ಮೇವಾರಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಸ್ಥಾನದ ಪ್ರಮುಖ ಉಪಭಾಷೆಗಳಲ್ಲಿ ಮೇವಾರಿ ಭಾಷೆಯೂ ಒಂದು. ಇಂಡೋ-ಆರ್ಯನ್ ಭಾಷೆಗಳ ಕುಟುಂಬಕ್ಕೆ ಸೇರುವ ಇದು ರಾಜಸ್ಥಾನದ ರಾಜಸ್ಮಂಡ್, ಬಿಲ್ವಾರಾ, ಉದಯಪುರ ಮತ್ತು ಚಿತ್ತೋಘಡ್ ಜಿಲ್ಲೆಯ ಸುಮಾರು ಐದು ಮಿಲಿಯನ್ ಜನರ ಆಡುಭಾಷೆಯಾಗಿದೆ.[೧] ಮೌಖಿಕ ಭಾಷೆಯಾಗಿರುವ ಮೇವಾರಿ ಲಿಖಿತರೂಪದಲ್ಲಿ ಅಷ್ಟಾಗಿ ಲಭ್ಯವಿಲ್ಲ. ಆದರೂ ಆಧುನಿಕ ಕಾಲದಲ್ಲಿ ಕೆಲವೊಂದು ಲಿಖಿತ ದಾಖಲೆಗಳು ಸಿಕ್ಕಿವೆ. ಉದಾಹರಣೆಗೆ ನಿರ್ಮಾನ್ ಸಮಾಜ್ ರು ಬರೆದಿರುವ ಮೇವಾನ್ ನಿಘಂಟಿನಲ್ಲಿ ಕಾಣಬಹುದಾಗಿದೆ.

ಮೂಲತಃ ಮೇವಾರ್ ಪ್ರದೇಶಕ್ಕೆ ಈ ಭಾಷೆಯು ಸೇರಿದ್ದಾಗಿದ್ದರಿಂದ ಇದರ ಹೆಸರು ಮೇವಾರಿ ಎಂಬುದಾಗಿದೆ. ಇತ್ತೀಚಿನ ದಿನಗಳಲ್ಲಿ ಮೇವಾರಿಯನ್ನು ಉದಯಪುರ, ಜಲವಾರ್ ಜಿಲ್ಲೆಯ ಪಿರಾವಾ ತೆಹಸಿಲ್, ಮಧ್ಯಪ್ರದೇಶದ ಮರಿಡ್ಸೂರ್ ಮತ್ತು ಗುಜರಾತಿನ ಕೆಲವು ಭಾಗಗಳಲ್ಲೂ ಕಾಣಬಹುದು. ರಾಜಸ್ಥಾನದ ಎರಡನೇ ಅತಿಹೆಚ್ಚು ಬಳಕೆಯ ಭಾಷೆಯಾಗಿರುವ ಮೇವಾರಿ, ಅಲ್ಲಿನ ಸಾಹಿತ್ಯ ಕ್ಷೇತ್ರದಲ್ಲೂ ಪ್ರಮುಖ ಪಾತ್ರವಹಿಸಿದೆ.

ಭಾಷಾ ಸಂಯೋಜನೆ[ಬದಲಾಯಿಸಿ]

ಮೇವಾರಿಯು ಒಟ್ಟು

  • ಏಕವಚನ ಮತ್ತು ಬಹುವಚನಗಳು,
  • ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲವನ್ನು ಹಾಗೂ
  • ಪುಲ್ಲಿಂಗ ಮತ್ತು ಸ್ತ್ರೀಲಿಂಗವನ್ನು ಒಳಗೊಂಡಿದೆ.[೨]
  • ಇಂಡೋ-ಆರ್ಯನ್ ಜೊತೆಗೆ ಇಂಡೋ ಇರಾನಿಯನ್ , ಇಂಡೋ-ಯೂರೋಪಿಯನ್, ಹಾಗೂ ರಾಜಸ್ಥಾನಿ-ಮೇವಾರಿ ಕುಟುಂಬಕ್ಕೂ ಮೇವಾರಿ ಸೇರಿದೆ ಎನ್ನಲಾಗಿದೆ.

ಮೇವಾರಿಯ ಉಗಮ[ಬದಲಾಯಿಸಿ]

ಭಾಷೆಯ ಉಗಮ ಸ್ಪಷ್ಟವಾಗಿ ತಿಳಿಯದಿದ್ದರೂ, ೧೯ ನೇ ಶತಮಾನದಲ್ಲಿ ರುದರ್ಡ್ ಕಿಪ್ಲಿಂಗ್ ತನ್ನ ಪುಸ್ತಕದಲ್ಲಿ ಮೇವಾರಿಯನ್ನು ಮೊದಲು ಬಳಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಕ್ರಿ.ಶ ೭೭೯ ರಲ್ಲಿ ಉದ್ಯೋತನ್ ಸೂರಿಯು ಕುವಾಲಯ ಮಾಲಾ ಎನ್ನುವ ಕೃತಿಯನ್ನು ಪ್ರಾಕೃತಿ ಮತ್ತು ಮೇವಾರಿಯನ್ನು ಬಳಸಿ ಬರೆದಿದ್ದಾರೆ ಎನ್ನಲಾಗಿದೆ.

ಅಧಿಕೃತ ಮಾನ್ಯತೆ[ಬದಲಾಯಿಸಿ]

೧೮೭೩ರವರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇವಾರಿ ಗುರುತಿಸಿಕೊಂಡಿರಲಿಲ್ಲ. ಆದರೆ ಅದೇ ವರ್ಷದಲ್ಲಿ ವಿದೇಶೀಯರಾದ ಸ್ಯಾಮ್ಯುಯಲ್ ಹೆಚ್ ಕೆಲ್ಲೋಗ್ ರಾಜಸ್ಥಾನದ ಉಪಭಾಷೆಗಳನ್ನು ಹಿಂದಿಯ ಉಪಭಾಗಗಳಾಗಿ ಪರಿಗಣಿಸಿದ. ನಂತರ ೧೯೦೮ರಲ್ಲಿ ಜಾರ್ಜ್ ಅಬ್ರಾಹಂ ಗ್ರಿಯೆರ್ಸನ್ ರಾಜಸ್ಥಾನಿ ಉಪಭಾಷೆಗಳನ್ನು ರಾಜಸ್ಥಾನಿ ಭಾಷೆಯೆಂದೇ ಪರಿಗಣಿಸಿದನು.[೩]


ಪ್ರಸ್ತುತ ಸಾಹಿತ್ಯ ಅಕಾಡೆಮಿ ಮತ್ತು ವಿಶ್ವವಿದ್ಯಾನಿಲಯದ ಆಯೋಗವು ರಾಜಸ್ಥಾನಿಯನ್ನು ಜಿಲ್ಲಾವಾರು ಭಾಷೆಯನ್ನಾಗಿ ಆಯ್ಕೆಮಾಡಿ ಜೋಧಪುರದ ಜೈ ನಾರಾಯಣ ವ್ಯಾಸ ವಿಶ್ವವಿದ್ಯಾನಿಲಯ ಮತ್ತು ಉದಯಪುರದ ಮೋಹನ್ಲಾಲ್ ಸುಖಾದಿಯಾ ವಿಶ್ವವಿದ್ಯಾನಿಲಯದಲ್ಲಿ ಕಲಿಸಲಾಗುತ್ತಿದೆ. ರಾಜ್ಯ ಪ್ರೌಢಶಿಕ್ಷಣ ಮಂಡಳಿಯು ರಾಜಸ್ಥಾನಿಯನ್ನು ೧೯೭೩ರಿಂದ ಐಚ್ಛಿಕ ವಿಷಯವಾಗಿ ಸೇರಿಸಿದೆ. ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳ ಆಧುನಿಕ ಅಲೆಯಲ್ಲಿ ಮೇವಾರಿ ಭಾಷೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ.

ಸ್ವರೂಪ[ಬದಲಾಯಿಸಿ]

ಸ್ವರಗಳು[ಬದಲಾಯಿಸಿ]


ವ್ಯಂಜನಗಳು[ಬದಲಾಯಿಸಿ]

म्

ಉಲ್ಲೇಖಗಳು[ಬದಲಾಯಿಸಿ]

  1. http://www.censusindia.gov.in/2011Census/Language_MTs.html
  2. Gusain, Lakhan.(2006). Mewari Grammar (LW/M 431). Munich: Limcom Gmbh
  3. "ಆರ್ಕೈವ್ ನಕಲು". Archived from the original on 2019-10-06. Retrieved 2019-10-06.