ ಪ್ರಕಾಶ್ |
ಬಿಡುಗಡೆ
[ಬದಲಾಯಿಸಿ]'U' ಪ್ರಮಾಣಪತ್ರದೊಂದಿಗೆ ಸೆನ್ಸಾರ್ ಮಾಡಲಾದ ಚಲನಚಿತ್ರವು 6 ಫೆಬ್ರವರಿ 2015 ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. [೬]
ವಿಮರ್ಶೆಗಳು
[ಬದಲಾಯಿಸಿ]"ದೇಸಿಮಾರ್ತಿನಿ" ಇದನ್ನು 3/5 ರೇಟ್ ಮಾಡಿದೆ. ದೇಸಿಮಾರ್ತಿನಿಯ ಶ್ರೀಜಾ ಶ್ರೀಧರನ್ ಸಿನಿಮಾದ ಬಗ್ಗೆ ವಿವರಿಸುತ್ತಾ “ಆರಾಮವಾಗಿ ಕುಳಿತುಕೊಳ್ಳಿ, ನಕ್ಕುಬಿಡಿ ಮತ್ತು ಶರಣ್ ಅವರನ್ನು ಗಮನಿಸಿ. ಚಿತ್ರದ ಉದ್ದ ಪರಿಪೂರ್ಣವಾಗಿದೆ , ಸಂಕಲನವು ಗರಿಗರಿಯಾಗಿದೆ. ಛಾಯಾಗ್ರಹಣವು ಮನಸ್ಥಿತಿಯನ್ನು ಚೆನ್ನಾಗಿ ಸೆರೆಹಿಡಿಯುತ್ತದೆ ಆದರೆ ನಿರ್ದೇಶಕರು ವೈಡ್-ಆಂಗಲ್ ಶಾಟ್‌ಗಳ ಮೇಲೆ ಸ್ವಲ್ಪ ಹೆಚ್ಚು ಗಮನ ಹರಿಸಬೇಕು, ಅದು ಕೆಲವೊಮ್ಮೆ ಬೋಳುಬೋಳಾಗಿ ಕಾಣುತ್ತದೆ. ನಿಮ್ಮ ವಾರಾಂತ್ಯವನ್ನು ಆನಂದಿಸಲು ಇದು ಪರಿಪೂರ್ಣ ಚಿತ್ರವಾಗಿದೆ ಮತ್ತು ಶರಣ್ ಅವರ ಕೈಯಲ್ಲಿ ಹೊಸ ಹಿಟ್ ಇದೆ ಎಂಬುದರಲ್ಲಿ ಸಂದೇಹವಿಲ್ಲ. ಪಿ ಕುಮಾರ್ ಅವರು ಸರಳವಾದ ಕಥೆಯನ್ನು ಒಟ್ಟುಗೂಡಿಸಿ ಅದನ್ನು ಆರೋಗ್ಯಕರ ಮನರಂಜನೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕಥೆಗಾರ ಮತ್ತು ನಿರ್ದೇಶಕರಾಗಿ ಗೆದ್ದಿದ್ದಾರೆ. " [೭]
ಉಲ್ಲೇಖಗಳು
[ಬದಲಾಯಿಸಿ]- ↑ "Sharan's new film titled Raja Rajendra". Times of India. 17 June 2014.
- ↑ "RajaRajendra releasing on 6th February". 123Kannadamovies. Archived from the original on 2 ಏಪ್ರಿಲ್ 2015. Retrieved 30 January 2015.
- ↑ "ಆರ್ಕೈವ್ ನಕಲು". Archived from the original on 2017-07-29. Retrieved 2022-01-17.
- ↑ "Ishita Dutta talks about her Kannada debut". Times of India. 29 January 2015.
- ↑ "Vimala Raman to act in Raja Rajendra". Chitraloka. 4 November 2014. Archived from the original on 18 ಜನವರಿ 2022. Retrieved 17 ಜನವರಿ 2022.
- ↑ "Raja Rajendra Censored with U - Releasing Feb 6th". Chitraloka. 28 January 2015. Archived from the original on 18 ಜನವರಿ 2022. Retrieved 17 ಜನವರಿ 2022.
- ↑ "Movie Review - Raja Rajendra". Desimartini.com. 8 February 2015. Archived from the original on 9 ಫೆಬ್ರವರಿ 2015. Retrieved 9 February 2015.