ಭಲ್ಲಾ
ಗೋಚರ
ಮೂಲ | |
---|---|
ಮೂಲ ಸ್ಥಳ | ಭಾರತೀಯ ಉಪಖಂಡ |
ವಿವರಗಳು | |
ನಮೂನೆ | ಲಘು ಆಹಾರ |
ಬಡಿಸುವಾಗ ಬೇಕಾದ ಉಷ್ಣತೆ | ತಣ್ಣಗೆ (ಬಿಸಿಯಿರದೆ) |
ಮುಖ್ಯ ಘಟಕಾಂಶ(ಗಳು) | ಅವರೆಕಾಯಿಯ ಪೇಸ್ಟ್, ಸಂಬಾರ ಪದಾರ್ಥಗಳು |
ಭಲ್ಲಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಲಘು ಆಹಾರ; ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಇದನ್ನು ಚಾಟ್ ಅಂಗಡಿಗಳಲ್ಲಿ ಮತ್ತು ಗೂಡಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ, ವಿಶೇಷವಾಗಿ ಭಾರತೀಯ ಉಪಖಂಡದಾದ್ಯಂತ. ಅವರೇಕಾಯಿಯ ಪೇಸ್ಟ್ ಅನ್ನು ಸಂಬಾರ ಪದಾರ್ಥಗಳೊಂದಿಗೆ ಸೇರಿಸಲಾಗುತ್ತದೆ. ನಂತರ ಇದನ್ನು ಕ್ರೋಕೆಟ್ಗಳನ್ನು ತಯಾರಿಸಲು ಎಣ್ಣೆಯಲ್ಲಿ ಕರಿಯಲಾಗುತ್ತದೆ. ನಂತರ ಇವುಗಳನ್ನು ಮೊಸರು, ಸ್ಞೌಠ್ ಚಟ್ನಿ (ಒಣ ಶುಂಠಿ ಮತ್ತು ಹುಣಸೆ ರಸ) ಹಾಗೂ ಸಂಬಾರ ಪದಾರ್ಥಗಳಿಂದ ಅಲಂಕರಿಸಲಾಗುತ್ತದೆ. ಆಲೂ ಟಿಕ್ಕಿಯಿಂದ ಭಿನ್ನವಾಗಿ ಭಲ್ಲಾವನ್ನು ಸಾಮಾನ್ಯವಾಗಿ ತಣ್ಣಗೆ ಬಡಿಸಲಾಗುತ್ತದೆ.