ಕ್ರೂಟಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೂಟಾನ್ ಹಲವುವೇಳೆ ಘನಾಕಾರದ ಮತ್ತು ಮಸಾಲೆಹಾಕಿ ಹದಮಾಡಲಾದ, ಎಣ್ಣೆ ಹಾಕಿ ಹುರಿಯಲಾದ ಅಥವಾ ಮರುಬೇಕ್ ಮಾಡಲಾದ, ಸ್ಯಾಲಡ್‍ಗಳಿಗೆ, ವಿಶೇಷವಾಗಿ ಸೀಸರ್ ಸ್ಯಾಲಡ್‍ಗೆ, ರಚನೆ ಮತ್ತು ಸ್ವಾದ ಸೇರಿಸಲು, ಸೂಪ್‍ಗಳಿಗೆ ಒಂದು ಜೊತೆ ಪದಾರ್ಥವಾಗಿ, ಅಥವಾ ಲಘು ಆಹಾರವಾಗಿ ತಿನ್ನಲು ಬಳಸಲಾಗುವ ಬ್ರೆಡ್‍ನ ಒಂದು ಚೂರು. ಕ್ರೂಟಾನ್ ಶಬ್ದ ಫ಼್ರೆಂಚ್ ಶಬ್ದ ಕ್ರೂಟ್ ಅಂದರೆ ಗಟ್ಟಿ ಹೊರಪದರದಿಂದ ಹುಟ್ಟಿದೆ. ಬಹುತೇಕ ಜನರು ಕ್ರೂಟಾನ್‍ಗಳು ಏಕಪ್ರಕಾರವಾಗಿ ಸಣ್ಣ ಘನಗಳ ಆಕಾರದಲ್ಲಿ ಬರುತ್ತವೆ ಎಂದು ಪರಿಗಣಿಸುತ್ತಾರೆ, ಆದರೆ ವಾಸ್ತವವಾಗಿ ಅವು ಯಾವುದೇ ಗಾತ್ರ ಮತ್ತು ಆಕಾರದಲ್ಲಿರಬಹುದು, ಒಂದು ಬಹಳ ದೊಡ್ಡ ಹೋಳಿನವರೆಗೆ.