ಟೊಮೇಟೊ ಸೂಪ್
ಟೊಮೇಟೊ ಸೂಪ್ ಮುಖ್ಯ ಘಟಕಾಂಶವಾಗಿ ಟೊಮೇಟೊಗಳಿಂದ ತಯಾರಿಸಲ್ಪಡುವ ಒಂದು ಸೂಪ್ ಆಗಿದೆ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಬೋಗುಣಿಯಲ್ಲಿ ಬಡಿಸಬಹುದು. ಇದನ್ನು ವಿವಿಧ ರೀತಿಗಳಲ್ಲಿ ತಯಾರಿಸಬಹುದು.[೧] ಇದು ನೋಡಲು ರೂಪದಲ್ಲಿ ನಯವಾಗಿರಬಹುದು, ಮತ್ತು ಟೊಮೇಟೊ ತುಂಡುಗಳು, ಕೆನೆ, ಕೋಳಿಮಾಂಸ ಅಥವಾ ತರಕಾರಿಯ ಬ್ರಾತ್, ಶ್ಯಾವಿಗೆ, ಇತರ ತರಕಾರಿಗಳ ತುಂಡುಗಳು ಮತ್ತು ಮಾಂಸದುಂಡೆಗಳನ್ನು ಒಳಗೊಳ್ಳುವ ಪಾಕವಿಧಾನಗಳೂ ಇವೆ. ಟೊಮೇಟೊ ಸೂಪ್‍ನ ಜನಪ್ರಿಯ ಅಲಂಕಾರದ ಹರಹುಗಳಲ್ಲಿ ಹುಳಿ ಕೆನೆ ಅಥವಾ ಕ್ರೂಟಾನ್‍ಗಳು ಸೇರಿವೆ. ಅಮೇರಿಕದಲ್ಲಿ, ಈ ಸೂಪ್‍ನ್ನು ಆಗಾಗ್ಗೆ ಕ್ರ್ಯಾಕರ್‌ಗಳು ಮತ್ತು ಗ್ರಿಲ್ ಮಾಡಿದ ಚೀಜ಼್ ಸ್ಯಾಂಡ್‍ವಿಚ್‍ನೊಂದಿಗೆ ಬಡಿಸಲಾಗುತ್ತದೆ. ಕ್ರ್ಯಾಕರ್‌ಗಳನ್ನು ಬಡಿಸುವವನು ಸೂಪ್‍ನ ಮೇಲೆ ಚೂರು ಚೂರು ಮಾಡಿ ಹಾಕಬಹುದು. ಟೊಮೇಟೊ ಸೂಪ್ ಪೋಲಂಡ್ ಮತ್ತು ಅಮೇರಿಕದಲ್ಲಿನ ಅಗ್ರ ತೃಪ್ತಿದಾಯಕ ಆಹಾರಗಳಲ್ಲಿ ಒಂದಾಗಿದೆ.[೨][೩] ಟೊಮೇಟೊಗಳನ್ನು ಕುದಿನೀರಿನಲ್ಲಿ ಮುಳುಗಿಸಿ, ಸಿಪ್ಪೆಯನ್ನು ತೆಗೆದು, ನಂತರ ತಿಳ್ಳಿನ ರೂಪ ಬರಲು ಚೂರು ಮಾಡಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Herbig, Paul A. (1998). Handbook of Cross-Cultural Marketing. Binghamton, NY: International Business Press. p. 45. ISBN 978-0789001542.
Irish and Italians prefer creamy tomato soup, Germans want rice, and Colombians want spice.
- ↑ "Always home-made, tomato soup is one of the first things a Polish cook learns to prepare." [in:] Marc E. Heine. Poland. 1987; "tradycyjny obiad kuchni polskiej, składający się z zupy pomidorowej z makaronem, kotleta schabowego, ziemniaków, mizeri z ogórków i kompotu." [in:] Etnografia polska. PAN. t. 48-49, 2004
- ↑ About.com. "Top 25 Comfort Foods and Recipes". Archived from the original on 18 ನವೆಂಬರ್ 2012. Retrieved 18 November 2012.