ವಿಷಯಕ್ಕೆ ಹೋಗು

ಹಿಂದೂ ಧರ್ಮದ ವಿಶ್ವಕೋಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದ ವಿಶ್ವಕೋಶ,ನೇ ಆವೃತ್ತಿ., ೨೦೧೨, ಸಮಗ್ರ, ಬಹು ಸಂಪುಟ, ಇಂಗ್ಲಿಷ್ ಭಾಷಾ ವಿಶ್ವಕೋಶ. 'ಹಿಂದೂ ಧರ್ಮ' ಇದು ಸಂಸ್ಕೃತ ನುಡಿಗಟ್ಟು "ಸನಾತನ ಧರ್ಮ ", ಅಂದರೆ "ಶಾಶ್ವತ ಧರ್ಮ" ಅಥವಾ "ಶಾಶ್ವತ ರೀತಿ" ಎಂಬ ಅರ್ಥದಲ್ಲಿ, ಹಿಂದೂ ಧರ್ಮ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ವಿಷಯದಲ್ಲಿ ಹೇಳಲಾಗುತ್ತದೆ. [] ಈ ವಿಶ್ವಕೋಶವು ೭,೧೮೪ ಪುಟ, ೧೧ ಸಂಪುಟಗಳ ಪ್ರಕಟಣೆಯಾಗಿದ್ದು, ದೇವಾಲಯಗಳು, ಸ್ಥಳಗಳು, ಚಿಂತಕರು, ಆಚರಣೆಗಳು ಮತ್ತು ಹಬ್ಬಗಳ ಸಂಪೂರ್ಣ-ವರ್ಣಮಯ ಸಚಿತ್ರ ವಿವರಣೆಗಳನ್ನು ಒಳಗೊಂಡಿದೆ. [] ಹಿಂದೂ ಧರ್ಮದ ವಿಶ್ವಕೋಶವು ಪರಮಾರ್ಥ ನಿಕೇತನ ಮತ್ತು ಭಾರತ ಪರಂಪರೆಯ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಅವರ ಸ್ಫೂರ್ತಿ ಮತ್ತು ಕನಸಿನ ಯೋಜನೆಯಾಗಿದೆ. ೨೫ ವರ್ಷಗಳ ಪರಿಶ್ರಮದಿಂದ ಇದನ್ನು ಡಾ.ಕಪಿಲ್ ಕಪೂರ್ ಅವರು ೨೦೦೦ ಕ್ಕೂ ಹೆಚ್ಚು ವಿದ್ವಾಂಸರ ನೆರವಿನೊಂದಿಗೆ ಸಂಪಾದಿಸಿದ್ದಾರೆ. []

ವಿಶ್ವಕೋಶವು ಪರಿಕಲ್ಪನಾತ್ಮಕ ದೃಷ್ಟಿಕೋನವನ್ನು ಮತ್ತು ಹಿಂದೂ ಧರ್ಮದ ವಿವಿಧ ಮುಖಗಳ ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತದೆ. ಇದು ಕೇವಲ ಧರ್ಮಕ್ಕೆ ಸೀಮಿತಗೊಳ್ಳದೆ, ಇದರಲ್ಲಿ ಕಲೆ, ಇತಿಹಾಸ, ಭಾಷೆ, ಸಾಹಿತ್ಯ, ತತ್ವಶಾಸ್ತ್ರ, ರಾಜಕೀಯ, ವಿಜ್ಞಾನ ಮತ್ತು ಮಹಿಳಾ ಅಧ್ಯಯನವೂ ಒಳಗೊಂಡಿದೆ. ಸಂಪಾದಕೀಯ ಪರಿಚಯ ದಾಖಲೆಗಳು:

"ಈ ವಿಶ್ವಕೋಶವು ಪುರಾತನ ಜೀವನ ವಿಧಾನದ ಒಂದು ಸಮಗ್ರವಾದ ಕಲ್ಪನೆಯನ್ನು ನೀಡಲು ಸಿದ್ಧಪಡಿಸಲಾಗಿದೆ. ಸಾವಿರಾರು ವರ್ಷಗಳ ಬೇರುಗಳನ್ನು ಹೊಂದಿರುವ ಸಂಸ್ಕೃತಿಯನ್ನು 'ಹಿಂದೂ ಧರ್ಮ' ಎಂದು ಕಳೆದ ಎರಡು ನೂರು ವರ್ಷಗಳ ಇಂಗ್ಲಿಷ್ ಇತಿಹಾಸದಲ್ಲಿ ವಿವರಿಸಲಾಗಿದೆ. ಇದು ಸತ್ಯಗಳು, ಸಿದ್ಧಾಂತಗಳು, ವ್ಯವಸ್ಥೆಗಳು, ಆಚರಣೆಗಳು, ಸಂಸ್ಥೆಗಳು, ನಂಬಿಕೆಗಳು, ಪಠ್ಯಗಳು, ಚಿಂತಕರು ಮತ್ತು ಮೌಲ್ಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ವಾಸ್ತವವಾಗಿ, ಪ್ರಪಂಚದ ಎರಡು ಜೀವಂತ ಜ್ಞಾನ ಸಂಸ್ಕೃತಿಗಳಲ್ಲಿ ಒಂದಾದ ವೈದಿಕ (Semitic being the other) ಹಿಂದೂ ಸಮಾಜವು ಕನಿಷ್ಟ ೫,೦೦೦ ವರ್ಷಗಳಿಂದ ಇರುವ 'ಜ್ಞಾನ ಸಮಾಜ'ವಾಗಿದೆ: 'ವೇದ' ಎಂಬ ಪದದ ಅರ್ಥವೇ 'ಜ್ಞಾನ' ಎಂಬ ಅರ್ಥ ಹೊಂದಿದೆ."

೩-೪ ಏಪ್ರಿಲ್ ೨೦೧೦ ರಂದು , ಹಿಂದೂ ಧರ್ಮದ ವಿಶ್ವಕೋಶದ ಪೂರ್ವವೀಕ್ಷಣೆ ಮತ್ತು ಆಶೀರ್ವಚನ ಸಮಾರಂಭವನ್ನು ಪರಮಾರ್ಥ್ ನಿಕೇತನದಲ್ಲಿ ನಡೆಯಿತು. ಇದರಲ್ಲಿ ದಲೈ ಲಾಮಾ, ಎಂಎಂ ಸ್ವಾಮಿ ಗುರುಶರಾನಂದ್, ಸ್ವಾಮಿ ಅವಧಾನಂದ್ ಗಿರಿ, ಸಂತ ಶ್ರೀ ರಮೇಶಭಾಯಿ ಓಜಾ, ಸ್ವಾಮಿ ರಾಮದೇವ್, ಸಂತ ಶ್ರೀ ಮೊರಾರಿ ಬಾಪು ಮತ್ತು ಇತರ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ನಾಯಕರು, ಶ್ರೀ ಎಲ್ ಕೆ ಅಡ್ವಾಣಿ ಮತ್ತು ಆಗಿನ ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಐಎಚ್‌ಆರ್‌ಎಫ್ ಮಂಡಳಿಯ ಸದಸ್ಯರು ಮತ್ತು ಟ್ರಸ್ಟಿಗಳು ಭಾಗವಹಿಸಿದ್ದರು.

ಹಿಂದೂ ಧರ್ಮದ ವಿಶ್ವಕೋಶವನ್ನು ಭಾರತದ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ೨೩ ಜೂನ್ ೨೦೧೪ ರಂದು ನೀಡಲಾಯಿತು. []

ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿರುವ ಹಿಂದೂ-ಜೈನ ದೇವಸ್ಥಾನದ ಪರಮಾರ್ಥ್ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿಯವರು ೧೯೮೭ ರಲ್ಲಿ ಈ ಕಲ್ಪನೆಯನ್ನು ರೂಪಿಸಿದರು. ತರುವಾಯ, ಅದೇ ವರ್ಷದ ನವೆಂಬರ್‌ನಲ್ಲಿ, ಹಿಂದೂ ಧರ್ಮದ ಅಧಿಕೃತ, ಸಮಗ್ರ ಮತ್ತು ನವೀಕೃತ ವಿಶ್ವಕೋಶವನ್ನು ಸಿದ್ಧಪಡಿಸುವ ಕಲ್ಪನೆಯನ್ನು ಕಾರ್ಯಗತಗೊಳಿಸಲು ಭಾರತ ಪರಂಪರೆಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದರು. [] ಡಾ.ಕೆ.ಎಲ್. ಶೇಷಗಿರಿ ರಾವ್, ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಧಾರ್ಮಿಕ ಅಧ್ಯಯನಗಳ ಪ್ರಾಧ್ಯಾಪಕರಾದ ಎಮರಿಟಸ್ ಮುಖ್ಯ ಸಂಪಾದಕರಾಗಿ ನೇಮಕಗೊಂಡರು.

ಅಭಿವೃದ್ಧಿ

[ಬದಲಾಯಿಸಿ]

ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಡಾ.ಕೆ.ಎಲ್ ಶೇಷಗಿರಿ ರಾವ್ ನೇತೃತ್ವದ ಅಂತರಾಷ್ಟ್ರೀಯ ವಿದ್ವಾಂಸರ ತಂಡವು 1998 ರಿಂದ ಮುಂದಿನ ಐದು ವರ್ಷಗಳ ಕಾಲ ಒಟ್ಟಾಗಿ ಕೆಲಸ ಮಾಡಿದರು. ಅಂದು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಈ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

"ನಿಮ್ಮ ಕಾರ್ಯವು 'ಮೂರನೇ ಸಹಸ್ರಮಾನ'ದ ಮಹತ್ವದ ಯೋಜನೆಯಾಗಿದ್ದು, ಇದೊಂದು ಸ್ಮರಣೀಯ ಕಾರ್ಯವಾಗಿದೆ. ಇದು ನಿಜಕ್ಕೂ ಜ್ಞಾನ ಯಜ್ಞ . ಆದ್ದರಿಂದ, ಈ ಯಜ್ಞದ ಯಶಸ್ಸಿಗೆ ತಮ್ಮ ಸಮಯ, ಪ್ರತಿಭೆ ಮತ್ತು ಪಾಂಡಿತ್ಯವನ್ನು ಧಾರೆ ಎರೆದ ಎಲ್ಲರಿಗೂ ನಮ್ಮ ಅಭಿನಂದನೆಗೆ ಅರ್ಹರು."

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ನಿವೃತ್ತ ರೆಕ್ಟರ್, ಪ್ರಸ್ತುತ ಇಂಗ್ಲಿಷ್ ಮತ್ತು ಸಂಸ್ಕೃತ ಅಧ್ಯಯನಗಳ ಪ್ರಾಧ್ಯಾಪಕರಾಗಿರುವ ಡಾ. ಕಪಿಲ್ ಕಪೂರ್ ಅವರು ಯೋಜನೆಯ ಮುಖ್ಯ ಸಂಪಾದಕರಾಗಿ ನೇಮಕಗೊಂಡರು. ಅಲ್ಲದೆ, ಭೌತವಿಜ್ಞಾನಿ ವರದರಾಜ ವಿ.ರಾಮನ್ ಅವರು ಕೂಡ ನಾಲ್ವರು ಕಾರ್ಯನಿರ್ವಾಹಕ ಸಂಪಾದಕರಲ್ಲಿ ಒಬ್ಬರಾಗಿದ್ದರು. ರಾಮನ್ ಅವರು ಹಿಂದೂ ಧರ್ಮ ಮತ್ತು ವಿಜ್ಞಾನದ ಕುರಿತು ಸಾಕಷ್ಟು ಬರೆದಿದ್ದಾರೆ.

ಮುನ್ನುಡಿ

[ಬದಲಾಯಿಸಿ]

ವಿಶ್ವಕೋಶಕ್ಕೆ ೪೪ ಪುಟಗಳ ಮುನ್ನುಡಿ ಬರೆದಿರುವ ಡಾ.ಕರಣ್ ಸಿಂಗ್ ಅವರು ಮೊದಲ ಪುಟದಲ್ಲೇ ಹೀಗೆ ಉಲ್ಲೇಖಿಸುತ್ತಾರೆ:

"ಹಿಂದೂ ಧರ್ಮವು ತನ್ನನ್ನು ಸನಾತನ ಧರ್ಮ, ಸನಾತನ ನಂಬಿಕೆ ಎಂದು ಕರೆಯಲ್ಪಡುತ್ತದೆ. ಏಕೆಂದರೆ ಇದು ಯಾವುದೇ ಒಬ್ಬ ವ್ಯಕ್ತಿಯ ಬೋಧನೆಯನ್ನು ಅವಲಂಬಿಸಿರುವುದಿಲ್ಲ. ಆದರೆ ಭಾರತೀಯ ನಾಗರೀಕತೆಯ ಆರಂಭ ಕಾಲದಿಂದಲೂ ಮಹಾನ್ ದಾರ್ಶನಿಕರು ಮತ್ತು ಋಷಿ-ಮುನಿಗಳ ಜ್ಞಾನ ಮತ್ತು ಸ್ಫೂರ್ತಿಯನ್ನು ಆಧರಿಸಿದೆ."

ಮುಂದುವರೆದು, ಡಾ.ಸಿಂಗ್ ಅವರು ತಮ್ಮ ಮುನ್ನುಡಿಯ ಕೊನೆಯ ಭಾಗದಲ್ಲಿ ಹೀಗೆ ಉಲ್ಲೇಖಿಸುತ್ತಾರೆ:

"ಹಲವು ವರ್ಷಗಳ ವಿದ್ವತ್ತು, ಸಂಘಟನೆ ಮತ್ತು ಶ್ರದ್ಧೆಯ ಫಲವಾಗಿ ಈ ಬಹುನಿರೀಕ್ಷಿತ ಹಾಗೂ ಹನ್ನೊಂದು ಸಂಪುಟಗಳ ಬೃಹತ್ ಹಿಂದೂ ವಿಶ್ವಕೋಶ ಪ್ರಕಟವಾಗಿದೆ. ಹಿಂದೂ ಸಂಶೋಧನೆಯ ಇತಿಹಾಸದಲ್ಲಿ ಇದೊಂದು ಮಹತ್ವದ ಹೆಗ್ಗುರುತಾಗಲಿದೆ."

ವಿಮರ್ಶೆಗಳು

[ಬದಲಾಯಿಸಿ]

ಇಂದ್ರಜಿತ್ ಹಜ್ರಾ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಬರೆಯುತ್ತಾ, "ಲೇಖನಗಳು ಸಂಕ್ಷಿಪ್ತವಾಗಿದ್ದು, ಹಿನ್ನೆಲೆ ಮತ್ತು ಮುನ್ನೆಲೆಗಳೆರಡರ ಜೊತೆಗೆ ಗ್ರಂಥಸೂಚಿಯನ್ನು ಒದಗಿಸುತ್ತವೆ." ಎಂದು ಹೇಳುತ್ತಾರೆ. ಮುಂದುವರೆದು:

"ಇದೊಂದು ಅತ್ಯುತ್ತಮವಾದ ಪ್ರಕಟಣೆಯಾಗಿದ್ದು, ಇಲ್ಲಿದರಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡದಲಾಗಿದೆ. ಧಮ್ಮಪದ (ಥೇರವಾದ ಬೌದ್ಧಧರ್ಮದ ಮುಖ್ಯ ಪಠ್ಯ), 'ಚಿಪ್ಕೊ ಚಳವಳಿ' (ಭಾರತದಲ್ಲಿ ಅರಣ್ಯ ನಾಶವನ್ನು ವಿರೋಧಿಸಲು ಸಂಘಟಿತ ಪರಿಸರ ಚಳವಳಿ '), ಹಾಗೆಯೇ 'ಸೌರ ಮಂಡಲ'ದಂತೆ, ಇದು 'ಹಿಂದೂ ಧರ್ಮ'ವನ್ನು ಯಾವುದೇ ಸಂಕುಚಿತ, ಮತಾಂತರದ ರೀತಿಯಲ್ಲಿ ವಿವರಿಸದ ವಿಶ್ವಕೋಶವಾಗಿದೆ."

ಹಜ್ರಾ ತಮ್ಮ ವಿಮರ್ಶೆಯ ಕೊನೆಯಲ್ಲಿ, "ವೈಚಾರಿಕತೆ ವಿಷಯದಲ್ಲಿ ಆಸಕ್ತಿ ಹೊಂದಿರುವ ಯಾರಿಗಾದರೂ ಇದೊಂದು ಉತ್ತಮ ನಿಧಿಯಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಾಜಿ ಗೃಹ ಸಚಿವ ಎಲ್ ಕೆ ಅಡ್ವಾಣಿ ಈ ಕೃತಿಯನ್ನು "ಒಂದು ಮಹತ್ವದ ಪ್ರಕಟಣೆ" ಎಂದು ಕರೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Hinduism is an intellectual system, not religion". Hindustan Times. Archived from the original on 23 April 2013. Retrieved 10 February 2013. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "Encyclopedia of Hinduism Ed. Dr. Kapil Kapoor". Rupa & Co. Retrieved 4 March 2013.
  3. "The Sunday Tribune - Books". The Tribune. Retrieved 5 March 2013.
  4. President of India receives a copy of Encyclopedia of Hinduism Press Information Bureau, Government of India, President's Secretariat, Press Release 23-06-2014
  5. "A Landmark Publication - Shri L. K. Advani". L. K. Advani. Archived from the original on 29 ಜನವರಿ 2013. Retrieved 5 March 2013. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)