ಮಾವಿನಕಾಯಿ ಉಪ್ಪಿನಕಾಯಿ
ಮಾವಿನಕಾಯಿ ಉಪ್ಪಿನಕಾಯಿ ಮಾವಿನಕಾಯಿ ಬಳಸಿ ತಯಾರಿಸಿದ ಒಂದು ಬಗೆಯ ಉಪ್ಪಿನಕಾಯಿ. ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಬಹಳ ಜನಪ್ರಿಯವಾಗಿದೆ.
ಇತಿಹಾಸ
[ಬದಲಾಯಿಸಿ]ಉಪ್ಪಿನಕಾಯಿ ತಯಾರಿಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಕ್ರಿಸ್ತಶಕ ೧೬೦೦ ಕನ್ನಡದ ಕವಿ ಅಣ್ಣಾಜಿಯು ತನ್ನ ಸೌಂದರ ವಿಲಾಸದಲ್ಲಿ ಎಳೆಮಾವಿನ ಉಪ್ಪಿನ ಕಾಯಿಯ ಉಲ್ಲೇಖ ಮಾಡಿರುವುದು ಕಂಡುಬರುತ್ತದೆ. [೧]
ವಿಧಗಳು
[ಬದಲಾಯಿಸಿ]ಭಾರತದಲ್ಲಿ ಉಪ್ಪಿನಕಾಯಿ ಮಾಡುವ ಪ್ರಕ್ರಿಯೆಯು ಇತರೆ ಪ್ರದೇಶಗಳಿಗಿಂತ ಭಿನ್ನವಾಗಿದೆ. ಮಾವಿನಕಾಯಿ ಹೋಳುಗಳನ್ನು ಅಥವ ಮಿಡಿಗಳನ್ನು ಉಪ್ಪಿನ ಜೊತೆ ಗಾಳಿ ರಹಿತ ಭರಣಿಯಲ್ಲಿ ಶೇಖರಿಸಿಟ್ಟು, ನಂತರ ಮಸಾಲೆ ಹಾಕಿ ಉಪ್ಪಿನಕಾಯಿ ತಯಾರಿಸಲಾಗುವುದು. ಉಪ್ಪಿನಕಾಯಿ ಭಾರತದಲ್ಲಿ ಒಂದು ವಿಶೇಷವಾದ ಪದಾರ್ಥವಾಗಿದ್ದು, ಇದನ್ನು ವಿವಿಧ ಬಗೆಯ ತರಕಾರಿಗಳನ್ನು ಉಪಯೋಗಿಸಿ ಮಾಡಲಾಗುವುದು.[೨] ಅದರಲ್ಲಿ ಎಳೆ ಮಾವಿನಕಾಯಿ ಉಪ್ಪಿನ ಕಾಯಿಯು ಬಹಳ ಜನಪ್ರಿಯವಾದದ್ದು. ವಿವಿಧ ಪ್ರದೇಶಗಳು ಹಾಗೂ ಮಸಾಲೆ ವಿಧಾನಕ್ಕಾನುಗುಣವಾಗಿ ಅನೇಕ ತರಹದ ಮಾವಿನಕಾಯಿ ಉಪ್ಪಿನಕಾಯಿಗಳಿವೆ: ಎಳೆ ಮಾವಿನ ಮಿಡಿ ಉಪ್ಪಿನಕಾಯಿ ಹಾಗೂ ಹೆಚ್ಚಿದ ಮಾವಿನ ಕಾಯಿ ಉಪ್ಪಿನಕಾಯಿ. ಇದರಲ್ಲಿ ಇಡೀ ಮಾವಿನ ಮಿಡಿ ಉಪ್ಪಿನಕಾಯಿ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದೆ. ಉಪ್ಪಿನಕಾಯಿಗಾಗಿಯೇ ನಿರ್ದಿಷ್ಟವಾಗಿ ವಿಶೇಷ ವಿಧದ ಮಾವಿನಹಣ್ಣುಗಳಿವೆ. ಮಾವಿನ ಕಾಯಿಯನ್ನು ಉಪ್ಪು, ಎಣ್ಣೆ ಮತ್ತು ಮಸಾಲೆಗಳ ಮಿಶ್ರಣವನ್ನು ಬಳಸಿ ಒಂದು ನಿರ್ದಿಷ್ಟವಾದ ಪ್ರಕ್ರಿಯೆಯ ಮೂಲಕ, ಹಲವಾರು ವರ್ಷ ಶೇಖರಿಸಿ ಇಡುವಂತೆ ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ.[೩]
ಹೆಚ್ಚಿದ ಮಾವಿನ ಉಪ್ಪಿನಕಾಯಿ
[ಬದಲಾಯಿಸಿ]ಇದನ್ನು ವಿಶೇಷ ವಿಧದ ಮಾವಿನ ಕಾಯಿಯಿಂದ ಗರಿ ಗರಿಯಾಗಿ ತುಂಬಾ ಸಮಯದವರೆಗೆ ಉಳಿಯುವಂತೆ ತಯಾರಿಸಲಾಗುತ್ತದೆ. ಈ ಉಪ್ಪಿನಕಾಯಿಗೆ ಬಳಸುವಂತಹ ಮಾವನ್ನು ವಿಶೇಷವಾಗಿ ಬೆಳೆಸಲಾಗುತ್ತದೆ ಹಾಗೂ ಕಸಿ ಮಾಡಿರಲಾಗುತ್ತದೆ. ಒಟ್ಟಿನಲ್ಲಿ, ಯಾವುದೇ ವಿಧದ ಮಾವಿನ ಕಾಯಿಯಿಂದ ಉಪ್ಪಿನಕಾಯಿ ತಯಾರಿಸಬಹುದು. ಅತ್ಯಂತ ಜನಪ್ರಿಯ ರೀತಿಯ ಮಾವಿನ ಉಪ್ಪಿನಕಾಯಿಯನ್ನು ಅವಕಾಯಾ ಎಂದು ಕರೆಯಲಾಗುತ್ತದೆ, ಇದನ್ನು "ಉರಕಾಯಾ" ಎಂದೂ ಕರೆಯುತ್ತಾರೆ ಮತ್ತು ಇದು ವಿಶೇಷ ಮಸಾಲೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ.[೪] ದಕ್ಷಿಣ ಭಾರತದಲ್ಲಿ, ಅದರಲ್ಲೂ ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ಬೆಳ್ತಿಗೆ ಅನ್ನದೊಂದಿಗೆ, ಅಥವ ಅಕ್ಕಿಯಿಂದ ಮಾಡಿದಂಥ ಆಹಾರ ಪಾದಾರ್ಥದೊಂದಿಗೆ ಸೇವಿಸಲಾಗುತ್ತದೆ.
ಉಪ್ಪಿನಕಾಯಿ ಮಾವಿನ ಚಟ್ನಿ
[ಬದಲಾಯಿಸಿ]ಮಾವಿನ ಕಾಯಿಯನ್ನು ತುರಿದು ಚಟ್ನಿಯಂಥ ಉಪ್ಪಿನಕಾಯಿ ಮಾಡಲಾಗುತ್ತದೆ.
ಮಿಡಿ ಉಪ್ಪಿನಕಾಯಿ
[ಬದಲಾಯಿಸಿ]ಚಿಕ್ಕ ಚಿಕ್ಕ ಎಳೆ ಮಾವಿನ ಕಾಯಿ ಮಿಡಿಗಳನ್ನು ಸಂಗ್ರಹಿಸಿ ಉಪ್ಪಿನಕಾಯಿ ಮಾಡಲಾಗುವುದು. ಅಪ್ಪೆಮಿಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉಪ್ಪಿನಕಾಯಿಗೆಂದೇ ಬಳಸುವ ಮಾವಿನಕಾಯಿಯಿಂದ ಇದನ್ನು ತಯಾರಿಸಲಾಗುತ್ತದೆ. ಇವು ಸುವಾಸನಾಭರಿತವಾಗಿ ಹಾಗೂ ರುಚಿಕರವಾಗಿದ್ದು ಉಪ್ಪಿನಕಾಯಿ ಮಾಡಲು ಪ್ರಶಸ್ತವಾಗಿರುತ್ತವೆ.
ಬಾಹ್ಯ ಕೊಂಡಿ
[ಬದಲಾಯಿಸಿ]