ಬೂಂದಿ
ಮೂಲ | |
---|---|
ಪರ್ಯಾಯ ಹೆಸರು(ಗಳು) | ಬುಂದೆ |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ರಾಜಸ್ಥಾನ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಹರ್ಯಾಣಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಕಡಲೆ ಹಿಟ್ಟು |
ಪ್ರಭೇದಗಳು | ಖಾರಾ ಬೂಂದಿ |
ಬೂಂದಿ ಸಕ್ಕರೆ ಕೂಡಿಸಿದ, ಕರಿದ ಕಡಲೆ ಹಿಟ್ಟಿನಿಂದ ತಯಾರಿಸಲಾದ ಒಂದು ಭಾರತೀಯ ಸಿಹಿತಿಂಡಿ. ಬಹಳ ಸಿಹಿ ಇರುವ ಕಾರಣ, ಇದನ್ನು ಕೇವಲ ಒಂದು ವಾರ ಅಥವಾ ಸ್ವಲ್ಪ ಹೆಚ್ಚು ದಿನ ಸಂಗ್ರಹಿಸಿಡಬಹುದು. ರಾಜಸ್ಥಾನದ ಶುಷ್ಕ ಪ್ರದೇಶಗಳಲ್ಲಿ ಆಹಾರವನ್ನು ಸಂರಕ್ಷಿಸಿಡುವ ಅಗತ್ಯದ ಕಾರಣ, ಬೂಂದಿ ಲಾಡುವಿಗೆ ಆದ್ಯತೆ ನೀಡಲಾಗುತ್ತದೆ. ಇದರ ಒಂದು ಖಾರದ ರೂಪವೂ ಇದೆ.ಬೂಂದಿ ಲಾಡು ಮಾಡಲು, ಕರಿದ ಬೂಂದಿಯನ್ನು ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ.[೧]
ಖಾರಾ ಬೂಂದಿ
[ಬದಲಾಯಿಸಿ]ಖಾರಾ ಬೂಂದಿ ತಯಾರಿಸುವಾಗ, ಕಡಲೆ ಹಿಟ್ಟನ್ನು ಸಂಬಾರ ಪದಾರ್ಥಗಳು ಮತ್ತು ಉಪ್ಪಿನೊಂದಿಗೆ ಮಿಶ್ರಣಮಾಡಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಪುಡಿ ಮಾಡಿದ ಕರಿಬೇವನ್ನು ಸೇರಿಸಲಾಗುತ್ತದೆ. ಖಾರಾ ಬೂಂದಿಯನ್ನು ಹಾಗೆಯೇ ತಿನ್ನಲಾಗುತ್ತದೆ ಅಥವಾ ಬೇರೆ ಖಾದ್ಯಗಳಿಗೆ ಸೇರಿಸಲಾಗುತ್ತದೆ.
ಬೂಂದಿ ರಾಯಿತಾ
[ಬದಲಾಯಿಸಿ]ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಜನಪ್ರಿಯವಾಗಿ, ಬೂಂದಿಯನ್ನು ರಾಯಿತಾ ತಯಾರಿಸಲು ಬಳಸಲಾಗುತ್ತದೆ. ಬೂಂದಿ ರಾಯತಾ ಸಾಮಾನ್ಯವಾಗಿ ಮೊಸರು, (ಮೃದುವಾಗಿಸಲು ನೀರಿನಲ್ಲಿ ನೆನೆಸಿ ಸೋಸಿದ) ಬೂಂದಿ, ಮತ್ತು ಉಪ್ಪು, ಖಾರ, ಹಾಗೂ ಇತರ ಸಂಬಾರ ಪದಾರ್ಥಗಳಂತಹ ರುಚಿಕಾರಕಗಳನ್ನು ಹೊಂದಿರುತ್ತದೆ. ಇದನ್ನು ಪುಲಾವ್ ಅಥವಾ ಯಾವುದೇ ಇತರ ಊಟದೊಂದಿಗೆ ಹೆಚ್ಚುವರಿಭಕ್ಷ್ಯವಾಗಿ ತಿನ್ನಲಾಗುತ್ತದೆ.