ಸುಧಾ ಮೂರ್ತಿ

ವಿಕಿಪೀಡಿಯ ಇಂದ
Jump to navigation Jump to search
ಸುಧಾಮೂರ್ತಿ
Sudha Murthy Award.jpg
ಸುಧಾಮೂರ್ತಿ
ಜನನ
ಸುಧಾಕುಲಕರ್ಣಿ

ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಈಗ ಹಾವೇರಿ ಜಿಲ್ಲೆಯಲ್ಲಿದೆ)
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ.(ಎಲೆಕ್ಟ್ರಿಕಲ್‌) ,ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (೧೯೭೪)
Alma materಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಲ್ಲಿ ಎಂ.ಇ.ಪದವಿ
ವೃತ್ತಿಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ವಿಶೇಷ ಉಪನ್ಯಾಸಕಿಯಾಗಿ ದುಡಿಯುತ್ತಿದ್ದಾರೆ.
Known forಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ೬ ಗೆಳೆಯರು ಜೊತೆಗೂಡಿ ೧೯೮೧ ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪಿಸಿದರು. ಇನ್‌ಫೋಸಿಸ್‌ ಫೌಂಡೇಷನ್‌’ ವತಿಯಿಂದ ವರ್ಲ್ಡ್‌ಸ್ಪೇಸ್‌ ಸೆಟಲೈಟ್‌ ರೇಡಿಯೋದಲ್ಲಿ ಕನ್ನಡದ ‘ಸ್ಪರ್ಶ’ ವಾಹಿನಿಯಲ್ಲಿ ಗ್ರಾಮಾಂತರ ವಲಯದಲ್ಲಿ ಹೆಚ್ಚಿನ ಮಾಹಿತಿ ತಂತ್ರಜ್ಞಾನದ ಅರಿವಿನ ಬಗ್ಗೆ ಸಹಾಯ ಮಾಡುತ್ತಿದ್ದಾರೆ. ಬರೆದ ಪುಸ್ಗ್ತಕಗಳು : ಅವ್ಯಕ್ತೆ, ಅತಿರಿಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಪರಿಧಿ, ಯಶಸ್ವಿ, ತುಮಲ ಮತ್ತು ಋಣ.

ಸುಧಾಮೂರ್ತಿ ಕನ್ನಡ ಮತ್ತು ಇಂಗ್ಲಿಷ್ನ ಬರಹಗಾರ್ತಿ, ಮೂರ್ತಿ ತಮ್ಮ ವೃತ್ತಿಪರ ವೃತ್ತಿಯನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಮತ್ತು ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ.[೧][೨]

ಜನನ[ಬದಲಾಯಿಸಿ]

ಇವರು ೧೯೫೦ರಲ್ಲಿ ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಜಿಲ್ಲೆಯ) (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ೧೯೫೦ ರ ಆಗಸ್ಟ್‌ ೧೯, ರಂದು ಜನಿಸಿದರು. ಜಯಶ್ರೀ ದೇಶಪಾಂಡೆ ಸುಧಾಮೂರ್ತಿಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.

ಬಾಲ್ಯ-ಶಿಕ್ಷಣ-ವೃತ್ತಿಜೀವನ[ಬದಲಾಯಿಸಿ]

ಸುಧಾ ಕುಲಕರ್ಣಿಯವರ ತಂದೆ ರಾಮಚಂದ್ರ ಕುಲಕರ್ಣಿ ಅವರು ಹುಬ್ಬಳ್ಳಿಯ ಕೆ.ಎಂ. ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ದಂಪತಿಗಳಿಗೆ ೪ ಜನ ಮಕ್ಕಳು. ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ.ಸುಧಾ ಅವರ ಪ್ರಾಥಮಿಕ ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ haveri dist shiggav n ಹುಟ್ಟಿದೂರಿನಲ್ಲಿ ನಡೆಯಿತು. ೧೯೬೬ರಲ್ಲಿ ಹುಬ್ಬಳ್ಳಿನ್ಯೂ ಎಜ್ಯುಕೇಶನ್ ಸೊಸೈಟಿಗರ್ಲ್ಸ್ ಇಂಗ್ಲಿಷ್ ಸ್ಕೂಲ್‍ ನಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು.[೩].

 • ೧೯೭೨ರಲ್ಲಿ ಹುಬ್ಬಳ್ಳಿಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್‍ ನಲ್ಲಿ, ಇಲೆಕ್ಟ್ರಿಕಲ್ ಇಂಜನಿಯರಿಂಗ್ ನ ಎಲ್ಲ ಚತುರ್ಮಾಸಗಳಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.
 • ೧೯೭೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸಾಯನ್ಸ್' ‍ದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.

[೪].

 1. ಸುನಂದಾ ಕುಲಕರ್ಣಿ- ಪರಿಣತ ವೈದ್ಯೆ, ಗೈನೋಕಾಲಜಿ ಪ್ರೊಫೆಸರ್,
 2. ಜಯಶ್ರೀ ದೇಶಪಾಂಡೆ- ಅಮೆರಿಕದಲ್ಲಿ 'ದೇಶ್ಪಾಂಡೆ ಫೌಂಡೇಶನ್' ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
 3. ಸುಧಾಮೂರ್ತಿ, ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ'ಯನ್ನು ತಮ್ಮ ಪತಿ, ಹಾಗೂ ಅವರ ಜೊತೆಗಾರರ ಸಹಯೋಗದಿಂದ ಕಟ್ಟಿ ಬೆಳೆಸಿದ ಸಂಘಟಕಿ.
 4. ಮಗ ಶ್ರೀನಿವಾಸ ಕುಲಕರ್ಣಿ, ದೆಹಲಿಯ ಐ.ಐ.ಟಿ. ಯಲ್ಲಿ ಓದಿ ಅಂತಾರಾಷ್ಟ್ರೀಯ ಖ್ಯಾತಿಯ ಖಗೋಳ ವಿಜ್ಞಾನಿಯಾಗಿ, ಪ್ರಸ್ತುತ ಅಮೆರಿಕದಲ್ಲಿ ಸಂಶೋಧನೆಯ ಕೆಲಸ ಮಾಡುತ್ತಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

 • ಸುಧಾಮೂರ್ತಿ (ಆಗಿನ್ನೂ ಸುಧಾಕುಲಕರ್ಣಿ-) ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಆಬಳಿಕ ಇವರು ಪುಣೆಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜ್ದಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.[೫]
 • ೧೯೯೬ರಲ್ಲಿ ತಮ್ಮ ಪತಿ ಶ್ರೀ ನಾರಾಯಣ ಮೂರ್ತಿಯವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ಪ್ರಾರಂಭಿಸಿದರು.

ಸಾಹಿತ್ಯ[ಬದಲಾಯಿಸಿ]

ಸುಧಾ ಮೂರ್ತಿಯವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.

 • ಹಕ್ಕಿಯ ತೆರದಲಿ
 • ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್
 • ಕಾವೇರಿಯಿಂದ ಮೇಕಾಂಗಿಗೆ
 • ಡಾಲರ್ ಸೊಸೆ
 • ಮಹಾಶ್ವೇತೆ
 • ಅತಿರಿಕ್ತೆ
 • ಪರಿಧಿ
 • ಮನದ ಮಾತು
 • ಗುಟ್ಟೊಂದು ಹೇಳುವೆ
 • ಸಾಮಾನ್ಯರಲ್ಲಿ ಅಸಾಮಾನ್ಯರು
 • ದಿ ಸರ್ಪೆಂಟ್ಸ್ ರಿವೇಂಜ್
 • ತುಮುಲ
 • ಋಣ
 • ಯಶಸ್ವಿ
 • ಸಾಫ್ಟ್ ಮನ
 • ಏರಿಳಿತದ ದಾರಿಯಲ್ಲಿ
 • ನೂನಿಯ ಸಾಹಸಗಳು.

ಪ್ರಶಸ್ತಿ/ ಗೌರವ/ ಪುರಸ್ಕಾರ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

 1. ಬಿ.ಇ.(ಇಲೆಕ್ಟ್ರಿಕಲ್ ಇಂಜನಿಯರಿಂಗ್ ಪರೀಕ್ಷೆ) ಯಲ್ಲಿ ಪ್ರಥಮ ಸ್ಥಾನ ಲಭಿಸಿದಾಗ ಕರ್ನಾಟಕದ ಮುಖ್ಯ ಮಂತ್ರಿಗಳಿಂದ ಬೆಳ್ಳಿಯ ಪದಕ ಲಭಿಸಿತ್ತು.
 2. ಎಮ್.ಟೆಕ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ದೊರೆತಾಗ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ದಿಂದ ಬಂಗಾರದ ಪದಕ ದೊರೆತಿತ್ತು.
 3. ೧೯೯೫ರಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ್ಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
 4. ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾದವರಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
 5. ಸಮಾಜಸೇವೆಗಾಗಿ ಹುಬ್ಬಳ್ಳಿ ದಕ್ಷಿಣ ಭಾಗದ ರೋಟರಿ ಕ್ಲಬ್ ನಿಂದ ಪುರಸ್ಕಾರ ದೊರೆತಿದೆ.
 6. ೨೦೦೦ ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
 7. ಸಮಾಜಸೇವೆಗಾಗಿ ೨೦೦೦ ಸಾಲಿನ ಓಜಸ್ವಿನಿ ಪ್ರಶಸ್ತಿ ದೊರೆತಿದೆ.
 8. ಮಿಲೆನಿಯಮ್ ಮಹಿಳಾ ಶಿರೋಮಣಿ' ಪ್ರಶಸ್ತಿ ಲಭಿಸಿದೆ.
 9. ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಎಂಜನಿಯರಿಂಗ್‌ ಪ್ರತಿಷ್ಠಾನ ಪ್ರಶಸ್ತಿ (೨೦೦೧),
 10. “ಶಾಲೆ ಮಕ್ಕಳಿಗಾಗಿ ಕಂಪ್ಯೂಟರ್” ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ದೊರೆತಿದೆ.
 11. ರೇಡಿಯೊ ಸಿಟಿ ಬೆಂಗಳೂರಿನಿಂದ ೨೦೦೨ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು “ವರ್ಷದ ಮಹಿಳೆ ಪ್ರಶಸ್ತಿ ಲಭಿಸಿದೆ,
 12. ಬೆಂಗಳೂರಿನ ಲೇಡೀಸ್‌ ಸರ್ಕಲ್‌ನಿಂದ ಅಚೀವರ್ಸ್ ವಿಥ್‌ ಎ ಹಾರ್ಟ್ ಪ್ರಶಸ್ತಿ (೨೦೦೨),
 13. ಸಮಾಜ ಸೇವೆಗಾಗಿ, ಚೆನ್ನೈದ ಶ್ರೀ ರಾಜ-ಲಕ್ಷ್ಮಿ ಫೌಂಡೇಶನ್ ನವರು ೨೦೦೪ ರ ರಾಜ-ಲಕ್ಷ್ಮಿ ಪ್ರಶಸ್ತಿಯನ್ನು ನೀಡಿದ್ದಾರೆ.
 14. ಭಾರತ ಸರಕಾರ - ೨೦೦೬ನೆಯ ಸಾಲಿನಲ್ಲಿ ಸುಧಾ ಮೂರ್ತಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ,
 15. ದೆಹಲಿಯ ಸಹಸ್ರಮಾನ ಮಹಿಳಾ ಶಿರೋಮಣಿ ಪ್ರಶಸ್ತಿ,
 16. ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌,
 17. ಶಿವಮೊಗ್ಗ ಕರ್ನಾಟಕ ಸಂಘದಿಂದ ಎಂ.ಕೆ. ಇಂದಿರಾ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ,
 18. ಡಾ.ಸಾ.ಶಿ. ಮರುಳಯ್ಯ ಪ್ರಶಸ್ತಿ (೨೦೦೪),
 19. ಇಂದೂರ್ ನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪ್ರಶಸ್ತಿ (೨೦೦೫),
 20. ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭),
 21. ಫಾಯ್‌ ಫೌಂಡೇಶನ್‌ನಿಂದ (ಮಹಾರಾಷ್ಟ್ರ) ರಾಷ್ಟ್ರಭೂಷಣ ಪ್ರಶಸ್ತಿ,
 22. ಆಶ್ವಾಸ್‌ ನುಡಿಸಿರಿ ಪ್ರಶಸ್ತಿ (೨೦೦೯),
 23. ಬಸವಶ್ರೀ ಪ್ರಶಸ್ತಿ,
 24. ತುಮಕೂರು ವಿ.ವಿ.ದ ಗೌರವ ಡಾಕ್ಟರೇಟ್‌ (೨೦೧೦) ಮುಂತಾದ ಪ್ರಶಸ್ತಿಗಳು ಸಂದಿವೆ,
 • ಸುಧಾಮೂರ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿ ವರ್ಷವೂ ಉತ್ತರ ಕರ್ನಾಟಕ ಲೇಖಕಿಯರಿಗೆ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Ratan Tata, Rahul Dravid on Gates Foundation board Archived 22 May 2013 at the Wayback Machine.. tata.com (15 July 2003). Retrieved on 8 December 2011.
 2. Gates Foundation's AIDS initiative launched. The Hindu (6 December 2003). Retrieved on 8 December 2011.
 3. 'Narayana Murthy's wife Sudha Murthy's Real Life Experience attribution http://www.citehr.com/99839 'Narayana Murthy's wife Sudha Murthy's Real Life Experience
 4. 'sudha-murthy/biography'
 5. Sudha-Murthy/articleshow