ವಿಷಯಕ್ಕೆ ಹೋಗು

ಸದಸ್ಯ:Shubhada Sudarshan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]
ಬೆಂಗಳೂರು ಹೈ ಕೋರ್ಟ್

ಶುಭದಾ ನನ್ನ ಹೆಸರು. ನಾನು ಮಾರ್ಚ್ ತಿಂಗಳ ೨ನೇ ತಾರೀಕು, ೨೦೦೦ ಇಸವಿಯಲ್ಲಿ ಜನಿಸಿದೆನು. ನನ್ನ ತಂದೆ ಸುದರ್ಶನ್ ಗಣಪತಿ. ನನ್ನ ತಾಯಿ ಪೂರ್ಣಿಮಾ ಸುದರ್ಶನ್. ನನ್ನ ಸಹೋದರನ ಹೆಸರು ಸುಮುಖಾ. ನಾವು ಮೂಲತಃ ಕಾಸರಗೋಡಿನವರು. ಹವ್ಯಕ ಕನ್ನಡ ನನ್ನ ಮಾತೃಭಾಷೆ. ನನ್ನ ಹುಟ್ಟೂರು ಮತ್ತು ನಾನು ಶಾಲೆಗೆ ಹೋದದ್ದು [೧]ಬೆಂಗಳೂರುನಲ್ಲಿ. ನಾನು ಏಳನೆಯ ತರಗತಿಯ ವರೆಗೆ ಶ್ರೀ ಕುಮಾರನ್ಸ್ ಚಿಲ್ಡ್ರನ್'ಸ್ ಹೋಮ್ನಲ್ಲಿ ಓದಿದೆನು. ಪ್ರೌಢಶಾಲೆಗೆ ಜ್ಯೋತಿ ಕೇಂದ್ರೀಯ ವಿದ್ಯಾಲಯಕ್ಕೆ ಹೋದೆನು. ನಂತರ ಪದವಿ ಪೂರ್ವಕ್ಕಾಗಿ ದಿ ವ್ಯಾಲಿ ಸ್ಕೂಲಿನಲ್ಲಿ ಮಾನವ ಶಾಸ್ತ್ರಗಳನ್ನು ಓದಿದೆನು. ಈಗ [೨]ಕ್ರೈಸ್ಟ್ ವಿದ್ಯಾಲಯದಲ್ಲಿ ಪ್ರಥಮ ಪದವಿಯಲ್ಲಿ ಬಿಎ ಓದುತ್ತಿದ್ದೇನೆ.

ಹವ್ಯಾಸಗಳು

[ಬದಲಾಯಿಸಿ]
ಹಿಂದುಸ್ತಾನಿ ಸಂಗೀತ ಕಛೇರಿ

ನನ್ನ ಹವ್ಯಾಸಗಳು ಕಾದಂಬರಿಗಳನ್ನು ಓದುವುದು, ಹಾಡುವುದು,ನಾಟಕಗಳಲ್ಲಿ ಭಾಗವಹಿಸುವುದು ಹಾಗೂ ನರ್ತಿಸುವುದು. ನನ್ನ ಪೋಷಕರು ನನಗೆ ತುಂಬಾ ಪ್ರೋತ್ಸಾಹವನ್ನು ನೀಡಿದ್ದಾರೆ. ನಾನು [೩]ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸುಮಾರು ಎಳು ವರ್ಷಗಳ ಕಾಲ ಗುರು ಸಾವಿತ್ರಿ ಭಟ್ ಹಾಗೂ ಗುರು ಶಿಲ್ಪಾ ಶಶಿಧರ್ ಅವರ ಬಳಿ ಕಲಿತಿದ್ದೇನೆ. ನಾನು ಕಲಾಕ್ಷೇತ್ರ [೪]ಭರತನಾಟ್ಯಮ್ ಶೈಲಿಯನ್ನು ಗುರು ಶ್ರೀಧರ ಮತ್ತು ಅನುರಾಧಾ ದಂಪತಿಗಳ ಬಳಿ ಆರು ವರ್ಷಗಳ ಕಾಲ ಅಭ್ಯಸಿಸಿದ್ದೇನೆ. ನನಗೆ ಸೂಫೀ ಸಂಗೀತ ಹಾಗೂ ಕ್ರಿಸ್ಟ್ಮಸ್ ಕರೊಲ್ಸ ಕೇಳಲು ಸಹ ಬಹಳ ಪ್ರೀತಿ.ನನಗೆ ಆಂಗ್ಲ ಭಾಷೆಯ ಕಾದಂಬರಿಗಳು ಎಂದರೆ ಬಹಳ ಇಷ್ಟ. ಜೀವನದ ಅನುಭವಕ್ಕೆ ಸಂಬಧಿಸಿದ್ದ ತಾತ್ವಿಕ ವಿಷಯಗಳನ್ನು ವಿಚಾರ ಮಾಡಲು ನನಗೆ ಇಷ್ಟವಾದುದರಿಂದ ಓದುವುದು ತುಂಬಾ ಉಪಯೋಗವಾಗುತ್ತದೆ. [೫]ಅಮಿತಾವ್ ಘೋಷ್ ಅವರ ಹಂಗ್ರಿ ಟೈಡ್ ಮತ್ತು ಚಿತ್ರಾ ಬ್ಯಾನ್ನೆರ್ಜೀ ದಿವಾಕರುಣಿ ಅವರ ಪ್ಯಾಲೇಸ್ ಆಫ್ ಇಲ್ಲುಶೊನ್ಸ್ ನನ್ನ ಮೇಲೆ ಹೆಚ್ಚಿನ ಮಟ್ಟಿಗೆ ಪ್ರಭಾವ ಬೀರಿದಂತಹ ಪುಸ್ತಕಗಳು. ನನಗೆ ದೂರದರ್ಶನದಲ್ಲಿ ಆಂಗ್ಲ ಭಾಷೆಯ ಧಾರಾವಾಹಿಗಳನ್ನು ನೋಡುವುದು ಮನೋರಂಜನೆ ನೀಡುತ್ತದೆ.ನಾನು ಸುಮಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ರಾಷ್ಟ್ರೀಯ ಹಂತದಲ್ಲಿ ಚಿತ್ರಕಲೆಯಲ್ಲಿ ಎರಡು ಬಾರಿ ಕಂಚು ಪದಕ ಹಾಗೂ ಒಂದು ಬಾರಿ ಬೆಳ್ಳಿ ಪದಕವನ್ನು ಗೆದ್ದಿದ್ದೇನೆ. ಹಾಡುಗಾರಿಕೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಲವು ಬಾರಿ ಗೆದ್ದಿದ್ದೇನೆ. ನನ್ನ ಶಾಲೆ ದಿ ವ್ಯಾಲಿ ಸ್ಕೂಲಿನಲ್ಲಿ ಕಾರ್ಯಕ್ರಮಗಳಿಗೆಲ್ಲ [೬]ಹಿಂದೂಸ್ತಾನಿ ಸಂಗೀತವನ್ನು ತಂಡದೊಂದಿಗೆ ಹಾಡುತ್ತಿದ್ದೆನು.

ವ್ಯಕ್ತಿತ್ವ ಮತ್ತು ಆಕಾಂಕ್ಷೆಗಳು

[ಬದಲಾಯಿಸಿ]

ಮನೋವಿಜ್ಞಾನವನ್ನು ಓದಿ ಮಾನಸಿಕ ತೊಂದರೆಗಳಿಂದ ಕಷ್ಟಪಡುವವರಿಗೆ ಸಹಾಯ ಮಾಡಬೇಕೆಂಬುದು ನನ್ನ ಆಸೆ. ಮನುಷ್ಯರ ಬಗ್ಗೆ ಕಾಳಜಿ ಇದ್ದರೆ ಸಾಲದು. ಅವರಿಗೆ ನನ್ನಿಂದಾದ ಸಹಾಯ ಮಾಡುವ ಆಸಕ್ತಿ ನನಗಿದೆ. ನನಗೆ ಪ್ರಾಣಿ ಪಕ್ಷಿಗಳೆಂದೆರೆ ಬಹಳ ಪ್ರೀತಿ. ಬೀದಿನಾಯಿಗಳ ಬಗ್ಗೆ ನೆರೆಕರೆಯವರೆಲ್ಲರೂ ಬಯುತ್ತಾರೆ ಆದರೆ ನನ್ನ ಮನೆಯವರು ಅವರಿಗೆ ರಸ್ಕನ್ನು ತಿನ್ನಿಸಿ ಮುದ್ದು ಮಾಡುತ್ತಾರೆ. ಇಂತಹ ವಾತಾವರಣದಲ್ಲಿ ಬೆಳೆದ ಕಾರಣ ನನಗೆ ಪ್ರಾಣಿ ಸಂರಕ್ಷಣೆಗಾಗಿ ಕೆಲಸ ಮಾಡುವ ಗುರಿಯೂ ಇದೆ. ನನಗೆ ಹೆಚ್ಚಿಗೆ ಮಾತನಾಡುವ ಸ್ವಭಾವ ಇದರೂ ನನಗೆ ಹೊಸಬರೊಂದಿಗೆ ನಾಚಿಗೆ ಹಾಗೂ ಹಿಂಜರಿಕೆ ಹೆಚ್ಚಿನ ಮಟ್ಟಿಗೆ ಎನಿಸುತ್ತದೆ. ಈ ಹಿಂಜರಿಕೆಯನ್ನು ಎದುರಿಸಿ ನನಗೆ ಶಿಕ್ಷಕಿಯಾಗಿ ಕೆಲಸ ಮಾಡುವ ಆಕಾಂಕ್ಷೆ ಕೂಡಾ ಇದೆ. ನಾನು [೭][]ಹಿಂದೂ ಧರ್ಮವನ್ನು ಪಾಲಿಸುವ ಕುಟುಂಬಕ್ಕೆ ಜನಿಸಿದರೂ ನನಗೆ ಎಲ್ಲ ಧರ್ಮಗಳ ಬಗ್ಗೆ ಗೌರವವಿದೆ, ಆದರೆ ಯಾವುದೇ ಧರ್ಮವನ್ನು ನಾನು ಶಿಸ್ತಿನಿಂದ ಪಾಲಿಸುವುದಿಲ್ಲ. ಆದರೆ ನಾನು ಕಲೆಗಳನ್ನು, ನಾಟ್ಯ ಮತ್ತು ಸಂಗೀತವನ್ನು ದೇವರಿಗೆ ಪೂಜೆಯ ರೂಪದಲ್ಲಿ ಕಾಣುತ್ತೇನೆ. ಆಧ್ಯಾತ್ಮಿಕ ವಿಷಯಗಳು ನನಗೆ ತುಂಬಾ ಹತ್ತಿರವಾದುದು. ಆದರೆ ಈ ಚಿಂತನೆಯಲ್ಲಿ ಮುಳುಗುವುದರಿಂದಾಗಿ ಜೀವನದ ಯುವತೆ ಹಾಗೂ ಗಮ್ಮತ್ತನ್ನು ನಾನು ಬಿಟ್ಟುಕೊಡುವುದಿಲ್ಲ. ಪ್ರೀತಿಯಿಂದ, ಖುಶಿಯಿಂದ ಈ ಜಗತ್ತಿನೊಂದಿಗಿರುವುದು ನನ್ನ ಮುಖ್ಯ ಗುರಿ.

  1. https://www.karnataka.com/bangalore/ https://christuniversity.in/ https://en.wikipedia.org/wiki/Carnatic_music https://en.wikipedia.org/wiki/Bharatanatyam https://en.wikipedia.org/wiki/Amitav_Ghosh https://en.wikipedia.org/wiki/Hinduism