ನಮ್ಮ ಮೆಟ್ರೋ ನಿಲ್ದಾಣಗಳ ಪಟ್ಟಿ
ಈ ಪುಟವು ನಮ್ಮ ಮೆಟ್ರೋ ಅಥವಾ ಬೆಂಗಳೂರು ಮೆಟ್ರೋದ ನಿಲ್ದಾಣಗಳನ್ನು ಪಟ್ಟಿ ಮಾಡುತ್ತದೆ. ನಮ್ಮ ಮೆಟ್ರೋ ಬೆಂಗಳೂರು ನಗರಕ್ಕೆ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿದೆ. ಜೂನ್ ೨೦೧೭ರ ವೇಳೆಗೆ ಸಂಪೂರ್ಣಗೊಂಡ ಮೊದಲ ಹಂತದ ಮೆಟ್ರೋ ಜಾಲವು ಒಟ್ಟು ೪೨ ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.
ಭಾರತದ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ, ಕೋಲ್ಕತ್ತಾ ಮತ್ತು ದೆಹಲಿ ಮೆಟ್ರೋಗಳ ನಂತರದ ಸ್ಥಾನದಲ್ಲಿದೆ. ನಮ್ಮ ಮೆಟ್ರೋದ ಮೊದಲ ಭಾಗವು (ನೇರಳೆ ವಲಯ) ೨೦ ಅಕ್ಟೋಬರ್ ೨೦೧೧ರಂದು ಮಹಾತ್ಮ ಗಾಂಧಿ ರಸ್ತೆ ಮತ್ತು ಬೈಯ್ಯಪ್ಪನಹಳ್ಳಿ ನಡುವೆ ಸಂಚಾರ ಮಾರ್ಗ ಆರಂಭಿಸಿತು. ೧೬ ನವೆಂಬರ್ ೨೦೧೫ರಂದು ಇದೇ ನೇರಳೆ ವಲಯಕ್ಕೆ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಮೆಟ್ರೋ ಮಾರ್ಗ ಸೇರ್ಪಡೆಗೊಂಡಿತು. ೨೯ ಏಪ್ರಿಲ್ ೨೦೧೬ರಂದು ಕಾರ್ಯಾರಂಭಗೊಂಡ ಕಬ್ಬನ್ ಪಾರ್ಕ್ ಮತ್ತು ನಗರ ರೈಲ್ವೆ ನಿಲ್ದಾಣಗಳ ನಡುವಿನ ೪.೮ ಕಿ.ಮೀ. ಉದ್ದದ ಸುರಂಗ ಮಾರ್ಗದೊಂದಿಗೆ ನೇರಳೆ ವಲಯದ ಮಾರ್ಗವು ಸಂಪೂರ್ಣಗೊಂಡಿತು[೧]. ನಮ್ಮ ಮೆಟ್ರೋ ವ್ಯವಸ್ಥೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿ ಎಮ್ ಆರ್ ಸಿ ಎಲ್) ನಿರ್ವಹಿಸುತ್ತಿದೆ.
ನಮ್ಮ ಮೆಟ್ರೋದ ಪ್ರತೀ ವಲಯವನ್ನು ಒಂದೊಂದು ಬಣ್ಣದಿಂದ ಗುರುತಿಸಲ್ಪಟ್ಟಿದೆ. ಮೆಟ್ರೋ ವ್ಯವಸ್ಥೆಯು ಸ್ಟಾಂಡರ್ಡ್ ಗೇಜಿನ ಹಳಿಗಳನ್ನು ಬಳಸುತ್ತಿದ್ದು, ಹಳಿಗಳನ್ನು ನೆಲಮಟ್ಟ, ಸುರಂಗಮಾರ್ಗ ಹಾಗೂ ಉನ್ನತ ಸ್ಥರಗಳಲ್ಲಿ ಸ್ಥಾಪಿಸಲಾಗಿದೆ. ಮೆಟ್ರೋ ಸೇವೆಗಳು ಬೆಳಗಿನ ಜಾವ ೫ರಿಂದ ರಾತ್ರಿ ೧೧ ಘಂಟೆಯವರೆಗೂ ಲಭ್ಯವಿರಲಿದ್ದು, ದಿನನಿತ್ಯ ಸರಾಸರಿ ೫೦,೦೦೦ಕ್ಕೂ ಹೆಚ್ಚು ಪ್ರಯಾಣಿಕರನ್ನು ತಲುಪಲಿವೆ. ನೇರಳೆ ಮಾರ್ಗವು ಪಶ್ಚಿಮದಲ್ಲಿ ಮೈಸೂರು ರಸ್ತೆ ಮತ್ತು ಪೂರ್ವದಲ್ಲಿ ಬೈಯ್ಯಪ್ಪನಹಳ್ಳಿಯನ್ನು ಸಂಪರ್ಕಿಸಿದರೆ, ಹಸಿರು ಮಾರ್ಗವು ಉತ್ತರದಲ್ಲಿ ನಾಗಸಂದ್ರ ಮತ್ತು ದಕ್ಷಿಣದಲ್ಲಿ ಪುಟ್ಟೇನಹಳ್ಳಿಯನ್ನು ಸಂಪರ್ಕಿಸುತ್ತದೆ.
ನಿಲ್ದಾಣಗಳು
[ಬದಲಾಯಿಸಿ]† | ಕೊನೆಯ ನಿಲ್ದಾಣ |
* | ವಿನಿಮಯ ನಿಲ್ದಾಣ |
ಹಸಿರು ಮಾರ್ಗ
[ಬದಲಾಯಿಸಿ]ನೇರಳೆ ಮಾರ್ಗ
[ಬದಲಾಯಿಸಿ]# | ನಿಲ್ದಾಣ | ಲೋಕಾರ್ಪಣೆ | ಹಳಿ ಜೋಡಣೆ ವಿಧಾನ |
೧ | ನಾಗಸಂದ್ರ | ೧ ಮೇ ೨೦೧೫ | ಮೇಲುಸ್ಥರ |
೨ | ದಾಸರಹಳ್ಳಿ | ೧ ಮೇ ೨೦೧೫ | ಮೇಲುಸ್ಥರ |
೩ | ಜಾಲಹಳ್ಳಿ | ೧ ಮೇ ೨೦೧೫ | ಮೇಲುಸ್ಥರ |
೪ | ಪೀಣ್ಯ ಇಂಡಸ್ಟ್ರಿ (ಪೀಣ್ಯ ಕೈಗಾರಿಕೆ) | ೧ ಮಾರ್ಚ್ ೨೦೧೪ | ಮೇಲುಸ್ಥರ |
೫ | ಪೀಣ್ಯ | ೧ ಮಾರ್ಚ್ ೨೦೧೪ | ಮೇಲುಸ್ಥರ |
೬ | ಗೊರಗುಂಟೆಪಾಳ್ಯ (ಯಶವಂತಪುರ ಕೈಗಾರಿಕೆ) | ೧ ಮಾರ್ಚ್ ೨೦೧೪ | ಮೇಲುಸ್ಥರ |
೭ | ಯಶವಂತಪುರ | ೧ ಮಾರ್ಚ್ ೨೦೧೪ | ಮೇಲುಸ್ಥರ |
೮ | ಸ್ಯಾಂಡಲ್ ಸೋಪ್ ಫ್ಯಾಕ್ಟರಿ | ೧ ಮಾರ್ಚ್ ೨೦೧೪ | ಮೇಲುಸ್ಥರ |
೯ | ಮಹಾಲಕ್ಷ್ಮೀ | ೧ ಮಾರ್ಚ್ ೨೦೧೪ | ಮೇಲುಸ್ಥರ |
೧೦ | ರಾಜಾಜಿನಗರ | ೧ ಮಾರ್ಚ್ ೨೦೧೪ | ಮೇಲುಸ್ಥರ |
೧೧ | ಮಹಾಕವಿ ಕುವೆಂಪು ರಸ್ತೆ | ೧ ಮಾರ್ಚ್ ೨೦೧೪ | ಮೇಲುಸ್ಥರ |
೧೨ | ಶ್ರೀರಾಮ್‍ಪುರ | ೧ ಮಾರ್ಚ್ ೨೦೧೪ | ಮೇಲುಸ್ಥರ |
೧೩ | ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ | ೧ ಮಾರ್ಚ್ ೨೦೧೪ | ಮೇಲುಸ್ಥರ |
೧೪ | ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್* | ಆಗಸ್ಟ್ ೨೦೧೬ | ಸುರಂಗಮಾರ್ಗ (ಬಹುಮಹಡಿ) |
೧೫ | ಚಿಕ್ಕಪೇಟೆ | ೧೮ ಜೂನ್ ೨೦೧೭ | ಸುರಂಗಮಾರ್ಗ |
೧೬ | ಕೃಷ್ಣರಾಜೇಂದ್ರ ಮಾರುಕಟ್ಟೆ | ೧೮ ಜೂನ್ ೨೦೧೭ | ಸುರಂಗಮಾರ್ಗ |
೧೭ | ನ್ಯಾಷನಲ್ ಕಾಲೇಜ್ | ೧೮ ಜೂನ್ ೨೦೧೭ | ಮೇಲುಸ್ಥರ |
೧೮ | ಲಾಲ್‌ಬಾಗ್ | ೧೮ ಜೂನ್ ೨೦೧೭ | ಮೇಲುಸ್ಥರ |
೧೯ | ಸೌತ್ ಎಂಡ್ ಸರ್ಕಲ್ (ಸೌತ್ ಎಂಡ್ ವೃತ್ತ) | ೧೮ ಜೂನ್ ೨೦೧೭ | ಮೇಲುಸ್ಥರ |
೨೦ | ಜಯನಗರ | ೧೮ ಜೂನ್ ೨೦೧೭ | ಮೇಲುಸ್ಥರ |
೨೧ | ರಾಷ್ಟ್ರೀಯ ವಿದ್ಯಾಲಯ ರಸ್ತೆ | ೧೮ ಜೂನ್ ೨೦೧೭ | ಮೇಲುಸ್ಥರ |
೨೨ | ಬನಶಂಕರಿ | ೧೮ ಜೂನ್ ೨೦೧೭ | ಮೇಲುಸ್ಥರ |
೨೩ | ಜಯಪ್ರಕಾಶ ನಗರ | ೧೮ ಜೂನ್ ೨೦೧೭ | ಮೇಲುಸ್ಥರ |
೨೪ | ಯಲಚೇನಹಳ್ಳಿ† | ೧೮ ಜೂನ್ ೨೦೧೭ | ಮೇಲುಸ್ಥರ |
೨೫ | ಕೋಣನಕುಂಟೆ ಕ್ರಾಸ್ | ೨೧ ಜನವರಿ ೨೦೨೧ | ಮೇಲುಸ್ಥರ |
೨೬ | ದೊಡ್ಡಕಲ್ಲಸಂದ್ರ | ೨೧ ಜನವರಿ ೨೦೨೧ | ಮೇಲುಸ್ಥರ |
೨೭ | ವಾಜರಹಳ್ಳಿ | ೨೧ ಜನವರಿ ೨೦೨೧ | ಮೇಲುಸ್ಥರ |
೨೮ | ತಲಘಟ್ಟಪುರ | ೨೧ ಜನವರಿ ೨೦೨೧ | ಮೇಲುಸ್ಥರ |
೨೯ | ರೇಷ್ಮೆ ಸಂಸ್ಥೆ | ೨೧ ಜನವರಿ ೨೦೨೧ | ಮೇಲುಸ್ಥರ |
ಉಲ್ಲೇಖಗಳು
[ಬದಲಾಯಿಸಿ]- ↑ "Namma metro to chug on October 20 – southindia – Bangalore – ibnlive". Ibnlive.in.com. Archived from the original on 2011-10-03. Retrieved 2011-10-21.
ಹೊರಸಂಪರ್ಕಕೊಂಡಿಗಳು
[ಬದಲಾಯಿಸಿ]ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ ಜಾಲತಾಣ Archived 2017-07-26 ವೇಬ್ಯಾಕ್ ಮೆಷಿನ್ ನಲ್ಲಿ.
ಇವನ್ನೂ ನೋಡಿ
[ಬದಲಾಯಿಸಿ]# | ನಿಲ್ದಾಣ | ಲೋಕಾರ್ಪಣೆ | ಹಳಿ ಜೋಡಣೆ ವಿಧಾನ | |
೧ | ಬೈಯ್ಯಪ್ಪನಹಳ್ಳಿ† | ೨೦ ಅಕ್ಟೋಬರ್ ೨೦೧೧ | ಮೇಲುಸ್ಥರ ಮತ್ತು ನೆಲಮಟ್ಟ | |
೨ | ಸ್ವಾಮಿ ವಿವೇಕಾನಂದ ರಸ್ತೆ | ೨೦ ಅಕ್ಟೋಬರ್ ೨೦೧೧ | ಮೇಲುಸ್ಥರ | |
೩ | ಇಂದಿರಾನಗರ | ೨೦ ಅಕ್ಟೋಬರ್ ೨೦೧೧ | ಮೇಲುಸ್ಥರ | |
೪ | ಹಲಸೂರು | ೨೦ ಅಕ್ಟೋಬರ್ ೨೦೧೧ | ಮೇಲುಸ್ಥರ | |
೫ | ಟ್ರಿನಿಟಿ | ೨೦ ಅಕ್ಟೋಬರ್ ೨೦೧೧ | ಮೇಲುಸ್ಥರ | |
೬ | ಮಹಾತ್ಮಾ ಗಾಂಧಿ ರಸ್ತೆ | ೨೦ ಅಕ್ಟೋಬರ್ ೨೦೧೧ | ಮೇಲುಸ್ಥರ | |
೭ | ಕಬ್ಬನ್ ಪಾರ್ಕ್ | ೨೯ ಏಪ್ರಿಲ್ ೨೦೧೬ | ಸುರಂಗಮಾರ್ಗ | |
೮ | ಡಾ. ಬಿ ಆರ್ ಅಂಬೇಡ್ಕರ್ ನಿಲ್ದಾಣ, ವಿಧಾನ ಸೌಧ | ೨೯ ಏಪ್ರಿಲ್ ೨೦೧೬ | ಸುರಂಗಮಾರ್ಗ | |
೯ | ಸರ್ ಎಮ್. ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜ್ | ೨೯ ಏಪ್ರಿಲ್ ೨೦೧೬ | ಸುರಂಗಮಾರ್ಗ | ಸೆಂಟ್ರಲ್ ಕಾಲೇಜು |
೧೦ | ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್* | ೨೯ ಏಪ್ರಿಲ್ ೨೦೧೬ | ಸುರಂಗಮಾರ್ಗ (ಬಹುಮಹಡಿ) | |
೧೧ | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ | ೨೯ ಏಪ್ರಿಲ್ ೨೦೧೬ | ಸುರಂಗಮಾರ್ಗ | |
೧೨ | ಮಾಗಡಿ ರಸ್ತೆ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೩ | ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ, ಹೊಸಹಳ್ಳಿ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೪ | ವಿಜಯನಗರ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೫ | ಅತ್ತಿಗುಪ್ಪೆ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೬ | ದೀಪಾಂಜಲಿ ನಗರ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೭ | ಮೈಸೂರು ರಸ್ತೆ† | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೮ | ನಾಯಂಡಹಳ್ಳಿ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೧೯ | ರಾಜರಾಜೇಶ್ವರಿನಗರ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೨೦ | ಜ್ಞಾನಭಾರತಿ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೨೧ | ಪಟ್ಟಣಗೆರೆ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೨೨ | ಕೆಂಗೇರಿ ಬಸ್ ಟರ್ಮಿನಲ್ | ೧೬ ನವೆಂಬರ್ ೨೦೧೫ | ಮೇಲುಸ್ಥರ | |
೨೩ | ಕೆಂಗೇರಿ | ೧೬ ನವೆಂಬರ್ ೨೦೧೫ | ಮೇಲುಸ್ಥರ |