ವಿಷಯಕ್ಕೆ ಹೋಗು

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ೨೦೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ೨೦೧೭ ರಲ್ಲಿ ಉತ್ತರ ಪ್ರದೇಶದಲ್ಲಿ 17ನೆ ವಿಧಾಸಭಾ ಚುನಾವಣೆ ಫೆಬ್ರವರಿ 11 ರಿಂದ ಮಾರ್ಚ್ 8 ರ ವರೆಗೆ 7 ಹಂತಗಳಲ್ಲಿ ನಡೆಯಿತು.

2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ಕೂಡ ವಿಧಾನಸಭಾ ಚುನಾವಣೆ ನಡೆಯಿತು.

ಯು ಪಿ ರಾಜ್ಯದ ವಿಧಾನಸಭೆ ಚುನಾವಣೆ 2017

[ಬದಲಾಯಿಸಿ]
  • ಚುನಾವಣೆ ಮುನ್ನೋಟ:3/1/2017
  • ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಒಟ್ಟಾರೆ ಎಸ್ಪಿ) ಇತ್ತೀಚಿನ ಎಬಿಪಿ ನ್ಯೂಸ್-ಲೋಕನೀತಿಯ CSDS (Opinion Poll) ಚುನಾವಣೆ ಮುನ್ನೋಟ ಪ್ರಕಾರ:
ಕ್ರ.ಸ. ಪಕ್ಷ ನಾಯಕರು ಶೇ. ಸ್ಥಾನ,
1. ಸಮಾಜವಾದಿ ಪಕ್ಷ (ಎಸ್.ಪಿ=ಒಟ್ಟು) ಮುಲಾಯಮ್ ಯಾದವ್ + ಅಖಿಲೇಶ್ 30% 141-151
2. ಭಾರತಿಯ ಜನತಾ ಪಕ್ಷ (ಬಿಜೆಪಿ) ಅಮಿತ್ ಷಾ + ಮೋದಿ 27% 129-139
3. ಬಹುಜನ ಸಮಾಜವಾದಿ ಪಕ್ಷ (ಬಿ.ಎಸ್.ಪಿ) ಮಾಯಾವತಿ 22% 93-103
4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಭಾ.ರಾ.ಕಾಂ.) ಶೈಲಾ ದೀಕ್ಷಿತ್ 8% 13-19
5. ಇತರೆ 13% 6-12

ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ

[ಬದಲಾಯಿಸಿ]
  • 16 Jan, 2017,ಸೋಮವಾರ.
  • ಸಮಾಜವಾದಿ ಪಕ್ಷ ಅಖಿಲೇಶ್ ಬಣ ಮತ್ತು ಮುಲಾಯಂ ಬಣ ಎಂದು ಹೋಳಾದ ನಂತರ ಚುನಾವಣಾ ಚಿಹ್ನೆಗಾಗಿ ಅಪ್ಪ ಮತ್ತು ಮಗನ ನಡುವೆ ಹೋರಾಟ ನಡೆದು ಬರುತ್ತಿತ್ತು. ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಎರಡು ಬಣಗಳ ನಡುವೆ ಸೈಕಲ್‌ ಚಿಹ್ನೆಗಾಗಿ ನಡೆದಿರುವ ಸಂಘರ್ಷದ ಬಗ್ಗೆ ಚುನಾವಣಾ ಆಯೋಗ ಸೋಮವಾರ ತೀರ್ಪು ನೀಡಿದ್ದು, ಅಖಿಲೇಶ್ ಯಾದವ್‍ ಬಣಕ್ಕೆ 'ಸೈಕಲ್' ಚಿಹ್ನೆ ಸಿಕ್ಕಿದೆ.ಈ ತೀರ್ಪಿನಿಂದಾಗಿ 25 ವರ್ಷಗಳ ಹಿಂದೆ ಪಕ್ಷ ಸ್ಥಾಪನೆ ಮಾಡಿದ್ದ 77ರ ಹರೆಯದ ಮುಲಾಯಂ ಸಿಂಗ್ ಅವರಿಗೆ ಮುಖಭಂಗವಾಗಿದೆ.[]

ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ

[ಬದಲಾಯಿಸಿ]
  • ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಖಚಿತವಾಗಿದೆ. ಕಾಂಗ್ರೆಸ್‌ 105 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಮಾಜವಾದಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬಿಡುಗಡೆ ಮಾಡಿದ್ದು, ಬಿಜೆಪಿ ‘ಅಚ್ಚೇ ದಿನ’ ತರುವುದಾಗಿ ನೀಡಿದ್ದ ಭರವಸೆಗಳು ಈಡೇರಿರದ ಕುರಿತು ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ನಡೆಯುತ್ತಿದ್ದ ಚರ್ಚೆ ಯಶಸ್ವಿಯಾಗಿದೆ. ಒಟ್ಟು 403 ಸ್ಥಾನಗಳ ಪೈಕಿ ಕಾಂಗ್ರೆಸ್‌ 105 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಮಾಜವಾದಿ ಪಕ್ಷ 298 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.[]

ಎಬಿಪಿ ಸಮೀಕ್ಷೆ

[ಬದಲಾಯಿಸಿ]
  • 29 Jan, 2017;ಒನ್ಇಂಡಿಯಾ ಸುದ್ದಿ;
ವಿವರ : :ಪಕ್ಷ -> ಎಸ್ ಪಿ ಹಾಗೂ ಕಾಂಗ್ರೆಸ್ ಬಿಎಸ್ ಪಿ ಬಿಜೆಪಿ + ಇತರೆ:
ಸ್ಥಾನ ಗಳಿಕೆ: 187-197 76-86 118-128 5-9
ಶೇಕಡಾವಾರು ಮತ ಗಳಿಕೆ 35 23 29 13

[]

ಬಿಜೆಪಿಯ ಚುನಾವಣೆ ಭರವಸೆಗಳು

[ಬದಲಾಯಿಸಿ]
  • 29 Jan, 2017
  1. ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಮಹಿಳೆಯರ ಅಭಿಪ್ರಾಯ ಪಡೆದು ಸುಪ್ರೀಂಕೋರ್ಟ್‌ನಲ್ಲಿ ಮಂಡಿಸಲಾಗುವುದು;
  2. ಕೋಮು ಗಲಭೆಗಳು ನಡೆದಾಗ ಜನರು ಸಾಮೂಹಿಕವಾಗಿ ವಲಸೆ ಹೋಗುವುದನ್ನು ತಡೆಯಲು ವಿಶೇಷ ತಂಡ ರಚನೆ;
  3. ರಾಜ್ಯದಲ್ಲಿರುವ ಅನಧಿಕೃತ ಕಸಾಯಿ ಖಾನೆಗಳನ್ನು ಮುಚ್ಚುವ ಘೋಷಣೆಯನ್ನು ಬಿಜೆಪಿ ಮಾಡಿದೆ.
  4. ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರಿನಲ್ಲಿ ₹500 ಕೋಟಿ ಮೊತ್ತದ ನಿಧಿ ಸ್ಥಾಪನೆ;
  5. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪಕ್ಷವು ಬದ್ಧ. ಸಂವಿಧಾನದ ನಿಯಮಗಳ ಅಡಿಯಲ್ಲೇ ಮಂದಿರ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು;
  6. ಅಹಿಲ್ಯಾ ಬಾಯಿ ಶಿಕ್ಷಣ ಯೋಜನೆಯ ಅಡಿಯಲ್ಲಿ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ.
  7. ಬಾಲಕರಿಗೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲು ಪ್ರತ್ಯೇಕ ಯೋಜನೆ.
  8. ಒಂದು ವರ್ಷಕ್ಕೆ ವಿದ್ಯಾರ್ಥಿಗಳಿಗೆ 1ಜಿಬಿ ಡೇಟಾ ಉಚಿತ.
  9. ವಿಶ್ವವಿದ್ಯಾಲಯಗಳಲ್ಲಿ ಉಚಿತ ವೈಫೈ ಸೌಲಭ್ಯ.
  10. ಶಾಲಾ ಕಾಲೇಜು ವಿದ್ಯಾರ್ಥಿನಿಯರ ರಕ್ಷಣೆಗೆ ‘ರೋಮಿಯೊ ತಡೆ ಪಡೆ’ ರಚನೆ. ಮೂರು ಮಹಿಳಾ ತುಕಡಿ ಸ್ಥಾಪನೆ.
  11. ಭ್ರಷ್ಟಾಚಾರ ತಪ್ಪಿಸುವುದಕ್ಕಾಗಿ ಸಂದರ್ಶನ ಇಲ್ಲದೇ, ಪ್ರತಿಭೆಯ ಆಧಾರದಲ್ಲಿ ಸಿ ಮತ್ತು ಡಿ ದರ್ಜೆ ನೌಕರರ ನೇಮಕ.
  12. ‘ಡಯಲ್ 100’ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ 15 ನಿಮಿಷಗಳಲ್ಲಿ ಪೊಲೀಸ್ ನೆರವು ಸಿಗುವಂತೆ ಮಾಡುವುದು.

[]

7 ಹಂತದಲ್ಲಿ ಮತದಾನ

[ಬದಲಾಯಿಸಿ]
  • ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ.
  • ಒಟ್ಟು 403 ಅಸೆಂಬ್ಲಿ ಕ್ಷೇತ್ರ
  • ಎರಡನೇ ಹಂತ : ಫೆಬ್ರವರಿ 15
  • ಮೂರನೇ ಹಂತ : ಫೆಬ್ರವರಿ 19
  • ನಾಲ್ಕನೇ ಹಂತ: ಫೆಬ್ರವರಿ 23
  • ಐದನೇ ಹಂತ: ಫೆಬ್ರವರಿ 27
  • ಆರನೇ ಹಂತ : ಮಾರ್ಚ್ 04
  • ಏಳನೇ ಹಂತ: ಮಾರ್ಚ್ 08
  • ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)
  • ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ.[]

ಶೇ.ಮತದಾನ

[ಬದಲಾಯಿಸಿ]
  • ಮೊದಲ ಹಂತ: ಫೆಬ್ರವರಿ 11 -73 ಸ್ಥಾನಗಳಿಗೆ ಮತದಾನ ನಡೆದಿದೆ,-ಶೇಕಡ 64 ಮತದಾನ.[]
  • ಎರಡೇ ಹಂತ; ಫೆ.15, 67 ಕ್ಷೇತ್ರಗಳಲ್ಲಿ ಮತದಾನ;ಶೇಕಡ 65 ಮತದಾನ.[]
  • ಮೂರನೇ ಹಂತ:Feburary 20, 2017; 12 ಜಿಲ್ಲೆಗಳಲ್ಲಿ ಹರಡಿರುವ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ;25,603 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ಇಲ್ಲಿದ್ದಾರೆ.
  • ಈ 3 ನೇ ಹಂತದ ಮತದಾನದಲ್ಲಿ 2.41 ಕೋಟಿ ಜನರು, 1.10 ಕೋಟಿ ಮಹಿಳೆಯರು ಮತ್ತು 'ಮೂರನೇ ಲಿಂಗ' ವರ್ಗಕ್ಕೆ ಸೇರಿರುವ 1,026 ಜನರು ಸೇರಿದಂತೆ ಮತದಾನಕ್ಕೆ ಅರ್ಹರಾಗಿರುತ್ತಾರೆ.[]
  • ಫೆಬ್ರ, 23, 2017 ರಂದು ನಾಲ್ಕನೇ ಹಂತದಲ್ಲಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸಂಜೆ 5 ರವರೆಗೆ ಶೇ. 61 ದಾಖಲಿಸಲಾಗಿದೆ; ಮತದಾನದ 63ದಾಟಲು ನಿರೀಕ್ಷಿಸಬಹುದು. (ಚುನಾವಣಾ ಆಯೋಗ)
  • ಫೆಬ್ರ. 27, 2017; ಐದನೇ ಹಂತದಲ್ಲಿ 5ಗಂ.ತನಕ ಮತದಾನ ಶೇ.57.36, ದಾಖಲಾಗಿದೆ; ಮತ್ತು ಹಲವಾರು ಮತದಾರರು ತಮ್ಮ ಮತದಾನಕ್ಕೆ ಸಾಲುಗಳನ್ನು ಕಾಯುತ್ತಿದ್ದರು; ಶೇ.೫೭.೫ ಕ್ಕೆ ಹೋಗುವ ಸಾಧ್ಯತೆಯಿದೆ.[೧೦]
  • Mar 4, 2017,ರಂದು, ಉತ್ತರ ಪ್ರದೇಶದಲ್ಲಿ ಅಂದಾಜು ಶೇಕಡಾ 57,03 ರಷ್ಟು ಮತದಾರರು ಈ ಹಂತದಲ್ಲಿ ತಮ್ಮ ಮತದಾನ ಮಾಡಿದರು.[೧೧]
  • 8 Mar, 2017;
  • ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬುಧವಾರ ಮುಕ್ತಾಯಗೊಂಡಿದ್ದು, ಶೇ.60.03 ಮತದಾನವಾಗಿದೆ.

[೧೨]

ಫಲಿತಾಂಶ

[ಬದಲಾಯಿಸಿ]
  • ಸ್ಥಾನಗಳು: 403
ರಾಜ್ಯ ಬಿಜೆಪಿ + ಎಸ್.ಪಿ+ಕಾಂಗ್ರೆಸ್ .ಬಿಎಸ್.ಪಿ ಇತರೆ
ಉತ್ತರಪ್ರದೇಶ (403) 324+1 (ಬಿಜೆಪಿ 312) 54 (ಕಾಂಗ್ರೆಸ್: 7) 19 6-1
ಶೇ.ಮತಗಳಿಕೆ 39.7% 21.8% + 6.2% 22.2%

[೧೩]

  • 403 ಸದಸ್ಯರಿರುವಉತ್ತರಪ್ರದೇಶ ವಿಧಾನಸಭೆಯಲ್ಲಿ 312 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. 70 ಸದಸ್ಯರಿರುವ ಉತ್ತರಾಖಂಡ್‍ ವಿಧಾನಸಭೆಯಲ್ಲಿ ಬಿಜೆಪಿ 47 ಸೀಟು ಗೆದ್ದುಕೊಂಡಿದೆ.[೧೪]
  • 105 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ ಏಳು ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರಗಳಾದ ರಾಯ್‌ಬರೇಲಿ ಹಾಗೂ ಅಮೇಠಿಗಳಲ್ಲೂ ಭಾರಿ ಸೋಲು ಅನುಭವಿಸಿದೆ.
  • ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷ :(ಎನ್ಡಿಎ)ಸ್ಪರ್ಧೆ 7; ಗೆಲುವು: 4ಸ್ಥಾನ
  • ಬಿಜೆಪಿಯ ಮಿತ್ರ, ಪ್ರಾದೇಶಿಕ ಪಕ್ಷ ಅಪ್ನಾ ದಳ:(ಎನ್ಡಿಎ): 9 ಸ್ಥಾನಗಳನ್ನು ಗೆದ್ದಿದೆ.[೧೫]

ಮತಗಳಿಕೆ

[ಬದಲಾಯಿಸಿ]
  • ಬಿಜೆಪಿ :39.78% =348793೦೦
  • ಬಿಎಸ್.ಪಿ :22.2% = 192643೦೦
  • ಎಸ್.ಪಿ :21.8% =18905744
  • ಕಾಂ. : 6.2% =5416324
  • ಪಕ್ಷೇತರ :2.6% =ಓಟು:22,28,213
  • ಆರ್,ಎಲ್.ಡಿ:1.8% = 15,40,620
  • ಎಡಿಎಎಲ್:1.0% = 8,51,336
  • ಎಸ್.ಬಿ.ಎಸ್.ಪಿ0.7% = 6,07,911
  • ಎನ್,ಐ,ಎನ್,ಎಸ್,ಎಚ್,ಎಡಿ = 0.6%53....
  • ಪಿಇಸಿಪಿ:0.3% + 2,27,998

[೧೬]

ಜಾತಿ ಲಕ್ಕಾಚಾರ

[ಬದಲಾಯಿಸಿ]
  • ಇತರೆ ಹಿಂದುಳಿದ ವರ್ಗ 34.7%
  • ದಲಿತ 20.5%
  • ಮುಸ್ಲಿಂ 19%
  • ಬ್ರಾಹ್ಮಣ 10%
  • ಠಾಕೂರ್ 7.6%
  • ವೈಶ್ಯ 4.3%
  • ಬುಡಕಟ್ಟು 2%
  • ಇತರೆ 1.4%

[೧೭]

ಫಲಿತಾಂಶದ ವಿವರ

[ಬದಲಾಯಿಸಿ]
ಪಕ್ಷ ಒಕ್ಕೂಟ ಸ್ಪರ್ಧಿಸಿದ ಸ್ಥಾನ ಗೆದ್ದ ಸ್ಥಾನಗಳು ಬದಲಾವಣೆ ಮತ%
ಭಾರತೀಯ ಜನತಾ ಪಕ್ಷ ಎನ್ಡಿಎ 384 312 + 265 39.7%
ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷ ಎನ್ಡಿಎ ಎನ್ಡಿಎ 7 (-) 4 0.7 %
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಸ್ಪಿ + 105 7 (-) 21 6.2%
ಬಹುಜನ ಸಮಾಜ ಪಕ್ಷ - 403 19 (-) 61 22.2%
ರಾಷ್ಟ್ರೀಯ ಲೋಕದಳ - 131 1 1.8%
ಭಾರತದ ಕಮ್ಯುನಿಸ್ಟ್ ಪಕ್ಷ Left 90 0
ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ-ಲೆನಿನ್) Left 50 0
ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) Left 27 0
ಎಐಎಮ್.ಐಎಮ್(AIMIM) - 38 0
ಅಪ್ನಾ ದಳದ Grand alliance 150 0
ಸಮಾಜವಾದಿ ಪಕ್ಷದ SP+ 298 47 (-) 177 21.8%
ಅಪ್ನಾ ದಳದ (Sonelal) NDA 12 9 1.0 %
ಭಾರತದ ಪೀಸ್ ಪಾರ್ಟಿ Grand Alliance 150 0 (-) 4
ನಿಷಾದ ಪಕ್ಷದ Grand Alliance 100 1 (-) 1
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ -
ಶಿವಸೇನೆ - 150
ಪಕ್ಷೇತರರು n/a 3
ಒಟ್ಟು - 0 403

ಗೆಲುವುಗಳ ಇತಿಹಾಸ

[ಬದಲಾಯಿಸಿ]
  • 1952ರಲ್ಲಿ ಒಟ್ಟು 430ರ ಪೈಕಿ ಕಾಂಗ್ರೆಸ್ 388 ಸೀಟುಗಳನ್ನು ಗೆದ್ದಿತ್ತು. 1977ರಲ್ಲಿ ತುರ್ತುಪರಿಸ್ಥಿತಿಯ ನಂತರ ಜನತಾಪಾರ್ಟಿಗೆ 352 ಸೀಟುಗಳು ದೊರೆತಿದ್ದವು. 1980ರಲ್ಲಿ ಕಾಂಗ್ರೆಸ್ 309 ಸೀಟುಗಳನ್ನು ಗೆದ್ದಿತ್ತು.
  • ಉತ್ತರಪ್ರದೇಶ ವಿಭಜನೆ ಬಳಿಕ 403 ಸೀಟುಗಳ ಪೈಕಿ ಬಿಜೆಪಿ 312 ? ಸೀಟುಗಳ ಗೆಲುವಿನ ವಿಕ್ರಮ ಸಾಧಿಸಿದೆ. ರಾಮಜನ್ಮಭೂಮಿ ಆಂದೋಲನದ ಫಲವಾಗಿ 1991ರಲ್ಲಿ 221 ಸೀಟುಗಳನ್ನು ಗಳಿಸಿದ್ದೇ ಉತ್ತರಪ್ರದೇಶದಲ್ಲಿ ಈವರೆಗೆ ಬಿಜೆಪಿ ಗಳಿಸಿದ್ದ ದೊಡ್ಡ ಗೆಲುವು. ಆನಂತರದ ಇಲ್ಲಿಯವರೆಗಿನ ಪಯಣ ಇಳಿಜಾರಿನ ಹಾದಿಯದು. 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಹಾಗೂ 2012ರಲ್ಲಿ 47. ಇದೀಗ ಮೋದಿ ನೇತೃತ್ವದಲ್ಲಿ ದಿಗ್ವಿಜಯ ಕಂಡಿದೆ.[೧೮]

2017 ರ ಬೆಜೆಪಿ ಗೆಲುವಿನ ವಿಶ್ಲೇಷಣೆ

[ಬದಲಾಯಿಸಿ]
  • ಹಿಂದೂ ಹಬ್ಬಕ್ಕೆ ಕಡಿಮೆ ಮತ್ತು ಮುಸ್ಲಿಂ ಹಬ್ಬಕ್ಕೆ ಹೆಚ್ಚು ವಿದ್ಯುಚ್ಛಕ್ತಿ ಸರಬರಾಜು, ಮುಸ್ಲಿಂ ಮಕ್ಕಳಿಗೇ ಹೆಚ್ಚು ಲ್ಯಾಪ್‌ಟಾಪ್ ಮತ್ತಿತರೆ ಕೋಮು ಧ್ರುವೀಕರಣದ ಆರೋಪಗಳಿಗೆ ಪುರಾವೆ ಇಲ್ಲ. ನೋಟು ರದ್ದತಿ ಕ್ರಮವೂ ಅಷ್ಟೆ. ಕಾಳಧನ ವಾಪಸು ಬಂದಿಲ್ಲವೆಂದು ಅಂಕಿ ಅಂಶಗಳು ಬೇರೊಂದು ಕತೆಯನ್ನೇ ಹೇಳುತ್ತವೆ. ಆದರೆ ತಾವು ನಂಬಿಕೆಯಿಟ್ಟ ನಾಯಕ ಹೇಳುವುದೇ ಅಂತಿಮ ಸತ್ಯ ಎಂಬಷ್ಟು ಆಳದ ವಿಶ್ವಾಸವನ್ನು ಜನಸಮೂಹದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಮೂಡಿಸಿರುವ ಮೋದಿಯವರ ಸಾಧನೆ ಯಾವ ಪವಾಡಕ್ಕೂ ಕಡಿಮೆಯದಲ್ಲ.[೧೯]

ಬಿಹಾರದ ಮೈತ್ರಿ ನೀತಿ

[ಬದಲಾಯಿಸಿ]
  • 2015ರ ಕಡೆಯ ಭಾಗದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡಲಿದ್ದಾರೆ ನಿತೀಶ್- ಲಾಲೂ ಎಂದು ಹೆದರಿಸಿದ್ದರು ಮೋದಿ. ಬಿಜೆಪಿಯನ್ನು ಗೆಲ್ಲಿಸಿದರೆ ಬಿಹಾರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಆಮಿಷವನ್ನೂ ಒಡ್ಡಲಾಗಿತ್ತು. ಆದರೂ ಬಿಹಾರ ಮೋದಿಯವರಿಗೆ ಒಲಿಯಲಿಲ್ಲ. ಯಾದವೇತರ ಹಿಂದುಳಿದ ವರ್ಗಗಳು, ದಲಿತರು ಮತ್ತು ಮಹಾದಲಿತ ಜನವರ್ಗಗಳನ್ನು ನಿತೀಶ್ ಕುಮಾರ್ ಅದಾಗಲೇ ಸಂಯುಕ್ತ ಜನತಾದಳದ ತೆಕ್ಕೆಗೆ ತೆಗೆದುಕೊಂಡು ಆಗಿತ್ತು. ಇಂತಹ ನಿತೀಶ್ ಕುಮಾರ್ ಜೊತೆ ಕೈ ಜೋಡಿಸಿದ್ದರು ಲಾಲೂ. ಮುಸಲ್ಮಾನರನ್ನೂ ಸೆಳೆದು ಯಾದವ ಮತ ಭಂಡಾರಕ್ಕೆ ಜೋಡಿಸುವ ಶಕ್ತಿ ಜೋಡಿಗೆ ಇತ್ತು. ಜೊತೆ ಸೇರಿತ್ತು ಕಾಂಗ್ರೆಸ್ ಪಕ್ಷ. ಪರಿಣಾಮವಾಗಿ ಎದ್ದು ನಿಂತ ಮಹಾಮೈತ್ರಿ ಕೂಟ ಮೋದಿ ಹಾದಿಯ ಅಡ್ಡಗಲ್ಲಾಯಿತು. 273 ಸ್ಥಾನಗಳ ಪೈಕಿ ಮಹಾಮೈತ್ರಿ ಕೂಟ 179ನ್ನು ಗೆದ್ದುಕೊಂಡಿತ್ತು.

ಉತ್ತರಪ್ರದೇಶದಲ್ಲೂ ಮಹಾಮೈತ್ರಿಕೂಟ ಇದ್ದಿದ್ದರೆ

[ಬದಲಾಯಿಸಿ]
  • ಉತ್ತರಪ್ರದೇಶದಲ್ಲೂ ಇಂತಹುದೇ ಮಹಾಮೈತ್ರಿಕೂಟ ತಲೆ ಎತ್ತಿದ್ದರೆ ಚುನಾವಣಾ ಫಲಿತಾಂಶಗಳು ತಿರುವು ಮುರುವಾಗುತ್ತಿದ್ದವು. ಸಮಾಜವಾದಿ ಪಾರ್ಟಿ(ಎಸ್.ಪಿ)- ಕಾಂಗ್ರೆಸ್ ಜೊತೆಗೆ ಬಹುಜನಸಮಾಜ ಪಾರ್ಟಿ (ಬಿ.ಎಸ್.ಪಿ.) ಸೇರಿ ಚುನಾವಣೆಗೆ ಮುನ್ನವೇ ಸೀಟು ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿದ್ದರೆ ದೊಡ್ಡ ಗೆಲುವಿನತ್ತ ಸಾಗುತ್ತಿದ್ದವು ಎಂಬ ಸಂಗತಿಯನ್ನು ಫಲಿತಾಂಶ ವಿಶ್ಲೇಷಣೆ ನಿಚ್ಚಳವಾಗಿ ಸೂಚಿಸುತ್ತದೆ.
  • 203 ಸೀಟುಗಳಲ್ಲಿ ಎಸ್.ಪಿ.-ಕಾಂಗ್ರೆಸ್ ಕೂಟ ಎರಡನೆಯ ಸ್ಥಾನದಲ್ಲಿ,
  • 116ರಲ್ಲಿ ಬಿ.ಎಸ್.ಪಿ.ಯದು ಎರಡನೆಯ ಸ್ಥಾನ.
  • ಈ ಎರಡೂ ಪಕ್ಷಗಳು:ಎಸ್.ಪಿ.-ಕಾಂಗ್ರೆಸ್ ಕೂಟ + ಬಿ.ಎಸ್.ಪಿ.ಗಳಿಸಿದ ಮತಗಳು; 198 ಕ್ಷೇತ್ರಗಳಲ್ಲಿ ಬಿಜೆಪಿಯ ವಿಜಯೀ ಅಭ್ಯರ್ಥಿ ಗಳಿಸಿದ ಮತಗಳ ಪ್ರಮಾಣವನ್ನು ಮೀರುತ್ತದೆ.
  • 324 ಸ್ಥಾನ ಗೆದ್ದಿರುವ ಬಿಜೆಪಿ ಗಳಿಸಿದ ಮತಗಳ ಶೇಕಡಾವಾರು ಪ್ರಮಾಣ 39.7.
  • ಎರಡನೆಯ ಸ್ಥಾನದಲ್ಲಿರುವ ಬಿ.ಎಸ್.ಪಿ. ಪಕ್ಷ ಗಳಿಸಿದ ಮತಗಳು ಶೇ 22.2ರಷ್ಟು.
  • ಎಸ್.ಪಿ. ಗಳಿಸಿದ ಮತಗಳು ಶೇ 21.8 ರಷ್ಟು
  • ಕಾಂಗ್ರೆಸ್ಸಿನ ಗಳಿಕೆ ಶೇ 6.2. ರಷ್ಟು;
  • ಇತರರು 10.1% (X)
  • 324 ಸ್ಥಾನ ಗೆದ್ದಿರುವ ಬಿಜೆಪಿ ಗಳಿಸಿದ ಮತಗಳ ಶೇಕಡಾವಾರು ಪ್ರಮಾಣ 39.7. <> ಇತರ ಮೂರು ಪಕ್ಷಗಳ ಒಟ್ಟು ಮತ ಶೇಕಡಾವಾರು ಪ್ರಮಾಣ =22.2 + 21.8 +6.2.= 50.2
  • ವಿರೋಧ ಪಕ್ಷಗಳು ಈಗ ಸೋತಿರುವ 198 ಪ್ರತಿ ಕ್ಷೇತ್ರಗಳಲ್ಲಿ ಇತರ ಮೂರು ಪಕ್ಷಗಳ ಒಟ್ಟು ಮತ ಬಿಜೆಪಿ ಗಳಿಸಿದ ಮತಗಳಿಗಿಂತ ಹೆಚ್ಚು = 198 + ಎಸ್.ಪಿ & ಕಾ 54 + ಬಿಎಸ್.ಪಿ 19 = 271 ಸ್ಥಾನ ಗೆಲ್ಲಬಹುದಿತ್ತು ಎಂಬ ಅಂದಾಜು; ಅದರಲ್ಲಿ 20 ಕಡಿಮೆ ಬಂದರೂ 251 ಕ್ಕೆ ಕಡಿಮೆ ಇರುತ್ತಿರಲಿಲ್ಲ.(ಬಹುಮತಕ್ಕೆ 203 ಸಾಕು).

ನಿತೀಶರ ಮುಂದಾಲೋಚನೆಯನ್ನು ಅನುಸರಿಸದೆ, ಮೋದಿಯವರ ಮೋಡಿಯನ್ನು ಅರ್ಥ ಮಾಡಿಕೊಳ್ಳದೇ ಅವಕಾಶ ತಪ್ಪಸಿಕೊಂಡರು. [೨೦]

ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್

[ಬದಲಾಯಿಸಿ]
  • 18 Mar, 2017;
  • ಬಿಜೆಪಿ ಭಾರಿ ಬಹುಮತ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ನಡೆಯಲಿದ್ದು, ಕೇಂದ್ರ ಸಚಿವ ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ ಎಂದು ಮೊದಲುಸುದ್ದಿಯಾಗಿತ್ತು. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ಸಂಜೆಗೆ ನಿಗದಿಯಾಗಿದೆ. ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮದಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಸಿನ್ಹಾ ಅವರು ‘ನಾನು ಯಾವ ಹುದ್ದೆಯ ಸ್ಪರ್ಧೆಯಲ್ಲಿಯೂ ಇಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ.[೨೧]
  • ಆರೆಸ್ಸೆಸ್‍ನ 'ಕೆಂಪು ಧ್ವಜ' ಯುಪಿಯ ಮುಖ್ಯಮಂತ್ರಿ ಆಗಬೇಕೆಂಬ ಕೇಂದ್ರದ ಟೆಲಿಕಾಂ ಸಚಿವ ಮನೋಜ್ ಸಿನ್ಹಾರ ಅವಕಾಶಗಳನ್ನು ತಡೆಯಿತು ಎಂಬ ಅಭಿಪ್ರಾಯವಿದೆ.[೨೨]
  • 18 Mar, 2017
  • ಬಿಜೆಪಿ ಫೈರ್ ಬ್ರಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಶಾಸಕಾಂಗ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಮತ್ತು ಲಖನೌ ಮೇಯರ್‌ ದಿನೇಶ್‌ ಶರ್ಮ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ.
  • ಲಖನೌದಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಗೋರಖ್‌ಪುರದ ಪ್ರಸಿದ್ಧ ಗೋರಕ್ಷನಾಥ ಪೀಠದ ‘ಮಹಂತ’ (ಧಾರ್ಮಿಕ ಮುಖ್ಯಸ್ಥ) ಯೋಗಿ ಆದಿತ್ಯನಾಥ್‌ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.[೨೩]

ಯೋಗಿ ಆದಿತ್ಯನಾಥ್‌ 21ನೇ ಮುಖ್ಯಮಂತ್ರಿ

[ಬದಲಾಯಿಸಿ]
  • 19 Mar, 2017 ಭಾನುವಾರ ಮಧ್ಯಾಹ್ನ. ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಇಂದು ಮಧ್ಯಾಹ್ನ ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ . ಇದೇ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ, ಬಲ್ಲಮೂಲಗಳ ಪ್ರಕಾರ ಮೌರ್ಯ ಅವರಿಗೆ ಗೃಹ ಖಾತೆಯ ಜವಾಬ್ದಾರಿಯನ್ನು ನೀಡಲಾಗುವುದು.
  • ಸೂರ್ಯ ಪ್ರತಾಪ್ ಸಾಹಿ, ಸುರೇಶ್ ಖನ್ನಾ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • ಲಕ್ನೋನ ಸ್ಮೃತಿ ಉಪವನದಲ್ಲಿ. ಆದಿತ್ಯನಾಥ್ ಮತ್ತು ತನ್ನ ಎರಡು ಸಹಯೋಗಿಗಳ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ 43 ಸದಸ್ಯರನ್ನು ಹೊಂದಿದೆ. ಕಾಕತಾಳೀಯವಾಗಿ, ಆದಿತ್ಯನಾಥ್ ಅಥವಾ ಮೌರ್ಯ ಅಥವಾ ಶರ್ಮಾ ಮೂವರೂ (ಹೊಸ ಮುಖ್ಯಮಂತ್ರಿ ಉಪಮುಖ್ಯ ಮಂತ್ರಿಗಳು) ಸದನದ ಶಾಸಕರಲ್ಲ.
  • ಕಾಂಗ್ರೆಸ್‍ನ ಮಾಜಿ ನಾಯಕಿ ರೀಟಾ ಬಹುಗುಣ ಜೋಶಿ ಮತ್ತು ಮಾಜಿ ಬಹುಜನ ಸಮಾಜ ಪಕ್ಷದ ನಾಯಕ ಬ್ರಿಜೇಶ್ ಪಾಠಕ್ ಯುಪಿ ಅಸೆಂಬ್ಲಿ ಚುನಾವಣೆಗಳ ಮುಂಚೆ ಪಕ್ಷ ಸೇರಿಕೊಂಡವರು. ಇವರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
  • ದಾರಾ ಸಿಂಗ್ ಚೌಹಾಣ್, ಧರಂ ಪಾಲ್ ಸಿಂಗ್, ಸತ್ಯದೇವ್ ಪಚೌರಿ, ರಾಮಪತಿ ಶಾಸ್ತ್ರಿ, ಜೆಪಿ ಸಿಂಗ್, ಓಂ ಪ್ರಕಾಶ್ ರಾಜ್‍ಭರ್, ಲಕ್ಷ್ಮಿ ನಾರಾಯಿನ್ ಚೌಧರಿ, ಚೇತನ್ ಚೌಹಾಣ್, ಶ್ರೀಕಾಂತ್ ಶರ್ಮಾ, ಮಾಜಿ ಕ್ರಿಕೆಟಿಗ ಮೋಹಸಿನ್ ರಾಜಾ, ನೀಲಕಾಂತ್ ತಿವಾರಿ, ಗಿರೀಶ್ ಚಂದ್ರ ಯಾದವ್ ಮತ್ತು ಬಲದೇವ್ ಔಲಾಖ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 22 ಕ್ಯಾಬಿನೆಟ್ ಸಚಿವರು ಮತ್ತು ಒಂಬತ್ತು ಜನ ರಾಜ್ಯದ (ಸ್ವತಂತ್ರ ಹೊಣೆಗಾರಿಕೆಯ) ಮಂತ್ರಿಗಳಾಗಿದ್ದಾರೆ.[೨೪][೨೫]

ಉಲ್ಲೇಖ

[ಬದಲಾಯಿಸಿ]
  1. Lokniti CSDS Opinion Poll
  2. ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ; ಮುಲಾಯಂಗೆ ಮುಖಭಂಗ;ಪ್ರಜಾವಾಣಿ ವಾರ್ತೆ;16 Jan, 2017
  3. It's official: Samajwadi Party to field 298 candidates, Congress 105
  4. ಎಬಿಪಿ ಸಮೀಕ್ಷೆ:ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ.
  5. "ಮತ್ತೆ ರಾಮ ಮಂದಿರ ನಿರ್ಮಾಣದ ಜಪ;ಪಿಟಿಐ29 Jan, 2017". Archived from the original on 2017-02-01. Retrieved 2017-03-19.
  6. 5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ
  7. ಮೊದಲ ಹಂತದಲ್ಲಿ ಶೇ 64ರಷ್ಟು ಮತದಾನ;ಪಿಟಿಐ;12 Feb, 2017
  8. ಪ್ರಜಾವಾಣಿ /೧೬-೨-೨೦೧೭
  9. Third phase of Uttar Pradesh elections;Feburary 20, 2017
  10. Highlights: More than 57% voter turnout in fifth phase;Feb 27, 2017
  11. Record 84% turnout in phase one in Manipur, 57.03% in phase six of UP polls;Mar 4, 2017,
  12. "ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಶೇ.60.03 ಮತದಾನ". Archived from the original on 2017-04-26. Retrieved 2017-03-19.
  13. Mar 11, 2017, 05.37 PM ISTNEWS;; ELECTIONS 2017 ;RESULTS;ELECTION RESULTS at 5.45pm
  14. ನರೇಂದ್ರ ಮೋದಿ ಪ್ರಬಲ ನಾಯಕ:;ಪಿ.ಚಿದಂಬರಂ;ಐಎಎನ್‌ಎಸ್‌;12 Mar, 2017
  15. ರಾಹುಲ್‌ ನಾಯಕತ್ವಕ್ಕೆ ಅಪಸ್ವರ;ಪ್ರಜಾವಾಣಿ ವಾರ್ತೆ;13 Mar, 2017
  16. ಒಲಿದ ‘ಉತ್ತರ’ದ ಜನಾದೇಶಏ:ಜೆನ್ಸಿಸ್‌11 Mar, 2017
  17. ಪಿಟಿಐ12 Mar, 2017 ಜನರ ತಪ್ಪು ದಾರಿಗೆಳೆದ ಬಿಜೆಪಿ
  18. ಜನರ ತಪ್ಪು ದಾರಿಗೆಳೆದ ಬಿಜೆಪಿ’‘ಬುಲೆಟ್ ಟ್ರೈನಿಗೆ’ ಮತ ಹಾಕಿದ್ದಾರೆ;ಪಿಟಿಐ;12 Mar, 2017
  19. "ಡಿ. ಉಮಾಪತಿ;ಏನಿದ್ದೀತು ಮೋದಿ ಗೆಲುವಿನ ಗುಟ್ಟು?20 Mar, 2017". Archived from the original on 2017-03-20. Retrieved 2017-03-20.
  20. ಮೈತ್ರಿ ಮಾಡಿಕೊಳ್ಳದೇ ಕೈಸುಟ್ಟುಕೊಂಡ ಪ್ರತಿಪಕ್ಷಗಳು;ಡಿ.ಉಮಾಪತಿ;20 Mar, 2017
  21. ಉತ್ತರ ಪ್ರದೇಶಕ್ಕೆ ಸಿನ್ಹಾ ಸಿ.ಎಂ?
  22. RSS red flag spoiled Manoj Sinha’s chances of becoming UP chief minister;Mar 19, 2017
  23. ಯೋಗಿಗೆ ಒಲಿದ ಯೋಗ;ಸಂಜಯ್ ಪಾಂಡೆ;19 Mar, 2017
  24. Yogi Adityanath takes oath as UP CM with deputies Keshav Maurya, Dinesh Sharma;Mar 19, 2017
  25. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ;19 Mar, 2017