ವಿಷಯಕ್ಕೆ ಹೋಗು

ಎನ್ ಆರ್ ನಾರಾಯಣಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಎನ್. ಆರ್. ನಾರಾಯಣ ಮೂರ್ತಿ
ಎನ್. ಆರ್. ನಾರಾಯಣ ಮೂರ್ತಿ, ISiM'ನ ಹೊಸ ಕಟ್ಟಡದ ಉದ್ಘಾಟನೆಯನ್ನು ಮಾಡುತ್ತಿರುವುದು.
ಜನನ
ನಾರಾಯಣ

ಶಿಡ್ಳಘಟ್ಟ ಅಂದಿನ ಕೋಲಾರ ಈಗೀನ ಚಿಕ್ಕಬಳ್ಳಾಪುರ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ, ಕಾನ್ಪುರ್ ಐ.ಐ.ಟಿ.ಯಿಂದ ಸ್ನಾತಕೋತ್ತರ ಪದವಿ.
ಶಿಕ್ಷಣ ಸಂಸ್ಥೆಕಾನ್ಪುರ್ ಐ. ಐ. ಟಿ. ಎಮ್.ಎಸ್.ಸಿ.(೧೯೬೮)
ವೃತ್ತಿ'ಬೆಂಗಳೂರಿನ ಇನ್ಫೋಸಿಸ್ ಕಂಪೆನಿಯ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ',
ಗಮನಾರ್ಹ ಕೆಲಸಗಳುಮಾದರಿ ಮಾಹಿತಿ-ತಂತ್ರಜ್ಞಾನೋದ್ಯಮಿ ಹಾಗೂ ಆದರ್ಶ-ಭಾರತೀಯ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ.
ಜಾಲತಾಣwww.infosys.com

ಎನ್.ಆರ್.ನಾರಾಯಣ ಮೂರ್ತಿ (ನಾಗವಾರ ರಾಮರಾವ್ ನಾರಾಯಣಮೂರ್ತಿ) [] ಭಾರತದ ಉದ್ಯಮಿ ಹಾಗು ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ನ ಸಹ ಸಂಸ್ಥಾಪಕರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ನಿರ್ವಹಿಸಿದ ಇವರು, ಈಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ, ಹಾಗು ಹಿತಚಿಂತಕ ಅಧಿಕಾರಿಯಾಗಿದ್ದಾರೆ. ಭಾರತವು ವಿಶ್ವ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಪ್ರಕಟವಾಗುವಂತೆ ಮಾಡಿದವರಲ್ಲಿ ಅಗ್ರಜರು ಎಂದು ಕರೆಯಲ್ಪಡುವ ಇವರು, ಹಲವಾರು ಉದ್ಯಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳ ನಿರ್ವಾಹಕ ಮಂಡಳಿಗಳ ಸದಸ್ಯರಾಗಿದ್ದಾರೆ.

ಜೀವನ ಮತ್ತು ವೃತ್ತಿ

[ಬದಲಾಯಿಸಿ]

೨೦ನೇ ಆಗಸ್ಟ್ ೧೯೪೬ರಲ್ಲಿ ಮೈಸೂರಿನಲ್ಲಿ ಜನಿಸಿದರು. ೧೯೬೭ರಲ್ಲಿ ಮೈಸೂರಿನ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಿಂದ ಎಲಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅವರು ತದನಂತರ ೧೯೬೯ರಲ್ಲಿ ಕಾನ್ಪುರದ ಭಾರತೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಿಂದ ಸ್ನಾತಕೋತ್ತರ ಪದವಿ ಪಡೆದರು. ಶ್ರೀಯುತರು ತಮ್ಮ ಸೇವಾಕೆಲಸವನ್ನು ಪುಣೆಯ ಪಾಟ್ನಿ ಕಂಪ್ಯುಟರ್ ಸಿಸ್ಟಮ್ಸ್‌ನಲ್ಲಿ ಪ್ರಾರಂಭಿಸಿದರು. ಪುಣೆಯಲ್ಲಿರುವಾಗಲೆ ಇವರ ಸಂಪರ್ಕ ತಮ್ಮ ಭಾವಿ ಪತ್ನಿ ಸುಧಾರೊಂದಿಗೆ(ಖ್ಯಾತ ಬರಹಗಾರ್ತಿ ಹಾಗು ಸಮಾಜ ಸೇವಕಿ) ಬೆಳೆಯಿತು. ೨ನೇ ಜುಲೈ ೧೯೮೧ರಲ್ಲಿ ನಾರಾಯಣಮೂರ್ತಿ ಅವರು ಇತರ ಐವರೊಡನೆ (ನಂದನ್ ನಿಲೇಕಣೆ , ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ದಿನೇಶ್, ಮೋಹನದಾಸ್ ಪೈ) ಸೇರಿ ಕೇವಲ ೧೦,೦೦೦ ರುಪಾಯಿ ಬಂಡವಾಳದೊಂದಿಗೆ ಇನ್ಫೋಸಿಸ್ ಸ್ಥಾಪಿಸಿದರು. ಇಂದು ಇನ್ಫೋಸಿಸ್ ೧,೦೦,೦೦೦ಕ್ಕೂ ಮೇಲ್ಪಟ್ಟು ಉದ್ಯೊಗಿಗಳು ಮತ್ತು ಹಲವು ರಾಷ್ಟ್ರಗಳಲ್ಲಿ ಕಛೇರಿಗಳು ಹೊಂದಿ, ವಿಶ್ವಾದಾದ್ಯಂತ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತಿದೆ. ನಾರಾಯಣಮೂರ್ತಿಯವರ ದೂರದೃಷ್ಟಿ, ಉತ್ತಮ ನಿರ್ವಾಹಣಾ ನೈಪುಣ್ಯ ಮತ್ತು ದಿಟ್ಟ ನಾಯಕತ್ವ ಇನ್ಫೋಸಿಸ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಅಂದರೆ ತಪ್ಪಾಗಲಾರದು. ಮಾರ್ಚ್ ೨೦೦೨ರವರೆಗೂ ಇನ್ಫೋಸಿಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಗಿದ್ದ ನಾರಾಯಣಮೂರ್ತಿ ತದನಂತರ ಅಧಿಕಾರವನ್ನು ನಂದನ್ ನಿಲೇಕಣಿಯವರಿಗೆ ಹಸ್ತಾಂತರಿಸಿ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಮತ್ತು ಹಿತಚಿಂತಕ ಅಧಿಕಾರಿಯ ಹುದ್ದೆ ಅಲಂಕರಿಸಿದ್ದರು. ಆಗಸ್ಟ್ ೧೯ ೨೦೧೧ ರಂದು ತಮ್ಮ ೬೫ನೆ ವರ್ಷದಂದು ಅದ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದರು.[]

ವಿದ್ಯಾರ್ಹತೆ ಮತ್ತು ಹುದ್ದೆಗಳು

[ಬದಲಾಯಿಸಿ]

ನಾರಾಯಣಮೂರ್ತಿ ಅಹ್ಮದಾಬಾದಿನ ಭಾರತೀಯ ವ್ಯವಸ್ಥಾಪನ ವಿದ್ಯಾಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್) ಮತ್ತು ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ವಿದ್ಯಾಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್‍ಮೇಷನ್ ಟೆಕ್ನಾಲಜಿ)ಗಳ ನಿರ್ವಾಹಕ ಮಂಡಳಿಯ ಅಧ್ಯಕ್ಷರು ಕೂಡ. ಇವಲ್ಲದೆ ಶ್ರೀಯುತರು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಉಸ್ತುವಾರಿ ಮಂಡಳಿಯ ಸದಸ್ಯರಾಗಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾಗಿ, ಸಿಂಗಪುರದ ಸಿಂಗಾಪುರ ವ್ಯವಸ್ಥಾಪನ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ, ಟಕ್ ಸ್ಕೂಲ್ ಆಫ್ ಬಿಜಿನೆಸ್ಸ್‌ನ ವಿಲಿಯಂ ಎಫ್. ಆಕ್ಟ್‌ಮೇಯರ್ ಜಾಗತಿಕ ನಾಯಕತ್ವ ಕೇಂದ್ರದ ಸಲಹೆಗಾರರ ಮಂಡಳಿಯ ಸದಸ್ಯರಾಗಿ, ಸ್ಟಾನ್‍ಫೊರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಪ್ ಬಿಜಿನೆಸ್ಸ್‌ನ ಸಲಹೆಗಾರರ ಮಂಡಳಿಯ ಸದಸ್ಯರಾಗಿ ಮತ್ತು ಯಾಲೆ ವಿಶ್ವವಿದ್ಯಾಲಯದ ಅಧ್ಯಕ್ಷರ ಅಂತರಾಷ್ಟ್ರೀಯ ಚಟುವಟಿಕೆಗಳ ಮಂಡಳಿಯ ಸದಸ್ಯರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ(ಸೇಬಿ) ನಿಯೋಜಿಸಿದ ನಿಗಮ ಆಡಳಿತ ಆಯೋಗದ ಅಧ್ಯಕ್ಷತೆಯನ್ನು ಒಮ್ಮೆ ಶ್ರೀಯುತರು ವಹಿಸಿದ್ದರು. ನಾರಾಯಣಮೂರ್ತಿಯವರು ಸಿಂಗಾಪುರದ ಡಿಬಿಎಸ್ ಬ್ಯಾಂಕಿನ ಸ್ವತಂತ್ರ ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯಲ್ಲಿ ನಿರ್ದೇಶಕರಾಗಿ, ಭಾರತೀಯ-ಬ್ರಿಟೀಷ್ ಮೈತ್ರಿಕೂಟದ ಜಂಟಿ ಅಧ್ಯಕ್ಷರಾಗಿ, ಭಾರತದ ಪ್ರಧಾನ ಮಂತ್ರಿಗಳ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಸದಸ್ಯರಾಗಿ, ಪ್ರಸಿದ್ದ ಟಿವಿ ಸಮಾಚಾರ ಬಿತ್ತರಿಸುವ ಸಂಸ್ಥೆಯಾದ ನ್ಯೂ ಡೆಲ್ಲಿ ಟೆಲಿವಿಜನ್ ನಿಯಮಿತ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಅನೇಕ ಏಶಿಯಾದ ರಾಷ್ಟ್ರಗಳಿಗೆ ಮಾಹಿತಿ ತಂತ್ರಜ್ಞಾನ ಸಲಹೆಗಾರರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.[]

ಪರಿವಾರ

[ಬದಲಾಯಿಸಿ]

'ನಾರಾಯಣ ಮೂರ್ತಿ'ಯವರ ಪತ್ನಿ, 'ಸುಧಾಮೂರ್ತಿ', ಹುಬ್ಬಳ್ಳಿಯ 'ಬಿ.ವಿ.ಭೂಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್' ನಿಂದ ಬಿ.ಇ. (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವೀಧರೆ. ಆ ಕಾಲೇಜಿನಿಂದ ಅವರು ಪ್ರಥಮರಾಗಿ ಉತ್ತೀರ್ಣಹೊಂದಿ, ಕರ್ನಾಟಕದ ಮುಖ್ಯಮಂತ್ರಿಗಳಿಂದ 'ಚಿನ್ನದ ಪದಕ'ಗಳಿಸಿದರು. ಮುಂದೆ, ಬೆಂಗಳೂರಿನ ಪ್ರತಿಷ್ಠಿತ, 'ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಸೈನ್ಸ್' ನಿಂದ ಎಮ್.ಇ.(ಕಂಪ್ಯೂಟರ್ ಸೈನ್ಸ್ ನಲ್ಲಿ) ಗಳಿಸಿದರು. ಅಲ್ಲೂ ತಮ್ಮ ಕಕ್ಷದಲ್ಲೇ ಪ್ರಥಮರಾಗಿ ಉತ್ತೀರ್ಣರಾದದ್ದಲ್ಲದೆ, 'ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ'ಯಿಂದ 'ಚಿನ್ನದ ಪದಕ' ಗಳಿಸಿದರು. ನಂತರ, 'ಇನ್ಫೋಸಿಸ್ ಫಂಡೇಶನ್' ವತಿಯಿಂದ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ಸುಧಾ ಮೂರ್ತಿಯವರು, ಹಲವಾರು ಪುಸ್ತಕಗಳ ಲೇಖಕಿ. ಮೂರ್ತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಡಾ. ರೋಹನ್ ಮೂರ್ತಿ, ಮಗ, ಅಕ್ಷತಾ ಮೂರ್ತಿ, ಮಗಳು, ರೋಹನ್, 'ಹಾರ್ವರ್ಡ್ ವಿಶ್ವವಿದ್ಯಾಲಯದ ಸೊಸೈಟಿ ಆಫ್ ಫೆಲೋಸ್', 'ಜೂನಿಯರ್ ಫೆಲೊ' ಆಗಿದ್ದಾರೆ. ೧ ಜೂನ್,೨೦೧೩, ರಲ್ಲಿ ಅವರು 'ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ'ಗೆ, ತಂದೆಯವರಿಗೆ 'ಸಹಾಯಕ ಎಕ್ಸಿ ಕ್ಯುಟೀವ್' ಆಗಿ ಪಾದಾರ್ಪಣೆ ಮಾಡಿದರು. ೧೪, ಜೂನ್ ೨೦೧೪, ನಲ್ಲಿ ಕಂಪೆನಿಗೆ ರಾಜೀನಾಮೆ ನೀಡಿದರು. ಅಕ್ಷತಾ, ಅಮೆರಿಕದ, 'ಸ್ಟಾನ್ಫರ್ಡ್ ಬಿಸಿನೆಸ್ ಸ್ಕೂಲ್' ನಿಂದ, 'ಎಮ್.ಬಿ.ಎ'. ಮುಗಿಸಿದ್ದಾಳೆ.

ಲಂಡನ್ ನಗರದಲ್ಲಿ ಸ್ಥಾಪಿಸಲಾಗುವ ಮಹಾತ್ಮಗಾಂಧಿಯವರ ಪ್ರತಿಮೆ

[ಬದಲಾಯಿಸಿ]

ಲಂಡನ್ ನಲ್ಲಿ ಸಂಸತ್ ಚೌಕದಲ್ಲಿ ಸ್ಥಾಪಿಸಲಾಗುವ ಮಹಾತ್ಮಗಾಂಧಿ ಪ್ರತಿಮೆಗೆ ಎನ್.ಆರ್.ನಾರಾಯಣಮೂರ್ತಿ ಪರಿವಾರದವರು, ೧.೮೫ ಕೋಟಿ ರೂಪಾಯಿಗಳ ದೇಣಿಗೆ ಕೊಟ್ಟಿದ್ದಾರೆ.ಒಟ್ಟಾರೆ ೭.೫ ಲಕ್ಷ ಪೌಂಡ್ ಖರ್ಚಿನಲ್ಲಿ ಸಿದ್ಧಪಡಿಸಲಾಗುವ ಪ್ರತಿಮೆಯ ಸ್ಥಾಪನೆಯ ಜವಾಬ್ದಾರಿಯನ್ನು ಟ್ರಸ್ಟ್ ನ ಧರ್ಮದರ್ಶಿ, ಅರ್ಥ ಶಾಸ್ತ್ರಜ್ಞ, ಲಾರ್ಡ್ ಮೇಘನಾದ್ ದೇಸಾಯಿ ವಹಿಸಿಕೊಂಡಿದ್ದಾರೆ.[]

ಇನ್ಫೊಸಿಸ್ ಕಂಪೆನಿಯ ಹೊಸ ಸಿ.ಇ.ಒ.

[ಬದಲಾಯಿಸಿ]

ಆಗಿ, 'ಸಲೀಲ್ ಪರೇಖ್' ೨,ಜನವರಿ,೨೦೧೮ ರಂದು ನಿಯುಕ್ತರಾದರು.[]

ಪ್ರಶಸ್ತಿಗಳು

[ಬದಲಾಯಿಸಿ]
  • ಪದ್ಮಶ್ರೀ – ೨೦೦೦
  • ಟೈಮ್ ಪತ್ರಿಕೆಯ 'ಗ್ಲೋಬಲ್ ಟೆಕ್ ಇನ್ಫ್ಲೂಯನ್ಶಿಯಲ್' ಪಟ್ಟಿಯಲ್ಲಿ (ಆಗಸ್ಟ್ ೨೦೦೪)ಸೇರ್ಪಡೆ.
  • ಭಾರತ-ಫ್ರಾಂಸ್ ಫೋರಮ್ ಪದಕ (ಇಸವಿ ೨೦೦೩)
  • ಅರ್ನ್ಸ್ಟ್ ಆಂಡ್ ಯಂಗ್ ಸಂಸ್ಥೆಯಿಂದ ೨೦೦೩ನೆ ಇಸವಿಯ ವಿಶ್ವದ ಶ್ರೇಷ್ಟ ಉದ್ಯಮಿ (ವರ್ಲ್ಡ್ ಆಂಟರ್‍ಪರ್ನರ್ ಆಫ್ ದ ಇಯರ್)ಪ್ರಶಸ್ತಿ.
  • ಫಾರ್ಚ್ಯೂನ್ ಪತ್ರಿಕೆಯಿಂದ ೨೦೦೩ನೆ ಇಸವಿಯ ಏಷಿಯಾದ ಶ್ರೇಷ್ಟ ಉದ್ಯಮಿ ಪ್ರಶಸ್ತಿ.
  • ೨೦೦೧ರಲ್ಲಿ ಟೈಮ್/ಸಿ ಎನ್ ಎನ್ ೨೫ ಅತಿ ಪ್ರಭಾವಶಾಲಿ ಜಾಗತಿಕ ಕಾರ್ಯನಿರ್ವಹಣಾಧಿಕಾರಿಗಳ ಪಟ್ಟಿಯಲ್ಲಿ ಸೇರ್ಪಡೆ.
  • ಮ್ಯಾಕ್ಸ್ ಶ್ಮಿಡೇನಿ ಲಿಬರ್ಟಿ ೨೦೦೧ ಪ್ರಶಸ್ತಿ. (ಸ್ವಿಟ್ಜರ್‌ಲ್ಯಾಂಡ್).
  • ಬಿಜಿನೆಸ್ಸ್ ವೀಕ್ ಪತ್ರಿಕೆಯ "ಸ್ಟಾರ್ ಆಫ್ ಏಷಿಯಾ" ಪ್ರಶಸ್ತಿ (ಸತತ ಮೂರು ವರ್ಷ- ೧೯೯೮, ೧೯೯೯ ಮತ್ತು ೨೦೦೦)
  • ಭಾರತದ ೯ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್
  • ೧೯೯೬-೯೭ರ ಜೆ ಆರ್ ಡಿ ಟಾಟ ಕಾರ್ಪೊರೇಟ್ ಲೀಡರ್‌ ಶಿಪ್ ಪ್ರಶಸ್ತಿ
  • ಪದ್ಮ ವಿಭೂಷಣ – ೨೦೦೮
  • ೨೦೧೪ ರ ಬಸವಪ್ರಶಸ್ತಿ ವಿಜೇತರು.[]
  • ಕಾನ್ಪುರ್ ಐಐಟಿಯಿಂದ ಪ್ರತಿಷ್ಠಿತ ವಿದ್ಯಾರ್ಥಿಯ ಗೌರವ ಪ್ರಶಸ್ತಿ. [೧]

ಉಲ್ಲೇಖಗಳು

[ಬದಲಾಯಿಸಿ]
  1. "ಸಾಫ್ಟ್ವೇರ್ ಸಂತ, ಎನ್.ಆರ್.ನಾರಾಯಣ ಮೂರ್ತಿ-ಡಾ.ಆರ್.ಪೂರ್ಣಿಮಾ". Archived from the original on 2016-03-05. Retrieved 2014-04-29.
  2. Infosys brings back N.R. Narayana Murthy as executive chairman, livemint, Jun 01 2013
  3. "Narayana Murthy, Infosys: "High commitment is must"". Archived from the original on 2014-03-13. Retrieved 2014-04-29.
  4. "ಲಂಡನ್‌-ಗಾಂಧಿ-ಪ್ರತಿಮೆಗೆ-ಇನ್ಫಿ-ಮೂರ್ತಿ-18-ಕೋಟಿ", ಉದಯವಾಣಿ, ಜನವರಿ, ೨೮, ೨೦೧೫[ಶಾಶ್ವತವಾಗಿ ಮಡಿದ ಕೊಂಡಿ]
  5. press-releases/Pages/infosys-appoints-ceo- Archived 2017-12-05 ವೇಬ್ಯಾಕ್ ಮೆಷಿನ್ ನಲ್ಲಿ.
  6. ೨೦೧೪ ರ ಸಾಲಿನ ಬಸವ ಪ್ರಶಸ್ತಿ ವಿಜೇತ[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]